Connect with us

ಪುತ್ತೂರು

 ಪುತ್ತೂರಿನ  ರಿಫ್ರೆಶ್ ಕೆಫೆಯಲ್ಲಿ 3 ದಿನದ ದೋಸೆ ಮೇಳಕ್ಕೆ ಚಾಲನೆ – ವೆರೈಟಿ ದೋಸೆಗಳ ಸವಿಯಲು ಗ್ರಾಹಕರ ಮಹಾಪೂರ | ಇಂದು ಮತ್ತೆ ನಾಳೆ ಏನಿರಲಿದೆ ವಿಶೇಷ – ಇಲ್ಲಿದೆ ವಿವರ

Published

on



Ad Widget

Ad Widget

Ad Widget

Ad Widget

ಪುತ್ತೂರಿನ ತಿಂಡಿ ತಿನಸು ಪ್ರಿಯರ ನೆಚ್ಚಿನ ತಾಣ ರಿಫ್ರೆಶ್ ಕೆಫೆಯಲ್ಲಿ ದೋಸೆ ಮೇಳವು ಫೆ.9ರಂದು ಉದ್ಘಾಟನೆಗೊಂಡಿತು. ಕೆ.ವಿ ಶೆಣೈ ಪೆಟ್ರೋಲ್ ಪಂಪ್‌ನ ಮಾಲಕ ವಿಶ್ವಾಸ್ ಶೆಣೈ, ನಿರೂಪಕರಾದ ವಿ.ಜೆ ವಿಖ್ಯಾತ್ ಮತ್ತು ಜೆಸಿಐ  ಪುತ್ತೂರಿನ ಅಧ್ಯಕ್ಷರಾದ ಮೋಹನ್‌ರವರು ದೋಸೆ ಮೇಳಕ್ಕೆ ಚಾಲನೆ ನೀಡಿದರು. ಬೊಳುವಾರು ಪ್ರಗತಿ ಆಸ್ಪತ್ರೆ ಬಳಿಯಿರುವ ಈ ಕೆಫೆಯಲ್ಲಿ 3 ದಿನಗಳ ಕಾಲ ದೋಸೆ ಮೇಳ ನಡೆಯಲಿದೆ. 50ಕ್ಕೂ ಅಧಿಕ  ಬಗೆಯ ವಿಭಿನ್ನ ರುಚಿಯ ದೋಸೆಗಳು ಇಲ್ಲಿ ಗ್ರಾಹಕರಿಗೆ ದೊರಕಲಿದೆ.

Ad Widget

Ad Widget

Ad Widget

Ad Widget

 ಈ ಮೇಳಕ್ಕಾಗಿಯೇ  ರಿಫ್ರೆಶ್ ಕೆಫೆಯನ್ನು ವಿಶಿಷ್ಟವಾಗಿ ಸಜ್ಜುಗೊಳಿಸಲಾಗಿದ್ದು , ಪಾರ್ಕಿಂಗ್‌ ಹಾಗೂ ಸಿಟ್ಟಿಂಗ್‌ ಸೌಲಭ್ಯವನ್ನು ಮಾಡಲಾಗಿದೆ ಮೊದಲ ದಿನವೇ ನೂರಾರು ಗ್ರಾಹಕರು ಕೆಫೆಗೆ ಭೇಟಿ ದೋಸೆಯ ಸ್ವಾದವನ್ನು ಸವಿದರು. ಒಂದು ಸೂರಿನಡಿ ಎಲ್ಲ ಬಗೆಯ ದೋಸೆಗಳು ಸಿಕ್ಕಿದ್ದರಿಂದ ಗ್ರಾಹಕರ ಸಂತೋಷಕ್ಕೂ ಪಾರ ಇರಲಿಲ್ಲ . ಪುತ್ತೂರಿನ ಮಟ್ಟಿಗೆ ಇದು ವಿನೂತನ ಪ್ರಯೋಗವಾಗಿದ್ದು, ಗ್ರಾಹಕರಿಗೂ ಈ ಪ್ರಯತ್ನ ಖುಷಿ ಕೊಟ್ಟಿದೆ.

Ad Widget

Ad Widget

Ad Widget alt="Ad Widget"/>

Ad Widget

 ದೋಸೆ ಮೇಳದಲ್ಲಿ ಗ್ರಾಹಕರು ಇವರೆಗೆ ಸವಿಯದ ಹಲವು ಬಗೆಯ ದೋಸೆಗಳು ಇದ್ದು , ಇದರ ರುಚಿಗೆ ಮಾರು ಹೋಗಿ ಇದು ತಯಾರಿಕ ವಿಧಾನವನ್ನು ಕೂಡ ದೋಸೆ ಮೇಕರ್‌ ಗಳಿಂದ ತಿಳಿದುಕೊಂಡರು. . ಇಂತಹದೊಂದು ಅವಕಾಶವನ್ನು  ಆಯೋಜಕರು ಗ್ರಾಹಕರಿಗೆ ಒದಗಿಸಿದ್ದಾರೆ.

Ad Widget

Ad Widget <> Ad Widget

ಉದ್ಘಾಟನ ಸಮಾರಂಭದಲ್ಲಿ  ವಿವೇಕಾನಂದ ವಿದ್ಯಾವರ್ಧಕ ಸಂಘದ ಸತೀಶ್ ರಾವ್, ಕೃಷ್ಣ ಮೋಹನ್ ಪಿ.ಎಸ್, ವಿರೂಪಾಕ್ಷ ಮಚ್ಚಿಮಲೆ, ಇಂದುಶೇಖರ್, ಸುಹಾಸ್ ಮರಿಕೆ, ಸಂತೋಷ್ ಬೋನಂತಾಯ, ಮೈತ್ರಿ ಇಲೆಕ್ಟಿಕ್ ಕಂಪೆನಿಯ ರವಿನಾರಾಯಣ, ಮೋಹನ್ ಪಿಲಿಂಜ, ಜಗದೀಶ್ ನಾಯಕ್, ಶಿವಕುಮಾರ್ ಪಿ.ಬಿ, ಇಂಜಿನಿಯರ್ ಸತ್ಯನಾರಾಯಣ ಭಟ್, ರವಿಕೃಷ್ಣ ಕಲ್ಲಾಜೆ, ಸುರೇಶ್, ಶಿವರಂಜನ್, ಗಿರೀಶ್, ಉಮೇಶ್ ಗೌಡ, ವಿಜಯಶ್ರೀ ಸರ್ವಿಸಸ್‌ ಮಂಜುನಾಥ್ ಉಪಸ್ಥಿತರಿದ್ದರು.



Ad Widget

ದೋಸೆ ಮೇಳದಲ್ಲಿ ಏನೆಲ್ಲ ಇರಲಿದೆ

Ad Widget

Ad Widget

ಮೊದಲನೆಯ ದಿನ ಕ್ಯಾರೆಟ್ ದೋಸೆ, ಬೀಟ್ ರೋಟ್ ದೋಸೆ, ವೆಜಿಟೇಬಲ್ ದೋಸೆ, ಸ್ವಿಂಗ್ ದೋಸೆ, ಚೀನಿಕಾಯಿ ದೋಸೆ, ಟ್ರೈ ಕಲರ್ ದೋಸೆ, ಬಾಳೆಕಾಯಿ ದೋಸೆ,

ಎರಡನೆಯ ದಿನ ಫೆ. 10ರಂದು ಮೆಂತೆ ದೋಸೆ, ಪಾಲಕ್ ದೋಸೆ, ಪುದಿನ ದೋಸೆ, ಸಬ್ಬಸಿಗೆ ದೋಸೆ, ನುಗ್ಗೆ ದೋಸೆ, ಹಲಸಿನ ಹಣ್ಣಿನ ದೋಸೆ, ಬೊಂಡ ದೋಸೆ,

ಮೂರನೆಯ ದಿನ ಫೆ. 11ರಂದು ಸ್ವೀಟ್ ಕಾರ್ನ್ ದೋಸೆ, ಹೆಸರುಕಾಳು ದೋಸೆ, ಅರೆಕಾಳು ದೋಸೆ, ಮಡಿಕೆಕಾಳು ದೋಸೆ, ಟೊಮೆಟೊ ಆಮ್ಮೆಟ್, ಮ್ಯಾಂಗೋ ದೋಸೆ ಲಭ್ಯವಿರುತ್ತದೆ. ಅಲ್ಲದೇ ಪ್ರತಿದಿನ ಪೈನ್ ದೋಸೆ, ತುಪ್ಪ ದೋಸೆ, ಸಾದ ದೋಸೆ, ರವಾ ದೋಸೆ, ರವಾ ಆನಿಯನ್ ದೋಸೆ, ರವಾ ಮಸಾಲೆ ದೋಸೆ, ಮಸಾಲೆ ದೋಸೆ, ಚೀಸ್ ದೋಸೆ, ಮಕ್ರೂಮ್ ದೋಸೆ, ಪನೀರ್ ದೋಸೆ, ಮೈಸೂರು ಮಸಾಲೆ ದೋಸೆ, ಘೀ ರೋಸ್ಟ್, ಬೆಣ್ಣೆ ಮಸಾಲೆ ದೋಸೆ, ಕೆಂಪಕ್ಕಿ ನೀರು ದೋಸೆ, ಪೇಪರ್ ಮಸಾಲೆ ದೋಸೆ ದೊರೆಯುತ್ತದೆ.

Ad Widget
Click to comment

Leave a Reply

ಬಿಗ್ ನ್ಯೂಸ್

Kaavu-BIG BREAKING: ಕಾವು ಬಳಿ ಹೆದ್ದಾರಿಗೆ ಉರುಳಿದ ಮರಗಳು, ಹೈಟೆನ್ಷನ್ ವಿದ್ಯುತ್ ಕಂಬ : ಮಾಣಿ – ಮೈಸೂರು ಹೈವೆಯಲ್ಲಿ ವಾಹನ ಸಂಚಾರ ಸ್ಥಗಿತ

Published

on



Ad Widget

Ad Widget

Ad Widget

Ad Widget

ಭಾರೀ ಗಾಳಿ ಮಳೆಗೆ ಮಾಣಿ–ಮೈಸೂರು ಹೆದ್ದಾರಿಯ ಕಾವು ಬಳಿ ಮರ ಹಾಗೂ ಹೈಟೆನ್ಷನ್ ವಿದ್ಯುತ್ ಕಂಬ ರಸ್ತೆಗೆ ಉರುಳಿಬಿದ್ದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಸುಳ್ಯ, ಮಡಿಕೇರಿ ಹಾಗೂ ಮೈಸೂರು ಕಡೆಗೆ ತೆರಳುವ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.

Ad Widget

Ad Widget

Ad Widget

Ad Widget

ಪುತ್ತೂರು: ಭಾರೀ ಗಾಳಿ ಮಳೆಗೆ ಮಾಣಿ–ಮೈಸೂರು ಹೆದ್ದಾರಿಯ ಕಾವು ಬಳಿ ಮರ ಹಾಗೂ ಹೈಟೆನ್ಷನ್ ವಿದ್ಯುತ್ ಕಂಬ ರಸ್ತೆಗೆ ಉರುಳಿಬಿದ್ದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಸುಳ್ಯ, ಮಡಿಕೇರಿ ಹಾಗೂ ಮೈಸೂರು ಕಡೆಗೆ ತೆರಳುವ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಶುಕ್ರವಾರ (ಅ. 9) ಮಧ್ಯಾಹ್ನ ಸುಮಾರು 4 ಗಂಟೆಗೆ ಕಾವು ಪರಿಸರದಲ್ಲಿ ಭಾರೀ ಗಾಳಿ ಮಳೆಯಾಗಿದೆ. ಈ ವೇಳೆ ಮರ ಹಾಗೂ ವಿದ್ಯುತ್ ಕಂಬ ಹೆದ್ದಾರಿಗೆ ಅಡ್ಡಲಾಗಿ ಬಿದ್ದಿದ್ದು, ಮಡ್ಯಂಗಳ , ಮದ್ಲ ಎಂಬಲ್ಲಿ ಹಲವು ಮರಗಳು ಧರೆಗುರುಳಿವೆ. ಪೆರಿಗೇರಿ ರಸ್ತೆಯಲ್ಲೂ ಒಂದು ಮರ ಧರೆಗುರುಳಿದೆ ಜೊತೆಗೆ ವಿದ್ಯುತ್ ತಂತಿಗಳೂ ರಸ್ತೆಗೆ ಬಿದ್ದಿವೆ. ಇದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.

Ad Widget

Ad Widget <> Ad Widget

ಸ್ಥಳೀಯರ ನೆರವಿನೊಂದಿಗೆ ಮೆಸ್ಕಾಂ, ತಾಲೂಕು ಆಡಳಿತ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಮರ, ವಿದ್ಯುತ್ ಕಂಬ ಮತ್ತು ತಂತಿಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳದಲ್ಲಿ ಸಂಚಾರ ನಿಯಂತ್ರಿಸುತ್ತಿದ್ದಾರೆ.



Ad Widget

ತೆರವು ಕಾರ್ಯಾಚರಣೆಗೆ ಸುಮಾರು 3ರಿಂದ 4 ಗಂಟೆಗಳ ಕಾಲ ಬೇಕಾಗುವ ಸಾಧ್ಯತೆಯಿದ್ದು, ಪುತ್ತೂರಿನಿಂದ ಮೈಸೂರು ಕಡೆಗೆ ತೆರಳುವ ವಾಹನ ಸವಾರರು ಪರ್ಯಾಯ ಮಾರ್ಗ ಬಳಸುವಂತೆ ಪುತ್ತೂರು ಗ್ರಾಮಾಂತರ ಠಾಣೆಯ ಎಸ್ಐ ಸುಷ್ಮಾ ಭಂಡಾರಿ ತಿಳಿಸಿದ್ದಾರೆ.

Ad Widget

Ad Widget

ಪರ್ಯಾಯ ಮಾರ್ಗ: ಪುತ್ತೂರಿನಿಂದ ಬೆಳ್ಳಾರೆ ಮಾರ್ಗವಾಗಿ ಸುಳ್ಯ ತಲುಪಿ ಅಲ್ಲಿಂದ ಮೈಸೂರು ಕಡೆಗೆ ಪ್ರಯಾಣಿಸಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.

Ad Widget
Continue Reading

ಅಪರಾಧ

Puttur-ಪುತ್ತೂರು: ಅಕ್ರಮ ಗೋ ಸಾಗಾಟ ಪ್ರಕರಣ; ಪರಾರಿಯಾಗಿದ್ದ ಇಬ್ಬರು ವಶಕ್ಕೆ, ಆರೋಪಿ ಶಿವಪ್ರಸಾದ್ ಮನೆ ಮಹಜರು

Published

on



Ad Widget

Ad Widget

Ad Widget

Ad Widget

ಪಿಕಪ್ ವಾಹನದಲ್ಲಿ 11 ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿ, ಅಗತ್ಯ ಪರವಾನಿಗೆ ಇಲ್ಲದೆ ಕೇರಳದ ಕಡೆಗೆ ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ, ಪೊಲೀಸ್ ಕಾರ್ಯಾಚರಣೆ ವೇಳೆ ಪರಾರಿಯಾಗಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಾನುವಾರುಗಳನ್ನು ಪರವಾನಿಗೆ ಇಲ್ಲದೆ ಮಾರಾಟ ಮಾಡಿದ ಆರೋಪದ ಮೇಲೆ ಬಂಧಿತನಾಗಿರುವ ಆರ್ಯಾಪು ನಿವಾಸಿ ಶಿವಪ್ರಸಾದ್‌ಗೆ ಸೇರಿದ ದೇವಸ್ಯದಲ್ಲಿರುವ ಮನೆಯನ್ನು ಪೊಲೀಸರು ಮಹಜರು ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Ad Widget

Ad Widget

Ad Widget

Ad Widget

ಪುತ್ತೂರು: ಪಿಕಪ್ ವಾಹನದಲ್ಲಿ 11 ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿ, ಅಗತ್ಯ ಪರವಾನಿಗೆ ಇಲ್ಲದೆ ಕೇರಳದ ಕಡೆಗೆ ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ, ಪೊಲೀಸ್ ಕಾರ್ಯಾಚರಣೆ ವೇಳೆ ಪರಾರಿಯಾಗಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಾನುವಾರುಗಳನ್ನು ಪರವಾನಿಗೆ ಇಲ್ಲದೆ ಮಾರಾಟ ಮಾಡಿದ ಆರೋಪದ ಮೇಲೆ ಬಂಧಿತನಾಗಿರುವ ಆರ್ಯಾಪು ನಿವಾಸಿ ಶಿವಪ್ರಸಾದ್‌ಗೆ ಸೇರಿದ ದೇವಸ್ಯದಲ್ಲಿರುವ ಮನೆಯನ್ನು ಪೊಲೀಸರು ಮಹಜರು ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Ad Widget

Ad Widget

Ad Widget alt="Ad Widget"/>

Ad Widget

ಬಲ್ನಾಡಿನಲ್ಲಿ 11 ಜಾನುವಾರುಗಳ ರಕ್ಷಣೆ
ಕೇರಳದ ಕಡೆಗೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕಿ ಸುಷ್ಮಾ ಭಂಡಾರಿ ಅವರು ಸಿಬ್ಬಂದಿಯೊಂದಿಗೆ ಬಲ್ನಾಡು ಗ್ರಾಮದ ಬೆಳೆಯೂರುಕಟ್ಟೆ ಬಳಿ ಕಾರ್ಯಾಚರಣೆ ನಡೆಸಿದ್ದರು.

Ad Widget

Ad Widget <> Ad Widget

ಈ ವೇಳೆ ಪಿಕಪ್ ವಾಹನವನ್ನು ತಡೆದು ಪರಿಶೀಲಿಸಿದಾಗ, ವಾಹನದೊಳಗೆ 11 ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿರುವುದು ಪತ್ತೆಯಾಗಿತ್ತು. ಪೊಲೀಸರು ವಾಹನವನ್ನು ತಡೆದ ಸಂದರ್ಭದಲ್ಲಿ ಚಾಲಕ ಹಾಗೂ ಮತ್ತೋರ್ವ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದರು.



Ad Widget

ಜಾನುವಾರುಗಳನ್ನು ಅಗತ್ಯ ಪರವಾನಿಗೆ ಇಲ್ಲದೆ ಮಾಂಸಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ ಕೇರಳದ ಕಡೆಗೆ ಸಾಗಿಸಲಾಗುತ್ತಿತ್ತು ಎಂಬ ಆರೋಪದ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Ad Widget

Ad Widget

ಪರಾರಿಯಾಗಿದ್ದ ಇಬ್ಬರು ವಶಕ್ಕೆ
ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸರು, ಅಗತ್ಯ ಪರವಾನಿಗೆ ಇಲ್ಲದೆ ಜಾನುವಾರುಗಳನ್ನು ಮಾರಾಟ ಮಾಡಿದ ಆರೋಪದ ಮೇಲೆ ಆರ್ಯಾಪು ನಿವಾಸಿ ಶಿವಪ್ರಸಾದ್‌ನನ್ನು ಬಂಧಿಸಿದ್ದರು. ಬಳಿಕ ಪರಾರಿಯಾಗಿದ್ದ ಪಿಕಪ್ ಚಾಲಕ ಹಾಗೂ ಮತ್ತೋರ್ವ ಆರೋಪಿಯ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿಸಿದ್ದರು.

ಇದೀಗ ಸರೋಳಿ ನಿವಾಸಿ ಇಸ್ಮಾಯಿಲ್ ಅವರ ಪುತ್ರ ಹಸ್ಪರ್ ಅಲಿಯಾಸ್ ಅಮ್ಮಿ ಹಾಗೂ ಕದಿಲ ಗ್ರಾಮದ ಸತ್ತಿಕಲು ನಿವಾಸಿ ಅಬ್ಬಾಸ್ ಅವರ ಪುತ್ರ ಇಬ್ರಾಹಿಂ ಮಾಡಲಾ ಎಂಬಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಾನುವಾರುಗಳನ್ನು ಪರವಾನಿಗೆ ಇಲ್ಲದೆ ಮಾರಾಟ ಮಾಡಿದ ಆರೋಪ ಎದುರಿಸುತ್ತಿರುವ ಶಿವಪ್ರಸಾದ್‌ಗೆ ಸೇರಿದ ಆರ್ಯಾಪು ಗ್ರಾಮದ ದೇವಸ್ಯದಲ್ಲಿರುವ ಮನೆಯನ್ನು ಪೊಲೀಸರು ಮಹಜರು ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Ad Widget
Continue Reading

ಶಿಕ್ಷಣ

Vivekananda-ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ – ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

Published

on



Ad Widget

Ad Widget

Ad Widget

Ad Widget

ಶಾಲಾ ಶಿಕ್ಷಣ ಇಲಾಖೆ, ಪದವಿಪೂರ್ವ ವಿಭಾಗ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಸರಕಾರಿ ಪದವಿಪೂರ್ವ ಕಾಲೇಜು ಬೆಟ್ಟಂಪಾಡಿ ಇವರ ಸಹಯೋಗದಲ್ಲಿ ಕೊಂಬೆಟ್ಟು ಕ್ರೀಡಾಂಗಣ ದಲ್ಲಿ ನಡೆಯಿತು. ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

Ad Widget

Ad Widget

Ad Widget

Ad Widget

ಶಾಲಾ ಶಿಕ್ಷಣ ಇಲಾಖೆ, ಪದವಿಪೂರ್ವ ವಿಭಾಗ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಸರಕಾರಿ ಪದವಿಪೂರ್ವ ಕಾಲೇಜು ಬೆಟ್ಟಂಪಾಡಿ ಇವರ ಸಹಯೋಗದಲ್ಲಿ ಕೊಂಬೆಟ್ಟು ಕ್ರೀಡಾಂಗಣ ದಲ್ಲಿ ನಡೆಯಿತು. ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

Ad Widget

Ad Widget

Ad Widget alt="Ad Widget"/>

Ad Widget

ತಂಡದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಧನುಷ್ ಎಸ್, ಯಶಸ್ ಎಚ್ . ಸಿ ದ್ವಿತೀಯ ಪಿಯುಸಿ ಗಗನ್ ಕೆ.ಎನ್, ತೇಜಸ್ ಟಿ. ಆರ್, ಜಶ್ವಂತ್ ಗೌಡ, ಧನುಷ್ ಕೆ . ಎಚ್, ಆಕಾಶ್ ಭಾಗವಹಿಸಿರುತ್ತಾರೆ.

Ad Widget

Ad Widget <> Ad Widget

ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್ ,ಡಾ .ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ .ಇವರನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.



Ad Widget
Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading