Connect with us

ಶಿಕ್ಷಣ

Ambika – ಅಂಬಿಕಾದಲ್ಲಿ 2025-26ನೇ ಸಾಲಿನ ನೀಟ್ ರಿಪೀಟರ್ಸ್ ಬ್ಯಾಚ್‌ಗೆ ದಾಖಲಾತಿ; ಇಲ್ಲಿ ತರಬೇತಿ ಪಡೆದ ಪ್ರತಿ ಮೂರು ಮಂದಿಯಲ್ಲಿ ಇಬ್ಬರಿಗೆ ವೈದ್ಯಕೀಯ ಶಿಕ್ಷಣ

Published

on



Ad Widget

Ad Widget

Ad Widget

Ad Widget

ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ ‘ನೀಟ್ ರಿಪೀಟರ್ಸ್ ಬ್ಯಾಚ್’ ತರಗತಿಗಳನ್ನು ಕಳೆದ ಮೂರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಅಂಬಿಕಾ ಸಂಸ್ಥೆ ಕಳೆದ ಹಲವು ವರ್ಷಗಳಿಂದ ನೀಟ್ ಪರೀಕ್ಷೆಗೆ ಅತ್ಯುತ್ಕೃಷ್ಟ ತರಬೇತಿ ನೀಡುತ್ತಿದ್ದು ಪ್ರತಿ ವರ್ಷವೂ ಈ ಸಂಸ್ಥೆಯಿಂದ ಶೇಕಡಾ 75ರಿಂದ 80ರಷ್ಟು ವಿದ್ಯಾರ್ಥಿಗಳು ವೈದ್ಯಕೀಯ ಕಾಲೇಜುಗಳಲ್ಲಿ ದಾಖಲಾತಿ ಹೊಂದುತ್ತಿದ್ದಾರೆ.

Ad Widget

Ad Widget

Ad Widget

Ad Widget

ಪುತ್ತೂರು: ವೈದ್ಯರಾಗಬೇಕೆಂಬುದು ಅನೇಕ ವಿದ್ಯಾರ್ಥಿಗಳ ಕನಸು. ಬಹುಮಂದಿ ಹೆತ್ತವರೂ ತಮ್ಮ ಮಕ್ಕಳು ವೈದ್ಯಕೀಯ ಶಿಕ್ಷಣವನ್ನು ಹೊಂದಿ ಸಮಾಜದಲ್ಲಿ ಪ್ರತಿಷ್ಟಿತ ವೈದ್ಯರೆನಿಸಬೇಕೆಂಬ ಕನಸನ್ನು ಹೊಂದಿಯೇ ಇರುತ್ತಾರೆ. ಈ ನೆಲೆಯಲ್ಲಿ ಪಿಯು ಹಂತದ ಶಿಕ್ಷಣದ ಜತೆಜತೆಗೆ ನೀಟ್ ಪರೀಕ್ಷಾ ತರಬೇತಿಗೂ ಹಲವಾರು ಮಂದಿ ವಿದ್ಯಾರ್ಥಿಗಳು ದಾಖಲಾತಿ ಮಾಡಿಸಿಕೊಳ್ಳುವುದಿದೆ. ಒಟ್ಟಿನಲ್ಲಿ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಕನಸನ್ನು ನನಸಾಗಿಸುವಲ್ಲಿ ಅವರು ರಾಷ್ಟ್ರಮಟ್ಟದ ನೀಟ್ ಪರೀಕ್ಷೆಯಲ್ಲಿ ಗಳಿಸುವ ಅಂಕವೇ ಪ್ರಧಾನ.

Ad Widget

Ad Widget

Ad Widget alt="Ad Widget"/>

Ad Widget

ತನ್ಮಧ್ಯೆ, ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸುವಲ್ಲಿ ವಿಫಲರಾದ ಹಲವು ಪ್ರತಿಭಾನ್ವಿತ ವಿದ್ಯಾರ್ಥಿಗಳು ನೀಟ್ ರಿಪೀರ‍್ಸ್ ಬ್ಯಾಚ್‌ಗೆ ದಾಖಲಾತಿ ಹೊಂದಿ ಮುಂದಿನ ಒಂದು ವರ್ಷ ಪೂರ್ತಿ ನೀಟ್ ತರಬೇತಿಯನ್ನಷ್ಟೇ ಪಡೆದು ಮತ್ತೊಮ್ಮೆ ಪರೀಕ್ಷೆ ಎದುರಿಸಿ ತಮ್ಮ ವೈದ್ಯಕೀಯ ಶಿಕ್ಷಣದ ಕನಸನ್ನು ನನಸಾಗಿಸಿಕೊಳ್ಳುವುದಿದೆ.

Ad Widget

Ad Widget <> Ad Widget

ಅತ್ಯುತ್ತಮ ತರಬೇತಿ ದೊರಕಿ, ಸಾಕಷ್ಟು ಪ್ರಯತ್ನ ನಡೆಸಿದರೆ ರಿಪೀರ‍್ಸ್ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣವನ್ನು ಕೈಗೆಟಕುವಂತೆ ಮಾಡುವುದು ಕಷ್ಟಸಾಧ್ಯವೇನಲ್ಲ.
ಹೀಗೆ ದ್ವಿತೀಯ ಪಿಯು ಪೂರೈಸಿ ತಕ್ಷಣ ನೀಟ್ ಪರೀಕ್ಷೆಯನ್ನೂ ಎದುರಿಸಿ ಉತ್ತಮ ಅಂಕ ಗಳಿಸುವಲ್ಲಿ ವಿಫಲರಾದ ವಿದ್ಯಾರ್ಥಿಗಳಿಗಾಗಿಯೇ ದಕ್ಷಿಣ ಕನ್ನಡದ ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ ‘ನೀಟ್ ರಿಪೀಟರ್ಸ್ ಬ್ಯಾಚ್’ ತರಗತಿಗಳನ್ನು ಕಳೆದ ಮೂರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಅಂಬಿಕಾ ಸಂಸ್ಥೆ ಕಳೆದ ಹಲವು ವರ್ಷಗಳಿಂದ ನೀಟ್ ಪರೀಕ್ಷೆಗೆ ಅತ್ಯುತ್ಕೃಷ್ಟ ತರಬೇತಿ ನೀಡುತ್ತಿದ್ದು ಪ್ರತಿ ವರ್ಷವೂ ಈ ಸಂಸ್ಥೆಯಿಂದ ಶೇಕಡಾ 75ರಿಂದ 80ರಷ್ಟು ವಿದ್ಯಾರ್ಥಿಗಳು ವೈದ್ಯಕೀಯ ಕಾಲೇಜುಗಳಲ್ಲಿ ದಾಖಲಾತಿ ಹೊಂದುತ್ತಿದ್ದಾರೆ.



Ad Widget

ಪ್ರತಿದಿನ ಪ್ರಾಯೋಗಿಕ ಅನುಭವ, ವಾರಕ್ಕೊಮ್ಮೆ ಪರೀಕ್ಷೆಗಳನ್ನು ಈ ನೀಟ್ ರಿಪೀಟರ್ಸ್ ತರಗತಿಗಳಲ್ಲಿ ನಡೆಸಲಾಗುತ್ತದೆ. ತತ್ಪರಿಣಾಮದಲ್ಲಿ ವಿದ್ಯಾರ್ಥಿಗಳಿಗೆ ನೀಟ್ ಸಿಲೆಬಸ್‌ನ ಪ್ರತಿಯೊಂದು ವಿಷಯಗಳಲ್ಲೂ ಮಾದರಿ ಪರೀಕ್ಷೆ ನಡೆದಂತಹ ಅನುಭವ ಲಭ್ಯವಾಗಿ ಅಂತಿಮವಾದ ಪರೀಕ್ಷೆ ಸುಲಭಸಾಧ್ಯವೆನಿಸುತ್ತದೆ. ಜತೆಗೆ ಅನುಭವಿ ಪ್ರಾಧ್ಯಾಪಕರಿಂದ ನಿರಂತರ ಸಲಹೆ ಸೂಚನೆಗಳು, ಪರಸ್ಪರ ಸಂವಹನದ ಮೂಲಕ ಚರ್ಚಾ ತರಗತಿಗಳು, ವ್ಯಾಪಕವಾದ ಓದಿಗೆ ಪೂರಕವಾದ ಅಧ್ಯಯನ ಸಾಮಾಗ್ರಿಗಳು.. ಹೀಗೆ ಹತ್ತು ಹಲವು ವಿಷಯಗಳನ್ನು ನೀಟ್ ರಿಪೀರ‍್ಸ್ ವಿದ್ಯಾರ್ಥಿಗಳಿಗೆ ಒದಗಿಸಿಕೊಡಲಾಗುತ್ತದೆ. ಇವೆಲ್ಲದರ ಪರಿಣಾಮವಾಗಿ ನೀಟ್ ಪರೀಕ್ಷೆ ಬರೆದವರಲ್ಲಿ 2:3 ಅನುಪಾತದಲ್ಲಿ ವಿದ್ಯಾರ್ಥಿಗಳು ಮೆಡಿಕಲ್ ಕಾಲೇಜುಗಳನ್ನು ಪ್ರವೇಶಿಸುತ್ತಿದ್ದಾರೆ.

Ad Widget

Ad Widget


ಪ್ರಸ್ತುತ ವರ್ಷದ ನೀಟ್ ಫಲಿತಾಂಶದಲ್ಲಿ ದಕ್ಷಿಣ ಕನ್ನಡದ ಟಾಪ್ ಐದು ಕಾಲೇಜುಗಳಲ್ಲಿ ಮತ್ತೊಮ್ಮೆ ಅಂಬಿಕಾ ಸ್ಥಾನ ಪಡೆದಿದೆ. ತನ್ಮೂಲಕ ಕಳೆದ ಐದು ವರ್ಷಗಳಿಂದ ನಿರಂತರವಾಗಿ ಜೆಇಇ, ನೀಟ್, ಸಿಇಟಿ ಹಾಗೂ ಪಿಯು ಮೊದಲಾದ ಪರೀಕ್ಷೆಗಳ ಫಲಿತಾಂಶದಲ್ಲಿ ದ.ಕ. ಜಿಲ್ಲೆಯ ಟಾಪ್ ಐದು ಕಾಲೇಜುಗಳಲ್ಲಿ ಗಳಿಸುತ್ತಿರುವ ತನ್ನ ಸ್ಥಾನವನ್ನು ಈ ವರ್ಷವೂ ಅಬಾಧಿತವಾಗಿ ಕಾಪಾಡಿಕೊಂಡು ಬಂದಿದೆ. ತರಗತಿ ನಡೆಸುವ ಅನುಭವಿ ಶಿಕ್ಷಕರು ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಕನಸನ್ನು ನನಸಾಗಿ ಪರಿವರ್ತಿಸುತ್ತಿದ್ದಾರೆ.

ವಿದ್ಯಾರ್ಥಿಗಳಿಗೆ ಬೇಕಾದ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ನಮ್ಮ ಆದ್ಯ ಕರ್ತವ್ಯ. ಪ್ರತಿಯೊಬ್ಬ ವಿದ್ಯಾರ್ಥಿಯ ಮೇಲೂ ತೀವ್ರ ನಿಗಾ ಇರಿಸಿ ಆ ವಿದ್ಯಾರ್ಥಿಯು ತನ್ನ ಗುರಿಯನ್ನು ಈಡೇರಿಸಿಕೊಳ್ಳುವಂತೆ ನಮ್ಮ ಸರ್ವ ಸಹಕಾರವನ್ನೂ ನೀಡಲಾಗುತ್ತದೆ. ನಮ್ಮಲ್ಲಿಗೆ ಬಂದ ವಿದ್ಯಾರ್ಥಿಗಳು ನೂರು ಪ್ರತಿಶತ ತಮ್ಮ ಗುರಿಯನ್ನು ಸಾಧಿಸಬೇಕೆಂಬುದೇ ನಮ್ಮ ಕನಸು ಎನ್ನುವುದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಸುಬ್ರಮಣ್ಯ ನಟ್ಟೋಜ ಅವರ ಮಾತು.
ನೀಟ್ ರಿಪೀರ‍್ಸ್ ಬ್ಯಾಚ್‌ಗೆ ದಾಖಲಾತಿ ಹೊಂದುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯವೂ ಲಭ್ಯವಿದೆ.

ಬೆಂಗಳೂರು, ಮಂಗಳೂರಿನಂತಹ ನಗರ ಪ್ರದೇಶಗಳಿಗೆ ಹೋಲಿಸಿದಲ್ಲಿ ಅತ್ಯಂತ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ನೀಟ್ ಪರೀಕ್ಷಾ ತರಬೇತಿ ಪುತ್ತೂರಿನ ಅಂಬಿಕಾ ವಿದ್ಯಾಲಯದಲ್ಲಿ ದೊರಕುತ್ತಿದೆ. ಅದರಲ್ಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹಾಗೂ ಮೊದಲ ಪ್ರಯತ್ನದಲ್ಲಿ ವೈದ್ಯಕೀಯ ಶಿಕ್ಷಣದ ಅವಕಾಶ ವಂಚಿತ ವಿದ್ಯಾರ್ಥಿಗಳಿಗೆ ಅಂಬಿಕಾದ ನೀಟ್ ರಿಪೀರ‍್ಸ್ ಬ್ಯಾಚ್ ವರದಾನವಾಗಿ ಪರಿಣಮಿಸಿದೆ.
ಹಲವು ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷಾ ಯಶಸ್ಸು ಮೊದಲ ಪ್ರಯತ್ನದಲ್ಲಿ ದೊರಕದೇ ಇದ್ದಿರಬಹುದು. ಅಂತಹ ವಿದ್ಯಾರ್ಥಿಗಳು ಆತಂಕಿತರಾಗದೆ ನೀಟ್ ರಿಪೀರ‍್ಸ್ ಬ್ಯಾಚ್‌ನ ಪ್ರಯೋಜನ ಪಡೆದುಕೊಳ್ಳಬಹುದು. ಸತತ ಪ್ರಯತ್ನವೊಂದೇ ನೀಟ್ ಪರೀಕ್ಷೆಯ ಯಶಸ್ಸಿನ ಗುಟ್ಟು ಎಂಬುದನ್ನು ಮರೆಯಬಾರದು ಎನ್ನುತ್ತಾರೆ ಅಂಬಿಕಾ ವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಗತಿಗಳ ಸಂಯೋಜಕ ಕಿಶೋರ್ ಭಟ್.

ಈ ಬಾರಿಯ ನೀಟ್ ರಿಪೀಟರ್ಸ್ ಬ್ಯಾಚ್ ದಾಖಲಾತಿ ನಡೆಯುತ್ತಿದ್ದು ಹಲವಾರು ವಿದ್ಯಾರ್ಥಿಗಳು ದಾಖಲಾತಿ ಮಾಡಿಸಿಕೊಂಡಿದ್ದಾರೆ. ಜುಲೈ 3ರಿಂದ ತರಗತಿಗಳು ಆರಂಭಗೊಳ್ಳಲಿದ್ದು ಆಸಕ್ತರು 9482822800 / 9448835488 / 9741481600 ಸಂಖ್ಯೆಗೆ ಕರೆ ಮಾಡಬಹುದು.

ವಿಶೇಷ ರಿಯಾಯಿತಿ:
ಈ ಹಿಂದಿನ ನೀಟ್ ಪರೀಕ್ಷೆಯ ಅಂಕಗಳು ಹಾಗೂ ಪಿಯು ಪರೀಕ್ಷಾ ಅಂಕಗಳ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ ಇರುತ್ತದೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.

Ad Widget
Click to comment

Leave a Reply

ಶಿಕ್ಷಣ

Vivekananda-ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ “ಯೂನಿಮೆಕ್ ಏರೋಸ್ಪೇಸ್” ಸಂಸ್ಥೆ ವತಿಯಿಂದ ಕ್ಯಾಂಪಸ್ ಸಂದರ್ಶನ

Published

on



Ad Widget

Ad Widget

Ad Widget

Ad Widget

ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಮತ್ತು ಆಟೋಮೊಬೈಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನ “ಯೂನಿಮೆಕ್ ಏರೋಸ್ಪೇಸ್” ಸಂಸ್ಥೆಯ ವತಿಯಿಂದ ಕ್ಯಾಂಪಸ್ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಪ್ರಕ್ರಿಯೆಯಲ್ಲಿ 14 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

Ad Widget

Ad Widget

Ad Widget

Ad Widget

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಮತ್ತು ಆಟೋಮೊಬೈಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನ “ಯೂನಿಮೆಕ್ ಏರೋಸ್ಪೇಸ್” ಸಂಸ್ಥೆಯ ವತಿಯಿಂದ ಕ್ಯಾಂಪಸ್ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಪ್ರಕ್ರಿಯೆಯಲ್ಲಿ 14 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಲಿಖಿತ ಪರೀಕ್ಷೆ ಹಾಗೂ ನೇರ ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು. ಕಂಪನಿಯ ಹೆಚ್.ಆರ್. ಅಧಿಕಾರಿ ಸುನಿಲ್ ಹಾಗೂ ನೇಮಕಾತಿ ಅಧಿಕಾರಿ ಸಂತೋಷ್.ವಿ.ಜೋಸ್ ಸಂದರ್ಶನ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

Ad Widget

Ad Widget <> Ad Widget

ಕಾಲೇಜಿನ ಹಿರಿಯ ವಿದ್ಯಾರ್ಥಿಯೂ ಆಗಿರುವ ಸಂತೋಷ್.ವಿ.ಜೋಸ್ ಅವರು ವಿದ್ಯಾರ್ಥಿಗಳಿಗೆ ಉತ್ತಮ ವೃತ್ತಿ ಜೀವನ ರೂಪಿಸಿಕೊಳ್ಳುವ ಕುರಿತು ಮತ್ತು ಭವಿಷ್ಯದ ಅವಕಾಶಗಳ ಬಗ್ಗೆ ವಿವರಿಸಿದರು.



Ad Widget

ಈ ಸಂದರ್ಭದಲ್ಲಿ ಸಂಸ್ಥೆಯ ಪ್ಲೇಸ್‌ಮೆಂಟ್ ವಿಭಾಗದ ಅಧಿಕಾರಿ ಉಷಾಕಿರಣ್ ಹಾಗೂ ಮೆಕ್ಯಾನಿಕಲ್ ಮತ್ತು ಆಟೋಮೊಬೈಲ್ ಇಂಜಿನಿಯರಿಂಗ್ ವಿಭಾಗದ ಬೋಧಕ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Continue Reading

ಶಿಕ್ಷಣ

Ambika-ಅಂಬಿಕಾ ವಿದ್ಯಾಲಯದ ಸಿಬಿಎಸ್‌ಇ ಸಂಸ್ಥೆಯಲ್ಲಿ ಯೋಧ ಗೌರವ ಕಾರ್ಯಕ್ರಮ; ಸೈನಿಕರ ಪ್ರಾಣರಕ್ಷಣೆಗೆ ಆಧುನಿಕ ತಂತ್ರಜ್ಞಾನಗಳಿವೆ – ಸುಂದರ ಪೂಜಾರಿ

Published

on



Ad Widget

Ad Widget

Ad Widget

Ad Widget

ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ. ಸಂಸ್ಥೆಯಲ್ಲಿ ಶನಿವಾರ ಆಯೋಜಿಸಲಾದ ಗೌರವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿದ ದೇಶದ ಗಡಿ ಭದ್ರತಾ ಪಡೆಯಲ್ಲಿ ಸತತವಾಗಿ 34 ವರ್ಷಗಳ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದಿ ಮರಳಿ ಊರಿಗೆ ಆಗಮಿಸಿದ ಸುಂದರ ಪೂಜಾರಿ ಅವರು ಮಾತನಾಡಿದರು.

Ad Widget

Ad Widget

Ad Widget

Ad Widget

ಪುತ್ತೂರು: ಈಗಿನ ದಿನಮಾನಗಳಲ್ಲಿ ಸೈನ್ಯದ ಎಲ್ಲಾ ವಿಭಾಗಗಳಲ್ಲೂ ಸೈನಿಕರ ಪ್ರಾಣಕ್ಕೆ ಅಪಾಯವಾಗದಂತೆ ತಡೆಯಲು ತಂತ್ರಜ್ಞಾನ ಸಹಾಯಕವಾಗಿದೆ. ಸೈನಿಕರ ಪ್ರಾಣಕ್ಕೆ ತೊಂದರೆಯಾಗಬಾರದೆನ್ನುವ ಕಾರಣದಿಂದ ಕರ್ತವ್ಯದ ಸಮಯದಲ್ಲಿ ಸೈನಿಕರು ಎಲ್ಲಿದ್ದರೂ ಮಿಲಿಟರಿ ವ್ಯವಸ್ಥೆಗೆ ಸೂಚನೆ ಸಿಗುವ ತಂತ್ರಜ್ಞಾನವಿದೆ ಎಂದು ದೇಶದ ಗಡಿ ಭದ್ರತಾ ಪಡೆಯಲ್ಲಿ ಸತತವಾಗಿ 34 ವರ್ಷಗಳ ಸೇವೆಯನ್ನು ಸಲ್ಲಿಸಿ ಜುಲೈ 31ರಂದು ನಿವೃತ್ತಿ ಹೊಂದಿ ಮರಳಿ ಊರಿಗೆ ಆಗಮಿಸಿದ ಸುಂದರ ಪೂಜಾರಿ ಹೇಳಿದರು.

Ad Widget

Ad Widget

Ad Widget alt="Ad Widget"/>

Ad Widget

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ. ಸಂಸ್ಥೆಯಲ್ಲಿ ಶನಿವಾರ ಆಯೋಜಿಸಲಾದ ಗೌರವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

Ad Widget

Ad Widget <> Ad Widget

ದೇಶಸೇವೆ ಮಾಡಲು ಸೈನ್ಯಕ್ಕೆ ಸೇರುವುದು ಒಂದು ಉತ್ತಮ ಸಾಧ್ಯತೆ. ಹಾಗೆಂದು ಸೈನ್ಯಕ್ಕೆ ಸೈನಿಕರಾಗಿಯೇ ಸೇರಬೇಕೆಂದಿಲ್ಲ. ವೈದ್ಯರಾಗಿಯೂ, ಅಭಿಯಂತರರಾಗಿಯೂ, ತಂತ್ರಜ್ಞರಾಗಿಯೂ ಕೂಡ ಸೇವೆಯನ್ನು ಸಲ್ಲಿಸಲು ಅವಕಾಶಗಳಿವೆ ಎಂದರಲ್ಲದೆ ತಮ್ಮ ದೀರ್ಘಕಾಲದ ಅನುಭವದ ಸಾರವನ್ನು ವಿದ್ಯಾಥಿಗಳೊಂದಿಗೆ ಹಂಚಿಕೊಂಡರು.



Ad Widget

ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ಸೈನಿಕರು ಕೇವಲ ಯುದ್ಧದ ಸಂದರ್ಭದಲ್ಲಿ ಮಾತ್ರವಲ್ಲದೆ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿಯೂ ಜನರನ್ನು ರಕ್ಷಿಸುವ ಕಾರ್ಯದಲ್ಲಿ ನಿರತರಾಗುತ್ತಾರೆ. ತಮ್ಮ ಕುಟುಂಬವನ್ನು ಬಿಟ್ಟು ಸಮಾಜದ ವಿವಿಧ ಕುಟುಂಬಗಳ ರಕ್ಷಣೆಗಾಗಿ ತಮ್ಮನ್ನು ಮುಡಿಪಾಗಿಟ್ಟುಕೊಳ್ಳುತ್ತಾರೆ. ಹಾಗಾಗಿ ನಾವು ಎಲ್ಲೇ ಹೋಗಲಿ, ಎಷ್ಟೇ ದೂರ ಪ್ರಯಾಣಿಸಲಿ ನಮ್ಮ ಹೆಮ್ಮೆಯ ಸೈನಿಕರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ. ಆದ್ದರಿಂದ ಅಂಬಿಕಾ ವಿದ್ಯಾಸಂಸ್ಥೆಯು ಕೇವಲ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ಒಳಗೊಂಡಿಲ್ಲ. ನಮ್ಮ ದೇಶದ ಸೈನಿಕರನ್ನೂ ಒಡಗೂಡಿ ಅಂಬಿಕಾ ಪರಿವಾರವೆನಿಸಿಕೊಂಡಿದೆ ಎಂದು ನುಡಿದರು.
ಸುಂದರ ಪೂಜಾರಿ ದಂಪತಿಯನ್ನು ಅಂಬಿಕಾ ಸಂಸ್ಥೆಗಳ ಪರವಾಗಿ ಸನ್ಮಾನಿಸಲಾಯಿತು.

Ad Widget

Ad Widget

ಕಾರ್ಯಕ್ರಮದಲ್ಲಿ ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ. ಹಾಗೂ ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು.

6ನೇ ತರಗತಿಯ ಆರಾಧ್ಯ ಸ್ವಾಗತಿಸಿದರು. 9ನೇ ತರಗತಿಯ ಮಾನ್ಯಲಕ್ಷೀ ಎನ್ ಪಿ ಯೋಧರ ಪರಿಚಯಗೈದರು. 9ನೇ ತರಗತಿಯ ಕುವೀರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ವಿದ್ಯಾರ್ಥಿನಿ ದೀಪ್ತಿ ಬಿ ಪಿ ಸಹಕರಿಸಿದರು.

Ad Widget
Continue Reading

ಶಿಕ್ಷಣ

Vivekananda-ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ

Published

on



Ad Widget

Ad Widget

Ad Widget

Ad Widget

ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಕಾಲೇಜು ಆಂತರಿಕ ದೂರು ಸಮಿತಿ, ಡಾಟಾ ಸೈನ್ಸ್ ಎಂಜಿನಿಯರಿಂಗ್ ವಿಭಾಗ, ಡಾಟಾ ಸೈನ್ಸ್ ವಿದ್ಯಾರ್ಥಿ ಸಂಘ, ಪೇರೆಂಟ್ ರಿಲೇಶನ್ ಸೆಲ್ ಮತ್ತು ಗ್ರೀವೆನ್ಸ್ ರೆಡ್ರೆಸ್ಸಲ್ ಸೆಲ್ ಇದರ ಸಂಯುಕ್ತ ಆಶ್ರಯದಲ್ಲಿ ಪರದೆಯಿಂದ ಆತ್ಮದ ಕಡೆಗೆ: ಜೆನ್-ಜೀ ನಡವಳಿಕೆಗಳು, ಮಿತಿಗಳು ಮತ್ತು ಅದರಾಚೆಗಿನ ಆಯಾಮಗಳು ಈ ವಿಷಯದ ಬಗ್ಗೆ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪುತ್ತೂರಿನ ಪ್ರಗತಿ ಸ್ಪೆಶಾಲಿಟಿ ಆಸ್ಪತ್ರೆಯ ವೃದ್ಧಾಪ್ಯ ರೋಗ ಮತ್ತು ಮಧುಮೇಹ ತಜ್ಞರಾದ ಡಾ. ಅನನ್ಯಲಕ್ಷ್ಮೀ ಸಂದೀಪ್ ಮಾತಾಡಿದರು.

Ad Widget

Ad Widget

Ad Widget

Ad Widget

ಪುತ್ತೂರು: ಲೈಂಗಿಕ ಕಿರುಕುಳ ಎನ್ನುವುದು ಕೇವಲ ದೈಹಿಕ ಸ್ಪರ್ಶಕ್ಕೆ ಸೀಮಿತವಾಗಿಲ್ಲ ಬದಲಾಗಿ ಆಶ್ಲೀಲ ಸಂದೇಶಗಳನ್ನು ಕಳುಹಿಸುವುದು, ಮಾತುಗಳನ್ನಾಡುವುದು ಅಥವಾ ಅಂತಹ ಯಾವುದೇ ರೀತಿಯ ವರ್ತನೆಗಳೂ ಕೂಡಾ ಇದರಲ್ಲಿ ಸೇರಿವೆ ಎಂದು ಪುತ್ತೂರಿನ ಪ್ರಗತಿ ಸ್ಪೆಶಾಲಿಟಿ ಆಸ್ಪತ್ರೆಯ ವೃದ್ಧಾಪ್ಯ ರೋಗ ಮತ್ತು ಮಧುಮೇಹ ತಜ್ಞರಾದ ಡಾ. ಅನನ್ಯಲಕ್ಷ್ಮೀ ಸಂದೀಪ್ ಹೇಳಿದರು.

Ad Widget

Ad Widget

Ad Widget alt="Ad Widget"/>

Ad Widget

ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಕಾಲೇಜು ಆಂತರಿಕ ದೂರು ಸಮಿತಿ, ಡಾಟಾ ಸೈನ್ಸ್ ಎಂಜಿನಿಯರಿಂಗ್ ವಿಭಾಗ, ಡಾಟಾ ಸೈನ್ಸ್ ವಿದ್ಯಾರ್ಥಿ ಸಂಘ, ಪೇರೆಂಟ್ ರಿಲೇಶನ್ ಸೆಲ್ ಮತ್ತು ಗ್ರೀವೆನ್ಸ್ ರೆಡ್ರೆಸ್ಸಲ್ ಸೆಲ್ ಇದರ ಸಂಯುಕ್ತ ಆಶ್ರಯದಲ್ಲಿ ಪರದೆಯಿಂದ ಆತ್ಮದ ಕಡೆಗೆ: ಜೆನ್-ಜೀ ನಡವಳಿಕೆಗಳು, ಮಿತಿಗಳು ಮತ್ತು ಅದರಾಚೆಗಿನ ಆಯಾಮಗಳು ಈ ವಿಷಯದ ಬಗ್ಗೆ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತಾಡಿದರು.

Ad Widget

Ad Widget <> Ad Widget

ಇಂದಿನ ಪೀಳಿಗೆ, ಅವರ ಪೋಷಕರು, ಶಿಕ್ಷಕರ ನಡುವಿನ ವ್ಯತ್ಯಾಸ ಮತ್ತು ಜವಾಬ್ಧಾರಿಗಳ ಬಗ್ಗೆ ವಾಸ್ತವಿಕ ಉದಾಹರಣೆಗಳನ್ನು ಉಲ್ಲೇಖಿಸಿದ ಅವರು ಯುವಜನತೆ ಪಾಲಿಸಬೇಕಾದ ಮತ್ತು ಪಾಲಿಸಬಾರದ ವಿಷಯಗಳ ಬಗ್ಗೆ ತಿಳಿಸಿದರು. ಒಬ್ಬರ ಸಾಮರ್ಥ್ಯವನ್ನು, ದೇಹದ ಆಕಾರವನ್ನು ಟೀಕಿಸುವುದು ಕೂಡಾ ಅಪರಾಧ. ಅಂತಹ ಸಂದರ್ಭದಲ್ಲಿ ಅದನ್ನು ಎದುರಿಸುವ, ಪ್ರತಿಕ್ರಿಯಿಸುವ ಬಗೆ ಮತ್ತು ದೂರು ಸಲ್ಲಿಸಬೇಕಾದ ಪ್ರಾಧಿಕಾರಗಳ ಬಗ್ಗೆ ತಿಳಿಸಿದರು. ನೀವು ಕೋಪಗೊಂಡಿದ್ದರೆ, ಅತಿಯಾದ ಉತ್ಸಾಹದಲ್ಲಿದ್ದರೆ ಅಥವಾ ಒತ್ತಡದಲ್ಲಿದ್ದರೆ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು 10 ನಿಮಿಷಗಳ ಕಾಲ ಮುಂದೂಡಿ. ಸಾಧ್ಯವಾದರೆ ಆ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಮೊದಲು ಒಂದು ರಾತ್ರಿ ಚೆನ್ನಾಗಿ ಯೋಚಿಸಿ ಎಂದು ಹೇಳಿದರು.



Ad Widget

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕಿ ರಕ್ಷ.ಎಸ್.ಆರ್ ಮಾತನಾಡಿ ಮೊದಲು ಆಲಿಸಿ ನಂತರ ಮಾತನಾಡಿ, ಕೆಲವೊಮ್ಮೆ ಅಲ್ಲಿ ಉಪಸ್ಥಿತರಿದ್ದು ಮೌನವಾಗಿ ಆಲಿಸುವುದರಿಂದ ಜೀವನದಲ್ಲಿ ಹೆಚ್ಚಿನ ಪ್ರಯೋಜನಗಳಾಗುತ್ತದೆ ಎಂದರು. ಒಬ್ಬ ಉತ್ತಮ ಇಂಜಿನಿಯರ್ ಆಗುವ ಜತೆಯಲ್ಲಿ ದೇಶದ ಪ್ರಜ್ಞಾವಂತ ಪ್ರಜೆಯಾಗಿ ಎಂದು ನುಡಿದರು.
ಕಾಲೇಜು ಆಂತರಿಕ ದೂರು ಸಮಿತಿಯ ಅಧ್ಯಕ್ಷೆ ಡಾ.ಜೋತಿಮಣಿ.ಕೆ, ಡಾಟಾಸೈನ್ಸ್ ವಿಭಾಗ ಮುಖ್ಯಸ್ಥೆ ಪ್ರೊ.ರೂಪಾ.ಜಿ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Ad Widget

Ad Widget

ಡಾಟಾಸೈನ್ಸ್ ವಿಭಾಗದ ವಿದ್ಯಾರ್ಥಿಗಳಾದ ಗಗನ್‌ದೀಪ್ ಸ್ವಾಗತಿಸಿ, ನಿಹಾರಿಕಾ ಅತಿಥಿಗಳನ್ನು ಪರಿಚಯಿಸಿದರು. ಆಶ್ಲೇಷ್ ವಂದನಾರ್ಪಣೆಗೈದರು. ಶ್ರೇಯಾ ಎಮ್. ಕಾರ್ಯಕ್ರಮ ನಿರ್ವಹಿಸಿದರು.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading