ಮಂಗಳೂರು
‘HPV’ vaccine-ಗರ್ಭಕಂಠದ ಕ್ಯಾನ್ಸರ್ ತಡೆಗೆ 14 ವರ್ಷದ ಬಾಲಕಿಯರಿಗೆ ಉಚಿತ ‘ಎಚ್ಪಿವಿ’ ಲಸಿಕೆ
ಮಹಿಳೆಯರನ್ನು ಕಾಡುವ ಗರ್ಭಕಂಠದ ಕ್ಯಾನ್ಸರ್ (Cervical Cancer) ತಡೆಗಟ್ಟುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 14 ವರ್ಷದ ಬಾಲಕಿಯರಿಗೆ ಉಚಿತ ‘ಎಚ್ಪಿವಿ’ (HPV) ಲಸಿಕಾ ಅಭಿಯಾನವನ್ನು ಆರಂಭಿಸಲಾಗಿದೆ. ಈ ಅಭಿಯಾನವು ಮೇ ಅಂತ್ಯದವರೆಗೆ ನಡೆಯಲಿದೆ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ತಿಳಿಸಿದ್ದಾರೆ.
ಮಂಗಳೂರು: ಮಹಿಳೆಯರನ್ನು ಕಾಡುವ ಗರ್ಭಕಂಠದ ಕ್ಯಾನ್ಸರ್ (Cervical Cancer) ತಡೆಗಟ್ಟುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 14 ವರ್ಷದ ಬಾಲಕಿಯರಿಗೆ ಉಚಿತ ‘ಎಚ್ಪಿವಿ’ (HPV) ಲಸಿಕಾ ಅಭಿಯಾನವನ್ನು ಆರಂಭಿಸಲಾಗಿದೆ. ಈ ಅಭಿಯಾನವು ಮೇ ಅಂತ್ಯದವರೆಗೆ ನಡೆಯಲಿದೆ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ತಿಳಿಸಿದ್ದಾರೆ.
ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಈ ಅಭಿಯಾನಕ್ಕಾಗಿ 2.54 ಲಕ್ಷ ಡೋಸ್ಗಳ ಎಚ್ಪಿವಿ ಲಸಿಕೆ ಉಚಿತವಾಗಿ ಪೂರೈಕೆಯಾಗಿದೆ ಎಂದರು.
ಲಸಿಕಾ ಅಭಿಯಾನದ ಪ್ರಮುಖ ಅಂಶಗಳು:
ಯಾರಿಗೆ ಲಸಿಕೆ?: 14 ವರ್ಷ ಪೂರ್ಣಗೊಂಡು, 15 ವರ್ಷ ತುಂಬದ ಬಾಲಕಿಯರಿಗೆ ಮಾತ್ರ.
ಎಲ್ಲಿ ಲಭ್ಯ?: ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳು ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ.
ಸಮಯ: ರಜಾ ದಿನಗಳನ್ನು ಹೊರತುಪಡಿಸಿ ಬೆಳಗ್ಗೆ 9:00 ರಿಂದ ಸಂಜೆ 4:30ರ ವರೆಗೆ.
ಯಾವ ಲಸಿಕೆ?: ಒಂದೇ ಡೋಸ್ನ ಗಾರ್ಡಸಿಲ್-4 ಎಚ್ಪಿವಿ (Gardasil-4 HPV) ಲಸಿಕೆಯನ್ನು ನೀಡಲಾಗುವುದು.
ಅಪಪ್ರಚಾರಕ್ಕೆ ಕಿವಿಗೊಡದಿರಲು ಮನವಿ:
ಸಾಮಾಜಿಕ ಜಾಲತಾಣಗಳಲ್ಲಿ ಈ ಲಸಿಕೆಯ ಬಗ್ಗೆ ಹರಿದಾಡುತ್ತಿರುವ ವದಂತಿಗಳನ್ನು ತಳ್ಳಿಹಾಕಿದ ಡಾ. ತಿಮ್ಮಯ್ಯ, “ಈ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮವಿಲ್ಲ (No side effects), ಇದು ಸಂಪೂರ್ಣ ಸುರಕ್ಷಿತ. ಖಾಸಗಿ ಆಸ್ಪತ್ರೆಗಳಲ್ಲಿ ಈ ಲಸಿಕೆ ಪಡೆಯಲು ಗರಿಷ್ಠ 8,000 ರೂ. ವರೆಗೆ ಶುಲ್ಕ ಪಾವತಿಸಬೇಕು. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಇದನ್ನು ಉಚಿತವಾಗಿ ನೀಡಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು” ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ 22,473 ಬಾಲಕಿಯರಿಗೆ ಲಸಿಕೆ ಗುರಿ:
ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ರಾಜೇಶ್ ಮಾಹಿತಿ ನೀಡಿ, “ದ.ಕ. ಜಿಲ್ಲೆಯಲ್ಲಿ ಒಟ್ಟು 22,473 ಬಾಲಕಿಯರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಮಾರ್ಚ್ 6ರಂದೇ ಲಸಿಕಾ ಅಭಿಯಾನ ಶುರುವಾಗಿದ್ದರೂ, ಶಾಲಾ ಪರೀಕ್ಷೆಗಳ ಕಾರಣದಿಂದ ವೇಗ ಪಡೆದುಕೊಂಡಿರಲಿಲ್ಲ. ಮುಂಬರುವ ದಿನಗಳಲ್ಲಿ ಅಭಿಯಾನ ಚುರುಕುಗೊಳ್ಳಲಿದೆ” ಎಂದರು.
ಮಾರ್ಚ್ 24ರವರೆಗೆ ಜಿಲ್ಲೆಯಲ್ಲಿ ಒಟ್ಟು 571 ಬಾಲಕಿಯರಿಗೆ ಲಸಿಕೆ ನೀಡಲಾಗಿದೆ. ತಾಲೂಕುವಾರು ವಿವರ ನೋಡುವುದಾದರೆ ಬಂಟ್ವಾಳ-121, ಬೆಳ್ತಂಗಡಿ-60, ಮಂಗಳೂರು-142, ಪುತ್ತೂರು-146 ಹಾಗೂ ಸುಳ್ಯ ತಾಲೂಕಿನಲ್ಲಿ 102 ಮಂದಿ ಬಾಲಕಿಯರಿಗೆ ಲಸಿಕೆ ನೀಡಲಾಗಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಅಸಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ. ಸುದರ್ಶನ್, ಡಾ. ನವೀನ್ ಚಂದ್ರ ಕುಲಾಲ್, ಡಾ. ಖತೀಜಾ ದಿಲಾದ್ ಹಾಗೂ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಉಳೆಪಾಡಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಅಪರಾಧ
Mangalore:-ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ; ಚರ್ಚ್ನ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ
ಅಪ್ರಾಪ್ತ ಬಾಲಕನಿಗೆ ದೀರ್ಘಕಾಲ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚರ್ಚ್ನ ಫಾದರ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆರೋಪಿಯನ್ನು ಫಾದರ್ ಸಿಪ್ರಿಯನ್ ಪಿಂಟೋ ಎಂದು ಗುರುತಿಸಲಾಗಿದೆ.
ಮಂಗಳೂರು: ಅಪ್ರಾಪ್ತ ಬಾಲಕನಿಗೆ ದೀರ್ಘಕಾಲ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚರ್ಚ್ನ ಫಾದರ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಆರೋಪಿಯನ್ನು ಫಾದರ್ ಸಿಪ್ರಿಯನ್ ಪಿಂಟೋ ಎಂದು ಗುರುತಿಸಲಾಗಿದೆ.
ಎಫ್ಐಆರ್ನಲ್ಲಿರುವ ಮಾಹಿತಿಯ ಪ್ರಕಾರ, ಪ್ರಾರ್ಥನೆಗಾಗಿ ನಿಯಮಿತವಾಗಿ ಚರ್ಚ್ಗೆ ಬರುತ್ತಿದ್ದ ಅಪ್ರಾಪ್ತ ಬಾಲಕನಿಗೆ ಆಮಿಷವೊಡ್ಡಿ, ಖಾಸಗಿ ಪ್ರಾರ್ಥನಾ ಕೊಠಡಿ ಹಾಗೂ ತಮ್ಮ ವಸತಿ ಕೊಠಡಿಗೆ ಕರೆಸಿಕೊಂಡು ಲೈಂಗಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.
2026ರ ಆಗಸ್ಟ್ 14ರಂದು ಸಂಜೆ ಪ್ರಾರ್ಥನೆಯ ಸಮಯದಲ್ಲಿಯೂ ಬಾಲಕನಿಗೆ ಕಿರುಕುಳ ನೀಡಲಾಗಿದೆ ಎನ್ನಲಾಗಿದೆ. ಇದರಿಂದ ಭಯಭೀತನಾದ ಬಾಲಕ ಈ ವಿಚಾರವನ್ನು ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾನೆ. ಈ ವೇಳೆ ಇತರ ಕೆಲವು ಬಾಲಕರಿಗೂ ಇದೇ ರೀತಿಯ ಲೈಂಗಿಕ ದೌರ್ಜನ್ಯ ನಡೆದಿರುವ ಆರೋಪ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.
ಬಳಿಕ ಸಂತ್ರಸ್ತ ಬಾಲಕ ತನ್ನ ಕುಟುಂಬದ ಸದಸ್ಯರಿಗೆ ಘಟನೆಯ ಬಗ್ಗೆ ತಿಳಿಸಿದ್ದಾನೆ. ಪೋಷಕರು ಈ ವಿಚಾರವನ್ನು ಬಿಷಪ್ ಅವರ ಗಮನಕ್ಕೆ ತಂದಿದ್ದು, ಅವರ ಸಲಹೆಯಂತೆ ಪೊಲೀಸರನ್ನು ಸಂಪರ್ಕಿಸಿ ಅಧಿಕೃತ ದೂರು ನೀಡಿದ್ದಾರೆ. ಈ ಮಧ್ಯೆ ಸಮಾಲೋಚನೆ ಪ್ರಕ್ರಿಯೆಯಿಂದಾಗಿ ದೂರು ನೀಡುವುದು ವಿಳಂಬವಾಯಿತು ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಪೋಕ್ಸೋ ಕಾಯ್ದೆಯ ಮಾರ್ಗಸೂಚಿಗಳ ಪ್ರಕಾರ ಸಂತ್ರಸ್ತರು ಹಾಗೂ ದೂರುದಾರರ ಗುರುತನ್ನು ಗೌಪ್ಯವಾಗಿಡಲಾಗಿದೆ. ಪ್ರಕರಣದ ಕುರಿತು ಮಂಗಳೂರು ದಕ್ಷಿಣ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಮಂಗಳೂರು
MRPL explosion-Big Breaking: MRPL ಸ್ಫೋಟ : ತೀವ್ರ ಗಾಯಗೊಂಡಿದ್ದ ರಾಜೇಶ್ ನಿಧನ : ಮನೀಶ್ ಕರ್ಕಡ ಕುಟುಂಬಕ್ಕೆ ನೀಡಿದ ಪರಿಹಾರದಷ್ಟೇ ನೀಡುವಂತೆ ಒತ್ತಾಯ
ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಕಾರ್ಖಾನೆಯಲ್ಲಿ ಸೆಪ್ಟೆಂಬರ್ 30ರಂದು ಸಂಭವಿಸಿದ್ದ ಭೀಕರ ಸ್ಫೋಟ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗುತ್ತಿಗೆ ಕಾರ್ಮಿಕ ರಾಜೇಶ್ ಡಿಸಿಲ್ವ ಶನಿವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಕಾರ್ಖಾನೆಯಲ್ಲಿ ಸೆಪ್ಟೆಂಬರ್ 30ರಂದು ಸಂಭವಿಸಿದ್ದ ಭೀಕರ ಸ್ಫೋಟ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗುತ್ತಿಗೆ ಕಾರ್ಮಿಕ ರಾಜೇಶ್ ಡಿಸಿಲ್ವ ಶನಿವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತ ರಾಜೇಶ್ ಡಿಸಿಲ್ವ ಅವರು ಸುರತ್ಕಲ್ ಇಡ್ಯಾ ಗ್ರಾಮದ ಕಾನ ನಿವಾಸಿಯಾಗಿದ್ದು, ಬ್ಯಾಪಿಸ್ಟ್ ಡಿಸಿಲ್ವ ಎಂಬುವವರ ಐವರು ಮಕ್ಕಳ ಪೈಕಿ ಒಬ್ಬರಾಗಿದ್ದಾರೆ. ಇವರು ಹಲವು ವರ್ಷಗಳಿಂದ ಎಂಆರ್ಪಿಎಲ್ನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದರು. ಅ ಅವಿವಾಹಿತರಾಗಿದ್ದರು ಎಂದು ತಿಳಿದುಬಂದಿದೆ. ಎಂಆರ್ಪಿಎಲ್ನ ಫೇಸ್-3ರ ಸಿಎಚ್ಟಿಯು (Coker Hydro Treating Unit) ಪ್ಲಾಂಟ್ನಲ್ಲಿ ಕಳೆದ ಸೆಪ್ಟೆಂಬರ್ 30ರಂದು ಭಾರೀ ಸ್ಫೋಟ ಸಂಭವಿಸಿತ್ತು. ಅಂದು ಸಂಭವಿಸಿದ ದುರಂತದಲ್ಲಿ ಹಳೆಯಂಗಡಿ ನಿವಾಸಿ ಮನೀಶ್ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದರು.
ಅದೇ ಘಟನೆಯಲ್ಲಿ ತೀವ್ರ ಸುಟ್ಟಗಾಯಗಳಿಗೆ ಒಳಗಾಗಿದ್ದ ರಾಜೇಶ್ ಡಿಸಿಲ್ವ ಅವರನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಐಸಿಯು (ICU) ಘಟಕದಲ್ಲಿ ತೀವ್ರ ನಿಗಾದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಕಳೆದ ಕೆಲವು ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಮೃತರ ದೇಹವನ್ನು ಇಂದು ಸಂಜೆಯ ವೇಳೆ ನಗರದ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ (Post-mortem) ನಡೆಸಲಾಗುವುದು. ಬಳಿಕ ಕಾನೂನು ಪ್ರಕ್ರಿಯೆಗಳನ್ನು ಪೂರೈಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶಿಕ್ಷಣ
Sahyadri-ವಿಟಿಯು ಮಂಗಳೂರು ವಿಭಾಗದ ಹ್ಯಾಂಡ್ಬಾಲ್ ಪಂದ್ಯಾವಳಿಯಲ್ಲಿ ಸಹ್ಯಾದ್ರಿ ಪುರುಷರ ತಂಡಕ್ಕೆ ರನ್ನರ್-ಅಪ್ ಪ್ರಶಸ್ತಿ
ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್ನ ಪುರುಷರ ಹ್ಯಾಂಡ್ಬಾಲ್ ತಂಡವು ಅಕ್ಟೋಬರ್ 15, 2026 ರಂದು ಮಂಗಳೂರಿನ ಬಿಐಟಿ (BIT) ಕಾಲೇಜಿನಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ಮಂಗಳೂರು ವಿಭಾಗದ ಪುರುಷರ ಹ್ಯಾಂಡ್ಬಾಲ್ ಪಂದ್ಯಾವಳಿಯಲ್ಲಿ ರನ್ನರ್-ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಮಂಗಳೂರು, ಅ.16: ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್ನ ಪುರುಷರ ಹ್ಯಾಂಡ್ಬಾಲ್ ತಂಡವು ಅಕ್ಟೋಬರ್ 15, 2026 ರಂದು ಮಂಗಳೂರಿನ ಬಿಐಟಿ (BIT) ಕಾಲೇಜಿನಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ಮಂಗಳೂರು ವಿಭಾಗದ ಪುರುಷರ ಹ್ಯಾಂಡ್ಬಾಲ್ ಪಂದ್ಯಾವಳಿಯಲ್ಲಿ ರನ್ನರ್-ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಪಂದ್ಯಾವಳಿಯುದ್ದಕ್ಕೂ ತಂಡದ ಆಟಗಾರರು ಉತ್ತಮ ಸಂಘಟಿತ ಆಟ, ದೃಢಸಂಕಲ್ಪ ಮತ್ತು ಕ್ರೀಡಾಸ್ಫೂರ್ತಿಯನ್ನು ಪ್ರದರ್ಶಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ತಂಡದ ಆಟಗಾರರ ವಿವರ:
- ಅಭಯ್ – 7ನೇ ಸೆಮಿಸ್ಟರ್, CSE
- ಹೃತಿಕ್ ಕೆ. ಸಿ. – 5ನೇ ಸೆಮಿಸ್ಟರ್, CSE
- ಕೆ. ಪಂಪಾಪತಿ – 5ನೇ ಸೆಮಿಸ್ಟರ್, CSE
- ವಿಕಾಸ್ – 3ನೇ ಸೆಮಿಸ್ಟರ್, ISE
- ಜಸ್ವಿತ್ ಎನ್. ಪೂಜಾರಿ – 3ನೇ ಸೆಮಿಸ್ಟರ್, AIML
- ಶಮಿತ್ ಜೆ. – 5ನೇ ಸೆಮಿಸ್ಟರ್, E&C (ತಂಡದ ನಾಯಕ)
- ಪ್ರಥೀಕ್ ಎನ್. ಕೊಟ್ಟಾರಿ – 3ನೇ ಸೆಮಿಸ್ಟರ್, E&C
- ರಿತೇಶ್ ಶೆಟ್ಟಿ – 3ನೇ ಸೆಮಿಸ್ಟರ್, E&C
- ಜ್ಯೇಷ್ಣ್ ಯು. ಕುಂದರ್ – 1ನೇ ಸೆಮಿಸ್ಟರ್, AIML
- ಮಿಲನ್ ಎನ್. ಬಿ. – 1ನೇ ಸೆಮಿಸ್ಟರ್, CSE
- ಪೃಥ್ವಿಕ್ – 1ನೇ ಸೆಮಿಸ್ಟರ್, ECE
- ಆಟಗಾರರ ಪರಿಶ್ರಮ, ಸಮರ್ಪಣೆ ಮತ್ತು ತಂಡದ ಸಂಘಟಿತ ಪ್ರಯತ್ನವೇ ಈ ಸಾಧನೆಗೆ ಕಾರಣವಾಗಿದೆ. ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಸಂಸ್ಥೆಯು ನೀಡುತ್ತಿರುವ ನಿರಂತರ ಪ್ರೋತ್ಸಾಹವು ಇಂತಹ ಸಾಧನೆಗಳಿಗೆ ಪ್ರೇರಣೆಯಾಗಿದೆ.
- ಈ ಸಾಧನೆಗಾಗಿ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ವರ್ಗ ಹಾಗೂ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದವರು ತಂಡದ ಎಲ್ಲಾ ಆಟಗಾರರನ್ನು ಅಭಿನಂದಿಸಿ, ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಯಶಸ್ಸು ಸಾಧಿಸುವಂತೆ ಶುಭ ಹಾರೈಸಿದ್ದಾರೆ.


















