Connect with us

ಸ್ಥಳೀಯ

Devaragudda Goravayya-ಕೆಂಪುಕೋಟೆಯ ಮೇಲೆ ಮುತ್ತು ಚೆಲ್ಲಿತ್ತಲೇ ಪರಾಕ್’!; ದೇವರಗುಡ್ಡ ಗೊರವಯ್ಯ ಅನೂಹ್ಯ ಭವಿಷ್ಯವಾಣಿ – ಬದಲಾಗುತ್ತಾರ ವ್ಯಕ್ತಿ ?

Published

on



Ad Widget

Ad Widget

Ad Widget

Ad Widget

ರಾಣೇಬೆನ್ನೂರು ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ದೇವರಗುಡ್ಡದಲ್ಲಿ ಮಾಲತೇಶ ಸ್ವಾಮಿಯ ನವರಾತ್ರಿ ಕಾರ್ಣಿಕೋತ್ಸವವು ಸಡಗರದಿಂದ ನೆರವೇರಿದೆ. ಈ ವರ್ಷದ ಕಾರ್ಣಿಕ ನುಡಿಯಾಗಿ ‘ಕೆಂಪುಕೋಟೆಯ ಮೇಲೆ ಮುತ್ತು ಚೆಲ್ಲಿತ್ತಲೇ ಪರಾಕ್’ ಎಂಬ ದೈವವಾಣಿ ಮೊಳಗಿದ್ದು, ಭಕ್ತರಲ್ಲಿ ಕುತೂಹಲ ಮೂಡಿಸಿದೆ.

Ad Widget

Ad Widget

Ad Widget

Ad Widget

ಹಾವೇರಿ: ರಾಣೇಬೆನ್ನೂರು ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ದೇವರಗುಡ್ಡದಲ್ಲಿ ಮಾಲತೇಶ ಸ್ವಾಮಿಯ ನವರಾತ್ರಿ ಕಾರ್ಣಿಕೋತ್ಸವವು ಸಡಗರದಿಂದ ನೆರವೇರಿದೆ. ಈ ವರ್ಷದ ಕಾರ್ಣಿಕ ನುಡಿಯಾಗಿ ‘ಕೆಂಪುಕೋಟೆಯ ಮೇಲೆ ಮುತ್ತು ಚೆಲ್ಲಿತ್ತಲೇ ಪರಾಕ್’ ಎಂಬ ದೈವವಾಣಿ ಮೊಳಗಿದ್ದು, ಭಕ್ತರಲ್ಲಿ ಕುತೂಹಲ ಮೂಡಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ಸಂಪ್ರದಾಯದಂತೆ ಸತತ ಒಂಬತ್ತು ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದ ಗೊರವಯ್ಯ ನಾಗಪ್ಪ ಅಜ್ಜ ಉರ್ಮಿ ಅವರು, ಕರಿಯಾಲ್ ಕಟ್ಟಿಯಲ್ಲಿ ಸುಮಾರು 15 ಅಡಿ ಎತ್ತರದ ಬಿಲ್ಲನ್ನೇರಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಕಾರ್ಣಿಕ ನುಡಿದರು.

Ad Widget

Ad Widget <> Ad Widget

ಹಿಂಗಾರು ಮಳೆ, ಕೃಷಿ ಸಮೃದ್ಧಿಯ ನಿರೀಕ್ಷೆ
ಈ ಬಾರಿಯ ಕಾರ್ಣಿಕ ನುಡಿ ರೈತಾಪಿ ವರ್ಗದಲ್ಲಿ ಹೊಸ ಭರವಸೆ ಮೂಡಿಸಿದೆ. ಮುಂಗಾರು ಮಳೆಯ ಕೊರತೆಯಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಹಿಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ. ಮಳೆ ಸಮೃದ್ಧವಾಗಿ ಸುರಿದು ಕೃಷಿ ಚಟುವಟಿಕೆಗಳು ಚೇತರಿಕೆ ಕಾಣಲಿದ್ದು, ನಾಡು ಸುಭಿಕ್ಷವಾಗಲಿದೆ ಎಂಬ ವ್ಯಾಖ್ಯಾನಗಳು ಕೇಳಿಬರುತ್ತಿವೆ.



Ad Widget

ದೇಶದ ರಾಜಕೀಯ ಬದಲಾವಣೆಯ ಮುನ್ಸೂಚನೆಯೇ?
‘ಕೆಂಪುಕೋಟೆಯ ಮೇಲೆ ಮುತ್ತು ಚೆಲ್ಲಿತ್ತಲೇ ಪರಾಕ್’ ಎಂಬ ಕಾರ್ಣಿಕ ನುಡಿ ದೇಶದ ರಾಜಕೀಯ ಭವಿಷ್ಯದ ಬಗ್ಗೆಯೂ ಚರ್ಚೆಗೆ ಕಾರಣವಾಗಿದೆ. ಈ ಕುರಿತು ವ್ಯಾಖ್ಯಾನಿಸಿರುವ ದೇವಾಲಯದ ಪ್ರಧಾನ ಅರ್ಚಕ ಸಂತೋಷಭಟ್ಟ ಗುರೂಜಿ, ಭವಿಷ್ಯದಲ್ಲಿ ದೇಶದ ಆಡಳಿತದಲ್ಲಿ ಸಾಧು-ಸಂತರ ಪಾತ್ರ ನಿರ್ಣಾಯಕವಾಗಬಹುದು. ಸಾಧು-ಸಂತರೇ ದೇಶದ ಪ್ರಧಾನಿಯಾಗಿ ಕೆಂಪುಕೋಟೆಯ ಮೇಲೆ ಧ್ವಜಾರೋಹಣ ಮಾಡುವ ಕಾಲ ಬರಬಹುದು ಎಂಬ ಮುನ್ಸೂಚನೆ ಇದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Ad Widget

Ad Widget

ಪ್ರತಿವರ್ಷ ರಾಜ್ಯದ ಗಮನ ಸೆಳೆಯುವ ಮಾಲತೇಶ ಸ್ವಾಮಿಯ ಕಾರ್ಣಿಕ ನುಡಿ ಈ ಬಾರಿಯೂ ಕೃಷಿ ಸಮೃದ್ಧಿ ಮತ್ತು ದೇಶದ ರಾಜಕೀಯ ಭವಿಷ್ಯದ ಕುರಿತ ಚರ್ಚೆಗೆ ನಾಂದಿ ಹಾಡಿದೆ. ಆದರೆ, ಕಾರ್ಣಿಕದ ನುಡಿಗಳ ವಿವಿಧ ವ್ಯಾಖ್ಯಾನಗಳು ನಂಬಿಕೆ ಮತ್ತು ಅಭಿಪ್ರಾಯಗಳನ್ನು ಆಧರಿಸಿವೆ.

2025ರ ಕಾರ್ಣಿಕ ನುಡಿ ಏನಾಗಿತ್ತು?
ಕಳೆದ ವರ್ಷ ‘ನಾಡು ಬಂಗಾರದ ಗಿಂಡಿಲೇ, ನಾಡು ಸಿರಿಯಾಗೀತಲೇ ಪರಾಕ್’ ಎಂಬ ಕಾರ್ಣಿಕ ನುಡಿ ಮೊಳಗಿತ್ತು. ಇದನ್ನು ಹಿಂಗಾರು ಮಳೆ ಉತ್ತಮವಾಗಿ ಸುರಿದು ಬೆಳೆ ಸಮೃದ್ಧಿಯಾಗುವ ಹಾಗೂ ನಾಡಿನಲ್ಲಿ ಸುಭಿಕ್ಷೆ ನೆಲೆಸುವ ಸಂಕೇತವೆಂದು ವ್ಯಾಖ್ಯಾನಿಸಲಾಗಿತ್ತು. ರಾಜಕೀಯವಾಗಿ ಸ್ಥಿರತೆ ಇರಲಿದ್ದು, ಉತ್ತಮ ನಾಯಕರು ಹೊರಹೊಮ್ಮಲಿದ್ದಾರೆ ಎಂಬ ಅರ್ಥವನ್ನೂ ಕಲ್ಪಿಸಲಾಗಿತ್ತು.

2024ರ ಕಾರ್ಣಿಕ ನುಡಿ ಏನಾಗಿತ್ತು?
2024ರಲ್ಲಿ ‘ಆಕಾಶದತ್ತ ಚಿಗುರಿತಲೇ, ಬೇರು ಮುದ್ದಾತಲೇ ಪರಾಕ್’ ಎಂಬ ಕಾರ್ಣಿಕ ನುಡಿ ಮೊಳಗಿತ್ತು. ‘ಆಕಾಶದತ್ತ ಚಿಗುರಿತು’ ಎಂಬುದನ್ನು ಉತ್ತಮ ಮಳೆಯ ಸಂಕೇತವಾಗಿಯೂ, ‘ಬೇರು ಮುದ್ದಾಯಿತು’ ಎಂಬುದನ್ನು ಬೆಳೆಗಳಿಗೆ ಉತ್ತಮ ಫಸಲು ದೊರೆತು ರೈತರಿಗೆ ಆರ್ಥಿಕ ಲಾಭವಾಗುವ ಸೂಚನೆಯಾಗಿಯೂ ವ್ಯಾಖ್ಯಾನಿಸಲಾಗಿತ್ತು.

Ad Widget
Click to comment

Leave a Reply

ಕಾರ್ಯಕ್ರಮಗಳು

Puttur-ತುಳಸಿ ಪೂಜೆಯಂದು ನಡೆಯಲಿದೆ ಶಾಸಕ ಅಶೋಕ್ ರೈ ನೇತೃತ್ವದ 14ನೇ ವರ್ಷದ ‘ಅಶೋಕ ಜನ-ಮನ’ – ನ.22ರಂದು 3 ಕೌಂಟರ್ ನಲ್ಲಿ ನಡೆಯಲಿದೆ 1 ಲಕ್ಷಕ್ಕೂ ಮಿಕ್ಕಿ ಜನರಿಗೆ ತುಳುನಾಡಿನ ಬೃಹತ್ ‘ವಸ್ತ್ರ ವಿತರಣೆ’..!

Published

on



Ad Widget

Ad Widget

Ad Widget

Ad Widget

ಶಾಸಕ ಅಶೋಕ್ ಕುಮಾರ್ ರೈ ಮುಖ್ಯ ಪ್ರವರ್ತಕರಾಗಿರುವ ರೈ ಎಸ್ಟೇಟ್ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದೀಪಾವಳಿ ಪ್ರಯುಕ್ತ ಆಯೋಜಿಸಲಾಗಿದ್ದ 14ನೇ ವರ್ಷದ ‘ಅಶೋಕ ಜನ-ಮನ’ ವಸ್ತ್ರ ವಿತರಣಾ ಕಾರ್ಯಕ್ರಮವನ್ನು ಮಳೆಯ ಕಾರಣದಿಂದ ಮುಂದೂಡಲಾಗಿದೆ. ನವೆಂಬರ್ 8ರಂದು ನಡೆಯಬೇಕಿದ್ದ ಕಾರ್ಯಕ್ರಮವು ಇದೀಗ ನವೆಂಬರ್ 22ರಂದು ತುಳಸಿ ಹಬ್ಬದ ದಿನ ನಡೆಯಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

Ad Widget

Ad Widget

Ad Widget

Ad Widget

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಮುಖ್ಯ ಪ್ರವರ್ತಕರಾಗಿರುವ ರೈ ಎಸ್ಟೇಟ್ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದೀಪಾವಳಿ ಪ್ರಯುಕ್ತ ಆಯೋಜಿಸಲಾಗಿದ್ದ 14ನೇ ವರ್ಷದ ‘ಅಶೋಕ ಜನ-ಮನ’ ವಸ್ತ್ರ ವಿತರಣಾ ಕಾರ್ಯಕ್ರಮವನ್ನು ಮಳೆಯ ಕಾರಣದಿಂದ ಮುಂದೂಡಲಾಗಿದೆ. ನವೆಂಬರ್ 8ರಂದು ನಡೆಯಬೇಕಿದ್ದ ಕಾರ್ಯಕ್ರಮವು ಇದೀಗ ನವೆಂಬರ್ 22ರಂದು ತುಳಸಿ ಹಬ್ಬದ ದಿನ ನಡೆಯಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಅ.22ರಂದು ಶಾಸಕರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷದ ಅಶೋಕ ಜನ-ಮನ ಕಾರ್ಯಕ್ರಮಕ್ಕೆ ನವೆಂಬರ್ 8ರಂದು ದಿನಾಂಕ ನಿಗದಿಪಡಿಸಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಕಾರ್ಯಕ್ರಮ ನಡೆಯುವ ಕ್ರೀಡಾಂಗಣದಲ್ಲಿ ಮಣ್ಣು ಹಾಕಿ ಸಮತಟ್ಟು ಮಾಡುವ ಕಾರ್ಯವನ್ನೂ ಪೂರ್ಣಗೊಳಿಸಲಾಗಿತ್ತು. ಆದರೆ, ಹವಾಮಾನ ವೈಪರೀತ್ಯದಿಂದ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ತೊಂದರೆಯಾಗದಂತೆ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸುವ ಉದ್ದೇಶದಿಂದ ಮುಂದೂಡಲಾಗಿದೆ ಎಂದು ತಿಳಿಸಿದರು.

Ad Widget

Ad Widget <> Ad Widget

ಬೆಳಿಗ್ಗೆ 9.30ರಿಂದಲೇ ವಸ್ತ್ರ ವಿತರಣೆ
ಕಾರ್ಯಕ್ರಮದಲ್ಲಿ ಅತಿಥಿಗಳಿಗಾಗಿ ಕಾಯದೆ ಬೆಳಿಗ್ಗೆ 9.30ರಿಂದಲೇ ವಸ್ತ್ರ ವಿತರಣೆ ಆರಂಭಿಸಲಾಗುವುದು. ಯಾವುದೇ ಗೊಂದಲಕ್ಕೆ ಅವಕಾಶವಾಗದಂತೆ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಜನರಷ್ಟೇ ಅಲ್ಲದೆ, ಇತರ ಪ್ರದೇಶಗಳಿಂದ ಆಗಮಿಸುವವರಿಗೂ ವಸ್ತ್ರ ಹಾಗೂ ಅಗತ್ಯ ವಸ್ತುಗಳನ್ನು ವಿತರಿಸಲಾಗುವುದು. ಇದಕ್ಕಾಗಿ ಯಾವುದೇ ಗುರುತಿನ ಚೀಟಿ ತರುವ ಅಗತ್ಯವಿಲ್ಲ. ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ವಿತರಣೆ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.



Ad Widget

ಒಂದು ಲಕ್ಷ ಜನರಿಗೆ ವಸ್ತ್ರ ಹಾಗೂ ಅಗತ್ಯ ವಸ್ತುಗಳ ವಿತರಣೆ
ಈ ಬಾರಿ ಒಂದು ಲಕ್ಷ ಜನರಿಗೆ ವಸ್ತ್ರ ಹಾಗೂ ಅಗತ್ಯ ವಸ್ತುಗಳನ್ನು ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಂದೇ ಮನೆಯಿಂದ ಎಷ್ಟು ಮಂದಿ ಬಂದರೂ ಪ್ರತಿಯೊಬ್ಬರಿಗೂ ವಸ್ತುಗಳನ್ನು ನೀಡಲಾಗುವುದು.

Ad Widget

Ad Widget

ಮಹಿಳೆಯರಿಗೆ ಸೀರೆ ಹಾಗೂ ಪುರುಷರಿಗೆ ಬೆಡ್‌ಶೀಟ್ ಸೇರಿದಂತೆ ಬಟ್ಟಲು, ಗ್ಯಾಸ್, ಬೌಲ್ ಮತ್ತು ಟವೆಲ್ ಸೆಟ್‌ಗಳನ್ನು ವಿತರಿಸಲಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ಮೂರು ಕೌಂಟರ್‌ಗಳನ್ನು ತೆರೆಯಲಾಗಿದ್ದು, ಜನರು ತಮಗೆ ಅಗತ್ಯವಿರುವ ವಸ್ತುಗಳನ್ನು ಪಡೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಒಂದು ವರ್ಷದ ಮಗುವಿನಿಂದ ಹಿಡಿದು ವಯೋವೃದ್ಧರವರೆಗೂ ವಸ್ತುಗಳನ್ನು ವಿತರಿಸಲಾಗುವುದು. ತಾಯಿ-ಮಗು ಹಾಗೂ ಹಿರಿಯ ನಾಗರಿಕರಿಗೆ ಪ್ರತ್ಯೇಕ ವಿತರಣಾ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅಶೋಕ್ ಕುಮಾರ್ ರೈ ವಿವರಿಸಿದರು.

ಒಂದು ಲಕ್ಷ ದೋಸೆ ವಿತರಣೆ; ಮಧ್ಯಾಹ್ನ ಅನ್ನಸಂತರ್ಪಣೆ
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9.30ರಿಂದಲೇ ದೋಸೆ ವಿತರಣೆ ಆರಂಭವಾಗಲಿದೆ. ಈ ಬಾರಿ ಒಂದು ಲಕ್ಷ ದೋಸೆ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳಿಗ್ಗೆ 11.30ರವರೆಗೆ ದೋಸೆ ವಿತರಣೆ ನಡೆಯಲಿದ್ದು, ಬಳಿಕ ಮಧ್ಯಾಹ್ನದ ಊಟ ಆರಂಭವಾಗಲಿದೆ. ಮಧ್ಯಾಹ್ನ 3 ಗಂಟೆಯವರೆಗೆ ಅನ್ನಸಂತರ್ಪಣೆ ನಡೆಯಲಿದ್ದು, ನಂತರ ಮತ್ತೆ ದೋಸೆ ವಿತರಣೆ ಮುಂದುವರಿಯಲಿದೆ ಎಂದು ಶಾಸಕರು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಪೂಡಾ ಸದಸ್ಯ ನಿಹಾಲ್ ಶೆಟ್ಟಿ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಹಾಗೂ ಜಯಪ್ರಕಾಶ್ ಬದಿನಾರು ಉಪಸ್ಥಿತರಿದ್ದರು.

Ad Widget
Continue Reading

ಅಪರಾಧ

Bengaluru-ಬೆಂಗಳೂರು: ₹100 ನೀಡದಿದ್ದಕ್ಕೆ ಚಾಕುವಿನಿಂದ ಇರಿದು ಕೊಲೆ; ಆರೋಪಿಗೆ ಜೀವಾವಧಿ ಶಿಕ್ಷೆ

Published

on



Ad Widget

Ad Widget

Ad Widget

Ad Widget

ಕೇವಲ ₹100 ನೀಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ₹25 ಸಾವಿರ ದಂಡ ವಿಧಿಸಿ 65ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

Ad Widget

Ad Widget

Ad Widget

Ad Widget

ಬೆಂಗಳೂರು: ಕೇವಲ ₹100 ನೀಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ₹25 ಸಾವಿರ ದಂಡ ವಿಧಿಸಿ 65ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

Ad Widget

Ad Widget

Ad Widget alt="Ad Widget"/>

Ad Widget

ಏನಿದು ಪ್ರಕರಣ?
2018ರ ಜುಲೈನಲ್ಲಿ ದಿನಕರನ್ ಎಂಬವರು ಬೆಂಗಳೂರಿನ ಶಾಕಾಂಬರಿ ನಗರದ ಅಂಬೇಡ್ಕರ್ ರಸ್ತೆಯಲ್ಲಿ ರಾಜರಾಜೇಶ್ವರಿ ಕೊಳಚೆ ಪ್ರದೇಶದ ಕಡೆಗೆ ತೆರಳುತ್ತಿದ್ದರು. ಈ ವೇಳೆ ವೀರಮಣಿಕಂಠ ಅಲಿಯಾಸ್ ವಿಜಿ ಎಂಬಾತ ಅವರನ್ನು ಅಡ್ಡಗಟ್ಟಿ ₹100 ನೀಡುವಂತೆ ಒತ್ತಾಯಿಸಿದ್ದ.

Ad Widget

Ad Widget <> Ad Widget

ತಮ್ಮ ಬಳಿ ಹಣವಿಲ್ಲ ಎಂದು ದಿನಕರನ್ ತಿಳಿಸಿದಾಗ, ಆರೋಪಿ ವೀರಮಣಿಕಂಠ ಚಾಕುವಿನಿಂದ ಅವರ ಮೇಲೆ ಹಲ್ಲೆ ನಡೆಸಿದ್ದ. ಗಂಭೀರವಾಗಿ ಗಾಯಗೊಂಡಿದ್ದ ದಿನಕರನ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದರು. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.



Ad Widget

ಸಾಕ್ಷ್ಯಾಧಾರಗಳ ಆಧಾರದಲ್ಲಿ ತೀರ್ಪು
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಪ್ರಾಸಿಕ್ಯೂಷನ್ ಮಂಡಿಸಿದ ಸಾಕ್ಷ್ಯಗಳನ್ನು ಪರಿಗಣಿಸಿ, ಆರೋಪಿ ವೀರಮಣಿಕಂಠನಿಗೆ ಜೀವಾವಧಿ ಶಿಕ್ಷೆ ಹಾಗೂ ₹25 ಸಾವಿರ ದಂಡ ವಿಧಿಸಿದೆ.

Ad Widget

Ad Widget

ಇದೇ ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸಿದ ಆರೋಪ ಎದುರಿಸುತ್ತಿದ್ದ ಎರಡನೇ ಆರೋಪಿಯಾದ ವೀರಮಣಿಕಂಠನ ತಾಯಿಯನ್ನು ಸಾಕಷ್ಟು ಸಾಕ್ಷ್ಯಾಧಾರಗಳ ಕೊರತೆಯಿಂದ ನ್ಯಾಯಾಲಯ ಖುಲಾಸೆಗೊಳಿಸಿದೆ.

Ad Widget
Continue Reading

ರಾಜಕೀಯ

P. Rajeev-ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ ಕೋರಿ ಪಿ. ರಾಜೀವ್ ಮನವಿ

Published

on



Ad Widget

Ad Widget

Ad Widget

Ad Widget

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪಿ. ರಾಜೀವ್ ಅವರು ತಮ್ಮನ್ನು ಪಕ್ಷದ ಜವಾಬ್ದಾರಿಯಿಂದ ಬಿಡುಗಡೆಗೊಳಿಸುವಂತೆ ರಾಜ್ಯಾಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ. ಈ ಮೂಲಕ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ತಂಡದ ಮತ್ತೊಬ್ಬ ಪ್ರಮುಖ ಪದಾಧಿಕಾರಿ ಜವಾಬ್ದಾರಿಯಿಂದ ಹಿಂದೆ ಸರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

Ad Widget

Ad Widget

Ad Widget

Ad Widget

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪಿ. ರಾಜೀವ್ ಅವರು ತಮ್ಮನ್ನು ಪಕ್ಷದ ಜವಾಬ್ದಾರಿಯಿಂದ ಬಿಡುಗಡೆಗೊಳಿಸುವಂತೆ ರಾಜ್ಯಾಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ. ಈ ಮೂಲಕ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ತಂಡದ ಮತ್ತೊಬ್ಬ ಪ್ರಮುಖ ಪದಾಧಿಕಾರಿ ಜವಾಬ್ದಾರಿಯಿಂದ ಹಿಂದೆ ಸರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಕಳೆದ ಕೆಲವು ದಿನಗಳ ಹಿಂದೆಯೇ ಈ ಬೆಳವಣಿಗೆ ನಡೆದಿದ್ದು, ಪ್ರಧಾನ ಕಾರ್ಯದರ್ಶಿ ಹುದ್ದೆಯ ಜವಾಬ್ದಾರಿ ವಹಿಸಿಕೊಂಡು ನವೆಂಬರ್ 20ಕ್ಕೆ ಮೂರು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿದುಬಂದಿದೆ. ಅಲ್ಲದೆ, ಕುಡಚಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕಿರುವುದರಿಂದ ತಮ್ಮನ್ನು ಹುದ್ದೆಯ ಜವಾಬ್ದಾರಿಯಿಂದ ಬಿಡುಗಡೆಗೊಳಿಸುವಂತೆ ರಾಜ್ಯಾಧ್ಯಕ್ಷರಿಗೆ ಮನವಿ ಮಾಡಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

Ad Widget

Ad Widget <> Ad Widget

ಈ ಬೆಳವಣಿಗೆಯೊಂದಿಗೆ ವಿಜಯೇಂದ್ರ ಅವರ ತಂಡದ ಎರಡನೇ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿಯಿಂದ ಹಿಂದೆ ಸರಿಯಲು ಮುಂದಾದಂತಾಗಿದೆ. ಇದಕ್ಕೂ ಮೊದಲು ಮಾಜಿ ಸಚಿವ ವಿ. ಸುನಿಲ್ ಕುಮಾರ್ ಅವರು ತಮ್ಮ ಹೊಣೆಗಾರಿಕೆಯಿಂದ ಮುಕ್ತಗೊಳಿಸುವಂತೆ ಪಕ್ಷದ ವರಿಷ್ಠರಿಗೆ ಪತ್ರ ಬರೆದು, ಸಂಘಟನಾತ್ಮಕ ಚಟುವಟಿಕೆಗಳಿಂದ ತಟಸ್ಥರಾಗಿದ್ದರು.



Ad Widget

ಇದೀಗ ಪಿ. ರಾಜೀವ್ ಅವರೂ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ ಕೋರಿ ಮನವಿ ಸಲ್ಲಿಸಿದ್ದಾರೆ. ಆದರೆ, ಹೊಸ ಪ್ರಧಾನ ಕಾರ್ಯದರ್ಶಿಯನ್ನು ನೇಮಕ ಮಾಡುವವರೆಗೂ ತಮಗೆ ವಹಿಸಿರುವ ಜವಾಬ್ದಾರಿಯನ್ನು ಮುಂದುವರಿಸಿಕೊಂಡು ಹೋಗುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading