Connect with us

ಸಿನೆಮಾ

Harish Roi-ಖ್ಯಾತ ನಟ ಹರೀಶ್ ರಾಯ್ ಸಿನಿ ಪಯಣದ ಹಿಂದಿನ ಕೊಲೆ ಪ್ರಕರಣ; ಜೀವಾವಧಿ ಶಿಕ್ಷೆಯ ಬಳಿಕ ಮರಳಿ ಚಿತ್ರರಂಗಕ್ಕೆ

Published

on



Ad Widget

Ad Widget

Ad Widget

Ad Widget

ಕನ್ನಡ ಚಿತ್ರರಂಗದ ಖ್ಯಾತ ನಟ ಹರೀಶ್ ರಾಯ್ ಗುರುವಾರ (ನವೆಂಬರ್ 6) ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೊನೆಯುಸಿರೆಳೆದಿದ್ದು, ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ ಎದುರಾಗಿದೆ. ‘ಕೆಜಿಎಫ್’, ‘ಕೆಜಿಎಫ್ 2’, ‘ಓಂ’ ಸೇರಿದಂತೆ ಹಲವು ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದ ಹರೀಶ್ ರಾಯ್ ಅವರದ್ದು ವಿವಾದಗಳಿಂದ ತುಂಬಿದ ವೃತ್ತಿ ಮತ್ತು ವೈಯಕ್ತಿಕ ಬದುಕು.

Ad Widget

Ad Widget

Ad Widget

Ad Widget

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ಹರೀಶ್ ರಾಯ್ ಗುರುವಾರ (ನವೆಂಬರ್ 6) ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೊನೆಯುಸಿರೆಳೆದಿದ್ದು, ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ ಎದುರಾಗಿದೆ. ‘ಕೆಜಿಎಫ್’, ‘ಕೆಜಿಎಫ್ 2’, ‘ಓಂ’ ಸೇರಿದಂತೆ ಹಲವು ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದ ಹರೀಶ್ ರಾಯ್ ಅವರದ್ದು ವಿವಾದಗಳಿಂದ ತುಂಬಿದ ವೃತ್ತಿ ಮತ್ತು ವೈಯಕ್ತಿಕ ಬದುಕು.

Ad Widget

Ad Widget

Ad Widget alt="Ad Widget"/>

Ad Widget

ಚಿತ್ರರಂಗಕ್ಕೆ ಬರುವ ಮುನ್ನ ಕೊಲೆ ಪ್ರಕರಣದ ಆರೋಪಿ:
ಉಡುಪಿ ಮೂಲದ ಹರೀಶ್ ರಾಯ್ ಅವರು ಚಿತ್ರರಂಗಕ್ಕೆ ಕಾಲಿಡುವ ಮುನ್ನವೇ ಗಂಭೀರ ಆರೋಪವೊಂದರಲ್ಲಿ ಸಿಲುಕಿಕೊಂಡಿದ್ದರು. 1992ರ ನವೆಂಬರ್ 13ರಂದು ಉಡುಪಿಯಲ್ಲಿ ಶಾಲಾ ಶಿಕ್ಷಕರಾಗಿದ್ದ ಜಯರಾಮ್ ಎಂಬುವವರ ಮೇಲೆ ಹರೀಶ್ ಮತ್ತು ಅವರ ಕೆಲ ಸ್ನೇಹಿತರು ಹಲ್ಲೆ ನಡೆಸಿದ್ದರು. ತೀವ್ರ ಸ್ವರೂಪದ ಈ ಹಲ್ಲೆಯಿಂದ ಜಯರಾಮ್ ಅವರು ಕೆಲ ವಾರಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಈ ಘಟನೆ ಹರೀಶ್ ಮತ್ತು ಇತರರ ಮೇಲೆ ಕೊಲೆ ಆರೋಪಕ್ಕೆ ಕಾರಣವಾಯಿತು. ಪ್ರಕರಣದ ವಿಚಾರಣೆ ಸೆಷನ್ಸ್ ಕೋರ್ಟ್‌ನಲ್ಲಿ ನಡೆಯುತ್ತಿತ್ತು.

Ad Widget

Ad Widget <> Ad Widget

ಆರೋಪದ ನಡುವೆಯೇ ಚಿತ್ರರಂಗದಲ್ಲಿ ಮಿಂಚಿದ ಹರೀಶ್:
ಒಂದು ಕಡೆ ಕೊಲೆ ಆರೋಪದ ವಿಚಾರಣೆ ನಡೆಯುತ್ತಿದ್ದರೂ, ಹರೀಶ್ ರಾಯ್ ಅವರು ಅಷ್ಟರಲ್ಲಾಗಲೇ ಬೆಂಗಳೂರಿಗೆ ಬಂದು ಚಿತ್ರರಂಗದಲ್ಲಿ ಅವಕಾಶಗಳನ್ನು ಹುಡುಕಲಾರಂಭಿಸಿದ್ದರು. ನಿರ್ದೇಶಕ ಉಪೇಂದ್ರ ಅವರ ‘ಓಂ’ ಸಿನಿಮಾದಲ್ಲಿ ಸಿಕ್ಕ ಪಾತ್ರ ಮತ್ತು ಅದರಿಂದ ಬಂದ ಖ್ಯಾತಿ ಅವರನ್ನು ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಸಲು ಸಹಾಯ ಮಾಡಿತು. ವಿಚಾರಣೆ ಪ್ರಗತಿಯಲ್ಲಿದ್ದಾಗಲೂ ಹರೀಶ್ ರಾಯ್ ಯಶಸ್ವಿ ನಟನಾಗಿ ಗುರುತಿಸಿಕೊಂಡರು.



Ad Widget

ಜೀವಾವಧಿ ಶಿಕ್ಷೆ ಮತ್ತು ಬಿಡುಗಡೆ:
2003ರಲ್ಲಿ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರೀಶ್ ಮತ್ತು ಇತರ ಆರೋಪಿಗಳಿಗೆ ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತು. ಇದರಿಂದ ತಮ್ಮ ವೃತ್ತಿ ಬದುಕಿನ ಉತ್ತುಂಗದಲ್ಲಿದ್ದ ಹರೀಶ್ ಪರಪ್ಪನ ಅಗ್ರಹಾರ ಜೈಲು ಸೇರಿದರು. ಆದರೆ, ಅವರು ತಮ್ಮ ಮೇಲಿನ ಆರೋಪವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದರು. ಘಟನೆ ನಡೆದಾಗ ತಾನು ಸ್ಥಳದಲ್ಲಿ ಇರಲಿಲ್ಲ ಎಂದು ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ ಹರೀಶ್‌ಗೆ ಅಲ್ಲಿ ಪ್ರಕರಣದಿಂದ ಮುಕ್ತಿ ದೊರಕಿತು. ಘಟನೆ ವೇಳೆ ತಾನು ಅಲ್ಲಿ ಇರಲಿಲ್ಲವೆಂದು ಹರೀಶ್ ಕೋರ್ಟ್‌ನಲ್ಲಿ ಹೇಳಿದ್ದರು ಎಂದು ವರದಿ ತಿಳಿಸಿದೆ. ನ್ಯಾಯಾಲಯದ ಆದೇಶದ ನಂತರ ಅವರು ಮತ್ತೆ ಚಿತ್ರರಂಗಕ್ಕೆ ಮರಳಿದರು.

Ad Widget

Ad Widget

ತಮ್ಮ ಜೀವನದಲ್ಲಿ ಇಂತಹ ಸಂಕೀರ್ಣ ಸವಾಲುಗಳನ್ನು ಎದುರಿಸಿ, ಅದರಿಂದ ಹೊರಬಂದು ಸಿನಿಮಾರಂಗದಲ್ಲಿ ಮತ್ತೆ ಸಕ್ರಿಯರಾಗಿದ್ದ ಹರೀಶ್ ರಾಯ್ ಅವರ ನಿಧನ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.

Ad Widget
Click to comment

Leave a Reply

ಸಿನೆಮಾ

Bana-ಮುಂಬೈ ಪ್ರೀಮಿಯರ್ನಲ್ಲಿ” ಬನ” ತುಳು ಚಿತ್ರಕ್ಕೆ ಪ್ರಶಂಸೆಯ ಸುರಿಮಳೆ

Published

on



Ad Widget

Ad Widget

Ad Widget

Ad Widget

ಬಹು ನಿರೀಕ್ಷೆಯ ಬನ ಚಿತ್ರದ ಮೊದಲ ಎರಡು ಪ್ರೀಮಿಯರ್ ಮುಂಬೈನ ಮುಲುಂದ್ ಮತ್ತು ಕಲ್ಯಾಣ್ ನಲ್ಲಿ ನಡೆದಿದ್ದು ಅಲ್ಲಿನ ತುಳು ಪ್ರೇಕ್ಷಕರು ಚಿತ್ರದ ಬಗ್ಗೆ ಪ್ರಶಂಸೆಯ ಸುರಿಮಳೆ ಗೈದಿದ್ದಾರೆ. ಯುವ ಕಲಾವಿದರು ಅದ್ಭುತವಾಗಿ ನಟಿಸಿದ್ದು ಚಿತ್ರದ ಕಥೆ ಎಲ್ಲರ ಗಮನ ಸೆಳೆದಿದೆ. ಇದು ಮೊದಲ ನಾಗ ಆಧಾರಿತ ತುಳುಚಿತ್ರವಾಗಿದ್ದು ಅದ್ಭುತವಾಗಿ ಮೂಡಿಬಂದಿದೆ

Ad Widget

Ad Widget

Ad Widget

Ad Widget

ಬಹು ನಿರೀಕ್ಷೆಯ ಬನ ಚಿತ್ರದ ಮೊದಲ ಎರಡು ಪ್ರೀಮಿಯರ್ ಮುಂಬೈನ ಮುಲುಂದ್ ಮತ್ತು ಕಲ್ಯಾಣ್ ನಲ್ಲಿ ನಡೆದಿದ್ದು ಅಲ್ಲಿನ ತುಳು ಪ್ರೇಕ್ಷಕರು ಚಿತ್ರದ ಬಗ್ಗೆ ಪ್ರಶಂಸೆಯ ಸುರಿಮಳೆ ಗೈದಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಯುವ ಕಲಾವಿದರು ಅದ್ಭುತವಾಗಿ ನಟಿಸಿದ್ದು ಚಿತ್ರದ ಕಥೆ ಎಲ್ಲರ ಗಮನ ಸೆಳೆದಿದೆ. ಇದು ಮೊದಲ ನಾಗ ಆಧಾರಿತ ತುಳುಚಿತ್ರವಾಗಿದ್ದು ಅದ್ಭುತವಾಗಿ ಮೂಡಿಬಂದಿದೆ. ಅಲ್ಲಿನ ಪ್ರೇಕ್ಷಕರ ಪ್ರಕಾರ ಚಿತ್ರವನ್ನು ಕಥೆ ಆವರಿಸಿಕೊಂಡಿದ್ದು ಹಿರಿಯ ಕಿರಿಯ ಕಲಾವಿದರು ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.

Ad Widget

Ad Widget <> Ad Widget

ಬಾಬಪ್ರಸಾದ್ ಅರಸ ಹಾಗೂ ನಾಗಕಿರಣ್ ಶೆಟ್ಟಿ ಮುಂಬಯಿ ನೇತೃತ್ವದಲ್ಲಿ ಮುಂಬೈ ಶೋ ಯಶಸ್ವಿಯಾಗಿ ನೆರವೇರಿದೆ. ಶನಿವಾರ ಶೋ ನಡೆದು ಹೌಸ್ಫುಲ್ ಪ್ರದರ್ಶನ ಗೊಂಡ ದಾಕಲೆ ಬನ ಚಿತ್ರದ್ದು.ಚಿತ್ರ ಇದೆ ತಿಂಗಳು 23 ಕ್ಕೆ ಬಿಡುಗಡೆಯಾಗಲಿದೆ.



Ad Widget
Ad Widget
Continue Reading

ಸಿನೆಮಾ

Nana Patekar-ನಾನಾ ಪಾಟೇಕರ್ ಸಾವಿಗೆ ನಿಖರ ಕಾರಣವೇನು? ಗೋವಾ ಪೊಲೀಸರಿಂದ ಅಸಹಜ ಸಾವು ಪ್ರಕರಣ ದಾಖಲು

Published

on



Ad Widget

Ad Widget

Ad Widget

Ad Widget

ಹಿರಿಯ ಬಾಲಿವುಡ್ ನಟ ನಾನಾ ಪಾಟೇಕರ್ ಅವರ ನಿಧನದ ಹಿನ್ನೆಲೆಯಲ್ಲಿ ಗೋವಾ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 194ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ಉಪನಿರೀಕ್ಷಕ ನಿತಿನ್ ನಾಯಕ್ ತನಿಖೆ ನಡೆಸುತ್ತಿದ್ದಾರೆ.

Ad Widget

Ad Widget

Ad Widget

Ad Widget

ಪಣಜಿ: ಹಿರಿಯ ಬಾಲಿವುಡ್ ನಟ ನಾನಾ ಪಾಟೇಕರ್ ಅವರ ನಿಧನದ ಹಿನ್ನೆಲೆಯಲ್ಲಿ ಗೋವಾ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 194ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ಉಪನಿರೀಕ್ಷಕ ನಿತಿನ್ ನಾಯಕ್ ತನಿಖೆ ನಡೆಸುತ್ತಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಡೋನಾ ಪೌಲಾದ ಓಷನ್ ಪಾರ್ಕ್‌ನಲ್ಲಿರುವ ತಮ್ಮ ನಿವಾಸದಿಂದ ಬಾಂಬೋಲಿಮ್‌ನ ಮಣಿಪಾಲ್ ಆಸ್ಪತ್ರೆಗೆ ಕರೆತರುವಷ್ಟರಲ್ಲಿ 75 ವರ್ಷದ ನಾನಾ ಪಾಟೇಕರ್ ಮೃತಪಟ್ಟಿದ್ದರು ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.

Ad Widget

Ad Widget <> Ad Widget

ತನಿಖೆಯ ಭಾಗವಾಗಿ ನಟನ ನಿವಾಸಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಗೋವಾ ಮೆಡಿಕಲ್ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆಯನ್ನೂ ನಡೆಸಲಾಗಿದ್ದು, ಸಾವಿಗೆ ಕಾರಣವಾದ ಸಂದರ್ಭಗಳ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಕುಟುಂಬಸ್ಥರು ಹಾಗೂ ಸಂಬಂಧಿಕರ ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ಪ್ರಕ್ರಿಯೆಯೂ ನಡೆದಿದೆ.



Ad Widget

ನಾನಾ ಪಾಟೇಕರ್ ಅವರ ಸಾವಿಗೆ ಹೃದಯಾಘಾತ ಕಾರಣವಾಗಿರಬಹುದು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಆದರೆ, ಸಾವಿನ ನಿಖರ ಕಾರಣ ಮತ್ತು ಸಂದರ್ಭಗಳ ಕುರಿತು ತನಿಖೆ ಮುಂದುವರಿದಿದೆ. ಅಸಹಜ ಸಾವು ಪ್ರಕರಣ ದಾಖಲಿಸಿರುವುದು ಮಾತ್ರವೇ ಸಾವಿನಲ್ಲಿ ಅಪರಾಧ ಅಥವಾ ಸಂಶಯಾಸ್ಪದ ಕೃತ್ಯ ನಡೆದಿದೆ ಎಂಬುದನ್ನು ಸೂಚಿಸುವುದಿಲ್ಲ. ತನಿಖೆಯ ಫಲಿತಾಂಶದ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.

Continue Reading

ಸಿನೆಮಾ

Drishyam 3-ಮಲಯಾಳಂ ನ ದಾಖಲೆ ಮುರಿದು ಬಾಕ್ಸ್ ಆಫೀಸ್‌ನಲ್ಲಿ ‘ದೃಶ್ಯಂ 3’ ಧಮಾಕಾ; 4 ದಿನದಲ್ಲೇ ₹300 ಕೋಟಿ ಕ್ಲಬ್‌ಗೆ ಎಂಟ್ರಿ..!

Published

on



Ad Widget

Ad Widget

Ad Widget

Ad Widget

ಅಜಯ್ ದೇವಗನ್ ಅಭಿನಯದ ‘ದೃಶ್ಯಂ 3: ದಿ ಕನ್‌ಕ್ಲೂಷನ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿದ್ದು, ಬಿಡುಗಡೆಯಾದ ಕೇವಲ ನಾಲ್ಕು ದಿನಗಳಲ್ಲಿ ವಿಶ್ವಾದ್ಯಂತ ₹300 ಕೋಟಿ ಗಡಿ ದಾಟಿದೆ. ಚಿತ್ರದ ಒಟ್ಟು ವಿಶ್ವಾದ್ಯಂತ ಗಳಿಕೆ ಇದೀಗ ₹303 ಕೋಟಿ ತಲುಪಿದೆ.

Ad Widget

Ad Widget

Ad Widget

Ad Widget

ಮುಂಬೈ: ಅಜಯ್ ದೇವಗನ್ ಅಭಿನಯದ ‘ದೃಶ್ಯಂ 3: ದಿ ಕನ್‌ಕ್ಲೂಷನ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿದ್ದು, ಬಿಡುಗಡೆಯಾದ ಕೇವಲ ನಾಲ್ಕು ದಿನಗಳಲ್ಲಿ ವಿಶ್ವಾದ್ಯಂತ ₹300 ಕೋಟಿ ಗಡಿ ದಾಟಿದೆ. ಚಿತ್ರದ ಒಟ್ಟು ವಿಶ್ವಾದ್ಯಂತ ಗಳಿಕೆ ಇದೀಗ ₹303 ಕೋಟಿ ತಲುಪಿದೆ.

Ad Widget

Ad Widget

Ad Widget alt="Ad Widget"/>

Ad Widget

ಬಿಡುಗಡೆಯ ನಾಲ್ಕನೇ ದಿನ ಚಿತ್ರವು ಭಾರತದಲ್ಲಿ 16,274 ಪ್ರದರ್ಶನಗಳಿಂದ ಸುಮಾರು ₹21 ಕೋಟಿ ನಿವ್ವಳ ಗಳಿಸಿದೆ. ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ನಿವ್ವಳ ಗಳಿಕೆ ₹197.50 ಕೋಟಿಗೆ ತಲುಪಿದ್ದು, ಒಟ್ಟು ಕಲೆಕ್ಷನ್ ಸುಮಾರು ₹237 ಕೋಟಿ ಆಗಿದೆ.

Ad Widget

Ad Widget <> Ad Widget

ಚಿತ್ರಕ್ಕೆ ಭಾರತ ಮಾತ್ರವಲ್ಲದೆ ಸಾಗರೋತ್ತರ ಮಾರುಕಟ್ಟೆಯಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಾಲ್ಕನೇ ದಿನ ವಿದೇಶಿ ಮಾರುಕಟ್ಟೆಯಲ್ಲಿ ಸುಮಾರು ₹5 ಕೋಟಿ ಗಳಿಸಿದ್ದು, ಇದರೊಂದಿಗೆ ವಿದೇಶದಲ್ಲಿನ ಒಟ್ಟು ಗಳಿಕೆ ₹66 ಕೋಟಿ ತಲುಪಿದೆ.



Ad Widget

ಮಲಯಾಳಂ ‘ದೃಶ್ಯಂ 3’ ಗಳಿಕೆಯನ್ನೂ ಮೀರಿಸಿದ ಹಿಂದಿ ಸಿನಿಮಾ
ಅಜಯ್ ದೇವಗನ್ ಅಭಿನಯದ ಹಿಂದಿ ‘ದೃಶ್ಯಂ 3’ಗೂ ಮುನ್ನ ಮೋಹನ್‌ಲಾಲ್ ನಟನೆಯ ಮಲಯಾಳಂ ‘Drishyam 3: The Past Never Stays Silent’ ಬಿಡುಗಡೆಯಾಗಿತ್ತು. ಆ ಚಿತ್ರವು ವಿಶ್ವಾದ್ಯಂತ ₹237.70 ಕೋಟಿ ಗಳಿಕೆ ದಾಖಲಿಸಿತ್ತು ಎಂದು ವರದಿಯಾಗಿದೆ.

Ad Widget

Ad Widget

ಬಾಕ್ಸ್ ಆಫೀಸ್ ಗಳಿಕೆಯ ವಿವರ
ಕೇರಳ: ಸುಮಾರು ₹86.25 ಕೋಟಿ
ಭಾರತದ ಇತರ ಭಾಗಗಳು: ₹37.52 ಕೋಟಿ
ವಿದೇಶಿ ಮಾರುಕಟ್ಟೆ: ₹109.15 ಕೋಟಿ

ಮಧ್ಯಪ್ರಾಚ್ಯ, ಉತ್ತರ ಅಮೆರಿಕಾ ಹಾಗೂ ಯುಕೆ ಮಾರುಕಟ್ಟೆಗಳಲ್ಲಿ ಚಿತ್ರದ ಗಳಿಕೆ ಗಮನಾರ್ಹವಾಗಿದ್ದು, ವಿದೇಶಿ ಕಲೆಕ್ಷನ್ ಹೆಚ್ಚಲು ಈ ಪ್ರದೇಶಗಳ ಕೊಡುಗೆ ಪ್ರಮುಖವಾಗಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading