ಬಿಗ್ ನ್ಯೂಸ್
ಪತ್ರಕರ್ತ ನಿಶಾಂತ್ ಬಿಲ್ಲಂಪದವು ಮೇಲೆ ದುಷ್ಕರ್ಮಿಯಿಂದ ದಾಳಿ – ಜರ್ನಲಿಸ್ಟ್ ಯೂನಿಯನ್ ಖಂಡನೆ; -ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ – ಪ್ರತಿಭಟನೆಯ ಎಚ್ಚರಿಕೆ
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ – ಪ್ರತಿಭಟನೆಯ ಎಚ್ಚರಿಕೆ
ಪುತ್ತೂರು: ವಿಜಯವಾಣಿ ಪತ್ರಿಕೆ ಮತ್ತು ದಿಗ್ವಿಜಯ ವಾಹಿನಿಯ ಪುತ್ತೂರು ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ನಿಶಾಂತ್ ಬಿಲ್ಲಂಪದವು ಅವರ ಮೇಲೆ ಜುಲೈ 15ರಂದು ಪುತ್ತೂರಿನ ಬಪ್ಪಳಿಗೆಯಲ್ಲಿ ನಡೆದಿರುವ ದೌರ್ಜನ್ಯವನ್ನು ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕ ಖಂಡಿಸಿದೆ.
ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿರುವ ನಿಶಾಂತ್ ಬಿಲ್ಲಂಪದವು ಅವರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅಮಾನವೀಯವಾಗಿ ವರ್ತಿಸಿ ಅವರಿಗೆ ಹಲ್ಲೆ ನಡೆಸಿ ಮೊಬೈಲ್ ಫೋನ್ ಹುಡಿ ಮಾಡಿ ಜೀವ ಬೆದರಿಕೆ ಒಡ್ಡಿರುವ ಘಟನೆಯನ್ನು ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕ ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಜರುಗಿಸಬೇಕು ಎಂದು ಒತ್ತಾಯಿಸಿದೆ.
ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಜರಗಿಸದೇ ಇದ್ದಲ್ಲಿ ಎಲ್ಲಾ ಪತ್ರಕರ್ತರ ಸಂಘವನ್ನು ಒಗ್ಗೂಡಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ರಾಮದಾಸ್ ಶೆಟ್ಟಿ ವಿಟ್ಲ, ಪ್ರಧಾನ ಕಾರ್ಯದರ್ಶಿ ಸಂತೋಷ್ ಮೊಟ್ಟೆತ್ತಡ್ಕ ಮತ್ತು ಸ್ಥಾಪಕಾಧ್ಯಕ್ಷ ಸಂತೋಷ್ ಕುಮಾರ್ ಶಾಂತಿನಗರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅಂತರ ರಾಜ್ಯ
Supreme Court-ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ತಡೆ ನೀಡಲು ಸುಪ್ರೀಂಕೋರ್ಟ್ ನಕಾರ..!
ಹಬ್ಬದ ಋತುವಿನಲ್ಲಿ ವ್ಯಾಪಾರಕ್ಕೆ ನಷ್ಟವಾಗುವ ಆತಂಕ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ದೆಹಲಿಯ ಕಾನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸುತ್ತಿರುವ ಪ್ರತಿಭಟನೆಗೆ ತಡೆ ನೀಡುವಂತೆ ತುರ್ತು ನಿರ್ದೇಶನಗಳನ್ನು ಹೊರಡಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಹೊಸದಿಲ್ಲಿ: ಹಬ್ಬದ ಋತುವಿನಲ್ಲಿ ವ್ಯಾಪಾರಕ್ಕೆ ನಷ್ಟವಾಗುವ ಆತಂಕ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ದೆಹಲಿಯ ಕಾನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸುತ್ತಿರುವ ಪ್ರತಿಭಟನೆಗೆ ತಡೆ ನೀಡುವಂತೆ ತುರ್ತು ನಿರ್ದೇಶನಗಳನ್ನು ಹೊರಡಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಪ್ರತಿಭಟನೆಯಿಂದ ಹಬ್ಬದ ವ್ಯಾಪಾರಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿದ್ದ ವರ್ತಕರು, ಪ್ರತಿಭಟನೆಗೆ ತಡೆ ನೀಡುವಂತೆ ಕೋರಿ ಮನವಿ ಸಲ್ಲಿಸಿದ್ದರು.
ಈ ಮನವಿಯ ವಿಚಾರವಾಗಿ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ವಿವೇಕವನ್ನು ಪ್ರತಿಭಟನಾಕಾರರು ಹೊಂದಿರುತ್ತಾರೆ ಎಂದು ಆಶಿಸಿರುವುದಾಗಿ ತಿಳಿಸಿದೆ.
ಹಬ್ಬದ ಸಂದರ್ಭದಲ್ಲಿ ವ್ಯಾಪಾರ ಚಟುವಟಿಕೆಗಳಿಗೆ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಬೇಕೆಂಬ ವರ್ತಕರ ಆತಂಕದ ನಡುವೆಯೇ, ಪ್ರತಿಭಟನೆಗೆ ಸಂಬಂಧಿಸಿದಂತೆ ತುರ್ತು ನಿರ್ಬಂಧಗಳನ್ನು ವಿಧಿಸಲು ನ್ಯಾಯಾಲಯ ನಿರಾಕರಿಸಿರುವುದು ಗಮನ ಸೆಳೆದಿದೆ.
ಬಿಗ್ ನ್ಯೂಸ್
Puttur-ಪುತ್ತೂರು: ಓವರ್ ಟೆಕ್ ಬರದಲ್ಲಿ ಲಾರಿ-ಕಾರು ಅಪಘಾತ; ಪಲ್ಟಿಯಾದ ಲಾರಿ
ರಾಷ್ಟ್ರೀಯ ಹೆದ್ದಾರಿ 275ರ ಸಂಟ್ಯಾರ್ ಸಮೀಪ ಇಂದು ಲಾರಿ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆಯಲ್ಲೇ ಮಗುಚಿಬಿದ್ದಿದೆ. ಅತಿವೇಗ ಹಾಗೂ ಓವರ್ಟೇಕ್ ಮಾಡುವ ಭರದಲ್ಲಿ ಈ ದುರಂತ ನಡೆದಿದೆ ಎನ್ನಲಾಗಿದ್ದು, ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿವೆ.
ರಾಷ್ಟ್ರೀಯ ಹೆದ್ದಾರಿ 275ರ ಸಂಟ್ಯಾರ್ ಸಮೀಪ ಇಂದು ಲಾರಿ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆಯಲ್ಲೇ ಮಗುಚಿಬಿದ್ದಿದೆ. ಅತಿವೇಗ ಹಾಗೂ ಓವರ್ಟೇಕ್ ಮಾಡುವ ಭರದಲ್ಲಿ ಈ ದುರಂತ ನಡೆದಿದೆ ಎನ್ನಲಾಗಿದ್ದು, ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿವೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಲಾರಿಯು ಮುಂಭಾಗದಲ್ಲಿದ್ದ ಕಾರನ್ನು ಓವರ್ಟೇಕ್ ಮಾಡಲು ಯತ್ನಿಸಿದಾಗ ಈ ಭೀಕರ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಲಾರಿಯು ಹೆದ್ದಾರಿಗೆ ಅಡ್ಡಲಾಗಿ ಮಗುಚಿಬಿದ್ದಿದೆ.
ಅಪಘಾತದಿಂದಾಗಿ ಕಾರಿನಲ್ಲಿದ್ದವರಿಗೆ ಗಾಯಗಳಾಗಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯ ಸಾರ್ವಜನಿಕರು ಹಾಗೂ ಹಾದಿಹೋಕರು ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲು ನೆರವಾಗಿದ್ದಾರೆ.
ಲಾರಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಕೆಲಕಾಲ ವಾಹನ ಸಂಚಾರ ಸಂಪೂರ್ಣವಾಗಿ ಸ್ತಬ್ಧಗೊಂಡು, ಎರಡೂ ಬದಿಗಳಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕ್ರೇನ್ ಬಳಸಿ ರಸ್ತೆಯಲ್ಲಿದ್ದ ಲಾರಿಯನ್ನು ತೆರವುಗೊಳಿಸಿ ವಾಹನ ಸಂಚಾರವನ್ನು ಸುಗಮಗೊಳಿಸಿದರು. ಪ್ರಕರಣ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಅಂತರ ರಾಜ್ಯ
Supreme Court-ಇಸ್ಲಾಂಗೆ ಮತಾಂತರಗೊಂಡ ಬಳಿಕ ಹಿಂದುಳಿದ ವರ್ಗಗಳ ಮೀಸಲಾತಿಯಿಲ್ಲ; ಸುಪ್ರೀಂಕೋರ್ಟ್
ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿಯು, ಮತಾಂತರಕ್ಕೂ ಮುನ್ನ ಹೊಂದಿದ್ದ ಸಾಮಾಜಿಕ ವರ್ಗದ ಆಧಾರದಲ್ಲಿ ಹಿಂದುಳಿದ ವರ್ಗಗಳ (BC) ಮೀಸಲಾತಿ ಸೌಲಭ್ಯವನ್ನು ಮುಂದುವರಿಸಬಹುದೇ ಎಂಬ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ ಎಂದು ವರದಿಯಾಗಿದೆ. ಈ ಸಂಬಂಧ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದ್ದು, ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.
ನವದೆಹಲಿ: ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿಯು, ಮತಾಂತರಕ್ಕೂ ಮುನ್ನ ಹೊಂದಿದ್ದ ಸಾಮಾಜಿಕ ವರ್ಗದ ಆಧಾರದಲ್ಲಿ ಹಿಂದುಳಿದ ವರ್ಗಗಳ (BC) ಮೀಸಲಾತಿ ಸೌಲಭ್ಯವನ್ನು ಮುಂದುವರಿಸಬಹುದೇ ಎಂಬ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ ಎಂದು ವರದಿಯಾಗಿದೆ. ಈ ಸಂಬಂಧ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದ್ದು, ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಶ್ರೀ ಚಂದ್ರಶೇಖರ್ ಅವರನ್ನೊಳಗೊಂಡ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿದೆ. ಮತಾಂತರದ ನಂತರ ವ್ಯಕ್ತಿಯ ಸಾಮಾಜಿಕ ವರ್ಗದ ಸ್ಥಾನಮಾನ ಮತ್ತು ಮೀಸಲಾತಿ ಅರ್ಹತೆಯನ್ನು ಅನ್ವಯಿಸುವ ಕುರಿತು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ.
ಮೀಸಲಾತಿ ಅರ್ಹತೆ ಕುರಿತು ನ್ಯಾಯಾಲಯದ ಅಭಿಪ್ರಾಯ
ಮತಾಂತರ ಪೂರ್ವದ ಜಾತಿ ಅಥವಾ ಸಮುದಾಯದ ಸ್ಥಿತಿಯನ್ನು, ಮತಾಂತರದ ನಂತರದ ವ್ಯವಸ್ಥೆಯಲ್ಲಿ ಅಧಿಸೂಚಿತ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿಸಲು ಸಾಧ್ಯವಿಲ್ಲ.
ಹಿಂದುಳಿದ ವರ್ಗದಿಂದ, ಇಸ್ಲಾಂ ಅಥವಾ ಹಿಂದೂಯೇತರ ಜಾತಿಗೆ ಕನ್ವರ್ಟ್ ಆಗಲು ಇದ್ದಂತಹ ಪರಿಸ್ಥಿತಿಯು ಏನೇ ಇದ್ದರೂ, ಮತಾಂತರದ ನಂತರ ಬೇರೊಂದು ಹಿಂದುಳಿದ ವರ್ಗದ ಸದಸ್ಯತ್ವನ್ನು ನೀಡಲು ಕಾನೂನಾತ್ಮಕವಾಗಿ ಸಾಧ್ಯವಿಲ್ಲ.
ಸಂವಿಧಾನದ ಪರಿಶಿಷ್ಟ ಜಾತಿಗಳ ಆದೇಶದ ಪ್ರಕಾರ, ಹಿಂದೂ, ಸಿಖ್ ಅಥವಾ ಬೌದ್ದ ಧರ್ಮವನ್ನು ಹೊರತು ಪಡಿಸಿ ಇತರ ಧರ್ಮವನ್ನು ಪ್ರತಿಪಾದಿಸುವ ವ್ಯಕ್ತಿಯನ್ನು ಪರಿಶಿಷ್ಟ ಜಾತಿಯ (SC) ಸದಸ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ.
ಈ ಮೂರು ಜಾತಿಯನ್ನು ಹೊರತು ಪಡಿಸಿ, ಇತರ ಧರ್ಮಕ್ಕೆ ಮತಾಂತರಗೊಂಡ ತಕ್ಷಣವೇ ಆ ವ್ಯಕ್ತಿಯ ಪರಿಶಿಷ್ಠ ಜಾತಿಯ ಸದಸ್ಯತ್ವಕ್ಕೆ ಆಧರಿಸಿ ಇರುವ ಮೀಸಲಾತಿ ವಿಧಿ 16(4) ಮತ್ತು ಸೌಲಭ್ಯಗಳನ್ನು ಕಳೆದುಕೊಳ್ಳುತ್ತಾನೆ.
ಒಂದು ವೇಳೆ, ಹಿಂದೂಯೇತರ ಧರ್ಮಕ್ಕೆ ಮತಾಂತರಗೊಂಡು, ನಂತರ ಮತ್ತೆ ಹಿಂದೂ ಧರ್ಮಕ್ಕೆ ಕನ್ವರ್ಟ್ ಆದರೆ, ಮರುಮತಾಂತರದ ನಂತರ ಮೀಸಲಾತಿ ಆಟೊಮೆಟಿಕ್ ಆಗಿ ಬರುವುದಿಲ್ಲ. ಮರುಮತಾಂತರ ನಂತರದ ಆತನ ಮೂಲ ಜಾತಿಯ ದಾಖಲೆಗಳು ಬದಲಾಗಿರುವುದು ಮುಖ್ಯ.
ಇಸ್ಲಾಂ, ಕ್ರಿಶ್ಚಿಯನ್ ಅಥವಾ ಇತರ ಹಿಂದೂಯೇತರ ಧರ್ಮಕ್ಕೆ ಮತಾಂತರಗೊಂಡ ನಂತರ, ಶಾಸನಬದ್ದ ಸೌಲಭ್ಯ, ರಕ್ಷಣೆ, ಮೀಸಲಾತಿ, ಅರ್ಹತೆಯನ್ನು, ಕನ್ವರ್ಟ್ ಆಗುವ ಮುನ್ನ ಇದ್ದ ಸಾಂವಿಧಾನಿಕ ಆಧಾರದ ಮೇಲೆ ಪಡೆಯಲು ಸಾಧ್ಯವಿಲ್ಲ.
ಪ್ರಕರಣದ ಹಿನ್ನೆಲೆ ಏನು?
ಹಿಂದುಳಿದ ವರ್ಗಗಳು, ಅತ್ಯಂತ ಹಿಂದುಳಿದ ವರ್ಗಗಳು ಅಥವಾ ಪರಿಶಿಷ್ಟ ಜಾತಿಗಳಿಗೆ ಸೇರಿದ ವ್ಯಕ್ತಿಗಳು ಇಸ್ಲಾಂ ಅಥವಾ ಇತರ ಹಿಂದೂಯೇತರ ಧರ್ಮಕ್ಕೆ ಮತಾಂತರಗೊಂಡ ಬಳಿಕವೂ ಹಿಂದುಳಿದ ವರ್ಗದ (ಮುಸ್ಲಿಂ) ಮೀಸಲಾತಿ ಪಡೆಯಲು ಅವಕಾಶ ನೀಡುವ ಸಂಬಂಧ ತಮಿಳುನಾಡು ಸರ್ಕಾರ 2024ರಲ್ಲಿ ಸರ್ಕಾರಿ ಆದೇಶ ಹೊರಡಿಸಿತ್ತು ಎನ್ನಲಾಗಿದೆ.
ಈ ಆದೇಶವನ್ನು ಪ್ರಶ್ನಿಸಲಾಗಿತ್ತು. ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ಸರ್ಕಾರದ ಆದೇಶವನ್ನು ಅಸಂವಿಧಾನಿಕ ಎಂದು ಪರಿಗಣಿಸಿತ್ತು. ಈ ಆದೇಶದ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ ಎಂದು ವರದಿಯಾಗಿದೆ.
ತಮಿಳುನಾಡಿನ ಮುಸ್ಲಿಂ ಹಿಂದುಳಿದ ವರ್ಗಗಳ ಪಟ್ಟಿ
1993ರ ಸರ್ಕಾರಿ ಆದೇಶದಡಿ ಮುಸ್ಲಿಂ ಸಮುದಾಯದ ಏಳು ವಿಭಾಗಗಳನ್ನು ಗುರುತಿಸಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅವುಗಳೆಂದರೆ ಅನ್ಸಾರ್, ಡೆಕ್ಕನಿ ಮುಸ್ಲಿಮರು, ದುಬೇಕುಲ, ಲಬ್ಬೈ, ಮಾಪಿಳೈ, ಶೇಕ್ ಮತ್ತು ಸೈಯದ್.
ಮತಾಂತರದ ಬಳಿಕ ವ್ಯಕ್ತಿಯ ಸಾಮಾಜಿಕ ವರ್ಗದ ಗುರುತು ಮತ್ತು ಮೀಸಲಾತಿ ಅರ್ಹತೆಯನ್ನು ಹೇಗೆ ನಿರ್ಧರಿಸಬೇಕು ಎಂಬ ವಿಚಾರದಲ್ಲಿ ಈ ಪ್ರಕರಣ ಮಹತ್ವ ಪಡೆದಿದೆ.
-
ನಿಧನ ವಾರ್ತೆ9 hours agoಪುತ್ತೂರು: ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧೀಕ್ಷಕ ಶಿವಪ್ರಸಾದ್ ಜಿ.ಎಸ್. ನಿಧನ
-
ಬಿಗ್ ನ್ಯೂಸ್6 hours agoPuttur-ಪುತ್ತೂರು: ಓವರ್ ಟೆಕ್ ಬರದಲ್ಲಿ ಲಾರಿ-ಕಾರು ಅಪಘಾತ; ಪಲ್ಟಿಯಾದ ಲಾರಿ
-
ಅಂತರ ರಾಜ್ಯ9 hours agoBJP minister-ಪತಿ ಎರಡು ಮದುವೆಯಾಗಿದ್ದರೆಂದು ದೂರು ದಾಖಲಿಸಿದ ಬಿಜೆಪಿ ಸಚಿವೆ..!
-
ಅಂತರ ರಾಜ್ಯ7 hours agoRamleela-ನವದೆಹಲಿ: ರಾಮಲೀಲಾದಲ್ಲಿ ಈ ಬಾರಿ ಅಸುರರ ಜತೆಗೆ ʻಜಿರಳೆʼಯೂ ದಹನ..!
-
ಅಪರಾಧ8 hours agoUdupi-ಉಡುಪಿ: ಭೂಗತ ಪಾತಕಿ ಹೇಮಂತ್ ಪೂಜಾರಿ ಸಹಚರನ ಬಂಧನ
-
ಕಾರ್ಯಕ್ರಮಗಳು7 hours agoMangalore-ಮಂಗಳೂರಿಗೆ ಲಗ್ಗೆ ಇಟ್ಟ ಅಲರ್ಜಿ ಪರೀಕ್ಷೆಯ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ರಾಜ್ಯದ ಪ್ರತಿಷ್ಠಿತ ‘ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ’ : ಅ.19ರಂದು 11ನೇ ಶಾಖೆ ಉದ್ಘಾಟನೆ
-
ರಾಜಕೀಯ9 hours agoSting operation case-ಸ್ಟಿಂಗ್ ಆಪರೇಷನ್ ಕೇಸ್ : ಎಸ್ಐಟಿ ಅಥವಾ ಸಿಐಡಿ? ಸಚಿವ ಸಂಪುಟದಲ್ಲಿ ಏನು ನಿರ್ಧಾರ ಆಯಿತು ?
-
ಅಂತರ ರಾಜ್ಯ8 hours agoTruecaller service-ಟೆಲಿಕಾಂ ಸಂಸ್ಥೆಗಳೇ ಒದಗಿಸಲಿವೆ ಟ್ರೂ ಕಾಲರ್ ಸೇವೆ; ಅಪರಿಚಿತ ನಂಬರ್ನಿಂದ ಕರೆ ಬಂದರೂ ಹೆಸರು ಪ್ರದರ್ಶನ ಕಡ್ಡಾಯ?


















