Connect with us

ರಾಜಕೀಯ

London-ಲಂಡನ್‌ನಲ್ಲಿ ಸುರಕ್ಷತಾ ಕಾರಣಕ್ಕೆ ತಮಿಳುನಾಡು ಸಿಎಂ ವಿಜಯ್‌ ಕಾರ್ಯಕ್ರಮ ರದ್ದು – ಸೇರಿದ್ದ ನೂರಾರು ಅಭಿಮಾನಿಗಳಿಗೆ ನಿರಾಸೆ

Published

on



Ad Widget

Ad Widget

Ad Widget

Ad Widget

ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರನ್ನು ಭೇಟಿಯಾಗಲು ಹಾಗೂ ಅವರನ್ನು ಕಣ್ತುಂಬಿಕೊಳ್ಳಲು ಮಂಗಳವಾರ ಲಂಡನ್‌ನ ಪ್ರಸಿದ್ಧ ‘ದಿ ಶಾರ್ಡ್‌’ ಕಟ್ಟಡದ ಹೊರಭಾಗದಲ್ಲಿ ನೂರಾರು ಅಭಿಮಾನಿಗಳು ಜಮಾಯಿಸಿದ್ದರು. ಆದರೆ ಸುರಕ್ಷತಾ ಕಾರಣಗಳನ್ನು ಉಲ್ಲೇಖಿಸಿ ಮೆಟ್ರೋಪಾಲಿಟನ್ ಪೊಲೀಸರು ಮಧ್ಯಪ್ರವೇಶಿಸಿದ ಹಿನ್ನೆಲೆಯಲ್ಲಿ ಅಭಿಮಾನಿಗಳ ಭೇಟಿಯ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು.

Ad Widget

Ad Widget

Ad Widget

Ad Widget

ಲಂಡನ್‌: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರನ್ನು ಭೇಟಿಯಾಗಲು ಹಾಗೂ ಅವರನ್ನು ಕಣ್ತುಂಬಿಕೊಳ್ಳಲು ಮಂಗಳವಾರ ಲಂಡನ್‌ನ ಪ್ರಸಿದ್ಧ ‘ದಿ ಶಾರ್ಡ್‌’ ಕಟ್ಟಡದ ಹೊರಭಾಗದಲ್ಲಿ ನೂರಾರು ಅಭಿಮಾನಿಗಳು ಜಮಾಯಿಸಿದ್ದರು. ಆದರೆ ಸುರಕ್ಷತಾ ಕಾರಣಗಳನ್ನು ಉಲ್ಲೇಖಿಸಿ ಮೆಟ್ರೋಪಾಲಿಟನ್ ಪೊಲೀಸರು ಮಧ್ಯಪ್ರವೇಶಿಸಿದ ಹಿನ್ನೆಲೆಯಲ್ಲಿ ಅಭಿಮಾನಿಗಳ ಭೇಟಿಯ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು.

Ad Widget

Ad Widget

Ad Widget alt="Ad Widget"/>

Ad Widget

ಕಾರ್ಯಕ್ರಮ ರದ್ದಾದ ಪರಿಣಾಮ, ಹಲವು ಗಂಟೆಗಳ ಕಾಲ ಸರದಿಯಲ್ಲಿ ನಿಂತು ವಿಜಯ್ ಅವರನ್ನು ನೋಡಲು ಕಾಯುತ್ತಿದ್ದ ಅಭಿಮಾನಿಗಳು ನಿರಾಸೆಗೊಳಗಾದರು.

Ad Widget

Ad Widget <> Ad Widget

“ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಕಾರ್ಯಕ್ರಮವನ್ನು ರದ್ದುಗೊಳಿಸಲಾಗುತ್ತಿದೆ. ಸುರಕ್ಷತಾ ಕಾರಣಗಳಿಂದಾಗಿ ಕಾರ್ಯಕ್ರಮಕ್ಕೆ ಅನುಮತಿ ದೊರೆತಿಲ್ಲ” ಎಂದು ವಿಜಯ್ ಅವರ ತಂಡದ ಸದಸ್ಯರೊಬ್ಬರು ಧ್ವನಿವರ್ಧಕದ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದರು.



Ad Widget

ಈ ಕುರಿತು ಪ್ರತಿಕ್ರಿಯಿಸಿದ ವಿಜಯ್ ಅವರ ಯುವ ಅಭಿಮಾನಿಯೊಬ್ಬರು, “ಇದು ಸಮಂಜಸವಾದ ನಿರ್ಧಾರ ಎಂದು ನನಗನಿಸುತ್ತದೆ. ಆದರೆ ಇಲ್ಲಿರುವ ಎಲ್ಲರೂ ಬಹಳ ಸಮಯದಿಂದ ಕಾಯುತ್ತಿದ್ದಾರೆ. ತಮಿಳುನಾಡಿನಲ್ಲಿ ನಾವು ನೋಡುವ ಜನಸಂದಣಿಗೆ ಹೋಲಿಸಿದರೆ ಇಲ್ಲಿನ ಗುಂಪು ಅಷ್ಟೇನೂ ದೊಡ್ಡದಲ್ಲ” ಎಂದು ಹೇಳಿದರು.

Ad Widget

Ad Widget

ನಟನಾಗಿ ಜನಪ್ರಿಯತೆ ಗಳಿಸಿ ಬಳಿಕ ರಾಜಕೀಯ ಪ್ರವೇಶಿಸಿರುವ ವಿಜಯ್, ತಮಿಳುನಾಡಿಗೆ ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸುವ ಉದ್ದೇಶದಿಂದ ರಾಜ್ಯದ ನಿಯೋಗದೊಂದಿಗೆ ಬ್ರಿಟನ್ ಪ್ರವಾಸ ಕೈಗೊಂಡಿದ್ದಾರೆ.

ಈ ಪ್ರವಾಸದ ವೇಳೆ ಸುಮಾರು ₹12,300 ಕೋಟಿ ಮೊತ್ತದ ಹೂಡಿಕೆಗೆ ಸಂಬಂಧಿಸಿದ ಹಲವು ತಿಳಿವಳಿಕೆ ಒಪ್ಪಂದಗಳಿಗೆ (MoU) ಸಹಿ ಹಾಕಲಾಗಿದೆ ಎಂದು ಈ ಹಿಂದೆ ಮುಖ್ಯಮಂತ್ರಿ ಕಚೇರಿ ತಿಳಿಸಿತ್ತು.

ತಮಿಳುನಾಡನ್ನು ಏಷ್ಯಾದ ಪ್ರಮುಖ ಸುಧಾರಿತ ಉತ್ಪಾದನೆ ಹಾಗೂ ತಂತ್ರಜ್ಞಾನ ಕೇಂದ್ರವನ್ನಾಗಿ ರೂಪಿಸುವ ಉದ್ದೇಶದಿಂದ ಈ ಹೂಡಿಕೆ ಆಕರ್ಷಣಾ ಅಭಿಯಾನ ನಡೆಸಲಾಗುತ್ತಿದೆ. ಈ ಒಪ್ಪಂದಗಳ ಮೂಲಕ ರಾಜ್ಯದಲ್ಲಿ 9,400ಕ್ಕೂ ಅಧಿಕ ಉನ್ನತ ಮೌಲ್ಯದ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.

ವಿಜಯ್ ಅವರು ತಮ್ಮ ಬ್ರಿಟನ್ ಪ್ರವಾಸವನ್ನು ಬುಧವಾರ ಮುಕ್ತಾಯಗೊಳಿಸಿ ಭಾರತಕ್ಕೆ ಮರಳಲಿದ್ದಾರೆ.

Ad Widget

ರಾಜಕೀಯ

Sting operation case-ಸ್ಟಿಂಗ್ ಆಪರೇಷನ್ ಕೇಸ್‌ : ಎಸ್‌ಐಟಿ ಅಥವಾ ಸಿಐಡಿ? ಸಚಿವ ಸಂಪುಟದಲ್ಲಿ ಏನು ನಿರ್ಧಾರ ಆಯಿತು ?

Published

on



Ad Widget

Ad Widget

Ad Widget

Ad Widget

ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ನಡೆಸಬೇಕೇ? ನಡೆಸುವುದಾದರೆ ಯಾವ ತನಿಖಾ ಸಂಸ್ಥೆಗೆ ವಹಿಸಬೇಕು? ಎಂಬ ವಿಚಾರ ಸಂಪುಟ ಸಭೆಯಲ್ಲಿ ಮತ್ತೆ ಪ್ರಸ್ತಾಪವಾಗಿದೆ. ಆದರೆ, ತನಿಖೆಯ ಸ್ವರೂಪದ ಕುರಿತು ಸಚಿವರ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿ ಅವರ ವಿವೇಚನೆಗೆ ಬಿಡಲಾಗಿದೆ ಎಂದು ವರದಿಯಾಗಿದೆ.

Ad Widget

Ad Widget

Ad Widget

Ad Widget

ಬೆಂಗಳೂರು, ಅ. 15: ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ನಡೆಸಬೇಕೇ? ನಡೆಸುವುದಾದರೆ ಯಾವ ತನಿಖಾ ಸಂಸ್ಥೆಗೆ ವಹಿಸಬೇಕು? ಎಂಬ ವಿಚಾರ ಸಂಪುಟ ಸಭೆಯಲ್ಲಿ ಮತ್ತೆ ಪ್ರಸ್ತಾಪವಾಗಿದೆ. ಆದರೆ, ತನಿಖೆಯ ಸ್ವರೂಪದ ಕುರಿತು ಸಚಿವರ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿ ಅವರ ವಿವೇಚನೆಗೆ ಬಿಡಲಾಗಿದೆ ಎಂದು ವರದಿಯಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಸಭೆಯ ಆರಂಭದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಕರಣಕ್ಕೆ ಸಂಬಂಧಿಸಿದ ಬೆಳವಣಿಗೆಗಳನ್ನು ಸಂಪುಟದ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಈ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವುದು ಸೂಕ್ತ ಎಂದು ಕೆಲವು ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಇನ್ನು ಕೆಲವು ಸಚಿವರು ಯಾವುದೇ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿಲ್ಲ ಎನ್ನಲಾಗಿದೆ.

Ad Widget

Ad Widget <> Ad Widget

ಎಸ್‌ಐಟಿ ರಚನೆಯಾಗುತ್ತಾ? ಸಿಐಡಿ ತನಿಖೆಯಾಗುತ್ತಾ?
ಪ್ರಕರಣದ ತನಿಖೆಗೆ ಹಿರಿಯ ಹಾಗೂ ಸಮರ್ಥ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕೇ ಅಥವಾ ಅಪರಾಧ ತನಿಖಾ ಇಲಾಖೆ (ಸಿಐಡಿ)ಗೆ ವಹಿಸಬೇಕೇ ಎಂಬ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಆದರೆ, ತನಿಖೆ ನಡೆಸುವ ಅಗತ್ಯ ಮತ್ತು ಅದರ ಸ್ವರೂಪದ ಬಗ್ಗೆ ಸ್ಪಷ್ಟ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ.



Ad Widget

ಸಚಿವರ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಮುಖ್ಯಮಂತ್ರಿ ಅವರಿಗೆ ಬಿಡಲಾಗಿದೆ ಎಂದು ತಿಳಿದುಬಂದಿದೆ.

Ad Widget

Ad Widget

ಸಂಪುಟ ಸಭೆಯ ಬಳಿಕ ಮಾತನಾಡಿದ ಕೆಲವು ಸಚಿವರು, ಈ ವಿಷಯ ಚರ್ಚೆಯಾಗಿಲ್ಲ ಎಂದು ಹೇಳಿದರೆ, ಇನ್ನು ಕೆಲವರು ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿಗಳ ವಿವೇಚನೆಗೆ ಬಿಡಲಾಗಿದೆ ಎಂದು ತಿಳಿಸಿದ್ದಾರೆ.

ಮುಕ್ತ ಮತ್ತು ಪಾರದರ್ಶಕ ತನಿಖೆಗೆ ಒತ್ತು
ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಅಗತ್ಯವಿದ್ದರೆ ಪ್ರಕರಣದ ಬಗ್ಗೆ ಪ್ರತ್ಯೇಕ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

“ಪ್ರಕರಣ ನಡೆದು ಈಗಷ್ಟೇ ಎರಡು ದಿನಗಳಾಗಿವೆ. 48 ಗಂಟೆಗಳಲ್ಲಿ ಮಾಡಬೇಕಾದ ಕೆಲಸಗಳನ್ನೆಲ್ಲ ಮಾಡಿದ್ದೇವೆ. ತನಿಖೆ ಮುಕ್ತ ಮತ್ತು ಪಾರದರ್ಶಕವಾಗಿರಬೇಕು ಎಂಬುದು ನಮ್ಮ ಆಶಯ. ಸಿದ್ದರಾಮಯ್ಯ ಅವರ ಘನತೆಗಿಂತ ಹೆಚ್ಚಿನದು ಯಾವುದೂ ಇಲ್ಲ” ಎಂದು ಅವರು ತಿಳಿಸಿದ್ದಾರೆ.

ಒಟ್ಟಿನಲ್ಲಿ, ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಲಾಗುತ್ತದೆಯೇ ಅಥವಾ ಸಿಐಡಿಗೆ ಒಪ್ಪಿಸಲಾಗುತ್ತದೆಯೇ ಎಂಬ ಕುತೂಹಲ ಮುಂದುವರಿದಿದ್ದು, ಮುಖ್ಯಮಂತ್ರಿ ಅವರ ಮುಂದಿನ ನಿರ್ಧಾರದತ್ತ ರಾಜಕೀಯ ವಲಯ ಗಮನ ಹರಿಸಿದೆ.

Ad Widget
Continue Reading

ರಾಜಕೀಯ

H.D. Kumaraswamy-ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ : ಬಾಂಬ್ ಸಿಡಿಸಿದ ಎಚ್.ಡಿ. ಕುಮಾರಸ್ವಾಮಿ – ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಷಡ್ಯಂತ್ರದಲ್ಲಿ ಕೃಪಾ ಆಳ್ವ..! ಗಂಭೀರ ಆರೋಪ

Published

on



Ad Widget

Ad Widget

Ad Widget

Ad Widget

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಷಡ್ಯಂತ್ರದಲ್ಲಿ ಕರಾವಳಿ ಭಾಗದ ಕಾಂಗ್ರೆಸ್ ನಾಯಕಿ ಕೃಪಾ ಆಳ್ವ ಭಾಗಿಯಾಗಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

Ad Widget

Ad Widget

Ad Widget

Ad Widget

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಷಡ್ಯಂತ್ರದಲ್ಲಿ ಕರಾವಳಿ ಭಾಗದ ಕಾಂಗ್ರೆಸ್ ನಾಯಕಿ ಕೃಪಾ ಆಳ್ವ ಭಾಗಿಯಾಗಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಮೊದಲ ಆಡಳಿತಾವಧಿಯಲ್ಲಿ ಕೃಪಾ ಆಳ್ವ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು ಎಂದು ಹೇಳಿದರು. ಸಿದ್ದರಾಮಯ್ಯ ವಿರುದ್ಧ ನಡೆದ ಸ್ಟಿಂಗ್ ಆಪರೇಷನ್‌ನಲ್ಲಿ ಅವರು ನೇರವಾಗಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.

Ad Widget

Ad Widget <> Ad Widget

ಗೃಹ ಸಚಿವರ ವಿರುದ್ಧವೂ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಅಧಿಕಾರ ಇದೆ ಎಂಬ ಕಾರಣಕ್ಕೆ ಏನು ಬೇಕಾದರೂ ಮಾಡಬಹುದೇ ಎಂದು ಪ್ರಶ್ನಿಸಿದರು. “ಗೃಹ ಇಲಾಖೆ ನಿಮ್ಮಪ್ಪನದ್ದಾ? ನನ್ನ ಕಾರ್ಯಕರ್ತರನ್ನು ಬಂಧಿಸುತ್ತೀರಾ? ನಾನೇ ನಿಮ್ಮ ಕಚೇರಿಗೆ ಬರುತ್ತೇನೆ. ತಾಕತ್ತಿದ್ದರೆ ನನ್ನನ್ನೇ ಬಂಧಿಸಿ ನೋಡೋಣ” ಎಂದು ಸವಾಲು ಹಾಕಿದರು.



Ad Widget

ತಮ್ಮ ಮೇಲೆ ಅನುಮಾನ ಬಂದರೆ ಬಂಧಿಸುವುದಾಗಿ ಹೇಳುವವರು, ಮುಖ್ಯಮಂತ್ರಿ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯ ಬಗ್ಗೆ ಏಕೆ ಅನುಮಾನ ವ್ಯಕ್ತಪಡಿಸಿಲ್ಲ ಎಂದು ಪ್ರಶ್ನಿಸಿದ ಅವರು, ಮುಖ್ಯಮಂತ್ರಿಯನ್ನು ಉದ್ದೇಶಪೂರ್ವಕವಾಗಿ ಸಿಲುಕಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.

Ad Widget

Ad Widget

ತಮ್ಮ ಪುತ್ರನ ಪೋಸ್ಟರ್ ಅಂಟಿಸಿದ ಘಟನೆ ಉಲ್ಲೇಖಿಸಿದ ಕುಮಾರಸ್ವಾಮಿ, ಈ ಸಂದರ್ಭದಲ್ಲಿ ಪ್ರಿಯಾಂಕ್ ಖರ್ಗೆ ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು. ಹೆದರಿಕೆ, ಬೆದರಿಕೆಗಳಿಗೆ ತಾವು ಬಗ್ಗುವುದಿಲ್ಲ. ಬೇಕಾದರೆ ಕಮಿಷನರ್ ಕಚೇರಿಗೆ ಬರುತ್ತೇನೆ, ಬಂಧಿಸಿ ಎಂದು ಸವಾಲು ಹಾಕಿದರು.

ಜೆ.ಪಿ. ನಗರದ ಮನೆಯಲ್ಲಿ ತಾವು ಎಲೆಕ್ಟ್ರಾನಿಕ್ ಉಪಕರಣಗಳನ್ನು ಇಟ್ಟುಕೊಂಡಿದ್ದೇವೆಯೇ ಎಂದು ಪ್ರಶ್ನಿಸಿದ ಅವರು, ಅಧಿಕಾರವನ್ನು ನ್ಯಾಯಯುತವಾಗಿ ಬಳಸಬೇಕು ಎಂದರು. ಸ್ಟಿಂಗ್ ಆಪರೇಷನ್ ನಡೆಸಿದವರನ್ನು ಏಕೆ ಬಂಧಿಸಿಲ್ಲ? ಪೊಲೀಸ್ ಅಧಿಕಾರಿಯನ್ನು ಕೊಲೆ ಮಾಡುವುದಾಗಿ ಹೇಳಿದ ವ್ಯಕ್ತಿಯ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.

ಇದೇ ವೇಳೆ, ತಾವು ಬಳಸಿದ ಪದಗಳ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ತಾವು ಈ ಮಟ್ಟದ ಪದಗಳನ್ನು ಬಳಸಿರಲಿಲ್ಲ. ಆದರೆ, ಮತ್ತೊಬ್ಬರು ಬಳಸಿದ ಪದಗಳಿಂದ ಆಕ್ರೋಶಗೊಂಡು ಪ್ರತಿಕ್ರಿಯಿಸಿದ್ದೇನೆ. ಇದಕ್ಕಾಗಿ ಜನರಲ್ಲಿ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.

Ad Widget
Continue Reading

ರಾಜಕೀಯ

Amal Ramachandra-ಒಳ್ಳೆಯ ರೀತಿಯಲ್ಲಿ ಬೆಳೆವಿಮೆ ಬಂದರೆ ಮೋದಿಯಿಂದಾಗಿ ಎಂದು ಬೊಬ್ಬೆ ಹಾಕುತ್ತಿದ್ದ ಬಿಜೆಪಿ ಈಗ ಕಾಂಗ್ರೆಸ್ ನ್ನು ದೂರುತ್ತಿದೆ..! ಟರ್ಮ್ ಶೀಟ್ ಬದಲಾವಣೆ ಮಾಡಿದ್ದು ಬಿಜೆಪಿ ಈ ಬಗ್ಗೆ ದಾಖಲೆಯಿದೆ; ಅಶೋಕ್ ರೈ ಹುಟ್ಟಿಸಿದ ಲಿಸ್ಟ್ ಕೊಡ್ತೇನೆ 8 ವರ್ಷಗಳಲ್ಲಿ ಬೆಳ್ತಂಗಡಿಯಲ್ಲಿ ಪೂಂಜಾ ಹುಟ್ಟಿಸಿದ್ದೇನೂ..? ಪುಡಾ ಅಧ್ಯಕ್ಷ ಅಮಳ ರಾಮಚಂದ್ರ

Published

on



Ad Widget

Ad Widget

Ad Widget

Ad Widget

ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಒಂದು ನಿಗೂಢ ಯೋಜನೆ. ಕಾರ್ಪೊರೇಟ್ ಜಗತ್ತಿನ ಪರವಾಗಿ ಕಾರ್ಯನಿರ್ವಹಿಸುವ ಮೋದಿ ಸರಕಾರ ರೈತರನ್ನು ಕತ್ತಲಲ್ಲಿಟ್ಡು, ವಿಮಾ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದಲೇ ತಂದ ಯೋಜನೆ ಇದು ಎಂದು ಪುಡಾ ಅಧ್ಯಕ್ಷರಾದ ಅಮಳ ರಾಮಚಂದ್ರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Ad Widget

Ad Widget

Ad Widget

Ad Widget

ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಒಂದು ನಿಗೂಢ ಯೋಜನೆ. ಕಾರ್ಪೊರೇಟ್ ಜಗತ್ತಿನ ಪರವಾಗಿ ಕಾರ್ಯನಿರ್ವಹಿಸುವ ಮೋದಿ ಸರಕಾರ ರೈತರನ್ನು ಕತ್ತಲಲ್ಲಿಟ್ಡು, ವಿಮಾ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದಲೇ ತಂದ ಯೋಜನೆ ಇದು.

Ad Widget

Ad Widget

Ad Widget alt="Ad Widget"/>

Ad Widget

ಈ ಯೋಜನೆಯಲ್ಲಿ ಸರಕಾರ ಮತ್ತು ವಿಮಾ ಕಂಪೆನಿಗಳ ನಡುವೆ ಒಪ್ಪಂದ ಏರ್ಪಟ್ಟು , ರೈತ ಪ್ರೀಮಿಯಂ ಪಾವತಿಸಿದ 1.5 ವರ್ಷದ ನಂತರ ಸ್ವಯಂಚಾಲಿತವಾಗಿ ರೈತರ ಖಾತೆಗೆ ವಿಮಾ ಮೊತ್ತ ಪಾವತಿಯಾಗುವ ವ್ಯವಸ್ಥೆ. ಈ ಯೋಜನೆಗೆ ಅಪ್ಪ ಯಾರು, ಇದನ್ನು ನಿರ್ವಹಿಸುವವರು ಯಾರು, ಸರಿಯಾದ ವಿಮಾ ಮೊತ್ತ ಪಾವತಿಯಾಗದೇ ಹೋದರೆ ದೂರು ದುಮ್ಮಾನಗಳನ್ನು ಯಾರಿಗೆ ಸಲ್ಲಿಸಬೇಕು , ಎಷ್ಟು ಮಳೆ ಬಂದಿದೆ, ಎಷ್ಟು ಉಷ್ಣಾಂಶ ಹೆಚ್ಚಾಗಿದೆ, ನಮಗೆ ನ್ಯಾಯವಾಗಿ ಎಷ್ಟು ಪರಿಹಾರ ಸಿಗಬೇಕು, ಪರಿಹಾರ ನ್ಯಾಯಬದ್ಧವಾಗಿದೆಯೇ ಎಂಬ ಯಾವುದೇ ವಿವರಗಳು ಪಾಲಿಸಿದಾರರಿಗೆ ಸಿಗದ , ಪಾರದರ್ಶಕತೆಯ ಲವಲೇಷವೂ ಇಲ್ಲದ ಒಂದು ವ್ಯವಸ್ಥೆ ಇದು ಎಂದು ಪುಡಾ ಅಧ್ಯಕ್ಷರಾದ ಅಮಳ ರಾಮಚಂದ್ರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Ad Widget

Ad Widget <> Ad Widget

ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅಮಳ ರಾಮಚಂದ್ರ , ವಿಮಾ ಮೊತ್ತ ಪ್ರತಿ ಹೆಕ್ಟೇರಿಗೆ ಅಡಿಕೆಗೆ 1,28,000, ಕಾಳು ಮೆಣಸಿಗೆ 47,000 , ಒಟ್ಟು 1,75,000. ಇದರ ಪ್ರೀಮಿಯಂ ಕಂತು 25% ಆದರೆ ಸರಕಾರಗಳು ವಿಮಾ ಕಂಪೆನಿಗೆ ನೀಡುವ ತಲಾ 20% ಹಣ ರೂ 35,000. ಪ್ರೀಮಿಯಂ ಅಡಿಕೆಗೆ 35℅ ಕಾಳುಮೆಣಸಿಗೆ 30% ಆದರೆ ಉಭಯ ಸರಕಾರಗಳು ಕಂಪೆನಿಗೆ ನೀಡುವ 30%ಹಣದ ಮೊತ್ತ ರೂ ಅಡಿಕೆಗೆ ರೂ38,400, ಕಾಳುಮೆಣಸಿಗೆ ರೂ11750, ಒಟ್ಟು ರೂ50,150. ಇಷ್ಟು ದೊಡ್ಡ ಮೊತ್ತದ ನಮ್ಮ ತೆರಿಗೆಯ ಹಣ ಸರಕಾರ ವಿಮಾ ಕಂಪೆನಿಗೆ ನೀಡುವುದಾದರೆ, ಪರಿಹಾರ ಬಂದರೆ ಬಂತು, ಬಾರದಿದ್ದರೆ ಇಲ್ಲ, ಇದರಿಂದ ವಿಮಾ ಕಂಪೆನಿಗಳಿಗೆ ಲಾಭ ಆಗುವುದಾದರೆ, ನಮ್ಮ ಮತ್ತು ಸರಕಾರದ ಮದ್ಯೆ ವಿಮಾ ಕಂಪೆನಿ ಯಾಕೆ ಬೇಕು? ಸರಕಾರಗಳು ನೇರವಾಗಿಯೇ ಪ್ರತಿವರ್ಷ ಪ್ರತಿ ಹೆಕ್ಟೇರಿಗೆ ರೂ 50150ರಂತೆ ರೈತರ ಖಾತೆಗೆ ನೇರವಾಗಿ ಹಾಕಬಹುದಲ್ಲವೇ ? ಸರಕಾರದ ಹಣದಲ್ಲಿ ವಿಮಾ ಕಂಪೆನಿಗಳಿಗೆ ಲಾಭ ಮಾಡಿಕೊಡುವುದಕ್ಕಾಗಿಯೇ ಈ ಯೋಜನೆಯನ್ನು ಕೇಂದ್ರದ ಮೋದಿ ಸರಕಾರ ಜಾರಿಗೆ ತಂದಿದೆ.



Ad Widget

2016ರಲ್ಲಿ ಮರುವಿನ್ಯಾಸಗೊಳಿಸಿದ ಬೆಳೆ ವಿಮಾ ಯೋಜನೆ ಆರಂಭಗೊಂಡ ನಂತರ ಮೊದಲ ಕೆಲವು ವರ್ಷಗಳಲ್ಲಿ ಯೋಜನೆ ಬಹಳ ಚೆನ್ನಾಗಿತ್ತು. ಹತ್ತು ಸಾವಿರ 20 ಸಾವಿರ ಪ್ರೀಮಿಯಂ ಕಟ್ಟಿದ ರೈತರಿಗೆ ಲಕ್ಷ ಲಕ್ಷ ಹಣ ಬರುತ್ತಿತ್ತು. ರಾಜ್ಯ ಮತ್ತು ಕೇಂದ್ರದ ಸರಕಾರಗಳು ಸೇರಿ ಅನುಷ್ಟಾನಗೊಳಿಸಿದ ಈ ಯೋಜನೆಯಲ್ಲಿ ರೈತರಿಗೆ ಒಳ್ಳೆಯ ಪರಿಹಾರ ಬಂದಾಗ ಮೋದಿಯಿಂದಾಗಿ ಹಣ ರೈತರಿಗೆ ಬಂತು ಎಂದು ಬೊಬ್ಬೆ ಹಾಕುತ್ತಿದ್ದ ಬಿಜೆಪಿಯವರಿಗೆ ಈಗ ರಾಜ್ಯ ಸರ್ಕಾರವನ್ನು ದೂರುತ್ತಿರುವುದು ಅತ್ಯಂತ ನಾಚಿಕೆಗೇಡು ಸಂಗತಿಯಾಗಿ. ಅದರಲ್ಲಿಯೂ ಯಾವ ತಪ್ಪನ್ನು ಮಾಡದ ರಾಜ್ಯ ಕಾಂಗ್ರೆಸ್ ಸರಕಾರವನ್ನು ವಿನಾಕಾರಣ ತಪ್ಪು ಮಾಹಿತಿ ನೀಡಿ ದೂಷಿಸುವುದು ಮತ್ತು ತಮ್ಮದೇ ಪಕ್ಷದ ಜೋಪಾಸಣಾ ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರು ಮಾಡಿದ ತಪ್ಪನ್ನು ಕಾಂಗ್ರೆಸ್ ಸರಕಾರದ ಮೇಲೆ ಹೇರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ.

Ad Widget

Ad Widget

2023ರಲ್ಲಿ ಟರ್ಮಶೀಟ್ ಬದಲಾವಣೆ ಮಾಡಲಾಯಿತು ಎಂದು ಬಿಜೆಪಿಯವರು ಆರೂಪಿಸುತ್ತಿರುವುದು ನಿಜ. ಆದರೆ ಈ ಟರ್ಮ್ ಶೀಟ್ 2023ರಲ್ಲಿ ಯಾವಾಗ ಬದಲಾವಣೆ ಆಯಿತು , ಯಾವಾಗ ಟೆಂಡರ್ ಕರೆಯಲಾಯಿತು, ಯಾವಾಗ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು ಎನ್ನುವುದನ್ನು ನೋಡಿದರೆ ಬಿಜೆಪಿಯವರು ಎಷ್ಟು ಸುಳ್ಳು ಹೇಳುತ್ತಿದ್ದಾರೆ ಅನ್ನೋದು ಅರ್ಥ ಆಗುತ್ತದೆ. ಕರ್ನಾಟಕದಲ್ಲಿ ಕಳೆದ ವಿಧಾನಸಭಾ ಚುನಾವಣೆ ನಡೆದದ್ದು 2023ರ ಮೇ ಹತ್ತರಂದು. ಫಲಿತಾಂಶ ಪ್ರಕಟವಾದದ್ದು 2023 ನೇ ಇಸವಿಯ ಮೇ 13 ರಂದು. ಫಲಿತಾಂಶ ಪ್ರಕಟವಾದ ನಂತರ, ಕಾಂಗ್ರೆಸ್ ಪಕ್ಷ ಬಹುಮತವನ್ನು ಪಡೆದು, ಮಾನ್ಯ ಸಿದ್ದರಾಮಯ್ಯನವರು ಆಡಳಿತ ಪಕ್ಷದ ನಾಯಕರಾಗಿ ಆಯ್ಕೆಗೊಂಡು, ಅವರು ಅಧಿಕಾರ ಸ್ವೀಕರಿಸಿದ್ದು 20 ಮೇ 2023 ರಂದು. ಆದರೆ ಈ ಟರ್ಮ್ ಶೀಟ್ ಬದಲಾವಣೆ, ಇಲ್ಲವಾರು ಟೆಂಡರ್ ಆದೇಶ ಮೇ ತಿಂಗಳ 19ನೇ ತಾರೀಕಿನಂದೇ ಆಗಿತ್ತು. ಅಂದರೆ ಕಾಂಗ್ರೆಸ್ ಸರಕಾರ 2023ರಲ್ಲಿ ಅಧಿಕಾರ ವಹಿಸಿಕೊಂಡು , ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸುವುದಕ್ಕೆ ಒಂದು ದಿನಕ್ಕೆ ಮೊದಲೇ ಟೆಂಡರ್ ಕರೆಯಲಾಗಿತ್ತು. ಈ ಬಗ್ಗೆ ಸ್ಪಷ್ಟವಾದ ದಾಖಲೆಗಳಿದ್ದು, ಈ ದಾಖಲೆಗಳನ್ನು ನಾನು ದ.ಕ. ಜಿಲ್ಲೆಯ ಮಹಾಜನತೆಗೆ ಮತ್ತು ಪುತ್ತೂರಿನ ಎಲ್ಲಾ ಅಡಿಕೆ ಬೆಳೆಗಾರರಿಗೆ ಈ ಪತ್ರಿಕಾಗೋಷ್ಠಿಯಲ್ಲಿ ಸಲ್ಲಿಸುತ್ತಿದ್ದೇನೆ.

ಒಂದು ಸರಕಾರದ ಅವಧಿ ಮುಗಿದ ನಂತರ ನಂತರ ಇನ್ನೊಂದು ಸರಕಾರದ ಆಯ್ಕೆಗಾಗಿ ಚುನಾವಣೆ ನಡೆದು ಹೊಸ ಸರಕಾರ ಅಧಿಕಾರ ಸ್ವೀಕರಿಸುವವರೆಗೆ ಹಿಂದಿನ ಸರಕಾರದ ಮುಖ್ಯಮಂತ್ರಿಗಳೇ ಜೋಪಾಸಣಾ ಮುಖ್ಯಮಂತ್ರಿಗಳಾಗಿರುತ್ತಾರೆ. ಜೋಪಾಸಣಾ ಮುಖ್ಯಮಂತ್ರಿಗಳು ಕೇವಲ ಸರಕಾರವನ್ನು ನೋಡಿಕೊಳ್ಳುತ್ತಾರೆ ಅಷ್ಟೇ ಹೊರತು ನಿರ್ಧಾರಗಳನ್ನು ತೆಗೆದುಕೊಳ್ಳುವ ಎಲ್ಲಾ ಅಧಿಕಾರವೂ ರಾಜ್ಯಪಾಲರಲ್ಲೇ ಕೇಂದ್ರೀಕೃತವಾಗಿರುತ್ತದೆ. ಆಗಿನ ಜೋಪಾಸಣಾ ಮುಖ್ಯಮಂತ್ರಿಗಳಾಗಿದ್ದವರು ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಯವರು ಮತ್ತು ಕರ್ನಾಟಕ ರಾಜ್ಯದ ರಾಜ್ಯಪಾಲರಾಗಿದ್ದವರು, ಕೇಂದ್ರದ ಬಿಜೆಪಿ ಸರಕಾರ ನೇಮಿಸಿದ, ಬಿಜೆಪಿಯ ಹಿರಿಯ ನಾಯಕರಾದ ಥಾವರ್ ಚಂದ್ ಗೆಹ್ಲೋಟ್ ಆಗಿದ್ದರು. ಅಂದರೆ ಇವತ್ತು ಟರ್ಮ್ ಶೀಟಿನಲ್ಲಿ ಏನಾದರೂ ಬದಲಾವಣೆಗಳಾಗಿ, ಅದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ವಿಮೆಯ ಪರಿಹಾರದ ಮೊತ್ತ ಕಡಿಮೆಯಾಗಿ ಏನಾದರೂ ತೊಂದರೆ ಆಗಿದ್ದರೆ ಅದಕ್ಕೆ ಮೂಲಕ ಕಾರಣ ಅಂದಿನ ಕರ್ನಾಟಕದ ಸರಕಾರದ ಜೋಪಸನಾ ಮುಖ್ಯಮಂತ್ರಿಗಳಾದ ಬಿಜೆಪಿಯ ಬಸವರಾಜ ಬೊಮ್ಮಾಯಿ ಅವರು ಮತ್ತು ಅಂದಿನ ರಾಜ್ಯಪಾಲರಾಗಿದ್ದ ಥಾವರ್ ಚಂದ್ ಗೆಹ್ಲೋಟ್ ಅವರೇ ಆಗಿದ್ದಾರೆ. ಮತ್ತು ಈ ಎಲ್ಲದರ ಹಿಂದೆ ಇರುವುದು ಭಾರತೀಯ ಜನತಾ ಪಕ್ಷವೇ ಆಗಿದೆ. 2023ರಲ್ಲಿ ಟರ್ಮ್ ಶೀಟ್ ಬದಲಾಯಿತು ಅನ್ನುವುದು ಸತಗಯ, 2023ರಲ್ಲಿ ಕಾಂಗ್ರೆಸ್ ಸರಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂತು ಅನ್ನೂವುದೂ ಸತ್ಯ. ಹೀಗೆ ಈ 2 ಸತ್ಯಗಳನ್ನು ಮುಂದಿಟ್ಡುಕೊಂಡು ಬಿಜೆಪಿಯವರು ಸತ್ಯದ ತಲೆಯ ಮೇಲೆ ಹೊಡೆದು ಸುಳ್ಳನ್ನು ಪ್ರತಿಷ್ಠಾಪಿಸಲು ಹೊರಟಿದ್ದಾರೆ. ಜಿಲ್ಲೆಯ ಜನರಿಗೆ ಮೋಸ ಮಾಡಿ ಕಾಂಗ್ರೆಸ್ ಪಕ್ಷವನ್ನು ಕಟಕಟೆಯಲ್ಲಿ ನಿಲ್ಲಿಸಲು ವಿಫಲ ಪ್ರಯತ್ನ ನಡೆಸಿದ್ದಾರೆ.

ತಮ್ಮ ಇತಿಹಾಸದುದ್ದಕ್ಕೂ ಸುಳ್ಳುಗಳನ್ನು ಹೇಳಿ ಅಧಿಕಾರ ಪಡೆದ ಬಿಜೆಪಿಯವರು ಮತ್ತು ಅದರ ನಾಯಕರು ದೇಶದಲ್ಲಿ ನಡೆಯುತ್ತಿರುವ ಪ್ರತಿಯೊಂದು ವಿಷಯದಲ್ಲಿಯೂ ಸುಳ್ಳನ್ನೇ ಹೇಳುತ್ತಿದ್ದಾರೆ ಮತ್ತು ಆ ಮೂಲಕ ದೇಶದ ಜನರ ದಾರಿಯನ್ನು ತಪ್ಪಿಸುತ್ತಿದ್ದಾರೆ. ಯಾವುದೇ ಆಧಾರಗಳಿಲ್ಲದೆ ಕಪೋಲ ಕಲ್ಪಿತ ವಿಚಾರಗಳನ್ನು ಜನರ ಮುಂದಿಟ್ಟು, ಸಂದರ್ಭಕ್ಕೆ ಸರಿಯಾಗಿ ಸುಳ್ಳುಗಳನ್ನು ಹೇಳಿ, ಜನರ ದಾರಿ ತಪ್ಪಿಸಿ, ವೋಟು ಪಡೆದು ಅಧಿಕಾರಕ್ಕೆ ಇರುವ ಕಲೆಯನ್ನು ಇವರು ಅತ್ಯಂತ ವ್ಯವಸ್ಥಿತವಾಗಿ ಮಾಡುತ್ತಾ ಬಂದಿದ್ದಾರೆ. ಮತಯಂತ್ರಗಳನ್ನು ತಿಳಿಸಿ , ದೇಶದ ದಲಿತ ದಮನಿತ, ಅಲ್ಪಸಂಖ್ಯಾತರ ಮತಗಳನ್ನು ವೋಟರ್ ಲಿಸ್ಟ್ ಇಂದ ಇಡೀ ದೇಶಕ್ಕೂ ಸಮಸ್ತ ಹಿಂದೂ ಸಮಾಜಕ್ಕೂ ಮೋಸ ಮಾಡಿದ ಇವರು ಅಡಿಕೆಯ ಬೆಳೆ ವಿಮೆಯ ವಿಚಾರದಲ್ಲಿ ಒಂದು ಕಪೋಲ ಕಲ್ಪಿತ ಸುಳ್ಳು ವಿಚಾರವನ್ನು ಮುಂದಿಟ್ಟು , ಇಡೀ ಜಿಲ್ಲೆಯಲ್ಲಿ ಹಂಗಾಮ ನಡೆಸಿ , ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಡಿಕೆ ಬೆಳೆಗಾರರಿಗೆ ದ್ರೋಹವನ್ನು ಎಸೆಗಿದ್ದಾರೆ.

ಹೀಗೆ ಬಿಜೆಪಿಯವರು ರಾಜ್ಯಸರಕಾರದ ಮೇಲೆ ಗೂಬೆ ಕೂರಿಸಿ ಜನರ ಕಣ್ಣಿ ಮಂಕುಬೂದಿ ಎರಚಿ ಮುಂದಿನ ಚುನಾವಣೆ ಎದುರಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ಈ ಎಲ್ಲಾ ವಿಚಾರಗಳು ಬಿಜೆಪಿಯವರಿಗಾಗಲೀ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರಿಗಾಗಲೀ ತಿಳಿಯದ ವಿಚಾರ ಏನೆಲ್ಲ. ಆದರೆ ಅವರು ಅರ್ಧ ಸತ್ಯವನ್ನು ಹೇಳಿ ಇನ್ನರ್ಧ ಸತ್ಯವನ್ನು ಮುಚ್ಚಿಟ್ಟು, ಮತ್ತೆ ಇನ್ನೊಂದಷ್ಟು ವಿಚಾರಗಳನ್ನು ತಿರುಚಿ ಜಿಲ್ಲೆಯ ಜನರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಇವರ ಉದ್ದೇಶ ಮುಂದಿನ ಚುನಾವಣೆಯಲ್ಲಿ ಮತ ಕದಿಯುವುದು. ಓಟ್ ಚೋರಿ ಮಾಡಿ ಸಿಕ್ಕಿಹಾಕಿಕೊಂಡ ಮೋದಿ , ಶಾ ಜೋಡಿ ಇಂದು ಇಡೀ ದೇಶದಲ್ಲಿ ಮುಖ ಮುಚ್ಚಿ ಓಡಾಡಿಕೊಂಡಿರುವುದರಿಂದ ಧೃತಿಗೆಟ್ಟ ಬಿಜೆಪಿಯವರು ಮತ್ತೆ ಪುನಃ ಸುಳ್ಳಿನ ರಾಜಕೀಯಕ್ಕೆ ಹಿಂತಿರುಗಿದ್ದಾರೆ. ಇದು ಖಂಡನಾರ್ಹ.ಸುಳ್ಳು ಹೇಳಿ ದ.ಕ. ಜಿಲ್ಲೆಯ ಜನರಿಗೆ ಮೋಸ ಮಾಡುತ್ತಿರುವ ಬಿಜೆಪಿಯ ನಡವಳಿಕೆ ಅಕ್ಷಮ್ಯ ಅಪರಾಧವಾಗಿದೆ.

ಇದರ ಜೊತೆಗೆ ಮಾನ್ಯ ಹರೀಶ್ ಪೂಂಜಾರವರು ಪುತ್ತೂರಿನ ಶಾಸಕರಾದ ಅಶೋಕ್‌ಕುಮಾರ್ ರೈವರ ಮೇಲೆ ವೈಯ್ಯಕ್ತಿ ದಾಳಿ ನಡೆಸಿದ್ದಾರೆ. ತನಾನು ಹುಟ್ಟಿಸಿದ ಮಗುವಿಗೆ ನಾನೇ ಅಪ್ಪ ಎಂದು ಹೇಳುವ ಪೂಂಜಾರವರ ಕೀಳು ಮಾತುಗಳಿಗೆ ಮಾನ್ಯ ಶಾಸಕರು ಸರಿಯಾದ ಉತ್ತರ ನೀಡಿದ್ದಾರೆ. ಹುಟ್ಡಿಸುವ ಮಾತುಗಳನ್ನ ಆಡುತ್ತಿರುವ ಹರೀಶ್‌ ಪೂಂಜಾರವರು ಅಶೋಕ್ ರೈಯವರು ಪುತ್ತೂರಿನಲ್ಲಿ ಏನನ್ನು ಹುಟ್ಟಿಸಿದ್ದಾರೆ ಮತ್ತು ಸ್ವತಃ ತಾನು ಬೆಳ್ತಂಗಡಿಯಲ್ಲಿ ಏನನ್ನು ಹುಟ್ಟಿಸಿದ್ದಾರೆ ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳುವುದು ಒಳಿತು.

ಬಾಯಿ ಚಪಲಕ್ಕೆ ಮಾತನಾಡುವ ಹರೀಶ್ ಪೂಂಜಾರವರಿಗೆ ನಾವು ಕೊಡುವ ಉತ್ತರ ಇದು. ಪುತ್ತೂರಿನಲ್ಲಿ ನಮ್ಮ ಶಾಸಕರು ಒಂದು ಸರಕಾರಿ ಮೆಡಿಕಲ್ ಕಾಲೇಜು ಹುಟ್ಟಿಸಿದ್ದಾರೆ.
ಮುಂಡೂರು ಗ್ರಾಮದಲ್ಲಿ ಒಂದು ಕ್ರೀಡಾಂಗಣವನ್ನು ಹುಟ್ಟಿಸಿದ್ದಾರೆ,
ಅಲ್ಲೇ ಪಕ್ಕದಲ್ಲಿ ಒಂದು ಸರ್ವ ಸುಸಜ್ಜಿತ ಆರ್.ಟಿ.ಒ. ಟ್ರ್ಯಾಕ್ ಹುಟ್ಡಿಸಿದ್ದಾರೆ, ಬಜತ್ತೂರು ಗ್ರಾಮದಲ್ಲಿ ಒಂದು ಅಂಬೇಡ್ಕರ್ ವಸತಿ ಶಾಲೆ ಹುಟ್ಟಿಸಿದ್ದಾರೆ,
ಕುರಿಯ ಗ್ರಾಮದಲ್ಲಿ ಒಂದು ಶ್ರಮಿಕ ವಸತಿ ಶಾಲೆ ಹುಟ್ಟಿಸಿದ್ದಾರೆ.
ಬಿರುಮಲೆ ಬೆಟ್ಟದಲ್ಲಿ ಅಭಿವೃದ್ಧಿಯ ಪರ್ವವನ್ನು ಹುಟ್ಡಿಸಿದ್ದಾರೆ ,
ಬನ್ನೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಒಂದು ಹಾಸ್ಟೆಲ್ ಹುಟ್ಟಿಸಿದ್ದಾರೆ.
ತಾಲೂಕು ಪಂಚಾಯತ್‌ಗೆ ಒಂದು ನೂತನ ಕಟ್ಟಡ ಹುಟ್ಟಿಸಿದ್ದಾರೆ. ನಗರದಲ್ಲಿ ಒಂದು
ನೂತನ ಪ್ರವಾಸಿ ಮಂದಿರ ಹುಡ್ಟಿಸಿದ್ದಾರೆ.
ಕಬಕದಿಂದ ವಿಟ್ಲಕ್ಕೆ ಒಂದು ಚತುಷ್ಪತ ರಸ್ತೆ ಹುಟ್ಟಿಸಿದ್ದಾರೆ.
ನಿವೇಶನ ರಹಿತ ಬಡವರಿಗೆ ನೂರಾರು ಮನೆ ನಿವೇಶನ ಹುಟ್ಟಿಸಿದ್ದಾರೆ. ನಿಮ್ಮದೇ ಪಕ್ಷದ ಖದೀಮರು ನುಂಗಿ ನೀರು ಕುಡಿಯಲು ನೋಡಿದ್ದ ಮಹಾಲಿಂಗೇಶ್ವರ ದೇವಸ್ಥಾನದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಭೂಮಿಯನ್ನು ದೇವಾಲಯದ ಸ್ವಾದೀನಕ್ಕೆ ಮರು ಒಪ್ಪಿಸಿ ಮರು ಹುಟ್ಟು ನೀಡಿದ್ದಾರೆ. ಕಳೆದ 8 ವರ್ಷಗಳಿಂದ ಶಾಸಕರಾಗಿರುವ ನೀವೇನು ಹುಟ್ಟಸಿದಿರಿ ? ನೀವು ಹುಟ್ಟಿಸಿದ್ದು ಕೋಮುವಾದ ಮಾತ್ರ ! ನೀವು ಹುಟ್ಟಿಸಿದ್ದು ಹಿಂದೂ ಮುಸ್ಲಿಂ ದ್ವೇಷ ಮಾತ್ರ ! ನೀವು ಹುಟ್ಟಿಸಿದ್ದು ಗೋಣಿ ಚೀಲದ ತುಂಬಾ ಕಂತೆ ಕಂತೆ ಹಣ ಮಾತ್ರ ! ನೀವು ಹುಟ್ಟಿಸಿದ್ದು ಅದೇ ಸುಳ್ಳಿನ ರಾಜಕಾರಣ ಮಾತ್ರ ! ಒಂದು ಅವಧಿಗೆ ನಿಮ್ಮದೇ ಪಕ್ಷದ ಸರಕಾರ ಇದ್ದಾಗ ನೀವು ಹುಟ್ಟಿಸಿದ್ದು ಏನಾದರೂ ಒಂದು ಇದ್ದರೆ ಹೇಳಿ ನೋಡೋಣ ! ನಿಮ್ಮ ಕ್ಷೇತ್ರಕ್ಕೆ ಸ್ವಾಗತಿಸುವ ಹೊಂಡ ಬಿದ್ದ ರಸ್ತೆಗಳೇ ನಿಮ್ಮ ಹಣೆ ಬರಹವನ್ನು ಸಾರಿ ಸಾರಿ ಹೇಳುತ್ತದೆ. ನಾಚಿಕೆಯಾಗಬೇಕು ನಿಮಗೆ.

ದಾಖಲೆ : ಕರ್ನಾಟಕ ಸರಕಾರದ ನಡವಳಿಗಳು.
https://samrakshane.karnataka.gov.in/Docs/RWBCIS_Kharif_6_Districts_GO_2023_24.pdf

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading