ಕಾರ್ಯಕ್ರಮಗಳು
Amala Ramachandra-ಕೋಮುವಾದಿಗಳ ಸುಳ್ಳು ಮತ್ತು ಅಪಪ್ರಚಾರ, ದ್ವೇಷ ಭಾಷಣಗಳನ್ನು ವೇದಿಕೆ ಸಮರ್ಥವಾಗಿ ಎದುರಿಸಲಿದೆ; ಪುತ್ತೂರು ಮಾನವ ಬಂಧುತ್ವ ವೇದಿಕೆ ವಿಶೇಷ ಸಭೆಯಲ್ಲಿ ನೂತನ ಪ್ರಧಾನ ಸಂಚಾಲಕ ಅಮಳ ರಾಮಚಂದ್ರ
ಮಾನವ ಬಂಧುತ್ವ ವೇದಿಕೆ ಪುತ್ತೂರು ಘಟಕದ ನೂತನ ಪ್ರಧಾನ ಸಂಚಾಲಕರಾಗಿ ಅಮಳ ರಾಮಚಂದ್ರ ಎರಡನೇ ಬಾರಿಗೆ ಆಯ್ಕೆಯಾದರು. ಪುತ್ತೂರಿನ ಎ.ಪಿ.ಎಂ.ಸಿ. ರಸ್ತೆಯ ಕ್ರಿಸ್ಟೋಫರ್ ಸಭಾಂಗಣದಲ್ಲಿ ನಡೆದ ವೇದಿಕೆಯ ವಿಶೇಷ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಮಾನವ ಬಂಧುತ್ವ ವೇದಿಕೆ ಪುತ್ತೂರು ಘಟಕದ ನೂತನ ಪ್ರಧಾನ ಸಂಚಾಲಕರಾಗಿ ಅಮಳ ರಾಮಚಂದ್ರ ಎರಡನೇ ಬಾರಿಗೆ ಆಯ್ಕೆಯಾದರು. ಪುತ್ತೂರಿನ ಎ.ಪಿ.ಎಂ.ಸಿ. ರಸ್ತೆಯ ಕ್ರಿಸ್ಟೋಫರ್ ಸಭಾಂಗಣದಲ್ಲಿ ನಡೆದ ವೇದಿಕೆಯ ವಿಶೇಷ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಬಳಿಕ ಮಾತನಾಡಿದ ಅಮಳ ರಾಮಚಂದ್ರ “ಮಾನವೀಯತೆಯೇ ನಮ್ಮ ಧರ್ಮ , ಸಂವಿಧಾನವೇ ನಮ್ಮ ಧರ್ಮಗ್ರಂಥ ಎಂಬುದು ಮಾನವ ಬಂಧುತ್ವ ವೇದಿಕೆಯ ಸಿದ್ಧಾಂತವಾಗಿದೆ. ಬುದ್ಧ, ಬಸವ, ಅಂಬೇಡ್ಕರ್, ನಾರಾಯಣ ಗುರು, ಮಹಾತ್ಮಾ ಗಾಂಧಿ ಮೊದಲಾದ ದಾರ್ಶನಿಕರು ಬೊಧಿಸಿದ ತತ್ವ ಸಿದ್ಧಾಂತಗಳನ್ನು ಜನಮಾನಸದಲ್ಲಿ ಬಿತ್ತುವ ಕಾರ್ಯದಲ್ಲಿ ವೇದಿಕೆ ನಿರತವಾಗಿದೆ.
ಎಲ್ಲಾ ರೀತಿಯ ಮೂಲಭೂತವಾದವನ್ನು ತೊಡೆದು ಹಾಕಿ ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸುವ ಧ್ವನಿಯಾಗಿ ವೇದಿಕೆ ಕಾರ್ಯನಿರ್ವಹಿಸಲಿದೆ. ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಕೆಲವು ಜನಪ್ರತಿನಿದಿಗಳು,ಸಂವಿಧಾನ, ಸಮಾನತೆ ಮತ್ತು ಮೀಸಲಾತಿಯನ್ನು ವಿರೋಧಿಸುವ ಹೇಳಿಕೆಯನ್ನು ನೀಡಿ ಕೋಮು ದ್ವೇಷವನ್ನು ಬಿತ್ತುತ್ತಿದ್ದಾರೆ.“ ಎಂದರು.
“ಬಾಬಾ ಸಾಹೇಬ್ ಅಂಬೇಡ್ಕರ್ರವರು ರಚಿಸಿದ ಸಂವಿಧಾನದಲ್ಲಿ ಮೀಸಲಾತಿಯನ್ನು ಅಳವಡಿಸಿರುವುದು ಸಾಮಾಜಿಕ ನ್ಯಾಯದಿಂದ ವಂಚಿತರಾಗಿರುವ ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ಗೌರವದ ಸ್ಥಾನಮಾನಗಳನ್ನು ನೀಡಿ ಸಾಮಾಜಿಕ ನ್ಯಾಯವನ್ನು ಸ್ಥಾಪಿಸುವ ಉದ್ದೇಶದಿಂದಲೇ ಹೊರತು ಆರ್ಥಿಕವಾಗಿ ಹಿಂದುಳಿದವರ ಆರ್ಥಿಕತೆಯನ್ನು ಮೇಲೆತ್ತುವ ಉದ್ದೇಶದಿಂದ ಅಲ್ಲ. ಹೀಗಿದ್ದೂ ಇತ್ತೀಚೆಗೆ ಕೇಂದ್ರ ಸರಕಾರ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗಗಳಿಗೆ 10℅ ಮೀಸಲಾತಿಯನ್ನು ನೀಡಿರುವುದು ಸಂವಿಧಾನಕ್ಕೆ ವಿರುದ್ಧವಾಗಿದೆ ಮತ್ತು ಇದು ಮೀಸಲಾತಿಯನ್ನು ದುರ್ಬಲಗೊಳಿಸಿ ಶೋಷಿತ ವರ್ಗಗಳಿಗೆ ಹೊಡೆತ ನೀಡುವ ಮನುವಾದಿಗಳ ಸಂಚಿನ ಭಾಗವಾಗಿದೆ ಎಂದರು.
ಸಂಘ ಪರಿವಾರದ ಪ್ರಯೋಗಶಾಲೆಯೆಂದೇ ಪರಿಗಣಿಸಲಾದ ದ ಕ ಜಿಲ್ಲೆಯಲ್ಲಿ ಅದರಲ್ಲೂ ಪುತ್ತೂರಿನಲ್ಲಿ ಕೋಮುದ್ವೇಷವನ್ನು ತೊಡೆದು ಹಾಕಿ ಸಮ ಸಮಾಜವನ್ನು ನಿರ್ಮಿಸಬೇಕಾದ ಹೊಣೆಗಾರಿಕೆ ಪ್ರಜ್ಞಾವಂತರಾದ ನಾಗರಿಕರ ಮತ್ತು ನಮ್ಮೆಲ್ಲರ ಮೇಲಿದೆ. ಕೋಮುವಾದಿಗಳ ಸುಳ್ಳು ಮತ್ತು ಅಪಪ್ರಚಾರ, ದ್ವೇಷ ಭಾಷಣಗಳನ್ನು ವೇದಿಕೆ ಸಮರ್ಥವಾಗಿ ಎದುರಿಸುವ ಸಂಕಲ್ಪವನ್ನು ಮಾಡಿದೆ. ಈ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಮಾನವ ಬಂಧುತ್ವ ವೇದಿಕೆ ಮುಂದಿನ ದಿನಗಳಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಅಮಳ ರಾಮಚಂದ್ರ ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾನವ ಬಂಧುತ್ವ ವೇದಿಕೆಯ ವಿಭಾಗೀಯ ಸಂಚಾಲಕರಾದ ಪತ್ರಕರ್ತ ಸತೀಶ್ಕುಮಾರ್ ಮಾತನಾಡಿ ಸಂವಿಧಾನದ ರಕ್ಷಣೆ ಮತ್ತು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ , ರಾಜಕೀಯ ಸಮಾನತೆ ಹಾಗೂ ಶೋಷಣೆರಹಿತ ಸಮಾಜ ನಿರ್ಮಿಸುವ ಉದ್ದೇಶದಿಂದ ವೇದಿಕೆ ರಾಜ್ಯದಾದ್ಯಂತ ಕೆಲಸ ಮಾಡುತ್ತಿದೆ.
ಎಲ್ಲಾ ರೀತಿಯ ಮತೀಯ ಮೂಲಭೂತವಾದಿ ಶಕ್ತಿಗಳು ಮತ್ತು ಸ್ಥಾಪಿತ ಹಿತಾಸಕ್ತಿಗಳ ವ್ಯವಸ್ಥಿತವಾದ ಹುನ್ನಾರಕ್ಕೆ ಬಲಿಯಾಗಿ ನಿರಂತರವಾಗಿ ಶೋಷಣೆಗೆ ಒಳಗಾಗುತ್ತಿರುವ ತಳ ಸಮುದಾಗಳನ್ನು ಒಂದುಗೂಡಿಸಿ ಪ್ರಬಲವಾದ ಜನಪರ ಶಕ್ತಿಯನ್ನು ರೂಪಿಸುವುದು ಮಾನವ ಬಂಧುತ್ವ ವೇದಿಕೆಯ ಪ್ರಮುಖ ಗುರಿಯಾಗಿದೆ. ಜನಸಮುದಾಯವನ್ನು ಆವರಿಸಿಕೊಂಡಿರುವ ಮೌಢ್ಯ, ಕಂದಾಚಾರಗಳು ಮತ್ತು ಜೀವವಿರೋಧಿ ನಂಬಿಕೆಗಳನ್ನು ತೊಡೆದು ಹಾಕಲು ಅಗತ್ಯವಿರುವ ಶಿಕ್ಷಣವನ್ನು ನೀಡಿ ಸಮ ಸಮಾಜವನ್ನು ನಿರ್ಮಿಸುವುದು ವೇದಿಕೆಯ ಗುರಿಯಾಗಿದೆ.
ದೇಶದಲ್ಲಿ ಸಂವಿಧಾನ ವಿರೋಧಿ ಮಾನಸಿಕತೆಯನ್ನು ಬೆಳೆಸಲು ಪ್ರಯತ್ನಿಸುತ್ತಿರುವ ಶಕ್ತಿಗಳಿಂದ ದೇಶವನ್ನೂ ಬಚಾವು ಮಾಡುವ ಅವಶ್ಯಕತೆಯಿದೆ. ಮುಂಬಾಗದಲ್ಲಿ ಕೋಮು ದ್ವೇಷವನ್ನು ಗುರಾಣಿಯನ್ನಾಗಿ ಮಾಡಿಕೊಂಡು ಹಿಂದಿನಿಂದ ದೇಶದ ಸಂವಿಧಾನವನ್ನು ಬದಲಾಯಿಸುವ ಪ್ರಯತ್ನ ನಡೆಯುತ್ತಿದೆ. ದೇಶದ ಜನರ ತೆರಿಗೆ ಹಣದಲ್ಲಿ ಅಂಬಾನಿ ಅದಾನಿಗಳಂತಹಾ ಬೃಹತ್ ಕೈಗಾರಿಕೋದ್ಯಮಿಗಳನ್ನು ಕೊಬ್ಬಿಸುವ ಕಾರ್ಯ ನಡೆಯುತ್ತಿದೆ.
ಜನರ ಕೈಗೆ ಹಣ ನೀಡುವ ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಗಳು ರಾಜ್ಯದ ದುರ್ಬಲ ವರ್ಗಗಳ ಜನರ ಆರ್ಥಿಕ ಶಕ್ತಿಯನ್ನು ಹೆಚ್ಚಿಸಿ ಮಾರುಕಟ್ಟೆಯಲ್ಲಿ ಹಣದ ಹರಿವಿಗೆ ಕಾರಣಕರ್ತವಾಗಿದೆ ಎಂದು ಜಗತ್ತಿನ ಪ್ರಖ್ಯಾತ ಆರ್ಥಿಕ ತಜ್ಞರೊಬ್ಬರು ಹೇಳಿದ್ದಾರೆ ಗಾಂಧಿ, ನೆಹರೂ ಮತ್ತು ಅಂಬೇಡ್ಕರ್ರವರು ನಿರ್ದೇಶಿಸಿದ ಮಾರ್ಗದಲ್ಲಿ ದೇಶ ನಡೆಯಬೇಕಾಗಿದ್ದು ಸಂವಿಧಾನವನ್ನು ದುರ್ಬಲಗೊಳಿಸುವ ಶಕ್ರಿಗಳನ್ನು ಎದುರಿಸಿ ನಿಲ್ಲಬೇಕಾಗಿದೆ ಎಂದು ಅವರು ಹೇಳಿದರು.
ಆರ್ಯಾಪು ಸಿ.ಎ.ಬ್ಯಾಂಕ್ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿಯವರು ಮಾತನಾಡಿ “ ಕೋಮು ದ್ವೇಷವನ್ನು ಪ್ರಚೋದಿಸಿ, ಜನರ ಶಾಂತಿ ನೆಮ್ಮದಿಯನ್ನು ಹಾಳು ಮಾಡಿ ಅದರಿಂದ ರಾಜಕೀಯ ಲಾಭ ಗಳಿಸಲು ಪ್ರಯತ್ನಿಸುವ ಎಲ್ಲಾ ಶಕ್ತಿಗಳ ವಿರುದ್ಧ ಯಾವುದೇ ರೀತಿಯ ಭಯ ಪಡದೆ, ಎದೆಗುಂದದೆ ಅವುಗಳನ್ನು ಸಮರ್ಥವಾಗಿ ಎದುರಿಸಲು ನಾವು ಕಂಕಣ ಬದ್ದರಾಗಬೇಕಾಗಿದೆ.. ಸಂವಿಧಾನದ ಆಶಯಗಳಿಗೆ ದಕ್ಕೆ ತರಲು ಪ್ರತ್ನಿಸುವ ಎಲ್ಲಾ ಶಕ್ತಿಗಳನ್ನೂ ವಿರೋಧಿಸಿ ಸೌಹಾರ್ದತೆಯ ಸಮಾಜವನ್ನು ನಿರ್ಮಿಸಬೇಕು ಜಿಲ್ಲೆಯ ಜನರಲ್ಲಿ ಸಾಮರಸ್ಯ ಮೂಡಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಮಾಜಿ ಪುರಸಭಾ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈಯವರು ಮಾತನಾಡಿ ಯಾವುದೇ ಜಾತಿ, ಧರ್ಮಗಳ ಮೇಲೆ ದ್ವೇಷವಿಲ್ಲದೆ ಎಲ್ಲರನ್ನು ಪ್ರೀತಿಸುವ ಮೂಲಕ ಸಂವಿಧಾನದ ಆಶಯದಂತೆ ಸಮ ಸಮಾಜದ ನಿರ್ಮಾಣಕ್ಕೆ ದುಡಿಯೋಣ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿ ವೇದಿಕೆಯ ಮುಖಂಡರಾದ ಮೌರಿಸ್ ಮಸ್ಕರೇನ್ಹಸ್ ಮಾನವ ಬಂಧುತ್ವ ವೇದಿಕೆ ಒಂದು ರಾಜಕೀಯ ರಹಿತ ವೇದಿಕೆಯಾಗಿದ್ದು ಸಾಮಾಜಿಕ ಚಳುವಳಿಗಳ ಮೂಲಕ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಸುಮಾರು ಹತ್ತು ವರ್ಷಗಳ ಹಿಂದೆ ರಾಜ್ಯದ ಮುತ್ಸದ್ಧಿ ನಾಯಕರಾದ ಸತೀಶ್ಜಾರಕಿಹೊಳಿಯವರು ವೇದಿಕೆಯನ್ನು ಸ್ಥಾಪಿಸಿ ಮನ್ನಡೆಸುತ್ತಿದ್ದಾರೆ. 8 ವರ್ಷಗಳ ಹಿಂದೆ ಪುತ್ತೂರಿನಲ್ಲಿ ಆರಂಭವಾದ ವೇದಿಕೆಯ ಪುತ್ತೂರು ಘಟಕ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ಹೇಳಿದರು.
ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿಯ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ , ವೇದಿಕೆಯ ನಿರ್ಗಮನ ಪ್ರಧಾನ ಸಂಚಾಲಕ ಮಹಾಲಿಂಗ ನಾಯ್ಕ ಉದ್ಯಮಿಗಳಾದ ವಲೇರಿಯನ್ ಡಯಾಸ್, ಮೌರಿಸ್ ಮಸ್ಕರೇನ್ಹಸ್, ರೋಷನ್ ರೈ ಬನ್ನೂರು , ಆಲಿಕುಂಞಿ ಕೊರಿಂಗಿಲ , ಶಶಿಕಿರಣ್ ರೈ , ಮಹಮ್ಮದ್ ರಿಯಾಝ್ ಕೊಪ್ಪಳ, ಭಾಸ್ಕರ ಕೋಡಿಂಬಾಳ , ಮನೋಹರ ರೈ ಎಂಡೆಸಾಗು, ಉಲ್ಲಾಸ್ ಕೋಟ್ಯಾನ್ , ವಿ.ಎಚ್.ಎ. ಶಕೂರ್ ಹಾಜಿ , ಸಿದ್ದೀಕ್ ಸುಲ್ತಾನ್ , ಹರೀಶ್ ಕೋಟ್ಯಾನ್ ನಿಡ್ಪಳ್ಳಿ , ಅಬ್ದುಲ್ ರೆಹಮಾನ್ ಯೂನಿಕ್ , ಪ್ಯಾಟ್ರಿಕ್ ಸಿಪ್ರಿಯಾನ್ ಮಸ್ಕರೇನ್ಹಸ್ , ಚಂದ್ರಶೇಖರ್ , ಅಬ್ದುಲ್ ಲತೀಫ್ , ವಿಕ್ಟರ್ ಪಾಯಿಸ್ , ಕೆ.ವಿಶ್ವನಾಥ ಪೂಜಾರಿ ಮಾಡಾವು , ಉಮ್ಮರ್ ಜನಪ್ರಿಯ ಆರ್ಲಪದವು , ಕಲಂದರ್ ಶಬಿ ನೆಕ್ಕಿಲಾಡಿ , ಬಿ.ಮಣಿ ಬಪ್ಪಳಿಗೆ , ದಿನೇಶ್ ಕೆ. ಅಬ್ದುಲ್ ಮಜೀದ್ , ಕೆ.ಬಾಲಕೃಷ್ಣ ಗೌಡ ಪಡ್ರೆ , ಶಾಹುಲ್ ಹಮೀದ್ ಜಾಲಗದ್ದೆ , ಮಹೇಶ್ ಕೆ. ಪಟ್ಟೆ , ಹಬೀಬುಲ್ಲಾ ಕಣ್ಣೂರು , ಗ್ರೆಗೊರಿ ಡಿ’ಸೋಜ , ಸದಾನಂದ ಭರಣ್ಯ , ಶೇಕ್ ಜೈನುದ್ದೀನ್ , ರೊನಾಲ್ಡ್ ಮೊಂತೆರೋ, ಸುಂದರ ನಿಧಿಮುಂಡ , ಪಿ.ಎಂ.ಇಬ್ರಾಹಿಂ, ವಿಠಲನ್ ನಾಯ್ಕ , ಕಲಾವಿದ ಕೃಷ್ಣಪ್ಪ , ಶ್ರೀಧರ ಪೂಜಾರಿ ಕೊಳ್ತಿಗೆ , ಚಂದ್ರಶೇಖರ , ಪ್ರವೀಣ ಕೆಮ್ಮಾರ , ಲೋಹಿತ್ ಬಾರಿಕೆ , ಅಬ್ದುಲ್ ಸತ್ತಾರ್ ಕೊಳ್ತಿಗೆ , ಸೈಮನ್ ಗೋನ್ಸಾಲ್ವಿಸ್ , ಶಾಹುಲ್ , ಶ್ರೀನಿಧಿ ಕೆ.ಜೆ , ಫಾರೂಕ್ ಟಿ.ಎಮ್ , ಜಾನ್ ಕೆನ್ಯೂಟ್ , ಐವನ್ ಡಿ’ಸೋಜ , ಗಂಗಾಧರ ಪಾಟಾಳಿ ಕಾವು, ಪೌಲ್ ಮೊಂತೆರೋ ಪುತ್ತೂರು, ವಿನ್ಸೆಂಟ್ ತಾವ್ರೋ , ರೋಷನ್ ಎಲ್.ಎ. ಡಯಾಸ್ , ರವೀಂದ್ರ ಕಾವು , ಝಬೈರ್ ಪಿ.ಕೆ , ಜಯಂತ ನಗರ , ಬಾಬು ಮರಿಕೆ, ಉಮರ್ ಫಾರೂಕ್ ರೆಂಜ ಮೊದಲಾದವರು ಸಭೆಯಲ್ಲಿ ಭಾಗವಹಿಸಿದರು.
ಕಾರ್ಯಕ್ರಮಗಳು
Saptaka Foundation-ಬೆಂಗಳೂರಿನ ಸಪ್ತಕ ಸಂಸ್ಥೆ ವತಿಯಿಂದ ವಿಟ್ಲ ಬಸ್ ನಿಲ್ದಾಣದಲ್ಲಿ ಕುಡಿಯುವ ತಂಪು ನೀರಿನ ವ್ಯವಸ್ಥೆ ಉದ್ಘಾಟನೆ; ಅಳಿಕೆ ಸತ್ಯಸಾಯಿ ಆಸ್ಪತ್ರೆಗೆ ನೀರಿನ ಡಿಸ್ಪೆನ್ಸರ್ ಕೊಡುಗೆ
ಬೆಂಗಳೂರಿನ ಸಪ್ತಕ ಸಂಸ್ಥೆಯು ವಿಟ್ಲದಲ್ಲಿ ಇತ್ತೀಚೆಗೆ ತನ್ನ ಶಾಖೆಯನ್ನು ತೆರೆದ ಸುರತ್ಕಲ್‌ನ ಚಿರಂತನ ಚಾರಿಟೇಬಲ್ ಟ್ರಸ್ಟ್ ಮೂಲಕ ಪುತ್ತೂರು ರಸ್ತೆಯಲ್ಲಿರುವ ವಿಟ್ಲ ಪಟ್ಟಣ ಪಂಚಾಯತ್‌ನ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಕುಡಿಯುವ ತಂಪು ನೀರಿನ ವ್ಯವಸ್ಥೆಯನ್ನು ಕಲ್ಪಿಸಿದೆ.

ವಿಟ್ಲ: ಬೆಂಗಳೂರಿನ ಸಪ್ತಕ ಸಂಸ್ಥೆಯು ವಿಟ್ಲದಲ್ಲಿ ಇತ್ತೀಚೆಗೆ ತನ್ನ ಶಾಖೆಯನ್ನು ತೆರೆದ ಸುರತ್ಕಲ್‌ನ ಚಿರಂತನ ಚಾರಿಟೇಬಲ್ ಟ್ರಸ್ಟ್ ಮೂಲಕ ಪುತ್ತೂರು ರಸ್ತೆಯಲ್ಲಿರುವ ವಿಟ್ಲ ಪಟ್ಟಣ ಪಂಚಾಯತ್‌ನ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಕುಡಿಯುವ ತಂಪು ನೀರಿನ ವ್ಯವಸ್ಥೆಯನ್ನು ಕಲ್ಪಿಸಿದೆ.
ನೂತನ ವ್ಯವಸ್ಥೆಯನ್ನು ಸಪ್ತಕ ಸಂಸ್ಥೆಯ ಜಿ.ಎಸ್. ಹೆಗಡೆ ಅವರು ಉದ್ಘಾಟಿಸಿದರು. ಬಸ್ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರು ಹಾಗೂ ವಿಟ್ಲದ ಸಾರ್ವಜನಿಕರಿಗೆ ಈ ವ್ಯವಸ್ಥೆಯಿಂದ ಅನುಕೂಲವಾಗಲಿದೆ.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ರಮಾನಾಥ್ ವಿಟ್ಲ, ರಾಮದಾಸ್ ಶೆಣೈ, ರವೀಶ್ ವಿಟ್ಲ, ಅಶ್ರಫ್, ಚಿರಂತನದ ಭಾರವಿ ದೇರಾಜೆ ಹಾಗೂ ಶಿವಾನಂದ ರೈ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅಳಿಕೆಯ ಸತ್ಯಸಾಯಿ ಆಸ್ಪತ್ರೆಗೆ ನೀರಿನ ಡಿಸ್ಪೆನ್ಸರ್ ಕೊಡುಗೆ
ಇದೇ ವೇಳೆ, ಬೆಂಗಳೂರಿನ ಸಪ್ತಕ ಸಂಸ್ಥೆಯ ವತಿಯಿಂದ ಚಿರಂತನ ಚಾರಿಟೇಬಲ್ ಟ್ರಸ್ಟ್ ಮೂಲಕ ಅಳಿಕೆಯ ಶ್ರೀ ಸತ್ಯ ಸಾಯಿ ಆಸ್ಪತ್ರೆಗೆ ಬಿಸಿ ನೀರು ಹಾಗೂ ತಂಪು ನೀರಿನ ಡಿಸ್ಪೆನ್ಸರ್‌ಗಳನ್ನು ಒದಗಿಸಲಾಗಿದೆ.
ಮಂಗಳೂರು
Mangalore Dasara-ಮಂಗಳೂರು ದಸರಾಕ್ಕೆ ಚಾಲನೆ: ಸಿಎಂ ಆಗಮನ ಮುಂದೂಡಿಕೆ
ಪ್ರಸಿದ್ಧ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ ಮಹೋತ್ಸವಕ್ಕೆ ರವಿವಾರ ವಿಧ್ಯುಕ್ತ ಚಾಲನೆ ದೊರೆಯಿತು. ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ದರ್ಬಾರು ಮಂಟಪದಲ್ಲಿ ವಿವಿಧ ದೇವಿ ವಿಗ್ರಹಗಳನ್ನು ಪ್ರತಿಷ್ಠಾಪಿಸುವ ಮೂಲಕ ನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಮಂಗಳೂರು: ಪ್ರಸಿದ್ಧ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ ಮಹೋತ್ಸವಕ್ಕೆ ರವಿವಾರ ವಿಧ್ಯುಕ್ತ ಚಾಲನೆ ದೊರೆಯಿತು. ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ದರ್ಬಾರು ಮಂಟಪದಲ್ಲಿ ವಿವಿಧ ದೇವಿ ವಿಗ್ರಹಗಳನ್ನು ಪ್ರತಿಷ್ಠಾಪಿಸುವ ಮೂಲಕ ನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಬೆಳಗ್ಗೆ ಗುರುಪ್ರಾರ್ಥನೆ, ಪುಣ್ಯಾಹ ಹೋಮ ಹಾಗೂ ನವಕಲಶಾಭಿಷೇಕ ನೆರವೇರಿತು. ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಶ್ರೀ ಮಹಾಗಣಪತಿ, ಶ್ರೀ ಶಾರದಾ ಮಾತೆ, ಆದಿಶಕ್ತಿ ಹಾಗೂ ಸ್ಕಂದಮಾತೆ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ ಮತ್ತು ಕೂಷ್ಮಾಂಡಿನಿ ದೇವಿಯರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು.
ರವಿವಾರದ ರಜೆಯ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ದೇವಿಯರ ವಿಗ್ರಹಗಳ ಪ್ರತಿಷ್ಠಾಪನೆಯ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.
ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಹಾಗೂ ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ, ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಕ್ಷೇತ್ರಾಡಳಿತ ಮಂಡಳಿಯ ಟ್ರಸ್ಟಿಗಳು, ಕ್ಷೇತ್ರ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.
ಈ ಬಾರಿ ಮಹಿಳಾ ದಸರಾ ವಿಶೇಷ ಆಕರ್ಷಣೆ
ಕ್ಷೇತ್ರದ ಖಜಾಂಚಿ ಪದ್ಮರಾಜ್ ಆರ್. ಪೂಜಾರಿ ಮಾಧ್ಯಮದವರೊಂದಿಗೆ ಮಾತನಾಡಿ, ಬಿ. ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಆಡಳಿತ ಮಂಡಳಿ ಹಾಗೂ ಅಭಿವೃದ್ಧಿ ಸಮಿತಿಯ ಸಹಯೋಗದೊಂದಿಗೆ ಈ ಬಾರಿಯ ಮಂಗಳೂರು ದಸರಾ ನಡೆಯುತ್ತಿದೆ ಎಂದು ತಿಳಿಸಿದರು.
ಕಳೆದ ವರ್ಷ ಆರಂಭಿಸಿದ್ದ ಮಕ್ಕಳ ದಸರಾ ಮತ್ತು ಕಿನ್ನಿಪಿಲಿ ಕಾರ್ಯಕ್ರಮಗಳನ್ನು ಈ ಬಾರಿಯೂ ಮುಂದುವರಿಸಲಾಗುವುದು. ಇದೇ ಮೊದಲ ಬಾರಿಗೆ ಮಹಿಳಾ ದಸರಾ ಆಯೋಜಿಸಲಾಗುತ್ತಿದ್ದು, ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳು ಹಾಗೂ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಭಕ್ತರ ಬೇಡಿಕೆಯಂತೆ ಅಕ್ಟೋಬರ್ 20ರಂದು ಅಕ್ಷರಾಭ್ಯಾಸ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಈ ಬಾರಿ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಶೇ. 25ರಿಂದ 30ರಷ್ಟು ಹೆಚ್ಚಾಗುವ ನಿರೀಕ್ಷೆಯಿದ್ದು, ವ್ಯವಸ್ಥಿತ ನಿರ್ವಹಣೆಗಾಗಿ ಒಂದು ಸಾವಿರಕ್ಕೂ ಹೆಚ್ಚು ಸ್ವಯಂಸೇವಕರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಆಗಮನ ಮುಂದೂಡಿಕೆ
ಸೋಮವಾರ ಸಂಜೆ 6.30ಕ್ಕೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಂಗಳೂರು ದಸರಾ ಮಹೋತ್ಸವವನ್ನು ಉದ್ಘಾಟಿಸಬೇಕಿತ್ತು. ಆದರೆ ತುರ್ತು ಕಾರಣದಿಂದ ದೆಹಲಿಗೆ ತೆರಳಬೇಕಾದ ಹಿನ್ನೆಲೆಯಲ್ಲಿ ಅವರ ಪ್ರವಾಸ ರದ್ದಾಗಿದೆ. ಅಕ್ಟೋಬರ್ 15 ಅಥವಾ 16ರಂದು ಮುಖ್ಯಮಂತ್ರಿ ಕ್ಷೇತ್ರಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಪದ್ಮರಾಜ್ ಆರ್. ಪೂಜಾರಿ ತಿಳಿಸಿದರು.
ಮಂಗಳೂರು
Mangaluru-ಬೆಳೆ ವಿಮೆ ಅನ್ಯಾಯ ಆರೋಪ: ಅ.9ರಂದು ಮಂಗಳೂರಿನಲ್ಲಿ ರೈತರ ಬೃಹತ್ ಹಕ್ಕೊತ್ತಾಯ | ಸಹಕಾರ ಭಾರತಿ – ಬಿಜೆಪಿ ಬೆಂಬಲ
ಬೆಳೆ ವಿಮೆ ಪಾವತಿಯಲ್ಲಿ ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಸಹಕಾರ ಭಾರತಿ ಹಾಗೂ ಬಿಜೆಪಿ ನೇತೃತ್ವದಲ್ಲಿ ಅ.9ರಂದು ಮಂಗಳೂರಿನಲ್ಲಿ ಬೃಹತ್ ಹಕ್ಕೊತ್ತಾಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಂಗಳೂರಿನ ಟೌನ್‌ಹಾಲ್‌ನಲ್ಲಿ ಶುಕ್ರವಾರ ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ನಡೆಯಲಿದೆ.
ಮಂಗಳೂರು: ಬೆಳೆ ವಿಮೆ ಪಾವತಿಯಲ್ಲಿ ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಸಹಕಾರ ಭಾರತಿ ಹಾಗೂ ಬಿಜೆಪಿ ನೇತೃತ್ವದಲ್ಲಿ ಅ.9ರಂದು ಮಂಗಳೂರಿನಲ್ಲಿ ಬೃಹತ್ ಹಕ್ಕೊತ್ತಾಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಂಗಳೂರಿನ ಟೌನ್‌ಹಾಲ್‌ನಲ್ಲಿ ಶುಕ್ರವಾರ ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ನಡೆಯಲಿದೆ. ಬೆಳೆ ವಿಮೆ ಯೋಜನೆಯಡಿ ರೈತರಿಗೆ ಸೂಕ್ತ ಪರಿಹಾರ ದೊರೆಯದಿರುವುದು ಸೇರಿದಂತೆ ವಿಮೆ ಪಾವತಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸಭೆಯಲ್ಲಿ ಧ್ವನಿ ಎತ್ತಲಾಗುತ್ತದೆ.
ಬೆಳೆ ವಿಮೆ ಯೋಜನೆಯಡಿ ರೈತರಿಗೆ ನ್ಯಾಯಯುತ ಪರಿಹಾರ ದೊರೆಯಬೇಕು ಹಾಗೂ ವಿಮೆ ಪಾವತಿಯಲ್ಲಿ ಉಂಟಾಗಿರುವ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸದಸ್ಯರು ಸೇರಿದಂತೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಳೆ ವಿಮೆಯಲ್ಲಿ ಆಗಿರುವ ಅನ್ಯಾಯದ ವಿರುದ್ಧ ಒಗ್ಗಟ್ಟಿನಿಂದ ಹಕ್ಕೊತ್ತಾಯ ಮಂಡಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
-
ಮಂಗಳೂರು21 hours agoMangalore-ಮಂಗಳೂರು: ಅನೈತಿಕ ಸಂಬಂಧ ಶಂಕೆ; ಪತ್ನಿಯನ್ನು ಚೂರಿಯಿಂದ ಇರಿದು ಕೊಂದ ಪತಿ
-
ಬಿಗ್ ನ್ಯೂಸ್22 hours agoGolithottu-ಗೋಳಿತ್ತೊಟ್ಟು: ತೋಡಿನ ನೀರಿನಲ್ಲಿ ಮೀನುಗಳ ಮಾರಣಹೋಮ; ತನಿಖೆಗೆ ಸ್ಥಳೀಯರ ಆಗ್ರಹ
-
Uncategorized17 hours ago
Digitel Arrest ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಪುತ್ತೂರಿನ ವ್ಯಕ್ತಿಗೆ ₹1.31 ಕೋಟಿ ವಂಚನೆ
-
ಮಂಗಳೂರು22 hours agoABVP protest-ಮಂಗಳೂರಿನ ಆಗ್ನೆಸ್ ಕಾಲೇಜಿನಲ್ಲಿ ದಸರಾ ರಜೆಯಲ್ಲೂ ಪರೀಕ್ಷೆ; ಎಬಿವಿಪಿ ಪ್ರತಿಭಟನೆ ವೇಳೆ ನೂಕಾಟ; ವಿದ್ಯಾರ್ಥಿನಿಯರನ್ನು ತಳ್ಳಿದ ಪೊಲೀಸರ ವಿರುದ್ಧ ಆಕ್ರೋಶ
-
ನಿಧನ ವಾರ್ತೆ3 hours agoSullia-Big Breaking: ಸುಳ್ಯ: ವಿದ್ಯುತ್ ಶಾಕ್ಗೆ ಇಬ್ಬರು ಯುವಕರು ಬಲಿ; ಬಾಲಕನಿಗೆ ಗಾಯ
-
ಕ್ರೀಡೆ21 hours agoMCC:ಎಂಸಿಸಿಯಿಂದ ಕ್ರಿಕೆಟ್ ನಿಯಮಗಳ ಪರಿಷ್ಕರಣೆ: ಅ.1ರಿಂದ ಹೊಸ ಬದಲಾವಣೆಗಳು ಜಾರಿ
-
ನಿಧನ ವಾರ್ತೆ24 hours agoNana Patekar-ನಟ ನಾನಾ ಪಾಟೇಕರ್ ಸಾವು: ಮರಣೋತ್ತರ ಪರೀಕ್ಷೆಯಲ್ಲಿ ಹೃದಯಾಘಾತ ದೃಢ
-
ಮಂಗಳೂರು21 hours agoMangalore Dasara-ಮಂಗಳೂರು ದಸರಾಕ್ಕೆ ಚಾಲನೆ: ಸಿಎಂ ಆಗಮನ ಮುಂದೂಡಿಕೆ




















