Connect with us

ಶಿಕ್ಷಣ

Ambika-ಅಂಬಿಕಾ ಪ.ಪೂ. ವಿದ್ಯಾಲಯದಲ್ಲಿ ‘ವಂದೇ ಮಾತರಂ 150’ ವಿಶೇಷ ಉಪನ್ಯಾಸ; ದೇಶದ ಕಷ್ಟ ನಿವಾರಿಸುವ ಮಂತ್ರ ವಂದೇ ಮಾತರಂ : ಆದರ್ಶ ಗೋಖಲೆ

Published

on



Ad Widget

Ad Widget

Ad Widget

Ad Widget

‘ವಂದೇ ಮಾತರಂ’ ಗೀತೆಯ 150ನೇ ವರ್ಷಾಚರಣೆ ಪ್ರಯುಕ್ತ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಸುಶೀಲಾ – ಶಿವಾನಂದ ರಾವ್ ವೇದಿಕೆಯಲ್ಲಿ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಉಪನ್ಯಾಸಕ ಆದರ್ಶ ಗೋಖಲೆ ವಿಶೇಷ ಉಪನ್ಯಾಸ ನೀಡಿದರು.

Ad Widget

Ad Widget

Ad Widget

Ad Widget

ಪುತ್ತೂರು: ಸ್ವಾತಂತ್ರ‍್ಯ ಪೂರ್ವದಲ್ಲಿ ಭವ್ಯ ಭಾರತದ ಸಂಸ್ಕೃತಿ, ಕಲೆ, ಹಿರಿಮೆ, ಪ್ರಾದೇಶಿಕ ಕಲಾ ವೈವಿಧ್ಯ, ಪ್ರಾಕೃತಿಕ ಸೌಂದರ್ಯವೇ ಮೊದಲಾದ ವಿಚಾರಗಳ ಬಗೆಗೆ ಸುಂದರ ಪದಗಳನ್ನು ಪೋಣಿಸಿ ಮಾಡಿದ ಗೀತೆಯೇ ವಂದೇ ಮಾತರಂ. ದೇಶದ ಸ್ವಾತಂತ್ರ್ಯ ಹೋರಾಟ, ಚಳುವಳಿ, ಆಂದೋಲನ ಹಾಗೂ ಧೀರ ಹೋರಾಟಗಾರರ ಬಾಯಿಯಲ್ಲಿ ಮೊಳಗಿದ ಗೀತೆ ವಂದೇ ಮಾತರಂ. ಹಲವಾರು ಸಂದರ್ಭಗಳಲ್ಲಿ ದೇಶದ ಏಕತೆಗೆ ಧಕ್ಕೆ ಬರುವ ಹಾಗೂ ಇತರ ಅನೇಕ ಸಂದರ್ಭಗಳಲ್ಲಿ ಕಷ್ಟ ನಿವಾರಿಸುವ ಮಂತ್ರವಾಗಿ ವಂದೇ ಮಾತರಂ ಹೊರಹೊಮ್ಮಿದೆ ಎಂದು ಅಂಬಿಕಾ ಪದವಿಪೂರ್ವ ವಿದ್ಯಾಲಯದ ಉಪನ್ಯಾಸಕ ಆದರ್ಶ ಗೋಖಲೆ ಹೇಳಿದರು.

Ad Widget

Ad Widget

Ad Widget alt="Ad Widget"/>

Ad Widget

ಅವರು ‘ವಂದೇ ಮಾತರಂ’ ಗೀತೆಯ 150ನೇ ವರ್ಷಾಚರಣೆ ಪ್ರಯುಕ್ತ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಸುಶೀಲಾ – ಶಿವಾನಂದ ರಾವ್ ವೇದಿಕೆಯಲ್ಲಿ ಮಂಗಳವಾರ ವಿಶೇಷ ಉಪನ್ಯಾಸ ನೀಡಿದರು.

Ad Widget

Ad Widget <> Ad Widget

ಬಂಕಿಮ ಚಂದ್ರ ಚಟರ್ಜಿಯವರು ಬರೆದ ಈ ಗೀತೆ ಬ್ರಿಟಿಷರ ವಿರುದ್ದ ನಡೆಸಿದ ವಂಗ – ಭಂಗ ಚಳವಳಿಯ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಬಳಕೆಯಾಯಿತು. ಬ್ರಿಟೀಷರ ಒಡೆದು ಆಳುವ ನೀತಿ ಅಲ್ಲಿ ಪರಿಣಾಮ ಬೀರಲಿಲ್ಲ. ಪತ್ರಗಳಲ್ಲಿ, ಘೋಷಣೆಗಳಲ್ಲಿ ಮಾತ್ರವಲ್ಲದೆ ವೀರ ಹೋರಾಟಗಾರರು ತಮ್ಮ ಕಷ್ಟದ ಸಂದರ್ಭಗಳಲ್ಲಿ ದೇಶಕ್ಕಾಗಿ ಹೋರಾಡುವಾಗ ವಂದೇ ಮಾತರಂ ಹೇಳುತ್ತಿದ್ದರು. ಈ ಗೀತೆಯ ಸಾಲುಗಳ ಶಕ್ತಿ ಅಂತಹುದು. ಆದರೆ ಸ್ವಾತಂತ್ರ‍್ಯದ ಬಳಿಕ ಈ ಗೀತೆಯನ್ನು ನಿರ್ಲಕ್ಷಿಸುವ ಕಾರ್ಯ ನಡೆಯಿತು. ಹಾಡಿನ ಸಾಲುಗಳಿಗೆ ಕತ್ತರಿ ಪ್ರಯೋಗ ನಡೆಸುವ ಕಾರ್ಯವೂ ನಡೆದಿರುವುದು ಬೇಸರದ ಸಂಗತಿ ಎಂದರು.



Ad Widget

ವಂದೇ ಮಾತರಂ ಹಾಡುವಾಗ ಅದರ ಸಾಲುಗಳನ್ನು ಸರಿಯಾಗಿ ಅರ್ಧ ಮಾಡಿಕೊಂಡಲ್ಲಿ ಮೈ ರೋಮಾಂಚನಗೊಳ್ಳುತ್ತದೆ. ಅಷ್ಟು ಗಂಭೀರ ಒಳ ಅರ್ಥಗಳನ್ನು ಅದು ಒಳಗೊಂಡಿದೆ. ಇದನ್ನು ಹಾಡುವ ಸಂದರ್ಭದಲ್ಲಿ ಇದು ನಮ್ಮ ದೇಶಕ್ಕಾಗಿ ಹೋರಾಡಿದ ಮಹಾನ್ ವೀರ ಪುರುಷರ ಬಾಯಲ್ಲಿ ಅನುರಣಿಸಿದ ಪದ ಎಂಬುದು ನಮ್ಮಲ್ಲಿ ಜಾಗೃತವಾಗಿರಬೇಕು. ಬ್ರಿಟೀಷರ ವಿರುದ್ಧ ಹೋರಾಡಲು ಸ್ಪೂರ್ತಿ ತುಂಬಿದ ಈ ಗೀತೆ ನಮ್ಮೊಳಗೆ ರಾಷ್ಟ್ರ ಜಾಗೃತಿಯನ್ನು ಮೂಡಿಸಲು ಸಹಕಾರಿಯಾಗಲಿದೆ ಎಂದರು.

Ad Widget

Ad Widget

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ, ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ಗಣೇಶ್ ಪ್ರಸಾದ್ ಡಿ. ಎಸ್. ಉಪಸ್ಥಿತರಿದ್ದರು. ಬಪ್ಪಳಿಗೆ ಪದವಿಪೂರ್ವ ವಿದ್ಯಾಲಯದ ಗಣಿತಶಾಸ್ತ್ರ ಉಪನ್ಯಾಸಕಿ ಜೀವಿತಾ ಕಾರ್ಯಕ್ರಮ ನಿರ್ವಹಿಸಿದರು.

Ad Widget
Click to comment

Leave a Reply

ಶಿಕ್ಷಣ

Vivekananda-ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ – ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

Published

on



Ad Widget

Ad Widget

Ad Widget

Ad Widget

ಶಾಲಾ ಶಿಕ್ಷಣ ಇಲಾಖೆ, ಪದವಿಪೂರ್ವ ವಿಭಾಗ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಸರಕಾರಿ ಪದವಿಪೂರ್ವ ಕಾಲೇಜು ಬೆಟ್ಟಂಪಾಡಿ ಇವರ ಸಹಯೋಗದಲ್ಲಿ ಕೊಂಬೆಟ್ಟು ಕ್ರೀಡಾಂಗಣ ದಲ್ಲಿ ನಡೆಯಿತು. ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

Ad Widget

Ad Widget

Ad Widget

Ad Widget

ಶಾಲಾ ಶಿಕ್ಷಣ ಇಲಾಖೆ, ಪದವಿಪೂರ್ವ ವಿಭಾಗ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಸರಕಾರಿ ಪದವಿಪೂರ್ವ ಕಾಲೇಜು ಬೆಟ್ಟಂಪಾಡಿ ಇವರ ಸಹಯೋಗದಲ್ಲಿ ಕೊಂಬೆಟ್ಟು ಕ್ರೀಡಾಂಗಣ ದಲ್ಲಿ ನಡೆಯಿತು. ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

Ad Widget

Ad Widget

Ad Widget alt="Ad Widget"/>

Ad Widget

ತಂಡದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಧನುಷ್ ಎಸ್, ಯಶಸ್ ಎಚ್ . ಸಿ ದ್ವಿತೀಯ ಪಿಯುಸಿ ಗಗನ್ ಕೆ.ಎನ್, ತೇಜಸ್ ಟಿ. ಆರ್, ಜಶ್ವಂತ್ ಗೌಡ, ಧನುಷ್ ಕೆ . ಎಚ್, ಆಕಾಶ್ ಭಾಗವಹಿಸಿರುತ್ತಾರೆ.

Ad Widget

Ad Widget <> Ad Widget

ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್ ,ಡಾ .ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ .ಇವರನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.



Ad Widget
Ad Widget
Continue Reading

ಶಿಕ್ಷಣ

Taekwondo Competition-ಟೇಕ್ವಾಂಡೋ ಸ್ಪರ್ಧೆ: ಸಂತ ಫಿಲೋಮಿನಾ ಪ ಪೂ ಕಾಲೇಜಿನ ಮೊಹಮ್ಮದ್ ಶಾಜ್ ಗೆ ಪ್ರಶಸ್ತಿ

Published

on



Ad Widget

Ad Widget

Ad Widget

Ad Widget

ಸೆ 30 ರಂದು ಚಿಕ್ಕಮಗಳೂರು ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣ ಜ್ಯೋತಿನಗರದಲ್ಲಿ ನಡೆದ ‘ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ 2026 – 27’ ಟೇಕ್ವಾಂಡೋ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಮೊಹಮ್ಮದ್ ಶಾಜ್ ಕಂಚಿನ ಪದಕವನ್ನು ಪಡೆದುಕೊಂಡಿರುತ್ತಾರೆ.

Ad Widget

Ad Widget

Ad Widget

Ad Widget

ಪುತ್ತೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಚಿಕ್ಕಮಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಿಕ್ಕಮಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಸೆ 30 ರಂದು ಚಿಕ್ಕಮಗಳೂರು ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣ ಜ್ಯೋತಿನಗರದಲ್ಲಿ ನಡೆದ ‘ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ 2026 – 27’ ಟೇಕ್ವಾಂಡೋ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಮೊಹಮ್ಮದ್ ಶಾಜ್ ಕಂಚಿನ ಪದಕವನ್ನು ಪಡೆದುಕೊಂಡಿರುತ್ತಾರೆ.

Ad Widget

Ad Widget

Ad Widget alt="Ad Widget"/>

Ad Widget

ಇವರು ಉಪ್ಪಿನಂಗಡಿ ನಿವಾಸಿ ಮೊಹಮ್ಮದ್ ಮುಸ್ತಫಾ ಮತ್ತು ಸೌಧ ದಂಪತಿಗಳ ಪುತ್ರ.

Ad Widget

Ad Widget <> Ad Widget

ಇವರಿಗೆ ಶಿಹಾಬ್ ಟಿ ತರಬೇತಿ ನೀಡಿರುತ್ತಾರೆ.



Ad Widget

ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.

Continue Reading

ಶಿಕ್ಷಣ

Vivekananda-ರಾಷ್ಟ್ರಮಟ್ಟದ ಭೌತಶಾಸ್ತ್ರ ಸ್ಪರ್ಧೆಯಲ್ಲಿ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಯ ಸಾಧನೆ..!

Published

on



Ad Widget

Ad Widget

Ad Widget

Ad Widget

ಪುತ್ತೂರು: ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಇದರ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿ ಶ್ರೀಹರಿ ಶರ್ಮಾ ನೋಯ್ಡಾದ ಆಮಿಟಿ ಯುನಿವರ್ಸಿಟಿಯಲ್ಲಿ ಇಂಡಿಯನ್ ಅಸೋಸಿಯೇಷನ್ ಆಫ್ ಫಿಸಿಕ್ಸ್ ಟೀರ‍್ಸ್ (ಐಎಪಿಟಿ) ಸಂಸ್ಥೆಯ ಸಹಯೋಗದೊಂದಿಗೆ ನಡೆದ ರಾಷ್ಟ್ರಮಟ್ಟದ ಭೌತಶಾಸ್ತ್ರ ಸ್ಪರ್ಧೆ National Competition for Innovative Experiments in Physics (NCIEP)ನಲ್ಲಿ “Electromagnetic Shock-Absorber for the Real-Time Landing of Reusable Spacecraft” ಎಂಬ ಭೌತಶಾಸ್ತ್ರದ ಮಾದರಿಯನ್ನು ಸ್ಪರ್ಧೆಯಲ್ಲಿ ಪ್ರಸ್ತುತಪಡಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.

Ad Widget

Ad Widget

Ad Widget

Ad Widget

ಅಕ್ಟೋಬರ್ 4ರಿಂದ 6ರವರೆಗೆ ನಡೆದ 40ನೇ IAPT Annual Conventionನಲ್ಲಿ ಇವರು ಪದವಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಭಾಗವಹಿಸಿದ್ದರು. ದೇಶದ ವಿವಿಧ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಐಐಟಿಗಳು ಹಾಗೂ ವಿಶ್ವವಿದ್ಯಾಲಯಗಳ ಒಟ್ಟು 118 ಮಾದರಿಗಳ ಪೈಕಿ 12ಮಾದರಿಗಳು ಸ್ಪರ್ಧೆಗೆ ಆಯ್ಕೆಯಾಗಿದ್ದವು.

Ad Widget

Ad Widget

Ad Widget alt="Ad Widget"/>

Ad Widget

ಕರ್ನಾಟಕದಿಂದ ಪ್ರಸ್ತುತಪಡಿಸಲು ಆಯ್ಕೆಯಾದ ಏಕೈಕ ಮಾದರಿ ಇವರದ್ದಾಗಿತ್ತು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೋ. ಶಿವಪ್ರಸಾದ್ ಕೆ.ಎಸ್. ಈ ಮಾದರಿ ತಯಾರಿಕೆಯಲ್ಲಿ ಮಾರ್ಗದರ್ಶನ ನೀಡಿರುದ್ದಾರೆ. ಈ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ ಮತ್ತು ಶಿಕ್ಷಕೇತರ ವೃಂದ ಮತ್ತು ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

Ad Widget

Ad Widget <> Ad Widget



Ad Widget
Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading