ರಾಜಕೀಯ
Ashok Rai-ಭಾರೀ ಮಳೆಗೆ ಹಲವೆಡೆ ವಿದ್ಯುತ್ ವ್ಯತ್ಯಯ; ಮೆಸ್ಕಾಂ ಇಲಾಖೆ ಸಭೆ; ಕಂಬ ಮುರಿದು ಬಿದ್ದರೆ 24 ಗಂಟೆಯೊಳಗೆ ಸರಿಪಡಿಸಿ: ಶಾಸಕ ಅಶೋಕ್ ರೈ ಸೂಚನೆ
ವಿಪರೀತ ಮಳೆಯಿಂದಾಗಿ ಮುರಿದು ಬಿದ್ದ ಕಂಬಗಳ ಮರುಜೋಡನೆ ಕೆಲಸ ಸಮರೋಪಾದಿಯಲ್ಲಿ ನಡೆಯುತ್ತಿದ್ದರೂ ಕೆಲವೊಂದು ಗ್ರಾಮಗಳಲ್ಲಿ ಇನ್ನೂ ವಿದ್ಯುತ್ ಸಮಸ್ಯೆ ಪರಿಹಾರವಾಗಿಲ್ಲ ಈ ಬಗ್ಗೆ ಅಧಿಕಾರಿಗಳಿಗೆ ಚುರುಕುಮುಟ್ಟಿಸುವ ಉದ್ದೇಶದಿಂದ ಶಾಸಕ ಅಶೋಕ್ ರೈ ಅವರು ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೆಸ್ಕಾಂ ಇ ಇ ಮತ್ತು ಜೆ ಇ ಗಳ ಸಭೆ ಕರೆದು ಕೆಲವೊಂದು ಖಡಕ್ ಸೂಚನೆಗಳನ್ನು ನೀಡಿದ್ದಾರೆ.
ಪುತ್ತೂರು: ಈ ಬಾರಿ ಮೇ ತಿಂಗಳಲ್ಲೇ ಮಳೆ ಪ್ರಾರಂಭವಾಗಿದೆ, ಅದರಲ್ಲೂ ವಿಪರೀತ ಮಳೆಯಾಗುತ್ತಿದೆ, ಅಲ್ಲಲ್ಲಿ ಗಾಳಿಮಳೆಗೆ ಮರಗಳು ಮುರಿದು ಬೀಳುತ್ತಿರುವ ಕಾರಣಕ್ಕೆ ಕರೆಂಟ್ ಕಂಬಗಳು ಹಾನಿಗೊಳಗಾಗಿ ವಿದ್ಯುತ್ ಸಮಸ್ಯೆ ಉಂಟಾಗಿದೆ. ಮುರಿದು ಬಿದ್ದ ಕಂಬಗಳ ಮರುಜೋಡನೆ ಕೆಲಸ ಸಮರೋಪಾದಿಯಲ್ಲಿ ನಡೆಯುತ್ತಿದ್ದರೂ ಕೆಲವೊಂದು ಗ್ರಾಮಗಳಲ್ಲಿ ಇನ್ನೂ ವಿದ್ಯುತ್ ಸಮಸ್ಯೆ ಪರಿಹಾರವಾಗಿಲ್ಲ ಈ ಬಗ್ಗೆ ಅಧಿಕಾರಿಗಳಿಗೆ ಚುರುಕುಮುಟ್ಟಿಸುವ ಉದ್ದೇಶದಿಂದ ಶಾಸಕ ಅಶೋಕ್ ರೈ ಅವರು ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೆಸ್ಕಾಂ ಇ ಇ ಮತ್ತು ಜೆ ಇ ಗಳ ಸಭೆ ಕರೆದು ಕೆಲವೊಂದು ಖಡಕ್ ಸೂಚನೆಗಳನ್ನು ನೀಡಿದ್ದಾರೆ.
ಕಂಬ ಮುರಿದು ಬಿದ್ದರೆ 24 ಗಂಟೆಯೊಳಗೆ ಮರುಜೋಡಿಸಿ
ಮಳೆಗಾಲದಲ್ಲಿ ಗಾಳಿ, ಮಳೆ ಸಹಜ ಆದರೆ ಈ ಬಾರಿ ಕಳೆದ ನಾಲ್ಕು ದಿನಗಳ ಹಿಂದೆ ಆರಂಭವಾದ ಮಳೆ ಇನ್ನೂ ನಿಂತಿಲ್ಲ. ಅಲ್ಲಲ್ಲಿ ಮುರಿದು ಬಿದ್ದ ವಿದ್ಯುತ್ ಕಂಬಗಳನ್ನು 24 ಗಂಟೆಯೊಳಗೆ ದುರಸ್ಥಿ ಮಾಡಬೇಕು. ಎಲ್ಲೆಲ್ಲಿ ಲೈನ್ ಸಮಸ್ಯೆ ಇದೆಯೋ ಅದನ್ನು ದುರಸ್ಥಿ ಮಾಡಬೇಕು. ಕಳೆದ ನಾಲ್ಕು ದಿನಗಳಿಂದ ಎಲ್ಲೆಲ್ಲಿ ಸಮಸ್ಯೆಯಾಗಿದೆಯೋ ಅದನ್ನು ಮಂಗಳವಾರ ಮಧ್ಯಾಹ್ನದೊಳಗೆ ಸರಿಪಡಿಸಬೇಕು. ಜನರಿಗೆ ತೊಂದರೆಯಾಗದಂತೆ ಮೆಸ್ಕಾಂ ಕಾರ್ಯಪ್ರವೃತ್ತರಾಗಬೇಕು.
ಗಾಳಿ ಇದೆ, ಮಳೆ ಇದೆ ಎಂಬ ಉತ್ತರ ನನಗೆ ಬೇಡ. ಮಳೆಗೆ ಏನೇ ಅನಾಹುತವಾದರೂ ಅದನ್ನು ದುರಸ್ಥಿ ಮಾಡಿ ಜನರಿಗೆ ವಿದ್ಯುತ್ ಕೊಪಡಬೇಕಾಗಿದ್ದು ನಿಮ್ಮ ಇಲಾಖೆಯವರ ಕರ್ತವ್ಯ. ಕಳೆದ ನಾಲ್ಕು ದಿನಗಳಿಂದ ನನಗೆ ಪದೇ ಪದೇ ಕರೆಗಳು ಬರುತ್ತಿದೆ. ಸಮಸ್ಯೆ ಹೇಳುವುದು ಬೇಡ ಅದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಮೆಸ್ಕಾಂ ಇಇ ರಾಮಚಂದ್ರ ಅವರಿಗೆ ಶಾಸಕರು ಸೂಚನೆ ನೀಡಿದರು.
ದುರಸ್ಥಿ ಮಾಡಿದರೂ ಟ್ರಿಪ್ ಆಗುತ್ತಿದೆ
ಈ ಬಗ್ಗೆ ಮಾಹಿತಿ ನೀಡಿದ ಜೆ ಇ ಗಳು ನಾವು ನಮ್ಮ ಕೆಲಸವನ್ನು ಮಾಡಿದ್ದೇವೆ, ಮುರಿದು ಬಿದ್ದ ಕಂಬಗಳನ್ನು ಮರು ಜೋಡನೆ ಮಾಡಿದ್ದೇವೆ ವಿದ್ಯುತ್ ಚಾರ್ಜ್ ಮಾಡುವಾಗ ಟ್ರಿಪ್ ಆಗುತ್ತಿದೆ. ಭಾರೀ ಮಳೆ ಇರುವ ಕಾರಣ ಕೆಲವು ಕಡೆಗಳಲ್ಲಿ ಮರದ ಗೆಲ್ಲುಗಳು ವಿದ್ಯುತ್ ತಂತಿಗೆ ತಾಗುವುದೇ ಇದಕ್ಕೆ ಕಾರಣ. ನಾವು ಮತ್ತು ಸಿಬಂದಿಗಳು ಈ ಬಗ್ಗೆ ಕಠಿಣ ಪರಿಶ್ರಮ ವಹಿಸಿ ಕೆಲಸ ಮಾಡುತ್ತಿದ್ದೇವೆ. ಒಂದು ಕಡೆ ದುರಸ್ಥಿಯಾಗುವಷ್ಟರಲ್ಲಿ ಇನ್ನೊಂದು ಭಾಗದಲ್ಲಿ ಗಾಳಿಗೆ ಕಂಬಗಳ ಮೇಲೆ ಮರ ಬಿದ್ದು ಮತ್ತೆ ಸಮಸ್ಯೆಯಾಗುತ್ತಿದೆ. ಈ ಕಾರಣಕ್ಕೆ ಕೆಲವು ಕಡೆಗಳಲ್ಲಿ ಕಳೆದ ಮೂರು ದಿನಗಳಿಂದ ಸಮಸ್ಯೆಯಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.
ನನ್ನಿಂದ ಏನಾಗಬೇಕು ಹೇಳಿ
ಮೆಸ್ಕಾಂ ಗೆ ನನ್ನಿಂದ ಏನು ಆಗಬೇಕು ಅದನ್ನು ಹೇಳಬೇಕು. ಕಾರ್ಮಿಕರ ಕೊರತೆ ಇದೆಯೇ? ವಾಹನದ ಕೊರತೆ, ಉಪಕರಣಗಳ ಕೊರತೆ ಇದ್ದರೆ ಹೇಳಿ ತಕ್ಷಣ ವ್ಯವಸ್ಥೆ ಮಾಡುತ್ತೇನೆ. ಏನೇ ಸಮಸ್ಯೆ ಇದ್ದರೂ ಅದನ್ನು ಹೇಳದೆ ಮುಚ್ಚಿಡಬೇಡಿ. ನಮಗೆ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಕರೆಂಟ್ ಇಲ್ಲದೇ ಇದ್ದರೆ ಜನ ಕುಡಿಯುವ ನೀರಿಗೂ ಹಾಹಾಕಾರ ಪಡುತ್ತಾರೆ, ಮೊಬೈಲ್ ಸ್ವಿಚಾಫ್ ಆಗುತ್ತದೆ. ಕರೆಂಟಿಲ್ಲದೇ ಇದ್ದರೆ ಜನರು ಏನೂ ಮಾಡುವಂತಿಲ್ಲ ಎಂಬ ವಿಚಾರ ನಿಮಗೆ ಗೊತ್ತಿದೆ. ಸಮರೋಪಾದಿಯಲ್ಲಿ ಕೆಲಸ ಮಾಡಿ ಸಮಸ್ಯೆಯನ್ನು ಮಂಗಳವಾರ ಮಧ್ಯಾಹ್ನದೊಳಗೆ ಪರಿಹರಿಸಬೇಕು ಎಂದು ಹೇಳಿದರು.
ವಿದ್ಯುತ್ ಗುತ್ತಿಗೆದಾರರನ್ನು ಬಳಸಿಕೊಳ್ಳಿ
ಈ ತುರ್ತು ಸಂದರ್ಭದಲ್ಲಿ ವಿದ್ಯುತ್ ಗುತ್ತಿಗೆದಾರರನ್ನು ಬಳಸಿಕೊಂಡು ಒಟ್ಟಾಗಿ ಕೆಲಸ ಮಾಡಿ ಸಮಸ್ಯೆಯನ್ನು ಪರಿಹರಿಸಬೇಕು. ಇನ್ನೂ ವಾರಗಳ ಕಾಲ ಮಳೆ ಬರಲಿದೆ ಎಂಬ ಮಾಹಿತಿಯೂ ಇದೆ. ಈ ಅನಿರೀಕ್ಷಿತ ಮಳೆಯಿಂದಾದ ಸಮಸ್ಯೆಯನ್ನು ಬಗೆಹರಿಸಲು ಮೆಸ್ಕಾಂ ಗೆ ಗುತ್ತಿಗೆದಾರರು ಕೈಜೋಡಸಬೇಕು ಎಂದು ಶಾಸಕರು ಮನವಿ ಮಾಡಿದರು.
ಜನರು ಸಹಕರಿಸಿ: ಶಾಸಕರ ಮನವಿ
ಅಕಾಲಿಕ ಭಾರೀ ಮಳೆಯಿಂದ ವಿದ್ಯುತ್ ಸಮಸ್ಯೆ ಉಂಟಾಗಿದೆ. ಅಲ್ಲಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದ ಕಾರಣ ಪುತ್ತೂರು ನಗರದ ಸೂತ್ರಬೆಟ್ಟು, ಕೆಯ್ಯೂರು ಗ್ರಾಮದ ಕಟ್ಟತ್ತಾರು, ಈಶ್ವರಮಂಗಲ, ಗಾಳಿಮುಖ, ಕೊಳ್ತಿಗೆ, ಪುತ್ತೂರು ನಗರದ ಜಿಡೆಕಲ್ಲು, ಜೈನರ ಗುರಿ, ವಿಟ್ಲದ ಅಳಿಕೆ, ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು, ಪಂಜಳ ಭಾಗದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದೆ. ನಾಳೆಯೇ ಸಮಸ್ಯೆಯನ್ನು ಪರಿಹರಿಸುವಂತೆ ಸೂಚನೆಯನ್ನು ನೀಡಿದ್ದೇನೆ. ಇಲಾಖೆಯೊಂದಿಗೆ ಜನರು ಸಹಕಾರವನ್ನು ನೀಡಬೇಕು. ಹೆಚ್ಚುವರಿ ಕಾರ್ಮಿಕರನ್ನು ಕಳುಹಿಸಿಕೊಡುವಂತೆ ಮೆಸ್ಕಾಂ ಗೆ ಸೂಚನೆಯನ್ನು ನೀಡಿದ್ದೇನೆ.- ಅಶೋಕ್ ರೈ ಶಾಸಕರು ಪುತ್ತೂರು
ಪ್ರಥಮ ಮಳೆಗೆ ವಿದ್ಯುತ್ ಸಮಸ್ಯೆ ವಿಪರೀತವಾಗಿರುತ್ತದೆ. ಅಲ್ಲಲ್ಲಿ ಕಂಬಗಳು ಮುರಿದು ಬಿದ್ದ ಕಾರಣ ದೊಡ್ಡ ಸಮಸ್ಯೆಯಾಗಿದೆ. ಎರಡು ದಿನದ ಮಳೆಗೆ 179 ವಿದ್ಯುತ್ ಕಂಬಗಳು ಮುರಿದಿದೆ. ದಿನದ ೨೪ ಗಂಟೆ ನಮ್ಮ ಸಿಬಂದಿಗಳು ದುರಸ್ಥಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಜನರ ಸಮಸ್ಯೆ ಬಗ್ಗೆ ನಮಗೆ ಅರಿವಿದೆ ಆದರೆ ಒಂದು ಕಡೆ ದುರಸ್ಥಿ ಮಾಡಿ ಮುಗಿಸುವಷ್ಟರಲ್ಲಿ ಇನ್ನೊಂದು ಕಡೆ ಸಮಸ್ಯೆ ಉದ್ಭವವಾಗುತ್ತದೆ ಈ ಕಾರಣಕ್ಕೆ ಕೆಲವು ಕಡೆ ಮೂರು ದಿನಗಳಿಂದ ವಿದ್ಯುತ್ ಸಮಸ್ಯೆಯಾಗಿದೆ. ಶಾಸಕರ ಸೂಚನೆಯಂತೆ ನಾವು ಇನ್ನಷ್ಟು ಕಾರ್ಯಪ್ರವೃತ್ತರಾಗಲಿದ್ದೇವೆ.-ರಾಮಚಂದ್ರ ಮೆಸ್ಕಾಂ ಕಾರ್ಯವಾಹಕ ಇಂಜನಿಯರ್, ಪುತ್ತೂರು
ರಾಜಕೀಯ
Sanjeev Mathandur-ಬೆಳೆ ವಿಮೆ ಪರಿಹಾರದಲ್ಲಿ ತಾರತಮ್ಯ; ‘ಷಡ್ಯಂತ್ರ, ಭ್ರಷ್ಟಾಚಾರದ ಶಂಕೆ’ – ಸಂಜೀವ ಮಠಂದೂರು
ದಕ್ಷಿಣ ಕನ್ನಡ ಜಿಲ್ಲೆಯ ರೈತರಿಗೆ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಪರಿಹಾರ ವಿತರಣೆಯಲ್ಲಿ ಅನ್ಯಾಯವಾಗುತ್ತಿದ್ದು, ಇದರ ಹಿಂದೆ ಷಡ್ಯಂತ್ರ ಹಾಗೂ ಭ್ರಷ್ಟಾಚಾರದ ಶಂಕೆ ವ್ಯಕ್ತವಾಗುತ್ತಿದೆ. ಈ ಕುರಿತು ಸಮಗ್ರ ಹಾಗೂ ಕೂಲಂಕಷ ತನಿಖೆ ನಡೆಸಬೇಕು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆಗ್ರಹಿಸಿದ್ದಾರೆ.
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ರೈತರಿಗೆ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಪರಿಹಾರ ವಿತರಣೆಯಲ್ಲಿ ಅನ್ಯಾಯವಾಗುತ್ತಿದ್ದು, ಇದರ ಹಿಂದೆ ಷಡ್ಯಂತ್ರ ಹಾಗೂ ಭ್ರಷ್ಟಾಚಾರದ ಶಂಕೆ ವ್ಯಕ್ತವಾಗುತ್ತಿದೆ. ಈ ಕುರಿತು ಸಮಗ್ರ ಹಾಗೂ ಕೂಲಂಕಷ ತನಿಖೆ ನಡೆಸಬೇಕು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆಗ್ರಹಿಸಿದ್ದಾರೆ.
ಅ.8ರಂದು ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2025-26ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಒಂಬತ್ತು ತಾಲೂಕುಗಳ ರೈತರು ಒಟ್ಟು ₹294.26 ಕೋಟಿ ವಿಮಾ ಮೊತ್ತ ಪಾವತಿಸಿದ್ದಾರೆ. ಆದರೆ ಸುಮಾರು ₹840 ಕೋಟಿ ಪರಿಹಾರ ಬರಬೇಕಿದ್ದು, ವಾಸ್ತವವಾಗಿ ರೈತರಿಗೆ ಎಷ್ಟು ಮೊತ್ತ ವಿತರಿಸಲಾಗಿದೆ ಎಂಬುದನ್ನು ಸರಕಾರ ಹಾಗೂ ವಿಮಾ ಕಂಪನಿಗಳು ಅಂಕಿ-ಅಂಶಗಳ ಸಹಿತ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ರೈತರು ಪಾವತಿಸಿದ ವಿಮಾ ಮೊತ್ತಕ್ಕೆ ಅನುಗುಣವಾಗಿ ಎಷ್ಟು ಪರಿಹಾರ ನೀಡಲಾಗಿದೆ? ಗ್ರಾಮದಿಂದ ಗ್ರಾಮಕ್ಕೆ ಪರಿಹಾರ ಮೊತ್ತದಲ್ಲಿ ವ್ಯತ್ಯಾಸವಾಗಲು ಕಾರಣವೇನು? ಯಾವ ವೈಜ್ಞಾನಿಕ ಮಾನದಂಡದ ಆಧಾರದಲ್ಲಿ ಪರಿಹಾರ ನಿಗದಿಪಡಿಸಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು.
ಟರ್ಮ್‌ಶೀಟ್ ಬದಲಾದ ಬಳಿಕ ಸಮಸ್ಯೆ
2023-24ನೇ ಸಾಲಿನವರೆಗೆ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯ ಪರಿಹಾರ ವಿತರಣೆಯಲ್ಲಿ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ಸಮಸ್ಯೆ ಇರಲಿಲ್ಲ. ಆದರೆ ಬಳಿಕ ಟರ್ಮ್‌ಶೀಟ್ ಬದಲಾವಣೆಯಾದ ನಂತರ ಸಮಸ್ಯೆಗಳು ಆರಂಭವಾಗಿವೆ ಎಂದು ಮಠಂದೂರು ಆರೋಪಿಸಿದರು.
ಒಂದೇ ತಾಲೂಕು, ಹೋಬಳಿ ಹಾಗೂ ಒಂದೇ ರೀತಿಯ ಭೌಗೋಳಿಕ ಪರಿಸ್ಥಿತಿಯಲ್ಲಿರುವ ಗ್ರಾಮಗಳ ನಡುವೆ ಪರಿಹಾರ ಮೊತ್ತದಲ್ಲಿ ಭಾರಿ ವ್ಯತ್ಯಾಸ ಕಂಡುಬರುತ್ತಿದೆ. ಕೆಲವೆಡೆ ಕೇವಲ 100 ಮೀಟರ್ ಅಂತರದಲ್ಲಿರುವ ರೈತರಿಗೂ ₹10 ಸಾವಿರದಿಂದ ₹15 ಸಾವಿರದವರೆಗೆ ವ್ಯತ್ಯಾಸವಾಗುತ್ತಿದೆ. ಪಂಚಾಯಿತಿಯಿಂದ ಪಂಚಾಯಿತಿಗೆ, ಗ್ರಾಮದಿಂದ ಗ್ರಾಮಕ್ಕೆ ಪರಿಹಾರ ಬದಲಾಗುತ್ತಿರುವುದರ ಹಿಂದಿನ ಕಾರಣವನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರಕಾರವೂ ವಿಮಾ ಮೊತ್ತದ ಶೇ.20ರಷ್ಟು ಪಾಲು ಪಾವತಿಸುತ್ತಿರುವುದರಿಂದ ವಿಮಾ ಕಂಪನಿಗಳ ಕಾರ್ಯವೈಖರಿ ಕುರಿತು ರಾಜ್ಯ ಸರಕಾರವೇ ತನಿಖೆ ನಡೆಸಬೇಕು. ರೈತರಿಗೆ ಅನ್ಯಾಯವಾಗುತ್ತಿದ್ದರೂ ಸರಕಾರ ಕಣ್ಮುಚ್ಚಿ ಕುಳಿತಿದೆ ಎಂದು ಅವರು ಆರೋಪಿಸಿದರು.
274 ಗ್ರಾಮ ಪಂಚಾಯಿತಿಗಳ ಪೈಕಿ 231 ಮಳೆ ಮಾಪಕ ಮಾತ್ರ ಕಾರ್ಯನಿರ್ವಹಣೆ
ಬಿಜೆಪಿ ಸತ್ಯಶೋಧನ ಸಮಿತಿ ಜಿಲ್ಲೆಯ ಒಂಬತ್ತು ತಾಲೂಕುಗಳಲ್ಲಿ ನಡೆಸಿದ ಅಧ್ಯಯನದಲ್ಲಿ ಹಲವು ಕಡೆ ಮಳೆ ಮಾಪಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಕಂಡುಬಂದಿದೆ. ಈ ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿತ್ತು. ಬಳಿಕ ಕೆಲವು ಮಳೆ ಮಾಪಕಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ 274 ಗ್ರಾಮ ಪಂಚಾಯಿತಿಗಳಲ್ಲಿ ಮಳೆ ಮಾಪಕಗಳನ್ನು ಅಳವಡಿಸಲಾಗಿದ್ದು, 231 ಮಾತ್ರ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. 20 ಹೋಬಳಿ ಮಟ್ಟದಲ್ಲಿ ಉಷ್ಣಾಂಶ ಮಾಪಕಗಳಿವೆ. ಮಳೆ ಹಾಗೂ ಉಷ್ಣಾಂಶದ ದಾಖಲೆಗಳ ಆಧಾರದಲ್ಲಿ ಟರ್ಮ್‌ಶೀಟ್ ಪ್ರಕಾರ ವಿಮಾ ಪರಿಹಾರ ನಿರ್ಧರಿಸಲಾಗುತ್ತದೆ ಎಂದು ವಿವರಿಸಿದರು.
‘ಗ್ರಾಮಕ್ಕೊಂದು ಮಾನದಂಡ ಸಲ್ಲ’
ತಾಲೂಕಿನ ಎಲ್ಲ ಗ್ರಾಮಗಳ ರೈತರಿಗೆ ಒಂದೇ ಮಾನದಂಡದಲ್ಲಿ ವಿಮಾ ಪರಿಹಾರ ನೀಡಬೇಕು. ಒಂದು ಗ್ರಾಮಕ್ಕೆ ಗರಿಷ್ಠ ಪರಿಹಾರ ನೀಡಲು ಅನ್ವಯಿಸುವ ಮಾನದಂಡವಿದ್ದರೆ, ಅದೇ ಮಾನದಂಡವನ್ನು ಇತರ ಗ್ರಾಮಗಳಿಗೂ ಅನ್ವಯಿಸಬೇಕು. ಪಂಚಾಯಿತಿ, ಹೋಬಳಿ ಹಾಗೂ ಗ್ರಾಮವಾರು ಪ್ರತ್ಯೇಕ ಮಾನದಂಡಗಳಿಂದ ಪರಿಹಾರ ನೀಡಿದರೆ ರೈತರು ಬೆಳೆ ವಿಮಾ ಯೋಜನೆಯ ಮೇಲಿನ ವಿಶ್ವಾಸ ಕಳೆದುಕೊಳ್ಳಲಿದ್ದಾರೆ ಎಂದು ಮಠಂದೂರು ಹೇಳಿದರು.
2025-26ನೇ ಸಾಲಿನಲ್ಲಿ ರೈತರು ಶೇ.5, ರಾಜ್ಯ ಸರಕಾರ ಶೇ.20 ಹಾಗೂ ಕೇಂದ್ರ ಸರಕಾರ ಶೇ.10ರಷ್ಟು ಪಾಲನ್ನು ಪಾವತಿಸಿವೆ. ಜಿಲ್ಲೆಯ ರೈತರಿಂದ ₹42.03 ಕೋಟಿ, ಕೇಂದ್ರದಿಂದ ₹84.07 ಕೋಟಿ ಹಾಗೂ ರಾಜ್ಯದಿಂದ ₹168.14 ಕೋಟಿ ಸೇರಿದಂತೆ ಒಟ್ಟು ₹294.26 ಕೋಟಿ ವಿಮಾ ಮೊತ್ತ ಪಾವತಿಯಾಗಿದೆ ಎಂದರು.
ರೈತರು ಪ್ರತಿ ಹೆಕ್ಟೇರ್ ಅಡಿಕೆಗೆ ₹6,475 ಹಾಗೂ ಕಾಳುಮೆಣಸಿಗೆ ₹2,377ರಂತೆ ವಿಮಾ ಮೊತ್ತ ಪಾವತಿಸಿದ್ದಾರೆ. ಆದರೆ ಬಜತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ₹45 ಸಾವಿರ ವಿಮಾ ಮೊತ್ತ ಪಾವತಿಸಿದ್ದರೂ ಕೆಲ ರೈತರಿಗೆ ಪ್ರತಿ ಹೆಕ್ಟೇರ್‌ಗೆ ಕನಿಷ್ಠ ₹10,800 ಮಾತ್ರ ಪರಿಹಾರ ದೊರೆತಿದೆ. ಅದೇ ಪ್ರದೇಶದ ಕೆಲವು ರೈತರ ಖಾತೆಗೆ ₹51,824 ಪರಿಹಾರ ಜಮೆಯಾಗಿರುವುದಾಗಿ ಅವರು ತಿಳಿಸಿದರು.
‘ರಾಜ್ಯ ಸರಕಾರ ರೈತ ವಿರೋಧಿ’
ಅಡಿಕೆ ಬೆಳೆಗಾರರು ವಿಮಾ ಮೊತ್ತ ಪಾವತಿಸಿದರೂ ಸಮರ್ಪಕ ಪರಿಹಾರ ದೊರೆಯುತ್ತಿಲ್ಲ. ಮತ್ತೊಂದೆಡೆ ಅಡಿಕೆ ಧಾರಣೆಯಲ್ಲೂ ಕುಸಿತವಾಗಿದೆ. ಹಿಂದಿನ ಅವಧಿಯಲ್ಲಿ ರೈತರಿಗೆ ದೊರೆಯುತ್ತಿದ್ದ ಕಿಸಾನ್ ಸನ್ಮಾನ್ ಹಾಗೂ ವಿದ್ಯಾನಿಧಿ ಯೋಜನೆಗಳನ್ನು ಈಗಿನ ಸರಕಾರ ಸ್ಥಗಿತಗೊಳಿಸಿದೆ. ರೈತರಿಗೆ ಒಂದಲ್ಲೊಂದು ರೀತಿಯಲ್ಲಿ ತೊಂದರೆ ನೀಡುತ್ತಿರುವ ರಾಜ್ಯ ಸರಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಮಠಂದೂರು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಬಿಜೆಪಿ ವಕ್ತಾರ ರಾಜೇಶ್ ಬನ್ನೂರು ಹಾಗೂ ರೈತ ಮೋರ್ಚಾ ಅಧ್ಯಕ್ಷ ಶರತ್ನಂದ ಬೈಪಾಡಿತ್ತಾಯ ಉಪಸ್ಥಿತರಿದ್ದರು.
ಅಂತರ ರಾಜ್ಯ
DK Shivakumar-‘ಸ್ಟಿಂಗ್ ಆಪರೇಷನ್’ ಬಗ್ಗೆ ಎಲ್ಲಾ ಮಾಹಿತಿ ಇದೆ..! ಚರ್ಚೆಗೆಂದು ಬಂದು ಏನೇನು ಮಾಡಿದ್ದಾರೆ ಎಂದು ಗೊತ್ತಿದೆ : ಇದರ ಪಿತಾಮಹ ಯಾರೆಂದೂ ತಿಳಿದಿದೆ : ಡಿಕೆಶಿ ಸ್ಫೋಟಕ ಹೇಳಿಕೆ
ಮುಖ್ಯಮಂತ್ರಿ ಆದ ಬಳಿಕ ನನ್ನನ್ನೇ ಟ್ರ್ಯಾಪ್ ಮಾಡಲು ಕೆಲವರು ಪ್ರಯತ್ನಿಸಿದ್ದರು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುರುವಾರ(ಅ8) ಹೇಳಿಕೆ ನೀಡಿ “ಸ್ಟಿಂಗ್ ಆಪರೇಷನ್” ವಿಚಾರದ ಚರ್ಚೆ ವಿಚಾರದಲ್ಲಿ ಇನ್ನಷ್ಟು ಕುತೂಹಲ ಮೂಡಿಸುವಂತೆ ಮಾಡಿದ್ದಾರೆ.
ನವದೆಹಲಿ: ಮುಖ್ಯಮಂತ್ರಿ ಆದ ಬಳಿಕ ನನ್ನನ್ನೇ ಟ್ರ್ಯಾಪ್ ಮಾಡಲು ಕೆಲವರು ಪ್ರಯತ್ನಿಸಿದ್ದರು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುರುವಾರ(ಅ8) ಹೇಳಿಕೆ ನೀಡಿ “ಸ್ಟಿಂಗ್ ಆಪರೇಷನ್” ವಿಚಾರದ ಚರ್ಚೆ ವಿಚಾರದಲ್ಲಿ ಇನ್ನಷ್ಟು ಕುತೂಹಲ ಮೂಡಿಸುವಂತೆ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ”ನನ್ನ ಬಳಿ “ಸ್ಟಿಂಗ್ ಆಪರೇಷನ್” ಬಗ್ಗೆ ಎಲ್ಲ ಮಾಹಿತಿ ಇದೆ. ನಾನು ಸಿಎಂ ಆದ ಬಳಿಕ ಕೆಲವರು ಬಂದಿದ್ದರು. ಫೋಟೋ ಬೇಕಿದ್ದರೆ ನೀಡುತ್ತೇನೆ, ಚರ್ಚೆಗೆಂದು ಬಂದು ಏನೇನು ಮಾಡಿದ್ದಾರೆ ಎಂಬುದು ಗೊತ್ತಿದೆ. ಈ ವಿಚಾರದ ಹಿಂದಿನ ಪಿತಾಮಹ ಯಾರು ಎಂಬುದೂ ಗೊತ್ತಿದೆ. ಯಾರು ಹಣಕಾಸಿನ ನೆರವು ನೀಡುತ್ತಿದ್ದಾರೆ ಎಂಬ ಮಾಹಿತಿಯೂ ಇದೆ.ನಾನು ಜವಾಬ್ದಾರಿಯುತ ಸ್ಥಾನದಲ್ಲಿರುವುದರಿಂದ ಸುಮ್ಮನೆ ಮಾತನಾಡುವುದಿಲ್ಲ. ಎಲ್ಲ ಸಾಕ್ಷ್ಯಾಧಾರಗಳು ಇವೆ” ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಫಾರ್ಮ್-7 ಮುದ್ರಣ
ಬಿಜೆಪಿ ಕಾರ್ಯಕರ್ತರು ಅಲ್ಪಸಂಖ್ಯಾಕರ ಮತಗಳನ್ನು ದೊಡ್ಡ ಪ್ರಮಾಣದಲ್ಲಿ ಅಳಿಸಲು, ಮತದಾರರ ವಿವರಗಳನ್ನು ಮೊದಲೇ ಭರ್ತಿ ಮಾಡಲಾಗಿರುವ ಫಾರ್ಮ್-7ಗಳನ್ನು ಮುದ್ರಿಸಿ ಬಳಸಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಆರೋಪಿಸಿದರು.
ಮತದಾರರ ವಿವರಗಳನ್ನು ಮೊದಲೇ ನಮೂದಿಸಿರುವ ಫಾರ್ಮ್-7ಗಳನ್ನು ಪ್ರದರ್ಶಿಸಿದ ಅವರು, ಈ ಫಾರ್ಮ್‌ಗಳನ್ನು ಬಿಜೆಪಿಯವರು ಮತದಾರರ ಹೆಸರುಗಳನ್ನು ಅಳಿಸಲು ಬಳಸಿದ್ದಾರೆ ಎಂದು ಆರೋಪಿಸಿದರು.
‘ಫಾರ್ಮ್-7 ದುರ್ಬಳಕೆಯನ್ನು ತಡೆಯಲು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಯಾವುದೇ ಕ್ರಮ ಕೈಗೊಂಡಿಲ್ಲ. ಇಡೀ ಜಗತ್ತು ಈ ಬೆಳವಣಿಗೆಯನ್ನು ಗಮನಿಸುತ್ತಿದೆ’ ಎಂದು ಶಿವಕುಮಾರ್ ಹೇಳಿದರು.
ಜಿಎಸ್‌ಟಿ ಮಂಡಳಿ ಸಭೆಗೆ ದೆಹಲಿಗೆ
ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಬಂದಿರುವುದಾಗಿ ತಿಳಿಸಿದ ಶಿವಕುಮಾರ್, ‘ಇಂದು ಕೆಲವು ಮಹತ್ವದ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ’ ಎಂದರು.
ರಾಹುಲ್ ಗಾಂಧಿ ಉತ್ತಮ ಕೆಲಸ ಮಾಡುತ್ತಿದ್ದಾರೆ
ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ದೇಶಾದ್ಯಂತ ನಡೆದಿರುವ ಬೆಳವಣಿಗೆಗಳು ಈಗಾಗಲೇ ಬಹಿರಂಗಗೊಂಡಿವೆ. ಚುನಾವಣಾ ಆಯೋಗದ ಸದಸ್ಯರೂ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ನ್ಯಾಯಾಲಯಗಳೂ ಇದನ್ನು ಗಮನಕ್ಕೆ ತೆಗೆದುಕೊಂಡಿವೆ. ಸೂಕ್ತ ನಿರ್ದೇಶನ ನೀಡಿದ ನ್ಯಾಯಾಲಯಗಳಿಗೆ ನಾನು ಕೃತಜ್ಞನಾಗಿದ್ದೇನೆ’ ಎಂದರು.
‘ನನ್ನ ರಾಜ್ಯದಲ್ಲಿ ಲಕ್ಷಾಂತರ ಮತದಾರರ ಹೆಸರುಗಳನ್ನು ಅಳಿಸಲು ಪ್ರಯತ್ನಿಸಲಾಗುತ್ತಿದೆ. ಫಾರ್ಮ್-7 ಅರ್ಜಿಗಳನ್ನು ಬಿಜೆಪಿ ಕೇಂದ್ರ ಕಚೇರಿಯಲ್ಲೇ ಮುದ್ರಿಸಲಾಗಿದೆ ಎಂಬ ಆರೋಪವಿದೆ. ನಾವು ದೂರು ಸಲ್ಲಿಸಿದ ಬಳಿಕ ಅವರು ಕೂಡಲೇ ಹಲವು ಬಿಎಲ್‌ಒಗಳನ್ನು ಸಂಪರ್ಕಿಸಿ, ಆ ಫಾರ್ಮ್‌ಗಳನ್ನು ವಾಪಸ್ ಪಡೆದಿದ್ದಾರೆ. ಇದು ಅಪರಾಧವಲ್ಲವೇ? ತಡೆಯುವ ಮುನ್ನವೇ ಮತದಾರರ ಹೆಸರುಗಳನ್ನು ಅಳಿಸುವ ಪ್ರಯತ್ನ ನಡೆದಿತ್ತು’ ಎಂದು ಸಿಎಂ ಪ್ರಶ್ನಿಸಿದರು.
ಸ್ಟಿಂಗ್ ಆಪರೇಷನ್
ಡಿ.ಕೆ.ಶಿವಕುಮಾರ್ ಅವರೇ ಸಚಿವ ಸಂಪುಟ ಸಭೆಯಲ್ಲಿ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಈ ಎಚ್ಚರಿಕೆ ನೀಡಿರುವುದು ಈಗ ತೀವ್ರ ಚರ್ಚೆಗೆ ಕಾರಣವಾಗಿದ್ದು, ವಿಪಕ್ಷಗಳಿಂದ ಕೆಲ ಸಚಿವರು ‘ಟಾರ್ಗೆಟ್’ ಆಗಿದ್ದು, ರಹಸ್ಯ ಕಾರ್ಯಾಚರಣೆ ನಡೆಸಲು ತಂಡಗಳನ್ನೇ ರಚನೆ ಮಾಡಲಾಗಿದೆ ಎಂಬುದಾಗಿ ಹೇಳಿದ್ದಾರೆನ್ನಲಾಗಿದೆ. ಈ ಬೆಳವಣಿಗೆ ಬಗ್ಗೆ ವಿಪಕ್ಷಗಳು ಖಾರವಾದ ಪ್ರತಿಕ್ರಿಯೆಯನ್ನೂ ನೀಡಿವೆ.
ಅಂತರ ರಾಜ್ಯ
Rahul Gandhi-‘45 FIR ನನಗೆ ಪದಕವಿದ್ದಂತೆ, 100 FIR ನನ್ನ ಗುರಿ’-ರಾಹುಲ್ ಗಾಂಧಿ
ತಮ್ಮ ವಿರುದ್ಧ ದಾಖಲಾಗಿರುವ 45 ಎಫ್‌ಐಆರ್‌ಗಳ ಕುರಿತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರ ಪ್ರತಿಕ್ರಿಯಿಸಿದ್ದು, ಪ್ರತಿಯೊಂದು ಎಫ್‌ಐಆರ್ ಕೂಡ ತಮಗೆ ಒಂದು ಪದಕದಂತೆ ಎಂದು ಹೇಳಿದ್ದಾರೆ. ಅಲ್ಲದೆ, ತಮ್ಮ ವಿರುದ್ಧ 100 ಎಫ್‌ಐಆರ್‌ಗಳು ದಾಖಲಾಗುವುದು ತಮ್ಮ ಗುರಿ ಎಂದೂ ಅವರು ಹೇಳಿದ್ದಾರೆ.
ಹೊಸದಿಲ್ಲಿ, ಅ.7: ತಮ್ಮ ವಿರುದ್ಧ ದಾಖಲಾಗಿರುವ 45 ಎಫ್‌ಐಆರ್‌ಗಳ ಕುರಿತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರ ಪ್ರತಿಕ್ರಿಯಿಸಿದ್ದು, ಪ್ರತಿಯೊಂದು ಎಫ್‌ಐಆರ್ ಕೂಡ ತಮಗೆ ಒಂದು ಪದಕದಂತೆ ಎಂದು ಹೇಳಿದ್ದಾರೆ. ಅಲ್ಲದೆ, ತಮ್ಮ ವಿರುದ್ಧ 100 ಎಫ್‌ಐಆರ್‌ಗಳು ದಾಖಲಾಗುವುದು ತಮ್ಮ ಗುರಿ ಎಂದೂ ಅವರು ಹೇಳಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ವಿರುದ್ಧವೂ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದರು. ಅವರ ಕಾರ್ಯವೈಖರಿ ಹಾಗೂ ಅಧೀನ ಅಧಿಕಾರಿಗಳೊಂದಿಗಿನ ಭಿನ್ನಮತದ ಕುರಿತು ಪ್ರತಿಪಕ್ಷಗಳು ಪ್ರಶ್ನೆಗಳನ್ನು ಎತ್ತುತ್ತಿರುವ ಹಿನ್ನೆಲೆಯಲ್ಲಿ ರಾಹುಲ್, ಕುಮಾರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ದೆಹಲಿಯ ಜಂತರ್ ಮಂತರ್‌ನಲ್ಲಿ ದಿಢೀರ್ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ ಅವರು, ಜ್ಞಾನೇಶ್ ಕುಮಾರ್ ಅವರನ್ನು ‘ಅಕ್ರಮ ಚುನಾವಣಾ ಆಯೋಗದ ಮುಖ್ಯಸ್ಥ’ ಎಂದು ಆರೋಪಿಸಿದರು.
“ನಾವು ಜಂತರ್ ಮಂತರ್‌ಗೆ ತೆರಳಿ ಒಟ್ಟಾಗಿ ಕುಳಿತು, ಕುಮಾರ್ ಈ ದೇಶದ ಕಾನೂನುಬದ್ಧ ಚುನಾವಣಾ ಆಯುಕ್ತರಲ್ಲ ಎಂಬುದನ್ನು ದೇಶಕ್ಕೆ ತಿಳಿಸುತ್ತೇವೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧವೂ ಅವರು ಆರೋಪಗಳನ್ನು ಮಾಡಿದರು. ಈ ಮೂವರು ಜ್ಞಾನೇಶ್ ಕುಮಾರ್ ಅವರೊಂದಿಗೆ ಸೇರಿ ದೇಶದ ಪ್ರಜಾಪ್ರಭುತ್ವವನ್ನು ನಾಶಗೊಳಿಸಿದ್ದಾರೆ ಎಂದು ರಾಹುಲ್ ಗಾಂಧಿ ದೂರಿದರು.
ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳ ಕುರಿತು ಮಾತನಾಡಿದ ಅವರು, “ನನ್ನ ವಿರುದ್ಧ 45 ಎಫ್‌ಐಆರ್‌ಗಳಿವೆ. 100 ಎಫ್‌ಐಆರ್‌ಗಳನ್ನು ಹೊಂದುವುದು ನನ್ನ ಗುರಿ. ಪ್ರತಿಯೊಂದು ಎಫ್‌ಐಆರ್ ನನಗೆ ಪದಕವಿದ್ದಂತೆ” ಎಂದು ಹೇಳಿದರು.
ಇದೇ ವೇಳೆ, ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಪಕ್ಷಗಳ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ಮಂಗಳವಾರ ಪ್ರತಿಪಕ್ಷಗಳ ನಾಯಕರು ದಿನವಿಡೀ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪೊಲೀಸರು ರಾಹುಲ್ ಗಾಂಧಿ ಅವರನ್ನು ವಶಕ್ಕೆ ಪಡೆದಿದ್ದರು. ಚುನಾವಣಾ ಆಯುಕ್ತರು ರಾಜೀನಾಮೆ ನೀಡುವವರೆಗೆ ಹೋರಾಟ ಮುಂದುವರಿಸುವುದಾಗಿ ಕಾಂಗ್ರೆಸ್ ತಿಳಿಸಿದೆ.
ಮತ್ತೊಂದೆಡೆ, ‘ಮತ ಕಳವು’ ಆರೋಪಕ್ಕೆ ಸಂಬಂಧಿಸಿ ದೆಹಲಿ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಪ್ರತಿಭಟನಾ ಜಾಥಾ ನಡೆಸಲು ಮುಂದಾದ ಆಮ್ ಆದ್ಮಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬ್ಯಾರಿಕೇಡ್‌ಗಳ ಮೂಲಕ ತಡೆದರು.
-
ಮಂಗಳೂರು10 hours agoMangalore-ಮಂಗಳೂರು : 2 ತಿಂಗಳ ಬಳಿಕ ಸಮಾಧಿಯಿಂದ ಹೊರಬರಲಿದೆ ಆಲ್ಬರ್ಟ್ ರೇಗೋ ಶವ..!; ಮಗಳಿಂದಲೇ ತಂದೆಯ ಕೊಲೆ : ಸ್ನೇಹಿತನ ಆರೋಪ – ತನಿಖೆಗೆ ಸಿಗಲಿದೆ ಮಹತ್ವದ ತಿರುವು
-
ಅಪರಾಧ13 hours agoRaid-ರಾಜ್ಯದ 45 ಐಸ್ಕ್ರೀಂ ಘಟಕಗಳ ಮೇಲೆ ದಾಳಿ: 4 ಕಡೆ ನಿಯಮ ಉಲ್ಲಂಘನೆ, ಅವಧಿ ಮೀರಿದ ಪದಾರ್ಥ ಪತ್ತೆ..!
-
ಸ್ಥಳೀಯ15 hours agoGanja-ಸಾಗರದ ಲಾಡ್ಜ್ನಲ್ಲಿ ಗಾಂಜಾ ಸೇವನೆ: ಯುವತಿ ಸೇರಿ ನಾಲ್ವರು ವಶಕ್ಕೆ – ಗಾಂಜಾ ಸಾಗಾಟಗಾರನ ಮಾಹಿತಿ ಬಿಚ್ಚಿಟ್ಟ ಯುವತಿ..!
-
ಬಿಗ್ ನ್ಯೂಸ್15 hours agoAYUSH Federation-ಡಾ. ಪ್ರದೀಪ್ ನಾವೂರು ಅವರ ಆರೋಗ್ಯ ಕ್ಲಿನಿಕ್ ಗೆ ಬೆಂಕಿ : ಆಯುಷ್ ಫೆಡರೇಶನ್ ತೀವ್ರ ಖಂಡನೆ
-
ಬಿಗ್ ನ್ಯೂಸ್8 hours agoKaavu-BIG BREAKING: ಕಾವು ಬಳಿ ಹೆದ್ದಾರಿಗೆ ಉರುಳಿದ ಮರಗಳು, ಹೈಟೆನ್ಷನ್ ವಿದ್ಯುತ್ ಕಂಬ : ಮಾಣಿ – ಮೈಸೂರು ಹೈವೆಯಲ್ಲಿ ವಾಹನ ಸಂಚಾರ ಸ್ಥಗಿತ
-
ಮಂಗಳೂರು9 hours agoMRPL accident-MRPL ಅವಘಡದಲ್ಲಿ ಮೃತಪಟ್ಟ ಕರ್ಕಡ ಕುಟುಂಬಕ್ಕೆ EPFO ಕ್ಲೈಮ್ ಸಂದಾಯ
-
ಅಪರಾಧ10 hours agoMangalore-ವಾಟರ್ ಪ್ಯೂರಿಫೈಯರ್ ಒಳಗೆ ಕೋಟ್ಯಾಂತರ ರೂ ಮೌಲ್ಯದ ಡ್ರಗ್ಸ್- ಕೋರಿಯರ್ ಮೂಲಕ ಸಾಗಾಟ | ಪೊಲೀಸರ ಕಣ್ಣಿಗೆ ಮಣ್ಣೆರೆಚುವ ಯತ್ನ ಮಂಗಳೂರಿನಲ್ಲಿ ವಿಫಲ – ಮೂವರ ಬಂಧನ..!
-
ಸಿನೆಮಾ14 hours agoNana Patekar-ನಾನಾ ಪಾಟೇಕರ್ ಸಾವಿಗೆ ನಿಖರ ಕಾರಣವೇನು? ಗೋವಾ ಪೊಲೀಸರಿಂದ ಅಸಹಜ ಸಾವು ಪ್ರಕರಣ ದಾಖಲು


















