ಬಿಗ್ ನ್ಯೂಸ್
Pawan Kalyan-ಧರ್ಮಸ್ಥಳಕ್ಕೆ ಪವನ್ ಕಲ್ಯಾಣ್ ಒಮ್ಮೆ ಬರ್ತೆನೆ ಅಂದರೆ ಬರ್ಲೇ ಬೇಕು : ಅವರನ್ನು ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ : ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ
ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಅವರು ಕ್ಷೇತ್ರದ ಬೆಂಬಲಿಗಳಾಗಿ ನಿಂತಿದ್ದು, ಶೀಘ್ರದಲ್ಲೇ ಧರ್ಮಸ್ಥಳಕ್ಕೆ ಭೇಟಿ ನೀಡುವ ಯೋಜನೆಯಲ್ಲಿದ್ದಾರೆ ಎಂಬ ಸುದ್ದಿಗಳು ಚರ್ಚೆಗೆ ಒಳಗಾಗಿವೆ. ಈ ಸಂದರ್ಭದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಪವನ್ ಕಲ್ಯಾಣ್ ಅವರ ಭೇಟಿಗೆ ಸಂತೋಷ ವ್ಯಕ್ತಪಡಿಸಿ, ಅವರ ರಾಜಕೀಯ ಸಾಧನೆಯನ್ನು ಕೊಂಡಾಡಿದ್ದಾರೆ.
ಮಂಗಳೂರು (ಸೆ. 12): ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಅವರು ಕ್ಷೇತ್ರದ ಬೆಂಬಲಿಗಳಾಗಿ ನಿಂತಿದ್ದು, ಶೀಘ್ರದಲ್ಲೇ ಧರ್ಮಸ್ಥಳಕ್ಕೆ ಭೇಟಿ ನೀಡುವ ಯೋಜನೆಯಲ್ಲಿದ್ದಾರೆ ಎಂಬ ಸುದ್ದಿಗಳು ಚರ್ಚೆಗೆ ಒಳಗಾಗಿವೆ. ಈ ಸಂದರ್ಭದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಪವನ್ ಕಲ್ಯಾಣ್ ಅವರ ಭೇಟಿಗೆ ಸಂತೋಷ ವ್ಯಕ್ತಪಡಿಸಿ, ಅವರ ರಾಜಕೀಯ ಸಾಧನೆಯನ್ನು ಕೊಂಡಾಡಿದ್ದಾರೆ.
ವೀರೇಂದ್ರ ಹೆಗ್ಗಡೆಯಿಂದ ಪವನ್ ಕಲ್ಯಾಣ್ ಪ್ರಶಂಸೆ
ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅವರ ಭೇಟಿ ಘೋಷಣೆಯ ಬಗ್ಗೆ ಮಾತನಾಡುತ್ತಾ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು, “ಪವನ್ ಕಲ್ಯಾಣ್ ಬರುತ್ತಾರೆ ಎಂಬ ಸುದ್ದಿ ಕೇಳಿ ಸಂತೋಷವಾಗಿದೆ. ನನಗೂ ಅವರೊಂದಿಗೆ ಮಾತುಕತೆ ನಡೆಸುವ ಆಸೆ ಇತ್ತು. ಮೊದಲ ಬಾರಿಗೆ 21 ಸ್ಥಾನಗಳನ್ನು ಗೆದ್ದುಕೊಂಡು, ಅಪೂರ್ವ ರಾಜಕೀಯ ಗೆಲುವು ಸಾಧಿಸಿದ್ದಾರೆ. ಅವರ ಈ ಸಾಧನೆಯನ್ನು ಕೊಂಡಾಡುತ್ತೇನೆ. ಧರ್ಮಸ್ಥಳಕ್ಕೆ ಬರುತ್ತೇನೆ ಎಂದರೆ ಅವರು ಬರ್ಲೆ ಬೇಕು ಯಾಕೆಂದರೆ ಮಾತು ಬಿಡ ಮಂಜುನಾಥ ಎಂಬ ಮಾತಿದೆ ” ಎಂದು ಹೇಳಿದ್ದಾರೆ.
ಭೇಟಿಗೆ ಸಿದ್ಧತೆಗಳು: ಸನಾತನ ಧರ್ಮ ರಕ್ಷಣೆಗೆ ಸಾಮ್ಯ
ಸಿನಿಮಾ ಚಿತ್ರರಂಗದಿಂದ ರಾಜಕೀಯಕ್ಕೆ ತೆರಳಿದ್ದರೂ, ದೇಶದ ಬಗ್ಗೆ ಉತ್ತಮ ಚಿಂತನೆ ಹೊಂದಿರುವುದು ಸೈನಿಕನಂತೆ ಎಂದು ವೀರೇಂದ್ರ ಹೆಗ್ಗಡೆ ಅವರು ಪವನ್ ಕಲ್ಯಾಣ್ ಅವರನ್ನು ವರ್ಣಿಸಿದ್ದಾರೆ. “ಸನಾತನ ಧರ್ಮದ ರಕ್ಷಣೆಗಾಗಿ ಶ್ರಮಿಸುತ್ತಿದ್ದಾರೆ. ಅನೇಕ ವಿಷಯಗಳಲ್ಲಿ ಜ್ಞಾನ ಸಂಪತ್ತು ಹೊಂದಿದ್ದಾರೆ. ಮೊದಲ ಚುನಾವಣೆಯಲ್ಲೇ ಗೆದ್ದು ಉಪಮುಖ್ಯಮಂತ್ರಿಯಾಗಿ ಸೇರಿಕೊಂಡಿದ್ದಾರೆ. ಅವರನ್ನು ನೋಡುವ ಆಸೆ ನಮ್ಮೆಲ್ಲರಲ್ಲೇ ಸಹಜ. ಈ ಭೇಟಿಗಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ” ಎಂದು ಅವರು ತಿಳಿಸಿದ್ದಾರೆ.
ಅಂತರ ರಾಜ್ಯ
L.K. Advani-ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಆಸ್ಪತ್ರೆಗೆ ದಾಖಲು
ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ (98) ಅವರು ಶ್ವಾಸಕೋಶದ ಸಮಸ್ಯೆಯಿಂದಾಗಿ ಶುಕ್ರವಾರ ಸಂಜೆ ದಿಲ್ಲಿಯ ಇಂದ್ರಪ್ರಸ್ಥ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ಹೊಸದಿಲ್ಲಿ: ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ (98) ಅವರು ಶ್ವಾಸಕೋಶದ ಸಮಸ್ಯೆಯಿಂದಾಗಿ ಶುಕ್ರವಾರ ಸಂಜೆ ದಿಲ್ಲಿಯ ಇಂದ್ರಪ್ರಸ್ಥ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ದಿಲ್ಲಿಯ ಜಸೋಲಾ ವಿಹಾರ್ನಲ್ಲಿರುವ ಆಸ್ಪತ್ರೆಗೆ ಅಡ್ವಾಣಿ ಅವರನ್ನು ಸಂಜೆ ಸುಮಾರು 7.30ರ ವೇಳೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಸದ್ಯ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯ ಸ್ಥಿತಿಯ ಕುರಿತು ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಡಿಸಲಾಗುವುದು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಬಿಜೆಪಿಯ ಮಾಜಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಎಲ್.ಕೆ. ಅಡ್ವಾಣಿ ಅವರು 2002ರಿಂದ 2004ರವರೆಗೆ ದೇಶದ ಉಪ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಬಿಜೆಪಿಯನ್ನು ರಾಷ್ಟ್ರಮಟ್ಟದಲ್ಲಿ ಪ್ರಮುಖ ರಾಜಕೀಯ ಶಕ್ತಿಯಾಗಿ ಬೆಳೆಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು.
ಮಂಗಳೂರು
MRPL explosion-Big Breaking: MRPL ಸ್ಫೋಟ : ತೀವ್ರ ಗಾಯಗೊಂಡಿದ್ದ ರಾಜೇಶ್ ನಿಧನ : ಮನೀಶ್ ಕರ್ಕಡ ಕುಟುಂಬಕ್ಕೆ ನೀಡಿದ ಪರಿಹಾರದಷ್ಟೇ ನೀಡುವಂತೆ ಒತ್ತಾಯ
ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಕಾರ್ಖಾನೆಯಲ್ಲಿ ಸೆಪ್ಟೆಂಬರ್ 30ರಂದು ಸಂಭವಿಸಿದ್ದ ಭೀಕರ ಸ್ಫೋಟ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗುತ್ತಿಗೆ ಕಾರ್ಮಿಕ ರಾಜೇಶ್ ಡಿಸಿಲ್ವ ಶನಿವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಕಾರ್ಖಾನೆಯಲ್ಲಿ ಸೆಪ್ಟೆಂಬರ್ 30ರಂದು ಸಂಭವಿಸಿದ್ದ ಭೀಕರ ಸ್ಫೋಟ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗುತ್ತಿಗೆ ಕಾರ್ಮಿಕ ರಾಜೇಶ್ ಡಿಸಿಲ್ವ ಶನಿವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತ ರಾಜೇಶ್ ಡಿಸಿಲ್ವ ಅವರು ಸುರತ್ಕಲ್ ಇಡ್ಯಾ ಗ್ರಾಮದ ಕಾನ ನಿವಾಸಿಯಾಗಿದ್ದು, ಬ್ಯಾಪಿಸ್ಟ್ ಡಿಸಿಲ್ವ ಎಂಬುವವರ ಐವರು ಮಕ್ಕಳ ಪೈಕಿ ಒಬ್ಬರಾಗಿದ್ದಾರೆ. ಇವರು ಹಲವು ವರ್ಷಗಳಿಂದ ಎಂಆರ್ಪಿಎಲ್ನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದರು. ಅ ಅವಿವಾಹಿತರಾಗಿದ್ದರು ಎಂದು ತಿಳಿದುಬಂದಿದೆ. ಎಂಆರ್ಪಿಎಲ್ನ ಫೇಸ್-3ರ ಸಿಎಚ್ಟಿಯು (Coker Hydro Treating Unit) ಪ್ಲಾಂಟ್ನಲ್ಲಿ ಕಳೆದ ಸೆಪ್ಟೆಂಬರ್ 30ರಂದು ಭಾರೀ ಸ್ಫೋಟ ಸಂಭವಿಸಿತ್ತು. ಅಂದು ಸಂಭವಿಸಿದ ದುರಂತದಲ್ಲಿ ಹಳೆಯಂಗಡಿ ನಿವಾಸಿ ಮನೀಶ್ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದರು.
ಅದೇ ಘಟನೆಯಲ್ಲಿ ತೀವ್ರ ಸುಟ್ಟಗಾಯಗಳಿಗೆ ಒಳಗಾಗಿದ್ದ ರಾಜೇಶ್ ಡಿಸಿಲ್ವ ಅವರನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಐಸಿಯು (ICU) ಘಟಕದಲ್ಲಿ ತೀವ್ರ ನಿಗಾದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಕಳೆದ ಕೆಲವು ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಮೃತರ ದೇಹವನ್ನು ಇಂದು ಸಂಜೆಯ ವೇಳೆ ನಗರದ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ (Post-mortem) ನಡೆಸಲಾಗುವುದು. ಬಳಿಕ ಕಾನೂನು ಪ್ರಕ್ರಿಯೆಗಳನ್ನು ಪೂರೈಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಥಳೀಯ
Kumara Parvata-ಅ.18ರಿಂದ ಕುಮಾರ ಪರ್ವತ ಚಾರಣಕ್ಕೆ ಅನುಮತಿ
ಚಾರಣಿಗರ ನೆಚ್ಚಿನ ತಾಣವಾದ ಕುಮಾರ ಪರ್ವತ ಚಾರಣಕ್ಕೆ ಅಕ್ಟೋಬರ್ 18ರಿಂದ ಮತ್ತೆ ಅವಕಾಶ ಕಲ್ಪಿಸಲಾಗಿದೆ. ಎರಡು ಚಾರಣ ಮಾರ್ಗಗಳ ಪೈಕಿ ಬಿದಹಳ್ಳಿ–ಕುಮಾರ ಪರ್ವತ–ಬಿದಹಳ್ಳಿ ಮಾರ್ಗದಲ್ಲಿ ಮಾತ್ರ ಸದ್ಯಕ್ಕೆ ಚಾರಣಕ್ಕೆ ಅನುಮತಿ ನೀಡಲಾಗಿದೆ.
ಸುಬ್ರಹ್ಮಣ್ಯ: ಚಾರಣಿಗರ ನೆಚ್ಚಿನ ತಾಣವಾದ ಕುಮಾರ ಪರ್ವತ ಚಾರಣಕ್ಕೆ ಅಕ್ಟೋಬರ್ 18ರಿಂದ ಮತ್ತೆ ಅವಕಾಶ ಕಲ್ಪಿಸಲಾಗಿದೆ. ಎರಡು ಚಾರಣ ಮಾರ್ಗಗಳ ಪೈಕಿ ಬಿದಹಳ್ಳಿ–ಕುಮಾರ ಪರ್ವತ–ಬಿದಹಳ್ಳಿ ಮಾರ್ಗದಲ್ಲಿ ಮಾತ್ರ ಸದ್ಯಕ್ಕೆ ಚಾರಣಕ್ಕೆ ಅನುಮತಿ ನೀಡಲಾಗಿದೆ.
ಚಾರಣಕ್ಕೆ ಆಗಮಿಸುವವರು ನಿಗದಿಪಡಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಚಾರಣದ ವೇಳೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಪರಿಸರದ ಸ್ವಚ್ಛತೆಯನ್ನು ಕಾಪಾಡುವುದು ಕಡ್ಡಾಯವಾಗಿದೆ.
ಚಾರಣಿಗರು ನಿಗದಿತ ಸಮಯಕ್ಕೆ ಹಾಜರಾಗಬೇಕು. ಅಲ್ಲದೆ, ಕರ್ತವ್ಯದಲ್ಲಿರುವ ಸಿಬ್ಬಂದಿಯೊಂದಿಗೆ ಸಹಕರಿಸುವಂತೆ ಸೂಚಿಸಲಾಗಿದೆ. ಪ್ರಕೃತಿಯ ಸಂರಕ್ಷಣೆಗೆ ಆದ್ಯತೆ ನೀಡುವ ಮೂಲಕ ಚಾರಣದ ಸಂದರ್ಭದಲ್ಲಿ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಲಾಗಿದೆ.
ಇನ್ನೊಂದೆಡೆ, ಕುಕ್ಕೆ ಸುಬ್ರಹ್ಮಣ್ಯ ಮಾರ್ಗದ ಮೂಲಕ ಕುಮಾರ ಪರ್ವತ ಚಾರಣ ಆರಂಭಿಸಲು ಈವರೆಗೆ ದಿನಾಂಕ ನಿಗದಿಯಾಗಿಲ್ಲ.
-
ಅಪರಾಧ17 hours ago
ಸೌತಡ್ಕ ದೇವಸ್ಥಾನದ ಹೂವಿನ ಅಂಗಡಿ ವಿಚಾರದಲ್ಲಿ ಮಾರಾಮಾರಿ; ಮಹಿಳೆಯರ ಮೇಲೆ ಹಲ್ಲೆ ಆರೋಪ
-
ದಕ್ಷಿಣ ಕನ್ನಡ18 hours ago
ಬಂಟ್ವಾಳ : ಹಣ ವಾಪಸ್ ಕೇಳಿದ್ದಕ್ಕೆ ಚೂರಿ ಇರಿತ ಆರೋಪ: ಆರೋಪಿ ಪೊಲೀಸ್ ವಶಕ್ಕೆ
-
ಅಪರಾಧ17 hours ago
ಪುತ್ತೂರು ಲಾಡ್ಜ್ನಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಹಲ್ಲೆ, ಜೀವ ಬೆದರಿಕೆ ಆರೋಪ
-
ದಕ್ಷಿಣ ಕನ್ನಡ2 hours ago
ಉಪ್ಪಿನಂಗಡಿಯಲ್ಲಿ ಬಾರ್ ಸಮೀಪ ತಲವಾರು ಪ್ರದರ್ಶನ: ಇಬ್ಬರು ಪೊಲೀಸ್ ವಶಕ್ಕೆ
-
ದಕ್ಷಿಣ ಕನ್ನಡ2 hours ago
ಮಂಗಳೂರು : ಬಾಲಕನ ಮೇಲಿನ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ – ಧರ್ಮಗುರು ಬಂಧನ,
-
ದಕ್ಷಿಣ ಕನ್ನಡ2 hours ago
ಸೌತಡ್ಕ ದೇವಸ್ಥಾನದ ಬಳಿ ಹೂವಿನ ಅಂಗಡಿ ವಿಚಾರವಾಗಿ ಗಲಾಟೆ: ಎರಡೂ ಕಡೆಯಿಂದ ದೂರು, ಪ್ರಕರಣ ದಾಖಲು
-
ಅಪರಾಧ48 minutes ago
ಬಂಟ್ವಾಳದಲ್ಲಿ ಕೋಳಿ ಅಂಕದ ಜೂಜಾಟಕ್ಕೆ ಪೊಲೀಸ್ ದಾಳಿ: ಓರ್ವ ವಶಕ್ಕೆ | 12 ಅಂಕದ ಕೋಳಿಗಳು, ಕತ್ತಿ ಹಾಗೂ ₹1,100 ನಗದು ವಶ




















