Connect with us

ಕಾರ್ಯಕ್ರಮಗಳು

Puttur-ಪುತ್ತೂರು: ಬಂಟರ ಭವನದಲ್ಲಿ ʻಪಿಲಿ ಪಜ್ಜೆ ಸಂಭ್ರಮʼ: ಶಾರದಾ ಹುಲಿ ತಂಡದಿಂದ ಆಕರ್ಷಕ ಹುಲಿವೇಷ ಕುಣಿತ

Published

on



Ad Widget

Ad Widget

Ad Widget

Ad Widget

ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಹಾಗೂ ಮಹಿಳಾ, ಯುವ ಮತ್ತು ವಿದ್ಯಾರ್ಥಿ ಬಂಟರ ವಿಭಾಗಗಳ ಸಹಯೋಗದಲ್ಲಿ ಅ.21ರಂದು ಪುತ್ತೂರು ಬಂಟರ ಭವನದ ಅಂಗಳದಲ್ಲಿ ಎರಡನೇ ವರ್ಷದ ‘ಪಿಲಿ ಪಜ್ಜೆ’ (ಹುಲಿವೇಷ ಕುಣಿತ), ಆಯುಧ ಪೂಜೆ ಹಾಗೂ ಭಜನಾ ಕಾರ್ಯಕ್ರಮ ನಡೆಯಿತು.

Ad Widget

Ad Widget

Ad Widget

Ad Widget

ಪುತ್ತೂರು: ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಹಾಗೂ ಮಹಿಳಾ, ಯುವ ಮತ್ತು ವಿದ್ಯಾರ್ಥಿ ಬಂಟರ ವಿಭಾಗಗಳ ಸಹಯೋಗದಲ್ಲಿ ಅ.21ರಂದು ಪುತ್ತೂರು ಬಂಟರ ಭವನದ ಅಂಗಳದಲ್ಲಿ ಎರಡನೇ ವರ್ಷದ ‘ಪಿಲಿ ಪಜ್ಜೆ’ (ಹುಲಿವೇಷ ಕುಣಿತ), ಆಯುಧ ಪೂಜೆ ಹಾಗೂ ಭಜನಾ ಕಾರ್ಯಕ್ರಮ ನಡೆಯಿತು.

Ad Widget

Ad Widget

Ad Widget alt="Ad Widget"/>

Ad Widget

ಕೀರ್ತಿಶೇಷ ಪಿಲಿ ರಾಧಣ್ಣ ಅವರ ಶಾರದಾ ಹುಲಿ ತಂಡದ ನೇತೃತ್ವದಲ್ಲಿ ನಡೆದ ಪಿಲಿ ಪಜ್ಜೆ ಕಾರ್ಯಕ್ರಮವು ನೆರೆದಿದ್ದವರ ಗಮನ ಸೆಳೆಯಿತು.

Ad Widget

Ad Widget <> Ad Widget

ಕಾವು ಹೇಮನಾಥ ಶೆಟ್ಟಿ ಅವರಿಂದ ಕಾರ್ಯಕ್ರಮ ಉದ್ಘಾಟನೆ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.



Ad Widget

ಬಳಿಕ ಮಾತನಾಡಿದ ಅವರು, ಕಳೆದ ವರ್ಷದಿಂದ ಸಂಘದ ಮೂಲಕ ಪಿಲಿ ರಾಧಣ್ಣ ಅವರ ತಂಡದ ಹುಲಿವೇಷದ ಸೊಬಗನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿಯೂ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

Ad Widget

Ad Widget

ಐಸಿರಿ ತಂಡದಿಂದ ಭಜನೆ
ತಾಲೂಕು ಮಹಿಳಾ ಬಂಟರ ವಿಭಾಗದ ಐಸಿರಿ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ತಂಡವನ್ನು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರು ಗೌರವಿಸಿದರು.

ಅಭಿಷೇಕ್ ಶೆಟ್ಟಿಗೆ ಗೌರವಾರ್ಪಣೆ
ಕೀರ್ತಿಶೇಷ ಪಿಲಿ ರಾಧಣ್ಣ ಅವರ ಪುತ್ರ ಅಭಿಷೇಕ್ ಶೆಟ್ಟಿ ಅವರ ನೇತೃತ್ವದಲ್ಲಿ ಶಾರದಾ ಹುಲಿ ತಂಡದಿಂದ ಸುಮಾರು ಒಂದು ಗಂಟೆ ಕಾಲ ಆಕರ್ಷಕ ಪಿಲಿ ಪಜ್ಜೆ ಕಾರ್ಯಕ್ರಮ ನಡೆಯಿತು. ಅಭಿಷೇಕ್ ಶೆಟ್ಟಿ ಅವರನ್ನು ತಾಲೂಕು ಬಂಟರ ಸಂಘದ ವತಿಯಿಂದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರು ಗೌರವಿಸಿದರು.

ಶಾಸಕ ಅಶೋಕ್ ಕುಮಾರ್ ರೈ ಭೇಟಿ
ಶಾಸಕ ಅಶೋಕ್ ಕುಮಾರ್ ರೈ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಸುಮಾರು 30 ನಿಮಿಷಗಳ ಕಾಲ ಹುಲಿವೇಷ ಕುಣಿತವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅವರನ್ನು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರು ಗೌರವಿಸಿದರು.

ಮಿತ್ರಂಪಾಡಿ ಜಯರಾಮ ರೈ ಅವರಿಗೆ ಸ್ವಾಗತ
ಬಂಟರ ಸಂಘದ ವತಿಯಿಂದ ಆಯುಧ ಪೂಜೆ ನಡೆಯುತ್ತಿದ್ದ ವೇಳೆ ಅಬುಧಾಬಿಯ ಉದ್ಯಮಿ ಮಿತ್ರಂಪಾಡಿ ಜಯರಾಮ ರೈ ಅವರು ಆಗಮಿಸಿದರು. ಅವರನ್ನು ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರು ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ವಾಹನಗಳಿಗೆ ಆಯುಧ ಪೂಜೆ ನೆರವೇರಿಸಲಾಯಿತು. ಭಾಗವಹಿಸಿದವರಿಗೆ ಕಡ್ಲೆ, ಬಜಿಲ್, ಕ್ಷೀರ, ಚಹಾ ಹಾಗೂ ಕಾಫಿಯ ವ್ಯವಸ್ಥೆ ಮಾಡಲಾಗಿತ್ತು.

ಗಣ್ಯರ ಉಪಸ್ಥಿತಿ
ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿಯ ನಿಕಟಪೂರ್ವ ಸಂಚಾಲಕ ಕುಂಬ ದುರ್ಗಾಪ್ರಸಾದ್ ರೈ, ಬಂಟರ ಸಂಘದ ಮಾಜಿ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು, ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಗೀತಾ ಮೋಹನ್ ರೈ, ತಾಲೂಕು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ, ಕೋಶಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ ಸಾಜ, ನಿರ್ದೇಶಕರಾದ ಎನ್. ರವೀಂದ್ರ ಶೆಟ್ಟಿ ನುಳಿಯಾಲು, ಶಿವನಾಥ ರೈ ಮೇಗಿನಗುತ್ತು, ರವಿಪ್ರಸಾದ್ ಶೆಟ್ಟಿ ಬನ್ನೂರು ಉಪಸ್ಥಿತರಿದ್ದರು.

ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕರಾದ ಜಯಪ್ರಕಾಶ್ ರೈ ನೂಜಿಬೈಲು, ವತ್ಸಲಾ ಪಿ. ಶೆಟ್ಟಿ, ಬಂಟರ ಸಂಘದ ಮಾಜಿ ಕೋಶಾಧಿಕಾರಿ ಕೃಷ್ಣ ಪ್ರಸಾದ್ ಆಳ್ಳ ಉಪ್ಪಳಿಗೆ, ಜತೆ ಕಾರ್ಯದರ್ಶಿಗಳಾದ ಹರಿಣಾಕ್ಷಿ ಜೆ. ಶೆಟ್ಟಿ, ಸ್ವರ್ಣಲತಾ ಜಿರೆ, ಉದ್ಯಮಿಗಳಾದ ಎಂ.ಆರ್. ಜಯಕುಮಾರ್ ರೈ ಮಿತ್ರಂಪಾಡಿ, ಸೂರನಾಥ ಆಳ್ಳ ಮಿತ್ತಳಿಕೆ, ಪ್ರಕಾಶ್ ರೈ ಮನವಳಿಕೆ, ತಾಲೂಕು ವಿದ್ಯಾರ್ಥಿ ಬಂಟರ ವಿಭಾಗದ ಅಧ್ಯಕ್ಷ ಸಮೃದ್ಧ್ ಶೆಟ್ಟಿ ಹಾಗೂ ಪದಾಧಿಕಾರಿಗಳು, ತಾಲೂಕು ಯುವ ಬಂಟರ ವಿಭಾಗದ ಉಪಾಧ್ಯಕ್ಷ ಸುಜೀರ್ ಕುಮಾರ್ ಶೆಟ್ಟಿ ನುಳಿಯಾಲು, ಪ್ರಧಾನ ಕಾರ್ಯದರ್ಶಿ ಸಂದೇಶ್ ರೈ, ಮಹಿಳಾ ಬಂಟರ ವಿಭಾಗದ ಕೋಶಾಧಿಕಾರಿ ಅರುಣಾ ಡಿ.ಜಿ. ಹಾಗೂ ಪದಾಧಿಕಾರಿಗಳು ಮತ್ತು ಐಸಿರಿ ಭಜನಾ ತಂಡದ ನಯನಾ ರೈ ನೆಲ್ಲಿಕಟ್ಟೆ ಹಾಗೂ ತಂಡದ ಸದಸ್ಯರು ಭಾಗವಹಿಸಿದ್ದರು.

ರವಿಚಂದ್ರ ರೈ ಕುಂಬ ಹಾಗೂ ಭಾಸ್ಕರ್ ರೈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Ad Widget
Click to comment

Leave a Reply

ಸ್ಥಳೀಯ

Dharmasthala-ಧರ್ಮಸ್ಥಳದಲ್ಲಿ ಶರನ್ನವರಾತ್ರಿ ಉತ್ಸವ ಸಂಪನ್ನ; ಸಹಸ್ರಾರು ಮುತ್ತೈದೆಯರಿಗೆ ವಸ್ತ್ರ ಪ್ರಸಾದ ವಿತರಣೆ – ಭಕ್ತಿ, ಸಂಗೀತಾರಾಧನೆಯೊಂದಿಗೆ ನವರಾತ್ರಿ ಸಂಭ್ರಮ

Published

on



Ad Widget

Ad Widget

Ad Widget

Ad Widget

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶರನ್ನವರಾತ್ರಿ ಪ್ರಯುಕ್ತ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಒಂಬತ್ತು ದಿನಗಳ ಕಾಲ ನಡೆದ ವಿಶೇಷ ಪೂಜಾ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ಉತ್ಸವಗಳು ಅ.19 ಮಹಾನವಮಿಯಂದು ಸಂಭ್ರಮದಿಂದ ಸಂಪನ್ನಗೊಂಡವು.

Ad Widget

Ad Widget

Ad Widget

Ad Widget

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶರನ್ನವರಾತ್ರಿ ಪ್ರಯುಕ್ತ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಒಂಬತ್ತು ದಿನಗಳ ಕಾಲ ನಡೆದ ವಿಶೇಷ ಪೂಜಾ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ಉತ್ಸವಗಳು ಅಕ್ಟೋಬರ್ 19ರಂದು ಮಹಾನವಮಿಯಂದು ಸಂಭ್ರಮದಿಂದ ಸಂಪನ್ನಗೊಂಡವು.

Ad Widget

Ad Widget

Ad Widget alt="Ad Widget"/>

Ad Widget

ಅಕ್ಟೋಬರ್ 11ರಿಂದ 19ರವರೆಗೆ ಪ್ರತಿದಿನ ರಾತ್ರಿ ಶ್ರೀ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಪೂಜೆ, ಉತ್ಸವ, ಕನ್ನಿಕಾ ಪೂಜೆ ಹಾಗೂ ಅಷ್ಟಾವಧಾನ ಸೇವೆಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು. ಅಕ್ಟೋಬರ್ 17ರಂದು ಚಂಡಿಕಾ ಹವನವನ್ನು ವಿಶೇಷವಾಗಿ ನೆರವೇರಿಸಲಾಯಿತು.

Ad Widget

Ad Widget <> Ad Widget

ಸಹಸ್ರಾರು ಮುತ್ತೈದೆಯರಿಗೆ ವಸ್ತ್ರ ಪ್ರಸಾದ:



Ad Widget

ಮಹಾನವಮಿ ಪ್ರಯುಕ್ತ ಅಕ್ಟೋಬರ್ 19ರಂದು ರಾತ್ರಿ ಶರನ್ನವರಾತ್ರಿಯ ವಿಶೇಷ ಉತ್ಸವಗಳು ಸಮಾಪನಗೊಂಡವು. ಈ ಸಂದರ್ಭದಲ್ಲಿ ಸಹಸ್ರಾರು ಮುತ್ತೈದೆಯರಿಗೆ ವಸ್ತ್ರ ಪ್ರಸಾದ ವಿತರಿಸಲಾಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಮುತ್ತೈದೆಯರು ಸರತಿ ಸಾಲಿನಲ್ಲಿ ಶಿಸ್ತುಬದ್ಧವಾಗಿ ಬಂದು ಭಕ್ತಿಭಾವದಿಂದ ವಸ್ತ್ರ ಪ್ರಸಾದ ಸ್ವೀಕರಿಸಿದರು.

Ad Widget

Ad Widget

ಸಂಗೀತಾರಾಧನೆಯೊಂದಿಗೆ ನವರಾತ್ರಿ ವೈಭವ:

ಶರನ್ನವರಾತ್ರಿ ಉತ್ಸವದ ಅಂಗವಾಗಿ ಕ್ಷೇತ್ರದ ಪ್ರವಚನ ಮಂಟಪದಲ್ಲಿ ಪ್ರತಿದಿನ ಸಂಜೆ 6ರಿಂದ ರಾತ್ರಿ 8ರವರೆಗೆ ವಿವಿಧ ಸಂಗೀತ ಕಲಾವಿದರಿಂದ ಭಕ್ತಿಗೀತೆ ಹಾಗೂ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ನಡೆದವು. ಸಂಗೀತ ಕಲಾವಿದರ ಭಕ್ತಿಪೂರ್ಣ ಗಾಯನವು ನವರಾತ್ರಿ ಉತ್ಸವಕ್ಕೆ ವಿಶೇಷ ಮೆರುಗು ನೀಡಿತು.

ಅಕ್ಟೋಬರ್ 19ರಂದು ರಾತ್ರಿ ಸಂಗೀತ ಕಾರ್ಯಕ್ರಮಗಳೂ ಸಮಾಪನಗೊಂಡವು. ಒಂಬತ್ತು ದಿನಗಳ ಕಾಲ ನಡೆದ ಪೂಜೆ, ಧಾರ್ಮಿಕ ವಿಧಿವಿಧಾನಗಳು, ಉತ್ಸವಗಳು ಹಾಗೂ ಸಂಗೀತಾರಾಧನೆಯೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಶರನ್ನವರಾತ್ರಿ ಮಹೋತ್ಸವವು ಭಕ್ತಿಪೂರ್ಣವಾಗಿ ಸಂಪನ್ನಗೊಂಡಿತು.

Ad Widget
Continue Reading

ಕಾರ್ಯಕ್ರಮಗಳು

Puttur-ತುಳಸಿ ಪೂಜೆಯಂದು ನಡೆಯಲಿದೆ ಶಾಸಕ ಅಶೋಕ್ ರೈ ನೇತೃತ್ವದ 14ನೇ ವರ್ಷದ ‘ಅಶೋಕ ಜನ-ಮನ’ – ನ.22ರಂದು 3 ಕೌಂಟರ್ ನಲ್ಲಿ ನಡೆಯಲಿದೆ 1 ಲಕ್ಷಕ್ಕೂ ಮಿಕ್ಕಿ ಜನರಿಗೆ ತುಳುನಾಡಿನ ಬೃಹತ್ ‘ವಸ್ತ್ರ ವಿತರಣೆ’..!

Published

on



Ad Widget

Ad Widget

Ad Widget

Ad Widget

ಶಾಸಕ ಅಶೋಕ್ ಕುಮಾರ್ ರೈ ಮುಖ್ಯ ಪ್ರವರ್ತಕರಾಗಿರುವ ರೈ ಎಸ್ಟೇಟ್ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದೀಪಾವಳಿ ಪ್ರಯುಕ್ತ ಆಯೋಜಿಸಲಾಗಿದ್ದ 14ನೇ ವರ್ಷದ ‘ಅಶೋಕ ಜನ-ಮನ’ ವಸ್ತ್ರ ವಿತರಣಾ ಕಾರ್ಯಕ್ರಮವನ್ನು ಮಳೆಯ ಕಾರಣದಿಂದ ಮುಂದೂಡಲಾಗಿದೆ. ನವೆಂಬರ್ 8ರಂದು ನಡೆಯಬೇಕಿದ್ದ ಕಾರ್ಯಕ್ರಮವು ಇದೀಗ ನವೆಂಬರ್ 22ರಂದು ತುಳಸಿ ಹಬ್ಬದ ದಿನ ನಡೆಯಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

Ad Widget

Ad Widget

Ad Widget

Ad Widget

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಮುಖ್ಯ ಪ್ರವರ್ತಕರಾಗಿರುವ ರೈ ಎಸ್ಟೇಟ್ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದೀಪಾವಳಿ ಪ್ರಯುಕ್ತ ಆಯೋಜಿಸಲಾಗಿದ್ದ 14ನೇ ವರ್ಷದ ‘ಅಶೋಕ ಜನ-ಮನ’ ವಸ್ತ್ರ ವಿತರಣಾ ಕಾರ್ಯಕ್ರಮವನ್ನು ಮಳೆಯ ಕಾರಣದಿಂದ ಮುಂದೂಡಲಾಗಿದೆ. ನವೆಂಬರ್ 8ರಂದು ನಡೆಯಬೇಕಿದ್ದ ಕಾರ್ಯಕ್ರಮವು ಇದೀಗ ನವೆಂಬರ್ 22ರಂದು ತುಳಸಿ ಹಬ್ಬದ ದಿನ ನಡೆಯಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಅ.22ರಂದು ಶಾಸಕರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷದ ಅಶೋಕ ಜನ-ಮನ ಕಾರ್ಯಕ್ರಮಕ್ಕೆ ನವೆಂಬರ್ 8ರಂದು ದಿನಾಂಕ ನಿಗದಿಪಡಿಸಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಕಾರ್ಯಕ್ರಮ ನಡೆಯುವ ಕ್ರೀಡಾಂಗಣದಲ್ಲಿ ಮಣ್ಣು ಹಾಕಿ ಸಮತಟ್ಟು ಮಾಡುವ ಕಾರ್ಯವನ್ನೂ ಪೂರ್ಣಗೊಳಿಸಲಾಗಿತ್ತು. ಆದರೆ, ಹವಾಮಾನ ವೈಪರೀತ್ಯದಿಂದ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ತೊಂದರೆಯಾಗದಂತೆ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸುವ ಉದ್ದೇಶದಿಂದ ಮುಂದೂಡಲಾಗಿದೆ ಎಂದು ತಿಳಿಸಿದರು.

Ad Widget

Ad Widget <> Ad Widget

ಬೆಳಿಗ್ಗೆ 9.30ರಿಂದಲೇ ವಸ್ತ್ರ ವಿತರಣೆ
ಕಾರ್ಯಕ್ರಮದಲ್ಲಿ ಅತಿಥಿಗಳಿಗಾಗಿ ಕಾಯದೆ ಬೆಳಿಗ್ಗೆ 9.30ರಿಂದಲೇ ವಸ್ತ್ರ ವಿತರಣೆ ಆರಂಭಿಸಲಾಗುವುದು. ಯಾವುದೇ ಗೊಂದಲಕ್ಕೆ ಅವಕಾಶವಾಗದಂತೆ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಜನರಷ್ಟೇ ಅಲ್ಲದೆ, ಇತರ ಪ್ರದೇಶಗಳಿಂದ ಆಗಮಿಸುವವರಿಗೂ ವಸ್ತ್ರ ಹಾಗೂ ಅಗತ್ಯ ವಸ್ತುಗಳನ್ನು ವಿತರಿಸಲಾಗುವುದು. ಇದಕ್ಕಾಗಿ ಯಾವುದೇ ಗುರುತಿನ ಚೀಟಿ ತರುವ ಅಗತ್ಯವಿಲ್ಲ. ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ವಿತರಣೆ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.



Ad Widget

ಒಂದು ಲಕ್ಷ ಜನರಿಗೆ ವಸ್ತ್ರ ಹಾಗೂ ಅಗತ್ಯ ವಸ್ತುಗಳ ವಿತರಣೆ
ಈ ಬಾರಿ ಒಂದು ಲಕ್ಷ ಜನರಿಗೆ ವಸ್ತ್ರ ಹಾಗೂ ಅಗತ್ಯ ವಸ್ತುಗಳನ್ನು ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಂದೇ ಮನೆಯಿಂದ ಎಷ್ಟು ಮಂದಿ ಬಂದರೂ ಪ್ರತಿಯೊಬ್ಬರಿಗೂ ವಸ್ತುಗಳನ್ನು ನೀಡಲಾಗುವುದು.

Ad Widget

Ad Widget

ಮಹಿಳೆಯರಿಗೆ ಸೀರೆ ಹಾಗೂ ಪುರುಷರಿಗೆ ಬೆಡ್‌ಶೀಟ್ ಸೇರಿದಂತೆ ಬಟ್ಟಲು, ಗ್ಯಾಸ್, ಬೌಲ್ ಮತ್ತು ಟವೆಲ್ ಸೆಟ್‌ಗಳನ್ನು ವಿತರಿಸಲಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ಮೂರು ಕೌಂಟರ್‌ಗಳನ್ನು ತೆರೆಯಲಾಗಿದ್ದು, ಜನರು ತಮಗೆ ಅಗತ್ಯವಿರುವ ವಸ್ತುಗಳನ್ನು ಪಡೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಒಂದು ವರ್ಷದ ಮಗುವಿನಿಂದ ಹಿಡಿದು ವಯೋವೃದ್ಧರವರೆಗೂ ವಸ್ತುಗಳನ್ನು ವಿತರಿಸಲಾಗುವುದು. ತಾಯಿ-ಮಗು ಹಾಗೂ ಹಿರಿಯ ನಾಗರಿಕರಿಗೆ ಪ್ರತ್ಯೇಕ ವಿತರಣಾ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅಶೋಕ್ ಕುಮಾರ್ ರೈ ವಿವರಿಸಿದರು.

ಒಂದು ಲಕ್ಷ ದೋಸೆ ವಿತರಣೆ; ಮಧ್ಯಾಹ್ನ ಅನ್ನಸಂತರ್ಪಣೆ
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9.30ರಿಂದಲೇ ದೋಸೆ ವಿತರಣೆ ಆರಂಭವಾಗಲಿದೆ. ಈ ಬಾರಿ ಒಂದು ಲಕ್ಷ ದೋಸೆ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳಿಗ್ಗೆ 11.30ರವರೆಗೆ ದೋಸೆ ವಿತರಣೆ ನಡೆಯಲಿದ್ದು, ಬಳಿಕ ಮಧ್ಯಾಹ್ನದ ಊಟ ಆರಂಭವಾಗಲಿದೆ. ಮಧ್ಯಾಹ್ನ 3 ಗಂಟೆಯವರೆಗೆ ಅನ್ನಸಂತರ್ಪಣೆ ನಡೆಯಲಿದ್ದು, ನಂತರ ಮತ್ತೆ ದೋಸೆ ವಿತರಣೆ ಮುಂದುವರಿಯಲಿದೆ ಎಂದು ಶಾಸಕರು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಪೂಡಾ ಸದಸ್ಯ ನಿಹಾಲ್ ಶೆಟ್ಟಿ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಹಾಗೂ ಜಯಪ್ರಕಾಶ್ ಬದಿನಾರು ಉಪಸ್ಥಿತರಿದ್ದರು.

Ad Widget
Continue Reading

ಕಾರ್ಯಕ್ರಮಗಳು

Dwaraka’-‘ದ್ವಾರಕ’ ಉಜ್ಜೀವನದಲ್ಲಿ ನವರಾತ್ರಿ ಆಯುಧ ಪೂಜೆ

Published

on



Ad Widget

Ad Widget

Ad Widget

Ad Widget

ದ್ವಾರಕಾ ಕಾರ್ಪ್. ಪ್ರೈ. ಲಿ. ಇದರ ವತಿಯಿಂದ ಕೆಮ್ಮಾರದ ಉಜ್ಜೀವನ ಹಿರಿಯ ನಾಗರಿಕರ ಬಡಾವಣೆಯಲ್ಲಿ ‘ನವರಾತ್ರಿ ಆಯುಧ ಪೂಜೆ’ ದಿನಾಂಕ 19-10-2026ರಂದು ಜರುಗಿತು. ಪೂಜೆಯ ಪ್ರಯುಕ್ತ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಮಾಯಾ ಮೃಗ’ ಎಂಬ ಯಕ್ಷಗಾನ ತಾಳಮದ್ದಳೆ ಸಂಪನ್ನಗೊಂಡಿತು.

Ad Widget

Ad Widget

Ad Widget

Ad Widget

ದ್ವಾರಕಾ ಕಾರ್ಪ್. ಪ್ರೈ. ಲಿ. ಇದರ ವತಿಯಿಂದ ಕೆಮ್ಮಾರದ ಉಜ್ಜೀವನ ಹಿರಿಯ ನಾಗರಿಕರ ಬಡಾವಣೆಯಲ್ಲಿ ‘ನವರಾತ್ರಿ ಆಯುಧ ಪೂಜೆ’ ದಿನಾಂಕ 19-10-2026ರಂದು ಜರುಗಿತು. ಪೂಜೆಯ ಪ್ರಯುಕ್ತ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಮಾಯಾ ಮೃಗ’ ಎಂಬ ಯಕ್ಷಗಾನ ತಾಳಮದ್ದಳೆ ಸಂಪನ್ನಗೊಂಡಿತು.

Ad Widget

Ad Widget

Ad Widget alt="Ad Widget"/>

Ad Widget

ಕಾರ್ಯಕ್ರಮವನ್ನು ದ್ವಾರಕಾ ಪ್ರತಿಷ್ಠಾನದ ನಿರ್ದೇಶಕರಾದ ಶ್ರೀಮತಿ ಲಕ್ಷ್ಮೀ ಅಮ್ಮನವರು ಉದ್ಘಾಟನೆಗೊಳಿಸಿದರು. ಬಳಿಕ ಶ್ರೀ ರಜಾಕ್ ಪುತ್ತೂರು ಮತ್ತು ಶ್ರೀ ಬಾಲಕೃಷ್ಣ ಶೆಟ್ಟಿಯವರ ನೇತೃತ್ವದಲ್ಲಿ ನಿರ್ಮಾಣಗೊಂಡ ಉಜ್ಜೀವನದ ಕುರಿತ ಕಿರುಚಿತ್ರ ಲೋಕಾರ್ಪಣೆಗೊಂಡಿತು.

Ad Widget

Ad Widget <> Ad Widget

ಈ ಸಂದರ್ಭದಲ್ಲಿ ಸಂಸ್ಥೆಯ ವಾಹನಗಳಿಗೆ ಪೂಜೆ, ಆಯುಧ ಪೂಜೆ ವೇದಮೂರ್ತಿ ಶ್ರೀ ಕೃಷ್ಣಕುಮಾರ ಉಪಾಧ್ಯಾಯರ ನೇತೃತ್ವದಲ್ಲಿ ನಡೆಯಿತು. ಪಟಾಕಿ-ಸುಡು ಮದ್ದಿನ ಪ್ರದರ್ಶನ, ಉಪಾಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.



Ad Widget

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿಗಳು, ಗ್ರಾಹಕರು, ಹಿತೈಷಿ-ಬಂಧುಗಳು, ಸ್ಥಳೀಯರು ಉಪಸ್ಥಿತರಿದ್ದರು.

Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading