Connect with us

ಬಿಗ್ ನ್ಯೂಸ್

Bail Scam-ಬೇಲ್ ದಂಧೆ : ನಕಲಿ ದಾಖಲೆ ಸೃಷ್ಟಿಸಿ ಜಾಮೀನು ಕೊಡಿಸುತ್ತಿದ್ದ 8 ಜನರ ಬಂಧನ

Published

on

Ad Widget

Ad Widget

Ad Widget

Ad Widget

ನಕಲಿ ದಾಖಲೆಗಳನ್ನು ತಯಾರಿಸಿ ನ್ಯಾಯಾಲಯಗಳಿಗೆ ಸಲ್ಲಿಸಿ, ಆರೋಪಿಗಳಿಗೆ ಜಾಮೀನು ಪಡೆಯಲು ಸಹಾಯ ಮಾಡುತ್ತಿದ್ದ ಎಂಟು ಮಂದಿಯನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.‌ ಬಂಧಿತರಿಂದ 47 ಆಧಾರ್ ಕಾರ್ಡ್‌ಗಳು, ಪಹಣಿ ಸೇರಿದಂತೆ 122 ನಕಲಿ ದಾಖಲೆಗಳು, ನಕಲಿ ಸ್ಟಾಂಪ್‌ಗಳು, ಒಂದು ಪೆನ್‌ಡ್ರೈವ್ ಮತ್ತು ಏಳು ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Ad Widget

Ad Widget

Ad Widget

Ad Widget

ಬೆಂಗಳೂರು: ನಕಲಿ ದಾಖಲೆಗಳನ್ನು ತಯಾರಿಸಿ ನ್ಯಾಯಾಲಯಗಳಿಗೆ ಸಲ್ಲಿಸಿ, ಆರೋಪಿಗಳಿಗೆ ಜಾಮೀನು ಪಡೆಯಲು ಸಹಾಯ ಮಾಡುತ್ತಿದ್ದ ಎಂಟು ಮಂದಿಯನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಬಂಧಿತರಿಂದ 47 ಆಧಾರ್ ಕಾರ್ಡ್‌ಗಳು, ಪಹಣಿ ಸೇರಿದಂತೆ 122 ನಕಲಿ ದಾಖಲೆಗಳು, ನಕಲಿ ಸ್ಟಾಂಪ್‌ಗಳು, ಒಂದು ಪೆನ್‌ಡ್ರೈವ್ ಮತ್ತು ಏಳು ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Ad Widget

Ad Widget <> Ad Widget

ಬಂಧಿತ ಆರೋಪಿಗಳು:
ರಫಿ (33, ಹಲಸೂರು), ಪ್ರವೀಣ್‌ಕುಮಾರ್ (32, ಯಲಹಂಕದ ಬೂದಿಗೆರೆ), ಅಭಿಷೇಕ್ (33, ತುಮಕೂರು), ಗೋವಿಂದ ನಾಯಕ್ (37, ಆನೇಕಲ್), ದೊರೆರಾಜು (32, ರಾಮನಗರ), ಅಬೀದ್ ವಾಸೀಂ (46, ಬಿಟಿಎಂ ಲೇಔಟ್), ಅಹ್ಮದ್ ಜುಬೇರ್ (23) ಮತ್ತು ಗೋವಿಂದರಾಜು (32, ತುಮಕೂರು).

Ad Widget

ಆರೋಪಿಗಳು ಮ್ಯಾಜಿಸ್ಟ್ರೇಟ್ ಮತ್ತು ಸಿವಿಲ್ ನ್ಯಾಯಾಲಯಗಳ ಸುತ್ತಮುತ್ತ ಓಡಾಡುತ್ತಿದ್ದರು. ಜೈಲಿನಲ್ಲಿರುವ ಕೈದಿಗಳ ಸಂಬಂಧಿಕರನ್ನು ಗುರಿಯಾಗಿಸಿ, ಅವರೊಂದಿಗೆ ಸಂಪರ್ಕ ಬೆಳೆಸುತ್ತಿದ್ದರು. ಜಾಮೀನಿಗೆ ಅಗತ್ಯವಾದ ಶೂರಿಟಿಗಳಿಗಾಗಿ 50,000 ರಿಂದ 2 ಲಕ್ಷ ರೂ. ವರೆಗೆ ಒಪ್ಪಂದ ಮಾಡಿಕೊಂಡು, ನಕಲಿ ದಾಖಲೆಗಳನ್ನು ಒದಗಿಸುತ್ತಿದ್ದರು.

Ad Widget

Ad Widget

ಈ ಗುಂಪು ಭೂಮಿ ತಂತ್ರಾಂಶದಿಂದ ಜಮೀನಿನ ಪಹಣಿ (ಆರ್‌ಟಿಸಿ) ಡೌನ್‌ಲೋಡ್ ಮಾಡಿ, ಅಸಲಿ ರೈತರ ಹೆಸರಿನಲ್ಲಿ ಆಧಾರ್ ಕಾರ್ಡ್‌ಗಳನ್ನು ತಯಾರಿಸುತ್ತಿತ್ತು. ಈ ನಕಲಿ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಆರೋಪಿಗಳು ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಲು ಸಹಾಯ ಮಾಡುತ್ತಿದ್ದರು.

ಪ್ರವೀಣ್‌ಕುಮಾರ್ ಸೂತ್ರಧಾರಿ:
ಆರೋಪಿಗಳ ಪೈಕಿ ಪ್ರವೀಣ್‌ಕುಮಾರ್ ವಿರುದ್ಧ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಐದಾರು ಇದೇ ರೀತಿಯ ಪ್ರಕರಣಗಳು ದಾಖಲಾಗಿವೆ. ಈತನೇ ನಕಲಿ ದಾಖಲೆಗಳ ತಯಾರಿಕೆಯ ಸೂತ್ರಧಾರಿ ಎಂದು ತಿಳಿದುಬಂದಿದೆ. ಆರೋಪಿಗಳಿಗೆ ದಾಖಲೆ ತಯಾರಿಸಲು ಸೂಚನೆ ನೀಡಿದವರು ಯಾರು ಮತ್ತು ಇದುವರೆಗೆ ಎಷ್ಟು ಮಂದಿಗೆ ಜಾಮೀನು ಪಡೆಯಲು ಸಹಾಯ ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

ಬಿಎಂಟಿಸಿ ಸಿಬ್ಬಂದಿಯ ಹೆಸರಿನಲ್ಲಿ ವಂಚನೆ:
ಆರೋಪಿಗಳಾದ ಅಬೀದ್ ವಾಸೀಂ, ಅಹ್ಮದ್ ಜುಬೇರ್ ಮತ್ತು ಗೋವಿಂದರಾಜು, ಸರ್ಕಾರಿ ನೌಕರರ, ವಿಶೇಷವಾಗಿ ಬಿಎಂಟಿಸಿ ಚಾಲಕರು, ನಿರ್ವಾಹಕರು ಅಥವಾ ಸಿಬ್ಬಂದಿಯ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ತಯಾರಿಸಿ ಜಾಮೀನು ಕೊಡಿಸುತ್ತಿದ್ದರು. ಇವರು ಪರಿಚಯಸ್ಥರ ಮೂಲಕ ಸಿಬ್ಬಂದಿಯ ಸಂಬಳ ಪತ್ರಗಳನ್ನು ಪಡೆದು, ಅದಕ್ಕೆ ಪೂರಕವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Ad Widget
Click to comment

Leave a Reply

ಬಿಗ್ ನ್ಯೂಸ್

Golithottu-ಗೋಳಿತ್ತೊಟ್ಟು: ತೋಡಿನ ನೀರಿನಲ್ಲಿ ಮೀನುಗಳ ಮಾರಣಹೋಮ; ತನಿಖೆಗೆ ಸ್ಥಳೀಯರ ಆಗ್ರಹ

Published

on

Ad Widget

Ad Widget

Ad Widget

Ad Widget

ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗೋಳಿತ್ತೊಟ್ಟು ಸಮೀಪದ ಕಾಂಚನ ಕ್ರಾಸ್ ಬಳಿಯ ಹೆದ್ದಾರಿ ಬದಿಯ ತೋಡಿನಲ್ಲಿ ಮೀನುಗಳು ಸತ್ತು ಬಿದ್ದಿರುವ ಘಟನೆ ರವಿವಾರ ಬೆಳಕಿಗೆ ಬಂದಿದೆ. ಮೀನುಗಳ ಸಾವಿಗೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Ad Widget

Ad Widget

Ad Widget

Ad Widget

ಪುತ್ತೂರು, ಅ.11: ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗೋಳಿತ್ತೊಟ್ಟು ಸಮೀಪದ ಕಾಂಚನ ಕ್ರಾಸ್ ಬಳಿಯ ಹೆದ್ದಾರಿ ಬದಿಯ ತೋಡಿನಲ್ಲಿ ಮೀನುಗಳು ಸತ್ತು ಬಿದ್ದಿರುವ ಘಟನೆ ರವಿವಾರ ಬೆಳಕಿಗೆ ಬಂದಿದೆ. ಮೀನುಗಳ ಸಾವಿಗೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಉಪ್ಪಿನಂಗಡಿಯಿಂದ ನೆಲ್ಯಾಡಿ ಕಡೆಗೆ ಸುಮಾರು 8 ಕಿ.ಮೀ. ದೂರದಲ್ಲಿರುವ ಕಾಂಚನ ಕ್ರಾಸ್ ಸಮೀಪದ ತೋಡಿನ ನೀರಿನಲ್ಲಿ ಸಣ್ಣಪುಟ್ಟ ಮೀನುಗಳು ಏಕಾಏಕಿ ಸತ್ತು ಬಿದ್ದಿರುವುದು ಕಂಡುಬಂದಿದೆ. ತೋಡಿನಲ್ಲಿ ಸಾಕಷ್ಟು ದೂರದವರೆಗೆ ಮೀನುಗಳು ಸತ್ತಿರುವುದು ಸ್ಥಳೀಯರು ಚಿತ್ರೀಕರಿಸಿದ ವಿಡಿಯೋದಲ್ಲಿ ಕಾಣಿಸಿಕೊಂಡಿದೆ.

Ad Widget

Ad Widget <> Ad Widget

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ಘಟನೆ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

Ad Widget

ಮೀನುಗಳ ಸಾವಿಗೆ ಯಾರಾದರೂ ರಾಸಾಯನಿಕ ಬಳಕೆ ಮಾಡಿರುವುದು ಕಾರಣವೇ ಅಥವಾ ನೀರಿನಲ್ಲಿ ವಿಷಕಾರಿ ಅಂಶ ಬೆರೆತಿರುವುದರಿಂದ ಈ ಘಟನೆ ಸಂಭವಿಸಿದೆಯೇ ಎಂಬ ಅನುಮಾನಗಳು ವ್ಯಕ್ತವಾಗಿವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ನೀರಿನ ಮಾದರಿಯನ್ನು ಪರೀಕ್ಷಿಸುವ ಮೂಲಕ ಸಾವಿನ ನಿಖರ ಕಾರಣವನ್ನು ಪತ್ತೆಹಚ್ಚಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Continue Reading

ಮಂಗಳೂರು

ABVP protest-ಮಂಗಳೂರಿನ ಆಗ್ನೆಸ್ ಕಾಲೇಜಿನಲ್ಲಿ ದಸರಾ ರಜೆಯಲ್ಲೂ ಪರೀಕ್ಷೆ; ಎಬಿವಿಪಿ ಪ್ರತಿಭಟನೆ ವೇಳೆ ನೂಕಾಟ; ವಿದ್ಯಾರ್ಥಿನಿಯರನ್ನು ತಳ್ಳಿದ ಪೊಲೀಸರ ವಿರುದ್ಧ ಆಕ್ರೋಶ

Published

on

Ad Widget

Ad Widget

Ad Widget

Ad Widget

ದಸರಾ ರಜೆಯ ಸಂದರ್ಭದಲ್ಲಿ ಪರೀಕ್ಷೆ ನಡೆಸುತ್ತಿರುವುದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಕಾರ್ಯಕರ್ತರು ಮಂಗಳೂರಿನ ಆಗ್ನೆಸ್ ಕಾಲೇಜಿನ ಮುಂಭಾಗ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರನ್ನು ನಿಯಂತ್ರಿಸುವ ಸಂದರ್ಭದಲ್ಲಿ ವಿದ್ಯಾರ್ಥಿನಿಯರನ್ನು ಪುರುಷ ಪೊಲೀಸರು ಮುಟ್ಟಿದ್ದಾರೆ ಹಾಗೂ ತಳ್ಳಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Ad Widget

Ad Widget

Ad Widget

Ad Widget

ಮಂಗಳೂರು: ದಸರಾ ರಜೆಯ ಸಂದರ್ಭದಲ್ಲಿ ಪರೀಕ್ಷೆ ನಡೆಸುತ್ತಿರುವುದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಕಾರ್ಯಕರ್ತರು ಮಂಗಳೂರಿನ ಆಗ್ನೆಸ್ ಕಾಲೇಜಿನ ಮುಂಭಾಗ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರನ್ನು ನಿಯಂತ್ರಿಸುವ ಸಂದರ್ಭದಲ್ಲಿ ವಿದ್ಯಾರ್ಥಿನಿಯರನ್ನು ಪುರುಷ ಪೊಲೀಸರು ಮುಟ್ಟಿದ್ದಾರೆ ಹಾಗೂ ತಳ್ಳಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ದಸರಾ ಹಬ್ಬದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ರಜೆ ನೀಡುವಂತೆ ಮನವಿ ಮಾಡಿದರೂ ಕಾಲೇಜು ಆಡಳಿತ ಮಂಡಳಿ ಪರೀಕ್ಷೆ ನಡೆಸಲು ಮುಂದಾಗಿದೆ ಎಂದು ಎಬಿವಿಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ಈ ಕುರಿತು ಕಾಲೇಜು ಆಡಳಿತ ಮಂಡಳಿಯನ್ನು ಪ್ರಶ್ನಿಸಿದರೂ ಸಮರ್ಪಕ ಉತ್ತರ ನೀಡದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿದರು.

Ad Widget

Ad Widget <> Ad Widget

ಕಾಲೇಜಿನ ಪ್ರಾಂಶುಪಾಲರು ಪ್ರತಿಭಟನಾಕಾರರಿಗೆ ಉತ್ತರ ನೀಡಬೇಕು ಎಂದು ಪಟ್ಟು ಹಿಡಿದ ಎಬಿವಿಪಿ ಕಾರ್ಯಕರ್ತರು ಕಾಲೇಜಿನ ಮುಂಭಾಗದ ಗೇಟ್ ಬಳಿ ಪ್ರತಿಭಟನೆ ನಡೆಸಿದರು.

Ad Widget

ವಿದ್ಯಾರ್ಥಿನಿಯರನ್ನು ತಳ್ಳಿದ ಆರೋಪ: ಆಕ್ರೋಶ
ಪ್ರತಿಭಟನೆ ಆರಂಭವಾದ ಸಂದರ್ಭದಲ್ಲಿ ಸ್ಥಳದಲ್ಲಿ ಮಹಿಳಾ ಪೊಲೀಸರ ಕೊರತೆ ಇತ್ತು ಎನ್ನಲಾಗಿದೆ. ವಿದ್ಯಾರ್ಥಿ ಮುಖಂಡರನ್ನು ವಶಕ್ಕೆ ಪಡೆಯುವ ಸಂದರ್ಭದಲ್ಲಿ ನೂಕಾಟ, ತಳ್ಳಾಟ ನಡೆದಿದೆ. ಈ ವೇಳೆ ಪೊಲೀಸರು ವಿದ್ಯಾರ್ಥಿನಿಯರನ್ನು ತಳ್ಳಿದ್ದಾರೆ ಹಾಗೂ ಪುರುಷ ಪೊಲೀಸರು ವಿದ್ಯಾರ್ಥಿನಿಯರ ಮೈ ಮುಟ್ಟಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

Ad Widget

Ad Widget

ಘಟನೆಯಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಪೊಲೀಸರ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದರು. ದಸರಾ ರಜೆಯ ಸಂದರ್ಭದಲ್ಲಿ ಪರೀಕ್ಷೆ ನಡೆಸಿದ ಕಾಲೇಜಿನ ಕ್ರಮ ಹಾಗೂ ಪ್ರತಿಭಟನೆಯ ವೇಳೆ ನಡೆದ ಪೊಲೀಸ್ ವರ್ತನೆ ಎರಡೂ ವಿಚಾರಗಳು ಸ್ಥಳದಲ್ಲಿ ಉದ್ವಿಗ್ನತೆಗೆ ಕಾರಣವಾದವು.

ಭಾರತ್ ಮಾತಾ ಕೀ ಜೈ ಎಂದ ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ – ಖಂಡನೆ
ದಸರಾ ಹಬ್ಬದ ರಜೆಯ ಅವಧಿಯಲ್ಲಿ ಪರೀಕ್ಷೆಗಳನ್ನು ನಡೆಸಿರುವುದು ಮತ್ತು ಅದರ ವಿರುದ್ಧ ಧ್ವನಿ ಎತ್ತಿದ ವಿದ್ಯಾರ್ಥಿಗಳ ಮೇಲೆ ಪೊಲೀಸ್ ಇಲಾಖೆ ನಡೆಸಿರುವ ಬಲಪ್ರಯೋಗ ಹಾಗೂ ದೌರ್ಜನ್ಯವು ಅತ್ಯಂತ ಖಂಡನೀಯ. ಶಾಂತಿಯುತ ಪ್ರತಿಭಟನೆ ಮತ್ತು ಕಾನೂನುಬದ್ಧ ಹೋರಾಟ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ಹಕ್ಕು.

​ವಿದ್ಯಾರ್ಥಿಗಳ ಮೇಲೆ ಕೈ ಮಾಡಲು ಮತ್ತು ದೌರ್ಜನ್ಯ ಎಸಗಲು ಯಾರು ಆದೇಶ ನೀಡಿದರು ಎಂಬ ಪ್ರಶ್ನೆಗೆ ಸಂಬಂಧಪಟ್ಟ ಪೊಲೀಸ್ ಹಾಗೂ ಆಡಳಿತ ಯಂತ್ರದಿಂದ ಸ್ಪಷ್ಟನೆ ದೊರೆಯಬೇಕಿದೆ.

ಹಬ್ಬದ ವಾತಾವರಣದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಿದ್ದ ಆಡಳಿತ ಮಂಡಳಿ ಮತ್ತು ಪರಿಸ್ಥಿತಿಯನ್ನು ಸಂಯಮದಿಂದ ನಿರ್ವಹಿಸಬೇಕಿದ್ದ ಪೊಲೀಸ್ ಇಲಾಖೆ ಎರಡೂ ಕಡೆಯಿಂದ ಈ ರೀತಿಯ ಘಟನೆ ನಡೆದಿರುವುದು ದುರದೃಷ್ಟಕರ.

​ತಕ್ಷಣವೇ ಜನಪ್ರತಿನಿಧಿಗಳು ಮತ್ತು ಉನ್ನತ ಅಧಿಕಾರಿಗಳು ಈ ವಿಚಾರದಲ್ಲಿ ಗಮನಹರಿಸಿ, ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯಕ್ಕೆ ನ್ಯಾಯ ಒದಗಿಸಬೇಕು ಹಾಗೂ ವಿದ್ಯಾರ್ಥಿಗಳ ಹೋರಾಟಕ್ಕೆ ಸೂಕ್ತ ಸ್ಪಂದನೆ ಸಿಗಬೇಕು.

Ad Widget
Continue Reading

ಮಂಗಳೂರು

Mangalore-ಮಂಗಳೂರಿನ ಆಗ್ನೆಸ್ ಕಾಲೇಜಿನಲ್ಲಿ ದಸರಾ ರಜೆಯಲ್ಲೂ ಪರೀಕ್ಷೆ; ಎಬಿವಿಪಿ ಪ್ರತಿಭಟನೆ ವೇಳೆ ನೂಕಾಟ; ವಿದ್ಯಾರ್ಥಿನಿಯರನ್ನು ತಳ್ಳಿದ ಪೊಲೀಸರ ವಿರುದ್ಧ ಆಕ್ರೋಶ

Published

on

Ad Widget

Ad Widget

Ad Widget

Ad Widget

ದಸರಾ ರಜೆಯ ಸಂದರ್ಭದಲ್ಲಿ ಪರೀಕ್ಷೆ ನಡೆಸುತ್ತಿರುವುದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಕಾರ್ಯಕರ್ತರು ಮಂಗಳೂರಿನ ಆಗ್ನೆಸ್ ಕಾಲೇಜಿನ ಮುಂಭಾಗ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರನ್ನು ನಿಯಂತ್ರಿಸುವ ಸಂದರ್ಭದಲ್ಲಿ ವಿದ್ಯಾರ್ಥಿನಿಯರನ್ನು ಪುರುಷ ಪೊಲೀಸರು ಮುಟ್ಟಿದ್ದಾರೆ ಹಾಗೂ ತಳ್ಳಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Ad Widget

Ad Widget

Ad Widget

Ad Widget

ಮಂಗಳೂರು: ದಸರಾ ರಜೆಯ ಸಂದರ್ಭದಲ್ಲಿ ಪರೀಕ್ಷೆ ನಡೆಸುತ್ತಿರುವುದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಕಾರ್ಯಕರ್ತರು ಮಂಗಳೂರಿನ ಆಗ್ನೆಸ್ ಕಾಲೇಜಿನ ಮುಂಭಾಗ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರನ್ನು ನಿಯಂತ್ರಿಸುವ ಸಂದರ್ಭದಲ್ಲಿ ವಿದ್ಯಾರ್ಥಿನಿಯರನ್ನು ಪುರುಷ ಪೊಲೀಸರು ಮುಟ್ಟಿದ್ದಾರೆ ಹಾಗೂ ತಳ್ಳಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ದಸರಾ ಹಬ್ಬದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ರಜೆ ನೀಡುವಂತೆ ಮನವಿ ಮಾಡಿದರೂ ಕಾಲೇಜು ಆಡಳಿತ ಮಂಡಳಿ ಪರೀಕ್ಷೆ ನಡೆಸಲು ಮುಂದಾಗಿದೆ ಎಂದು ಎಬಿವಿಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ಈ ಕುರಿತು ಕಾಲೇಜು ಆಡಳಿತ ಮಂಡಳಿಯನ್ನು ಪ್ರಶ್ನಿಸಿದರೂ ಸಮರ್ಪಕ ಉತ್ತರ ನೀಡದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿದರು.

Ad Widget

Ad Widget <> Ad Widget

ಕಾಲೇಜಿನ ಪ್ರಾಂಶುಪಾಲರು ಪ್ರತಿಭಟನಾಕಾರರಿಗೆ ಉತ್ತರ ನೀಡಬೇಕು ಎಂದು ಪಟ್ಟು ಹಿಡಿದ ಎಬಿವಿಪಿ ಕಾರ್ಯಕರ್ತರು ಕಾಲೇಜಿನ ಮುಂಭಾಗದ ಗೇಟ್ ಬಳಿ ಪ್ರತಿಭಟನೆ ನಡೆಸಿದರು.

Ad Widget

ವಿದ್ಯಾರ್ಥಿನಿಯರನ್ನು ತಳ್ಳಿದ ಆರೋಪ: ಆಕ್ರೋಶ
ಪ್ರತಿಭಟನೆ ಆರಂಭವಾದ ಸಂದರ್ಭದಲ್ಲಿ ಸ್ಥಳದಲ್ಲಿ ಮಹಿಳಾ ಪೊಲೀಸರ ಕೊರತೆ ಇತ್ತು ಎನ್ನಲಾಗಿದೆ. ವಿದ್ಯಾರ್ಥಿ ಮುಖಂಡರನ್ನು ವಶಕ್ಕೆ ಪಡೆಯುವ ಸಂದರ್ಭದಲ್ಲಿ ನೂಕಾಟ, ತಳ್ಳಾಟ ನಡೆದಿದೆ. ಈ ವೇಳೆ ಪೊಲೀಸರು ವಿದ್ಯಾರ್ಥಿನಿಯರನ್ನು ತಳ್ಳಿದ್ದಾರೆ ಹಾಗೂ ಪುರುಷ ಪೊಲೀಸರು ವಿದ್ಯಾರ್ಥಿನಿಯರ ಮೈ ಮುಟ್ಟಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

Ad Widget

Ad Widget

ಘಟನೆಯಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಪೊಲೀಸರ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದರು. ದಸರಾ ರಜೆಯ ಸಂದರ್ಭದಲ್ಲಿ ಪರೀಕ್ಷೆ ನಡೆಸಿದ ಕಾಲೇಜಿನ ಕ್ರಮ ಹಾಗೂ ಪ್ರತಿಭಟನೆಯ ವೇಳೆ ನಡೆದ ಪೊಲೀಸ್ ವರ್ತನೆ ಎರಡೂ ವಿಚಾರಗಳು ಸ್ಥಳದಲ್ಲಿ ಉದ್ವಿಗ್ನತೆಗೆ ಕಾರಣವಾದವು.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading