ಬಿಗ್ ನ್ಯೂಸ್
Amazon-ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಆರಂಭ: ಮೊಬೈಲ್, ಫ್ಯಾಷನ್ ಸೇರಿ ಹಲವು ಉತ್ಪನ್ನಗಳ ಮೇಲೆ ಶೇ.80ರವರೆಗೆ ರಿಯಾಯಿತಿ..!
ಆನ್‌ಲೈನ್ ಶಾಪಿಂಗ್ ವೇದಿಕೆ ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ – ದೀಪಾವಳಿ ಆವೃತ್ತಿ ಅಕ್ಟೋಬರ್ 28ರಿಂದ ಆರಂಭವಾಗಿದೆ. ಗ್ರಾಹಕರಿಗೆ ವಿವಿಧ ಉತ್ಪನ್ನಗಳ ಮೇಲೆ ಆಕರ್ಷಕ ಕೊಡುಗೆಗಳು, ವಿಶೇಷ ರಿಯಾಯಿತಿಗಳು ಹಾಗೂ ವೇಗದ ಡೆಲಿವರಿ ಸೌಲಭ್ಯಗಳನ್ನು ಒದಗಿಸುವುದಾಗಿ ಕಂಪನಿ ತಿಳಿಸಿದೆ.
ಬೆಂಗಳೂರು, ಅ.28: ಆನ್‌ಲೈನ್ ಶಾಪಿಂಗ್ ವೇದಿಕೆ ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ – ದೀಪಾವಳಿ ಆವೃತ್ತಿ ಅಕ್ಟೋಬರ್ 28ರಿಂದ ಆರಂಭವಾಗಿದೆ. ಗ್ರಾಹಕರಿಗೆ ವಿವಿಧ ಉತ್ಪನ್ನಗಳ ಮೇಲೆ ಆಕರ್ಷಕ ಕೊಡುಗೆಗಳು, ವಿಶೇಷ ರಿಯಾಯಿತಿಗಳು ಹಾಗೂ ವೇಗದ ಡೆಲಿವರಿ ಸೌಲಭ್ಯಗಳನ್ನು ಒದಗಿಸುವುದಾಗಿ ಕಂಪನಿ ತಿಳಿಸಿದೆ.
ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ಸ್, ಫ್ಯಾಷನ್ ಉತ್ಪನ್ನಗಳು, ಗೃಹೋಪಯೋಗಿ ವಸ್ತುಗಳು ಮತ್ತು ದೈನಂದಿನ ಅಗತ್ಯ ವಸ್ತುಗಳು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಗ್ರಾಹಕರಿಗೆ ವಿಶೇಷ ಕೊಡುಗೆಗಳು ಲಭ್ಯವಿವೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಇಎಂಐ ವಹಿವಾಟುಗಳ ಮೂಲಕ ಶೇ.10ರಷ್ಟು ತತ್‌ಕ್ಷಣದ ರಿಯಾಯಿತಿ ಪಡೆಯಬಹುದು. ಪ್ರೈಮ್ ಸದಸ್ಯರಿಗೆ ಆಯ್ದ ಉತ್ಪನ್ನಗಳ ಖರೀದಿಯಲ್ಲಿ ಹೆಚ್ಚುವರಿ ಕ್ಯಾಶ್‌ಬ್ಯಾಕ್ ಕೊಡುಗೆಗಳೂ ಲಭ್ಯವಿವೆ.
ಮೊಬೈಲ್, ಎಲೆಕ್ಟ್ರಾನಿಕ್ಸ್ ಖರೀದಿಗೆ ವಿಶೇಷ ಕೊಡುಗೆ
ಮೊಬೈಲ್‌ಗಳು ಮತ್ತು ಪರಿಕರಗಳ ಮೇಲೆ ಶೇ.40ರವರೆಗೆ ರಿಯಾಯಿತಿ ಹಾಗೂ 12 ತಿಂಗಳವರೆಗೆ ನೋ-ಕಾಸ್ಟ್ ಇಎಂಐ ಸೌಲಭ್ಯ ಒದಗಿಸಲಾಗಿದೆ. ಆಪಲ್, ಕ್ಯಾನನ್ ಮತ್ತು ಸೋನಿ ಸೇರಿದಂತೆ ಪ್ರಮುಖ ಬ್ರ್ಯಾಂಡ್‌ಗಳ ಆಯ್ದ ಗ್ರಾಹಕ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ಶೇ.80ರವರೆಗೆ ರಿಯಾಯಿತಿ ಲಭ್ಯವಿದೆ.
ಫ್ಯಾಷನ್ ಮತ್ತು ಗೃಹೋಪಯೋಗಿ ವಸ್ತುಗಳ ಮೇಲೂ ರಿಯಾಯಿತಿ
ಫ್ಯಾಷನ್ ಮತ್ತು ಸೌಂದರ್ಯ ಉತ್ಪನ್ನಗಳ ಖರೀದಿದಾರರಿಗೆ ಮೊಕೊಬರಾ, ಕ್ರೋಕ್ಸ್, ಸ್ಕೆಚರ್ಸ್, ಲಕೈ, ಬಿಬಾ ಮತ್ತು ಜಿಎಪಿ ಸೇರಿದಂತೆ ಹಲವು ಬ್ರ್ಯಾಂಡ್‌ಗಳ ಉತ್ಪನ್ನಗಳ ಮೇಲೆ ಶೇ.80ರವರೆಗೆ ರಿಯಾಯಿತಿ ನೀಡಲಾಗುತ್ತಿದೆ.
ದೈನಂದಿನ ಅಗತ್ಯ ವಸ್ತುಗಳ ಮೇಲೆ ಶೇ.70ರವರೆಗೆ ರಿಯಾಯಿತಿ ಲಭ್ಯವಿದೆ. ನಿಂಜಾ, ಸೆಂಚುರಿ, ಹೀರೋ ಮೋಟೋಕಾರ್ಪ್ ಮತ್ತು ಬಾಷ್ ಸೇರಿದಂತೆ ವಿವಿಧ ಬ್ರ್ಯಾಂಡ್‌ಗಳ ಮನೆ, ಅಡುಗೆಮನೆ ಹಾಗೂ ಹೊರಾಂಗಣ ಬಳಕೆಯ ಉತ್ಪನ್ನಗಳ ಮೇಲೆ ಫ್ಲಾಟ್ ಶೇ.50ರವರೆಗೆ ರಿಯಾಯಿತಿ ಘೋಷಿಸಲಾಗಿದೆ. ಅಮೆಜಾನ್ ಎಕೋ ಮತ್ತು ಫೈರ್ ಟಿವಿ ಸಾಧನಗಳ ಮೇಲೂ ವಿಶೇಷ ಕೊಡುಗೆಗಳಿವೆ.
ಅಮೆಜಾನ್ ಪೇ ಗ್ರಾಹಕರಿಗೆ ಹೆಚ್ಚುವರಿ ಕ್ಯಾಶ್‌ಬ್ಯಾಕ್
ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ಖರೀದಿಗಳ ಮೇಲೆ ಹೆಚ್ಚುವರಿ ಶೇ.5ರಷ್ಟು ಕ್ಯಾಶ್‌ಬ್ಯಾಕ್ ಲಭ್ಯವಿದೆ. ಇದು ಪ್ರೈಮ್ ಸದಸ್ಯರಿಗೆ ಈಗಾಗಲೇ ಲಭ್ಯವಿರುವ ಶೇ.5 ಹಾಗೂ ಪ್ರೈಮ್ ಅಲ್ಲದ ಸದಸ್ಯರಿಗೆ ಲಭ್ಯವಿರುವ ಶೇ.3ರ ಕ್ಯಾಶ್‌ಬ್ಯಾಕ್‌ಗೆ ಹೆಚ್ಚುವರಿಯಾಗಿದೆ ಎಂದು ಕಂಪನಿ ತಿಳಿಸಿದೆ.
ವಿಮಾನ, ಹೋಟೆಲ್ ಬುಕಿಂಗ್‌ಗಳಿಗೂ ಕೊಡುಗೆ
ಪ್ರಯಾಣದ ಯೋಜನೆ ರೂಪಿಸುವವರಿಗೂ ಅಮೆಜಾನ್ ವಿಶೇಷ ಉಳಿತಾಯದ ಅವಕಾಶ ಒದಗಿಸಿದೆ. ವಿಮಾನ ಟಿಕೆಟ್ ಬುಕಿಂಗ್‌ಗಳ ಮೇಲೆ ಶೇ.22ರವರೆಗೆ, ಹೋಟೆಲ್ ಬುಕಿಂಗ್‌ಗಳ ಮೇಲೆ ಶೇ.75ರವರೆಗೆ ಮತ್ತು ಬಸ್ ಟಿಕೆಟ್ ಬುಕಿಂಗ್‌ಗಳ ಮೇಲೆ ಶೇ.17ರವರೆಗೆ ಉಳಿತಾಯ ಮಾಡಬಹುದು. ಆಯ್ದ ಬುಕಿಂಗ್‌ಗಳಿಗೆ ಹೆಚ್ಚುವರಿ ಕೊಡುಗೆಗಳೂ ಲಭ್ಯವಿವೆ.
ಇದಲ್ಲದೆ, ನವೆಂಬರ್ 30ರವರೆಗೆ ಅರ್ಹ ಬಿಲ್ ಪಾವತಿಗಳು, ಮೊಬೈಲ್ ರೀಚಾರ್ಜ್‌ಗಳು ಮತ್ತು ಡಿಜಿಟಲ್ ಚಿನ್ನದ ಖರೀದಿಗಳ ಮೇಲೆ 500 ರೂ. ಮೌಲ್ಯದ ಬಹುಮಾನಗಳನ್ನು ಪಡೆಯುವ ಅವಕಾಶವನ್ನೂ ಗ್ರಾಹಕರಿಗೆ ಕಲ್ಪಿಸಲಾಗಿದೆ.
ಬಿಗ್ ನ್ಯೂಸ್
Milk-ಇನ್ಮುಂದೆ ಹಾಲು ದುಬಾರಿ? ಲೀಟರ್‌ಗೆ ₹8 ಹೆಚ್ಚಳಕ್ಕೆ ಸಂಪುಟ ಅನುಮೋದನೆ
ರಾಜ್ಯದಲ್ಲಿ ಹಾಲಿನ ದರವನ್ನು ಲೀಟರ್‌ಗೆ 8 ರೂ. ಹೆಚ್ಚಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಬೆಳೆ ಉತ್ಪಾದನೆ ಕುಸಿತದಿಂದ ಆರ್ಥಿಕ ಸಮಸ್ಯೆ ಎದುರಾಗಿದ್ದು, ಇಂತಹ ಸಂದರ್ಭದಲ್ಲಿ ರೈತರ ನೆರವಿಗೆ ಧಾವಿಸುವುದು ಸರ್ಕಾರದ ಧರ್ಮ ಹಾಗೂ ಕರ್ತವ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಹಾಲಿನ ದರವನ್ನು ಲೀಟರ್‌ಗೆ 8 ರೂ. ಹೆಚ್ಚಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದಾಗಿ ರೈತರು ಹಲವು ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಬೆಳೆ ಉತ್ಪಾದನೆ ಕುಸಿತದಿಂದ ಆರ್ಥಿಕ ಸಮಸ್ಯೆ ಎದುರಾಗಿದ್ದು, ಇಂತಹ ಸಂದರ್ಭದಲ್ಲಿ ರೈತರ ನೆರವಿಗೆ ಧಾವಿಸುವುದು ಸರ್ಕಾರದ ಧರ್ಮ ಹಾಗೂ ಕರ್ತವ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಲಕ್ಷಾಂತರ ರೈತ ಕುಟುಂಬಗಳು ಹೈನುಗಾರಿಕೆಯನ್ನೇ ಜೀವನಾಧಾರವನ್ನಾಗಿ ಮಾಡಿಕೊಂಡಿವೆ. ಹಾಲು ಮಾರಾಟದಿಂದ ದೊರೆಯುವ ಆದಾಯದ ಮೂಲಕವೇ ಈ ಕುಟುಂಬಗಳು ವೈದ್ಯಕೀಯ ವೆಚ್ಚ ಸೇರಿದಂತೆ ತಮ್ಮ ದೈನಂದಿನ ಅಗತ್ಯಗಳನ್ನು ಪೂರೈಸುತ್ತಿವೆ. ಹೈನುಗಾರಿಕೆಯು ರೈತರಿಗೆ ಕನಿಷ್ಠ ಖಾತರಿ ಆದಾಯ ಒದಗಿಸುತ್ತದೆ ಎಂದು ಸಚಿವರು ವಿವರಿಸಿದ್ದಾರೆ.
ಹಾಲಿನ ದರ ಪರಿಷ್ಕರಿಸುವಂತೆ ರೈತರು ಹಲವು ದಿನಗಳಿಂದ ಹೋರಾಟ ನಡೆಸಿ ಒತ್ತಡ ಹೇರಿದ್ದರು. ಪಕ್ಷಾತೀತವಾಗಿ ವಿವಿಧ ವಲಯಗಳಿಂದಲೂ ದರ ಹೆಚ್ಚಳಕ್ಕೆ ಒತ್ತಾಯ ಕೇಳಿಬಂದಿತ್ತು. ರೈತರ ಬೇಡಿಕೆಗೆ ಸ್ಪಂದಿಸಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ದರ ಕಡಿಮೆ
ರಾಜ್ಯದಲ್ಲಿ ಪ್ರಸ್ತುತ ಹಾಲಿನ ದರ ಲೀಟರ್‌ಗೆ 46 ರೂ. ಇದ್ದರೆ, ಮಹಾರಾಷ್ಟ್ರದಲ್ಲಿ 59 ರೂ., ರಾಜಸ್ಥಾನ ಮತ್ತು ಕೇರಳದಲ್ಲಿ ತಲಾ 56 ರೂ. ಇದೆ. ದೇಶಾದ್ಯಂತ ಹಾಲಿನ ದರ ಸರಾಸರಿ 56 ರೂ.ಗಳಷ್ಟಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಎಲ್ಲ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ರೈತರಿಗೂ ಆರ್ಥಿಕ ನೆರವು ಒದಗಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಇದಲ್ಲದೆ, ರಾಜ್ಯದಲ್ಲಿ ಪ್ರತಿದಿನದ ಹಾಲಿನ ಉತ್ಪಾದನೆ ಸುಮಾರು 10 ಲಕ್ಷ ಲೀಟರ್‌ನಷ್ಟು ಕಡಿಮೆಯಾಗಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಹಾಲಿನ ದರವನ್ನು ಲೀಟರ್‌ಗೆ ಒಟ್ಟು 8 ರೂ. ಹೆಚ್ಚಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಬಿಗ್ ನ್ಯೂಸ್
Protest-ಕುಪ್ಪೆಟ್ಟಿ–ಉಪ್ಪಿನಂಗಡಿ ರಸ್ತೆ ದುಸ್ಥಿತಿ: ನ.6 ರಂದು ಕಲ್ಲೇರಿಯಲ್ಲಿ ಬೃಹತ್ ಪ್ರತಿಭಟನೆ
ಕುಪ್ಪೆಟ್ಟಿ–ಉಪ್ಪಿನಂಗಡಿ ನಡುವಿನ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟು, ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ನಾಗರಿಕರು ನವೆಂಬರ್ 6ರಂದು ಕಲ್ಲೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಉಪ್ಪಿನಂಗಡಿ: ಕುಪ್ಪೆಟ್ಟಿ–ಉಪ್ಪಿನಂಗಡಿ ನಡುವಿನ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟು, ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ನಾಗರಿಕರು ನವೆಂಬರ್ 6ರಂದು ಕಲ್ಲೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಸುಮಾರು 9.5 ಕಿ.ಮೀ. ಉದ್ದದ ಈ ರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು, ವಾಹನಗಳ ಸಂಚಾರಕ್ಕೂ ಜನರ ಓಡಾಟಕ್ಕೂ ತೀವ್ರ ಸಮಸ್ಯೆ ಎದುರಾಗಿದೆ. ರಸ್ತೆ ದುರಸ್ತಿಗೆ ಆಗ್ರಹಿಸಿ ನಾಗರಿಕರು ಒಗ್ಗೂಡಿದ್ದು, ಹೋರಾಟಕ್ಕಾಗಿ ರಚಿಸಿರುವ ‘ಸಮಾನ ವೇದಿಕೆ’ಯ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಕೆಲವೇ ದಿನಗಳಲ್ಲಿ ಸಾವಿರಾರು ಮಂದಿ ಸೇರ್ಪಡೆಯಾಗಿದ್ದಾರೆ. ರಸ್ತೆ ದುಸ್ಥಿತಿಯ ಬಗ್ಗೆ ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನವೆಂಬರ್ 6ರಂದು ಸಂಜೆ 3 ಗಂಟೆಗೆ ತಣ್ಣೀರುಪಂತ ಗ್ರಾಮದ ಕಲ್ಲೇರಿಯಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಕಾಂಗ್ರೆಸ್, ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಪಕ್ಷಭೇದ ಮರೆತು ರಸ್ತೆ ದುರಸ್ತಿಗಾಗಿ ಒಗ್ಗಟ್ಟಿನಿಂದ ಹೋರಾಟಕ್ಕೆ ಇಳಿಯಲು ಮುಂದಾಗಿದ್ದಾರೆ.
ನಾಲ್ಕು ವರ್ಷಗಳಿಂದಲೂ ಸಮಸ್ಯೆ
ಕಳೆದ ನಾಲ್ಕು ವರ್ಷಗಳಿಂದ ಕುಪ್ಪೆಟ್ಟಿ–ಉಪ್ಪಿನಂಗಡಿ ರಸ್ತೆ ಹದಗೆಟ್ಟಿದ್ದು, ವಾಹನ ಸವಾರರು ಪ್ರತಿದಿನ ಸಂಕಷ್ಟ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ರಸ್ತೆ ದುರಸ್ತಿಗೆ ಆಗ್ರಹಿಸಿದಾಗ ಮುಂದಿನ ಬೇಸಿಗೆಯಲ್ಲಿ ಕಾಮಗಾರಿ ನಡೆಸುವ ಭರವಸೆ ನೀಡಲಾಗುತ್ತದೆ. ಆದರೆ, ಬೇಸಿಗೆಯಲ್ಲಿ ಹೊಂಡಗಳಿಗೆ ತೇಪೆ ಹಾಕುವ ಕೆಲಸ ಮಾತ್ರ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಅವು ಕಿತ್ತುಹೋಗಿ ಮತ್ತೆ ರಸ್ತೆ ಗುಂಡಿಮಯವಾಗುತ್ತಿದೆ.
ಕಳೆದ ಬೇಸಿಗೆಯಲ್ಲಿ ಬೆಳ್ತಂಗಡಿ ಶಾಸಕರ 45 ಲಕ್ಷ ರೂ. ಅನುದಾನದಲ್ಲಿ ರಸ್ತೆಯ ದೊಡ್ಡ ಹೊಂಡಗಳನ್ನು ಮುಚ್ಚಲಾಗಿತ್ತು. ಇದರಿಂದ ಸಾರ್ವಜನಿಕರು ಸ್ವಲ್ಪ ನಿರಾಳರಾಗಿದ್ದರಾದರೂ, ಮಳೆಗಾಲದಲ್ಲಿ ತೇಪೆ ಕಿತ್ತುಹೋಗಿ ರಸ್ತೆಯಲ್ಲಿ ನೀರು ನಿಲ್ಲುವಂತಾಗಿದೆ. ರಸ್ತೆಯಲ್ಲಿರುವ ಹೊಂಡಗಳಿಂದ ವಾಹನಗಳ ಬಿಡಿಭಾಗಗಳು ಹಾನಿಗೊಳಗಾಗುತ್ತಿದ್ದು, ದ್ವಿಚಕ್ರ ವಾಹನ ಸವಾರರು ಜೀವಭಯದಲ್ಲೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಈ ರಸ್ತೆಯಲ್ಲಿ ಸಂಚರಿಸಿ ಸಮಸ್ಯೆಯ ತೀವ್ರತೆಯನ್ನು ಅನುಭವಿಸಿದ್ದರೂ, ರಸ್ತೆ ಪರಿಸ್ಥಿತಿಯಲ್ಲಿ ಯಾವುದೇ ಗಮನಾರ್ಹ ಬದಲಾವಣೆಯಾಗಿಲ್ಲ ಎಂಬುದು ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ರಸ್ತೆ ದುರಸ್ತಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಪಕ್ಷಭೇದ ಮರೆತು ಪ್ರತಿಭಟನೆಗೆ ಸಜ್ಜಾಗಿದ್ದಾರೆ.
ಮಂಗಳೂರು
Soujanya case-ಸೌಜನ್ಯ ಪ್ರಕರಣ: ಎಸ್‌ಐಟಿ ಮುಖ್ಯಸ್ಥ ಸ್ಥಾನದಿಂದ ಶಶಿಕುಮಾರ್ ಬಿಡುಗಡೆ?
ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆಗಾಗಿ ರಚಿಸಲಾಗಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಖ್ಯಸ್ಥರಾಗಿ ನೇಮಕಗೊಂಡಿದ್ದ ಐಜಿಪಿ ಶಶಿಕುಮಾರ್ ಅವರು ವೈಯಕ್ತಿಕ ಕಾರಣಗಳಿಂದ ತಂಡದಿಂದ ಬಿಡುಗಡೆಗೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಅಧಿಕೃತ ಆದೇಶ ಇನ್ನಷ್ಟೇ ಹೊರಬೀಳಬೇಕಿದೆ.
ಮಂಗಳೂರು, ಅ.29: ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆಗಾಗಿ ರಚಿಸಲಾಗಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಖ್ಯಸ್ಥರಾಗಿ ನೇಮಕಗೊಂಡಿದ್ದ ಐಜಿಪಿ ಶಶಿಕುಮಾರ್ ಅವರು ವೈಯಕ್ತಿಕ ಕಾರಣಗಳಿಂದ ತಂಡದಿಂದ ಬಿಡುಗಡೆಗೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಅಧಿಕೃತ ಆದೇಶ ಇನ್ನಷ್ಟೇ ಹೊರಬೀಳಬೇಕಿದೆ.
ಎಸ್‌ಐಟಿಯಿಂದ ತಮ್ಮನ್ನು ಬಿಡುಗಡೆಗೊಳಿಸುವಂತೆ ಶಶಿಕುಮಾರ್ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಎಸ್‌ಐಟಿಯ ನೂತನ ಮುಖ್ಯಸ್ಥರಾಗಿ ಲಾಬುರಾಮ್ ಅಥವಾ ಚೇತನ್ ಸಿಂಗ್ ರಾಥೋಡ್ ಅವರನ್ನು ನೇಮಕ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇದೇ ವೇಳೆ, ಎಸ್‌ಐಟಿಯ ಎಎಸ್‌ಪಿ ವೆಂಕಟೇಶ್ ಪ್ರಸನ್ನ ಅವರನ್ನೂ ಬದಲಾಯಿಸುವ ಸಾಧ್ಯತೆ ಇದೆ. ಅವರ ಸ್ಥಾನಕ್ಕೆ ಎಸಿಪಿ ಶ್ರೀನಿಧಿ ಅವರನ್ನು ನೇಮಕ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
-
ಮಂಗಳೂರು21 hours ago
ಫರಂಗಿಪೇಟೆಯಲ್ಲಿ ಸ್ಟುಡಿಯೋ ಮಾಲೀಕನನ್ನು ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ ಕೇಸ್: ನಾಲ್ವರಿಗೆ 7 ವರ್ಷ ಜೈಲು ಶಿಕ್ಷೆ
-
ದಕ್ಷಿಣ ಕನ್ನಡ9 hours ago
ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ₹6.86 ಕೋಟಿ ವಂಚನೆ ಆರೋಪ: ಕಾರ್ಯನಿರ್ವಾಹಣಾಧಿಕಾರಿ ಹಾಗೂ ಮಹಿಳೆ ವಿರುದ್ಧ FIR
-
ಅಪರಾಧ7 hours agoPuttur-ಪುತ್ತೂರು : ಕಾಲೇಜ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ದೂರು: ಪ್ರಕರಣ ದಾಖಲು
-
ಮಂಗಳೂರು7 hours agoSoujanya Case-Big Breaking: ಸೌಜನ್ಯ ಮರುತನಿಖೆಯಲ್ಲಿ ಮಹತ್ವದ ಬೆಳವಣಿಗೆ : SIT ವಿಚಾರಣೆಗೆ ಆಗಮಿಸಿದ ಎಸ್ಐ ಯೋಗೀಶ್ – ಸಿಐಡಿ ಡಿವೈಎಸ್ಪಿ ರುದ್ರಮುನಿ – ಭಾಸ್ಕರ್ ರೈ
-
ಅಂತರ ರಾಜ್ಯ7 hours agoHigh Court-ಅನ್ಯಧರ್ಮದವರಿಗೆ ಹಿಂದೂ ದೇಗುಲ ಪ್ರವೇಶ ನಿರ್ಬಂಧ: ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು
-
ನಿಧನ ವಾರ್ತೆ6 hours agoUppinangadi-ತೆಂಗಿನಕಾಯಿ ಕೀಳಲು ಉಪ್ಪಿನಂಗಡಿಯಿಂದ ಕರೆದೊಯ್ದ ಕಾರ್ಮಿಕ ಶಿವಮೊಗ್ಗದಲ್ಲಿ ನಿಗೂಢ ಸಾವು; ದೂರು ದಾಖಲು
-
ಅಪರಾಧ6 hours agoPuttur-ಪುತ್ತೂರು: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ; ಅಪರಾಧಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ
-
ಸ್ಥಳೀಯ7 hours agoSIT investigation-ಧರ್ಮಸ್ಥಳ ಎಸ್‌ಐಟಿ ತನಿಖೆ : ಅಸಹಜ ಸಾವು ,ನಾಪತ್ತೆ ಪ್ರಕರಣಗಳ ತನಿಖೆ : ಎಸ್‌ಐಟಿ ವ್ಯಾಪ್ತಿ ವಿಸ್ತರಣೆಗೆ ಸರ್ಕಾರಕ್ಕೆ ಒತ್ತಡ ತರಲು ಶಾಸಕ ಹರೀಶ್ ಪೂಂಜಾಗೆ ಮನವಿ..!


















