ನಿಧನ ವಾರ್ತೆ
Uppinangadi-ಉಪ್ಪಿನಂಗಡಿ: ಆಯುರ್ವೇದ ಪಂಡಿತ ಕೆ. ಶೀನಪ್ಪ ಶೆಟ್ಟಿ ನಿಧನ
ಪಾರಂಪಾರಿಕ ಆಯುರ್ವೇದ ವೈದ್ಯರಾದ ಕೆ. ಶೀನಪ್ಪ ಶೆಟ್ಟಿ (96) ಜುಲೈ 23, 2025ರಂದು ಅಲ್ಪಕಾಲದ ಅಸೌಖ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಉಪ್ಪಿನಂಗಡಿಯ ವಿಜಯ ವೈದ್ಯ ಶಾಲೆಯ ಮಾಲಕರಾಗಿದ್ದರು ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಸೇವೆ ಸಲ್ಲಿಸಿದ್ದರು.
ಪಾರಂಪಾರಿಕ ಆಯುರ್ವೇದ ವೈದ್ಯರಾದ ಕೆ. ಶೀನಪ್ಪ ಶೆಟ್ಟಿ (96) ಜುಲೈ 23, 2025ರಂದು ಅಲ್ಪಕಾಲದ ಅಸೌಖ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಉಪ್ಪಿನಂಗಡಿಯ ವಿಜಯ ವೈದ್ಯ ಶಾಲೆಯ ಮಾಲಕರಾಗಿದ್ದರು ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಸೇವೆ ಸಲ್ಲಿಸಿದ್ದರು.
1929ರ ಜುಲೈ 26ರಂದು ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಕುಲ್ಲಂಜದಲ್ಲಿ ಜನಿಸಿದ ಶೀನಪ್ಪ ಶೆಟ್ಟಿ, ತಮ್ಮ ಭಾವನಾದ ಪಂಡಿತ್ ವೆಂಕಪ್ಪ ರೈಯವರ ಮಾರ್ಗದರ್ಶನದಲ್ಲಿ ಗಿಡಮೂಲಿಕೆ ಔಷಧ ತಯಾರಿಕೆಯಲ್ಲಿ ನೈಪುಣ್ಯತೆ ಪಡೆದರು. ಬ್ರಿಟಿಷರ ಕಾಲದ ವೈದ್ಯ ವಿಶಾರದಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಉಪ್ಪಿನಂಗಡಿಯಲ್ಲಿ ವಿಜಯ ವೈದ್ಯ ಶಾಲೆ ಸ್ಥಾಪಿಸಿ, ಆಯುರ್ವೇದ ಔಷಧಗಳ ಮೂಲಕ ಜನಪ್ರಿಯರಾದರು. ದಕ್ಷಿಣ ಕನ್ನಡ ಜಿಲ್ಲೆಯ ಶಿರಾಡಿ ಕಾಡುಗಳಿಂದ ಗಿಡಮೂಲಿಕೆಗಳನ್ನು ಸಂಗ್ರಹಿಸಿ ವಿವಿಧ ಔಷಧಗಳನ್ನು ತಯಾರಿಸಿದ್ದರು.
1942ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ, ಗಾಂಧೀಜಿಯ ಕರೆಗೆ ಸ್ಪಂದಿಸಿ, ಬ್ರಿಟಿಷರ ವಿರುದ್ಧ ಗೋಡೆ ಬರಹ ಬರೆಯುವ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಕೊಡುಗೆ ನೀಡಿದ್ದರು.
ಯಕ್ಷಗಾನ ತಾಳಮದ್ದಲೆಯಲ್ಲಿ ಆಸಕ್ತಿಯಿದ್ದ ಶೆಟ್ಟಿಯವರು, ಭೀಮ, ದುಶ್ಯಾಸನ ಮುಂತಾದ ಕಠಿಣ ಪಾತ್ರಗಳಿಗೆ ಜೀವ ತುಂಬಿದ್ದರು. ಶ್ರೀ ಕಾಳಿಕಾಂಬಾ ಯಕ್ಷಗಾನ ಸಂಘದ ಸ್ಥಾಪಕರಲ್ಲಿ ಒಬ್ಬರಾಗಿದ್ದ ಇವರು, ನಾಟಕ ರಂಗದಲ್ಲೂ ಗುರುತಿಸಿಕೊಂಡಿದ್ದರು. ಉಪ್ಪಿನಂಗಡಿಯ ಸರಕಾರಿ ಪ್ರೌಢಶಾಲೆಯ ನಿರ್ಮಾಣಕ್ಕಾಗಿ ನಾಟಕ ಪ್ರದರ್ಶನಗಳ ಮೂಲಕ ಸಾವಿರಾರು ರೂಪಾಯಿ ಸಂಗ್ರಹಿಸಿದ್ದರು. ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯ ಸ್ಥಾಪಕಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಇವರು ತಮ್ಮ ಪುತ್ರ ಡಾ. ಯತೀಶ್ ಕುಮಾರ್ ಶೆಟ್ಟಿ, ಪಟ್ಲ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್‌ನ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಕೆ. ಜಗದೀಶ್ ಶೆಟ್ಟಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಶೆಟ್ಟಿಯವರ ಪಾರ್ಥಿವ ಶರೀರವನ್ನು ಇಳಂತಿಲ ಗ್ರಾಮದ ಕುಂಟಾಲಕಟ್ಟೆಯ ತುಂಗಾ ನಿವಾಸಕ್ಕೆ ತಂದು, ಅಂತಿಮ ದರ್ಶನದ ಬಳಿಕ ಅಂತಿಮ ವಿಧಿಗಳನ್ನು ನೆರವೇರಿಸಲಾಗುವುದು ಎಂದು ಕೆ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.
ನಿಧನ ವಾರ್ತೆ
Nana Patekar-ನಟ ನಾನಾ ಪಾಟೇಕರ್ ಸಾವು: ಮರಣೋತ್ತರ ಪರೀಕ್ಷೆಯಲ್ಲಿ ಹೃದಯಾಘಾತ ದೃಢ
ನಟ ನಾನಾ ಪಾಟೇಕರ್ ಸಾವಿಗೆ ಹೃದಯಾಘಾತವೇ ಕಾರಣ ಎಂಬುದು ಮರಣೋತ್ತರ ಪರೀಕ್ಷಾ ವರದಿಯಿಂದ ದೃಢಪಟ್ಟಿದೆ. 75 ವರ್ಷದ ನಟನ ಹೃದಯದ ಅಪಧಮನಿಯಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ರಕ್ತ ಸಂಚಾರಕ್ಕೆ ಅಡ್ಡಿಯುಂಟಾಗಿ ಹೃದಯಾಘಾತ ಸಂಭವಿಸಿದೆ ಎಂದು ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ (ಜಿಎಂಸಿಎಚ್) ವೈದ್ಯರು ತಿಳಿಸಿದ್ದಾರೆ.
ಪಣಜಿ: ನಟ ನಾನಾ ಪಾಟೇಕರ್ ಸಾವಿಗೆ ಹೃದಯಾಘಾತವೇ ಕಾರಣ ಎಂಬುದು ಮರಣೋತ್ತರ ಪರೀಕ್ಷಾ ವರದಿಯಿಂದ ದೃಢಪಟ್ಟಿದೆ. 75 ವರ್ಷದ ನಟನ ಹೃದಯದ ಅಪಧಮನಿಯಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ರಕ್ತ ಸಂಚಾರಕ್ಕೆ ಅಡ್ಡಿಯುಂಟಾಗಿ ಹೃದಯಾಘಾತ ಸಂಭವಿಸಿದೆ ಎಂದು ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ (ಜಿಎಂಸಿಎಚ್) ವೈದ್ಯರು ತಿಳಿಸಿದ್ದಾರೆ.
ದೋನಾ ಪೌಲಾದಲ್ಲಿರುವ ತಮ್ಮ ನಿವಾಸದಲ್ಲಿ ಅಕ್ಟೋಬರ್ 8ರಂದು ನಾನಾ ಪಾಟೇಕರ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎಂದು ದೋನಾ ಪೌಲಾದ ಮಣಿಪಾಲ್ ಆಸ್ಪತ್ರೆಯ ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ. ಶೇಖರ್ ಸಲ್ಕರ್ ತಿಳಿಸಿದ್ದರು.
ನಂತರ ಅವರ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿತ್ತು. ಈ ಸಂಬಂಧ ಗೋವಾ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ನಾನಾ ಪಾಟೇಕರ್ ಅವರ ಅಂತ್ಯಕ್ರಿಯೆಯನ್ನು ಪುಣೆ ಜಿಲ್ಲೆಯ ದೋಂಜೆ ಗ್ರಾಮದಲ್ಲಿರುವ ಅವರ ಫಾರ್ಮ್‌ಹೌಸ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗಿದೆ.
ನಿಧನ ವಾರ್ತೆ
Mumbai-ಪ್ರೀತಿಸಿ ಮದುವೆಯಾಗಿದ್ದ ಜೋಡಿಯ ದುರಂತ ಅಂತ್ಯ? ಸರಪಳಿಯಿಂದ ಕಾಲು ಕಟ್ಟಿದ ಸ್ಥಿತಿಯಲ್ಲಿ ಶವ ಪತ್ತೆ
ಕಾಲುಗಳನ್ನು ಕಬ್ಬಿಣದ ಸರಪಳಿಯಿಂದ ಒಟ್ಟಿಗೆ ಕಟ್ಟಿ, ಬೀಗ ಹಾಕಿದ ಸ್ಥಿತಿಯಲ್ಲಿ ನವವಿವಾಹಿತ ದಂಪತಿಯ ಮೃತದೇಹಗಳು ಮಹಾರಾಷ್ಟ್ರದ ಧುಲೆ ಜಿಲ್ಲೆಯ ತಾಪಿ ನದಿಯಲ್ಲಿ ಪತ್ತೆಯಾಗಿವೆ. ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮೂಡಿದ್ದು, ದಂಪತಿಯ ಸಾವಿನ ಹಿಂದಿನ ಕಾರಣ ನಿಗೂಢವಾಗಿದೆ.
ಮುಂಬೈ: ಕಾಲುಗಳನ್ನು ಕಬ್ಬಿಣದ ಸರಪಳಿಯಿಂದ ಒಟ್ಟಿಗೆ ಕಟ್ಟಿ, ಬೀಗ ಹಾಕಿದ ಸ್ಥಿತಿಯಲ್ಲಿ ನವವಿವಾಹಿತ ದಂಪತಿಯ ಮೃತದೇಹಗಳು ಮಹಾರಾಷ್ಟ್ರದ ಧುಲೆ ಜಿಲ್ಲೆಯ ತಾಪಿ ನದಿಯಲ್ಲಿ ಪತ್ತೆಯಾಗಿವೆ. ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮೂಡಿದ್ದು, ದಂಪತಿಯ ಸಾವಿನ ಹಿಂದಿನ ಕಾರಣ ನಿಗೂಢವಾಗಿದೆ.
ಧುಲೆ ಜಿಲ್ಲೆಯ ಸಾವಲ್ಲೆ ಪ್ರದೇಶದಲ್ಲಿ ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ಜಲಗಾಂವ್ ಜಿಲ್ಲೆಯ ಅಮಲ್ನೇರ್ ತಾಲ್ಲೂಕಿನ ಮೂಲದ ಶ್ಯಾಮ್ ಹರಿ ಪಾಟೀಲ್ ಮತ್ತು ಸಪ್ನಾ ಪಾಟೀಲ್ ಎಂದು ಗುರುತಿಸಲಾಗಿದೆ. ಇಬ್ಬರೂ ಕೆಲವು ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಲುಗಳಿಗೆ ಸರಪಳಿ, ಬೀಗ!
ದಂಪತಿಯ ಕಾಲುಗಳನ್ನು ಕಬ್ಬಿಣದ ಸರಪಳಿಯಿಂದ ಒಟ್ಟಿಗೆ ಕಟ್ಟಿ, ಅದಕ್ಕೆ ಬೀಗ ಹಾಕಲಾಗಿತ್ತು. ನದಿಯ ತಳಭಾಗದಲ್ಲಿ ಈ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆತ್ಮಹತ್ಯೆಯೋ, ಕೊಲೆಯೋ?
ನವದಂಪತಿಯ ಸಾವು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪ್ರಕರಣದ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದ್ದು, ಸಾವಿನ ಹಿಂದಿನ ನೈಜ ಕಾರಣವನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.
ನಿಧನ ವಾರ್ತೆ
Accident-ಮೂಡುಬಿದಿರೆ: ಸ್ಕೂಟರ್ ನಿಯಂತ್ರಣ ತಪ್ಪಿ ಬಿದ್ದು ಕಾಲೇಜು ವಿದ್ಯಾರ್ಥಿ ಸಾವು
ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬರು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬುಧವಾರ ಸಂಜೆ ಮೂಡುಬಿದಿರೆ ತಾಲೂಕಿನ ಕೋಟೆಬಾಗಿಲಿನಲ್ಲಿ ನಡೆದಿದೆ. ಮೃತರನ್ನು ಕೋಟೆಬಾಗಿಲು ನಿವಾಸಿ ಸುಧಾಕರ ಹೆಗ್ಡೆ ಅವರ ಪುತ್ರ, ಮೂಡುಬಿದಿರೆಯ ಜೈನ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪ್ರಶ್ವಿತ್ ಹೆಗ್ಡೆ ಎಂದು ಗುರುತಿಸಲಾಗಿದೆ.
ಮೂಡುಬಿದಿರೆ, ಅ.8: ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬರು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬುಧವಾರ ಸಂಜೆ ಮೂಡುಬಿದಿರೆ ತಾಲೂಕಿನ ಕೋಟೆಬಾಗಿಲಿನಲ್ಲಿ ನಡೆದಿದೆ.
ಮೃತರನ್ನು ಕೋಟೆಬಾಗಿಲು ನಿವಾಸಿ ಸುಧಾಕರ ಹೆಗ್ಡೆ ಅವರ ಪುತ್ರ, ಮೂಡುಬಿದಿರೆಯ ಜೈನ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪ್ರಶ್ವಿತ್ ಹೆಗ್ಡೆ (17) ಎಂದು ಗುರುತಿಸಲಾಗಿದೆ.
ಪ್ರಶ್ವಿತ್ ಹೆಗ್ಡೆ ಹಾಗೂ ದೀಕ್ಷಿತ್ ಹೆಗ್ಡೆ ಒಂದೇ ಸ್ಕೂಟರ್‌ನಲ್ಲಿ ಶಿರ್ತಾಡಿ ಕಡೆಯಿಂದ ಕೋಟೆಬಾಗಿಲು ಕಡೆಗೆ ತೆರಳುತ್ತಿದ್ದರು. ಕೋಟೆಬಾಗಿಲಿನ ವೀರ ಮಾರುತಿ ದೇವಸ್ಥಾನದ ಬಳಿಯ ತಿರುವಿನಲ್ಲಿ ಸಾಗುತ್ತಿದ್ದ ವೇಳೆ ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದೆ ಎನ್ನಲಾಗಿದೆ.
ಅಪಘಾತದ ಪರಿಣಾಮ ಪ್ರಶ್ವಿತ್ ಅವರ ತಲೆಗೆ ತೀವ್ರ ಗಾಯವಾಗಿದ್ದು, ಜೊತೆಯಲ್ಲಿದ್ದ ದೀಕ್ಷಿತ್ ಅವರ ತಲೆಗೂ ಗಾಯಗಳಾಗಿವೆ. ತಕ್ಷಣ ಸ್ಥಳೀಯರು ಇಬ್ಬರನ್ನೂ ಮೂಡುಬಿದಿರೆಯ ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ ಪ್ರಶ್ವಿತ್ ಅವರ ತಲೆಗೆ ಗಂಭೀರ ಆಂತರಿಕ ಗಾಯವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ತಂದೆಯ ಹೋಟೆಲ್‌ನಲ್ಲಿ ತಿಂಡಿ ಸೇವಿಸಿ ಸ್ಕೂಟರ್‌ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
-
ಅಂತರ ರಾಜ್ಯ11 hours agoKasaragod-ಕಾಸರಗೋಡು: ಮದುವೆ ರದ್ದು, ₹7.57 ಲಕ್ಷದ ಉಡುಗೊರೆ ವಾಪಸ್ ನೀಡದೆ ವಂಚನೆ ಆರೋಪ; ಯುವತಿ ಸಹಿತ ಮೂವರ ವಿರುದ್ಧ ಪ್ರಕರಣ
-
ಮಂಗಳೂರು5 hours agoMangalore-ಮಂಗಳೂರು: ಅನೈತಿಕ ಸಂಬಂಧ ಶಂಕೆ; ಪತ್ನಿಯನ್ನು ಚೂರಿಯಿಂದ ಇರಿದು ಕೊಂದ ಪತಿ
-
ಬಿಗ್ ನ್ಯೂಸ್11 hours agoPuttur-ಪುತ್ತೂರು : ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಒಳಚರಂಡಿ ಕಾಮಗಾರಿ ಟೆಂಡರ್ ಸ್ಥಗಿತಗೊಳಿಸಿ : ನಗರಸಭೆಗೆ ಮನವಿ
-
ಅಪರಾಧ8 hours agoUdupi-ಉಡುಪಿ: ಹೇಮಂತ್ ಪೂಜಾರಿ ಬೇಟೆಗೆ ಪೊಲೀಸರ ಬಲೆ; ಗ್ಯಾಂಗ್ಸ್ಟರ್ ಅನುಜ್ ಪಾಟೀಲ್ ವಶಕ್ಕೆ..!
-
ಸುಳ್ಯ8 hours agoSullia-ಸುಳ್ಯ: ಕಳ್ಳತನಕ್ಕೆ ಬಂದವನು ಮಕ್ಕಳನ್ನು ಕಂಡು ಪರಾರಿ; ಕೇರಳ ಮೂಲದ ಆರೋಪಿ ಬಂಧನ
-
ಬಿಗ್ ನ್ಯೂಸ್6 hours agoGolithottu-ಗೋಳಿತ್ತೊಟ್ಟು: ತೋಡಿನ ನೀರಿನಲ್ಲಿ ಮೀನುಗಳ ಮಾರಣಹೋಮ; ತನಿಖೆಗೆ ಸ್ಥಳೀಯರ ಆಗ್ರಹ
-
ಸ್ಥಳೀಯ11 hours agoSharavuru-ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಂದ ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ
-
ಅಂತರ ರಾಜ್ಯ8 hours agoElon Musk-ಅಂಬಾನಿ ಮತ್ತು ಅವರ ಬೆಂಬಲಿಗರ ವಾದ ಹಾಸ್ಯಾಸ್ಪದವಾಗಿದೆ : ಸ್ಟಾರ್ ಲಿಂಕ್ ಕುರಿತು ಇಲಾನ್ ಮಸ್ಕ್


















