ಸ್ಥಳೀಯ
Sudheer Kumar Reddy-BiG BREAKING:ಸೌಜನ್ಯ ಅವರ ತಾಯಿ ಕುಸುಮಾವತಿ ಎಂಬ ವಿಚಾರದಲ್ಲಿ SITಗೆ ಯಾವುದೇ ಅನುಮಾನಗಳಿಲ್ಲ. : ಸುಧೀರ್ ಕುಮಾರ್ ರೆಡ್ಡಿ ಖಡಕ್ ರಿಪ್ಲೈ
ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಯ ನಡುವೆಯೇ, ಸೌಜನ್ಯ ಅವರ ತಾಯಿ ಕುಸುಮಾವತಿ ಅವರ ಗುರುತಿನ ಕುರಿತು ಕೆಲವು ಮಾಧ್ಯಮಗಳಲ್ಲಿ ಪ್ರಶ್ನೆಗಳು ಎದ್ದಿರುವ ಹಿನ್ನೆಲೆಯಲ್ಲಿ, ಈ ವಿಚಾರದಲ್ಲಿ ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ಯಾವುದೇ ಅನುಮಾನಗಳಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಹಾಗೂ ಎಸ್‌ಐಟಿ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಬೆಳ್ತಂಗಡಿ: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಯ ನಡುವೆಯೇ, ಸೌಜನ್ಯ ಅವರ ತಾಯಿ ಕುಸುಮಾವತಿ ಅವರ ಗುರುತಿನ ಕುರಿತು ಕೆಲವು ಮಾಧ್ಯಮಗಳಲ್ಲಿ ಪ್ರಶ್ನೆಗಳು ಎದ್ದಿರುವ ಹಿನ್ನೆಲೆಯಲ್ಲಿ, ಈ ವಿಚಾರದಲ್ಲಿ ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ಯಾವುದೇ ಅನುಮಾನಗಳಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಹಾಗೂ ಎಸ್‌ಐಟಿ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
“ಸೌಜನ್ಯ ಅವರ ತಾಯಿ ಕುಸುಮಾವತಿ ಎಂಬ ವಿಚಾರದಲ್ಲಿ ನಮಗೆ ಯಾವುದೇ ಅನುಮಾನಗಳಿಲ್ಲ. ನಾವು ತನಿಖೆಯ ವ್ಯಾಪ್ತಿಯನ್ನು ಮೀರಿ ಹೋಗುವುದಿಲ್ಲ. ಪ್ರಕರಣಕ್ಕೆ ಸಂಬಂಧವಿಲ್ಲದ ವಿಚಾರಗಳ ಬಗ್ಗೆ ತನಿಖೆ ನಡೆಸುವುದಿಲ್ಲ” ಎಂದು ಅವರು ತಿಳಿಸಿದ್ದಾರೆ.
ಸೌಜನ್ಯ ಮತ್ತು ಕುಸುಮಾವತಿ ಅವರ ನಡುವಿನ ಸಂಬಂಧದ ಕುರಿತು ತನಿಖೆ ನಡೆಸುವಂತೆ ಧರ್ಮಸ್ಥಳದ ನಿವಾಸಿ ಕಿಶೋರ್ ಎಂಬವರು ಎಸ್‌ಐಟಿಗೆ ದೂರು ಸಲ್ಲಿಸಿದ ಬೆನ್ನಲ್ಲೇ ಈ ಸ್ಪಷ್ಟನೆ ಹೊರಬಿದ್ದಿದೆ.
ಯಾವುದಾದರೂ ಸ್ಥಳೀಯದ ವಿಚಾರದ ಬಗ್ಗೆ ಮನಸ್ತಾಪಗಳಿದ್ದರೇ ಅದು ಸ್ಥಳೀಯ ಪೊಲೀಸರ ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಕಮೀಷನರ್ ತಿಳಿಸಿದರು.
ಕಿಶೋರ್ ದೂರಿನಲ್ಲಿ ಏನಿದೆ?
ಮಂಗಳೂರಿನ ಎಸ್‌ಐಟಿ ಕಚೇರಿಗೆ ತೆರಳಿ ದೂರು ಸಲ್ಲಿಸಿರುವ ಕಿಶೋರ್, ಕುಸುಮಾವತಿ ಅವರು ಸೌಜನ್ಯ ಅವರ ತಾಯಿಯೇ ಎಂಬುದನ್ನು ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ. 2015ರಲ್ಲಿ ಇಂದಿರಾವತಿ ಎಂಬ ಮಹಿಳೆಯ ಹೆಸರಿನಲ್ಲಿ ಧರ್ಮಸ್ಥಳದ ಪಾಂಗಳ ಗ್ರಾಮದಲ್ಲಿ ಅಕ್ರಮ-ಸಕ್ರಮ ಯೋಜನೆಯಡಿ ಜಮೀನು ಮಂಜೂರಾಗಿರುವ ವಿಚಾರವನ್ನು ಉಲ್ಲೇಖಿಸಿರುವ ಅವರು, ಈ ಜಮೀನಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ಗುರುತಿನ ದಾಖಲೆಗಳನ್ನು ಪರಿಶೀಲಿಸಬೇಕೆಂದು ಕೋರಿದ್ದಾರೆ.
ಇಂದಿರಾವತಿ ಮತ್ತು ಕುಸುಮಾವತಿ ಒಬ್ಬರೇ ಎಂಬುದಾಗಿ ಸಲ್ಲಿಸಿರುವ ಪ್ರಮಾಣಪತ್ರದ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಯಲ್ಲಿನ ದಾಖಲೆಗಳಲ್ಲೂ ವ್ಯತ್ಯಾಸಗಳಿವೆ ಎಂದು ಕಿಶೋರ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಅಲ್ಲದೆ, ಸೌಜನ್ಯ ಮತ್ತು ಅವರ ಸಹೋದರಿ ಸೌಮ್ಯ ಅವರ ಜನನ ನೋಂದಣಿ, ಆಸ್ಪತ್ರೆ ಹಾಗೂ ಶಾಲಾ ದಾಖಲೆಗಳನ್ನು ಪರಿಶೀಲಿಸಬೇಕು. ಅಗತ್ಯವಿದ್ದಲ್ಲಿ ವೈಜ್ಞಾನಿಕ ಪರೀಕ್ಷೆ ನಡೆಸಬೇಕು. ಕುಟುಂಬದ ವಂಶವೃಕ್ಷ, ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರ ಹೇಳಿಕೆಗಳನ್ನು ಪರಿಶೀಲಿಸಬೇಕು ಎಂದೂ ಮನವಿ ಮಾಡಿದ್ದಾರೆ. ಈ ಹಿಂದೆ ತಹಶೀಲ್ದಾರ್ ಹಾಗೂ ಸಹಾಯಕ ಆಯುಕ್ತರಿಗೂ ಈ ಸಂಬಂಧ ದೂರು ಸಲ್ಲಿಸಿದ್ದಾಗಿ ಅವರು ತಿಳಿಸಿದ್ದಾರೆ.
ಬಿಗ್ ನ್ಯೂಸ್
Dr. Varadaraja Chandragiri-ಪುತ್ತೂರಿನ ವಿವೇಕಾನಂದ ಸ್ವಾಯತ್ತ ಪದವಿ ಕಾಲೇಜ್ ಗೆ ನೂತನ ಆಡಳಿತ ಮಂಡಳಿ – ಅಧ್ಯಕ್ಷರಾಗಿ ಡಾ. ವರದರಾಜ ಚಂದ್ರಗಿರಿ ಜವಬ್ದಾರಿ ಸ್ವೀಕಾರ
ಪುತ್ತೂರಿನ ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ಪುತ್ತೂರು, ಇಲ್ಲಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಡಾ.ವರದ ರಾಜ್ ಚಂದ್ರಗಿರಿ, ಸಂಚಾಲಕರಾಗಿ ಎ ಮೋಹನ್ ಜವಬ್ದಾರಿ ಸ್ವೀಕರಿಸಿದರು.
ಪುತ್ತೂರಿನ ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ಪುತ್ತೂರು, ಇಲ್ಲಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಡಾ.ವರದ ರಾಜ್ ಚಂದ್ರಗಿರಿ, ಸಂಚಾಲಕರಾಗಿ ಎ ಮೋಹನ್ ಜವಬ್ದಾರಿ ಸ್ವೀಕರಿಸಿದರು.

ಕೋಶಾಧಿಕಾರಿಗಳಾಗಿ ಸುಕುಮಾರ್ ರಾವ್ ಎನ್.ಎಸ್. ಹಾಗೂ ಸದಸ್ಯರುಗಳಾಗಿ ಯಶೋಧರ ಜೈನ್, ಎಸ್ ರಾಜಶೇಖರ್, ವೇಣುಗೋಪಾಲ ಭಟ್ ಎಂ, ಪೂರ್ಣ ಮಂಗಳ, ಮಾಲಿನಿ ಕಶ್ಯಪ್, ರಂಜಿತ್ ಜೈನ್ ಇವರಿಗೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಕೃಷ್ಣ ಕುಮಾರ್ ಶೆಟ್ಟಿ ಕಡಬ ದೀಪ ಪ್ರದಾನ ಮಾಡುವ ಮೂಲಕ ಜವಬ್ದಾರಿ ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿಜಯನಾರಾಯಣ, ಹಾಗೂ ಕಾಲೇಜಿನ ನಿಕಟ ಪೂರ್ವ ಅಧ್ಯಕ್ಷರಾದ ಡಾ. ಶ್ರೀಪತಿ ಕಲ್ಲೂರಾಯ, ಸಂಚಾಲಕ ಮುರಳಿಕೃಷ್ಣ ಕೆ ಎನ್, ಕಾಲೇಜಿನ ಪ್ರಾರ್ಚಾಯ ಶ್ರೀಕೃಷ್ಣ ಗಣರಾಜ ಭಟ್ ಎಸ್ ಹಾಗೂ ವಿಭಾಗದ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.
ಬಿಗ್ ನ್ಯೂಸ್
Puttur-ಪುತ್ತೂರು: ಅ.31ರಂದು ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ರಸ್ತೆ ಅಗಲೀಕರಣ ಕಾಮಗಾರಿಯ ಹಿನ್ನೆಲೆಯಲ್ಲಿ ವಿದ್ಯುತ್ ಮಾರ್ಗ ಬದಲಾವಣೆ ಕಾರ್ಯ ಕೈಗೊಳ್ಳಲಿರುವುದರಿಂದ ಅ.31ರ ಶನಿವಾರ ಪುತ್ತೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30ರವರೆಗೆ 110/33/11 ಕೆ.ವಿ. ಪುತ್ತೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ದರ್ಬೆ, ಪುತ್ತೂರು ಟೌನ್ ಓಲ್ಡ್ ಹಾಗೂ ವಾಟರ್ ಸಪ್ಲೈ ಫೀಡರ್‌ಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಪುತ್ತೂರು: ರಸ್ತೆ ಅಗಲೀಕರಣ ಕಾಮಗಾರಿಯ ಹಿನ್ನೆಲೆಯಲ್ಲಿ ವಿದ್ಯುತ್ ಮಾರ್ಗ ಬದಲಾವಣೆ ಕಾರ್ಯ ಕೈಗೊಳ್ಳಲಿರುವುದರಿಂದ ಅ.31ರ ಶನಿವಾರ ಪುತ್ತೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30ರವರೆಗೆ 110/33/11 ಕೆ.ವಿ. ಪುತ್ತೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ದರ್ಬೆ, ಪುತ್ತೂರು ಟೌನ್ ಓಲ್ಡ್ ಹಾಗೂ ವಾಟರ್ ಸಪ್ಲೈ ಫೀಡರ್‌ಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಈ ಫೀಡರ್‌ಗಳ ವ್ಯಾಪ್ತಿಗೆ ಒಳಪಡುವ ವಾಟರ್ ಸಪ್ಲೈ, ದರ್ಬೆ, ಕೆಎಸ್‌ಆರ್‌ಟಿಸಿ, ನೆಲ್ಲಿಕಟ್ಟೆ, ಕಲ್ಲಾರೆ, ಸಾಮೆತ್ತಡ್ಕ, ಹನುಮಾನ್ ಮಿಲ್, ಅಶ್ವಿನಿ ಸರ್ಕಲ್, ಐಬಿ, ಎಂ.ಟಿ. ರಸ್ತೆ, ಕೋರ್ಟ್ ರಸ್ತೆ, ಬೊಳ್ಳಾರು, ಬೈಪಾಸ್, ಬೀರಮಲೆ, ಪರ್ಲಡ್ಕ ಹಾಗೂ ಮಿನಿ ವಿಧಾನಸೌಧ ಪರಿಸರದ ವಿದ್ಯುತ್ ಬಳಕೆದಾರರು ಸಹಕರಿಸುವಂತೆ ಮೆಸ್ಕಾಂ ಮನವಿ ಮಾಡಿದೆ.
ಶಿಕ್ಷಣ
Vivekananda-ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ರಾಜ್ಯಮಟ್ಟದ “ಕನಸುಗಳು – 2026” ರ ಉದ್ಘಾಟನೆ – ಸಮಾರಂಭ; ವಿದ್ಯಾರ್ಥಿಗಳು ಆತ್ಮವಿಶ್ವಾಸ ಹಾಗೂ ದೃಢ ಸಂಕಲ್ಪದೊಂದಿಗೆ ಮುನ್ನಡೆಯಬೇಕು : ಶ್ರದ್ಧಾ ವಿ. ಶೆಟ್ಟಿ
ವಿವೇಕಾನಂದ ಪದವಿಪೂರ್ವ ಕಾಲೇಜಿನ ಏಕತಾ ವೇದಿಕೆಯಲ್ಲಿ ನಡೆದ ರಾಜ್ಯಮಟ್ಟದ “ಕನಸುಗಳು – 2026 ಇದರ ಉದ್ಘಾಟನೆಯನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಹಾಗೂ ವೇದಾಂತ ಐರನ್ ಅಂಡ್ ಸ್ಟೀಲ್ ಲಿಮಿಟೆಡ್, ಗೋವಾ ಇದರ ಅಸೋಸಿಯೇಟ್ ಮ್ಯಾನೇಜರ್ ಸಿಎ ಶ್ರದ್ಧಾ ವಿ. ಶೆಟ್ಟಿ ನಡೆಸಿಕೊಟ್ಟು ಮಾತನಾಡಿದರು.
ಕಂಡ ಕನಸುಗಳನ್ನು ನನಸು ಮಾಡುವ ಪ್ರಯತ್ನಗಳು ಜೊತೆಗೂಡಿದಾಗ ಭವಿಷ್ಯ ಸುಂದರವಾಗಬಲ್ಲದು. ಕನಸು ಕಾಣುವುದು ಸುಲಭ, ಆದರೆ ಆ ಕನಸುಗಳನ್ನು ನನಸಾಗಿಸಲು ನಿರಂತರ ಪರಿಶ್ರಮ, ಆತ್ಮವಿಶ್ವಾಸ, ಶಿಸ್ತು ಮತ್ತು ದೃಢಸಂಕಲ್ಪ ಅತ್ಯಗತ್ಯ. ಜೀವನದಲ್ಲಿ ಎದುರಾಗುವ ಸವಾಲುಗಳು ನಮ್ಮನ್ನು ಹಿಮ್ಮೆಟ್ಟಿಸುವುದಕ್ಕಲ್ಲ, ಬದಲಾಗಿ ನಮ್ಮ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಿಗುವ ಅವಕಾಶಗಳಾಗಿವೆ. ಸೋಲು ಎದುರಾದಾಗ ಕುಗ್ಗದೆ, ಅದನ್ನೇ ಯಶಸ್ಸಿನ ಮೆಟ್ಟಿಲನ್ನಾಗಿ ಮಾಡಿಕೊಂಡು ಮುನ್ನಡೆಯಬೇಕು. ನಮ್ಮ ಗುರಿಯ ಬಗ್ಗೆ ಸ್ಪಷ್ಟತೆ ಇರಲಿ, ಸಾಧಿಸುವ ಛಲ ನಮ್ಮಲ್ಲಿರಲಿ, ಪ್ರಯತ್ನದಲ್ಲಿ ಎಂದಿಗೂ ವಿರಾಮವಿರದಿರಲಿ. ಇಂದಿನ ಸಣ್ಣ ಪ್ರಯತ್ನಗಳೇ ನಾಳಿನ ದೊಡ್ಡ ಸಾಧನೆಗಳಿಗೆ ಭದ್ರ ಬುನಾದಿಯಾಗುತ್ತವೆ. ಯುವಜನತೆ ತಮ್ಮಲ್ಲಿರುವ ಪ್ರತಿಭೆ, ಶಕ್ತಿ ಮತ್ತು ಸಾಮರ್ಥ್ಯವನ್ನು ಗುರುತಿಸಿಕೊಂಡು, ಸಕಾರಾತ್ಮಕ ಚಿಂತನೆಯೊಂದಿಗೆ ಮುನ್ನಡೆಯಬೇಕು ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಹಾಗೂ ವೇದಾಂತ ಐರನ್ ಅಂಡ್ ಸ್ಟೀಲ್ ಲಿಮಿಟೆಡ್, ಗೋವಾ ಇದರ ಅಸೋಸಿಯೇಟ್ ಮ್ಯಾನೇಜರ್ ಸಿಎ ಶ್ರದ್ಧಾ ವಿ. ಶೆಟ್ಟಿ ಹೇಳಿದರು.
ಅವರು ವಿವೇಕಾನಂದ ಪದವಿಪೂರ್ವ ಕಾಲೇಜಿನ ಏಕತಾ ವೇದಿಕೆಯಲ್ಲಿ ನಡೆದ ರಾಜ್ಯಮಟ್ಟದ “ಕನಸುಗಳು – 2026 ಇದರ ಉದ್ಘಾಟನೆಯನ್ನು ನಡೆಸಿಕೊಟ್ಟು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತಮಂಡಳಿಯ ನಿರ್ದೇಶಕರಾದ ರಮೇಶ್ಚಂದ್ರ ಎಮ್. ಮಾತನಾಡಿ, ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೆ ಜ್ಞಾನಾರ್ಜನೆಗೆ, ಕೌಶಲ್ಯಗಳ ಅಭಿವೃದ್ಧಿಗೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಬೇಕು, ಅಂತೆಯೇ ಕನಸುಗಳು ಕಾರ್ಯಕ್ರಮ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ರೂಪಿಸುವಲ್ಲಿ ಬೇಕಾದ ಅಡಿಪಾಯವನ್ನು ಒದಗಿಸಿ ಕೊಡಲಿ ಎಂದು ಆಶಿಸಿದರು.

ಉದ್ಘಾಟನಾ ಸಮಾರಂಭದ ಬಳಿಕ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಸುಮಾರು 14 ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ಸಾಮಾನ್ಯ ರಸಪ್ರಶ್ನೆ, ವಿಜ್ಞಾನ ಮಾದರಿ, ಜಾಹೀರಾತು, ಚಿತ್ರಕಲೆ, ಕನ್ನಡ ಕವನ ರಚನೆ ಮತ್ತು ವಾಚನ, ಪ್ರಾಕೃತಿಕ ರಂಗೋಲಿ, ಯುವಪತ್ರಕರ್ತ, ಯುವ ವಾಣಿಜ್ಯೋದ್ಯಮಿ, ಮುಖವರ್ಣಿಕೆ, ವೀಡಿಯೋ ಸಂಕಲನ , ಚರ್ಚಾ ಸ್ಪರ್ಧೆ, ತಾಳವಾದ್ಯ , ಕಲರವ – ಸಾಂಸ್ಕೃತಿಕ ವೈವಿಧ್ಯ , ನಿಧಿಶೋಧ, ಭಗವದ್ಗೀತಾ ಕಂಠಪಾಠ ಮುಂತಾದ ಸ್ಪರ್ಧೆಗಳನ್ನು ನಡೆಸಲಾಯಿತು.
-
ಅಪರಾಧ23 hours ago
Rakesh Murder :ಮಂಗಳೂರು : ತಂಗಿಯನ್ನು ಪ್ರೀತಿಸಿದ್ದಕ್ಕೆ ಯುವಕನ ಕೊಲೆ: ಮೂವರು ಹಂತಕರಿಗೆ ಜೀವಾವಧಿ ಶಿಕ್ಷೆ!
-
Uncategorized22 hours ago
Puttur Pocso Case : ಅಪ್ರಾಪ್ತಗೆ ಅತ್ಯಾಚಾರ ಎಸಗಿದ ಕಾಮುಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ
-
ಅಂತರ ರಾಜ್ಯ9 hours agoBlack money-ಸಾಮಾನ್ಯ ಕುಟುಂಬದ ಸಹೋದರರ ಮನೆಯಲ್ಲಿ ಕಪ್ಪು ಹಣ? ಮನೆಯ ನೆಲದಡಿ 3 ಡ್ರಮ್ಗಳಲ್ಲಿ ಕೋಟ್ಯಂತರ ರೂ. ನಗದು ಪತ್ತೆ..! ಮನೆ ಸೀಲ್, ಓರ್ವನ ಬಂಧನ
-
ಬಿಗ್ ನ್ಯೂಸ್8 hours agoSoujanya case-ಸೌಜನ್ಯ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ – ಎಸ್‌ಐಟಿ ಮುಖ್ಯಸ್ಥರನ್ನು ಮನೆಗೆ ಕರೆಸಿಕೊಂಡು ಸಿಎಂ ಡಿಕೆಶಿ ಮಾಹಿತಿ ಪಡೆದುಕೊಂಡ ಆರೋಪ – ಸುಪ್ರೀಂ ಕೋರ್ಟಿಗೆ ದೂರು ಸಲ್ಲಿಸಿದ ಸಾಮಾಜಿಕ ಕಾರ್ಯಕರ್ತೆ..!
-
ಬಿಗ್ ನ್ಯೂಸ್10 hours agoKrupa Alva-ವಿಚಾರಣೆಗೆ ಹಾಜರಾದ ಬೆನ್ನಲ್ಲೇ ವಿದೇಶಕ್ಕೆ ಹಾರಿದ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ? ಅಮೆರಿಕಕ್ಕೆ ತೆರಳಿರುವ ಶಂಕೆ..!
-
ಬಿಗ್ ನ್ಯೂಸ್10 hours agoSiddaramaiah-ಸ್ಟಿಂಗ್ ಆಪರೇಷನ್ : ತನಿಖೆಯಲ್ಲಿ ಸಿದ್ದರಾಮಯ್ಯಗೆ ‘ಕ್ಲೀನ್ ಚೀಟ್’ : ತಿರುವು ನೀಡಿದ ಮುಸುಕುಧಾರಿ ಮಹಿಳೆಯ ಹೇಳಿಕೆ..! ಈ ಮಹಿಳೆಯನ್ನು ಪತ್ತೆ ಹಚ್ಚಿದ್ದೆಲ್ಲಿ ಗೊತ್ತೇ..?
-
ಮಂಗಳೂರು5 hours agoSoujanya Case-Big Breaking : ಸೌಜನ್ಯ ಪ್ರಕರಣ : ಶಶಿಕುಮಾರ್ ಸ್ಥಾನಕ್ಕೆ ಚೇತನ್ ರಾಥೋಡ್ – ವೆಂಕಟೇಶ್ ಪ್ರಸನ್ನ ಸ್ಥಾನಕ್ಕೆ ಶ್ರೀನಿಧಿ ನೇಮಕ
-
ಸ್ಥಳೀಯ9 hours agoNew toll pass rules-ನ.1ರಿಂದ ಹೊಸ ಟೋಲ್ ಪಾಸ್ ನಿಯಮ ಜಾರಿ: ಸ್ಥಳೀಯರಿಗೆ ₹350 ಮಾಸಿಕ ಪಾಸ್ ಬದಲು ₹1,500 ವಾರ್ಷಿಕ ಪಾಸ್



















