Connect with us

ಬಿಗ್ ನ್ಯೂಸ್

Kids Floor-ಪುತ್ತೂರಿನ ‘ರಾಧಾ’ಸ್’ ಜವುಳಿ ಮಳಿಗೆಯ ಯಶೋಗಾಥೆಗೆ ಮತ್ತೊಂದು ಗರಿ: ಫೆ.12ಕ್ಕೆ ಮಕ್ಕಳ ಉಡುಪುಗಳ ವಿಶೇಷ ‘ಕಿಡ್ಸ್ ಫ್ಲೋರ್’ ಲೋಕಾರ್ಪಣೆ

Published

on



Ad Widget

Ad Widget

Ad Widget

Ad Widget

ಜವುಳಿ ಉದ್ಯಮದಲ್ಲಿ ಕಳೆದ ಮೂರು ದಶಕಗಳಿಂದ ತನ್ನ ಗುಣಮಟ್ಟದ ಸೇವೆ ಮತ್ತು ಅಪ್ರತಿಮ ಸಂಗ್ರಹದ ಮೂಲಕ ಗ್ರಾಹಕರ ಮನಗೆದ್ದಿರುವ ಪುತ್ತೂರಿನ ಕೋರ್ಟ್ ರಸ್ತೆಯ ಸುಪ್ರಸಿದ್ಧ ‘ರಾಧಾ’ಸ್’ ಮಳಿಗೆಯು ಈಗ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದೆ. ಪುಟಾಣಿ ಮಕ್ಕಳ ಫ್ಯಾಷನ್ ಲೋಕಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ವಿಸ್ತರಿತ ವಿಭಾಗ ‘ಕಿಡ್ಸ್ ಫ್ಲೋರ್’ ಫೆಬ್ರವರಿ 12ರಂದು ಅದ್ಧೂರಿಯಾಗಿ ಚಾಲನೆಗೊಳ್ಳಲಿದೆ.

Ad Widget

Ad Widget

Ad Widget

Ad Widget

ಪುತ್ತೂರು: ಜವುಳಿ ಉದ್ಯಮದಲ್ಲಿ ಕಳೆದ ಮೂರು ದಶಕಗಳಿಂದ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಪುತ್ತೂರಿನ ಕೋರ್ಟ್ ರಸ್ತೆಯ ಸುಪ್ರಸಿದ್ಧ ‘ರಾಧಾಸ್’ ಮಳಿಗೆಯು ಇದೀಗ ಮಕ್ಕಳ ಉಡುಪುಗಳಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ‘ಕಿಡ್ಸ್ ಫ್ಲೋರ್’ ಎಂಬ ವಿಸ್ತರಿತ ವಿಭಾಗವನ್ನು ಫೆಬ್ರವರಿ 12ರಂದು ಉದ್ಘಾಟಿಸಲಿದೆ.

Ad Widget

Ad Widget

Ad Widget alt="Ad Widget"/>

Ad Widget

ಗಣ್ಯರಿಂದ ಉದ್ಘಾಟನೆ:
ಮಳಿಗೆಯ ನಾಲ್ಕನೇ ಮಹಡಿಯಲ್ಲಿ ಆರಂಭವಾಗಲಿರುವ ಈ ನೂತನ ವಿಭಾಗವನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ ಸೇರಿದಂತೆ ಹಲವು ಗಣ್ಯರು ಜಂಟಿಯಾಗಿ ಉದ್ಘಾಟಿಸಲಿದ್ದಾರೆ.

Ad Widget

Ad Widget <> Ad Widget

ಮಕ್ಕಳ ಉಡುಪುಗಳ ಅಪೂರ್ವ ಸಂಗ್ರಹ:
ನೂತನವಾಗಿ ಆರಂಭಗೊಳ್ಳಲಿರುವ ಈ ಕಿಡ್ಸ್ ಫ್ಲೋರ್‌ನಲ್ಲಿ ಮಕ್ಕಳಿಗಾಗಿ ಅತ್ಯಾಧುನಿಕ ವಿನ್ಯಾಸದ ಉಡುಪುಗಳು ಲಭ್ಯವಿವೆ. ಪ್ರಮುಖವಾಗಿ:



Ad Widget
  • ಹೆಣ್ಣು ಮಕ್ಕಳಿಗಾಗಿ: ಶರಾರಾ (Sharara), ವೆಸ್ಟರ್ನ್ ಗೌನ್, ಹಾಫ್ ಸ್ಯಾರಿ, ಅಂಬ್ರೆಲ್ಲಾ ಟಾಪ್ಸ್, ಫ್ರಾಕ್ಸ್ ಮತ್ತು ಜೀನ್ಸ್ ಟಾಪ್‌ಗಳು.
  • ಗಂಡು ಮಕ್ಕಳಿಗಾಗಿ: ಜೀನ್ಸ್ ಪ್ಯಾಂಟ್, ಶರ್ಟ್, ಟಿ-ಶರ್ಟ್, ಎತ್ನಿಕ್ ವೇರ್ ಮತ್ತು ಶೇರ್ವಾನಿ (Shervani).
  • ನವಜಾತ ಶಿಶುಗಳಿಗಾಗಿ: ಹುಟ್ಟಿದ ಮಕ್ಕಳ ಎಲ್ಲಾ ವೈವಿಧ್ಯಮಯ ಅಗತ್ಯ ವಸ್ತುಗಳು (Born baby all variety).
  • ಇತರ ಆಕರ್ಷಣೆಗಳು: ಡೈಲಿ ವೇರ್ ಉಡುಪುಗಳು, ಆಟದ ಸಾಮಾನುಗಳು (Toys), ಮಕ್ಕಳ ಬ್ಯಾಗ್‌ಗಳು ಮತ್ತು ಆಕರ್ಷಕ ಶೂಗಳು ಇಲ್ಲಿ ಲಭ್ಯವಿವೆ.

ಮೂರು ದಶಕಗಳ ಯಶಸ್ವಿ ಹಾದಿ:
1995ರಲ್ಲಿ ಕೋರ್ಟ್ ರಸ್ತೆಯಲ್ಲಿ ಸಣ್ಣ ಮಟ್ಟದಲ್ಲಿ ಆರಂಭವಾದ ‘ರಾಧಾಸ್’, ಇಂದು ಜಿಲ್ಲೆಯಾದ್ಯಂತ ಮನೆಮಾತಾಗಿದೆ. 2005 ಮತ್ತು 2012ರಲ್ಲಿ ಹಂತಹಂತವಾಗಿ ವಿಸ್ತರಣೆಗೊಂಡ ಈ ಮಳಿಗೆಯು, ಗ್ರಾಹಕರಿಗೆ ಒಂದೇ ಸೂರಿನಡಿ ಮಕ್ಕಳ, ಮಹಿಳೆಯರ ಹಾಗೂ ಪುರುಷರ ಉಡುಪುಗಳ ಪ್ರತ್ಯೇಕ ವಿಭಾಗಗಳನ್ನು ಒದಗಿಸುತ್ತಿದೆ. ಕಳೆದ ಅಕ್ಟೋಬರ್‌ನಲ್ಲಿ ಮದುವೆ ಸೀರೆಗಳಿಗಾಗಿಯೇ ಎರಡನೇ ಮಹಡಿಯಲ್ಲಿ ವಿಶೇಷ ವಿಭಾಗವನ್ನು ಪ್ರಾರಂಭಿಸಲಾಗಿತ್ತು.

Ad Widget

Ad Widget

ಮದುವೆ ಸೀರೆಗಳ ಸಂಗ್ರಹ:
ಮದುವೆಯ ಶೃಂಗಾರಕ್ಕೆ ಬೇಕಾದ ಮನಮೋಹಕ ರೇಷ್ಮೆ ಸೀರೆಗಳ ಅಪೂರ್ವ ಸಂಗ್ರಹ ಇಲ್ಲಿನ ವೈಶಿಷ್ಟ್ಯ. ಕರ್ನಾಟಕ ಮಾತ್ರವಲ್ಲದೆ ವಿವಿಧ ರಾಜ್ಯಗಳ ಸೀರೆಗಳು ಕನಿಷ್ಠ ₹195 ರಿಂದ ಗರಿಷ್ಠ ₹40,000 ವರೆಗಿನ ಬೆಲೆಯಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಪುತ್ತೂರು ಮತ್ತು ನೆರೆಹೊರೆಯ ತಾಲೂಕುಗಳ ಗ್ರಾಹಕರಿಗೆ ಮಕ್ಕಳ ಉಡುಪುಗಳ ಖರೀದಿಯಲ್ಲಿ ಹೊಸ ಅನುಭವ ನೀಡಲು ‘ರಾಧಾಸ್ ಕಿಡ್ಸ್ ಫ್ಲೋರ್’ ಈಗ ಸಜ್ಜಾಗಿದೆ.

Ad Widget
Click to comment

Leave a Reply

ಬಿಗ್ ನ್ಯೂಸ್

Puttur-ಪುತ್ತೂರಿನಲ್ಲಿ ಜಯದೇವ, ಕಿದ್ವಾಯಿ, ನಿಮ್ಹಾನ್ಸ್ ಘಟಕ ಸ್ಥಾಪನೆಗೆ ಹಕ್ಕೊತ್ತಾಯ; 1 ಲಕ್ಷ ಸಹಿ ಸಂಗ್ರಹದ ಗುರಿ; ಸೇಡಿಯಾಪು, ಆರ್ಯಾಪುವಿನಲ್ಲಿ ಜಮೀನು ಗುರುತು

Published

on



Ad Widget

Ad Widget

Ad Widget

Ad Widget

ಹೃದಯ, ಕ್ಯಾನ್ಸರ್ ಹಾಗೂ ನರಸಂಬಂಧಿ ಕಾಯಿಲೆಗಳಿಗೆ ಒಂದೇ ಆವರಣದಲ್ಲಿ ಉನ್ನತ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಪುತ್ತೂರಿನಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ, ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆ ಹಾಗೂ ನಿಮ್ಹಾನ್ಸ್‌ನ ಘಟಕಗಳನ್ನು ಸ್ಥಾಪಿಸಲು ಜನಾಂದೋಲನ ಆರಂಭವಾಗಿದೆ. ಪುತ್ತೂರು ಸರ್ಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿಯು ಒಂದು ಲಕ್ಷ ಸಹಿ ಸಂಗ್ರಹಿಸುವ ಗುರಿ ಹೊಂದಿದ್ದು, ಈಗಾಗಲೇ 20 ಸಾವಿರ ಸಹಿಗಳನ್ನು ಸಂಗ್ರಹಿಸಿದೆ.

Ad Widget

Ad Widget

Ad Widget

Ad Widget

ಪುತ್ತೂರು: ಹೃದಯ, ಕ್ಯಾನ್ಸರ್ ಹಾಗೂ ನರಸಂಬಂಧಿ ಕಾಯಿಲೆಗಳಿಗೆ ಒಂದೇ ಆವರಣದಲ್ಲಿ ಉನ್ನತ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಪುತ್ತೂರಿನಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ, ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆ ಹಾಗೂ ನಿಮ್ಹಾನ್ಸ್‌ನ ಘಟಕಗಳನ್ನು ಸ್ಥಾಪಿಸಲು ಜನಾಂದೋಲನ ಆರಂಭವಾಗಿದೆ. ಪುತ್ತೂರು ಸರ್ಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿಯು ಒಂದು ಲಕ್ಷ ಸಹಿ ಸಂಗ್ರಹಿಸುವ ಗುರಿ ಹೊಂದಿದ್ದು, ಈಗಾಗಲೇ 20 ಸಾವಿರ ಸಹಿಗಳನ್ನು ಸಂಗ್ರಹಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ಪುತ್ತೂರು ಸರ್ಕಾರಿ ವೈದ್ಯಕೀಯ ಕಾಲೇಜಿನ ಜತೆಗೆ ಮೂರು ಪ್ರಮುಖ ಸರ್ಕಾರಿ ಆಸ್ಪತ್ರೆಗಳ ಘಟಕಗಳನ್ನೂ ಸ್ಥಾಪಿಸುವ ಮೂಲಕ ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಜನರಿಗೆ ಸಮಗ್ರ ಆರೋಗ್ಯ ಸೇವೆ ಒದಗಿಸಬೇಕು ಎಂಬುದು ಸಮಿತಿಯ ಆಶಯವಾಗಿದೆ.

Ad Widget

Ad Widget <> Ad Widget

ಈ ಕುರಿತು ಸೋಮವಾರ ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಅಭಿಯಾನದ ಉದ್ದೇಶ ಹಾಗೂ ಮುಂದಿನ ಕಾರ್ಯಯೋಜನೆ ಕುರಿತು ಚರ್ಚಿಸಲಾಯಿತು.



Ad Widget

120 ಎಕರೆ ಸರ್ಕಾರಿ ಜಮೀನಿನತ್ತ ಗಮನ

ಆಸ್ಪತ್ರೆಗಳ ಘಟಕಗಳ ಸ್ಥಾಪನೆಗೆ ಅಗತ್ಯವಿರುವ ಜಮೀನು ಗುರುತಿಸುವ ಪ್ರಕ್ರಿಯೆಗೆ ಸಮಿತಿ ಆದ್ಯತೆ ನೀಡಿದೆ. ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣವಾಗಲಿರುವ ಸೇಡಿಯಾಪು ಪ್ರದೇಶದ ಸಮೀಪ ಸುಮಾರು 120 ಎಕರೆ ಸರ್ಕಾರಿ ಜಮೀನು ಲಭ್ಯವಿದ್ದು, ಆರ್ಯಾಪು ಗ್ರಾಮದಲ್ಲಿಯೂ ಸುಮಾರು 88 ಎಕರೆ ಜಾಗ ಗುರುತಿಸಲಾಗಿದೆ. ಸೂಕ್ತ ಸ್ಥಳ ಆಯ್ಕೆ ಮಾಡಿ ಆಸ್ಪತ್ರೆಗಳ ಘಟಕಗಳಿಗೆ ಜಮೀನು ಮೀಸಲಿಡುವಂತೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ಸಮಿತಿಯ ಸಂಚಾಲಕ ಅಮಳ ರಾಮಚಂದ್ರ ತಿಳಿಸಿದ್ದಾರೆ.

Ad Widget

Ad Widget

ಸಮನ್ವಯದ ಚಿಕಿತ್ಸೆಗೆ ಅವಕಾಶ

ಅಮೆರಿಕದಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಸಾಮೆತ್ತಡ್ಕದ ಡಾ. ಸಂದೀಪ್ ನಾಯಕ್ ಮಾತನಾಡಿ, ‘ಒಂದೇ ಆವರಣದಲ್ಲಿ ಹಲವು ಸಂಸ್ಥೆಗಳು, ಸಮನ್ವಯದ ಚಿಕಿತ್ಸೆ’ ಎಂಬ ಪರಿಕಲ್ಪನೆಯೊಂದಿಗೆ ಅಭಿಯಾನ ರೂಪಿಸಲಾಗಿದೆ ಎಂದರು.

ಹೃದಯ, ಕ್ಯಾನ್ಸರ್ ಹಾಗೂ ನರಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ತಜ್ಞರು ಸಮನ್ವಯದಿಂದ ಕಾರ್ಯನಿರ್ವಹಿಸಲು ಇಂತಹ ವ್ಯವಸ್ಥೆ ನೆರವಾಗಲಿದೆ. ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ದೂರದ ನಗರಗಳಿಗೆ ಕರೆದೊಯ್ಯುವ ಅಗತ್ಯವೂ ಕಡಿಮೆಯಾಗಬಹುದು. ವೈದ್ಯಕೀಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಣತಿ ಗಳಿಸಲು ಅವಕಾಶ ಸಿಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ವೈದ್ಯಕೀಯ ಕಾಲೇಜಿನೊಂದಿಗೆ ಸಂಶೋಧನಾ ಕೇಂದ್ರ, ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ವೃದ್ಧಾಪ್ಯ ಆರೈಕೆ ಕೇಂದ್ರಗಳನ್ನೂ ಸ್ಥಾಪಿಸಬೇಕು. ಕೊರಗ ಸಮುದಾಯದ ವಿದ್ಯಾರ್ಥಿಗಳಿಗೆ ಒಂದು ಸೀಟು ಮೀಸಲಿಡಬೇಕು ಎಂದು ಅವರು ಒತ್ತಾಯಿಸಿದರು.

ಸರ್ಕಾರಿ ಸ್ವಾಮ್ಯಕ್ಕೆ ಒತ್ತು

ವೈದ್ಯಕೀಯ ಕಾಲೇಜು ಸಂಪೂರ್ಣ ಸರ್ಕಾರಿ ಸ್ವಾಮ್ಯದಲ್ಲೇ ಮುಂದುವರಿಯಬೇಕು. ಅಗತ್ಯ ಅನುದಾನ, ವೈದ್ಯಕೀಯ ಸೌಲಭ್ಯ ಹಾಗೂ ಸಿಬ್ಬಂದಿ ನೇಮಕಾತಿಯನ್ನು ಸರ್ಕಾರ ಖಚಿತಪಡಿಸಬೇಕು. ಹೋರಾಟ ರಾಜಕೀಯೇತರ ಮತ್ತು ಜಾತ್ಯತೀತ ನೆಲೆಯಲ್ಲಿ ಮುಂದುವರಿಯಬೇಕು ಎಂಬುದು ಸಮಿತಿಯ ನಿಲುವಾಗಿದೆ.

ಹಿರಿಯ ವೈದ್ಯಕೀಯ ಕಾಲೇಜು ಹೋರಾಟಗಾರ ದಿನೇಶ್ ಭಟ್ ಕೆ. ಮಾತನಾಡಿ, ಪುತ್ತೂರಿನಲ್ಲಿ ಉನ್ನತ ಆರೋಗ್ಯ ಸೇವೆಗಳ ಅಭಿವೃದ್ಧಿ ಅಗತ್ಯ ಎಂದರು. ಸುಳ್ಯ, ವಿಟ್ಲ, ಬಂಟ್ವಾಳ, ಬೆಳ್ತಂಗಡಿ ಹಾಗೂ ಕಡಬ ಭಾಗದ ಜನರಿಗೂ ಈ ಯೋಜನೆಯಿಂದ ಅನುಕೂಲವಾಗಲಿದೆ ಎಂಬುದು ಸಮಿತಿಯ ಆಶಯವಾಗಿದೆ.

ಸಭೆಯಲ್ಲಿ ಗೌರವಾಧ್ಯಕ್ಷ ಅಣ್ಣಾ ವಿನಯಚಂದ್ರ, ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ಪ್ರಧಾನ ಕಾರ್ಯದರ್ಶಿ ಝೇವಿಯರ್ ಡಿಸೋಜ, ಉಪಾಧ್ಯಕ್ಷ ವಿಶ್ವಪ್ರಸಾದ್ ಸೇಡಿಯಾಪು ಸೇರಿದಂತೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Ad Widget
Continue Reading

ಬಿಗ್ ನ್ಯೂಸ್

Vitla-ವಿಟ್ಲ: ಕಾರು–ಆಕ್ಟಿವಾ ಡಿಕ್ಕಿ; ಸವಾರನಿಗೆ ಗಂಭೀರ ಗಾಯ

Published

on



Ad Widget

Ad Widget

Ad Widget

Ad Widget

ಕೊಲ್ನಾಡು ಗ್ರಾಮದ ಕುಳಾಲು ಬೊಲ್ಪಾದೆಯ ಅಪಾಯಕಾರಿ ರಸ್ತೆ ತಿರುವಿನಲ್ಲಿ ಮಂಗಳವಾರ ಕಾರು ಮತ್ತು ಆಕ್ಟಿವಾ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಆಕ್ಟಿವಾ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.

Ad Widget

Ad Widget

Ad Widget

Ad Widget

ವಿಟ್ಲ: ಕೊಲ್ನಾಡು ಗ್ರಾಮದ ಕುಳಾಲು ಬೊಲ್ಪಾದೆಯ ಅಪಾಯಕಾರಿ ರಸ್ತೆ ತಿರುವಿನಲ್ಲಿ ಮಂಗಳವಾರ ಕಾರು ಮತ್ತು ಆಕ್ಟಿವಾ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಆಕ್ಟಿವಾ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಗಾಯಗೊಂಡವರನ್ನು ವಿಟ್ಲ ಪಡೂರು ಗ್ರಾಮದ ಕಡಂಬು ನಿವಾಸಿ, ಮೇಸ್ತಿ ಕೆಲಸ ಮಾಡುತ್ತಿದ್ದ ರಾಮಣ್ಣ ಮೂಲ್ಯ (45) ಎಂದು ಗುರುತಿಸಲಾಗಿದೆ.

Ad Widget

Ad Widget <> Ad Widget

ರಾಮಣ್ಣ ಮೂಲ್ಯ ಅವರು ಕುಡ್ತಮುಗೇರು ಕಡೆಯಿಂದ ಕುಳಾಲು ಕಡೆಗೆ ಆಕ್ಟಿವಾದಲ್ಲಿ ತೆರಳುತ್ತಿದ್ದ ವೇಳೆ, ಬೊಲ್ಪಾದೆಯ ಅಪಾಯಕಾರಿ ತಿರುವಿನ ಏರು ರಸ್ತೆಯಲ್ಲಿ ಎದುರಿನಿಂದ ಬಂದ ಮಾರುತಿ ಕಾರು ಆಕ್ಟಿವಾಕ್ಕೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.



Ad Widget

ಅಪಘಾತದ ತೀವ್ರತೆಗೆ ಆಕ್ಟಿವಾ ಸಂಪೂರ್ಣ ಜಖಂಗೊಂಡಿದ್ದು, ರಾಮಣ್ಣ ಮೂಲ್ಯ ಅವರ ಬಲಗೈ ಮೂಳೆ ಮುರಿದಿದೆ. ಡಿಕ್ಕಿಯ ಬಳಿಕ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಧರೆಗೆ ಅಪ್ಪಳಿಸಿ ಚರಂಡಿಗೆ ಬಿದ್ದಿದೆ.

Ad Widget

Ad Widget

ಘಟನೆ ನಡೆದ ತಕ್ಷಣ ಸ್ಥಳೀಯರು ಗಾಯಾಳುವನ್ನು ವಿಟ್ಲದ ಬೆನಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

Ad Widget
Continue Reading

ಮಂಗಳೂರು

Soujanya Case-BIG BREAKING NEWS: ಸೌಜನ್ಯ ಪ್ರಕರಣ: ಮಂಗಳೂರಿನಲ್ಲಿ ಎಸ್‌ಐಟಿ ಮಹತ್ವದ ಸಭೆ; ಸೌಜನ್ಯ ದೇಹ ಸಿಕ್ಕ ಸ್ಥಳಕ್ಕೆ ಭೇಟಿ ಸಾಧ್ಯತೆ

Published

on



Ad Widget

Ad Widget

Ad Widget

Ad Widget

ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ಚುರುಕುಗೊಂಡಿದ್ದು, ಮಂಗಳೂರಿನ ವಿಶೇಷ ತನಿಖಾ ತಂಡದ (ಎಸ್‌ಐಟಿ) ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು. ಎಸ್‌ಐಟಿ ಮುಖ್ಯಸ್ಥ ಶಶಿಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತನಿಖೆಯ ಮುಂದಿನ ಹಂತಗಳ ರೂಪುರೇಷೆ ಕುರಿತು ಚರ್ಚಿಸಲಾಯಿತು.

Ad Widget

Ad Widget

Ad Widget

Ad Widget

ಮಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ಚುರುಕುಗೊಂಡಿದ್ದು, ಮಂಗಳೂರಿನ ವಿಶೇಷ ತನಿಖಾ ತಂಡದ (ಎಸ್‌ಐಟಿ) ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು. ಎಸ್‌ಐಟಿ ಮುಖ್ಯಸ್ಥ ಶಶಿಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತನಿಖೆಯ ಮುಂದಿನ ಹಂತಗಳ ರೂಪುರೇಷೆ ಕುರಿತು ಚರ್ಚಿಸಲಾಯಿತು.

Ad Widget

Ad Widget

Ad Widget alt="Ad Widget"/>

Ad Widget

ಐಪಿಎಸ್ ಅಧಿಕಾರಿಗಳಾದ ನಿಶಾ ಜೇಮ್ಸ್, ಲೋಕೇಶ್ ಜಗಲ್ಸಾರ್ ಹಾಗೂ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಎಸ್‌ಐಟಿ ಕಚೇರಿಗೆ ಆಗಮಿಸಿದ್ದು, ಈಗಾಗಲೇ ಅಧಿಕಾರಿಗಳಿಗೆ ತನಿಖೆಯ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

Ad Widget

Ad Widget <> Ad Widget

ಮುಂದಿನ ಎರಡು ದಿನಗಳಲ್ಲಿ ಎಸ್‌ಐಟಿ ತಂಡ ಬೆಳ್ತಂಗಡಿಗೆ ಭೇಟಿ ನೀಡುವ ಸಾಧ್ಯತೆಯಿದ್ದು, ಸೌಜನ್ಯ ಅವರ ಮನೆ ಹಾಗೂ ಕೊಲೆ ನಡೆದ ಸ್ಥಳವನ್ನು ಪರಿಶೀಲಿಸಲಿದೆ. ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿದ್ದ ಅಧಿಕಾರಿಗಳು ಸೇರಿದಂತೆ ಹಲವು ಮಂದಿಯನ್ನು ವಿಚಾರಣೆಗೊಳಪಡಿಸಲು ತಂಡ ಮುಂದಾಗಿದೆ. ಅಲ್ಲದೆ, ಸೌಜನ್ಯ ಅವರ ಪೋಷಕರು ಆರೋಪಿಸಿರುವ ವ್ಯಕ್ತಿಗಳನ್ನೂ ವಿಚಾರಣೆ ನಡೆಸುವ ಸಾಧ್ಯತೆಯಿದೆ.



Ad Widget

ಪ್ರಕರಣದ ಮರುತನಿಖೆ ನಡೆಸಿ 90 ದಿನಗಳೊಳಗೆ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿರುವ ಹಿನ್ನೆಲೆಯಲ್ಲಿ ಎಸ್‌ಐಟಿ ತನಿಖೆಗೆ ಮಹತ್ವ ಬಂದಿದೆ. ಸುಮಾರು 14 ವರ್ಷಗಳ ಹಿಂದೆ ನಡೆದಿದ್ದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading