ದಕ್ಷಿಣ ಕನ್ನಡ
Sullia Angara | ಅಧಿವೇಶನದಲ್ಲಿ ಮೀನುಗಾರರ ಬಗ್ಗೆ ಮಠಂದೂರು ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯ ಸಹಿತ ವಿಪಕ್ಷದವರ ತೀವ್ರ ತರಾಟೆಗೆ ಒಳಗಾದ ಸಚಿವ ಅಂಗಾರ
ಬೆಂಗಳೂರು: ಕರಾವಳಿಯ ಮೀನುಗಾರರಿಗೆ ಸರ್ಕಾರದಿಂದ ಕೊಡಲಾಗುತ್ತಿರುವ ಸಬ್ಸಿಡಿ ಸೀಮೆ ಎಣ್ಣೆ (Fisherman Problem) ವಿಚಾರವಾಗಿ ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರ್ಕಾರವನ್ನು ಹಾಗೂ ಸಚಿವ ಅಂಗಾರ (Angara Sullia) ಅವರನ್ನು ಪ್ರತಿಪಕ್ಷ ನಾಯಕರು ಹಿಗ್ಗಾಮುಗ್ಗಾ ತರಾಟೆಗೆತ್ತಿಕೊಂಡ ಘಟನೆ ನಡೆದಿದೆ. ಕೊನೆಗೆ ಹೇಳಿದ ಉತ್ತರವನ್ನು ನಾಲ್ಕು ಬಾರಿ ಹೇಳಿದಾಗ ಸಭಾಧ್ಯಕ್ಷರೇ ಮನವಿ ಮಾಡಿ ವಿಪಕ್ಷ ನಾಯಕರನ್ನು ಸಮಾಧಾನ ಪಡಿಸಿದ ಘಟನೆ ನಡೆದಿದೆ.
ಮೀನುಗಾರರ ಸಮಸ್ಯೆ ವಿಚಾರವಾಗಿ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಪರವಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಪ್ರಶ್ನೆ ಕೇಳುತ್ತಾ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಈ ಭಾಗದಲ್ಲಿ ನಾಡ ದೋಣಿಯಲ್ಲಿ ಮೀನುಗಾರಿಕೆ ಮಾಡುವ ಬಡ ಮೀನುಗಾರರಿದ್ದಾರೆ. ಅವರಿಗೆ ವರ್ಷದ 10 ತಿಂಗಳು, ಮೀನುಗಾರಿಕೆಗಾಗಿ ಒಬ್ಬನಿಗೆ ತಿಂಗಳಿಗೆ 300 ಲೀ, ನಂತೆ ಸೀಮೆ ಎಣ್ಣೆಯನ್ನು ಸಬ್ಸಿಡಿಯಲ್ಲಿ ಕೇಂದ್ರ ಸರ್ಕಾರ ಒದಗಿಸುತ್ತಿದೆ. ಆದರೆ, ಮೀನುಗಾರಿಕೆ ಆರಂಭಗೊಂಡು 5 ತಿಂಗಳಾದರೂ ಕೇವಲ ಒಂದು ತಿಂಗಳ ಸಬ್ಸಿಡಿ ಸೀಮೆ ಎಣ್ಣೆಯನ್ನು ಮಾತ್ರವೇ ಒದಗಿಸಿದ್ದಾರೆ. ಬಾಕಿ ನಾಲ್ಕು ತಿಂಗಳ ಸೀಮೆ ಎಣ್ಣೆ ಒದಗಿಸಿಲ್ಲ ಎಂದರು.
ಸಚಿವ ಅಂಗಾರರು ಉತ್ತರ ನೀಡುವ ವೇಳೆ ಕೇಂದ್ರದಿಂದ 18 ಸಾವಿರದ 618 ಕಿ.ಲೋ. ಲೀಟರ್ ಸೀಮೆ ಎಣ್ಣೆ ಕೇಂದ್ರದಿಂದ ಬರಬೇಕಿತ್ತು. ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಇದಕ್ಕೆ ಬದಲಿ ವ್ಯವಸ್ಥೆಗೆ ಇಂಡಸ್ಟ್ರಿಯಲ್ ಸಬ್ಸಿಡಿ ಕೊಡುವಂತೆ ಮುಖ್ಯಮಂತ್ರಿ ಬಳಿ ಮನವಿ ಮಾಡಿದ್ದೇನೆ ಎಂದರು.
ಆಗ ಮಧ್ಯಪ್ರವೇಶಿಸಿದ ಮಾಜಿ ಸಿಎಂ ಸಿದ್ದರಾಮಯ್ಯ , ಕೇಂದ್ರ ಸರ್ಕಾರದಿಂದ ಯಾಕೆ ಬಿಡುಗಡೆಯಾಗಿಲ್ಲ. 5 ತಿಂಗಳಿನಿಂದ ಸರ್ಕಾರ ಯಾಕೆ ನೀಡಿಲ್ಲ. ಸೀಮೆಎಣ್ಣೆ ಕೊಡಲಾಗದಿದ್ದರೆ ಅಧಿಕಾರ ಯಾಕೆ ನಡೆಸ್ತಿರಾ ಎಂದು ಪ್ರಶ್ನಿಸಿದರು.ಆಗ ಮತ್ತೇ ಮಠಂದೂರುರವರಿಗೆ ನೀಡಿದ ಉತ್ತರವನ್ನೇ ಅಂಗಾರರು ಸಿದ್ದರಾಮಯ್ಯವರಿಗೂ ನೀಡಿದರು.
ಆ ನಡುವೆ ಮೀನುಗಾರರ ಪರ ಮಾತನಾಡಿದ ವಿಪಕ್ಷ ಸದಸ್ಯ ದೇಶಂಪಾಡೆ, ಸಿಎಂ ದಿನ ಸಿಗೊದಿಲ್ವ, ರಿಕ್ವೆಸ್ಟ್ ಅಂದರೆ ಏನಾರ್ಥ ಕೇಳಿದರು.
ಯು.ಟಿ ಖಾದರ್ ಮಾತನಾಡುತ್ತಾ, ಸೀಮೆಎಣ್ಣೆ ವಿಚಾರದಲ್ಲಿ ಸ್ಪಷ್ಟತೆ ಕೊಡುತ್ತೇನೆ. ಇದರಲ್ಲಿ ಗೊಂದಲವಾಗುವುದು ಬೇಡ, ಕೇಂದ್ರ ಸರ್ಕಾರ ಮೀನುಗಾರರಿಗೆ ಸೀಮೆ ಎಣ್ಣೆ ಕೊಡುವಂತಹ ಕಾನೂನೇ ಇಲ್ಲ, ಕೊಡುವುದೇ ಇಲ್ಲ. ಕೇಂದ್ರ ಸರ್ಕಾರ ಡೊಮೆಸ್ಟಿಕ್ ಯೂಸ್ ಗೆ ಮಾತ್ರವೇ ಸೀಮೆ ಎಣ್ಣೆ ಕೊಡುತ್ತದೆ. ಮುಂಚೆ ಏನಿತ್ತು, ಕೇಂದ್ರ ಸರ್ಕಾರ ಕೊಡುತ್ತಿದ್ದ ಸೀಮೆ ಎಣ್ಣೆಯನ್ನು ನಾವು ಸಬ್ಸಿಡಿಯಾಗಿ ಸ್ವಲ್ಪ ಮೀನುಗಾರರಿಗೆ ಕೊಡುತ್ತಿತ್ತು. ಈಗ ಎಲ್ಲ ಮನೆಗಳಿಗೂ ಗ್ಯಾಸ್ ಬಂದಿದೆ. ಹಾಗಾಗಿ ಕೇಂದ್ರ ಸರ್ಕಾರ ನಮಗೆ ಕೊಡಬೇಕಾದ ಸೀಮೆ ಎಣ್ಣೆಯನ್ನು ಕಡಿತಗೊಳಿಸಿ, ಬೇರೆ ಯಾರಿಗೂ ಕೊಡಬಾರದು ಅಂತ ಸ್ಪಷ್ಟವಾದ ನಿರ್ದೇಶನ ಕೊಟ್ಟಿದ್ದಾರೆ. ನೀವು ರಾಜ್ಯದಿಂದ ಬಿಡುಗಡೆ ಮಾಡಿ ಮೀನುಗಾರರಿಗೆ ಸೀಮೆ ಎಣ್ಣೆ ಕೊಡಿ. ಕೇಂದ್ರದಿಂದ ಸೀಮೆ ಎಣ್ಣೆ ಬರುವುದೇ ಇಲ್ಲ. ಪ್ರಾಬ್ಲಂ ಏನು ಅನ್ನೋದನ್ನೇ ನೋಡದೇ ಬರೇ ಕೇಂದ್ರ ಕೇಂದ್ರ ಅಂತ ಹೇಳಿದ್ರೆ ಆಗುದಿಲ್ಲ ಎಂದು ತರಾಟೆಗೆತ್ತಿಕೊಂಡರು.
ಆಗ ಮತ್ತೇ ಅಂಗಾರರು , ಮೊದಲು ಮಠಂದೂರಿಗೆ ಹೇಳಿದ ಉತ್ತರವನ್ನೇ ಹೇಳಿದಾಗ ವಿಪಕ್ಷಗಳು ತರಾಟೆಗೆ ತೆಗೆದುಕೊಂಡವು. ಮೀನುಗಾರರಿಗೆ ಸೀಮೆ ಎಣ್ಣೆ ಒಂದು ವಾರದಲ್ಲಿ ಕೊಡಬೇಕೆಂದು ಸಿದ್ದರಾಮಯ್ಯ ಒತ್ತಾಯಿಸಿದರು.
ಕೊನೆಗೆ ವಿಧಾನಸಭಾ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ , ಸಿದ್ದರಾಮಯ್ಯ, ಖಾದರ್ ರಲ್ಲಿ ಮನವಿ ಮಾಡುತ್ತಾ, ಅಂಗಾರರು ನಾಲ್ಕು ಬಾರಿ ಯಾವಾ ಉತ್ತರ ಕೊಟ್ಟಿದ್ದಾರೆ ಎಂದು ಸದನ ಗಮನಿಸಿದೆ. ಒಂದೇ ಉತ್ತರ ಅವರು ಕೊಟ್ಟಿರುವುದು . ಇವಗ ಬೇರೆ ಚರ್ಚೆ ಮಾಡುವ ಎಂದು ಮೀನುಗಾರರ ಸೀಮೆಎಣ್ಣೆ ಚರ್ಚೆಗೆ ವಿರಾಮ ನೀಡಿದರು.
ಮಂಗಳೂರು
Mulki-ಮೂಲ್ಕಿ: ಚಲಿಸುತ್ತಿದ್ದ ಮಂಗಳೂರು – ಕಾರ್ಕಳ ಎಕ್ಸ್ ಪ್ರೆಸ್ ಬಸ್‌ಗೆ ಬಡಿದ ಗಿಡುಗ: ಗಾಜು ಪುಡಿಪುಡಿ, ಪುತ್ತೂರು ಮೂಲದ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅವಘಡ
ಮೂಲ್ಕಿ ಸಮೀಪದ ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಮಂಗಳೂರು- ಕಾರ್ಕಳ ಎಕ್ಸ್‌ಪ್ರೆಸ್ ಬಸ್‌ನ ಮುಂಭಾಗದ ಗಾಜಿಗೆ ಗಿಡುಗವೊಂದು ಬಡಿದ ಪರಿಣಾಮ ಗಾಜು ಪುಡಿಪುಡಿಯಾದ ಘಟನೆ ನಡೆದಿದೆ. ಘಟನೆಯಲ್ಲಿ ಒಬ್ಬರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ಮಂಗಳೂರು: ಮೂಲ್ಕಿ ಸಮೀಪದ ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಮಂಗಳೂರು- ಕಾರ್ಕಳ ಎಕ್ಸ್‌ಪ್ರೆಸ್ ಬಸ್‌ನ ಮುಂಭಾಗದ ಗಾಜಿಗೆ ಗಿಡುಗವೊಂದು ಬಡಿದ ಪರಿಣಾಮ ಗಾಜು ಪುಡಿಪುಡಿಯಾದ ಘಟನೆ ನಡೆದಿದೆ. ಘಟನೆಯಲ್ಲಿ ಒಬ್ಬರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ಲಕ್ಷ್ಮಿ ಗಣೇಶ್ ಹೆಸರಿನ ಎಕ್ಸ್‌ಪ್ರೆಸ್ ಬಸ್ ಸಂಚರಿಸುತ್ತಿದ್ದ ವೇಳೆ ಏಕಾಏಕಿ ಗಿಡುಗ ಬಸ್‌ನ ಮುಂಭಾಗದ ಗಾಜಿಗೆ ಬಡಿದಿದೆ. ಇದರಿಂದ ಗಾಜು ಒಡೆದು ಚೂರುಚೂರಾಗಿದೆ.
ಘಟನೆಯಿಂದ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾದರೂ, ಚಾಲಕ ಹರೀಶ್ ಪೂಜಾರಿ ಅವರು ವಿಚಲಿತರಾಗದೆ ಸಮಯಪ್ರಜ್ಞೆಯಿಂದ ಬಸ್ ನಿಲ್ಲಿಸಿದ್ದಾರೆ. ಅವರ ಈ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಬಸ್ ಚಾಲಕ ಪುತ್ತೂರಿನ ಸಂಟ್ಯಾರು ಕೂರೇಲು ನಿವಾಸಿ ಹರೀಶ್ ಪೂಜಾರಿ ಮೇಲೆ ಗಾಜಿನ ಚೂರುಗಳು ಬಿದ್ದು ಗಾಯಗೊಂಡಿದ್ದರು ಅವರು ವೇಗವಾಗಿ ಹೋಗುತ್ತಿದ್ದ ಬಸ್ ನ್ನು ತಕ್ಷಣ ನಿಯಂತ್ರಿಸಿದ್ದಾರೆ. ಅವಘಡ ಸಂದರ್ಭ ಡ್ರೈವರ್ ಸ್ಟೇರೀಂಗ್ ಕೈಬಿಟ್ಟದ್ದರೂ ಬಸ್ ಡಿವೈಡರ್ ಹಾರಿ ಭಾರೀ ಅವಘಡ ಸಂಭವಿಸುತ್ತಿತ್ತು ಎನ್ನಲಾಗಿದೆ.
ಮಂಗಳೂರು
Ujire-ಭಾರೀ ಜನಸ್ತೋಮದೊಂದಿಗೆ ಸೌಜನ್ಯ ನ್ಯಾಯದ ನಡಿಗೆ
ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಸೌಜನ್ಯ ಪರ ಹೋರಾಟಗಾರರು ಉಜಿರೆಯಿಂದ ಬೆಳ್ತಂಗಡಿವರೆಗೆ ನ್ಯಾಯದ ನಡಿಗೆ ಹಮ್ಮಿಕೊಂಡಿದ್ದಾರೆ.

ಮಂಗಳೂರು: ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಸೌಜನ್ಯ ಪರ ಹೋರಾಟಗಾರರು ಉಜಿರೆಯಿಂದ ಬೆಳ್ತಂಗಡಿವರೆಗೆ ನ್ಯಾಯದ ನಡಿಗೆ ಹಮ್ಮಿಕೊಂಡಿದ್ದಾರೆ.
ಉಜಿರೆಯಿಂದ ಆರಂಭವಾದ ಬೃಹತ್ ಜಾಥಾದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದು, ಮೌನ ಮೆರವಣಿಗೆಯ ಮೂಲಕ ಸೌಜನ್ಯಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಲಾಯಿತು. ಸುಮಾರು ಐದು ಕಿಲೋಮೀಟರ್ ದೂರದವರೆಗೆ ಹೋರಾಟಗಾರರು ನಡಿಗೆಯಲ್ಲಿ ಸಾಗಲಿದ್ದಾರೆ.
ನ್ಯಾಯದ ನಡಿಗೆಯ ಬಳಿಕ ಬೆಳ್ತಂಗಡಿಯ ಮೈದಾನದಲ್ಲಿ ಬೃಹತ್ ಅಭಿನಂದನಾ ಸಮಾವೇಶ ನಡೆಯಲಿದೆ. ಸೌಜನ್ಯ ಪರವಾಗಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ ವಕೀಲರ ತಂಡಕ್ಕೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ವಕೀಲರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಬಿಗ್ ನ್ಯೂಸ್
Kaavu-BIG BREAKING: ಕಾವು ಬಳಿ ಹೆದ್ದಾರಿಗೆ ಉರುಳಿದ ಮರಗಳು, ಹೈಟೆನ್ಷನ್ ವಿದ್ಯುತ್ ಕಂಬ : ಮಾಣಿ – ಮೈಸೂರು ಹೈವೆಯಲ್ಲಿ ವಾಹನ ಸಂಚಾರ ಸ್ಥಗಿತ
ಭಾರೀ ಗಾಳಿ ಮಳೆಗೆ ಮಾಣಿ–ಮೈಸೂರು ಹೆದ್ದಾರಿಯ ಕಾವು ಬಳಿ ಮರ ಹಾಗೂ ಹೈಟೆನ್ಷನ್ ವಿದ್ಯುತ್ ಕಂಬ ರಸ್ತೆಗೆ ಉರುಳಿಬಿದ್ದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಸುಳ್ಯ, ಮಡಿಕೇರಿ ಹಾಗೂ ಮೈಸೂರು ಕಡೆಗೆ ತೆರಳುವ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.
ಪುತ್ತೂರು: ಭಾರೀ ಗಾಳಿ ಮಳೆಗೆ ಮಾಣಿ–ಮೈಸೂರು ಹೆದ್ದಾರಿಯ ಕಾವು ಬಳಿ ಮರ ಹಾಗೂ ಹೈಟೆನ್ಷನ್ ವಿದ್ಯುತ್ ಕಂಬ ರಸ್ತೆಗೆ ಉರುಳಿಬಿದ್ದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಸುಳ್ಯ, ಮಡಿಕೇರಿ ಹಾಗೂ ಮೈಸೂರು ಕಡೆಗೆ ತೆರಳುವ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.
ಶುಕ್ರವಾರ (ಅ. 9) ಮಧ್ಯಾಹ್ನ ಸುಮಾರು 4 ಗಂಟೆಗೆ ಕಾವು ಪರಿಸರದಲ್ಲಿ ಭಾರೀ ಗಾಳಿ ಮಳೆಯಾಗಿದೆ. ಈ ವೇಳೆ ಮರ ಹಾಗೂ ವಿದ್ಯುತ್ ಕಂಬ ಹೆದ್ದಾರಿಗೆ ಅಡ್ಡಲಾಗಿ ಬಿದ್ದಿದ್ದು, ಮಡ್ಯಂಗಳ , ಮದ್ಲ ಎಂಬಲ್ಲಿ ಹಲವು ಮರಗಳು ಧರೆಗುರುಳಿವೆ. ಪೆರಿಗೇರಿ ರಸ್ತೆಯಲ್ಲೂ ಒಂದು ಮರ ಧರೆಗುರುಳಿದೆ ಜೊತೆಗೆ ವಿದ್ಯುತ್ ತಂತಿಗಳೂ ರಸ್ತೆಗೆ ಬಿದ್ದಿವೆ. ಇದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
ಸ್ಥಳೀಯರ ನೆರವಿನೊಂದಿಗೆ ಮೆಸ್ಕಾಂ, ತಾಲೂಕು ಆಡಳಿತ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಮರ, ವಿದ್ಯುತ್ ಕಂಬ ಮತ್ತು ತಂತಿಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳದಲ್ಲಿ ಸಂಚಾರ ನಿಯಂತ್ರಿಸುತ್ತಿದ್ದಾರೆ.
ತೆರವು ಕಾರ್ಯಾಚರಣೆಗೆ ಸುಮಾರು 3ರಿಂದ 4 ಗಂಟೆಗಳ ಕಾಲ ಬೇಕಾಗುವ ಸಾಧ್ಯತೆಯಿದ್ದು, ಪುತ್ತೂರಿನಿಂದ ಮೈಸೂರು ಕಡೆಗೆ ತೆರಳುವ ವಾಹನ ಸವಾರರು ಪರ್ಯಾಯ ಮಾರ್ಗ ಬಳಸುವಂತೆ ಪುತ್ತೂರು ಗ್ರಾಮಾಂತರ ಠಾಣೆಯ ಎಸ್ಐ ಸುಷ್ಮಾ ಭಂಡಾರಿ ತಿಳಿಸಿದ್ದಾರೆ.
-
ನಿಧನ ವಾರ್ತೆ21 hours agoMumbai-ಪ್ರೀತಿಸಿ ಮದುವೆಯಾಗಿದ್ದ ಜೋಡಿಯ ದುರಂತ ಅಂತ್ಯ? ಸರಪಳಿಯಿಂದ ಕಾಲು ಕಟ್ಟಿದ ಸ್ಥಿತಿಯಲ್ಲಿ ಶವ ಪತ್ತೆ
-
ಮಂಗಳೂರು20 hours agoUjire-ಭಾರೀ ಜನಸ್ತೋಮದೊಂದಿಗೆ ಸೌಜನ್ಯ ನ್ಯಾಯದ ನಡಿಗೆ
-
ಮಂಗಳೂರು17 hours agoMulki-ಮೂಲ್ಕಿ: ಚಲಿಸುತ್ತಿದ್ದ ಮಂಗಳೂರು – ಕಾರ್ಕಳ ಎಕ್ಸ್ ಪ್ರೆಸ್ ಬಸ್‌ಗೆ ಬಡಿದ ಗಿಡುಗ: ಗಾಜು ಪುಡಿಪುಡಿ, ಪುತ್ತೂರು ಮೂಲದ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅವಘಡ
-
ಅಂತರ ರಾಜ್ಯ21 hours agoArrested-ಕಾಸರಗೋಡು: ಮದುವೆಯ ನೆಪದಲ್ಲಿ ಹತ್ತಾರು ಯುವತಿಯರಿಗೆ ವಂಚನೆ: ಮದುವೆಯಾದ ಮೂರೇ ದಿನಕ್ಕೆ ಚಿನ್ನ, ಹಣದೊಂದಿಗೆ ಪರಾರಿ; ಆರೋಪಿ ಬಿಜು ಆಂಟನಿ ಬಂಧನ
-
ರಾಜ್ಯ21 hours agoRobotic technology-ರೋಬೋಟಿಕ್ ತಂತ್ರಜ್ಞಾನದ ಅದ್ಭುತ: ಸ್ಪೇನ್ನಲ್ಲಿ ಕುಳಿತು ಕರ್ನಾಟಕದ ಮಹಿಳೆಗೆ ಹೃದಯ ಶಸ್ತ್ರಚಿಕಿತ್ಸೆ
-
ಅಂತರ ರಾಜ್ಯ21 hours agoJantar Mantar-ಸಿಜೆಪಿ ಪ್ರತಿಭಟನೆಗೆ ದೆಹಲಿಯಲ್ಲಿ ಬಿಗಿ ಭದ್ರತೆ – ಪಂಚರ್ ಆಗಲು ರಸ್ತೆಗಳಿಗೆ ತಡೆಬೇಲಿ..! ವಿಮಾನದಲ್ಲೇ ಅಭಿಜಿತ್ ದಿಪ್ಕೆ ಪೊಲೀಸ್ ವಶಕ್ಕೆ..! ಸಾವಿರಕ್ಕೂ ಮಿಕ್ಕಿ ಪ್ರತಿಭಟನಾಕಾರರೂ ವಶಕ್ಕೆ-ಸುಪ್ರೀಂ ಕೋರ್ಟ್ ವಕೀಲರಿಗೆ ತಡೆ..! ತೀವ್ರ ಅಡೆತಡೆಗಳ ನಡುವೆ ಜಂತರ್ ಮಂತರ್ ಗೆ ಹರಿದು ಬರುತ್ತಿರುವ ಜನಸಾಗರ
-
ಅಪರಾಧ17 hours agoBantwal-ಬಂಟ್ವಾಳ: 17 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಆರೋಪಿ ಅರೆಸ್ಟ್..!
-
ಅಂತರ ರಾಜ್ಯ21 hours agoBy-election results-ಉಪಚುನಾವಣೆ ಫಲಿತಾಂಶ: ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಬಿಜೆಪಿಗೆ ಭರ್ಜರಿ ಮುನ್ನಡೆ, ತಮಿಳುನಾಡಿನಲ್ಲಿ ಟಿವಿಕೆ ಅಬ್ಬರ


















