Connect with us

ದಕ್ಷಿಣ ಕನ್ನಡ

ಬಿಜೆಪಿ ಪುತ್ತೂರಿಗೆ ಟಿಕೇಟ್ ನೀಡಲು ಅನುಸರಿಸಿದ ಪ್ರಕ್ರಿಯೆ ವಿರೋಧಿಸಿ, ಕಾರ್ಯಕರ್ತರ ಸ್ವಾಭಿಮಾನದ ಪ್ರತೀಕವಾಗಿ ಚುನಾವಣೆಗೆ ಸ್ಫರ್ಧೆ – ಅರುಣ್ ಕುಮಾರ್ ಪುತ್ತಿಲ
ಏ.17 ರಂದು ನಾಮಪತ್ರ ಸಲ್ಲಿಕೆ

Published

on



Ad Widget

Ad Widget

Ad Widget

Ad Widget

ಪುತ್ತೂರಿನ ರಾಜಕೀಯ ಚಿತ್ರಣ ಕ್ಷಣ ಕ್ಷಣಕ್ಕೂ ಬದಲಾಗುತ್ತಿದ್ದು, ತುಳುವರ ಹೊಸ ವರ್ಷ ಬಿಸು ಪರ್ಬ ಮಹತ್ವದ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗಿದ್ದು , ಪುತ್ತೂರಿನಲ್ಲಿ ಹೊಸ ರಾಜಕೀಯ ಮನ್ವಂತರದ ಕಹಳೆ ಮೊಳಗಿದೆ. 2008ರ ಬಳಿಕ ಮತ್ತೊಮ್ಮೆ ಬಿಜೆಪಿಯ ಪ್ರಯೋಗ ಶಾಲೆ ಬಿಜೆಪಿಯಲ್ಲಿ ಬಂಡಾಯದ ಕೂಗು ಕೇಳಿ ಬಂದಿದೆ.

Ad Widget

Ad Widget

Ad Widget

Ad Widget

2008 ರಲ್ಲಿ ಇದೇ ರೀತಿ ಟಿಕೆಟ್ ನೀಡುವ ಪ್ರಕ್ರಿಯೆಯಲ್ಲಿ ಬಳಸಿದ ಮಾನದಂಡವನ್ನು ಪ್ರಶ್ನಿಸಿ ಮಾಜಿ ಶಾಸಕ ಉರಿಮಜಲು ರಾಮ್ ಭಟ್ ನೇತ್ರತ್ವದಲ್ಲಿ ಅಂದಿನ ಶಾಸಕಿ ಶಕುಂತಳಾ ಶೆಟ್ಟಿ ಸ್ವಾಭಿಮಾನಿಯಾಗಿ ಪಕ್ಷೇತರರಾಗಿ ಸ್ಪರ್ಧಿಸಿದ್ದರು.

Ad Widget

Ad Widget

Ad Widget alt="Ad Widget"/>

Ad Widget

ಪ್ರಭಾವಿ ಹಿಂದೂ ಮುಖಂಡ, 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ಅಬ್ಬರದ ಪ್ರಚಾರ ನಡೆಸಿದ ನಮೋ ಬ್ರಿಗೇಡ್ ನ ಪುತ್ತೂರು ಘಟಕದ ಸಂಚಾಲಕ, 2016 ರಲ್ಲಿ ಪುತ್ತೂರಿನಲ್ಲಿ ದಾಖಲೆ ಸಂಖ್ಯೆಯಲ್ಲಿ ಜನ ಸೇರಿದ್ದ ವಿಶ್ವ ಹಿಂದೂ ಪರಿಷತ್ತಿನ ಸುವರ್ಣ ಮಹೋತ್ಸವದ ಅಂಗವಾಗಿ ನಡೆದ ವಿರಾಟ್ ಹಿಂದೂ ಸಮಾಜೋತ್ಸವದ ನಾಯಕತ್ವ ವಹಿಸಿದ, ಪುತ್ತೂರು ಬಜರಂಗದಳದ ಮಾಜಿ ಸಂಚಾಲಕ, ಶ್ರೀ ರಾಮ ಸೇನೆಯ ಮಾಜಿ ಜಿಲ್ಲಾಧ್ಯಕ್ಷ , ಅರ್ ಎಸ್ ಎಸ್ ಕಾರ್ಯಕರ್ತ, ಧರ್ಮಸ್ಥಳದ ವತಿಯಿಂದ ಪುತ್ತೂರಿನಲ್ಲಿ ನಡೆದ ಭಜನಾ ಸಂಕೀರ್ತನದ ನೇತ್ರತ್ವ ವಹಿಸಿದ್ದ ಅರುಣ್ ಕುಮಾರ್ ಪುತ್ತಿಲರವರು 20223ರ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.

Ad Widget

Ad Widget <> Ad Widget

ಮಾ.15 ರಂದು ಪುತ್ತೂರಿನ ಮುಕ್ರಂಪಾಡಿಯಲ್ಲಿರುವ ಸುಭದ್ರ ಸಭಾಂಗಣದಲ್ಲಿ ನಡೆದ ಪ್ರಮುಖರ ತುರ್ತು ಸಭೆಯ ಬಳಿಕ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಅವರು ಈ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ.



Ad Widget


ನ 17 ರಂದು ನಾಮಪತ್ರ

Ad Widget

Ad Widget


ಪುತ್ತೂರು ಶ್ರೀ ಮಹಾಲೀಂಗೇಶ್ವರ ದೇವರ ರಥೋತ್ಸವದಂದು ( ಏ 17) ಬೆಳಿಗ್ಗೆ ದೇವಸ್ಥಾನದಲ್ಲಿ ದೇವರ ದರ್ಶನ ಬಲಿ ನಡೆದು, ಬಟ್ಟಲು ಕಾಣಿಕೆ ಸೇವೆ ಮುಗಿದ ಬಳಿಕ ಗಂಧ ಪ್ರಸಾದ ಸ್ವೀಕರಿಸಿ ಬೆಂಬಲಿಗರ ಜತೆ ಪುತ್ತೂರಿನ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ಸಾಗಿ ಅರುಣ್ ಕುಮಾರ್ ಪುತ್ತಿಲ ನಾಮಪತ್ರ ಸಲ್ಲಿಸಲಿದ್ದಾರೆ.

ಮನೀಶ್ ಕುಲಾಲ್, ಪ್ರವೀಣ್ ಶೆಟ್ಟಿ, ಮನ್ಮಥ ಶೆಟ್ಟಿ, ಅನಿಲ್ ಕರ್ನೊಜಿ, ಶ್ರೀಮತಿ ಪುಷ್ಪಾ, ಅವಿನಾಶ್ ಪುಜಾರಿ, ಪ್ರಸನ್ನು ಭೀಮ ಭಟ್ ಪ್ರಸನ್ನ ಮಾಡ್ತಾ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು

Ad Widget
Click to comment

Leave a Reply

ಅಪರಾಧ

ಪುತ್ತೂರು ಲಾಡ್ಜ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಹಲ್ಲೆ, ಜೀವ ಬೆದರಿಕೆ ಆರೋಪ

Published

on



Ad Widget

Ad Widget

Ad Widget

Ad Widget

ಪುತ್ತೂರು: ನಗರದ ಲಾಡ್ಜ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಮೂವರು ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿರುವ ಆರೋಪ ಕೇಳಿಬಂದಿದೆ.

Ad Widget

Ad Widget

Ad Widget

Ad Widget

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಯಿಲ ನಿವಾಸಿ ಮಹಮ್ಮದ್ ರಿಫಾಯಿ (27) ಹಲ್ಲೆಗೊಳಗಾದವರು ಎಂದು ತಿಳಿದುಬಂದಿದೆ.

Ad Widget

Ad Widget

Ad Widget alt="Ad Widget"/>

Ad Widget

ಅ. 17ರಂದು ರಾತ್ರಿ ರಿಫಾಯಿ ಅವರು ಪುತ್ತೂರಿನ ಲಾಡ್ಜ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಫಾರೂಕ್, ಸೋನು ಹಾಗೂ ಇಷಾನ್ ಎಂಬವರು ಅಲ್ಲಿಗೆ ಬಂದು ಅವಾಚ್ಯವಾಗಿ ಬೈದು, ಜೀವ ಬೆದರಿಕೆ ಒಡ್ಡಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

Ad Widget

Ad Widget <> Ad Widget

ಈ ಸಂಬಂಧ ರಿಫಾಯಿ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್), 2023ರ ಕಲಂ 126(2), 352, 351(2) ಹಾಗೂ 115(2)ರಂತೆ ಪ್ರಕರಣ ದಾಖಲಾಗಿದೆ.



Ad Widget

ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.

Continue Reading

ಅಪರಾಧ

ಸೌತಡ್ಕ ದೇವಸ್ಥಾನದ ಹೂವಿನ ಅಂಗಡಿ ವಿಚಾರದಲ್ಲಿ ಮಾರಾಮಾರಿ; ಮಹಿಳೆಯರ ಮೇಲೆ ಹಲ್ಲೆ ಆರೋಪ

Published

on



Ad Widget

Ad Widget

Ad Widget

Ad Widget

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಹೊರಭಾಗದಲ್ಲಿರುವ ಅಂಗಡಿಯ ವಿಚಾರವಾಗಿ ಹೂವಿನ ವ್ಯಾಪಾರಿಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ವರದಿಯಾಗಿದೆ. ಈ ವೇಳೆ ಮಹಿಳೆಯರ ಮೇಲೂ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

Ad Widget

Ad Widget

Ad Widget

Ad Widget

ದೇವಸ್ಥಾನದ ಟ್ರಸ್ಟ್‌ಗೆ ಸೇರಿದ ಅಂಗಡಿಗಳ ಏಲಂ ಪ್ರಕ್ರಿಯೆಯ ಮೂಲಕ ರಾಘವ ಎಂಬವರು ಹೂವಿನ ಸ್ಟಾಲ್‌ ಪಡೆದಿದ್ದರು ಎನ್ನಲಾಗಿದೆ. ಆದರೆ, ಏಲಂ ಪ್ರಕ್ರಿಯೆ ಪೂರ್ಣಗೊಂಡ ಬಳಿಕವೂ ಈ ಹಿಂದೆ ಅಂಗಡಿ ನಡೆಸುತ್ತಿದ್ದ ವ್ಯಾಪಾರಿ ಅಂಗಡಿಯನ್ನು ತೆರವುಗೊಳಿಸದೆ ಮುಂದುವರಿದಿದ್ದರು ಎಂದು ತಿಳಿದುಬಂದಿದೆ.

Ad Widget

Ad Widget

Ad Widget alt="Ad Widget"/>

Ad Widget

ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ರಾಘವ ಭಂಡಾರಿ ಎಂಬವರು ಅಂಗಡಿಗೆ ಏಕಾಏಕಿ ಪ್ರವೇಶಿಸಿದ ಸಂದರ್ಭದಲ್ಲಿ ಎರಡೂ ಕಡೆಯ ವ್ಯಾಪಾರಿಗಳ ನಡುವೆ ಮಾತಿನ ಚಕಮಕಿ ನಡೆದು, ಅದು ಮಾರಾಮಾರಿಗೆ ತಿರುಗಿದೆ ಎಂದು ಆರೋಪಿಸಲಾಗಿದೆ. ಈ ವೇಳೆ ಮಹಿಳೆಯರ ಮೇಲೆಯೂ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

Ad Widget

Ad Widget <> Ad Widget

ಘಟನೆಗೆ ಸಂಬಂಧಿಸಿದಂತೆ ರಾಘವ ಭಂಡಾರಿ ಅವರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣದ ಕುರಿತು ಪೊಲೀಸರ ಮುಂದಿನ ಕ್ರಮದ ಬಗ್ಗೆ ಮಾಹಿತಿ ಲಭ್ಯವಾಗಬೇಕಿದೆ.



Ad Widget
Ad Widget
Continue Reading

ದಕ್ಷಿಣ ಕನ್ನಡ

ಬಂಟ್ವಾಳ : ಹಣ ವಾಪಸ್ ಕೇಳಿದ್ದಕ್ಕೆ ಚೂರಿ ಇರಿತ ಆರೋಪ: ಆರೋಪಿ ಪೊಲೀಸ್ ವಶಕ್ಕೆ

Published

on



Ad Widget

Ad Widget

Ad Widget

Ad Widget

ಬಂಟ್ವಾಳ: ಹಣದ ವಿಚಾರವಾಗಿ ಉಂಟಾದ ವಿವಾದದಲ್ಲಿ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದ ಆರೋಪದ ಮೇಲೆ ವ್ಯಕ್ತಿಯೊರ್ವನನ್ನು  ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಟ್ವಾಳದ ಅಜಿತ್ ಕುಮಾರ್ ಶೆಟ್ಟಿ (28)  ವಶಕ್ಕೆ ಪಡೆಯಲಾದ ವ್ಯಕ್ತಿ

Ad Widget

Ad Widget

Ad Widget

Ad Widget

ಪೊಲೀಸ್ ಮೂಲಗಳ ಪ್ರಕಾರ, ಬಂಟ್ವಾಳ ಬಿ ಮೂಡಾ ಗ್ರಾಮದ ಉದಯ್ ಎಂಬವರಿಂದ ಆರೋಪಿಯು  ಹಣ ಪಡೆದಿದ್ದು, ಅದನ್ನು  ಪಾವತಿಸಲು ಬಾಕಿಯಿತ್ತು. ಈ ಹಣವನ್ನು ವಾಪಸ್ ನೀಡುವಂತೆ ಉದಯ್ ಕೇಳುತ್ತಿದ್ದರು ಎನ್ನಲಾಗಿದೆ. ಅ. 17ರ ರಾತ್ರಿ ಹಣವನ್ನು ವಾಪಸ್ ನೀಡುವುದಾಗಿ ತಿಳಿಸಿದ ಆರೋಪಿ, ಉದಯ್ ಅವರನ್ನು ಪಲ್ಲಮಜಲಿಗೆ ಬರುವಂತೆ ಹೇಳಿದ್ದಾನೆ.

Ad Widget

Ad Widget

Ad Widget alt="Ad Widget"/>

Ad Widget

ಅದರಂತೆ ಉದಯ್ ಹಣ ಪಡೆಯುವ ಸಲುವಾಗಿ ಪಲ್ಲಮಜಲು ಜಂಕ್ಷನ್‌ಗೆ ತೆರಳಿದ್ದು, ತನ್ನ ಸಹೋದರ ಲೋಕೇಶ್ (27) ಅವರನ್ನೂ ಸ್ಥಳಕ್ಕೆ ಬರುವಂತೆ ತಿಳಿಸಿದ್ದರು. ಲೋಕೇಶ್ ಸ್ಥಳಕ್ಕೆ ತಲುಪಿದಾಗ ಆರೋಪಿ ಅಜಿತ್ ಉದಯ್ ಅವರಿಗೆ ಚೂರಿಯಿಂದ ಇರಿಯುತ್ತಿರುವುದು ಕಂಡುಬಂದಿದೆ ಎನ್ನಲಾಗಿದೆ. ಈ ವೇಳೆ ತಡೆಯಲು ಮುಂದಾದ ಲೋಕೇಶ್ ಅವರನ್ನು ಆರೋಪಿ ಅಟ್ಟಿಸಿಕೊಂಡು ಬಂದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Ad Widget

Ad Widget <> Ad Widget

ಬಳಿಕ ಸ್ಥಳೀಯರು ಗಾಯಗೊಂಡ ಉದಯ್ ಅವರನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.



Ad Widget

ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ  ಭಾರತೀಯ ನ್ಯಾಯ ಸಂಹಿತೆ (BNS), 2023ರ ಕಲಂ 118(2), 109(1) ಮತ್ತು 351(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Ad Widget

Ad Widget

ಪ್ರಕರಣದ ಆರೋಪಿ ಪಲ್ಲಮಜಲು ನಿವಾಸಿ ಅಜಿತ್ ಕುಮಾರ್ ಶೆಟ್ಟಿ (28) ಅವರನ್ನು ಅ. 18ರಂದು ಪೊಲೀಸರು ತನಿಖೆಗಾಗಿ ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading