Connect with us

ಶಿಕ್ಷಣ

Vivekananda-ನಾಳೆ ಪುತ್ತೂರಿಗೆ ಡಾ. ವಿದ್ಯಾಭೂಷಣ ಆಗಮನ – ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿವೇಕ ಗಾನಾಮೃತ- ಡಾ. ವಿದ್ಯಾಭೂಷಣ ಅವರಿಂದ ಸಾರ್ವಜನಿಕರಿಗಾಗಿ ಸಂಗೀತ ಕಾರ್ಯಕ್ರಮ; ವಿವೇಕಾನಂದ ಪದವಿಪೂರ್ವ ಕಾಲೇಜಿನ 60 ನೇ ವರ್ಷಾಚರಣೆಯ ಪ್ರಯುಕ್ತ ವಿಶೇಷ ಕಾರ್ಯಕ್ರಮ

Published

on



Ad Widget

Ad Widget

Ad Widget

Ad Widget

ವಿವೇಕಾನಂದ ವಿದ್ಯಾವರ್ಧಕ ಸಂಘದ ಮೊದಲ ಸಂಸ್ಥೆ ವಿವೇಕಾನಂದ ಪದವಿಪೂರ್ವ ಕಾಲೇಜು 60 ವರ್ಷಗಳ ಸಾರ್ಥಕ ಶಿಕ್ಷಣ ಪಯಣವನ್ನು ಪುತ್ತೂರಿನಲ್ಲಿ ಪೂರೈಸಿರುವ ಶುಭಸಂದರ್ಭದಲ್ಲಿ ಸಂಸ್ಥೆಯು 27 ಅಕ್ಟೊಬರ್ 2026 ರಂದು ಸಂಜೆ ಗಂಟೆ 6 ರಿಂದ ಸಾರ್ವಜನಿಕರಿಗಾಗಿ ವಿಶೇಷ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, “ವಿವೇಕ ಗಾನಾಮೃತ” ಎಂಬ ಶೀರ್ಷಿಕೆಯಡಿಯಲ್ಲಿ ಪುತ್ತೂರಿನ ನೆಹರು ನಗರದ ವಿವೇಕಾನಂದ ಆವರಣದಲ್ಲಿರುವ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

Ad Widget

Ad Widget

Ad Widget

Ad Widget

ವಿವೇಕಾನಂದ ಶಿಕ್ಷಣ ಸಂಸ್ಥೆಗಳು, ಪುತ್ತೂರು ಹಾಗೂ ಆಸುಪಾಸಿನ ಸಾರ್ವಜನಿಕ ಶಿಕ್ಷಣಾಭಿಮಾನಿಗಳ ಸಹಕಾರದಿಂದ 60 ವರ್ಷಗಳ ಪಯಣವನ್ನು ಪೂರೈಸಿದೆ. ಪ್ರಾರಂಭದಲ್ಲಿ ಪುತ್ತೂರು ಎಜುಕೇಷನ್ ಸೊಸೈಟಿ ಎಂಬ ಹೆಸರಿನಿಂದ ಪ್ರಾರಂಭಗೊಂಡು ಮುಂದೆ ವಿವೇಕಾನಂದ ವಿದ್ಯಾವರ್ಧಕ ಸಂಘ ಎಂದು ಮರುನಾಮಕರಣಗೊಂಡ ಸಂಘದಡಿಯಲ್ಲಿ ಇಂದು ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ವಿವಿಧ ಸಂಸ್ಥೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ವಿವೇಕಾನಂದ ವಿದ್ಯಾವರ್ಧಕ ಸಂಘದ ಮೊದಲ ಸಂಸ್ಥೆ ವಿವೇಕಾನಂದ ಪದವಿಪೂರ್ವ ಕಾಲೇಜು 60 ವರ್ಷಗಳ ಸಾರ್ಥಕ ಶಿಕ್ಷಣ ಪಯಣವನ್ನು ಪುತ್ತೂರಿನಲ್ಲಿ ಪೂರೈಸಿರುವ ಶುಭಸಂದರ್ಭದಲ್ಲಿ ಸಂಸ್ಥೆಯು 27 ಅಕ್ಟೊಬರ್ 2026 ರಂದು ಸಂಜೆ ಗಂಟೆ 6 ರಿಂದ ಸಾರ್ವಜನಿಕರಿಗಾಗಿ ವಿಶೇಷ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, “ವಿವೇಕ ಗಾನಾಮೃತ” ಎಂಬ ಶೀರ್ಷಿಕೆಯಡಿಯಲ್ಲಿ ಪುತ್ತೂರಿನ ನೆಹರು ನಗರದ ವಿವೇಕಾನಂದ ಆವರಣದಲ್ಲಿರುವ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

Ad Widget

Ad Widget <> Ad Widget

ನಮ್ಮ ನಾಡಿನ ಖ್ಯಾತ ಸಂಕೀರ್ತನಕಾರರಾದ ಹಾಗೂ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಯೂ ಆಗಿರುವ ‘ಸಂಗೀತ ವಿದ್ಯಾನಿಧಿ’ ಡಾ. ವಿದ್ಯಾಭೂಷಣ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆೆ. ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ನಿವೃತ್ತ ಯೋಧ ಹಾಗೂ ಕರ್ನಾಟಕ ವಿಧಾನ ಪರಿಷತ್‌ನ ಮಾಜಿ ಸದಸ್ಯ ಕಾಪ್ಟನ್ ಗಣೇಶ್ ಕಾರ್ಣಿಕ್ ಉಪಸ್ಥಿತರಿರಲಿದ್ದಾರೆ.



Ad Widget

ವಿವೇಕಾನಂದ ವಿದ್ಯಾಸಂಸ್ಥೆಯ ಆರು ದಶಕಗಳ ಶೈಕ್ಷಣಿಕ ಪಯಣದಲ್ಲಿ ಸಹಕರಿಸಿರುವ ಎಲ್ಲಾ ಶಿಕ್ಷಣಾಭಿಮಾನಿಗಳನ್ನು ಹಾಗೂ ಸಾರ್ವಜನಿಕ ಬಂಧುಗಳನ್ನು ಈ ಕಾರ್ಯಕ್ರಮಕ್ಕೆ ಹೃತ್ಪೂರ್ವಕವಾಗಿ ಆಹ್ವಾನಿಸುತ್ತಿದ್ದೇವೆ.

Click to comment

Leave a Reply

ಶಿಕ್ಷಣ

Vivekananda-ವಿವೇಕಾನಂದ ಕಾಲೇಜಿನಲ್ಲಿ ಯಕ್ಷ ದೀಕ್ಷಾ ಪ್ರದಾನ ಮತ್ತು ಯಕ್ಷ ಗೌರವ ಸಮರ್ಪಣೆ

Published

on



Ad Widget

Ad Widget

Ad Widget

Ad Widget

ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಕಾಲೇಜು ಇಲ್ಲಿನ ದೇರಾಜೆ ಸೀತಾರಾಮಯ್ಯ ಯಕ್ಷಗಾನ ಅಧ್ಯಯನ ಕೇಂದ್ರ, ಯಕ್ಷರಂಜಿನಿ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ನಡೆದ ಯಕ್ಷ ದೀಕ್ಷಾ ಪ್ರದಾನ ಮತ್ತು ಯಕ್ಷ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ಹಾಗೂ ಯಕ್ಷಗಾನ ಕಲಾವಿದ ನಾ. ಕಾರಂತ ಪೆರಾಜೆ ಮಾತನಾಡಿದರು.

Ad Widget

Ad Widget

Ad Widget

Ad Widget

ಯಕ್ಷಗಾನ ಕೇವಲ ಮನರಂಜನಾ ಕಲೆಯಲ್ಲ, ಅದು ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮಾಧ್ಯಮವಾಗಿದೆ. ಕರ್ನಾಟಕದಲ್ಲಿ ಕನ್ನಡವನ್ನು ಅತ್ಯಂತ ಶುದ್ಧವಾಗಿ ಪ್ರಕಟಪಡಿಸುವ ಕಾರ್ಯ ನಮ್ಮ ಕರಾವಳಿ ಭಾಗದಲ್ಲಿ ಯಕ್ಷಗಾನದಿಂದ ಆಗುತ್ತಿದೆ. ಒಬ್ಬ ಕಲಾವಿದನನ್ನು ಕೇಂದ್ರೀಕೃತ ಮಾಡುವುದೇ ಯಕ್ಷಗಾನದ ಕಲೆ ಎಂದು ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ಹಾಗೂ ಯಕ್ಷಗಾನ ಕಲಾವಿದ ನಾ. ಕಾರಂತ ಪೆರಾಜೆ ಹೇಳಿದರು.

Ad Widget

Ad Widget

Ad Widget alt="Ad Widget"/>

Ad Widget

ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಕಾಲೇಜು ಇಲ್ಲಿನ ದೇರಾಜೆ ಸೀತಾರಾಮಯ್ಯ ಯಕ್ಷಗಾನ ಅಧ್ಯಯನ ಕೇಂದ್ರ, ಯಕ್ಷರಂಜಿನಿ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ನಡೆದ ಯಕ್ಷ ದೀಕ್ಷಾ ಪ್ರದಾನ ಮತ್ತು ಯಕ್ಷ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

Ad Widget

Ad Widget <> Ad Widget

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಮಾತನಾಡಿ, ವಿದ್ಯಾರ್ಥಿಗಳು ಯಕ್ಷಗಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದ ಜೀವನದಲ್ಲಿ ಶಿಸ್ತು ರೂಪುಗೊಳ್ಳುತ್ತದೆ ಮತ್ತು ಭವಿಷ್ಯದ ದಾರಿಯನ್ನು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ. ಹಿರಿಯರಿಂದ ಪ್ರಸಾದದ ರೂಪದಲ್ಲಿ ದೀಕ್ಷೆಯನ್ನು ಪಡೆದರೆ ಮುಂದೆ ಆ ಕ್ಷೇತ್ರದಲ್ಲಿ ಒಬ್ಬ ಉತ್ತಮ ಕಲಾವಿದನಾಗಿ ಬೆಳೆಯುವುದಕ್ಕೆ ಸಾಧ್ಯವಾಗುತ್ತದೆ. ಆದ್ದರಿಂದ ಯಕ್ಷಗಾನದ ಮೂಲಭೂತ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.



Ad Widget

ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ .ಕೆ.ಎನ್ ಮಾತನಾಡಿ, ವಿವೇಕಾನಂದ ಕಾಲೇಜು ಯಕ್ಷಗಾನ, ಭರತನಾಟ್ಯ, ಸಂಗೀತ ಮುಂತಾದ ಕಲಾಪ್ರಕಾರಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಸಮರ್ಥವಾದಂತಹ ಯಕ್ಷಗಾನ ಕಲೆಯನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುವ ನಿಟ್ಟಿನಲ್ಲಿ ಅದನ್ನು ಉಳಿಸುತ್ತಾ, ಬೆಳೆಸಿಕೊಂಡು ಹೋಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ಹಾಗೂ ಯಕ್ಷಗಾನ ಕಲಾವಿದ ನಾ. ಕಾರಂತ ಪೆರಾಜೆಯವರಿಗೆ ಯಕ್ಷ ಗೌರವ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

Ad Widget

Ad Widget

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ್ ಭಟ್.ಎಸ್, ಕಾಲೇಜಿನ ವಿಶೇಷಾಧಿಕಾರಿ (ಆಡಳಿತ) ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮನಮೋಹನ ಎಮ್, ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಡಾ. ವಿಜಯಸರಸ್ವತಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಯಕ್ಷರಂಜಿನಿಯ ಸಂಯೋಜಕ ಗೋವಿಂದ ರಾಜ್ ಶರ್ಮಾ ಸ್ವಾಗತಿಸಿ, ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸ್ಪೂರ್ತಿ.ಎಸ್ ವಂದಿಸಿ, ಕನ್ನಡ ವಿಭಾಗದ ಉಪನ್ಯಾಸಕ ಮಧುಕುಮಾರ್ ನಿರೂಪಿಸಿದರು.

Ad Widget
Continue Reading

ಶಿಕ್ಷಣ

Philomena-ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ವಲಯ ಮಟ್ಟದ NSS ಅಂತರ್ ಕಾಲೇಜು ನೃತ್ಯ ಸ್ಪರ್ಧೆ

Published

on



Ad Widget

Ad Widget

Ad Widget

Ad Widget

ಪುತ್ತೂರಿನ ಸ೦ತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (NSS) ವತಿಯಿಂದ ವಲಯ ಮಟ್ಟದ ಅಂತರ್ ಕಾಲೇಜು ವೈಯಕ್ತಿಕ ಮತ್ತು ಗುಂಪು ನೃತ್ಯ ಸ್ಪರ್ಧೆಯನ್ನು ಅಕ್ಟೋಬರ್ 15ರಂದು ಸಿಲ್ವರ್ ಜುಬಿಲಿ ಮೆಮೋರಿಯಲ್ ಹಾಲ್‌ನಲ್ಲಿ ಆಯೋಜಿಸಲಾಯಿತು.

Ad Widget

Ad Widget

Ad Widget

Ad Widget

ಪುತ್ತೂರು, ಅ. 15: ಪುತ್ತೂರಿನ ಸ೦ತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (NSS) ವತಿಯಿಂದ ವಲಯ ಮಟ್ಟದ ಅಂತರ್ ಕಾಲೇಜು ವೈಯಕ್ತಿಕ ಮತ್ತು ಗುಂಪು ನೃತ್ಯ ಸ್ಪರ್ಧೆಯನ್ನು ಅಕ್ಟೋಬರ್ 15ರಂದು ಸಿಲ್ವರ್ ಜುಬಿಲಿ ಮೆಮೋರಿಯಲ್ ಹಾಲ್‌ನಲ್ಲಿ ಆಯೋಜಿಸಲಾಯಿತು.

Ad Widget

Ad Widget

Ad Widget alt="Ad Widget"/>

Ad Widget

ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಡಾ. ಆಂಟನಿ ಪ್ರಕಾಶ್ ಮೊಂತೆರೊ ಅಧ್ಯಕ್ಷತೆ ವಹಿಸಿ, NSS‌ನ ಮಹತ್ವ ಹಾಗೂ ವಿದ್ಯಾರ್ಥಿಗಳಲ್ಲಿ ಕೌಶಲ್ಯಾಭಿವೃದ್ಧಿಯ ಅಗತ್ಯತೆಯ ಕುರಿತು ಮಾತನಾಡಿದರು.

Ad Widget

Ad Widget <> Ad Widget

ವಿದ್ಯಾರ್ಥಿಗಳು ಪಠ್ಯದ ಜೊತೆಗೆ ನಾಯಕತ್ವ, ಸಂವಹನ, ಸಹಕಾರ ಮತ್ತು ಸಾಮಾಜಿಕ ಸೇವೆಯಂತಹ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು. NSS ಅಧಿಕಾರಿಯಾದ ಡಾ| ಕೆ. ಚಂದ್ರಶೇಖರ್ ರವರು NSS ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದರು.



Ad Widget

ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ವೈಯಕ್ತಿಕ ಮತ್ತು ಗುಂಪು ನೃತ್ಯ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಸ್ಪರ್ಧೆಯು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಆತ್ಮವಿಶ್ವಾಸ ಮತ್ತು ತಂಡದ ಮನೋಭಾವವನ್ನು ಬೆಳೆಸಲು ಉತ್ತಮ ವೇದಿಕೆಯಾಯಿತು.ಘಟಕ ನಾಯಕಿ ಶಿಲ್ಪ ಸ್ವಾಗತಿಸಿ, ಅಂತಿಮ ಬಿಕಾಂ. ವಿದ್ಯಾರ್ಥಿನಿ ಲವಿಕಾ ವಂದನಾರ್ಪಣೆ ಮಾಡಿದರು. ಅಂತಿಮ ಬಿಕಾಂ ವಿದ್ಯಾರ್ಥಿನಿ ಸೌಜನ್ಯ ಕಾರ್ಯಕ್ರಮ ನಿರ್ವಹಿಸಿದರು.

Continue Reading

ಶಿಕ್ಷಣ

Vivekananda-ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪ್ರದಾನ ಕಾರ್ಯಕ್ರಮ ಸಮಾವರ್ತನ ಸಮಾರಂಭ

Published

on



Ad Widget

Ad Widget

Ad Widget

Ad Widget

ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ 2025-26ನೇ ಸಾಲಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ನಡೆಸಿದ ಇಂಜಿನಿಯರಿಂಗ್ ವಿಭಾಗಗಳ ಅಂತಿಮ ವರ್ಷದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಪದವೀಧರರಾದ ಅರ್ಹ ವಿದ್ಯಾರ್ಥಿಗಳ ಪದವಿ ಪ್ರದಾನ ಕಾರ್ಯಕ್ರಮ ಸಮಾವರ್ತನ ಸಮಾರಂಭದಲ್ಲಿ ಮಣಿಪಾಲದ ಮಣಿಪಾಲ್ ಟೆಕ್ನಾಲಜೀಸ್ ಇದರ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಅಭಯ್ ಅನಂತ್ ಗುಪ್ತೆ ಮಾತಾಡಿದರು.

Ad Widget

Ad Widget

Ad Widget

Ad Widget

ಪುತ್ತೂರು: ಮಾನವನ ಜೀವನ ಎನ್ನುವುದು ಒಂದು ಮ್ಯಾರಥಾನ್ ಓಟ. ಇಲ್ಲಿ ನಮ್ಮ ಶಕ್ತಿಯ ಅರಿವಿಲ್ಲದೆ ಓಡಿದರೆ ಗುರಿಮುಟ್ಟದೇ ಇರುವ ಅಪಾಯವಿದೆ ಎಂದು ಮಣಿಪಾಲದ ಮಣಿಪಾಲ್ ಟೆಕ್ನಾಲಜೀಸ್ ಇದರ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಅಭಯ್ ಅನಂತ್ ಗುಪ್ತೆ ಹೇಳಿದರು.

Ad Widget

Ad Widget

Ad Widget alt="Ad Widget"/>

Ad Widget

ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ 2025-26ನೇ ಸಾಲಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ನಡೆಸಿದ ಇಂಜಿನಿಯರಿಂಗ್ ವಿಭಾಗಗಳ ಅಂತಿಮ ವರ್ಷದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಪದವೀಧರರಾದ ಅರ್ಹ ವಿದ್ಯಾರ್ಥಿಗಳ ಪದವಿ ಪ್ರದಾನ ಕಾರ್ಯಕ್ರಮ ಸಮಾವರ್ತನ ಸಮಾರಂಭದಲ್ಲಿ ಮಾತಾಡಿದರು.

Ad Widget

Ad Widget <> Ad Widget

ಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಸರಿಯಾದ ಮತ್ತು ಸ್ಪಷ್ಟವಾದ ನಿರ್ಧಾರವನ್ನು ತೆಗೆದುಕೊಳ್ಳಿ ಮತ್ತು ಯಾವುದೇ ಕೆಲಸಮಾಡುವ ಮೊದಲು ಅದರ ಬಗ್ಗೆ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳಿ ಎಂದರು. ಪದವಿ ಎನ್ನುವುದು ಆರಂಭ ಮಾತ್ರ ನಿಮ್ಮ ಜ್ಞಾನವನ್ನು ಇನ್ನಷ್ಟು ವೃದ್ಧಿಸಿಕೊಳ್ಳಲು ಸದಾ ಹೊಸತನ್ನು ಕಲಿಯುವ ತುಡಿತ ನಿಮ್ಮಲ್ಲಿರಲಿ ಎಂದರು. ನೀವು ಈ ಸ್ಥಿತಿಗೆ ತಲಪುವುದಕ್ಕೆ ಕಾರಣರಾದ ಮಾತಾಪಿತರು, ಉಪನ್ಯಾಸಕರು ಮತ್ತು ಕಲಿಸಿದ ಸಂಸ್ಥೆಯ ಸೇವೆಯನ್ನು ಸದಾ ಸ್ಮರಿಸಿಕೊಳ್ಳಿ ಎಂದರು.



Ad Widget

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ವಿಜಯನಾರಾಯಣ.ಕೆ.ಎಂ ಮಾತನಾಡಿ ಇಂದು ನೀವೆಲ್ಲ ಪದವೀಧರರಾಗಿದ್ದೀರಿ ಅದರ ಜತೆಗೆ ಸ್ಥಾನ ಮಾನಗಳೂ ದೊರೆತಿದೆ. ಸಮಾಜ ಇದುವರೆಗೆ ನಿಮ್ಮ ಜತೆ ಯಾವ ರೀತಿ ಸ್ಪಂದಿಸಿ ಇನ್ನು ಮುಂದೆ ಯಾವ ರೀತಿ ಸ್ಪಂದಿಸಬಹುದು ಎನ್ನುವುದನ್ನು ಅವಲೋಕನ ಮಾಡಿ ಮುಂದಡಿಯಿಡಿ ಎಂದರು. ಭರವಸೆಯ ಯುವಕ ಯುವತಿಯರ ಕೈಯ್ಯಲ್ಲಿ ದೇಶ ಸುಭದ್ರವಾಗಿರುತ್ತದೆ ಎನ್ನುವ ಹಿರಿಯರ ಆಶಯದಂತೆ ಶ್ರೇಷ್ಟ ಸಮಾಜ ನಿರ್ಮಾಣ ಮಾಡುವ ಜವಾಬ್ಧಾರಿ ನಿಮಗಿದೆ ಎಂದರು. ಸಂಬಳ, ಉದ್ಯೋಗ ಮಾತ್ರ ಬದುಕಲ್ಲ ಅದಕ್ಕಿಂತ ಆಚೆಯ ಜಗತ್ತು ಬೇರೆಯೇ ಇದೆ. ಹೆತ್ತವರ ಶ್ರಮ, ನೋವು ಸಮಾಜದ ನಿರೀಕ್ಷೆಗಳ ಬಗ್ಗೆ ಗಮನವಿರಲಿ ಎಂದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶಯಗಳಿಗೆ ಚ್ಯುತಿ ಬಾರದಂತೆ ರಾಷ್ಟç ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಳ್ಳಿ ಎಂದರು.

Ad Widget

Ad Widget

ಪ್ರತಿ ವಿಭಾಗದಲ್ಲಿ ಶೈಕ್ಷಣಿಕವಾಗಿ ಉನ್ನತ ಸಾಧನೆಯನ್ನು ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು ಅಲ್ಲದೆ ಅರ್ಹ ವಿದ್ಯಾರ್ಥಿಗಳಿಗೆ ಪದವಿ ಪತ್ರವನ್ನು ನೀಡಲಾಯಿತು. ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ವಿಭಾಗದಲ್ಲಿ 60 ವಿಶಿಷ್ಟ ಶ್ರೇಣಿ 1 ಪ್ರಥಮ ಶ್ರೇಣಿ, ಡಾಟಾ ಸೈನ್ಸ್ ವಿಭಾಗದಲ್ಲಿ 55 ವಿಶಿಷ್ಟ ಶ್ರೇಣಿ 4 ಪ್ರಥಮ ಶ್ರೇಣಿ, ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ 130 ವಿಶಿಷ್ಟ ಶ್ರೇಣಿ ಮತ್ತು 4 ಪ್ರಥಮ ಶ್ರೇಣಿ, ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ 19 ವಿಶಿಷ್ಟ ಶ್ರೇಣಿ, ಇಲೆಕ್ಟಾçನಿಕ್ಸ್ ವಿಭಾಗದಲ್ಲಿ 54 ವಿಶಿಷ್ಟ ಶ್ರೇಣಿ ಮತ್ತು 8 ಪ್ರಥಮ ಶ್ರೇಣಿ, ಮೆಕ್ಯಾನಿಕಲ್ ವಿಭಾಗದಲ್ಲಿ 13 ವಿಶಿಷ್ಟ ಶ್ರೇಣಿ ಮತ್ತು 6 ಪ್ರಥಮ ಶ್ರೇಣಿ ಹೀಗೆ 354 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರವನ್ನು ಪಡೆದುಕೊಂಡರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ರಮೇಶ್ಚಂದ್ರ, ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ರವಿಕೃಷ್ಣ.ಡಿ.ಕಲ್ಲಾಜೆ, ಸಂಚಾಲಕ ಪ್ರಸನ್ನ ದರ್ಬೆ, ನಿರ್ದೇಶಕರಾದ ಕೆ.ಸುಬ್ರಮಣ್ಯ ಭಟ್, ಆದಿತ್ಯ ಕಲ್ಲೂರಾಯ, ಮನೋಜ್ ಕುಮಾರ್, ಸುಜಿತ್ ಕುಮಾರ್, ರಕ್ಷಾ ಪ್ರಭು, ಪ್ರಾಂಶುಪಾಲ ಡಾ.ಪುರುಷೋತ್ತಮ ಚಿಪ್ಪಾರ್, ದಾಖಲಾತಿ ಮತ್ತು ನೇಮಕಾತಿ ವಿಭಾಗ ಮುಖ್ಯಸ್ಥ ಪ್ರೊ.ಗೈಟನ್ ಲೋಬೋ, ವಿಭಾಗ ಮುಖ್ಯಸ್ಥರುಗಳಾದ ಡಾ.ಶ್ರೀಕಾಂತ್ ರಾವ್.ಎಸ್.ಕೆ, ಡಾ.ದೀಪಕ್.ಕೆ.ಬಿ, ಡಾ.ರಾಧಿಕಾ ಶೆಟ್ಟಿ, ಪ್ರೊ.ಪ್ರಶಾಂತ, ಪ್ರೊ.ರೂಪಾ.ಜಿ.ಕೆ, ಪ್ರೊ.ಪ್ರದೀಪ್ ಕುಮಾರ್.ಕೆ.ಜಿ, ಡಾ.ಶ್ವೇತಾಂಬಿಕಾ.ಪಿ, ಪ್ರೊ.ತೇಜಸ್ವಿನಿ.ಎಲ್.ಪಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಪ್ರೊ.ಶ್ರೀನಿಧಿ.ಎ, ಪ್ರೊ.ನಿಶಾ.ಜಿ.ಆರ್ ಮುಖ್ಯ ಗ್ರಂಥಪಾಲಕ ದಿನೇಶ್ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಾಂಶುಪಾಲ ಡಾ.ಪುರುಷೋತ್ತಮ ಚಿಪ್ಪಾರ್ ಸ್ವಾಗತಿಸಿ ಪ್ರಸ್ತಾವನೆಗೈದರು. ಪ್ರೊ.ಪ್ರದೀಪ್ ಕುಮಾರ್.ಕೆ.ಜಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಪ್ರೊ.ರೂಪಾ.ಜಿ.ಕೆ ವಂದಿಸಿದರು. ಪ್ರೊ.ಶೀತಲ್.ಎಸ್.ಕೆ ಹಾಗೂ ಪ್ರೊ.ಅನುಪಮಾ.ಟಿ ಕಾರ್ಯಕ್ರಮ ನಿರ್ವಹಿಸಿದರು.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading