Connect with us

ಅಂತರ ರಾಜ್ಯ

CJP-ಸಿಜೆಪಿ ನಾಯಕರಾದ ಸೌರಭ್ ದಾಸ್, ಅಶುತೋಶ್ ರಂಕಾ ಬಿಡುಗಡೆಗೆ ಆದೇಶ

Published

on



Ad Widget

Ad Widget

Ad Widget

Ad Widget

ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನಾಯಕರಾದ ಸೌರಭ್ ದಾಸ್ ಮತ್ತು ಅಶುತೋಶ್ ರಂಕಾ ಅವರನ್ನು ಬಿಡುಗಡೆ ಮಾಡುವಂತೆ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶಿಸಿದೆ. ಅವರ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.

Ad Widget

Ad Widget

Ad Widget

Ad Widget

ನವದೆಹಲಿ: ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನಾಯಕರಾದ ಸೌರಭ್ ದಾಸ್ ಮತ್ತು ಅಶುತೋಶ್ ರಂಕಾ ಅವರನ್ನು ಬಿಡುಗಡೆ ಮಾಡುವಂತೆ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶಿಸಿದೆ. ಅವರ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಅಕ್ಟೋಬರ್ 13ರಂದು ಜಂತರ್ ಮಂತರ್‌ಗೆ ಅತಿಕ್ರಮ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ದಾಸ್ ಮತ್ತು ರಂಕಾ ಅವರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಇಬ್ಬರನ್ನೂ ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ನಂತರ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಂಗ ಬಂಧನವನ್ನು ಮತ್ತೆರಡು ದಿನಗಳ ಕಾಲ ವಿಸ್ತರಿಸಿದ್ದರು. ಈ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.

Ad Widget

Ad Widget <> Ad Widget

ಈ ವೇಳೆ ಇಬ್ಬರು ಸಲ್ಲಿಸಿದ್ದ ಶೂರಿಟಿಗಳನ್ನು ನ್ಯಾಯಾಲಯ ಅಂಗೀಕರಿಸಿದ್ದು, ಬಿಡುಗಡೆಗೆ ಆದೇಶಿಸಿದೆ.



Ad Widget

ಇದಕ್ಕೂ ಮುನ್ನ, ತಮ್ಮ ನ್ಯಾಯಾಂಗ ಬಂಧನ ವಿಸ್ತರಣೆಯನ್ನು ಪ್ರಶ್ನಿಸಿ ಸೌರಭ್ ದಾಸ್ ಮತ್ತು ಅಶುತೋಶ್ ರಂಕಾ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದ ಹೈಕೋರ್ಟ್ ನ್ಯಾಯಮೂರ್ತಿಗಳು, ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶಕ್ಕಾಗಿ ಕಾಯುವಂತೆ ಸೂಚಿಸಿದ್ದರು.

Ad Widget

Ad Widget

ಬಂಧನಕ್ಕೂ ಮುನ್ನ ದಾಸ್, ರಂಕಾ ಸೇರಿದಂತೆ ಇತರ ಪ್ರತಿಭಟನಾಕಾರರು ರಾಷ್ಟ್ರಧ್ವಜ ಪ್ರದರ್ಶಿಸಿ, ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಘೋಷಣೆಗಳನ್ನು ಕೂಗಿದ್ದರು ಎಂದು ವರದಿಯಾಗಿದೆ. ಪ್ರತಿಭಟನಾಕಾರರು ಅನುಮತಿ ರದ್ದುಗೊಂಡಿದ್ದ ಜಂತರ್ ಮಂತರ್ ಪ್ರದೇಶಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದಲ್ಲದೆ, ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದರು ಎಂಬುದು ಪೊಲೀಸರ ಆರೋಪವಾಗಿದೆ.

Ad Widget
Click to comment

Leave a Reply

ಅಂತರ ರಾಜ್ಯ

Parakala Prabhakar-ಎಸ್‌ಐಆರ್ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ: ಸಿಜೆಪಿ ಜೊತೆ ಕೈಜೋಡಿಸಿದ ನಿರ್ಮಲಾ ಸೀತಾರಾಮನ್ ಪತಿ ಪರಕಾಲ ಪ್ರಭಾಕರ್

Published

on



Ad Widget

Ad Widget

Ad Widget

Ad Widget

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ಹಾಗೂ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್ ಅವರು ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ಅ.23ರಂದು ನಡೆಯಲಿರುವ ರಾಷ್ಟ್ರವ್ಯಾಪಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.

Ad Widget

Ad Widget

Ad Widget

Ad Widget

ಹೊಸದಿಲ್ಲಿ, ಅ.22: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ಹಾಗೂ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್ ಅವರು ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ಅ.23ರಂದು ನಡೆಯಲಿರುವ ರಾಷ್ಟ್ರವ್ಯಾಪಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಎಸ್‌ಐಆರ್ ಪ್ರಕ್ರಿಯೆಯನ್ನು ರದ್ದುಗೊಳಿಸುವುದು ಹಾಗೂ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ‘ಪೀಪಲ್ ಅಗೇನಸ್ಟ್ ಎಸ್‌ಐಆರ್’ ಮೈತ್ರಿಕೂಟ ಈ ಪ್ರತಿಭಟನೆಯನ್ನು ಆಯೋಜಿಸಿದೆ.

Ad Widget

Ad Widget <> Ad Widget

ಪ್ರತಿಭಟನೆಯಲ್ಲಿ ಸಿಜೆಪಿ ಸ್ಥಾಪಕ ಅಭಿಜಿತ್ ದೀಪ್ಕೆ, ಎಐಎಸ್‌ಎ ಅಧ್ಯಕ್ಷೆ ನೇಹಾ ಬೋರಾ, ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಮತ್ತು ರೈತ ಮುಖಂಡ ರಾಕೇಶ್ ಟಿಕಾಯತ್ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಪರಕಾಲ ಪ್ರಭಾಕರ್ ಅವರು ಇತರ ನಾಯಕರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ.



Ad Widget

ಎಸ್‌ಐಆರ್ ವಿರುದ್ಧ ಪ್ರಭಾಕರ್ ಆಕ್ರೋಶ
ಅ.8ರಂದು ಬೆಂಗಳೂರಿನಲ್ಲಿ ನಡೆದಿದ್ದ ಸಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪರಕಾಲ ಪ್ರಭಾಕರ್, ಎಸ್‌ಐಆರ್ ಪ್ರಕ್ರಿಯೆಯನ್ನು ‘ಪೌರತ್ವದ ರಕ್ತರಹಿತ ರಾಜಕೀಯ ನರಮೇಧ’ ಎಂದು ಬಣ್ಣಿಸಿದ್ದರು.

Ad Widget

Ad Widget

ಅರ್ಹ ಮತದಾರರನ್ನು ಮತದಾನದ ಹಕ್ಕಿನಿಂದ ವಂಚಿತರನ್ನಾಗಿ ಮಾಡುವ ಸಾಧ್ಯತೆಯಿರುವ ಈ ಪ್ರಕ್ರಿಯೆಯು ನಾಗರಿಕರಲ್ಲಿ ಎರಡು ವರ್ಗಗಳನ್ನು ಸೃಷ್ಟಿಸಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದರು.

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ವಿಚಾರವಾಗಿ ದೇಶಾದ್ಯಂತ ಚರ್ಚೆ ನಡೆಯುತ್ತಿರುವ ನಡುವೆಯೇ, ಅ.23ರಂದು ನಡೆಯಲಿರುವ ಪ್ರತಿಭಟನೆ ಮಹತ್ವ ಪಡೆದುಕೊಂಡಿದೆ.

Ad Widget
Continue Reading

ಸಿನೆಮಾ

Bishnoy gang-ಬಿಷ್ಣೋಯಿ ಗ್ಯಾಂಗ್ ಭೀತಿ: ಬಾಲಿವುಡ್ ನಟರ ಮನೆಗಳಿಗೆ ಭದ್ರತೆ ಹೆಚ್ಚಳ

Published

on



Ad Widget

Ad Widget

Ad Widget

Ad Widget

ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಮೇಲೆ ಬಿಷ್ಣೋಯ್ ಗ್ಯಾಂಗ್ ದಾಳಿ ನಡೆಸಿದ ಘಟನೆಯ ಬೆನ್ನಲ್ಲೇ ಮುಂಬಯಿಯಲ್ಲಿ ಹಲವು ಬಾಲಿವುಡ್ ನಟರ ಮನೆಗಳಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ವರದಿಯಾಗಿದೆ. ನಟರಾದ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಶಾರುಖ್ ಖಾನ್ ಹಾಗೂ ನಟಿ ದಿಶಾ ಪಟಾನಿ ಸೇರಿದಂತೆ ಹಲವು ಸಿನಿಮಾ ತಾರೆಯರ ಭದ್ರತೆಯನ್ನು ಹೆಚ್ಚಿಸಿರುವುದಾಗಿ ಮೂಲಗಳು ತಿಳಿಸಿವೆ.

Ad Widget

Ad Widget

Ad Widget

Ad Widget

ಮುಂಬಯಿ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಮೇಲೆ ಬಿಷ್ಣೋಯ್ ಗ್ಯಾಂಗ್ ದಾಳಿ ನಡೆಸಿದ ಘಟನೆಯ ಬೆನ್ನಲ್ಲೇ ಮುಂಬಯಿಯಲ್ಲಿ ಹಲವು ಬಾಲಿವುಡ್ ನಟರ ಮನೆಗಳಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ವರದಿಯಾಗಿದೆ. ನಟರಾದ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಶಾರುಖ್ ಖಾನ್ ಹಾಗೂ ನಟಿ ದಿಶಾ ಪಟಾನಿ ಸೇರಿದಂತೆ ಹಲವು ಸಿನಿಮಾ ತಾರೆಯರ ಭದ್ರತೆಯನ್ನು ಹೆಚ್ಚಿಸಿರುವುದಾಗಿ ಮೂಲಗಳು ತಿಳಿಸಿವೆ.

Ad Widget

Ad Widget

Ad Widget alt="Ad Widget"/>

Ad Widget

ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಪ್ರಮುಖ ಗುರಿಗಳಲ್ಲಿ ಸಲ್ಮಾನ್ ಖಾನ್ ಕೂಡ ಒಬ್ಬರು ಎನ್ನಲಾಗಿದ್ದು, ಅವರ ನಿವಾಸಕ್ಕೆ ಈಗಾಗಲೇ ಬಿಗಿ ಭದ್ರತೆ ಒದಗಿಸಲಾಗಿದೆ. ಇದೀಗ ಟೈಗರ್ ಶ್ರಾಫ್ ಮೇಲಿನ ದಾಳಿ ಘಟನೆಯ ಬಳಿಕ ಸಲ್ಮಾನ್ ಖಾನ್ ಅವರಿಗೆ ವೈ ಪ್ಲಸ್ ಭದ್ರತೆ ನೀಡಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ವರದಿಯಾಗಿದೆ.

Ad Widget

Ad Widget <> Ad Widget

ಸಲ್ಮಾನ್ ಖಾನ್ ವಾಸಿಸುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿರುವ ಬುಲೆಟ್‌ಪ್ರೂಫ್ ರಕ್ಷಣಾ ವ್ಯವಸ್ಥೆಯನ್ನೂ ನವೀಕರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.



Ad Widget

ಇನ್ನೊಂದೆಡೆ, ನಟ ಅಕ್ಷಯ್ ಕುಮಾರ್ ಅವರ ಮನೆಯ ಹೊರಭಾಗದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಟರಾದ ಅಮಿತಾಭ್ ಬಚ್ಚನ್, ಆಮಿರ್ ಖಾನ್ ಸೇರಿದಂತೆ ಹಲವು ಪ್ರಮುಖ ಬಾಲಿವುಡ್ ತಾರೆಯರ ನಿವಾಸಗಳಿಗೂ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ ಎಂದು ಮುಂಬಯಿ ಪೊಲೀಸ್ ಅಪರಾಧ ವಿಭಾಗದ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

Continue Reading

ಅಂತರ ರಾಜ್ಯ

Kasaragod-ಕಾಸರಗೋಡು: ಕಡವತ್‌ನಲ್ಲಿ ಯುವಕನ ಕೊಲೆ ಪ್ರಕರಣ; ಗೂಗಲ್ ಪೇ ಜಾಡು ಹಿಡಿದು ಪೊಲೀಸರ ತನಿಖೆ

Published

on



Ad Widget

Ad Widget

Ad Widget

Ad Widget

ತಳಂಗರೆಯ ಕಡವತ್‌ನಲ್ಲಿ ಕಟ್ಟಡವೊಂದರ ಮೇಲಿನ ಕೊಠಡಿಯಲ್ಲಿ ಯುವಕನನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಪ್ರಕರಣದ ತನಿಖೆ ಚುರುಕುಗೊಂಡಿದೆ. ಪ್ರಕರಣದ ತನಿಖೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಅಧೀನದ ವಿಶೇಷ ತಂಡವನ್ನು ರಚಿಸಲಾಗಿದೆ.

Ad Widget

Ad Widget

Ad Widget

Ad Widget

ಕಾಸರಗೋಡು: ತಳಂಗರೆಯ ಕಡವತ್‌ನಲ್ಲಿ ಕಟ್ಟಡವೊಂದರ ಮೇಲಿನ ಕೊಠಡಿಯಲ್ಲಿ ಯುವಕನನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಪ್ರಕರಣದ ತನಿಖೆ ಚುರುಕುಗೊಂಡಿದೆ. ಪ್ರಕರಣದ ತನಿಖೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಅಧೀನದ ವಿಶೇಷ ತಂಡವನ್ನು ರಚಿಸಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಕಳೆದ ಗುರುವಾರ ಮಧ್ಯಾಹ್ನ ಕಡವತ್‌ನ ಎರಡು ಅಂತಸ್ತಿನ ಕಟ್ಟಡದ ಮೇಲಿನ ಕೊಠಡಿಯಲ್ಲಿ ಅಪರಿಚಿತ ಯುವಕನ ಮೃತದೇಹ ಕೊಳೆತು, ಹುಳು ಹಿಡಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೊಠಡಿಗೆ ಹೊರಗಿನಿಂದ ಬೀಗ ಹಾಕಲಾಗಿತ್ತು. ಕೊಠಡಿಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿತ್ತು.

Ad Widget

Ad Widget <> Ad Widget

ಕತ್ತು ಹಿಸುಕಿ ಕೊಲೆ
ಆರಂಭಿಕ ಪರಿಶೀಲನೆಯಲ್ಲಿ ಕೊಲೆಯ ಶಂಕೆ ವ್ಯಕ್ತವಾಗಿತ್ತು. ಬಳಿಕ ನಡೆಸಿದ ವಿವರವಾದ ತಪಾಸಣೆಯಲ್ಲಿ ಯುವಕನನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದು ತಿಳಿದುಬಂದಿದೆ.



Ad Widget

ಅಕ್ಟೋಬರ್ 5ರಂದು ದಾವಣಗೆರೆಯವರು ಎಂದು ಹೇಳಿಕೊಂಡ ನಾಲ್ವರು ಕಟ್ಟಡದಲ್ಲಿ ಕೊಠಡಿಯನ್ನು ಬಾಡಿಗೆಗೆ ಪಡೆದಿದ್ದರು. ನಜೀಮ್ ಎಂಬ ಹೆಸರಿನಲ್ಲಿ ಕೊಠಡಿ ಬಾಡಿಗೆಗೆ ಪಡೆಯಲಾಗಿತ್ತು. ಆದರೆ ಅದು ನಿಜವಾದ ಹೆಸರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ತಿಳಿದುಬಂದಿದೆ.

Ad Widget

Ad Widget

ಸಿಸಿಟಿವಿ ದೃಶ್ಯಾವಳಿ ಪೊಲೀಸರಿಗೆ ಲಭ್ಯ
ನಾಲ್ವರಲ್ಲಿ ಒಬ್ಬನನ್ನು ಕೊಲೆ ಮಾಡಲಾಗಿದೆ ಎಂಬುದು ತನಿಖಾ ತಂಡದ ಪ್ರಾಥಮಿಕ ಅಂದಾಜಾಗಿದೆ. ಘಟನೆಯ ಬಳಿಕ ಮೂವರು ಬ್ಯಾಗ್‌ಗಳನ್ನು ಹಿಡಿದು ಕಟ್ಟಡದಿಂದ ಹೊರಹೋಗುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅವು ಪೊಲೀಸರಿಗೆ ಲಭ್ಯವಾಗಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ವ್ಯಕ್ತಿ ಹಾಗೂ ಆರೋಪಿಗಳ ಸುಳಿವು ನೀಡಬಹುದಾದ ಪ್ರಮುಖ ಸಾಕ್ಷ್ಯ ಪೊಲೀಸರಿಗೆ ದೊರೆತಿದೆ ಎನ್ನಲಾಗಿದೆ. ಗೂಗಲ್ ಪೇಗೆ ಸಂಬಂಧಿಸಿದ ಸಂಖ್ಯೆಯೊಂದು ಲಭ್ಯವಾಗಿದ್ದು, ಅದರ ಆಧಾರದಲ್ಲಿ ತನಿಖೆಯನ್ನು ತೀವ್ರಗೊಳಿಸಲಾಗಿದೆ.

ಕೊಲೆಯಾದ ಯುವಕನ ಗುರುತು ಪತ್ತೆಯಾದರೆ ಆರೋಪಿಗಳ ಜಾಡು ಹಿಡಿಯಲು ಅನುಕೂಲವಾಗಲಿದೆ ಎಂಬ ನಿರೀಕ್ಷೆಯಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading