ಬಿಗ್ ನ್ಯೂಸ್
3 ಲಕ್ಷ ಪೋಸ್ಟ್ ಪರ ಹಾಕಿ 1 ವಿರೋಧ ಹಾಕಿದ್ದಕ್ಕೆ ವಿರೋಧಿಸಿದ್ರು..! 7 ವರ್ಷದಿಂದ ಕೆಲಸ ಬಿಟ್ಟು ಪಕ್ಷಕ್ಕೆ ದುಡಿದೆ- ನನ್ನನ್ನು ಬಿಜೆಪಿ ನಾಯಕರು ‘ಕಾಂಗ್ರೇಸ್ ಏಜೆಂಟ್’ ಅಂದ್ರು: ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಟೀಂ ವಿರುದ್ದ ಮೋದಿಗೆ ದೂರು ನೀಡಿದ POSTCARD ನ ಮಹೇಶ್ ವಿಕ್ರಂ ಹೆಗ್ಡೆ
ಮಂಗಳೂರು: ಹಿಂದೂ ಸಂಘಟನೆಯ ಯುವಕರ ವಿರುದ್ದ ಸುಮೋಟೋ ಪ್ರಕರಣದ ನಂತರ ಪೋಸ್ಟ್ ಕಾರ್ಡ್ ನ ಮಹೇಶ್ ವಿಕ್ರಂ ಹೆಗ್ಡೆ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ರನ್ನು ಬಹಿರಂಗವಾಗಿ ಟೀಕಿಸಿದ್ದು, ಆ ನಂತರ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ ಪತ್ರಿಕಾಗೋಷ್ಠಿ ಕರೆದು ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ರಾಜೀನಾಮೆ ಕೇಳಿದರೆ ಅದು ನೀವು ಕೊಟ್ಟಿರುವ ಭಿಕ್ಷೆ ಅಲ್ಲ. ಸೋಷಿಯಲ್ ಮೀಡಿಯಾದಲ್ಲಿ ಬರೆದ ಮಾತ್ರಕ್ಕೆ ಸಂಘಟನೆ ಒಡೆಯುವುದಿಲ್ಲ ಎಂದು ಪೋಸ್ಟ್ ಕಾರ್ಡ್ ನ ಮಹೇಶ್ ವಿಕ್ರಮ್ ಹೆಗ್ಡೆ ವಿರುದ್ಧ ಗರಂ ಆದ ಬೆನ್ನಲ್ಲೇ ಹೆಗ್ಡೆ ನರೇಂದ್ರ ಮೋದಿಗೆ ದೂರು ನೀಡಿದ್ದಾರೆ.
ನಾನು ಕಳೆದ 7 ವರ್ಷದಿಂದ ಪಕ್ಷಕ್ಕಾಗಿ ಕೆಲಸ ಬಿಟ್ಟು ದುಡಿದಿದ್ದೇನೆ, ನಾನು ನಿಮ್ಮ ಅತೀ ದೊಡ್ಡ ಅಭಿಮಾನಿ . ನಾನು ಹಿಂದುತ್ವ ವಿಷಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವರನ್ನು ಟೀಕಿಸಿದ್ದಕ್ಕೆ ಬಿಜೆಪಿ ನಾಯಕರು ಪತ್ರಿಕಾಗೋಷ್ಠಿ ಕರೆದು ನನ್ನನ್ನು ಕಾಂಗ್ರೇಸ್ ಏಜೆಂಟ್ ಅಂತಿದ್ದರೆ ಎಂದು ಅಳಲು ತೋಡಿಕೊಂಡಿದ್ದಾರೆ. ನಾನು 3 ಲಕ್ಷ ಬಿಜೆಪಿ ಪರ ಪೋಸ್ಟ್ ಹಾಕಿ ಒಂದು ವಿರೋಧ ಹಾಕಿದ್ದಕ್ಕೆ ನನ್ನನ್ನು ವಿರೋಧಿಸಿದ್ರು.
ಅಂಟೋನಿಯ ಮೈನೋ ಹಾಗೂ ಕಾಂಗ್ರೇಸ್ ನನ್ನ ಕಾಲಿನ ದೂಳಿಗೆ ಸಮ ನಾನು ಯಾವತ್ತೂ ಬಿಜೆಪಿ ಕಾರ್ಯಕರ್ತ. ನೀವು ಇದನ್ನು ಗಮನಿಸಿ ನನಗೆ ಬೆಂಬಲಿಸಬೇಕಾಗಿ ಮೋದಿಗೆ ಟ್ವಿಟರ್ ಮೂಲಕ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.


ನಿನ್ನೆ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುದರ್ಶನ್ , ಕೆಲದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ಅವಹೇಳನ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು ಸೋಷಿಯಲ್ ಮೀಡಿಯಾದಲ್ಲಿ ದುರ್ಬಲ ರಾಜಾಧ್ಯಕ್ಷ ಎಂದು ಹೇಳಿಕೆ ಕೊಟ್ಟ ಕೂಡಲೇ ಅವರು ದುರ್ಬಲವಾಗುವುದಿಲ್ಲ.
ರಾಜಾಧ್ಯಕ್ಷ ಹುದ್ದೆ ಸಂಘಟನೆ ಅವರಿಗೆ ಕೊಟ್ಟಿರುವ ಜವಾಬ್ದಾರಿ. ಇದೆಲ್ಲ ಯಾರು ಪೇಮೆಂಟ್ ಕೊಡುತ್ತಾರೆ ಅವರಿಗೆ ಬರೆಯುವ ಸಂಸ್ಥೆಗಳು ಎಂದು ಪೋಸ್ಟ್ ಕಾರ್ಡ್ ಗೆ ಪರೋಕ್ಷವಾಗಿ ಆರೋಪಿಸಿದರು.
ನೈಜ ಕಾರ್ಯಕರ್ತರು ಇದನ್ನು ಮಾಡಿಲ್ಲ ಎಂದರು.
ಕೆಲವರು ಸಂಘಟನೆಯಲ್ಲಿ ಪದವಿ ಅಥವ ಹುದ್ದೆ ಕೇಳಿ ಬರುತ್ತಾರೆ ಸಿಗದಿದ್ದಾಗ ಈ ರೀತಿ ಬರೆಯುತ್ತಾರೆ ಎಂದು ವಾಗ್ದಾಳಿ ನಡೆಸಿದ ಅವರು ಕೆಲವರು ಸೋಷಿಯಲ್ ಮೀಡಿಯಾದ ಮೂಲಕ ಎಂಪಿ, ಎಂಎಲ್ ಎ ಆಗಬಹುದು ಎಂದು ತಿಳಿದುಕೊಂಡಿದ್ದಾರೆ.
ಇದು ಮೂರ್ಖತನದ ಪರಮಾವಧಿ. ನಮ್ಮ ಸಂಸದರಿಂದ ಸಹಾಯ ಪಡೆದವರೇ ಸಂಸದರ ವಿರುದ್ಧ ಬರೆದಿದ್ದಾರೆ ಎಂದರು.
ರಾಜ್ಯಾಧ್ಯಕ್ಷರ ಬಗ್ಗೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸಹ ಶಹಬ್ಬಾಸ್ ಗಿರಿ ವ್ಯಕ್ತಪಡಿಸಿದ್ದಾರೆ. ಅವರು ಚುನಾವಣೆ ಎದುರಿಸಿ ಪಕ್ಷವನ್ನು ಗೆಲ್ಲಿಸಿ ಬಲಪಡಿಸಿದ್ದಾರೆ.
ಇದರ ಹಿಂದೆ ಅತೃಪ್ತ ಆತ್ಮ ಹಾಗೂ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಬಿಜೆಪಿ ಹಾಗೂ ಸಂಘಟನೆ ನಡುವೆ ಬಿರುಕು ಮೂಡಿಸಿ ಬಿಜೆಪಿಯ ಭದ್ರಕೋಟೆ ದ.ಕ ಜಿಲ್ಲೆಯನ್ನು ಒಡೆಯಬೇಕು ಎನ್ನುವ ಹುನ್ನಾರ ನಡೆಯುತ್ತಿದೆ.
ಸೋಷಿಯಲ್ ಮೀಡಿಯಾ ಮೂಲಕ ಹಿಂದೂ ಸಂಘಟನೆ ಕಟ್ಟಲು ಸಾಧ್ಯವಿಲ್ಲ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದ ಮಾತ್ರಕ್ಕೆ ಸಂಘಟನೆ ಒಡೆಯುವುದಿಲ್ಲ ಎಂದರು.
ಆ ನಂತರ ತನ್ನ ಲಕ್ಷಾಂತರ ಬೆಂಬಲಿಗರಿರುವ ಹಲವಾರು ಖಾತೆ ಮೂಲಕ ಜಿಲ್ಲಾಧ್ಯಕ್ಷ ಸುದರ್ಶನ್ ಹಾಗೂ ಇತರ ಬಿಜೆಪಿ ನಾಯಕರು ಕಾಂಗ್ರೇಸ್ ನಾಯಕರೂಂದಿಗೆ ಹೊಂದಿರುವ ವ್ಯವಹಾರದ ಬಗ್ಗೆ ಹೀಗೆಂದು ಬರೆದಿದ್ದಾರೆ.
ದಿನದ 24 ಗಂಟೆಯೂ ಮೋದಿಜೀ – ಬಿಜೆಪಿ – ಹಿಂದುತ್ವದ ಪರ ಮಾತನಾಡುವ ಮಹೇಶ್ ವಿಕ್ರಮ್ ಹೆಗ್ಡೆ ಕಾಂಗ್ರೆಸ್ ಏಜೆಂಟ್ ಅಂತೆ….!
ಇದು ಕೇವಲ ಒಂದು ಪ್ರಶ್ನೆಗೆ ನನಗೆ ಸಿಕ್ಕ ಬಿರುದು. ಹೌದು, ಕಳೆದ ಎರಡು ದಿನಗಳಿಂದ “ಕೆಲವರು” ನನ್ನ ಪ್ರಶ್ನೆಗೆ ಉತ್ತರಿಸಲಾಗದೆ ನೇರವಾಗಿ ನಾನು ಕಾಂಗ್ರೆಸ್ ಏಜೆಂಟ್ ಎಂಬಂತೆ ಮಾತನಾಡುತ್ತಿದ್ದಾರೆ. ಕಳೆದ ಚುನಾವಣೆಯ ಸಂದರ್ಭದಲ್ಲಿ ನಾನು ಬಿಜೆಪಿ ಪರವಾಗಿ ಬರೆದಿದ್ದೆ ಮತ್ತು ಈಗ ರಾಜ್ಯಾಧ್ಯಕ್ಷರನ್ನು ಪ್ರಶ್ನಿಸುತ್ತಿದ್ದೇನೆ ಎಂಬ ವಿಚಾರವಾಗಿ ಈ ಬಾರಿ ನಾನು ಕಾಂಗ್ರೆಸ್ ಏಜೆಂಟ್ ಆಗಿ ಕಂಡುಬರುತ್ತಿದ್ದೇನೆ (ಕೇವಲ ಬಕೆಟ್‌ಗಳ ಕಣ್ಣಿಗೆ ಮಾತ್ರ). ಇಂತಹ ಪೊಳ್ಳು ಪತ್ರಿಕಾಗೋಷ್ಠಿ ಅಥವಾ ಮಾತಿಗೆ ಯಾವತ್ತೂ ತಲೆಕೆಡಿಸಿಕೊಂಡವನು ನಾನಲ್ಲ. ಆದರೆ ಇದಕ್ಕೆ ಉತ್ತರ ಕೊಡದೆ ಕೂರುವವನೂ ನಾನಲ್ಲ. ಮೊನ್ನೆ ನಾನು ಕೇಳಿದ್ದ ಪ್ರಶ್ನೆಗೆ ವಿಕ್ರಮ ತ್ರಿವಿಕ್ರಮ ಎಂದು ಕೆಲವರು ನನ್ನನ್ನು ಟೀಕಿಸಿದರೆ, ಇಂದು ಕೆಲವರು ನಾನು ಬಿಜೆಪಿ ಬಿಟ್ಟು ಬೇರೆ ಪಕ್ಷದ ಸಲಹೆಗಾರನಾಗಿ ಬರೆಯುತ್ತಿದ್ದೇನೆ ಅಥವಾ ಬೇರೆ ಪಕ್ಷಕ್ಕೆ ಸೇರಿ ಅವರ ಪರವಾಗಿ ಬರೆಯಲಿದ್ದೇನೆ ಎಂಬಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬಹುಶಃ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದವರಿಗೆ ಗೊತ್ತೋ ಗೊತ್ತಿಲ್ವೋ…. ಅವರು ಎಲ್ಲೆಲ್ಲಿ ಕಾಂಗ್ರೆಸ್ ಜೊತೆ ಸೇರಿ “ವ್ಯವಹಾರ” ನಡೆಸುತ್ತಿದ್ದಾರೆ ಎಂಬುದು ನಮ್ಮವರಿಗೂ ಗೊತ್ತಿದೆ ಎಂದು..!
ಅದಿರಲಿ, ನಾನು ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಅಂದರೆ ನಮ್ಮ ಸಂಸದರ ಪರವಾಗಿ ಬರೆದಿದ್ದೇ ಪ್ರಚಾರ ಮಾಡಿದ್ದೇ ಎಂಬುದನ್ನು ಉಲ್ಲೇಖಿಸಿದವರು, ನಾನಿಂದು ರಾಜ್ಯಾಧ್ಯಕ್ಷರನ್ನು ಪ್ರಶ್ನಿಸಿದ ಮಾತ್ರಕ್ಕೆ ನಾನು ಇನ್ಯಾವುದೋ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದೇನೆ ಎಂಬುದನ್ನು ನೇರವಾಗಿ ಹೇಳಿದರು. ಇದಕ್ಕೂ ನಾನು ಉತ್ತರ ನೀಡುತ್ತೇನೆ…
ಕಾಂಗ್ರೆಸಿಗರ ಜನ್ಮ ಜಾಲಾಡಿದ ನನಗೆ ಬಿಜೆಪಿಯಲ್ಲಿ ಅಧಿಕೃತವಾಗಿ ಹುದ್ದೆ ನೀಡುವ ಮಾತು ಬಂದಾಗಲೇ ನಾನದನ್ನು ನಿರಾಕರಿಸಿದವನು. ಅಷ್ಟೇ ಮಾತ್ರವಲ್ಲದೆ ಪಕ್ಷದ ಕೆಲಸಕ್ಕೆ ನಾನು ಯಾವತ್ತೂ ಹಣ ಪಡೆದವನಲ್ಲ. ಆದರೆ ನನ್ನ ಪ್ರಶ್ನೆಗೆ ಉತ್ತರ ನೀಡುವ ಭರದಲ್ಲಿ ಜಿಲ್ಲಾಧ್ಯಕ್ಷರು ನಾನು ಕಾಂಗ್ರೆಸ್ ಏಜೆಂಟ್ ಎಂದು ಬಿರುದು ನೀಡಿದರು.
ನಾನು ಏಜೆಂಟ್ ಹೌದು, ಆದರೆ ಹಿಂದುತ್ವದ ಪರವಾದ ಏಜೆಂಟ್…
ಹಿಂದೂ ಕಾರ್ಯಕರ್ತರ ಪರವಾಗಿ ಕೆಲಸ ಮಾಡುವ ಏಜೆಂಟ್…
ನಮ್ಮವರಿಗೆ ಸಮಸ್ಯೆ ಆದಾಗ ಸಮಾಜದ ಮುಂದೆ ನಿಂತು “ಭಿಕ್ಷಾಂದೇಹಿ” ಅಭಿಯಾನ ನಡೆಸಿ ಕಾರ್ಯಕರ್ತರ ಬೆನ್ನಿಗೆ ನಿಂತ ಏಜೆಂಟ್…
ನೀವು ಹೇಳಿದ ಮಾತ್ರಕ್ಕೆ ನಾನು ಬಿಜೆಪಿ ಮತ್ತು ಹಿಂದುತ್ವದ ಸಿದ್ಧಾಂತ ಬಿಟ್ಟು ಬೇರೆ ಪಕ್ಷಕ್ಕೆ ಅಂಟಿಕೊಳ್ಳುವನಲ್ಲ, ಯಾಕೆಂದರೆ ಇಲ್ಲೇ ಇದ್ದು ಇಲ್ಲಿನ ಕೆಲ ಸಮಸ್ಯೆಗಳನ್ನು ಪರಿಹರಿಸಲು ಮಾರ್ಗ ಕಂಡುಕೊಳ್ಳುವವ, ನೆನಪಿರಲಿ..!
ಈಗ ಮುಖ್ಯವಾದ ವಿಚಾರಕ್ಕೆ ಬರೋಣ, ಚುನಾವಣೆಯಲ್ಲಿ ಬಿಜೆಪಿ ಪರವಾಗಿ ನಾನು ಕೆಲಸ ಮಾಡಿದ ಮಾತ್ರಕ್ಕೆ ನಾನು ಯಾರಿಂದಲೂ ನಯಾ ಪೈಸೆ ಪಡೆಯದೇ ಇದ್ದಿದ್ದರಿಂದಲೇ ಇಂದು ಒಬ್ಬ #ಕಾರ್ಯಕರ್ತನಾಗಿ ನಮ್ಮವರನ್ನು ಪ್ರಶ್ನಿಸುವ ತಾಕತ್ತು ಹೊಂದಿದ್ದೇನೆ. ನಿಮ್ಮಲ್ಲಿ ಆ ಅಂಶ ಇದ್ದರೆ ನನ್ನ ಮೂರೇ ಮೂರು ಪ್ರಶ್ನೆಗೆ ಉತ್ತರ ನೀಡಲು ಪ್ರಯತ್ನಿಸಿ…!
- ಕಾರ್ಕಳ ತಾಲೂಕಿನಲ್ಲಿರುವ ಕ್ರಷರ್ ಬ್ಯುಸಿನೆಸ್ ಬಗ್ಗೆ ಅನೇಕರಿಗೆ ಗೊತ್ತಿರಬಹುದು ಮತ್ತು ಆ ಕ್ರಷರ್ ಬ್ಯುಸಿನೆಸ್ ಕಾಂಗ್ರೆಸ್‌ನ ಕೆಲವರಿಗೆ ಸೇರಿದ್ದು ಎಂಬುದು ಕೂಡ ಗೊತ್ತಿರಬಹುದು, ಆದರೆ ಆ ಬ್ಯುಸಿನೆಸ್ ನಲ್ಲಿ ಪಾಲುದಾರನಾಗಿ ಯಾರ ಕಣ್ಣಿಗೂ ಕಾಣದಂತೆ ಇರುವ ವ್ಯಕ್ತಿ ಯಾರೆಂಬುದು ಗೊತ್ತಿದೆಯೇ… ಇದಕ್ಕೆ ನಿಮ್ಮಲ್ಲಿ ಉತ್ತರ ಇದೆಯೇ..? ( ಇಂದು ಪತ್ರಿಕಾ ಗೋಷ್ಟಿ ನಡೆಸಿದವರು )
ವೇಣೂರಿನಲ್ಲಿ ನಡೆಯುತ್ತಿರುವ ಮರಳುಗಾರಿಕಲ್ಲಿ ಪಾಲುದಾರಿಕೆ ಯಾರದ್ದು ಮತ್ತು ಯಾರೊಂದಿಗೆ…? - ಕಣಚ್ಚೂರು ಮೋನುವಿನ ಮೆಡಿಕಲ್ ಪರವಾನಿಗಾಗಿ ದೆಹಲಿಗೆ ಹೋಗಿ, ರಾಜಕೀಯ ಪ್ರಭಾವದಿಂದ ಪಡೆದುಕೊಂಡ ಮಂಗಳೂರಿನ ಪ್ರಭಾವಿ ರಾಜಕಾರಣಿ ಯಾರು…?
- ಯುಟಿ ಖಾದರ್ ಅವರ ತಮ್ಮ ನಡೆಸುತ್ತಿರುವ ವೈದ್ಯಕೀಯ ನರ್ಸಿಂಗ್ ಕಾಲೇಜಿನ ಪಾಲುದಾರರಾಗಿ ಇರುವ ಶಾಸಕ ಯಾರು…?
ಈ ಮೂರು ಪ್ರಶ್ನೆ ಮಾತ್ರ ಅಲ್ಲ, ಇಂತಹ ನೂರು ಪ್ರಶ್ನೆ ನಮ್ಮಲ್ಲಿದೆ. ಆದರೆ ಅದರ ಸಮಯ ಇನ್ನೂ ಬಂದಿಲ್ಲ.
ನಾವು ರಾಜ್ಯಾಧ್ಯಕ್ಷರನ್ನು ಪ್ರಶ್ನಿಸಿರುವುದು ನಮ್ಮ ವೈಯಕ್ತಿಕ ಲಾಭಕ್ಕಾಗಿಯೂ ಅಲ್ಲ, ವೈಯಕ್ತಿಕ ದ್ವೇಷಕ್ಕಾಗಿಯೂ ಅಲ್ಲ, ನಮ್ಮವರ ಪರವಾಗಿ ಪ್ರಶ್ನಿಸಿದ್ದೇನೆ ಅಷ್ಟೇ. ಅಷ್ಟಕ್ಕೇ ಕಾಂಗ್ರೆಸ್ ಏಜೆಂಟ್ ಎಂಬ ಬಿರುದು ನೀಡಿದರೆ, ತಮ್ಮ ವ್ಯವಹಾರ ಎಲ್ಲವನ್ನೂ ಕಾಂಗ್ರೆಸ್‌ನವರ ಜೊತೆಯೇ ನಡೆಸುವ “ಕೆಲ ನಮ್ಮವರಿಗೆ” ಯಾವ ಬಿರುದು ನೀಡುತ್ತೀರಿ…?
ಪದವಿಯ ಆಸೆಯಿಂದ ಪ್ರಶ್ನಿಸುವ ಕೀಳುಮಟ್ಟದ ಯೋಚನೆ ನಮ್ಮಲ್ಲಿದ್ದರೆ, ಅದಾಗಲೇ ನಾವು ಒಂದು ಜವಾಬ್ದಾರಿ ವಹಿಸಿಕೊಂಡು ಮುಂಚೂಣಿಯಲ್ಲಿ ನಿಲ್ಲಬಹುದಿತ್ತು. ಆದರೆ ಆ ಯೋಚನೆ ನಮ್ಮಲ್ಲಿಲ್ಲ. ಅದೇ ರೀತಿ “ಸಂಘದ ಸ್ವಯಂಸೇವಕ” ಎಂಬ ತೃಪ್ತಿ ಇದೆ ಅಲ್ವಾ, ಅದಕ್ಕಿಂತ ದೊಡ್ಡ ಬಿರುದು ನನಗೆ ಬೇಕಿಲ್ಲ ಮತ್ತು ಅವಶ್ಯಕತೆ ಕೂಡ ಇಲ್ಲ…!
ಸಾಮಾಜಿಕ ಜಾಲತಾಣದಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂಬ ನಿಮ್ಮ ಮಾತಿಗೆ ಬಹುಶಃ ಸಾಮಾಜಿಕ ಜಾಲತಾಣದಲ್ಲೇ ದೊಡ್ಡ ಮಟ್ಟದ ಉತ್ತರ ನೀಡಲಿದ್ದೇನೆ, ಕಾಯ್ತಾ ಇರಿ…!
- ಸ್ವಯಂಸೇವಕ 🙏🏻
- ಮಹೇಶ್ ವಿಕ್ರಮ್ ಹೆಗ್ಡೆ
ಇದೀಗ ತೀವ್ರ ಅಸಮಾಧಾನಗೊಂಡಿರುವ ಹೆಗ್ಡೆ ನರೇಂದ್ರ ಮೋದಿಗೆ ದೂರು ನೀಡಿದ್ದಾರೆ.
ಇದಕ್ಕೆ ಸಂಬಂಧಪಟ್ಟ ಇನ್ನಿತರ ವರದಿ
ಇಷ್ಟೊಂದು ದುರ್ಬಲ ಬಿಜೆಪಿ ರಾಜ್ಯಾಧ್ಯಕ್ಷರನ್ನು ರಾಜ್ಯ ಬಿಡಿ ದೇಶವೆ ಕಂಡಿಲ್ಲ, ದಯವಿಟ್ಟು ರಾಜೀನಾಮೆ ಕೊಡಿʼ : ಮಂಗಳೂರಿನಲ್ಲಿ ಭಿನ್ನ ಕೋಮಿನ ಯುವಕ
ಯುವತಿಯನ್ನು ತಡೆದವರ ವಿರುದ್ದ ಸುಮೋಟೋ ಪ್ರಕರಣ ದಾಖಲಿಸಿದರ ವಿರುದ್ದ ಪೋಸ್ಟ್ ಕಾರ್ಡ್ ಮಾಲಕ ಮಹೇಶ್ ವಿಕ್ರಮ್ ಹೆಗ್ಡೆ ಆಕ್ರೋಶ
https://nikharanews.in/2021/12/12/nalin-kumar-kateel-is-a-weakest-bjp-president-post-card-mahesh-vikram-hegde-mocks/
ಮಂಗಳೂರು ಬಸ್ ನಲ್ಲಿ ಭಿನ್ನ ಕೋಮಿನ ಯುವಕ ಯುವತಿ ಪತ್ತೆ – ಸುಮೋಟೋ ಪ್ರಕರಣದಲ್ಲಿ ಬಂಧಿತ ನಾಲ್ವರಿಗೆ ದೇಶಪ್ರೇಮಿಗಳ ಸಂಘಟನೆಯ ಭರತ್ ಶೆಟ್ಟಿ ನೇತೃತ್ವದಲ್ಲಿ ಜಾಮೀನು ಮಂಜೂರು
ಬಂಧಿತ ಯುವಕರಿಗೆ ಸಹಾಯ ಮಾಡುವಂತೆ ಅಂಗಲಾಚುವ ಪರಿಸ್ಥಿತಿ ಬಂದಿದೆ- ಇಂತಹ ಪರಿಸ್ಥಿತಿ ಯಾರಿಗಾದರೂ ಬೇಕಾ? ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕರ ವಿರುದ್ಧ ಮತ್ತೊಮ್ಮೆ ಬಹಿರಂಗ ಆಕ್ರೋಶ ವ್ಯಕ್ತಪಡಿಸಿದ ಪೋಸ್ಟ್ ಕಾರ್ಡ್ ನ ಮಹೇಶ್ ವಿಕ್ರಮ್ ಹೆಗ್ಡೆ
ಬಿಜೆಪಿ ರಾಜ್ಯಾಧ್ಯಕ್ಷರ ರಾಜೀನಾಮೆ ಕೇಳಲು ಅದು ನೀವು ಕೊಟ್ಟ ಭಿಕ್ಷೆ ಅಲ್ಲ : ಹುದ್ದೆ ಆಸೆಯಿಂದ ಬಂದು ಸಿಗದಿದ್ದರೆ ಹೀಗೆಲ್ಲ ಬರೆಯುತ್ತಾರೆ “ಕಾಂಗ್ರೇಸ್ ಎಜೆಂಟ್” ಗಳು
ಇವೆಲ್ಲ ಪೇಮೆಂಟ್ ಕೊಟ್ಟವರಿಗೆ ಬರೆಯುವ ಸಂಸ್ಥೆಗಳು : ಬಿಜೆಪಿ ಒಡೆಯಲು ಸಂಚು ನಡೆಯುತ್ತಿದೆ
ಪೋಸ್ಟ್ ಕಾರ್ಡ್ ಹಾಗೂ ಮಹೇಶ್ ವಿಕ್ರಮ್ ಹೆಗ್ಡೆ ವಿರುದ್ದ ಗರಂ ಆದ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್
ಕ್ಷಣ ಕ್ಷಣದ ನ್ಯೂಸ್ ಗಾಗಿ ಈ ಗ್ರೂಪ್ ಸೇರಿ
https://chat.whatsapp.com/Bcbjia9UUcZJQYSHUcazKM
ಮೋದಿ ಅಭಿಮಾನಿ POSTCARD ನ ಮಹೇಶ್ ವಿಕ್ರಂ ಹೆಗ್ಡೆಗೆ ‘ಕಾಂಗ್ರೇಸ್ ಏಜೆಂಟ್’ ಪಟ್ಟ ಕಟ್ಟಿದ ದ.ಕ ಬಿಜೆಪಿ ಜಿಲ್ಲಾಧ್ಯಕ್ಷ – ಸುದರ್ಶನ್ ಸಹಿತ ಬಿಜೆಪಿ ನಾಯಕರ ಕಾಂಗ್ರೇಸ್ ಜೊತೆಗಿನ “ವ್ಯವಹಾರ”ದ ಗುಟ್ಟಿನ ಗಂಭೀರ ಆರೋಪ ಮಾಡಿದ ಸಾಮಾಜಿಕ ಜಾಲತಾಣದ ದೈತ್ಯ ಹೆಗ್ಡೆ
ಅಂತರ ರಾಜ್ಯ
L.K. Advani-ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಆಸ್ಪತ್ರೆಗೆ ದಾಖಲು
ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ (98) ಅವರು ಶ್ವಾಸಕೋಶದ ಸಮಸ್ಯೆಯಿಂದಾಗಿ ಶುಕ್ರವಾರ ಸಂಜೆ ದಿಲ್ಲಿಯ ಇಂದ್ರಪ್ರಸ್ಥ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ಹೊಸದಿಲ್ಲಿ: ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ (98) ಅವರು ಶ್ವಾಸಕೋಶದ ಸಮಸ್ಯೆಯಿಂದಾಗಿ ಶುಕ್ರವಾರ ಸಂಜೆ ದಿಲ್ಲಿಯ ಇಂದ್ರಪ್ರಸ್ಥ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ದಿಲ್ಲಿಯ ಜಸೋಲಾ ವಿಹಾರ್‌ನಲ್ಲಿರುವ ಆಸ್ಪತ್ರೆಗೆ ಅಡ್ವಾಣಿ ಅವರನ್ನು ಸಂಜೆ ಸುಮಾರು 7.30ರ ವೇಳೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಸದ್ಯ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯ ಸ್ಥಿತಿಯ ಕುರಿತು ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಡಿಸಲಾಗುವುದು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಬಿಜೆಪಿಯ ಮಾಜಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಎಲ್.ಕೆ. ಅಡ್ವಾಣಿ ಅವರು 2002ರಿಂದ 2004ರವರೆಗೆ ದೇಶದ ಉಪ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಬಿಜೆಪಿಯನ್ನು ರಾಷ್ಟ್ರಮಟ್ಟದಲ್ಲಿ ಪ್ರಮುಖ ರಾಜಕೀಯ ಶಕ್ತಿಯಾಗಿ ಬೆಳೆಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು.
ಮಂಗಳೂರು
MRPL explosion-Big Breaking: MRPL ಸ್ಫೋಟ : ತೀವ್ರ ಗಾಯಗೊಂಡಿದ್ದ ರಾಜೇಶ್ ನಿಧನ : ಮನೀಶ್ ಕರ್ಕಡ ಕುಟುಂಬಕ್ಕೆ ನೀಡಿದ ಪರಿಹಾರದಷ್ಟೇ ನೀಡುವಂತೆ ಒತ್ತಾಯ
ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಕಾರ್ಖಾನೆಯಲ್ಲಿ ಸೆಪ್ಟೆಂಬರ್ 30ರಂದು ಸಂಭವಿಸಿದ್ದ ಭೀಕರ ಸ್ಫೋಟ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗುತ್ತಿಗೆ ಕಾರ್ಮಿಕ ರಾಜೇಶ್ ಡಿಸಿಲ್ವ ಶನಿವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಕಾರ್ಖಾನೆಯಲ್ಲಿ ಸೆಪ್ಟೆಂಬರ್ 30ರಂದು ಸಂಭವಿಸಿದ್ದ ಭೀಕರ ಸ್ಫೋಟ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗುತ್ತಿಗೆ ಕಾರ್ಮಿಕ ರಾಜೇಶ್ ಡಿಸಿಲ್ವ ಶನಿವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತ ರಾಜೇಶ್ ಡಿಸಿಲ್ವ ಅವರು ಸುರತ್ಕಲ್ ಇಡ್ಯಾ ಗ್ರಾಮದ ಕಾನ ನಿವಾಸಿಯಾಗಿದ್ದು, ಬ್ಯಾಪಿಸ್ಟ್ ಡಿಸಿಲ್ವ ಎಂಬುವವರ ಐವರು ಮಕ್ಕಳ ಪೈಕಿ ಒಬ್ಬರಾಗಿದ್ದಾರೆ. ಇವರು ಹಲವು ವರ್ಷಗಳಿಂದ ಎಂಆರ್‌ಪಿಎಲ್‌ನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದರು. ಅ ಅವಿವಾಹಿತರಾಗಿದ್ದರು ಎಂದು ತಿಳಿದುಬಂದಿದೆ. ಎಂಆರ್‌ಪಿಎಲ್‌ನ ಫೇಸ್-3ರ ಸಿಎಚ್‌ಟಿಯು (Coker Hydro Treating Unit) ಪ್ಲಾಂಟ್‌ನಲ್ಲಿ ಕಳೆದ ಸೆಪ್ಟೆಂಬರ್ 30ರಂದು ಭಾರೀ ಸ್ಫೋಟ ಸಂಭವಿಸಿತ್ತು. ಅಂದು ಸಂಭವಿಸಿದ ದುರಂತದಲ್ಲಿ ಹಳೆಯಂಗಡಿ ನಿವಾಸಿ ಮನೀಶ್ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದರು.
ಅದೇ ಘಟನೆಯಲ್ಲಿ ತೀವ್ರ ಸುಟ್ಟಗಾಯಗಳಿಗೆ ಒಳಗಾಗಿದ್ದ ರಾಜೇಶ್ ಡಿಸಿಲ್ವ ಅವರನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಐಸಿಯು (ICU) ಘಟಕದಲ್ಲಿ ತೀವ್ರ ನಿಗಾದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಕಳೆದ ಕೆಲವು ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಮೃತರ ದೇಹವನ್ನು ಇಂದು ಸಂಜೆಯ ವೇಳೆ ನಗರದ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ (Post-mortem) ನಡೆಸಲಾಗುವುದು. ಬಳಿಕ ಕಾನೂನು ಪ್ರಕ್ರಿಯೆಗಳನ್ನು ಪೂರೈಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಥಳೀಯ
Kumara Parvata-ಅ.18ರಿಂದ ಕುಮಾರ ಪರ್ವತ ಚಾರಣಕ್ಕೆ ಅನುಮತಿ
ಚಾರಣಿಗರ ನೆಚ್ಚಿನ ತಾಣವಾದ ಕುಮಾರ ಪರ್ವತ ಚಾರಣಕ್ಕೆ ಅಕ್ಟೋಬರ್ 18ರಿಂದ ಮತ್ತೆ ಅವಕಾಶ ಕಲ್ಪಿಸಲಾಗಿದೆ. ಎರಡು ಚಾರಣ ಮಾರ್ಗಗಳ ಪೈಕಿ ಬಿದಹಳ್ಳಿ–ಕುಮಾರ ಪರ್ವತ–ಬಿದಹಳ್ಳಿ ಮಾರ್ಗದಲ್ಲಿ ಮಾತ್ರ ಸದ್ಯಕ್ಕೆ ಚಾರಣಕ್ಕೆ ಅನುಮತಿ ನೀಡಲಾಗಿದೆ.
ಸುಬ್ರಹ್ಮಣ್ಯ: ಚಾರಣಿಗರ ನೆಚ್ಚಿನ ತಾಣವಾದ ಕುಮಾರ ಪರ್ವತ ಚಾರಣಕ್ಕೆ ಅಕ್ಟೋಬರ್ 18ರಿಂದ ಮತ್ತೆ ಅವಕಾಶ ಕಲ್ಪಿಸಲಾಗಿದೆ. ಎರಡು ಚಾರಣ ಮಾರ್ಗಗಳ ಪೈಕಿ ಬಿದಹಳ್ಳಿ–ಕುಮಾರ ಪರ್ವತ–ಬಿದಹಳ್ಳಿ ಮಾರ್ಗದಲ್ಲಿ ಮಾತ್ರ ಸದ್ಯಕ್ಕೆ ಚಾರಣಕ್ಕೆ ಅನುಮತಿ ನೀಡಲಾಗಿದೆ.
ಚಾರಣಕ್ಕೆ ಆಗಮಿಸುವವರು ನಿಗದಿಪಡಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಚಾರಣದ ವೇಳೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಪರಿಸರದ ಸ್ವಚ್ಛತೆಯನ್ನು ಕಾಪಾಡುವುದು ಕಡ್ಡಾಯವಾಗಿದೆ.
ಚಾರಣಿಗರು ನಿಗದಿತ ಸಮಯಕ್ಕೆ ಹಾಜರಾಗಬೇಕು. ಅಲ್ಲದೆ, ಕರ್ತವ್ಯದಲ್ಲಿರುವ ಸಿಬ್ಬಂದಿಯೊಂದಿಗೆ ಸಹಕರಿಸುವಂತೆ ಸೂಚಿಸಲಾಗಿದೆ. ಪ್ರಕೃತಿಯ ಸಂರಕ್ಷಣೆಗೆ ಆದ್ಯತೆ ನೀಡುವ ಮೂಲಕ ಚಾರಣದ ಸಂದರ್ಭದಲ್ಲಿ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಲಾಗಿದೆ.
ಇನ್ನೊಂದೆಡೆ, ಕುಕ್ಕೆ ಸುಬ್ರಹ್ಮಣ್ಯ ಮಾರ್ಗದ ಮೂಲಕ ಕುಮಾರ ಪರ್ವತ ಚಾರಣ ಆರಂಭಿಸಲು ಈವರೆಗೆ ದಿನಾಂಕ ನಿಗದಿಯಾಗಿಲ್ಲ.
-
ಅಪರಾಧ16 hours ago
ಸೌತಡ್ಕ ದೇವಸ್ಥಾನದ ಹೂವಿನ ಅಂಗಡಿ ವಿಚಾರದಲ್ಲಿ ಮಾರಾಮಾರಿ; ಮಹಿಳೆಯರ ಮೇಲೆ ಹಲ್ಲೆ ಆರೋಪ
-
ಅಪರಾಧ16 hours ago
ಪುತ್ತೂರು ಲಾಡ್ಜ್ನಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಹಲ್ಲೆ, ಜೀವ ಬೆದರಿಕೆ ಆರೋಪ
-
ದಕ್ಷಿಣ ಕನ್ನಡ17 hours ago
ಬಂಟ್ವಾಳ : ಹಣ ವಾಪಸ್ ಕೇಳಿದ್ದಕ್ಕೆ ಚೂರಿ ಇರಿತ ಆರೋಪ: ಆರೋಪಿ ಪೊಲೀಸ್ ವಶಕ್ಕೆ
-
ದಕ್ಷಿಣ ಕನ್ನಡ56 minutes ago
ಉಪ್ಪಿನಂಗಡಿಯಲ್ಲಿ ಬಾರ್ ಸಮೀಪ ತಲವಾರು ಪ್ರದರ್ಶನ: ಇಬ್ಬರು ಪೊಲೀಸ್ ವಶಕ್ಕೆ
-
ದಕ್ಷಿಣ ಕನ್ನಡ53 minutes ago
ಮಂಗಳೂರು : ಬಾಲಕನ ಮೇಲಿನ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ – ಧರ್ಮಗುರು ಬಂಧನ,
-
ದಕ್ಷಿಣ ಕನ್ನಡ38 minutes ago
ಸೌತಡ್ಕ ದೇವಸ್ಥಾನದ ಬಳಿ ಹೂವಿನ ಅಂಗಡಿ ವಿಚಾರವಾಗಿ ಗಲಾಟೆ: ಎರಡೂ ಕಡೆಯಿಂದ ದೂರು, ಪ್ರಕರಣ ದಾಖಲು


















