Connect with us

ನಿಧನ ವಾರ್ತೆ

Bengaluru-ಬೆಂಗಳೂರಿನಲ್ಲಿ ದುರ್ಘಟನೆ : ಪತಿಗೆ ರಸ್ತೆಯಲ್ಲೇ ಹೃದಯಾಘಾತ ಪತ್ನಿ ಅಂಗಲಾಚಿದರೂ ಸಹಾಯಕ್ಕೆ ಬರದ ಜನತೆ – ರಸ್ತೆಯಲ್ಲೇ ಪ್ರಾಣಬಿಟ್ಟ ಪತಿ

Published

on



Ad Widget

Ad Widget

Ad Widget

Ad Widget

ಹೃದಯಾಘಾತಕ್ಕೊಳಗಾದ ಪತಿಯನ್ನು ಉಳಿಸಿಕೊಳ್ಳಲು ಪತ್ನಿ ರಸ್ತೆ ಮಧ್ಯೆ ವಾಹನ ಸವಾರರ ಬಳಿ ಕೈಮುಗಿದು ಬೇಡಿಕೊಂಡರೂ, ಯಾರೊಬ್ಬರೂ ಸಹಾಯಕ್ಕೆ ಬಾರದೆ ವ್ಯಕ್ತಿಯೋರ್ವರು ಪ್ರಾಣ ಕಳೆದುಕೊಂಡ ಘಟನೆ ಮಂಗಳವಾರ ಮುಂಜಾನೆ ಬೆಂಗಳೂನಲ್ಲಿ ವರದಿಯಾಗಿದೆ. ಇಟ್ಟುಮಡು ನಿವಾಸಿ ವೆಂಕಟರಮಣನ್ (34) ಮೃತ ದುರ್ದೈವಿ.

Ad Widget

Ad Widget

Ad Widget

Ad Widget

ಬೆಂಗಳೂರು: ರಾಜಧಾನಿಯಲ್ಲಿ ಮಾನವೀಯತೆ ಮರೆಯಾಗಿದೆಯೇ ಎಂಬ ಪ್ರಶ್ನೆ ಮೂಡಿಸುವಂತಹ ಹೃದಯ ವಿದ್ರಾವಕ ಘಟನೆಯೊಂದು ಬನಶಂಕರಿಯ ಇಟ್ಟುಮಡು ಬಳಿ ನಡೆದಿದೆ.

Ad Widget

Ad Widget

Ad Widget alt="Ad Widget"/>

Ad Widget

ಹೃದಯಾಘಾತಕ್ಕೊಳಗಾದ ಪತಿಯನ್ನು ಉಳಿಸಿಕೊಳ್ಳಲು ಪತ್ನಿ ರಸ್ತೆ ಮಧ್ಯೆ ವಾಹನ ಸವಾರರ ಬಳಿ ಕೈಮುಗಿದು ಬೇಡಿಕೊಂಡರೂ, ಯಾರೊಬ್ಬರೂ ಸಹಾಯಕ್ಕೆ ಬಾರದೆ ವ್ಯಕ್ತಿಯೋರ್ವರು ಪ್ರಾಣ ಕಳೆದುಕೊಂಡ ಘಟನೆ ಮಂಗಳವಾರ ಮುಂಜಾನೆ ವರದಿಯಾಗಿದೆ.

Ad Widget

Ad Widget <> Ad Widget

ಇಟ್ಟುಮಡು ನಿವಾಸಿ ವೆಂಕಟರಮಣನ್ (34) ಮೃತ ದುರ್ದೈವಿ.



Ad Widget

ಘಟನೆಯ ವಿವರ:
ಮಂಗಳವಾರ ಮುಂಜಾನೆ ವೆಂಕಟರಮಣನ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಆತಂಕಗೊಂಡ ಅವರ ಪತ್ನಿ ರೂಪಾ ಅವರು, ತಕ್ಷಣ ಚಿಕಿತ್ಸೆಗಾಗಿ ದ್ವಿಚಕ್ರ ವಾಹನದಲ್ಲೇ ಪತಿಯನ್ನು ಕತ್ರಿಗುಪ್ಪೆ ಜನತಾ ಬಜಾ‌ರ್ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಅಲ್ಲಿ ವೈದ್ಯರು ಲಭ್ಯವಿರಲಿಲ್ಲ. ಅತ್ತ ಅಂಬುಲೆನ್ಸ್ ಕೂಡ ಸಿಗದ ಕಾರಣ, ಸಮಯ ವ್ಯರ್ಥ ಮಾಡದೆ ಪತ್ನಿಯೇ ಪತಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಮತ್ತೊಂದು ಆಸ್ಪತ್ರೆಗೆ ಹೊರಟಿದ್ದರು.

Ad Widget

Ad Widget

ರಸ್ತೆ ಮಧ್ಯೆ ಕುಸಿದು ಬಿದ್ದ ಪತಿ:
ಕದಿರೇನಹಳ್ಳಿ ಸಮೀಪ ತಲುಪುತ್ತಿದ್ದಂತೆ ವೆಂಕಟರಮಣನ್ ಅವರಿಗೆ ತೀವ್ರ ಸ್ವರೂಪದ ಹೃದಯಾಘಾತ ಸಂಭವಿಸಿದೆ. ಪರಿಣಾಮ ಅವರು ಚಲಿಸುತ್ತಿದ್ದ ಬೈಕ್‌ನಿಂದ ರಸ್ತೆ ಮಧ್ಯೆ ಕುಸಿದು ಬಿದ್ದಿದ್ದಾರೆ. ಪತಿ ನೋವಿನಿಂದ ಒದ್ದಾಡುತ್ತಿದ್ದರೆ, ಇತ್ತ ಪತ್ನಿ ರೂಪಾ ಅವರು ದಾರಿಹೋಕ ವಾಹನ ಸವಾರರನ್ನು ಅಡ್ಡಹಾಕಿ, ಕೈಮುಗಿದು ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಆದರೆ, ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತಿದ್ದರೂ, ಯಾರೊಬ್ಬರೂ ವಾಹನ ನಿಲ್ಲಿಸಿ ನೆರವಿಗೆ ಧಾವಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಸಕಾಲದಲ್ಲಿ ಚಿಕಿತ್ಸೆ ಸಿಗದೆ ವೆಂಕಟರಮಣನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸಾವಿನಲ್ಲೂ ಸಾರ್ಥಕತೆ:
ಸಾರ್ವಜನಿಕರ ವರ್ತನೆಗೆ ಕುಟುಂಬಸ್ಥರು ತೀವ್ರ ನೋವು ವ್ಯಕ್ತಪಡಿಸಿದ್ದಾರೆ. ಇಂತಹ ದುಃಖದ ನಡುವೆಯೂ ಕುಟುಂಬಸ್ಥರು ಮೃತ ವೆಂಕಟರಮಣನ್ ಅವರ ಎರಡೂ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

Ad Widget
Click to comment

Leave a Reply

ನಿಧನ ವಾರ್ತೆ

Subramanya-ಸರ್ಪಸಂಸ್ಕಾರ ಸೇವೆಗೆ ಬಂದ ಯಾತ್ರಾರ್ಥಿಯ ಮೃತದೇಹ ಕುಮಾರಧಾರ ನದಿಯಲ್ಲಿ ಪತ್ತೆ

Published

on



Ad Widget

Ad Widget

Ad Widget

Ad Widget

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸರ್ಪಸಂಸ್ಕಾರ ಸೇವೆಗಾಗಿ ಆಗಮಿಸಿದ್ದ ತುಮಕೂರು ಜಿಲ್ಲೆಯ ಯಾತ್ರಾರ್ಥಿಯೊಬ್ಬರ ಮೃತದೇಹ ಮಂಗಳವಾರ ಬೆಳಗ್ಗೆ ಕುಮಾರಧಾರ ನದಿಯಲ್ಲಿ ಪತ್ತೆಯಾಗಿದೆ. ಮೃತರನ್ನು ತುಮಕೂರು ಜಿಲ್ಲೆಯ ತುರುವೇಕೆರೆ ನಿವಾಸಿ ದೇವೇಗೌಡ ಎಂದು ಗುರುತಿಸಲಾಗಿದೆ.

Ad Widget

Ad Widget

Ad Widget

Ad Widget

ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸರ್ಪಸಂಸ್ಕಾರ ಸೇವೆಗಾಗಿ ಆಗಮಿಸಿದ್ದ ತುಮಕೂರು ಜಿಲ್ಲೆಯ ಯಾತ್ರಾರ್ಥಿಯೊಬ್ಬರ ಮೃತದೇಹ ಮಂಗಳವಾರ ಬೆಳಗ್ಗೆ ಕುಮಾರಧಾರ ನದಿಯಲ್ಲಿ ಪತ್ತೆಯಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಮೃತರನ್ನು ತುಮಕೂರು ಜಿಲ್ಲೆಯ ತುರುವೇಕೆರೆ ನಿವಾಸಿ ದೇವೇಗೌಡ ಎಂದು ಗುರುತಿಸಲಾಗಿದೆ.

Ad Widget

Ad Widget <> Ad Widget

ಅನಾರೋಗ್ಯದಿಂದ ವಸತಿಗೃಹದಲ್ಲೇ ವಿಶ್ರಾಂತಿ
ದೇವೇಗೌಡ ಅವರು ತುರುವೇಕೆರೆಯಿಂದ ಇತರ ಯಾತ್ರಾರ್ಥಿಗಳೊಂದಿಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸರ್ಪಸಂಸ್ಕಾರ ಪೂಜಾ ಕೈಂಕರ್ಯಗಳನ್ನು ನೆರವೇರಿಸಲು ಬಂದಿದ್ದರು ಎನ್ನಲಾಗಿದೆ. ದೂರದ ಪ್ರಯಾಣದ ಬಳಿಕ ಅನಾರೋಗ್ಯಕ್ಕೆ ಒಳಗಾದ ಅವರು, ಪೂಜಾ ಸ್ಥಳಕ್ಕೆ ತೆರಳದೆ ತಾವು ತಂಗಿದ್ದ ವಸತಿಗೃಹದಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.



Ad Widget

ನದಿಯಲ್ಲಿ ತೇಲುತ್ತಿದ್ದ ಮೃತದೇಹ ಪತ್ತೆ
ಮಂಗಳವಾರ ಮುಂಜಾನೆ ಸುಬ್ರಹ್ಮಣ್ಯದ ಕುಲ್ಕುಂದ ಕಾಲನಿ ರಸ್ತೆಯಿಂದ ಕುಮಾರಧಾರ ನದಿಗೆ ಸಂಪರ್ಕ ಕಲ್ಪಿಸುವ ಸ್ಥಳದ ಸಮೀಪ ನದಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ತೇಲುತ್ತಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ.

Ad Widget

Ad Widget

ಇದೇ ವೇಳೆ, ವಸತಿಗೃಹದಲ್ಲಿದ್ದ ದೇವೇಗೌಡ ಅವರು ಕಾಣೆಯಾಗಿರುವುದನ್ನು ಗಮನಿಸಿದ ಕುಟುಂಬಸ್ಥರು ಹಾಗೂ ಅವರೊಂದಿಗೆ ಬಂದಿದ್ದವರು ಹುಡುಕಾಟ ನಡೆಸಿದ್ದಾರೆ. ಬಳಿಕ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಲು ತೆರಳಿದಾಗ ನದಿಯಲ್ಲಿ ಮೃತದೇಹ ಪತ್ತೆಯಾಗಿರುವ ಮಾಹಿತಿ ಲಭಿಸಿದೆ. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಮೃತದೇಹ ದೇವೇಗೌಡ ಅವರದ್ದೇ ಎಂಬುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ.

ಸಾವಿನ ಸುತ್ತ ಹಲವು ಅನುಮಾನ
ಅನಾರೋಗ್ಯದಿಂದ ವಸತಿಗೃಹದಲ್ಲೇ ವಿಶ್ರಾಂತಿ ಪಡೆಯುತ್ತಿದ್ದ ದೇವೇಗೌಡ ಅವರು ನದಿಯ ಬಳಿಗೆ ತೆರಳಿದ್ದು ಹೇಗೆ? ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿದ್ದಾರೆಯೇ ಅಥವಾ ಬೇರೆ ಯಾವುದಾದರೂ ಕಾರಣದಿಂದ ಮೃತಪಟ್ಟಿದ್ದಾರೆಯೇ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.

ಘಟನಾ ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Ad Widget
Continue Reading

ನಿಧನ ವಾರ್ತೆ

Kalmadka-ಸುಳ್ಯ ಕಲ್ಮಡ್ಕದಲ್ಲಿ ದುರಂತ: ವಿದ್ಯುತ್ ಸ್ಪರ್ಶಿಸಿ ಮೀನು ಹಿಡಿಯಲು ಹೋದ ಬಾವ–ಬಾಮೈದ ಸಾವು

Published

on



Ad Widget

Ad Widget

Ad Widget

Ad Widget

ಮೀನು ಹಿಡಿಯಲು ತೆರಳಿದ್ದ ಇಬ್ಬರು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ದಾರುಣ ಘಟನೆ ಸುಳ್ಯ ತಾಲೂಕಿನ ಕಲ್ಮಡ್ಕದಲ್ಲಿ ಅ.12ರ ರಾತ್ರಿ ಸಂಭವಿಸಿದೆ. ಮೃತಪಟ್ಟವರು ಬಾವ–ಬಾಮೈದ ಸಂಬಂಧಿಗಳಾಗಿದ್ದು, ಅವರೊಂದಿಗೆ ತೆರಳಿದ್ದ ಮತ್ತೊಬ್ಬ ಯುವಕ ಗಾಯಗೊಂಡಿದ್ದಾರೆ.

Ad Widget

Ad Widget

Ad Widget

Ad Widget

ಕಲ್ಮಡ್ಕ: ಮೀನು ಹಿಡಿಯಲು ತೆರಳಿದ್ದ ಇಬ್ಬರು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ದಾರುಣ ಘಟನೆ ಸುಳ್ಯ ತಾಲೂಕಿನ ಕಲ್ಮಡ್ಕದಲ್ಲಿ ಅ.12ರ ರಾತ್ರಿ ಸಂಭವಿಸಿದೆ. ಮೃತಪಟ್ಟವರು ಬಾವ–ಬಾಮೈದ ಸಂಬಂಧಿಗಳಾಗಿದ್ದು, ಅವರೊಂದಿಗೆ ತೆರಳಿದ್ದ ಮತ್ತೊಬ್ಬ ಯುವಕ ಗಾಯಗೊಂಡಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಕಲ್ಮಡ್ಕದ ಬೊಮ್ಮೆಟ್ಟಿ ನಿವಾಸಿಗಳಾದ ಬಾಬು–ಸೀತಾ ದಂಪತಿಯ ಪುತ್ರ ಭರತ್ (28) ಹಾಗೂ ಭರತ್ ಅವರ ಸಹೋದರಿ ಭವ್ಯಾ ಅವರ ಪತಿ, ಬೆಳ್ತಂಗಡಿ ತಾಲೂಕಿನ ಮುಂಗೆಲು ನಿವಾಸಿಗಳಾದ ವೀರಪ್ಪ–ಸೀತಮ್ಮ ದಂಪತಿಯ ಪುತ್ರ ರಮೇಶ್ (34) ಮೃತಪಟ್ಟವರು. ಗಾಯಗೊಂಡ ಯುವಕನನ್ನು ಅವರ ಸಂಬಂಧಿ ಸಿಂಚನ್ ಎಂದು ಗುರುತಿಸಲಾಗಿದೆ.

Ad Widget

Ad Widget <> Ad Widget

ಅ.12ರಂದು ರಾತ್ರಿ ಸುಮಾರು 10.30ರ ವೇಳೆಗೆ ಭರತ್, ರಮೇಶ್ ಹಾಗೂ ಸಿಂಚನ್ ಅವರು ಮನೆಯಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿರುವ ತೋಡಿಗೆ ಮೀನು ಹಿಡಿಯಲು ತೆರಳಿದ್ದರು ಎನ್ನಲಾಗಿದೆ. ತೋಡಿನ ಮೇಲ್ಭಾಗದಲ್ಲಿ ತಂತಿ ಅಳವಡಿಸಿ ಅದಕ್ಕೆ ವಿದ್ಯುತ್ ಸಂಪರ್ಕ ನೀಡಲಾಗಿತ್ತು ಎಂದು ತಿಳಿದುಬಂದಿದೆ.



Ad Widget

ಈ ತಂತಿಯನ್ನು ದಾಟುವ ವೇಳೆ ಭರತ್ ಮತ್ತು ರಮೇಶ್ ಅವರಿಗೆ ವಿದ್ಯುತ್ ಸ್ಪರ್ಶಿಸಿದ್ದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅವರೊಂದಿಗೆ ಇದ್ದ ಸಿಂಚನ್ ಅವರಿಗೂ ವಿದ್ಯುತ್ ತಗುಲಿ ಎಸೆಯಲ್ಪಟ್ಟಿದ್ದು, ಕೈ, ಎದೆ ಹಾಗೂ ಕಾಲುಗಳಿಗೆ ಸುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

Ad Widget

Ad Widget

ಘಟನೆಯ ಬಳಿಕ ತಂತಿ ಅಳವಡಿಸಿದ್ದ ಮನೆಯವರಿಗೆ ವಿಷಯ ತಿಳಿದು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ ಎನ್ನಲಾಗಿದೆ. ಗಾಯಗೊಂಡ ಸಿಂಚನ್ ಅವರನ್ನು ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಷಯ ತಿಳಿದು ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

Ad Widget
Continue Reading

ನಿಧನ ವಾರ್ತೆ

Sullia-Big Breaking: ಸುಳ್ಯ: ವಿದ್ಯುತ್ ಶಾಕ್‌ಗೆ ಇಬ್ಬರು ಯುವಕರು ಬಲಿ; ಬಾಲಕನಿಗೆ ಗಾಯ

Published

on



Ad Widget

Ad Widget

Ad Widget

Ad Widget

ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಬೊಮ್ಮೆಟ್ಟಿಯಲ್ಲಿ ವಿದ್ಯುತ್ ಶಾಕ್ ತಗುಲಿ ಇಬ್ಬರು ಯುವಕರು ಮೃತಪಟ್ಟ ದಾರುಣ ಘಟನೆ ಅ.12ರ ತಡರಾತ್ರಿ ನಡೆದಿದೆ. ಘಟನೆಯಲ್ಲಿ ಮತ್ತೋರ್ವ ಬಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Ad Widget

Ad Widget

Ad Widget

Ad Widget

ಸುಳ್ಯ: ತಾಲೂಕಿನ ಕಲ್ಮಡ್ಕ ಗ್ರಾಮದ ಬೊಮ್ಮೆಟ್ಟಿಯಲ್ಲಿ ವಿದ್ಯುತ್ ಶಾಕ್ ತಗುಲಿ ಇಬ್ಬರು ಯುವಕರು ಮೃತಪಟ್ಟ ದಾರುಣ ಘಟನೆ ಅ.12ರ ತಡರಾತ್ರಿ ನಡೆದಿದೆ. ಘಟನೆಯಲ್ಲಿ ಮತ್ತೋರ್ವ ಬಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Ad Widget

Ad Widget

Ad Widget alt="Ad Widget"/>

Ad Widget

ಮೃತರನ್ನು ಬೊಮ್ಮೆಟ್ಟಿ ನಿವಾಸಿಗಳಾದ ಗಣೇಶ್ ಹಾಗೂ ಭರತ್ ಎಂದು ಗುರುತಿಸಲಾಗಿದೆ. ತಡರಾತ್ರಿ ಸಂಭವಿಸಿದ ಈ ದುರಂತದಿಂದ ಸ್ಥಳೀಯರಲ್ಲಿ ಆತಂಕ ಹಾಗೂ ಶೋಕದ ವಾತಾವರಣ ನಿರ್ಮಾಣವಾಗಿದೆ.

Ad Widget

Ad Widget <> Ad Widget

ವಿದ್ಯುತ್ ಶಾಕ್ ತಗುಲಲು ನಿಖರ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಘಟನೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.



Ad Widget
Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading