Connect with us

ಶಿಕ್ಷಣ

Ambika-ಸಿಬಿಎಸ್‌ಇ ಹತ್ತನೆ ತರಗತಿ ಫಲಿತಾಂಶ; ಅಂಬಿಕಾ ವಿದ್ಯಾಲಯಕ್ಕೆ ಶೇ.100 ಫಲಿತಾಂಶ, ತಾಲೂಕಿಗೆ ಪ್ರಥಮ ಸ್ಥಾನ; 90 ಶೇ.ಕ್ಕಿಂತಲೂ ಅಧಿಕ – 14 ಹಾಗೂ 85 ಶೆಕಡಾಕ್ಕಿಂತಲೂ ಅಧಿಕ – 19

Published

on



Ad Widget

Ad Widget

Ad Widget

Ad Widget

ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯು ಪ್ರಸ್ತುತ ವರ್ಷ ಕೇಂದ್ರೀಯ ಸಿಬಿಎಸ್‌ಇ ಮಂಡಳಿ ನಡೆಸಿದ ಹತ್ತನೇ ತರಗತಿಯ ಪರೀಕ್ಷೆಯಲ್ಲಿ 100% ಫಲಿತಾಂಶ ದಾಖಲಿಸಿದೆ. ಪುತ್ತೂರಿನ ಸುರೇಶ್ ಶೆಟ್ಟಿ ಹಾಗೂ ನೈನ ಎಸ್ ಶೆಟ್ಟಿ ಇವರ ಪುತ್ರ ಕನಿಷ್ಕ್ ಎಸ್ ಶೆಟ್ಟಿ 97.33 ಶೇಕಡಾದೊಂದಿಗೆ ತಾಲೂಕಿಗೆ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.

Ad Widget

Ad Widget

Ad Widget

Ad Widget

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯು ಪ್ರಸ್ತುತ ವರ್ಷ ಕೇಂದ್ರೀಯ ಸಿಬಿಎಸ್‌ಇ ಮಂಡಳಿ ನಡೆಸಿದ ಹತ್ತನೇ ತರಗತಿಯ ಪರೀಕ್ಷೆಯಲ್ಲಿ 100% ಫಲಿತಾಂಶ ದಾಖಲಿಸಿದೆ. ಪುತ್ತೂರಿನ ಸುರೇಶ್ ಶೆಟ್ಟಿ ಹಾಗೂ ನೈನ ಎಸ್ ಶೆಟ್ಟಿ ಇವರ ಪುತ್ರ ಕನಿಷ್ಕ್ ಎಸ್ ಶೆಟ್ಟಿ 97.33 ಶೇಕಡಾದೊಂದಿಗೆ ತಾಲೂಕಿಗೆ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಗೋಪಾಲಕೃಷ್ಣ ಪ್ರಭು ಎಚ್ ಮತ್ತು ಗೀತಾ ಎಸ್ ದಂಪತಿಗಳ ಪುತ್ರ ಕರ್ಣಾಶ್ರುತ್ ಪ್ರಭು ಎಚ್ ಇವರು 95.66, ಅನಿಲ್ ಕುಮಾರ್ ರೈ ಡಿ ಮತ್ತು ಚೈತ್ರ .ಎ ರೈ ದಂಪತಿಗಳ ಪುತ್ರಿ ತನ್ವಿ ಎ ರೈ 95.33%ಎಸ್ ಪ್ರವೀಣ್ ಕುಮಾರ್ ಹಾಗೂ ಹವಿತ ಪ್ರವೀಣ್ ಅವರ ಪುತ್ರಿ ಸಿಂಚನ ಪ್ರವೀಣ್ 94.83% , ಮಧುಸೂದನ್ ಮತ್ತು ಕೆ ಮಲ್ಲಿಕಾ ಇವರ ಪುತ್ರಿ ಎ. ನಿಹಾರಿಕ ಎಂ ಬೋಕಡೆ 94.33%, ಪ್ರವೀಣ್ ರಾವ್ ಯು ಹಾಗೂ ಸುಗಂಧಿನಿ ಇವರ ಪುತ್ರ ಪ್ರಿಯಾಂಶು ರಾವ್ ಯು94.16%, ಮಹೇಶ್ ಕಜೆ ಮತ್ತು ದೀಪಿಕಾ ಭಟ್ ಕಜೆ ಇವರ ಪುತ್ರಿ ಮಂದಿರ ಕಜೆ 94%, ಯಾದವ್ ಕುಮಾರ್ ಕೆ ಮತ್ತು ವಿದ್ಯಾ ಕುಮಾರಿ ಪಿ ಇವರ ಪುತ್ರಿ ಭುವಿ ವೈ 93.66%, ಸುದರ್ಶನ್ ಕುಮಾರ್ ಇರ್ಕ್ಲಾಜೆ ಹಾಗೂ ಶಿಲ್ಪಾ ಸುದರ್ಶನ್ ಇವರ ಪುತ್ರ ಸುಧನ್ವಾ ಸುದರ್ಶನ್ 93.5% , ರಾಘವೇಂದ್ರ ಪಿ ಮತ್ತು ಸವಿತಾ ಕೆ ಇವರ ಪುತ್ರ ಶರಣ್ ಪಿ 93.16%, ಸಂತೋಷ್ ಕುಮಾರ್ ಬಿ.ಕೆ ಮತ್ತು ರವಿಕಲಾ ಸಂತೋಷ್ ಇವರ ಪುತ್ರಿ ಲಾಸ್ಯ ಸಂತೋಷ್ 93%, ಶ್ರೀಧರ ಎಸ್ ಮತ್ತು ಚಂದ್ರಾವತಿ ಎಂ ಇವರ ಪುತ್ರಿ ರಕ್ಷಾ ಎಸ್ ಎಸ್ 93%, ಹರೀಶ್ ಪಣಂಬು ಹಾಗೂ ಸಂಧ್ಯಾ ಕುಮಾರಿ ಹರೀಶ್ ಪಣಂಬು ರವರ ಪುತ್ರಿ ಸಹನ ಹರೀಶ್ ಪಣಂಬು 92.33% , ಉದಯಶಂಕರ್ ಎಂ ಎಸ್ ಮತ್ತು ಚೇತನ ಐ. ಇವರ ಪುತ್ರಿ ನಿಧಿ ಎಂ ಯು 91%, ಪ್ರವೀಣ್ ಕುಮಾರ್ ಎಸ್ ಮತ್ತು ಸೌಮ್ಯ ಶೆಟ್ಟಿ ಹೆಚ್ ಇವರ ಪುತ್ರಿ ವಿವಿಕ್ತ ರೈ ಎಸ್ 87.83% ರೋಹಿತ್ ಬಿ.ಎಸ್ ಮತ್ತು ಜಯಶ್ರೀ ಪಿ ಇವರ ಪುತ್ರ ಯಶಸ್ ಆರ್ 86.33%, ಲೋಕನಾಥ್ ಶೆಟ್ಟಿ ಹಾಗೂ ದಿಶಾಮನಿ .ಬಿ ಇವರ ಪುತ್ರ ಸಮೃದ್ಧ್ ಎಲ್ ಶೆಟ್ಟಿ 85.6%, ವಸಂತ ಬಿ ಮತ್ತು ಸುಚಿತ್ರ ಎಚ್ ಕೆ ಇವರ ಪುತ್ರಿ ಸಾನ್ವಿಕ ವಿ. 85.33% ಮತ್ತು ಲೋಕನಾಥ ಶೆಟ್ಟಿ .ಪಿ ಹಾಗೂ ದಿವ್ಯ ರೈ.ಪಿ ಇವರ ಪುತ್ರ ಹಿಮಾಂಶು ಎಲ್ ಶೆಟ್ಟಿ 85.16% ಅಂಕಗಳನ್ನು ಪಡೆಯುವುದರೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇಷ್ಟಲ್ಲದೆ 19 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಸಂಸ್ಥೆಗೆ ಹೆಮ್ಮೆ ಎನಿಸಿದೆ. ಶಾಲೆಯು ಆರಂಭದಿAದಲೂ ನಿರಂತರವಾಗಿ 100% ಫಲಿತಾಂಶವನ್ನು ದಾಖಲಿಸುತ್ತಾ ಬರುತ್ತಿರುವುದು ಸಂಸ್ಥೆಯ ಗುಣಮಟ್ಟವನ್ನು ಕಾಣಿಸುತ್ತಿದೆ.

Ad Widget

Ad Widget <> Ad Widget

Ad Widget
Click to comment

Leave a Reply

ಶಿಕ್ಷಣ

Air Force Day-ಅಮರ್ ಜವಾನ್ ಜ್ಯೋತಿ ಸ್ಮಾರಕದಲ್ಲಿ 94ನೇ ವಾಯುಸೇನಾ ದಿನಾಚರಣೆ

Published

on



Ad Widget

Ad Widget

Ad Widget

Ad Widget

ಪುತ್ತೂರಿನ ಮಾಜಿ ಸೈನಿಕರ ಸಂಘ, ಅಮರ ಜವಾನ್ ಜ್ಯೋತಿ ಸಂರಕ್ಷಣಾ ಸಮಿತಿ ಹಾಗೂ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ನಗರದ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಗುರುವಾರ 94ನೇ ವಾಯುಸೇನಾ ದಿನಾಚರಣೆಯನ್ನು ಆಚರಿಸಲಾಯಿತು.

Ad Widget

Ad Widget

Ad Widget

Ad Widget

ಪುತ್ತೂರು: ಪುತ್ತೂರಿನ ಮಾಜಿ ಸೈನಿಕರ ಸಂಘ, ಅಮರ ಜವಾನ್ ಜ್ಯೋತಿ ಸಂರಕ್ಷಣಾ ಸಮಿತಿ ಹಾಗೂ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಜಂಟಿ ಆಶ್ಯರದಲ್ಲಿ ನಗರದ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಗುರುವಾರ 94ನೇ ವಾಯುಸೇನಾ ದಿನಾಚರಣೆಯನ್ನು ಆಚರಿಸಲಾಯಿತು.

Ad Widget

Ad Widget

Ad Widget alt="Ad Widget"/>

Ad Widget

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪುಡಾ ಅಧ್ಯಕ್ಷ ಅಮಲಾ ರಾಮಚಂದ್ರ ಮಾತನಾಡಿ ದೇಶಕ್ಕಾಗಿ ಸೇವೆ ಸಲ್ಲಿಸುವುದು ಜೀವನದಲ್ಲಿ ಸಿಗುವ ಅಪೂರ್ವ ಕ್ಷಣ. ಸಾಹಸ, ಧೈರ್ಯ, ದೇಶಸೇವೆಗೆ ವಾಯುಸೇನೆ ಉತ್ತಮ ಆಯ್ಕೆ. ಆಧುನಿಕ ಕಾಲದ ಯುದ್ಧದಲ್ಲಿ ವಾಯುಸೇನೆಯ ಕೊಡುಗೆ ಅತ್ಯಂತ ಮಹತ್ವದ್ದು ಎಂದರು.

Ad Widget

Ad Widget <> Ad Widget

ಶ್ರೀಪ್ರಕಾಶ್ ಕುಕ್ಕಾಜೆ ಪ್ರಧಾನ ಭಾಷಣಗೈದು ವಾಯುಪಡೆಯ ಬಗೆಗೆ ಹಾಗೂ ಸಶಸ್ತ್ರ ಪಡೆಗಳಲ್ಲಿನ ಉದ್ಯೋಗಾವಕಾಶಗಳ ಬಗೆಗೆ ಮಾಹಿತಿ ನೀಡಿದರು. ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಸಾರ್ಜೆಂಟ್ ವಸಂತ್ ವಹಿಸಿದ್ದರು. ವೇದಿಕೆಯಲ್ಲಿ ನಟ್ಟೋಜ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮತ್ತು ಕರ್ನಲ್ ಡಿ.ಜಿ. ಭಟ್ ಉಪಸ್ಥಿತರಿದ್ದರು.



Ad Widget

ಕಾರ್ಯಕ್ರಮದಲ್ಲಿ ಅಂಬಿಕಾ ವಿದ್ಯಾಲಯದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

Continue Reading

ಶಿಕ್ಷಣ

Vivekananda-ವಿವೇಕಾನಂದ ಕಾಲೇಜಿನಲ್ಲಿ ವಂದೇ ಮಾತರಂ 150ನೇ ವರ್ಷದ ಆಚರಣೆ; ವಂದೇ ಮಾತರಂ ಗೀತೆ ನಮ್ಮ ಅಸ್ಮಿತೆಯ ಗುರುತು : ರಾಜೇಶ ಪದ್ಮಾರ್

Published

on



Ad Widget

Ad Widget

Ad Widget

Ad Widget

ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇದರ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ, ವಿದ್ಯಾರ್ಥಿ ಸಂಘ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ನಡೆದ ವಂದೇ ಮಾತರಂ 150ನೇ ವರ್ಷದ ಆಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ ಪದ್ಮಾರ್ ಮಾತನಾಡಿದರು.

Ad Widget

Ad Widget

Ad Widget

Ad Widget

ಪುತ್ತೂರು, ಅ. 15: ವಂದೇ ಮಾತರಂ ಗೀತೆಯೂ ಏಕತೆಯನ್ನು ಸಾರುವುದರ ಜೊತೆಗೆ ಜನರಲ್ಲಿ ಪ್ರೇರಣೆಯನ್ನು ಮೂಡಿಸುತ್ತದೆ. ಇದರ ನಿರ್ಮಾತೃ ಬಂಕಿಮ ಚಂದ್ರ ಚಟರ್ಜಿ. ಯಾವುದೇ ಜಾತಿ, ಬೇಧವಿಲ್ಲದೆ ರೂಪಿಸಿದ ಈ ವಂದೇ ಮಾತರಂ ಗೀತೆಯು ಬ್ರಿಟಿಷರ ಆಳ್ವಿಕೆಯನ್ನು ಅಂತ್ಯಗೊಳಿಸುವ ಉದ್ದೇಶದಿಂದ ಬಂಗಾಳ ವಿಭಜನೆಯ ವಿರೋಧವಾಗಿ ವಂಗ ಭಂಗ ಚಳವಳಿಯ ಧ್ಯೇಯ ಗೀತೆಯಾಗಿ ಮೂಡಿಬಂದ ಗೀತೆಯಿದು. ಕೊಲ್ಕತ್ತಾದಿಂದ ಹೊರಟ ಹೋರಾಟದ ಗೀತೆ ವಿಶ್ವಾದ್ಯಂತ ವ್ಯಾಪಿಸಿತು ಮತ್ತು ಯುಗಾಂತರ ಸಂಘಟನೆಯ ಆರಂಭಕ್ಕೆ ಮುಂದಡಿಯಿಟ್ಟಿತು. ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಈ ಜಯಘೋಷವನ್ನು ಕೂಗಿದರು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ ಪದ್ಮಾರ್ ಹೇಳಿದರು.

Ad Widget

Ad Widget

Ad Widget alt="Ad Widget"/>

Ad Widget

ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇದರ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ, ವಿದ್ಯಾರ್ಥಿ ಸಂಘ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ನಡೆದ ವಂದೇ ಮಾತರಂ 150ನೇ ವರ್ಷದ ಆಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

Ad Widget

Ad Widget <> Ad Widget

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ್ ಭಟ್ ಮಾತನಾಡಿ, ಸಮಾಜದ ಪ್ರತಿಯೊಂದು ಸ್ಥರಗಳಲ್ಲೂ ವಂದೇ ಮಾತರಂ ಕುರಿತು ಜಾಗೃತಿ ಮೂಡಬೇಕು. ವಂದೇ ಮಾತರಂ ಕುರಿತ ಈ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂದಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯನ್ನು ರಾಷ್ಟ್ರೀಯತೆಯೆಡೆಗೆ ಎಚ್ಚರಿಸುವ ಕಾರ್ಯ ಇದು ಎಂದರು.



Ad Widget

ಸಮಾರಂಭದ ಬಳಿಕ ವಿದ್ಯಾರ್ಥಿಗಳು ಒಕ್ಕೊರಲಿನಿಂದ ವಂದೇ ಮಾತರಂ ಗೀತೆಯನ್ನು ಹಾಡಿದರು.
ಕಾರ್ಯಕ್ರಮವನ್ನು ಸ್ನಾತಕೋತ್ತರ ಅಧ್ಯಯನ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ ಬಿ ಸ್ವಾಗತಿಸಿ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ವಿಶೇಷ ಅಧಿಕಾರಿ ಹಾಗೂ ಅರ್ಥಶಾಸ್ತç ವಿಭಾಗದ ಮುಖ್ಯಸ್ಥ ಡಾ. ಅರುಣ್ ಪ್ರಕಾಶ್ ವಂದಿಸಿ, ಪ್ರಥಮ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ದೀಕ್ಷಾ ಜೆ.ರೈ ನಿರೂಪಿಸಿದರು.

Continue Reading

ಶಿಕ್ಷಣ

Vidyamata Academy-ವಿದ್ಯಾಮಾತಾ ಅಕಾಡೆಮಿಯಲ್ಲಿ ಮೂರು ದಿನಗಳ “ವಾಯ್ಸ್ ಅಂಡ್ ವಿಷನ್” ತರಬೇತಿ ಕಾರ್ಯಕ್ರಮ ಮತ್ತು ಶಾರದಾ ಪೂಜೆ

Published

on



Ad Widget

Ad Widget

Ad Widget

Ad Widget

ಸರಕಾರಿ ನೇಮಕಾತಿಗಳು, ಬ್ಯಾಂಕಿಂಗ್, ಸಶಸ್ತ್ರ ಪಡೆಗಳ ನೇಮಕಾತಿ, ಖಾಸಗಿ ಉದ್ಯೋಗ, ಕೌಶಲ್ಯ ತರಬೇತಿ ನೀಡುವ ಕರಾವಳಿಯ ಪ್ರತಿಷ್ಠಿತ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ಮೂರು ದಿನಗಳ ವಾಯ್ಸ್ ಅಂಡ್ ವಿಷನ್ ಎಂಬ ಭಾಷಣ ಕಲೆ ಮತ್ತು ನಾಯಕತ್ವ ವೃದ್ಧಿಯನ್ನು ಸಂಯೋಜಿಸುವ ಕಾರ್ಯಕ್ರಮವನ್ನು ದಿನಾಂಕ: 12-10-2026 ಸೋಮವಾರದಿಂದ 14-10- 2026 ಬುಧವಾರದವರೆಗೆ ಹಮ್ಮಿಕೊಳ್ಳಲಾಗಿತ್ತು.

Ad Widget

Ad Widget

Ad Widget

Ad Widget

ಸರಕಾರಿ ನೇಮಕಾತಿಗಳು, ಬ್ಯಾಂಕಿಂಗ್, ಸಶಸ್ತ್ರ ಪಡೆಗಳ ನೇಮಕಾತಿ, ಖಾಸಗಿ ಉದ್ಯೋಗ, ಕೌಶಲ್ಯ ತರಬೇತಿ ನೀಡುವ ಕರಾವಳಿಯ ಪ್ರತಿಷ್ಠಿತ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ಮೂರು ದಿನಗಳ ವಾಯ್ಸ್ ಅಂಡ್ ವಿಷನ್ ಎಂಬ ಭಾಷಣ ಕಲೆ ಮತ್ತು ನಾಯಕತ್ವ ವೃದ್ಧಿಯನ್ನು ಸಂಯೋಜಿಸುವ ಕಾರ್ಯಕ್ರಮವನ್ನು ದಿನಾಂಕ: 12-10-2026 ಸೋಮವಾರದಿಂದ 14-10- 2026 ಬುಧವಾರದವರೆಗೆ ಹಮ್ಮಿಕೊಳ್ಳಲಾಗಿತ್ತು.

Ad Widget

Ad Widget

Ad Widget alt="Ad Widget"/>

Ad Widget

ವಿದ್ಯಾರ್ಥಿಗಳ ಆಲೋಚನಾ ಶಕ್ತಿ, ಭವಿಷ್ಯದ ದೃಷ್ಟಿಕೋನ, ಮಾತುಗಾರಿಕೆಗಳನ್ನು ಹೆಣೆದು, ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿಶೇಷ ಅಂದರೆ, ವಿದ್ಯಾರ್ಥಿಗಳನ್ನು, ತರಬೇತುದಾರರನ್ನು ಮತ್ತು ಪೋಷಕರನ್ನು ಒಂದೇ ವೇದಿಕೆಯಲ್ಲಿ ತರಬೇತಿಗೆ ಒಳಪಡಿಸಲಾಗಿತ್ತು.

Ad Widget

Ad Widget <> Ad Widget

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ, ಪುತ್ತೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ನಿಹಾಲ್ ಪಿ ಶೆಟ್ಟಿಯವರು ಉದ್ಘಾಟಿಸಿ, ಮಾತನಾಡುತ್ತಾ, “ಪ್ರಸ್ತುತ ಯಾವ ಪದವಿ, ಸ್ನಾತಕೋತ್ತರ ಪದವಿ ಓದುತ್ತೇವೆ ಅನ್ನೋದು ಮುಖ್ಯ ಅಲ್ಲ, ಆಧುನಿಕ ಜಗತ್ತಿನಲ್ಲಿ ಉದ್ಯೋಗ ಕೌಶಲ್ಯತೆ ಪ್ರಮುಖ ಮಾನದಂಡವಾಗಿರುತ್ತದೆ. ವಿದ್ಯಾಮಾತಾ ಕೇವಲ ಪುಸ್ತಕದ ಓದಿಗೆ ಮಾತ್ರ ಸೀಮಿತವಾಗಿರದೆ, ಬದುಕಿನ ಅಡಿಪಾಯವನ್ನೇ ಹಾಕಿಕೊಡುತ್ತಿದೆ. ಇಂತಹ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವುದು ನಿಮ್ಮೆಲ್ಲರ ಭಾಗ್ಯ” ಎಂದು ಸಂಸ್ಥೆಗೆ ಮತ್ತು ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು.



Ad Widget

ಮೂರು ದಿನದ ತರಬೇತಿಯನ್ನು ಶ್ರೀರಾಮಕುಂಜೇಶ್ವರ ಪ್ರೌಢಶಾಲೆಯ ವಿಶ್ರಾಂತ ಮುಖ್ಯ ಗುರುಗಳಾದ ಸತೀಶ್ ಭಟ್ ಬಿಳಿನೆಲೆ ಹಾಗೂ ಜೆಸಿಐ ರಾಷ್ಟ್ರೀಯ ತರಬೇತುದಾರರಾದ ಕೃಷ್ಣ ಮೋಹನ್ ರವರು ನಡೆಸಿಕೊಟ್ಟರು.

Ad Widget

Ad Widget

ಸಮಾರೋಪ ಮತ್ತು ಶಾರದಾ ಪೂಜೆ
ದಿನಾಂಕ: 12-10-2026 ಸೋಮವಾರದಂದು ಗಣಪತಿ ಹೋಮ ಹಾಗೂ ದುರ್ಗಾ ನಮಸ್ಕಾರ ಪೂಜೆ ನಡೆದು, 14-10-2026 ಬುಧವಾರದಂದು ಮಧ್ಯಾಹ್ನ ವಿದ್ಯಾರ್ಥಿಗಳಿಂದ ಭಜನೆ ನಡೆಯಿತು. ಶಾರದಾ ಪೂಜೆಯನ್ನು ಸತೀಶ್ ಭಟ್ ಹಾಗೂ ಸುಮನ್ ಸತೀಶ್ ಭಟ್ ದಂಪತಿಗಳು ನೆರವೇರಿಸಿದರು. ತಾಲೂಕು ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರು ತರಬೇತಿ ಕಾರ್ಯಗಾರದಲ್ಲಿ ಅತ್ಯುತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಿ, ಮಾತನಾಡುತ್ತಾ ತಾನು ಕೂಡ ಸರಕಾರಿ ಹುದ್ದೆಯ ಆಕಾಂಕ್ಷಿಯಾಗಿ ಪ್ರಯತ್ನ ಮಾಡುವಾಗ ಇದು ನಿಮ್ಮಿಂದ ಸಾಧ್ಯವಾ? ಅಂತ ಪ್ರಶ್ನೆ ಮಾಡಿದವರು ಹೆಚ್ಚು. ನಮ್ಮ ಭಾಗದಲ್ಲಿ ಸರಕಾರಿ ಹುದ್ದೆಗಳಿಗೆ ಪ್ರಯತ್ನ ಮಾಡುವವರು ತುಂಬಾ ಕಡಿಮೆ, ಪ್ರಯತ್ನ ಮಾಡುವವರಿಗೆ ಪ್ರೋತ್ಸಾಹ ಕೊಡುವವರು ಇನ್ನೂ ಕಡಿಮೆ, ಆದರೆ ನಿರಂತರ ಪ್ರಯತ್ನದಿಂದ ನಮ್ಮ ಭಾಗದಲ್ಲೂ ಸರಕಾರಿ ಹುದ್ದೆಗೆ ಹೋಗಲು ಸಾಧ್ಯವಿದೆ ಎಂದು ವಿದ್ಯಾಮಾತ ಅಕಾಡೆಮಿಯು ಸಾಭೀತು ಮಾಡಿದೆ.

ಈ ನಿಟ್ಟಿನಲ್ಲಿ ವಿದ್ಯಾಮಾತಾ ಅಕಾಡೆಮಿಯು ಮಾಡುತ್ತಿರುವ ಎಲ್ಲಾ ಸಮಾಜಮುಖಿ ಸಾಧನಗಳು ಮತ್ತು ತರಬೇತಿಗಳು ಯಶಸ್ವಿಯಾಗಲಿ” ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಪೋಷಕರೊಂದಿಗೆ ಸಂಪನ್ಮೂಲ ವ್ಯಕ್ತಿಗಳು ಸಂವಾದ ನಡೆಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ಯವರು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ನಿರ್ದೇಶಕಿ ರಮ್ಯಾ ಭಾಗ್ಯೇಶ್ ರೈ, ತರಬೇತುದಾರರು, ಪೋಷಕರು, ವಿದ್ಯಾರ್ಥಿಗಳು, ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading