Connect with us

ಬಿಗ್ ನ್ಯೂಸ್

Balnad-ಬಯಸಿದನ್ನು ಭಕ್ತರಿಂದ ಪಡೆಯುವ ಮಲ್ಲಿಗೆ ಪ್ರಿಯೆ ಬಲ್ನಾಡಿನ ಉಳ್ಳಾಲ್ತಿ ಅಮ್ಮನಿಗೆ ಎರಡು ಚಿನ್ನದ ಮೊಗ್ಗಿನ ಮಾಲೆ, ಬೆಳ್ಳಿ ಗಗ್ಗರ, ಕನ್ನಡಿ, ಚಿನ್ನ ಬೆಳ್ಳಿಯ ಸೊಂಟ ಪಟ್ಟಿ, ಚೆಂಬು, ದೀಪ, ತಾಮ್ರದ ಕೊಪ್ಪರಿಗೆ ಸಮರ್ಪಣೆ : ಭಕ್ತರಿಂದಲೇ 50 ಲಕ್ಷ ರೂ ವೆಚ್ಚದ ಚಿನ್ನ ಬೆಳ್ಳಿಯ ವಸ್ತುಗಳ ಸಮರ್ಪಣೆ – ಇಂದು ನೇಮೋತ್ಸವದಲ್ಲಿ ಮಾಲೆ ಧರಿಸಿ ಭಕ್ತರ ಹರಸಲಿದ್ದಾರೆ ಪುತ್ತೂರ ಒಡತಿ

Published

on



Ad Widget

Ad Widget

Ad Widget

Ad Widget

ಬಯಸಿದ್ದನ್ನು ಭಕ್ತರಿಂದ ಪಡೆಯುವ ಮಲ್ಲಿಗೆ ಪ್ರಿಯೆ ಪುತ್ತೂರು ಸೀಮೆಯ ಕಾರಣಿಕ ದೈವ ಬಲ್ನಾಡು ಉಳ್ಳಾಲ್ತಿ ಅಮ್ಮನಿಗೆ ಭಕ್ತರು ಚಿನ್ನದ ಮೊಗ್ಗಿನ ಮಾಲೆ ಸೇರಿದಂತೆ ಅಂದಾಜು 50 ಲಕ್ಷ ರೂಪಾಯಿ ದೇಣಿಗೆಯಲ್ಲಿ ಹಲವು ವಸ್ತುಗಳನ್ನು ಸಮರ್ಪಿಸಲಾಗಿದೆ.

Ad Widget

Ad Widget

Ad Widget

Ad Widget

ಪುತ್ತೂರು : ಬಯಸಿದ್ದನ್ನು ಭಕ್ತರಿಂದ ಪಡೆಯುವ ಮಲ್ಲಿಗೆ ಪ್ರಿಯೆ ಪುತ್ತೂರು ಸೀಮೆಯ ಕಾರಣಿಕ ದೈವ ಬಲ್ನಾಡು ಉಳ್ಳಾಲ್ತಿ ಅಮ್ಮನಿಗೆ ಭಕ್ತರು 380 ಗ್ರಾಂ ತೂಕದ ಚಿನ್ನದ ಮೊಗ್ಗಿನ ಮಾಲೆ ಸೇರಿದಂತೆ ಅಂದಾಜು 50 ಲಕ್ಷ ರೂಪಾಯಿ ದೇಣಿಗೆಯಲ್ಲಿ ಹಲವು ವಸ್ತುಗಳನ್ನು ಸಮರ್ಪಿಸಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ವರ್ಷಂಪ್ರತಿಯಂತೆ ಉಳ್ಳಾಲ್ತಿ ಅಮ್ಮನ ನೇಮ ನಡೆಯುತ್ತಿತ್ತು. ಆಡಳಿತ ಸಮಿತಿಯವರು, ಅರ್ಚಕರು, ಪಾರಂಪರಿಕ ನೌಕರರು, ಊರ-ಪರವೂರ ಭಕ್ತರು ಕಿಕ್ಕಿರಿದು ಸೇರಿದ್ದರು. ಭಕ್ತರು ಮಲ್ಲಿಗೆ ಚೆಂಡು, ಕುಂಕುಮ, ಎಳನೀರು, ಹರಕೆ ಸೀರೆಗಳನ್ನು ಸರದಿಯಲ್ಲಿ ನಿಂತು ಅರ್ಪಿಸುತ್ತಿದ್ದರು. ಈ ಮಧ್ಯೆ ಭಕ್ತರೊಬ್ಬರು ಬೆಳ್ಳಿ ಲೇಪಿತ ಅತ್ಯಾಕರ್ಷಕ ಹರಿವಾಣದಲ್ಲಿ ಮಲ್ಲಿಗೆ ಹೂವಿನ ಅತ್ತೆಯೊಂದಿಗೆ ದೈವದೆದುರು ನಿಂತರು.

Ad Widget

Ad Widget <> Ad Widget

ಅವರ ಕಾಣಿಕೆ ಸ್ವೀಕರಿಸಿದ ಉಳ್ಳಾಲ್ತಿಯಮ್ಮ ತಮ್ಮ ನುಡಿಯಲ್ಲಿ ‘ಕೊಟ್ಟದ್ದು ಸ್ವೀಕರಿಸಿದ್ದೇನೆ. ಹರಿವಾಣವನ್ನು ಭಂಡಾರಕ್ಕೆ ಅರ್ಪಿಸಬೇಕು’ ಎಂದು ಅನುವು ನೀಡಿದಾಗ ಹರಿವಾಣದಲ್ಲಿ ಹೂವು ತಂದ ಭಕ್ತರಿಗೂ ಗ್ರಹಿಸದೇ ನಡೆದ ಘಟನೆಯಿಂದ ಧನ್ಯತಾಭಾವ ಮೂಡಿಬಂತು. ಹರಿವಾಣವನ್ನು ಭಕ್ತಿಯಿಂದಲೇ ಭಂಡಾರಕ್ಕೆ ಸಮರ್ಪಿಸಿ ಆನಂದದಿಂದಲೇ ಸಂತುಷ್ಟರಾಗಿ ದೈವಸ್ಥಾನದಿಂದ ತೆರಳಿದರು.



Ad Widget

ದೈವದ ಭಂಡಾರಕ್ಕೆ ಸಮರ್ಪಣೆಯಾದ ಬೆಳ್ಳಿಲೇಪಿತ ಹರಿವಾಣ:
ಆ ಭಕ್ತರ ಕುರಿತು ವಿಚಾರಿಸಿದಾಗ ಅವರು ಕಾರಿಂಜ ಕ್ಷೇತ್ರದ ಅರ್ಚಕರು, ವೈದಿಕರು, ಜ್ಯೋತಿಷ್ಯರೂ ಆಗಿರುವ ಬಾಲಕೃಷ್ಣ ಆಚಾರ್ಯರು ಎಂದು ತಿಳಿದು ಬಂತು. ಬಲ್ನಾಡಿನಲ್ಲಿ ಪೂರ್ವ ಕಾಲದಿಂದಲೂ ಅರ್ಚಕರಾಗಿರುವ ನೆಲ್ಲಿತ್ತಾಯ ಮನೆತನದವರು ಈ ಹರಿವಾಣವನ್ನು ಶ್ರೀ ದಂಡನಾಯಕ ಗುಡಿಯಲ್ಲಿ ಇರಿಸಿದರು.

Ad Widget

Ad Widget

ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಯ ಕೊಡಿ ಇಳಿದ ಮರುದಿನ ಬಲ್ನಾಡಿನಲ್ಲಿ ಗೊನೆ ಮುಹೂರ್ತ ನಡೆದು ಏ.28ರಂದು ಪೂರ್ವಾಹ್ನ ದಂಡನಾಯಕ, ಉಳ್ಳಾಲ್ತಿ ವಗೈರೆ ದೈವಗಳ ವಾರ್ಷಿಕ ನೇಮ ನಡೆಯುತ್ತದೆ.

ಪ್ರಧಾನ’ ದೈವವೆಂದು ನಂಬಿಕೆಯಲ್ಲಿ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಕಾಣಿಕೆ, ಕುಂಕುಮ, ಮಲ್ಲಿಗೆ ಚೆಂಡುಗಳು, ಎಳನೀರು, ಸೀರೆ ಅರ್ಪಿಸಿ ದೈವಗಳ ಅಭಯ ಪಡೆಯುತ್ತಾರೆ.

ನೇಮಕ್ಕೆ ಮಲ್ಲಿಗೆ ಮುಗುಳು:
ಶತಮಾನಗಳ ಹಿಂದೆ ಕೊಡಿಪಾಡಿ ಶ್ಯಾರ ಮನೆತನದ ಒಡತಿ ಶ್ರೀಮತಿ ದುಗ್ಗಮ್ಮ ಅವರು ಅಂದಿನ ಕಾಲದ ಆಭರಣಗಳಾದ ಕೊಪ್ಪು ಬುಗುಡಿ, ಅವಲಕ್ಕಿಸರ, ತಲೆಗೆ ಸ್ವರ್ಣದ ಮಲ್ಲಿಗೆ ಮುಗುಳು ಧರಿಸಿ ಪುತ್ತೂರು ಜಾತ್ರೆ ನೋಡಲು ಸನಿಹದ ಹಾದಿ ಬಲ್ನಾಡನ್ನು ಬಳಸಿ ಬರುತ್ತಾರೆ, ಜಾತ್ರೆ ಮುಗಿದು ಹಿಂತಿರುಗಿ ಮತ್ತೆ ಅದೇ ದಾರಿಯಲ್ಲಿ ಬಂದು ಉಳ್ಳಾಲ್ತಿ ಸ್ಥಾನದ ಬಳಿ ಕುಸಿದು ಬಿದ್ದಾಗ ಸ್ಥಳೀಯರು ಕಂಡು ಉಪಚರಿಸಿ ಮನೆಗೆ ತಲುಪಿಸುತ್ತಾರೆ . ಮುಂದೆ ನಡೆದ ನೇಮದಲ್ಲಿ ಶ್ಯಾರ ಮನೆಯ ಯಜಮಾನ ಈ ಘಟನೆಯ ಬಗ್ಗೆ ದೈವದಲ್ಲಿ ಕೇಳಿದಾಗ ಹೆಂಗಸು ತಲೆಯಲ್ಲಿ ಧರಿಸಿದ ಬಂಗಾರದ ಮುಗುಳು ಮಲ್ಲಿಗೆ ನನಗೆ ಇಷ್ಟವಾಗಿದೆ. ಪ್ರತಿವರ್ಷ ನೇಮದ ದಿನ ಧರಿಸಲು ನನಗೆ ಒಪ್ಪಿಸಬೇಕು ಎಂದು ನುಡಿಯಲ್ಲಿ ಹೇಳಿದಂತೆ ಅಂದಿನಿಂದ ಇಂದಿನ ತನಕ ಅದೇ ಆಭರಣದಿಂದ ಸಿಂಗರಿಸಲಾಗುತ್ತದೆ.ಹಿರಿಯರಾದ ಶ್ಯಾರ ದಿನೇಶ ರಾಯರು ಈ ಕಾರ್ಯ ಮಾಡುತ್ತಿದ್ದಾರೆ. ನೇಮದ ನಂತರ ಮಹಾಪ್ರಸಾದದೊಂದಿಗೆ ಆಭರಣ ಹಿಂದಿರುಗಿಸುವ ಪದ್ಧತಿ ಇಂದಿಗೂ ಪಾಲನೆಯಾಗುತ್ತಿದೆ.

ಉಳ್ಳಾಲ್ತಿ ಅಮ್ಮ ಪುತ್ತೂರಿಗೆ ಬಂದ ಮಾರಣಾಂತಿಕ ಕಾಯಿಲೆಯನ್ನು ಮಾಯ ಮಾಡಿದ ಕೀರ್ತಿಗೆ ಪಾತ್ರಳಾಗಿದ್ದಾಳೆ.ಇಲ್ಲಿ ಮಹಿಳೆಯರು ಉಳ್ಳಾಲ್ಲಿ ನೇಮ ವೀಕ್ಷಿಸುವಂತಿಲ್ಲ. ಪರಿಸರದಲ್ಲಿ ರಂಗುಹಚ್ಚುವಂತಿಲ್ಲ.ಗೆಜ್ಜೆ ಕಟ್ಟುವಂತಿಲ್ಲ ಅಂಗಡಿ ವ್ಯಾಪಾರ ಮಾಡುವಂತಿಲ್ಲ ಇಂತಹ ಅನೇಕ ಕಟ್ಟುಪಾಡುಗಳಿವೆ.

ಮದುವಣಗಿತ್ತಿಯ ಶೃಂಗಾರ:
ಕರದಲ್ಲಿ ಕಲಶ ಕನ್ನಡಿ ಹಿಡಿದು ಮಲ್ಲಿಗೆಯ ಜಿಲ್ಲೆ ಮುಡಿದು ಮದುಮಗಳ ಶೃಂಗಾರದಲ್ಲಿ ನಿಂತು ಹಲವು ಸುತ್ತು ಬಲಿಗಳೊಂದಿಗೆ ಅಭಯಪ್ರದಾನ ನಡೆದು ನೇಮ ಸಂಪನ್ನಗೊಳ್ಳುತ್ತದೆ. ಹಿಂದಿನ ರಾತ್ರಿಯೂ ನೇಮದ ದಿನ ಮಧ್ಯಾಹ್ನವೂ ನೆರೆದ ಭಕ್ತಾದಿಗಳಿಗೆ ಅನ್ನದಾನವೂ ನಡೆಯುತ್ತದೆ.

ಮೂಗುತ್ತಿ ತೊಡುವಾಗ ಆವಾಹನೆ:
ತುಳುನಾಡಿನಲ್ಲಿ ನಡೆಯುವ ದೈವಾರಾಧನೆಯಲ್ಲಿ ಇತರ ದೈವಗಳಿಗೆ ಕಾಲಿಗೆ ಗಗ್ಗರ ಧರಿಸುವಾಗ, ಮುಖ ಕವಚ ಧರಿಸುವಾಗ ದೈವದ ಆವಾಹನೆಯಾದರೆ, ಅದಕ್ಕಿಂತಲೂ ಭಿನ್ನವಾಗಿ ಇಲ್ಲಿ ಉಳ್ಳಾಲ್ತಿ ದೈವದ ದೈವಾರಾಧಕನು ಅಣಿ ಕಟ್ಟಿ, ಕಾಲಿಗೆ ಗಗ್ಗರ ಧರಿಸಿ ಮೂಗಿಗೆ ವಜ್ರದ ಮೂಗುತ್ತಿ ಧರಿಸುವಾಗ ದೈವದ ಆವೇಶವಾಗುವ ಅಪೂರ್ವ ಕ್ಷಣ. ಇದು ಬಲ್ನಾಡಿನ ಕಾರ್ಣಿಕ ಕ್ಷೇತ್ರದ ವಿಶೇಷ.

ಈ ಬಾರಿ ಭಕ್ತರಿಂದ ಏನೆಲ್ಲ ಸಮರ್ಪಣೆ:

400 ಗ್ರಾಂ ತೂಕದ ಚಿನ್ನದ ಮೊಗ್ಗಿನ ಮಾಲೆ, ಚಿನ್ನ ಬೆಳ್ಳಿಯ ಸೊಂಟಪಟ್ಟಿ, ಬೆಳ್ಳಿಯ ಕನ್ನಡಿ , ಕಂಚು ತಾಮ್ರ ಕೊಪ್ಪರಿಗೆ , ಬೆಳ್ಳಿಯ ಚೆಂಬು, ಬೆಳ್ಳಿಯ ಜೋಡು ದೀಪ, ಬೆಳ್ಳಿಯ ಅರಿವಾಣ ನಿನ್ನೆ ದಿನ ಸಮರ್ಪಣೆಯಾಗಿದೆ. ಬಿಂಬಕ್ಕೆ ದಿನನಿತ್ಯ ಉಪಯೋಗಕ್ಕೆ ಸಣ್ಣ ಚಿನ್ನದ ಮೊಗ್ಗಿನ ಮಾಲೆಯೂ ಮಾಡಿಸಲಾಗಿದೆ. ದೊಡ್ಡ ಮಾಲೆಯನ್ನು ನೇಮೋತ್ಸವದ ದಿನ ಮಾತ್ರ ಉಪಯೋಗಿಸಲಾಗುತ್ತದೆ. ಇದೀಷ್ಟು ಯಾವೂದೇ ಸಮಿತಿ ಇಲ್ಲದೆ ಭಕ್ತರೇ ಪ್ರಮುಖರ ಮುಂದಾಳತ್ವದಲ್ಲಿ ಹಣ ಸಂಗ್ರಹಿಸಿ ಸಮರ್ಪಿಸಲಾಗಿದೆ. ಇದಿಷ್ಟು ವಸ್ತುಗಳಿಗೆ ಅಂದಾಜು 50 ಲಕ್ಷ ರೂಪಾಯಿ ವೆಚ್ಚವಾಗಿದೆ. ಇಂದು ನಡೆಯುವ ನೇಮೋತ್ಸವದಲ್ಲಿ ಉಳ್ಳಾಲ್ತಿ ಅಮ್ಮ ಚಿನ್ನದ ಮೊಗ್ಗಿನ ಮಾಲೆ ಧರಿಸಲಿದ್ದಾರೆ.

Ad Widget
Click to comment

Leave a Reply

ಬಿಗ್ ನ್ಯೂಸ್

Kaavu-BIG BREAKING: ಕಾವು ಬಳಿ ಹೆದ್ದಾರಿಗೆ ಉರುಳಿದ ಮರಗಳು, ಹೈಟೆನ್ಷನ್ ವಿದ್ಯುತ್ ಕಂಬ : ಮಾಣಿ – ಮೈಸೂರು ಹೈವೆಯಲ್ಲಿ ವಾಹನ ಸಂಚಾರ ಸ್ಥಗಿತ

Published

on



Ad Widget

Ad Widget

Ad Widget

Ad Widget

ಭಾರೀ ಗಾಳಿ ಮಳೆಗೆ ಮಾಣಿ–ಮೈಸೂರು ಹೆದ್ದಾರಿಯ ಕಾವು ಬಳಿ ಮರ ಹಾಗೂ ಹೈಟೆನ್ಷನ್ ವಿದ್ಯುತ್ ಕಂಬ ರಸ್ತೆಗೆ ಉರುಳಿಬಿದ್ದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಸುಳ್ಯ, ಮಡಿಕೇರಿ ಹಾಗೂ ಮೈಸೂರು ಕಡೆಗೆ ತೆರಳುವ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.

Ad Widget

Ad Widget

Ad Widget

Ad Widget

ಪುತ್ತೂರು: ಭಾರೀ ಗಾಳಿ ಮಳೆಗೆ ಮಾಣಿ–ಮೈಸೂರು ಹೆದ್ದಾರಿಯ ಕಾವು ಬಳಿ ಮರ ಹಾಗೂ ಹೈಟೆನ್ಷನ್ ವಿದ್ಯುತ್ ಕಂಬ ರಸ್ತೆಗೆ ಉರುಳಿಬಿದ್ದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಸುಳ್ಯ, ಮಡಿಕೇರಿ ಹಾಗೂ ಮೈಸೂರು ಕಡೆಗೆ ತೆರಳುವ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಶುಕ್ರವಾರ (ಅ. 9) ಮಧ್ಯಾಹ್ನ ಸುಮಾರು 4 ಗಂಟೆಗೆ ಕಾವು ಪರಿಸರದಲ್ಲಿ ಭಾರೀ ಗಾಳಿ ಮಳೆಯಾಗಿದೆ. ಈ ವೇಳೆ ಮರ ಹಾಗೂ ವಿದ್ಯುತ್ ಕಂಬ ಹೆದ್ದಾರಿಗೆ ಅಡ್ಡಲಾಗಿ ಬಿದ್ದಿದ್ದು, ಮಡ್ಯಂಗಳ , ಮದ್ಲ ಎಂಬಲ್ಲಿ ಹಲವು ಮರಗಳು ಧರೆಗುರುಳಿವೆ. ಪೆರಿಗೇರಿ ರಸ್ತೆಯಲ್ಲೂ ಒಂದು ಮರ ಧರೆಗುರುಳಿದೆ ಜೊತೆಗೆ ವಿದ್ಯುತ್ ತಂತಿಗಳೂ ರಸ್ತೆಗೆ ಬಿದ್ದಿವೆ. ಇದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.

Ad Widget

Ad Widget <> Ad Widget

ಸ್ಥಳೀಯರ ನೆರವಿನೊಂದಿಗೆ ಮೆಸ್ಕಾಂ, ತಾಲೂಕು ಆಡಳಿತ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಮರ, ವಿದ್ಯುತ್ ಕಂಬ ಮತ್ತು ತಂತಿಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳದಲ್ಲಿ ಸಂಚಾರ ನಿಯಂತ್ರಿಸುತ್ತಿದ್ದಾರೆ.



Ad Widget

ತೆರವು ಕಾರ್ಯಾಚರಣೆಗೆ ಸುಮಾರು 3ರಿಂದ 4 ಗಂಟೆಗಳ ಕಾಲ ಬೇಕಾಗುವ ಸಾಧ್ಯತೆಯಿದ್ದು, ಪುತ್ತೂರಿನಿಂದ ಮೈಸೂರು ಕಡೆಗೆ ತೆರಳುವ ವಾಹನ ಸವಾರರು ಪರ್ಯಾಯ ಮಾರ್ಗ ಬಳಸುವಂತೆ ಪುತ್ತೂರು ಗ್ರಾಮಾಂತರ ಠಾಣೆಯ ಎಸ್ಐ ಸುಷ್ಮಾ ಭಂಡಾರಿ ತಿಳಿಸಿದ್ದಾರೆ.

Ad Widget

Ad Widget

ಪರ್ಯಾಯ ಮಾರ್ಗ: ಪುತ್ತೂರಿನಿಂದ ಬೆಳ್ಳಾರೆ ಮಾರ್ಗವಾಗಿ ಸುಳ್ಯ ತಲುಪಿ ಅಲ್ಲಿಂದ ಮೈಸೂರು ಕಡೆಗೆ ಪ್ರಯಾಣಿಸಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.

Ad Widget
Continue Reading

ಮಂಗಳೂರು

MRPL accident-MRPL ಅವಘಡದಲ್ಲಿ ಮೃತಪಟ್ಟ ಕರ್ಕಡ ಕುಟುಂಬಕ್ಕೆ EPFO ಕ್ಲೈಮ್ ಸಂದಾಯ

Published

on



Ad Widget

Ad Widget

Ad Widget

Ad Widget

MRPL ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (EPFO), ಮಂಗಳೂರು ಪ್ರಾದೇಶಿಕ ಕಚೇರಿಯು, 30.09.2026 ರಂದು ಮಂಗಳೂರು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ನಲ್ಲಿ ಸಂಭವಿಸಿದ ಕೈಗಾರಿಕಾ ಅಪಘಾತದಲ್ಲಿ ಮರಣ ಹೊಂದಿದ ಭವಿಷ್ಯ ನಿಧಿ ಚಂದಾದಾರರಾದ ದಿವಂಗತ ಮನೀಶ್ ಕರ್ಕಡ ಅವರ ಕುಟುಂಬದ ಅವಲಂಬಿತರ ಸಾಮಾಜಿಕ ಭದ್ರತಾ ಸೌಲಭ್ಯಗಳ ಕ್ಷೇಮುಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲಾಗಿದೆ.

Ad Widget

Ad Widget

Ad Widget

Ad Widget

ಮಂಗಳೂರು : MRPL ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (EPFO), ಮಂಗಳೂರು ಪ್ರಾದೇಶಿಕ ಕಚೇರಿಯು, 30.09.2026 ರಂದು ಮಂಗಳೂರು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ನಲ್ಲಿ ಸಂಭವಿಸಿದ ಕೈಗಾರಿಕಾ ಅಪಘಾತದಲ್ಲಿ ಮರಣ ಹೊಂದಿದ ಭವಿಷ್ಯ ನಿಧಿ ಚಂದಾದಾರರಾದ ದಿವಂಗತ ಮನೀಶ್ ಕರ್ಕಡ ಅವರ ಕುಟುಂಬದ ಅವಲಂಬಿತರ ಸಾಮಾಜಿಕ ಭದ್ರತಾ ಸೌಲಭ್ಯಗಳ ಕ್ಷೇಮುಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (EPFO) ವತಿಯಿಂದ ಕುಟುಂಬಕ್ಕೆ ಪಾವತಿಸಬೇಕಾದ ಉದ್ಯೋಗಿಗಳ ಭವಿಷ್ಯ ನಿಧಿ ಹಾಗೂ ಉದ್ಯೋಗಿಗಳ ಠೇವಣಿ ಆಧಾರಿತ ವಿಮಾ ಸೌಲಭ್ಯಗಳ ಕ್ಷೇಮುಗಳನ್ನು ಇತ್ಯರ್ಥಪಡಿಸಲಾಗಿದೆ.

Ad Widget

Ad Widget <> Ad Widget

ಇದರೊಂದಿಗೆ ಉದ್ಯೋಗಿಗಳ ಪಿಂಚಣಿ ಯೋಜನೆ 2026ರ ಅಡಿಯಲ್ಲಿ, ಮಾಸಿಕ ಪಿಂಚಣಿಯನ್ನೂ ಮಂಜೂರು ಮಾಡಿ ಪಾವತಿ ಪ್ರಾರಂಭಿಸಲಾಗಿದೆ. ಈ ಎಲ್ಲಾ ಸೌಲಭ್ಯಗಳನ್ನು 08.10.2026 ರಂದು ಇತ್ಯರ್ಥಪಡಿಸಿ ಜಾರಿಗೊಳಿಸಲಾಗಿದೆ ಹಾಗೂ ಮೊತ್ತವನ್ನು ಪಾವತಿಸಲಾಗಿದೆ.



Ad Widget

ದುಃಖತಪ್ತ ಕುಟುಂಬಕ್ಕೆ ಸಂತಾಪ ಹಾಗೂ ಸಾಂತ್ವನ ಸಲ್ಲಿಸುವ ಉದ್ದೇಶದಿಂದ, ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರಾದ ಸಂದೀಪ್ ಬಿಸ್ವಾಸ್ ಅವರು, ಸಹಾಯಕ ಭವಿಷ್ಯ ನಿಧಿ ಆಯುಕ್ತರಾದ ಅಂಕಿತ್ ಸಿಂಗ್ ಹಾಗೂ ಪ್ರವರ್ತನಾಧಿಕಾರಿಯಾದ ಶ್ರೀಮತಿ ಅನಿತಾ ಆರ್ ಅವರೊಂದಿಗೆ 09.10.2026 ರಂದು ದಿವಂಗತ ಶ್ರೀ ಮನೀಶ್ ಕರ್ಕಡ ಅವರ ನಿವಾಸಕ್ಕೆ ಭೇಟಿ ನೀಡಿ, ಫಲಾನುಭವಿಗೆ ಪಿಂಚಣಿ ಪಾವತಿ ಆದೇಶವನ್ನು (PPO) ಹಸ್ತಾಂತರಿಸಿದರು. ಈ ಭೇಟಿಯು ಸಂಕಷ್ಟದ ಸಂದರ್ಭದಲ್ಲಿ ತನ್ನ ಸದಸ್ಯರ ಕುಟುಂಬಗಳೊಂದಿಗೆ ನಿಲ್ಲುವ EPFO ಸಂಸ್ಥೆಯ ಮಾನವೀಯ ಕಾಳಜಿ ಮತ್ತು ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

Ad Widget

Ad Widget

ಅನಿರೀಕ್ಷಿತ ದುರಂತಗಳ ಸಂದರ್ಭದಲ್ಲಿ ತನ್ನ ಸದಸ್ಯರ ಕುಟುಂಬಗಳಿಗೆ ಸಲ್ಲಬೇಕಾದ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸುವುದು EPFO ಸಂಸ್ಥೆಯ ಬದ್ಧತೆಯಾಗಿದೆ ಎಂಬುದನ್ನು ಈ ತ್ವರಿತ ಇತ್ಯರ್ಥವು ಮತ್ತೊಮ್ಮೆ ದೃಢಪಡಿಸಿದೆ.

EPFO ಸಂಸ್ಥೆಯು ಮೃತ ಸದಸ್ಯರ ಕುಟುಂಬಕ್ಕೆ ತನ್ನ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದು, ಈ ಕಷ್ಟದ ಸಮಯದಲ್ಲಿ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡಲು ಬದ್ಧವಾಗಿದೆ.

Ad Widget
Continue Reading

ಮಂಗಳೂರು

Mangalore-ಮಂಗಳೂರು : 2 ತಿಂಗಳ ಬಳಿಕ ಸಮಾಧಿಯಿಂದ ಹೊರಬರಲಿದೆ ಆಲ್ಬರ್ಟ್ ರೇಗೋ ಶವ..!; ಮಗಳಿಂದಲೇ ತಂದೆಯ ಕೊಲೆ : ಸ್ನೇಹಿತನ ಆರೋಪ – ತನಿಖೆಗೆ ಸಿಗಲಿದೆ ಮಹತ್ವದ ತಿರುವು

Published

on



Ad Widget

Ad Widget

Ad Widget

Ad Widget

ಎರಡು ತಿಂಗಳ ಹಿಂದೆ ಮೃತಪಟ್ಟ ವ್ಯಕ್ತಿಯ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದ್ದು, ಇದೀಗ ಹೂತು ಹಾಕಿದ್ದ ಶವವನ್ನೇ ಹೊರತೆಗೆದು ಪರೀಕ್ಷೆ ನಡೆಸಲು ಪೊಲೀಸರು ಮುಂದಾಗಿದ್ದಾರೆ ಎಂಬ ಮಾಹಿತಿ ಎಲ್ಲೆಡೆ ಹರಡಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮಗಳೇ ತಂದೆಯ ಕೊಲೆಗೆ ಸಂಚು ರೂಪಿಸಿದ್ದಾರೆ ಎಂಬ ಆರೋಪ ಕೇಳಿಬಂದಿರುವ ಈ ಪ್ರಕರಣ ಮಂಗಳೂರಿನಲ್ಲಿ ತೀವ್ರ ಕುತೂಹಲ ಮೂಡಿಸಿದೆ.

Ad Widget

Ad Widget

Ad Widget

Ad Widget

ಮಂಗಳೂರು, ಅ 9: ಎರಡು ತಿಂಗಳ ಹಿಂದೆ ಮೃತಪಟ್ಟ ವ್ಯಕ್ತಿಯ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದ್ದು, ಇದೀಗ ಹೂತು ಹಾಕಿದ್ದ ಶವವನ್ನೇ ಹೊರತೆಗೆದು ಪರೀಕ್ಷೆ ನಡೆಸಲು ಪೊಲೀಸರು ಮುಂದಾಗಿದ್ದಾರೆ ಎಂಬ ಮಾಹಿತಿ ಎಲ್ಲೆಡೆ ಹರಡಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮಗಳೇ ತಂದೆಯ ಕೊಲೆಗೆ ಸಂಚು ರೂಪಿಸಿದ್ದಾರೆ ಎಂಬ ಆರೋಪ ಕೇಳಿಬಂದಿರುವ ಈ ಪ್ರಕರಣ ಮಂಗಳೂರಿನಲ್ಲಿ ತೀವ್ರ ಕುತೂಹಲ ಮೂಡಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ಮಂಗಳೂರಿನ ಕೊಟ್ಟಾರ ಫಸ್ಟ್ ಕ್ರಾಸ್ ನಿವಾಸಿ ಆಲ್ಬರ್ಟ್ ರೇಗೋ (Albert Rego) ಅವರು ಕಳೆದ ಜುಲೈ 19ರಂದು ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಅವರ ಸಾವಿನ ಬಳಿಕ ಮರಣೋತ್ತರ ಪರೀಕ್ಷೆ ನಡೆಸದೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂಬ ಆರೋಪ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಇದೀಗ ಕುಂಟಿಕಾನ ಸಮೀಪದ ದೇರೆಬೈಲ್ ಚರ್ಚ್ ಆವರಣದ ದಫನ ಭೂಮಿಯಲ್ಲಿ ಹೂತು ಹಾಕಿರುವ ಅವರ ಶವವನ್ನು ಹೊರತೆಗೆದು ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ತಜ್ಞರ ನೆರವಿನಿಂದ ಪರಿಶೀಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

Ad Widget

Ad Widget <> Ad Widget

ಸ್ನೇಹಿತನ ದೂರಿನಿಂದ ಬಯಲಿಗೆ ಬಂದ ಅನುಮಾನ



Ad Widget

ಆಲ್ಬರ್ಟ್ ರೇಗೋ ಅವರ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ ಅವರ ಸ್ನೇಹಿತ ಹೆರಾಲ್ಡ್ ಪಿರೇರಾ ಅವರು ಉರ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸಾವಿನ ಬಗ್ಗೆ ಸ್ಥಳೀಯರಿಗೆ ಹಾಗೂ ಕುಟುಂಬದ ಇತರ ಸದಸ್ಯರಿಗೆ ಮಾಹಿತಿ ನೀಡದೆ, ಆಪ್ತರ ಮೂಲಕ ಮಗಳು ಮಾಯಾ ರೇಗೋ ಅಂತ್ಯಕ್ರಿಯೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾಯಾ ರೇಗೋ ಸೇರಿದಂತೆ ಇತರರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

Ad Widget

Ad Widget

ಆಸ್ತಿಗಾಗಿ ಕಿರುಕುಳ ನೀಡಿದ್ದ ಆರೋಪ

ಆಲ್ಬರ್ಟ್ ರೇಗೋ ಅವರು ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಸಾಕಷ್ಟು ಆಸ್ತಿ ಸಂಪಾದಿಸಿದ್ದರು ಎನ್ನಲಾಗಿದೆ. ಅವರ ಇಬ್ಬರು ಮಕ್ಕಳು ಬೇರೆ ಬೇರೆ ಕಡೆ ನೆಲೆಸಿದ್ದರೆ, ಮಾಯಾ ರೇಗೋ ಮಾತ್ರ ಅವರೊಂದಿಗೆ ವಾಸವಾಗಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಗಳು ನಿರಂತರವಾಗಿ ಕಿರುಕುಳ ನೀಡುತ್ತಿದ್ದು, ಬಲವಂತವಾಗಿ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಳ್ಳಲು ಯತ್ನಿಸಿದ್ದಾಳೆ ಎಂಬುದು ದೂರುದಾರರ ಆರೋಪ. ತನಗೆ ಹಲ್ಲೆ ನಡೆಸಿ ಕಿರುಕುಳ ನೀಡುತ್ತಿರುವ ಬಗ್ಗೆ ಆಲ್ಬರ್ಟ್ ಅವರು ಸ್ನೇಹಿತರ ಬಳಿ ಹೇಳಿಕೊಂಡಿದ್ದರು. ತನಗೇನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಮಗಳ ಕಿರುಕುಳವೇ ಕಾರಣವಾಗಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದರು ಎಂದು ಹೆರಾಲ್ಡ್ ಪಿರೇರಾ ದೂರಿನಲ್ಲಿ ತಿಳಿಸಿದ್ದಾರೆ.

ಮಾದಕ ವ್ಯಸನದ ಆರೋಪವನ್ನೂ ಮಾಯಾ ರೇಗೋ ವಿರುದ್ಧ ಮಾಡಲಾಗಿದ್ದು, ಹಣ ಮತ್ತು ಆಸ್ತಿಯ ವಿಚಾರವಾಗಿ ಇತರರ ನೆರವಿನಿಂದ ತಂದೆಯನ್ನು ಕೊಲೆ ಮಾಡಲಾಗಿದೆ ಎಂಬ ಗಂಭೀರ ಆರೋಪವನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕೃತ್ಯಕ್ಕೆ ಬೋಂದೆಲ್‌ನ ವೈದ್ಯರೊಬ್ಬರು ಹಾಗೂ ಪೊಲೀಸ್ ಪೇದೆಯೊಬ್ಬರು ಸಹಕರಿಸಿದ್ದಾರೆ ಎಂದೂ ಆರೋಪಿಸಲಾಗಿದೆ. ಆದರೆ, ಈ ಆರೋಪಗಳು ತನಿಖೆಯಿಂದ ದೃಢಪಡಬೇಕಿದೆ.

ಅಸ್ಥಿಪಂಜರದ ಪರೀಕ್ಷೆಯಿಂದ ಸಿಗಲಿದೆಯೇ ಸುಳಿವು?

ಪ್ರಕರಣದ ತನಿಖೆಯಲ್ಲಿ ವಿವಿಧ ಸಾಕ್ಷ್ಯಗಳನ್ನು ಸಂಗ್ರಹಿಸಿರುವ ಪೊಲೀಸರು, ಇದೀಗ ಸಾವಿನ ನೈಜ ಕಾರಣ ಪತ್ತೆಹಚ್ಚಲು ಹೂತು ಹಾಕಿರುವ ಶವವನ್ನು ಹೊರತೆಗೆಯುವ ನಿರ್ಧಾರ ಕೈಗೊಂಡಿದ್ದಾರೆ. ದೇರೆಬೈಲ್ ಚರ್ಚ್ ಆವರಣದ ದಫನ ಭೂಮಿಯಲ್ಲಿ ಪೊಲೀಸರು ಹಾಗೂ ಎಫ್‌ಎಸ್‌ಎಲ್ ತಜ್ಞರು ಸ್ಥಳಕ್ಕೆ ಆಗಮಿಸಿ ಪ್ರಕ್ರಿಯೆಗೆ ಮುಂದಾಗಿದ್ದಾರೆ.

ಮಾಯಾ ರೇಗೋ ಹಾಗೂ ದೂರುದಾರರ ಸಮ್ಮುಖದಲ್ಲಿ ಅಸ್ಥಿಪಂಜರವನ್ನು ಹೊರತೆಗೆದು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸುವ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.

ಎರಡು ತಿಂಗಳ ಹಿಂದೆ ನಡೆದ ಸಾವು ಕೊಲೆ ಕೃತ್ಯವೇ? ಸಾವಿನ ಹಿಂದಿದೆಯಾ ಆಸ್ತಿ ವಿವಾದ ? ಎಂಬ ಪ್ರಶ್ನೆಗಳಿಗೆ ವಿಧಿವಿಜ್ಞಾನ ಪರೀಕ್ಷೆ ಮತ್ತು ಪೊಲೀಸ್ ತನಿಖೆಯಿಂದ ಉತ್ತರ ಸಿಗಬೇಕಿದೆ. ಸದ್ಯ ಪ್ರಕರಣದ ಆರೋಪಗಳು ತನಿಖಾ ಹಂತದಲ್ಲಿದ್ದು, ಪರೀಕ್ಷೆಯ ವರದಿ ಹಾಗೂ ಮುಂದಿನ ತನಿಖೆ ನಿರ್ಣಾಯಕವಾಗಲಿವೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading