Connect with us

ಸ್ಥಳೀಯ

Beltangadi-ಬೆಳ್ತಂಗಡಿ: ‘ಬಾಕಿ’ ಕೇಳಿದ್ದಕ್ಕೆ ಅಂಗಡಿಗೆ ‘ಬೆಂಕಿ’

Published

on



Ad Widget

Ad Widget

Ad Widget

Ad Widget

ಅಂಗಡಿ ಮಾಲಿಕ ಸಾಮಾನು ಖರೀದಿಯ ಬಾಕಿ ದುಡ್ಡನ್ನು ಕೇಳಿರುವುದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಅಂಗಡಿಗೆ ಬೆಂಕಿ ಹಚ್ಚಿರುವ ಘಟನೆ ಬೆಳ್ತಂಗಡಿಯ ಗುರುವಾಯನಕೆರೆ ಎಂಬಲ್ಲಿ ನಡೆದಿದೆ.

Ad Widget

Ad Widget

Ad Widget

Ad Widget

ಬೆಳ್ತಂಗಡಿ: ಅಂಗಡಿ ಮಾಲಿಕ ಸಾಮಾನು ಖರೀದಿಯ ದುಡ್ಡನ್ನು ಕೇಳಿರುವುದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಅಂಗಡಿಗೆ ಬೆಂಕಿ ಹಚ್ಚಿರುವ ಘಟನೆ ಬೆಳ್ತಂಗಡಿಯ ಗುರುವಾಯನಕೆರೆ ಎಂಬಲ್ಲಿ ನಡೆದಿದೆ.

Ad Widget

Ad Widget

Ad Widget alt="Ad Widget"/>

Ad Widget

ಬೆಳ್ತಂಗಡಿ,ಕುವೆಟ್ಟು ಗ್ರಾಮದ ನಿವಾಸಿ ಸದಕುತುಲ್ಲ (50) ಎಂಬವರು ಈ ಕುರಿತು ದೂರು ನೀಡಿದ್ದು, ಆರೋಪಿ ಬೆಳ್ತಂಗಡಿ ಬಳಂಜ ಗ್ರಾಮ ನಿವಾಸಿ ಉಮೇಶ್ ಬಂಗೇರನನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Ad Widget

Ad Widget <> Ad Widget

ಏನಿದು ಪ್ರಕರಣ?
ಬೆಳ್ತಂಗಡಿ ಕುವೆಟ್ಟು ಗ್ರಾಮದ ಗುರುವಾಯನಕೆರೆ ಎಂಬಲ್ಲಿ ದಿನಸಿ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದ ಸದಕುತುಲ್ಲ ಅವರು ಜು.9 ರಂದು ರಾತ್ರಿ ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿರುತ್ತಾರೆ. ಜು.10 ರಂದು ಬೆಳಿಗ್ಗೆ ಅವರಿಗೆ ಅವರ ಅಂಗಡಿಗೆ ಆರೋಪಿ ಬೆಳ್ತಂಗಡಿ ಬಳಂಜ ಗ್ರಾಮದ ನಿವಾಸಿ ಉಮೇಶ್ ಬಂಗೇರ ಎಂಬಾತನು ಬೆಂಕಿ ಹಚ್ಚಿರುವ ಬಗ್ಗೆ ಮಾಹಿತಿ ಬಂದಿರುತ್ತದೆ.



Ad Widget

ಕೂಡಲೇ ಅವರು ಸ್ಥಳಕ್ಕೆ ಬಂದು ಸ್ಥಳಿಯರೊಂದಿಗೆ ಸೇರಿ ಬೆಂಕಿಯನ್ನು ನಂದಿಸಿದ್ದಾರೆ. ಘಟನೆಯಿಂದಾಗಿ ಅಂಗಡಿಗೆ ಅಳವಡಿಸಿದ 2 ಫ್ಲೆಕ್ಸ್ ಸುಟ್ಟು ಹೋಗಿ, 10 ಪ್ಲಾಸ್ಟಿಕ್ ಉಪ್ಪಿನ ಚೀಲಗಳಿಗೆ ಹಾನಿಯಾಗಿರುತ್ತದೆ.

Ad Widget

Ad Widget

ಆರೋಪಿ ಉಮೇಶ್‌ ಬಂಗೇರ ಸಾಮಾನು ಖರೀದಿಯ ದುಡ್ಡನ್ನು ಬಾಕಿಯಿರಿಸಿದ್ದು, ಅದನ್ನು ಕೇಳಿರುವುದಕ್ಕಾಗಿ ಕೋಪಗೊಂಡು ಈ ಕೃತ್ಯವನ್ನು ಎಸಗಿದ್ದಾನೆ. ಇದರಿಂದ ತನಗೆ 3000/- ರೂ ನಷ್ಟ ಉಂಟು ಮಾಡಿರುವುದಾಗಿ ಸದಕತುಲ್ಲ ಅವರು ನೀಡಿದ‌ ದೂರಿನಂತೆ, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ ಕ್ರ: 56/2025 ಕಲಂ: 326(f), 324(2) ಬಿಎನ್‌ ಎಸ್‌ ರಂತೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Ad Widget
Click to comment

Leave a Reply

ಬಿಗ್ ನ್ಯೂಸ್

Puttur-ಪುತ್ತೂರು : ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಒಳಚರಂಡಿ ಕಾಮಗಾರಿ ಟೆಂಡರ್ ಸ್ಥಗಿತಗೊಳಿಸಿ : ನಗರಸಭೆಗೆ ಮನವಿ

Published

on



Ad Widget

Ad Widget

Ad Widget

Ad Widget

ದೇವಸ್ಥಾನದ ಜಮೀನಿನಲ್ಲಿ ರಸ್ತೆ ನಿರ್ಮಾಣಕ್ಕೆ ಅನುಮತಿ ದೊರೆಯದ ಹಿನ್ನೆಲೆಯಲ್ಲಿ, ನೂತನ ರಸ್ತೆಗೆ ಪೂರಕವಾದ ಒಳಚರಂಡಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಂರಕ್ಷಣಾ ವೇದಿಕೆ ನಗರಸಭೆಗೆ ಮನವಿ ಸಲ್ಲಿಸಿದೆ.

Ad Widget

Ad Widget

Ad Widget

Ad Widget

ಪುತ್ತೂರು: ದೇವಸ್ಥಾನದ ಜಮೀನಿನಲ್ಲಿ ರಸ್ತೆ ನಿರ್ಮಾಣಕ್ಕೆ ಅನುಮತಿ ದೊರೆಯದ ಹಿನ್ನೆಲೆಯಲ್ಲಿ, ನೂತನ ರಸ್ತೆಗೆ ಪೂರಕವಾದ ಒಳಚರಂಡಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಂರಕ್ಷಣಾ ವೇದಿಕೆ ನಗರಸಭೆಗೆ ಮನವಿ ಸಲ್ಲಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಉತ್ತರ ಭಾಗದಲ್ಲಿ ಪೂರ್ವ-ಪಶ್ಚಿಮ ದಿಕ್ಕಿನಲ್ಲಿ 30 ಅಡಿ ಅಗಲ ಹಾಗೂ ಸುಮಾರು 1,000 ಮೀಟರ್ ಉದ್ದದ ಸಾರ್ವಜನಿಕ ರಸ್ತೆ ನಿರ್ಮಿಸುವ ಯೋಜನೆಗೆ ಸಂಬಂಧಿಸಿ ಭಕ್ತರು ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

Ad Widget

Ad Widget <> Ad Widget

ಈ ಅರ್ಜಿಯ ವಿಚಾರವಾಗಿ ಸೆ.10ರಂದು ನೀಡಿದ ಆದೇಶದಲ್ಲಿ, ಅರ್ಜಿದಾರರ ಆಕ್ಷೇಪಗಳನ್ನು ಆಲಿಸಿ ನಿಯಮಾನುಸಾರ ವಿಚಾರಣೆ ನಡೆಸಿ ಮುಂದಿನ ಆದೇಶ ಹೊರಡಿಸುವಂತೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ಆಯುಕ್ತರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.



Ad Widget

ರಸ್ತೆ ನಿರ್ಮಾಣಕ್ಕೆ ಇಲಾಖೆಯ ಆಯುಕ್ತರು ದೇವಸ್ಥಾನದ ಸಮಿತಿ ಅಥವಾ ಕಾರ್ಯನಿರ್ವಹಣಾಧಿಕಾರಿಗೆ ಈವರೆಗೆ ಅನುಮತಿ ನೀಡಿಲ್ಲ. ಆದರೂ, ದೇವಸ್ಥಾನದ ಬಳಿಯ ಹಿಂದಿನ ಗಣೇಶ್ ಪ್ರಸಾದ್ ಹೋಟೆಲ್‌ನಿಂದ ಮಡಿವಾಳಕಟ್ಟೆಯವರೆಗಿನ ನೂತನ ಕಾಂಕ್ರೀಟ್ ರಸ್ತೆಗೆ ಪೂರಕವಾಗಿ ನಿರ್ವಾತ ತಂತ್ರಜ್ಞಾನದಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿಗೆ ನಗರಸಭೆ ಟೆಂಡರ್ ಪ್ರಕಟಿಸಿದೆ ಎಂದು ವೇದಿಕೆ ಆಕ್ಷೇಪ ವ್ಯಕ್ತಪಡಿಸಿದೆ.

Ad Widget

Ad Widget

ದೇವಸ್ಥಾನದ ಜಮೀನಿನಲ್ಲಿ ಸಾರ್ವಜನಿಕ ರಸ್ತೆ ನಿರ್ಮಿಸಲು ಇಲಾಖೆಯ ಆಯುಕ್ತರ ಅನುಮತಿ ಕಡ್ಡಾಯವಾಗಿದ್ದು, ಈ ಸಂಬಂಧ ಭಕ್ತರ ಆಕ್ಷೇಪಗಳು ಹಾಗೂ ನ್ಯಾಯಾಲಯದ ನಿರ್ದೇಶನಗಳು ಇರುವಾಗ ಟೆಂಡರ್ ಪ್ರಕ್ರಿಯೆ ಮುಂದುವರಿಸುವುದು ಸರಿಯಲ್ಲ ಎಂದು ಮನವಿಯಲ್ಲಿ ಹೇಳಲಾಗಿದೆ.

ರಸ್ತೆ ನಿರ್ಮಾಣದ ಕುರಿತ ಸಾರ್ವಜನಿಕ ದೂರು ಮತ್ತು ಆಕ್ಷೇಪಗಳ ವಿಚಾರಣೆ ಇಲಾಖೆಯ ಆಯುಕ್ತರ ಮುಂದೆ ಇತ್ಯರ್ಥವಾಗುವವರೆಗೆ ಒಳಚರಂಡಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಎಂದು ದೇವಸ್ಥಾನದ ಸಂರಕ್ಷಣಾ ವೇದಿಕೆ ಪುತ್ತೂರು ನಗರಸಭೆ ಪೌರಾಯುಕ್ತರನ್ನು ಒತ್ತಾಯಿಸಿದೆ. ನ್ಯಾಯಾಲಯದ ನಿರ್ದೇಶನ ಉಲ್ಲಂಘಿಸಿ ಕಾಮಗಾರಿ ಮುಂದುವರಿಸಿದರೆ ಈ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತರಲಾಗುವುದು ಎಂದೂ ಎಚ್ಚರಿಸಿದೆ.

Ad Widget
Continue Reading

ಸಿನೆಮಾ

Bana-ಮುಂಬೈ ಪ್ರೀಮಿಯರ್ನಲ್ಲಿ” ಬನ” ತುಳು ಚಿತ್ರಕ್ಕೆ ಪ್ರಶಂಸೆಯ ಸುರಿಮಳೆ

Published

on



Ad Widget

Ad Widget

Ad Widget

Ad Widget

ಬಹು ನಿರೀಕ್ಷೆಯ ಬನ ಚಿತ್ರದ ಮೊದಲ ಎರಡು ಪ್ರೀಮಿಯರ್ ಮುಂಬೈನ ಮುಲುಂದ್ ಮತ್ತು ಕಲ್ಯಾಣ್ ನಲ್ಲಿ ನಡೆದಿದ್ದು ಅಲ್ಲಿನ ತುಳು ಪ್ರೇಕ್ಷಕರು ಚಿತ್ರದ ಬಗ್ಗೆ ಪ್ರಶಂಸೆಯ ಸುರಿಮಳೆ ಗೈದಿದ್ದಾರೆ. ಯುವ ಕಲಾವಿದರು ಅದ್ಭುತವಾಗಿ ನಟಿಸಿದ್ದು ಚಿತ್ರದ ಕಥೆ ಎಲ್ಲರ ಗಮನ ಸೆಳೆದಿದೆ. ಇದು ಮೊದಲ ನಾಗ ಆಧಾರಿತ ತುಳುಚಿತ್ರವಾಗಿದ್ದು ಅದ್ಭುತವಾಗಿ ಮೂಡಿಬಂದಿದೆ

Ad Widget

Ad Widget

Ad Widget

Ad Widget

ಬಹು ನಿರೀಕ್ಷೆಯ ಬನ ಚಿತ್ರದ ಮೊದಲ ಎರಡು ಪ್ರೀಮಿಯರ್ ಮುಂಬೈನ ಮುಲುಂದ್ ಮತ್ತು ಕಲ್ಯಾಣ್ ನಲ್ಲಿ ನಡೆದಿದ್ದು ಅಲ್ಲಿನ ತುಳು ಪ್ರೇಕ್ಷಕರು ಚಿತ್ರದ ಬಗ್ಗೆ ಪ್ರಶಂಸೆಯ ಸುರಿಮಳೆ ಗೈದಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಯುವ ಕಲಾವಿದರು ಅದ್ಭುತವಾಗಿ ನಟಿಸಿದ್ದು ಚಿತ್ರದ ಕಥೆ ಎಲ್ಲರ ಗಮನ ಸೆಳೆದಿದೆ. ಇದು ಮೊದಲ ನಾಗ ಆಧಾರಿತ ತುಳುಚಿತ್ರವಾಗಿದ್ದು ಅದ್ಭುತವಾಗಿ ಮೂಡಿಬಂದಿದೆ. ಅಲ್ಲಿನ ಪ್ರೇಕ್ಷಕರ ಪ್ರಕಾರ ಚಿತ್ರವನ್ನು ಕಥೆ ಆವರಿಸಿಕೊಂಡಿದ್ದು ಹಿರಿಯ ಕಿರಿಯ ಕಲಾವಿದರು ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.

Ad Widget

Ad Widget <> Ad Widget

ಬಾಬಪ್ರಸಾದ್ ಅರಸ ಹಾಗೂ ನಾಗಕಿರಣ್ ಶೆಟ್ಟಿ ಮುಂಬಯಿ ನೇತೃತ್ವದಲ್ಲಿ ಮುಂಬೈ ಶೋ ಯಶಸ್ವಿಯಾಗಿ ನೆರವೇರಿದೆ. ಶನಿವಾರ ಶೋ ನಡೆದು ಹೌಸ್ಫುಲ್ ಪ್ರದರ್ಶನ ಗೊಂಡ ದಾಕಲೆ ಬನ ಚಿತ್ರದ್ದು.ಚಿತ್ರ ಇದೆ ತಿಂಗಳು 23 ಕ್ಕೆ ಬಿಡುಗಡೆಯಾಗಲಿದೆ.



Ad Widget
Ad Widget
Continue Reading

ಸ್ಥಳೀಯ

Sharavuru-ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಂದ ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ

Published

on



Ad Widget

Ad Widget

Ad Widget

Ad Widget

ಕೇಂದ್ರ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ ಅವರು ನವರಾತ್ರಿ ಉತ್ಸವದ ಪ್ರಯುಕ್ತ ಪ್ರಸಿದ್ಧ ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿ, ಶ್ರೀದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

Ad Widget

Ad Widget

Ad Widget

Ad Widget

ಶರವೂರು: ಕೇಂದ್ರ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ ಅವರು ನವರಾತ್ರಿ ಉತ್ಸವದ ಪ್ರಯುಕ್ತ ಪ್ರಸಿದ್ಧ ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿ, ಶ್ರೀದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

Ad Widget

Ad Widget

Ad Widget alt="Ad Widget"/>

Ad Widget

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಅಲಂಕಾರು ಸಮೀಪದಲ್ಲಿರುವ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ನಾಡಿನ ಪ್ರಸಿದ್ಧ ಶಕ್ತಿಕ್ಷೇತ್ರಗಳಲ್ಲಿ ಒಂದಾಗಿದ್ದು, ನವರಾತ್ರಿ ಉತ್ಸವವನ್ನು ಅತ್ಯಂತ ಭಕ್ತಿ, ಶ್ರದ್ಧೆ ಹಾಗೂ ವೈಭವದಿಂದ ಆಚರಿಸುವ ಕ್ಷೇತ್ರವೆಂಬ ಖ್ಯಾತಿಯನ್ನು ಹೊಂದಿದೆ. ನವರಾತ್ರಿಯ ಸಂದರ್ಭದಲ್ಲಿ ದೇವಿಯ ದರ್ಶನ ಪಡೆಯಲು ರಾಜ್ಯದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ.

Ad Widget

Ad Widget <> Ad Widget

ಈ ಸಂದರ್ಭದಲ್ಲಿ ಕುಮಾರಿ ಶೋಭಾ ಕರಂದ್ಲಾಜೆ ಅವರು ಶ್ರೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ನಾಡಿನ ಸುಭಿಕ್ಷೆ, ಜನರ ಕಲ್ಯಾಣ ಹಾಗೂ ಲೋಕಶಾಂತಿಗಾಗಿ ಪ್ರಾರ್ಥಿಸಿದರು.



Ad Widget

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಸಂಬಂಧಪಟ್ಟ ಗಣ್ಯರು ಉಪಸ್ಥಿತರಿದ್ದರು.

Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading