Uncategorized
ಅಂಬಿಕಾ ವಿದ್ಯಾಲಯದಲ್ಲಿ ದಶಾಂಬಿಕೋತ್ಸವ ಸಮಾರೋಪ ಹಾಗೂ ಗುರುವಂದನಾ ಕಾರ್ಯಕ್ರಮ -ದೇಶ ಮತ್ತು ಧರ್ಮಕ್ಕಾಗಿ ಜೀವನ ಮುಡಿಪಾಗಿರಲಿ : ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು
ಪುತ್ತೂರು: ದೇಶ ಮತ್ತು ಧರ್ಮಕ್ಕಾಗಿ ನಾವು ನಮ್ಮ ಜೀವನ ನಡೆಸಬೇಕು. ದೇಶವನ್ನು ಬಿಟ್ಟು ಧರ್ಮವಾಗಲೀ, ಧರ್ಮವನ್ನು ಬಿಟ್ಟು ದೇಶವಾಗಲೀ ಇರುವುದಕ್ಕೆ ಸಾಧ್ಯವಿಲ್ಲ. ಅತ್ಯಂತ ಉತ್ಕೃಷ್ಟ ದೇಶ ಹಾಗೂ ಧರ್ಮದಲ್ಲಿ ನಾವು ಜನಿಸಿದ್ದೇವೆ ಎಂಬುದೇ ಹೆಮ್ಮೆ. ಹಾಗಾಗಿ ದೇಶ ಹಾಗೂ ಧರ್ಮ ಎರಡನ್ನೂ ಚೆನ್ನಾಗಿ ಇಟ್ಟುಕೊಂಡಾಗ ಮಾತ್ರ ನಮ್ಮ ಜನ್ಮ ಸಾರ್ಥಕಗೊಳ್ಳುತ್ತದೆ. ಮನುಷ್ಯ ಜನ್ಮ ಎನ್ನುವುದು ನಮಗೆ ದೊರಕುವ ಸುವರ್ಣಾವಕಾಶ. ಇದನ್ನು ವ್ಯರ್ಥ ಮಾಡಬಾರದು ಎಂದು ಶೃಂಗೇರಿಯ ಶ್ರೀ ಶಾರದಾ ಪೀಠಾಧೀಶ್ವರ ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳವರು ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಹತ್ತನೆಯ ವರ್ಷಾಚರಣೆ ದಶಾಂಬಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಗುರುವಾರ ಆಶಿರ್ವಚನ ನೀಡಿದರು.
ನಮ್ಮಲ್ಲಿನ ನ್ಯೂನತೆಗಳನ್ನು ಯಾರಾದರೂ ಗುರುತಿಸಿದಲ್ಲಿ ಖೇದಪಡಬಾರದು. ಬದಲಾಗಿ ನಮ್ಮ ಮಿತಿಗಳನ್ನು ಮೀರಿ ನಿಲ್ಲುವ ಬಗೆಗೆ ಯೋಚಿಸಬೇಕು. ನಮ್ಮಲ್ಲಿನ ಕೆಟ್ಟ ಗುಣಗಳನ್ನು ಒಪ್ಪಿಕೊಳ್ಳುವ, ಅದನ್ನು ತಿದ್ದಿಕೊಳ್ಳುವ ಮನಃಸ್ಥಿತಿ ನಮ್ಮದಾಗಬೇಕು. ಹಾಗಾಗಿ ಪ್ರತಿಯೊಬ್ಬನೂ, ಪ್ರತಿದಿನವೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಬದಲಾಗಿ ನಮ್ಮ ಕೊರತೆಗಳನ್ನು ಮತ್ತೊಬ್ಬರು ಹೇಳಿದಾಗ ಅವಮಾನವೆಂದೆಣಿಸಿ ಸಿಟ್ಟಿಗೊಳಗಾದರೆ ನಮ್ಮ ವ್ಯಕ್ತಿತ್ವ ಸೌಂದರ್ಯ ಪಡೆದುಕೊಳ್ಳುವುದಿಲ್ಲ ಎಂದರು.

ಮನುಷ್ಯ ಜೀವನದಲ್ಲಿ ಅತ್ಯಂತ ಮುಖ್ಯವಾದದ್ದು ಜ್ಞಾನ ಸಂಪಾದನೆ. ಜ್ಞಾನಪೂರ್ವಕವಾಗಿ ಮಾಡುವ ಕಾರ್ಯಗಳೆಲ್ಲವೂ ಸಫಲವಾಗುತ್ತವೆ. ಮನುಷ್ಯನಿಗೆ ಬುದ್ಧಿ ಇದೆ ಎಂಬುದು ಹೌದಾದರೂ ಆ ಬುದ್ಧಿಗಳಲ್ಲಿ ವೈವಿಧ್ಯ ಕಾಣಬಹುದು. ಬುದ್ಧಿ, ಮತಿ, ಸ್ಮೃತಿ, ಪ್ರಜ್ಞಾ ಎಂಬುದು ಬುದ್ಧಿಯ ನಾನಾಮುಖಗಳು. ಇವೆಲ್ಲದರ ಆರ್ಜನೆಗೆ ವಿದ್ಯೆ ಅಗತ್ಯ. ದೇಹ, ಮನಸ್ಸಿನ ಆರೋಗ್ಯವಷ್ಟೇ ಅಲ್ಲ, ಮಾತಿನ ಆರೋಗ್ಯವೂ ಮನುಷ್ಯನಿಗೆ ಅತ್ಯಂತ ಅನಿವಾರ್ಯ. ನಮ್ಮಲ್ಲಿನ ಒಳ್ಳೆಯ ಗುಣಗಳನ್ನು ಉಳಿಸಿಕೊಂಡು ದುರ್ಗುಣಗಳನ್ನು ದೂರೀಕರಿಸಬೇಕು ಎಂದರು.

ಬುದ್ಧಿ ಹಾಗೂ ಮನಸ್ಸು ಸರಿಯಾಗಿದ್ದರೆ ವ್ಯಕ್ತಿಯೊಬ್ಬ ಒಳ್ಳೆಯದನ್ನೇ ಗುರುತಿಸುತ್ತಾನೆ. ಕೆಟ್ಟದ್ದರೆಡೆಗೆ ಗಮನ ಹರಿಸುವುದೇ ಇಲ್ಲ. ಆದರೆ ಎಲ್ಲೆಡೆಯಲ್ಲೂ ಒಳ್ಳೆಯದನ್ನು ಮಾತ್ರ ಗುರುತಿಸಿ ಕೆಟ್ಟದ್ದರೆಡೆಗೆ ಬುದ್ಧಿಪೂರ್ವಕವಾಗಿ ನಿರ್ಲಕ್ಷ್ಯವಹಿಸಬೇಕಾದರೆ ಅತ್ಯುತ್ತಮ ಮನಸ್ಸು ವ್ಯಕ್ತಿಯದ್ದಾಗಿರಬೇಕು. ಆದ್ದರಿಂದ ಎಲ್ಲದಕ್ಕೂ ಮೂಲ ನಮ್ಮ ಮನಸ್ಸೇ ಆಗಿದೆ. ಅಂತೆಯೇ ಶರೀರವೆಂಬ ರಥಕ್ಕೆ ಬುದ್ಧಿಯೇ ಸಾರಥಿ. ಹಾಗಾಗಿ ಬುದ್ಧಿ ನಮ್ಮ ಹತೋಟಿಯಲ್ಲಿರಬೇಕು, ಆ ಬುದ್ಧಿಗೆ ಸರಿಯಾದ ಸಂಸ್ಕಾರ ಬೇಕು. ಈ ವಿಚಾರಗಳನ್ನು ಉಪನಿಷತ್ ನಮಗೆ ಬೋಧಿಸುತ್ತದೆ ಎಂದರು
ಈ ಸಂದರ್ಭದಲ್ಲಿ ಗುರುವಂದನಾ ಸಮಿತಿ ಹಾಗೂ ದಶಾಂಬಿಕೋತ್ಸವ ಸಮಿತಿಯ ವತಿಯಿಂದ ಪ್ರತ್ಯೇಕವಾಗಿ ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳವರಿಗೆ ಫಲಸಮರ್ಪಣೆ, ಸ್ಮರಣಿಕೆ ಹಾಗು ಬಿನ್ನವತ್ತಳೆ ಸಮರ್ಪಿಸಿ, ಅಭಿವಂದಿಸಲಾಯಿತು. ದಶಾಂಬಿಕೋತ್ಸವ ಪ್ರಯುಕ್ತ ರೂಪುಗೊಳಿಸಲಾದ ಸ್ಮರಣ ಸಂಚಿಕೆ ‘ಭೂಮಿಕಾ’ವನ್ನು ಜಗದ್ಗುರುಗಳು ಅನಾವರಣಗೊಳಿಸಿ ಹರಸಿದರು. ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಆರಂಭದಿಂದಲೂ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಾಲತಿ ಶೆಟ್ಟಿ, ಅಂಬಿಕಾ ಪದವಿಪೂರ್ವ ವಿದ್ಯಾಲಯದ ಆರಂಭದಿಂದಲೂ ಉಪನ್ಯಾಸಕರಾಗಿರುವ ಪ್ರದೀಪ್ ಕೆ.ವೈ, ದಿನೇಶ್ ಕುಮಾರ್, ಶೈನಿ, ಪುಷ್ಪಲತಾ, ಜಯಂತಿ ಹಾಗೂ ಸಂಸ್ಥೆಯ ಉದ್ಯೋಗಿ ರವಿಚಂದ್ರ ಅವರನ್ನು ಆಡಳಿತ ಮಂಡಳಿ ವತಿಯಿಂದ ಗುರುಗಳ ಸಮ್ಮುಖದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.

ದಶಾಂಬಿಕೋತ್ಸವ ಸಮಿತಿಯ ಅಧ್ಯಕ್ಷ ಮಹೇಶ್ ಕಜೆ ಹತ್ತನೆಯ ವರ್ಷದ ನೆಲೆಯಲ್ಲಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾದ ವಿವಿಧ ಕಾರ್ಯಕ್ರಮಗಳ ಬಗೆಗೆ ಬೆಳಕು ಚೆಲ್ಲಿದರು. ದಶಾಂಬಿಕೋತ್ಸವದ ನೆಲೆಯಲ್ಲಿ ಹೆತ್ತವರೆಲ್ಲರೂ ಸೇರಿ ಸಂಸ್ಥೆಗಾಗಿ ಒಟ್ಟು ಸೇರಿಸಿದ ದತ್ತಿನಿಧಿಯನ್ನು ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಅವರಿಗೆ ಹಸ್ತಾಂತರಿಸಲಾಯಿತು.
ಅಂಬಿಕಾ ವಿದ್ಯಾಲಯ ಬೆಳೆದು ಬಂದ ಹಾದಿ, ಶೃಂಗೇರಿ ಜಗದ್ಗುರುಗಳ ಕೃಪಾಶೀರ್ವಾದಗಳ ಬಗೆಗೆ ಅಂಬಿಕಾ ವಿದ್ಯಾಲಯದ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ವಿಸ್ತರಿಸಿ ಹೇಳಿದರು. ಅಂತೆಯೇ ಸಂಸ್ಥೆಯ ಕುರಿತಾಗಿ ಸಿದ್ಧಪಡಿಸಲಾದ ವೀಡಿಯೋ ಚಿತ್ರಿಕೆಯನ್ನು ಪ್ರದರ್ಶಿಸಲಾಯಿತು.

ಅಂಬಿಕಾ ಮಹಾವಿದ್ಯಾಲಯದ ತತ್ತ÷್ವಶಾಸ್ತç ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ ಅಭಿವಂದನಾ ನುಡಿಗಳನ್ನಾಡಿ, ಬಿನ್ನವತ್ತಳೆ ವಾಚಿಸಿದರು. ಗುರುವಂದನಾ ಸಮಿತಿ ಅಧ್ಯಕ್ಷ ಶಶಾಂಕ್ ಕೊಟೇಚಾ ಸ್ವಾಗತಿಸಿದರು. ಕಾರ್ಯದರ್ಶಿ ಬಿ. ಐತ್ತಪ್ಪ ನಾಯ್ಕ್ ವಂದಿಸಿದರು. ಉಪನ್ಯಾಸಕ ಆದರ್ಶ ಗೋಖಲೆ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿ ಶ್ರೀಕೃಷ್ಣ ನಟ್ಟೋಜ ಶಂಖನಾದಗೈದರು. ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳು ಶಂಕರಾಚಾರ್ಯ ವಿರಚಿತ ಪ್ರಾತಃಸ್ಮರಾಮಿ ಶ್ಲೋಕವನ್ನು ಪ್ರಸ್ತುತಪಡಿಸಿದರು.
ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳಿಂದ ವೇದಘೋಷ ನಡೆಯಿತು. ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ಸಭಾಕಾರ್ಯಕ್ರಮದ ಬಳಿಕ ಬಪ್ಪಳಿಗೆ ಹಾಗೂ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳು ಹಾಗೂ ಅಂಬಿಕಾ ಮಹಾವಿದ್ಯಾಲಯದ ವತಿಯಿಂದ ಜಗದ್ಗುರುಗಳಿಗೆ ಫಲಸಮರ್ಪಣೆ ನಡೆಯಿತು. ಬಳಿಕ ಸಮಾಜದ ವಿವಿಧ ಸಮುದಾಯಗಳ ವತಿಯಿಂದ ಫಲಸಮರ್ಪಣೆ ವಸ್ತç ಸಮರ್ಪಣೆ ನಡೆಯಿತು. ಸಭಾಕಾರ್ಯಕ್ರಮದ ಪೂರ್ವದಲ್ಲಿ ಜಗದ್ಗುರುಗಳಿಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು.
ಸರಸ್ವತೀ ಹೋಮ: ಗುರುವಾರ ಬೆಳಗ್ಗೆ 6 ಗಂಟೆಯಿಂದ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ಸರಸ್ವತೀ ಹೋಮವನ್ನು ವೇ.ಮೂ.ಪರಕ್ಕಜೆ ಅನಂತನಾರಾಯಣ ಭಟ್ಟರ ನೇತೃತ್ವದಲ್ಲಿ ನಡೆಸಲಾಯಿತು. ಪೂರ್ಣಾಹುತಿಯ ಸಂದರ್ಭದಲ್ಲಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ದಿವ್ಯಸಾನ್ನಿಧ್ಯವನ್ನೊದಗಿಸಿ ಹರಸಿದರು.
ಜಗದ್ಗುರುಗಳ ಆಗಮನ ಹಾಗೂ ಶ್ರೀ ಚಂದ್ರಮೌಳೀಶ್ವರ ಪೂಜೆ:
ಬುಧವಾರ ಇಳಿಸಂಜೆ ಸುಮಾರು 7.15ರ ಹೊತ್ತಿಗೆ ಪೋಳ್ಯದ ಬಳಿ ಜಗದ್ಗುರುಗಳಿಗೆ ಶ್ರೀಕೃಷ್ಣ ನಟ್ಟೋಜ ಅವರು ಫಲಸಮರ್ಪಿಸಿ ಬರಮಾಡಿಕೊಂಡರು. ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದ ಬಳಿ ಪೂರ್ಣಕುಂಭ ಸ್ವಾಗತ ಹಾಗೂ ಫಲ ಸಮರ್ಪಣೆ ನಡೆಯಿತು. ತದನಂತರ ಜಗದ್ಗುರುಗಳಿಂದ ಶ್ರೀ ಚಂದ್ರಮೌಳೀಶ್ವರ ಪೂಜೆ ನೆರವೇರಿತು. ಈ ಎಲ್ಲಾ ಸಂದರ್ಭಗಳಲ್ಲೂ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯರು, ವಿವಿಧ ಅಂಬಿಕಾ ವಿದ್ಯಾಸಂಸ್ಥೆಗಳ ಪ್ರಾಚಾರ್ಯರು, ಬೋಧಕ-ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು, ಗುರುವಂದನಾ ಸಮಿತಿ ಸಲಹೆಗಾರರಾದ ಎನ್.ಕೆ.ಜಗನ್ನಿವಾಸ ರಾವ್, ಮುಳಿಯ ಕೇಶವ ಪ್ರಸಾದ್, ಅಧ್ಯಕ್ಷ ಶಶಾಂಕ್ ಕೊಟೇಚಾ, ಪ್ರಧಾನ ಕಾರ್ಯದರ್ಶಿ ಐತ್ತಪ್ಪ ನಾಯ್ಕ್, ಖಜಾಂಜಿ ಸತೀಶ್ ರಾವ್, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಬೋರ್ಕರ್ ದಶಾಂಬಿಕೋತ್ಸವ ಸಮಿತಿ ಅಧ್ಯಕ್ಷ ಮಹೇಶ್ ಕಜೆ, ಎರಡೂ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಸಮಿತಿ ಪದಾಧಿಕಾರಿಗಳು, ಅಂಬಿಕಾ ವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸೀಮಾನಾಗರಾಜ್, ಸಂಸ್ಥೆಯ ಪ್ರಾಂಶುಪಾಲೆ ಮಾಲತಿ ಡಿ ಮತ್ತಿತರರು ಹಾಜರಿದ್ದರು.
ಶ್ರೀರಾಮ ಜನ್ಮಭೂಮಿಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಸಂದರ್ಭದಲ್ಲಿ ಶೃಂಗೇರಿ ಜಗದ್ಗುರುಗಳ ಸೂಚನೆಯಂತೆ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿAದ ಸುಮಾರು 75 ಲಕ್ಷದಷ್ಟು ರಾಮ ತಾರಕ ಜಪ ಮಹಾಯಜ್ಞವನ್ನು ಕೈಗೊಳ್ಳಲಾಗಿತ್ತು. ಸಂಸ್ಥೆಯ ವಿದ್ಯಾರ್ಥಿಗಳು ನೂರಾರು ದಿನಗಳ ಕಾಲ ಶ್ರೀ ರಾಮ ಜಯರಾಮ ಜಯಜಯರಾಮ ಮಂತ್ರವನ್ನು ಪಠಿಸಿದ್ದರು. ಈ ನೆಲೆಯಲ್ಲಿ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳವರಿಗೆ ಅಂಬಿಕಾ ವಿದ್ಯಾಲಯದ ದಶಮಾನೋತ್ಸವದ ಪ್ರಯುಕ್ತ ಶ್ರೀರಾಮ ಮಂದಿರದ ಸ್ವರ್ಣ ಮಾದರಿಯನ್ನು ಸಮರ್ಪಿಸಲಾಯಿತು.
Uncategorized
Philomena-ಸಂತ ಫಿಲೋಮಿನಾ ಪ. ಪೂ ಕಾಲೇಜಿಗೆ ‘ಅಂಬಿಯೋರ- 2026’; ಅಂತರ್ ಕಾಲೇಜು ಮಟ್ಟದ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿ
ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜು ಪುತ್ತೂರು ಇದರ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಅ 7 ರಂದು ನಡೆದ ‘ಅಂಬಿಯೋರ- 2026’ ಅಂತರ್ ಕಾಲೇಜು ಮಟ್ಟದ ವಿವಿಧ ಸ್ಪರ್ಧೆಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.
ಪುತ್ತೂರು: ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜು ಪುತ್ತೂರು ಇದರ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಅ 7 ರಂದು ನಡೆದ ‘ಅಂಬಿಯೋರ- 2026’ ಅಂತರ್ ಕಾಲೇಜು ಮಟ್ಟದ ವಿವಿಧ ಸ್ಪರ್ಧೆಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.
ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಸ್ವಿನಿಕಾ ವಿಯೋಲಾ ಕ್ರಾಸ್ತಾ ಹಾಗೂ ಧ್ಯಾನ್ ಬಿ ಪ್ರಥಮ, ಪ್ರಾಡಕ್ಟ್ ಇನ್ನೊವೇಟಿವ್ ಚಾಲೆಂಜ್ ಸ್ಪರ್ಧೆಯಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಶಿವಾನಿ ಹಾಗೂ ಗಾನವಿ ಪ್ರಥಮ, ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಅದ್ವಿತಿ ಜಿ ಹಾಗೂ ಎ ಜಿ ಕೃತಿಕಾ ಪ್ರಥಮ ಮತ್ತು ದ್ವಿತೀಯ ವಾಣಿಜ್ಯ ವಿಭಾಗದ ವೇದಿತಾ ಕೆ ಮತ್ತು ತನುಶ್ರೀ ಬಿ ದ್ವಿತೀಯ, ಬಿಸ್ನೆಸ್ ಮಾಡೆಲ್ ಸ್ಪರ್ಧೆಯಲ್ಲಿ ಹೆಫ್ಜಿಬಾ ಎಂ ರಿನ್ಸಾನ್ ಹಾಗೂ ಪ್ರೀತಾ ಎ ದ್ವಿತೀಯ, ಬೆಸ್ಟ್ ಔಟ್ ಆಫ್ ವೇಸ್ಟ್ ಸ್ಪರ್ಧೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಸಜ್ನಾಜ್ ಮತ್ತು ಹಲೀಮತ್ ಸೌಧ ದ್ವಿತೀಯ ಹಾಗೂ ಮಿನಿ ಮಿಲಿಟಿಯ ಸ್ಪರ್ಧೆಯಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಶಹಾದ್ ಅಜಾರ್ ಮತ್ತು ಮೊಹಮ್ಮದ್ ರಫಾಜ್ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪ್ರದರ್ಶನ ಕಲಾ ಸಂಘದ ಸುಮನಾ ರಾವ್, ಉಷಾ ರೈ, ಅವಿನಾ ಮಾಡ್ತಾ, ಡಾ. ಲತಾ ಹಾಗೂ ಸಂದೇಶ್ ಜಾನ್ ಲೋಬೋ ಉಪಸ್ಥಿತರಿದ್ದರು.
Uncategorized
Vivekananda-ವಿವೇಕಾನಂದ ಪದವಿ ಕಾಲೇಜಿನಲ್ಲಿ ‘ಸ್ವಾದಸಂಭ್ರಮ-2026’ ಆಹಾರ ಮೇಳ
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ, ಇಲ್ಲಿನ ವ್ಯವಹಾರ ಅಧ್ಯಯನ ವಿಭಾಗ ಮತ್ತು ಮ್ಯಾನೇಜ್ಮೆಂಟ್ ಅಸೋಸಿಯೇಷನ್ ವತಿಯಿಂದ ನಡೆದ ‘ಸ್ವಾದಸಂಭ್ರಮ ಆಹಾರ ಮೇಳ-2026’ ಕಾರ್ಯಕ್ರಮವನ್ನು ಉದ್ಘಾಟಿಸಿ ಪುತ್ತೂರಿನ ಪ್ರಾರ್ಥನಾ ಗಾರ್ಡನ್ಸ್ನ ಮಾಲಕ ಧ್ರುವ ಪ್ರಭು ಮಾತನಾಡಿದರು.

ಪುತ್ತೂರು: ಆಹಾರ ಮೇಳ ಕೇವಲ ಆಹಾರ ಮಾರಾಟದ ಬಗ್ಗೆ ಮಾತ್ರವಲ್ಲ. ಇಲ್ಲಿ ವಿದ್ಯಾರ್ಥಿಗಳು ಉದ್ಯಮ ನಡೆಸುವಾಗ ಇರಬೇಕಾದ ಕೌಶಲ್ಯಗಳು, ಗ್ರಾಹಕರ ಮನಸ್ಥಿತಿ ಮತ್ತು ಅವರೊಂದಿಗೆ ವ್ಯವಹರಿಸಬೇಕಾದ ರೀತಿಯನ್ನು ಮೇಳಗಳಿಂದ ತಿಳಿದುಕೊಳ್ಳಬಹುದು. ಇದರ ನಡುವೆ ಬರುವ ಸೋಲು-ಗೆಲುವುಗಳನ್ನು ವಿದ್ಯಾರ್ಥಿಗಳು ಸಮನಾಗಿ ಸ್ವೀಕರಿಸಬೇಕು ಎಂದು ಪುತ್ತೂರಿನ ಪ್ರಾರ್ಥನಾ ಗಾರ್ಡನ್ಸ್ನ ಮಾಲಕ ಧ್ರುವ ಪ್ರಭು ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ, ಇಲ್ಲಿನ ವ್ಯವಹಾರ ಅಧ್ಯಯನ ವಿಭಾಗ ಮತ್ತು ಮ್ಯಾನೇಜ್ಮೆಂಟ್ ಅಸೋಸಿಯೇಷನ್ ವತಿಯಿಂದ ನಡೆದ ‘ಸ್ವಾದಸಂಭ್ರಮ ಆಹಾರ ಮೇಳ-2026’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಗೌರವ ಅತಿಥಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ. ಎನ್. ಮಾತನಾಡಿ, ಉದ್ದಿಮೆಯ ಬಗ್ಗೆ ಸೈದ್ಧಾಂತಿಕವಾಗಿ ಕಲಿತ ವಿಚಾರಗಳು ಇಲ್ಲಿ ಪ್ರಾಯೋಗಿಕವಾಗಿ ನಡೆಯುತ್ತಿದೆ. ಒಂದು ಉದ್ದಿಮೆಯನ್ನು ನಡೆಸಬೇಕಾದರೆ ಅದರಲ್ಲಿರುವಂತಹ ಕಷ್ಟ-ಸುಖಗಳನ್ನು ಅರಿಯಲು ಇಂತಹ ಮೇಳಗಳು ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ್ ಭಟ್ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ರೇಖಾ ಪಿ. ಉಪಸ್ಥಿತರಿದ್ದರು.
ಸ್ವಾದಸಂಭ್ರಮ ಆಹಾರ ಮೇಳ-2026ರ ವಿಜೇತರು:
ವ್ಯವಹಾರ ಅಧ್ಯಯನ ವಿಭಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ಒಟ್ಟು 14 ತಂಡಗಳು ಭಾಗವಹಿಸಿದ್ದು ಫ್ರೋಜನ್ ಡಿಲೈಟ್ ತಂಡ ಪ್ರಥಮ ಸ್ಥಾನ, ಬೈಟ್ ಬೈ ಬೈಟ್ ದ್ವಿತೀಯ ಸ್ಥಾನ ಪಡೆದುಕೊಂಡಿತು. ಉತ್ತಮ ನೈರ್ಮಲ್ಯ ಕಾಪಾಡುವಿಕೆ ವಿಭಾಗದಲ್ಲಿ ಸ್ವದೇಶೀ ಸ್ವಾದ್ ತಂಡ, ಗ್ರಾಹಕರೊಂದಿಗೆ ಉತ್ತಮ ಸಂವಹನ ವಿಭಾಗದಲ್ಲಿ ಫ್ಲೇವರ್ ತಂಡ, ಉತ್ತಮ ಪೋಸ್ಟರ್ ವಿಭಾಗದಲ್ಲಿ ಫ್ಲೇವರ್ ಹಂಟರ್ಸ್ ತಂಡ ಹಾಗೂ ಉತ್ತಮ ರೀಲ್ಸ್ ವಿಭಾಗದಲ್ಲಿ ಸ್ವದ್ಘಾಮ್ ತಂಡ ಪ್ರಶಸ್ತಿ ಪಡೆದಿಕೊಂಡಿದೆ.
ಕಾರ್ಯಕ್ರಮವನ್ನು ತೃತೀಯ ಕಲಾ ವಿಭಾಗದ ಕೆ. ಕೃತಿಕಾ ನಿರ್ವಹಿಸಿದರು.
Uncategorized
Ashok Rai-ಬದ್ಯಾರ್‌ನಲ್ಲಿ 50 ವರ್ಷದ ರಸ್ತೆ ವಿವಾದಕ್ಕೆ ತೆರೆ ಎಳೆದ ಶಾಸಕ ಅಶೋಕ್ ರೈ
ಕಳೆದ ನಾಲ್ಕು ತಿಂಗಳ ಹಿಂದೆ ಬದ್ಯಾರ್ ಗೆ ಶಾಸಕ ಅಶೋಕ್ ರೈ ಭೇಟಿ ನೀಡಿದ್ದರು. ಅಲ್ಲಿನ ಮನೆಗಳಿಗೆ ರಸ್ತೆಯಿಲ್ಲದೇ ಇರುವುದು ಮತ್ತು ರಸ್ತೆಯ ಅಗತ್ಯತೆಯನ್ನು ಮನಗಂಡಿದ್ದರು. ಭೇಟಿ ನೀಡಿದ ಮಾರನೇ ದಿನ ಖಾಸಗಿ ಜಾಗದ ಮಾಲಕರನ್ನು ಕರೆಸಿ ಮಾತುಕತೆ ನಡೆಸಿದರು. ಒಂದು ಹಂತದಲ್ಲಿ ಮಾತುಕತೆ ಸಫಲವಾದರೂ ರಸ್ತೆ ನಿರ್ಮಾಣ ಕಾಮಗಾರಿ ನಡೆದಿರಲಿಲ್ಲ. ಬಳಿಕ ಎರಡನೇ ಸುತ್ತಿನ ಮಾತುಕತೆಯ ವೇಳೆ ಜಾಗದ ಮಾಲಿಕರು ರಸ್ತೆ ನಿರ್ಮಾಣಕ್ಕೆ ಒಪ್ಪಿಗೆಯನ್ನು ನೀಡಿದ್ದರು. ಒಪ್ಪಿಗೆ ಸೂಚಿತವಾದ ಬಳಿಕ ಅನುದಾನವನ್ನು ಇಟ್ಟು ಅಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಕಳೆದ ವಾರ ಮಾಡಿ ಮುಗಿಸಲಾಗಿದೆ.

ಪುತ್ತೂರು: ಈ ಭಾಗದ ಜನರು ರಸ್ತೆಯಿಲ್ಲದೆ ಸುಮಾರು 50 ವರ್ಷಗಳಿಂದ ತೊಂದರೆಯಲ್ಲಿದ್ದರು, ಇಲ್ಲಿ ಸುಮಾರು ಹತ್ತು ಮನೆಗಳಿದೆ, ಮನೆ ಕಟ್ಟುವಾಗ ಇವರೆಲ್ಲಾ ಕಲ್ಲನ್ನು ಕಾಲು ದಾರಿಯ ಮೂಲಕ ಹೊತ್ತುಕೊಂಡೇ ಹೋಗಿದ್ದು, ವಾಹನ ಹತ್ತ ಬೇಕಾದರೆ ಒಂದಷ್ಟು ದೂರ ನಡೆದುಕೊಂಡೇ ಬರಬೇಕಾದ ಸ್ಥಿತಿ. ಇದು ಪೆರುವಾಯಿ ಗ್ರಾಮದ ಬದ್ಯಾರಿನ ಕಥೆ.
ಇವರು ರಸ್ತೆಗಾಗಿ ಮನವಿ ಹಾಗೂ ಹೋರಾಟವನ್ನು ಮಾಡುತ್ತಲೇ ಇದ್ದರು. ಆದರೆ ರಸ್ತೆ ನಿರ್ಮಾಣವಾಗುವಲ್ಲಿ ಖಾಸಗಿ ಜಾಗದ ತಕರಾರಿತ್ತು. ಈ ವಿವಾದವನ್ನು ಮಾತುಕತೆ ಮೂಲಕ ಇತ್ಯರ್ಥಪಡಿಸಲು ಅನೇಕ ಜನಪ್ರತಿನಿಧಿಗಳು ಪ್ರಯತ್ನ ಮಾಡಿದ್ದರು ಆದರೆ ಯಾರಿದಂಲೂ ಸಾಧ್ಯವಾಗಿಲ್ಲ, ಕೆಲವರು ಭರವಸೆಯನ್ನು ಮಾತ್ರ ಕೊಟ್ಟಿದ್ದರು.
ಶಾಸಕ ಅಶೋಕ್ ರೈ ಭೇಟಿ
ಕಳೆದ ನಾಲ್ಕು ತಿಂಗಳ ಹಿಂದೆ ಬದ್ಯಾರ್ ಗೆ ಶಾಸಕ ಅಶೋಕ್ ರೈ ಭೇಟಿ ನೀಡಿದ್ದರು. ಅಲ್ಲಿನ ಮನೆಗಳಿಗೆ ರಸ್ತೆಯಿಲ್ಲದೇ ಇರುವುದು ಮತ್ತು ರಸ್ತೆಯ ಅಗತ್ಯತೆಯನ್ನು ಮನಗಂಡಿದ್ದರು. ಭೇಟಿ ನೀಡಿದ ಮಾರನೇ ದಿನ ಖಾಸಗಿ ಜಾಗದ ಮಾಲಕರನ್ನು ಕರೆಸಿ ಮಾತುಕತೆ ನಡೆಸಿದರು. ಒಂದು ಹಂತದಲ್ಲಿ ಮಾತುಕತೆ ಸಫಲವಾದರೂ ರಸ್ತೆ ನಿರ್ಮಾಣ ಕಾಮಗಾರಿ ನಡೆದಿರಲಿಲ್ಲ. ಬಳಿಕ ಎರಡನೇ ಸುತ್ತಿನ ಮಾತುಕತೆಯ ವೇಳೆ ಜಾಗದ ಮಾಲಿಕರು ರಸ್ತೆ ನಿರ್ಮಾಣಕ್ಕೆ ಒಪ್ಪಿಗೆಯನ್ನು ನೀಡಿದ್ದರು. ಒಪ್ಪಿಗೆ ಸೂಚಿತವಾದ ಬಳಿಕ ಅನುದಾನವನ್ನು ಇಟ್ಟು ಅಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಕಳೆದ ವಾರ ಮಾಡಿ ಮುಗಿಸಲಾಗಿದೆ.
ಶಾಸಕರಿಗೆ ಸನ್ಮಾನ
ವಿವಾದ ಇತ್ಯರ್ಥಪಡಿಸಿ ೫೦ ವರ್ಷಗಳ ಹಿಂದಿನ ಬಹುದೊಡ್ಡ ಬೇಡಿಕೆಯನ್ನು ಈಡೇರಿಸಿದ ಶಾಸಕರಿಗೆ ಬದ್ಯಾರು ರಸ್ತೆ ಫಲಾನುಭವಿಗಳು ಸನ್ಮಾನವನ್ನು ಮಾಡಿದ್ದಾರೆ.
ಬದ್ಯಾರ್‌ನಿವಾಸಿಗಳು ತಮ್ಮ ಕಷ್ಟವನ್ನು ನನ್ನಲ್ಲಿ ಹೇಳಿಕೊಂಡಿದ್ದರು. ರಸ್ತೆ ಇಲ್ಲದೆ ಹತ್ತು ಕುಟುಂಬಗಳು ಸಂಕಷ್ಟದಲ್ಲಿತ್ತು ಮಾತ್ರವಲ್ಲದೆ ಪಕ್ಕದಲ್ಲೇ ಒಂದು ದೇವಸ್ಥಾನದ ಕಾಮಗಾರಿಯೂ ಅರ್ಧಕ್ಕೆ ನಿಂತಿತ್ತು. ಜಾಗ ಖಾಸಗಿ ವ್ಯಕ್ತಿಗೆ ಸೇರಿದ್ದರಿಂದ ರಸ್ತೆ ನಿರ್ಮಾಣಕ್ಕೆ ತೊಂದರೆಯಾಗಿತ್ತು. ಜಾಗದ ಮಾಲಿಕರನ್ನು ಕರೆಸಿ ಮಾತುಕತೆ ನಡೆಸಿದಾಗ ಅವರು ಮಾನವೀಯ ನೆಲೆಯಲ್ಲಿ ಒಪ್ಪಿಕೊಂಡು ರಸ್ತೆ ನಿರ್ಮಾಣಕ್ಕೆ ಅನುವು ಮಾಡಿಕೊಡುವ ಮೂಲಕ ದೊಡ್ಡ ಪುಣ್ಯದ ಕೆಲಸವನ್ನು ಮಾಡಿದ್ದಾರೆ. ಬೇಡಿಕೆ ಈಡೇರಿಸಿದ್ದೇನೆ, ಅನುದಾನವನ್ನು ನೀಡಿದ್ದೇನೆ ಮುಂದೆ ಅವರೆಲ್ಲರೂ ನನ್ನ ಜೊತೆ ಇರುತ್ತಾರೆ ಎಂಬ ನಂಬಿಕೆಯೂ ಇದೆ
ಅಶೋಕ್ ರೈ, ಶಾಸಕರು ಪುತ್ತೂರು
ರಸ್ತೆ ಸಂಪರ್ಕ ಇಲ್ಲದೆ 50 ವರ್ಷದಿಂದ ಪರದಾಡುತ್ತಿದ್ದೇವೆ, ನಾವು ಬಿಜೆಪಿ ಶಾಸಕರಿಗೆ, ಮುಖಂಡರಿಗಳಿಗೆ ಮನವಿ ಮಾಡಿದ್ದೆವು, ನಾವು ಬಿಜೆಪಿ ಕಾರ್ಯಕರ್ತರಾದರೂ ನಮ್ಮ ಬೇಡಿಕೆಯನ್ನು ಅವರು ಈಡೇರಿಸಿರಲಿಲ್ಲ. ನಾವು ಶಾಸಕ ಅಶೋಕ್ ರೈ ಕಚೇರಿಗೆ ಈ ವಿಚಾರವನ್ನು ತಿಳಿಸಲು ಹೋದಾಗ ಕೆಲವರು ನಮ್ಮನ್ನು ಛೇಡಿಸಿದ್ದರು. ನೀವು ಬಿಜೆಪಿ ಕಾರ್ಯಕರ್ತರಾದ ಕಾರಣ ನಿಮ್ಮ ಕೆಲಸ ಶಾಸಕರು ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ ಶಾಸಕರು ಪಕ್ಷ ರಾಜಕೀಯ ಮಾಡದೆ ನಮ್ಮ ಬೇಡಿಕೆಯನ್ನು ಈಡೇರಿಸಿದ್ದಾರೆ, ನಾವು ಮುಂದೆ ಅಶೋಕ್ ರೈ ಜೊತೆ ಇರುತ್ತೇವೆ, ಶಾಸಕರು ಮಾಡಿದ ಈ ಉಪಕಾರವನ್ನು ಮರೆಯುವುದೇ ಇಲ್ಲ.
ಜಯರಾಮ, ಬದ್ಯಾರ್ ಫಲಾನುಭವಿ
ಯಾವ ಜನಪ್ರತಿನಿಧಿಯಿಂದಲೂ ಮಾಡಲಾಗದ ಕೆಲಸವನ್ನು ಶಾಸಕ ಅಶೋಕ್ ರೈ ಮಾಡಿದ್ದಾರೆ. ಪಕ್ಷ ಬೇದವಿಲ್ಲದೆ ಬೇಡಿಕೆಯನ್ನು ಈಡೇರಿಸಿದ್ದಾರೆ, ಇವರು ಮುಂದೆಯೂ ಶಾಸಕರಾಗಿ ಆಯ್ಕೆಯಾಗುವಲ್ಲಿ ನಾವು ಖಂಡಿತಾ ಕೆಲಸ ಮಾಡುತ್ತೇವೆ.
ಶೀಲಾ ರೈ , ಫಲಾನುಭವಿ
-
ಬಿಗ್ ನ್ಯೂಸ್24 hours agoSting Operation | ಸ್ಟಿಂಗ್ ಆಪರೇಷನ್ ಚರ್ಚೆ: ಪುತ್ತೂರಿಗೂ ವ್ಯಾಪಿಸಿದೆಯೇ ರಾಜಕೀಯದ ‘ಸ್ಟಿಂಗ್’ ಸದ್ದು..?
-
ಬಿಗ್ ನ್ಯೂಸ್23 hours agoSDPI-ಮಕ್ಕಳ ಆಟದ ಉಪಕರಣಗಳೇ ಹಾಳು: ಕಾರಂತರ ಬಾಲವನದ ದುಸ್ಥಿತಿಗೆ ಎಸ್ಡಿಪಿಐ ಅಸಮಾಧಾನ
-
ಬಿಗ್ ನ್ಯೂಸ್22 hours agoReservation-ದ.ಕ. ಜಿ.ಪಂ., ತಾ.ಪಂ. ಮೀಸಲಾತಿ ಪ್ರಕಟ: ಮಹಿಳೆಯರಿಗೆ ತಾ.ಪಂ. 65, ಜಿ.ಪಂ. 18 ಸ್ಥಾನ ಮೀಸಲು
-
ಅಪರಾಧ22 hours agoDigital Arrest-‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ 75 ವರ್ಷದ ಮಹಿಳೆಗೆ ₹2 ಕೋಟಿ ವಂಚನೆ
-
ಅಂತರ ರಾಜ್ಯ22 hours agoNana Patekar-ಕಾರ್ಗಿಲ್ ಯುದ್ಧದ ವೇಳೆ ಸೈನಿಕನಾಗಿಯೂ ದೇಶ ಸೇವೆ ಮಾಡಿದ್ದ ನಾನಾ ಪಾಟೇಕರ್
-
ಅಂತರ ರಾಜ್ಯ21 hours agoDK Shivakumar-‘ಸ್ಟಿಂಗ್ ಆಪರೇಷನ್’ ಬಗ್ಗೆ ಎಲ್ಲಾ ಮಾಹಿತಿ ಇದೆ..! ಚರ್ಚೆಗೆಂದು ಬಂದು ಏನೇನು ಮಾಡಿದ್ದಾರೆ ಎಂದು ಗೊತ್ತಿದೆ : ಇದರ ಪಿತಾಮಹ ಯಾರೆಂದೂ ತಿಳಿದಿದೆ : ಡಿಕೆಶಿ ಸ್ಫೋಟಕ ಹೇಳಿಕೆ
-
ಅಂತರ ರಾಜ್ಯ23 hours agoCEC Jnanesh Kumar-ವಿಪಕ್ಷಗಳ ಪ್ರತಿಭಟನೆ ತೀವ್ರ: ಸಿಇಸಿ ಜ್ಞಾನೇಶ್ ಕುಮಾರ್ ನಿವಾಸಕ್ಕೆ ತೀವ್ರ ಭದ್ರತೆ
-
ಅಪರಾಧ4 hours agoUdupi-ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ಬೆದರಿಕೆ ಕರೆ : ಉಡುಪಿ, ಮೂಲ್ಕಿಯಲ್ಲಿ 4 ಪ್ರಕರಣ ದಾಖಲು


















