ರಾಜಕೀಯ
Kishore Kumar-ವಿಧಾನ ಪರಿಷತ್ ಉಪಚುನಾವಣೆ: ಪಕ್ಷ ನಿಷ್ಟೆಗೆ ಒಲಿದ ಟಿಕೆಟ್; ಒಬಿಸಿ ನಾಯಕ ಕಿಶೋರ್ ಕುಮಾರ್ಬೊಟ್ಯಾಡಿ ಸಂಘ ಹಾಗೂ ಬಿಜೆಪಿಯಲ್ಲಿ ಬೆಳೆದು ಬಂದ ಹಾದಿ – ನಾಮ ಪತ್ರ ಸಲ್ಲಿಕೆ ಯಾವಾಗ?
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಸ್ಥಾನದ ಉಪ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಒಬಿಸಿ ನಾಯಕನಿಗೆ ಮಣೆ ಹಾಕಿದೆ. ಅತ್ಯಂತ ಕಡಿಮೆ ಜನಸಂಖ್ಯೆ ಇರುವ ಸವಿತಾ ಸಮಾಜಕ್ಕೆ ಸೇರಿದ ದ.ಕ. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಪುತ್ತೂರು ಅವರನ್ನು ಅಭ್ಯರ್ಥಿಯನ್ನಾಗಿಸುವ ಮೂಲಕ ಅಚ್ಚರಿಯ ಆಯ್ಕೆ ಮಾಡಿದೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಸ್ಥಾನದ ಉಪ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಒಬಿಸಿ ನಾಯಕನಿಗೆ ಮಣೆ ಹಾಕಿದೆ. ಅತ್ಯಂತ ಕಡಿಮೆ ಜನಸಂಖ್ಯೆ ಇರುವ ಸವಿತಾ ಸಮಾಜಕ್ಕೆ ಸೇರಿದ ದ.ಕ. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಪುತ್ತೂರು ಅವರನ್ನು ಅಭ್ಯರ್ಥಿಯನ್ನಾಗಿಸುವ ಮೂಲಕ ಅಚ್ಚರಿಯ ಆಯ್ಕೆ ಮಾಡಿದೆ.
ಕರಾವಳಿ ಭಾಗದಲ್ಲಿ ಪುತ್ತೂರು ಹಾಗೂ ಉಳ್ಳಾಲ ಹೊರತುಪಡಿಸಿ ಉಳಿದೆಡೆ ಬಿಜೆಪಿ ಶಾಸಕರನ್ನು ಹೊಂದಿದೆ. ಉಳ್ಳಾಲ ಕ್ಷೇತ್ರಕ್ಕೆ ಸೇರಿದ ಸತೀಶ್ ಕುಂಪಲರವರನ್ನು ಬಿಜೆಪಿ ಈಗಾಗಲೇ ಜಿಲ್ಲಾಧ್ಯಕ್ಷ ರನ್ನಾಗಿ ನೇಮಿಸುವ ಮೂಲಕ ಆ ಭಾಗದ ಬಿಜೆಪಿಗೆ ಶಕ್ತಿ ತುಂಬುವ ಕೆಲಸ ಮಾಡಿದೆ. ಹೀಗಾಗಿ ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ವ್ಯಕ್ತಿಯನ್ನು ಎಂಎಲ್ಸಿ ಮಾಡಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿ ಈ ಲೆಕ್ಕಚಾರದ ನಡೆಗೆ ಮುಂದಾಗಿದೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.
ಕಿಶೋರ್ ಕುಮಾರ್ ಪುತ್ತೂರು ಮೂಲತಃ ಆರೆಸ್ಸೆಸ್ ಕಟ್ಟಾಳು. ಪುತ್ತೂರಿನ ಸರ್ವೆ ಗ್ರಾಮದ ಬೊಟ್ಯಾಡಿ ನಿವಾಸಿ ದಿ. ರಾಮಣ್ಣ ಭಂಡಾರಿ ಹಾಗೂ ಸುಶೀಲ ದಂಪತಿಯ ಎರಡನೇ ಪುತ್ರ. 45ರ ಹರೆಯದ ಇವರು ಎಂಎ ರಾಜ್ಯಶಾಸ್ತ್ರ ಪದವೀಧರರು. ಬೊಟ್ಯಾಡಿಯವರ ಕುಟುಂಬ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಚಾರಧಾರೆಯನ್ನು ಮೈಗೂಡಿಸಿಕೊಂಡು ಬಂದಂತಹ ಕುಟುಂಬ.
ಪಕ್ಷನಿಷ್ಟೆಗೆ ಸಿಕ್ಕ ಗೌರವ:
2013ರ ಅಸೆಂಬ್ಲಿ ಚುನಾವಣೆಯಿಂದ 2023ರ ಅಸೆಂಬ್ಲಿ ಚುನಾವಣೆಯವರೆಗೆ ಪ್ರತಿ ಬಾರಿ ಕಿಶೋರ್ ಕುಮಾರ್ ಬೊಟ್ಯಾಡಿ ಹೆಸರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿ ಬರುತಿತ್ತು . ಆದರೇ 3 ಬಾರಿಯೂ ಅವರಿಗೆ ಟಿಕೆಟ್ ಕೈ ತಪ್ಪಿತ್ತು. ಟಿಕೆಟ್ ಕೈ ತಪ್ಪಿದ ಬಳಿಕವು ಮೂರು ಬಾರಿಯೂ ಪಕ್ಷ ನಿಷ್ಟರಾಗಿ ಅವರು ಕೆಲಸ ಮಾಡಿದ್ದರಿಂದ ಅವರ ಪಕ್ಷ ನಿಷ್ಟೆಯನ್ನು ಗಮನಿಸಿ ಪಕ್ಷ ಈಗ ಅವರಿಗೆ ಮಹತ್ವದ ಜವಬ್ದಾರಿ ನೀಡಿದೆ.
ಯಾರು ಈ ಕಿಶೋರ್ ಕುಮಾರ್ ಬೊಟ್ಯಾಡಿ ?
ಆರೆಸ್ಸೆಸ್ ಕಲ್ಪನೆ ಶಾಖೆಯ ಹೆಡ್ ಟ್ರೈನರ್ ಆಗಿದ್ದ ಕಿಶೋರ್ ಕುಮಾರ್, 1994ರಿಂದ 1908ರವರೆಗೆ ಪುತ್ತೂರಿನ ನರಿಮೊಗರು ಪ್ರದೇಶದ ಆರೆಸ್ಸೆಸ್ ಮಂಡಲ ಪ್ರವಾಸಿಯಾಗಿ ಕಾರ್ಯ ನಿರ್ವಹಿಸಿದ್ದರು. 2000ರಿಂದ 2004ರವರೆಗೆ ಎಬಿವಿಪಿ ತಾಲೂಕು ಪ್ರಮುಖ್ ಆಗಿ ವಿವಿಧ ವಿದ್ಯಾರ್ಥಿ ಚಳವಳಿಗಳನ್ನು ಸಂಘಟಿಸಿದ್ದರು.ಮಂಗಳೂರು, ಉಡುಪಿ, ಕೊಡಗು, ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ಬಜರಂಗದಳದ ಮಂಗಳೂರು ವಿಭಾಗ ಸಹಸಂಚಾಲಕರಾಗಿ, 2008ರಿಂದ 2013ರವರೆಗೆ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕರಾಗಿದ್ದರು. 2014ರಿಂದ 2016ರವರೆಗೆ ಯುವಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ, ಬಿಜೆಪಿ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಇದೀಗ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ಈ ನಡುವೆ ಕಿಶೋರ್ ಕುಮಾರ್ ಅವರು ಸೌತ್ ಕೆನರಾ ಆರ್‌ಟಿಐ ಕಾರ್ಯಕರ್ತರ ಘಟಕದ ಜಿಲ್ಲಾಧ್ಯಕ್ಷರಾಗಿ, ಪುತ್ತೂರು ಸಾಹಿತ್ಯ ಸಂಗಮದ ಗೌರವಾಧ್ಯಕ್ಷರಾಗಿ, ದ.ಕ. ಜಿಲ್ಲಾ ಕಟ್ಟಡ ಸಾಮಗ್ರಿಗಳ ಪೂರೈಕೆದಾರರ ಸಂಘಟನೆ ಗೌರವಾಧ್ಯಕ್ಷರಾಗಿ, 202100 20230 ಮೆಸ್ಕಾಂನ ನಾಮನಿರ್ದೇಶಿತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.\
ಅ 3ರಂದು ಕಿಶೋರ್ ಕುಮಾರ್ ನಾಮಪತ್ರ ಸಲ್ಲಿಕೆ:
ಕಿಶೋರ್ ಕುಮಾರ್ ಅವರು ಅ.3ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಎರಡು ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಎಲ್ಲ ಶಾಸಕರು, ಸಂಸದರು, ಹಿರಿಯ ಮುಖಂಡರು,ಕಾರ್ಯಕರ್ತರ ಜತೆಗೂಡಿ ನಾಮಪತ್ರ ಸಲ್ಲಿಸುವುದಾಗಿ ಕಿಶೋರ್ ಕುಮಾರ್ ತಿಳಿಸಿದ್ದಾರೆ.
ರಾಜಕೀಯ
Sanjeev Mathandur-ಬೆಳೆ ವಿಮೆ ಪರಿಹಾರದಲ್ಲಿ ತಾರತಮ್ಯ; ‘ಷಡ್ಯಂತ್ರ, ಭ್ರಷ್ಟಾಚಾರದ ಶಂಕೆ’ – ಸಂಜೀವ ಮಠಂದೂರು
ದಕ್ಷಿಣ ಕನ್ನಡ ಜಿಲ್ಲೆಯ ರೈತರಿಗೆ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಪರಿಹಾರ ವಿತರಣೆಯಲ್ಲಿ ಅನ್ಯಾಯವಾಗುತ್ತಿದ್ದು, ಇದರ ಹಿಂದೆ ಷಡ್ಯಂತ್ರ ಹಾಗೂ ಭ್ರಷ್ಟಾಚಾರದ ಶಂಕೆ ವ್ಯಕ್ತವಾಗುತ್ತಿದೆ. ಈ ಕುರಿತು ಸಮಗ್ರ ಹಾಗೂ ಕೂಲಂಕಷ ತನಿಖೆ ನಡೆಸಬೇಕು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆಗ್ರಹಿಸಿದ್ದಾರೆ.
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ರೈತರಿಗೆ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಪರಿಹಾರ ವಿತರಣೆಯಲ್ಲಿ ಅನ್ಯಾಯವಾಗುತ್ತಿದ್ದು, ಇದರ ಹಿಂದೆ ಷಡ್ಯಂತ್ರ ಹಾಗೂ ಭ್ರಷ್ಟಾಚಾರದ ಶಂಕೆ ವ್ಯಕ್ತವಾಗುತ್ತಿದೆ. ಈ ಕುರಿತು ಸಮಗ್ರ ಹಾಗೂ ಕೂಲಂಕಷ ತನಿಖೆ ನಡೆಸಬೇಕು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆಗ್ರಹಿಸಿದ್ದಾರೆ.
ಅ.8ರಂದು ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2025-26ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಒಂಬತ್ತು ತಾಲೂಕುಗಳ ರೈತರು ಒಟ್ಟು ₹294.26 ಕೋಟಿ ವಿಮಾ ಮೊತ್ತ ಪಾವತಿಸಿದ್ದಾರೆ. ಆದರೆ ಸುಮಾರು ₹840 ಕೋಟಿ ಪರಿಹಾರ ಬರಬೇಕಿದ್ದು, ವಾಸ್ತವವಾಗಿ ರೈತರಿಗೆ ಎಷ್ಟು ಮೊತ್ತ ವಿತರಿಸಲಾಗಿದೆ ಎಂಬುದನ್ನು ಸರಕಾರ ಹಾಗೂ ವಿಮಾ ಕಂಪನಿಗಳು ಅಂಕಿ-ಅಂಶಗಳ ಸಹಿತ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ರೈತರು ಪಾವತಿಸಿದ ವಿಮಾ ಮೊತ್ತಕ್ಕೆ ಅನುಗುಣವಾಗಿ ಎಷ್ಟು ಪರಿಹಾರ ನೀಡಲಾಗಿದೆ? ಗ್ರಾಮದಿಂದ ಗ್ರಾಮಕ್ಕೆ ಪರಿಹಾರ ಮೊತ್ತದಲ್ಲಿ ವ್ಯತ್ಯಾಸವಾಗಲು ಕಾರಣವೇನು? ಯಾವ ವೈಜ್ಞಾನಿಕ ಮಾನದಂಡದ ಆಧಾರದಲ್ಲಿ ಪರಿಹಾರ ನಿಗದಿಪಡಿಸಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು.
ಟರ್ಮ್‌ಶೀಟ್ ಬದಲಾದ ಬಳಿಕ ಸಮಸ್ಯೆ
2023-24ನೇ ಸಾಲಿನವರೆಗೆ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯ ಪರಿಹಾರ ವಿತರಣೆಯಲ್ಲಿ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ಸಮಸ್ಯೆ ಇರಲಿಲ್ಲ. ಆದರೆ ಬಳಿಕ ಟರ್ಮ್‌ಶೀಟ್ ಬದಲಾವಣೆಯಾದ ನಂತರ ಸಮಸ್ಯೆಗಳು ಆರಂಭವಾಗಿವೆ ಎಂದು ಮಠಂದೂರು ಆರೋಪಿಸಿದರು.
ಒಂದೇ ತಾಲೂಕು, ಹೋಬಳಿ ಹಾಗೂ ಒಂದೇ ರೀತಿಯ ಭೌಗೋಳಿಕ ಪರಿಸ್ಥಿತಿಯಲ್ಲಿರುವ ಗ್ರಾಮಗಳ ನಡುವೆ ಪರಿಹಾರ ಮೊತ್ತದಲ್ಲಿ ಭಾರಿ ವ್ಯತ್ಯಾಸ ಕಂಡುಬರುತ್ತಿದೆ. ಕೆಲವೆಡೆ ಕೇವಲ 100 ಮೀಟರ್ ಅಂತರದಲ್ಲಿರುವ ರೈತರಿಗೂ ₹10 ಸಾವಿರದಿಂದ ₹15 ಸಾವಿರದವರೆಗೆ ವ್ಯತ್ಯಾಸವಾಗುತ್ತಿದೆ. ಪಂಚಾಯಿತಿಯಿಂದ ಪಂಚಾಯಿತಿಗೆ, ಗ್ರಾಮದಿಂದ ಗ್ರಾಮಕ್ಕೆ ಪರಿಹಾರ ಬದಲಾಗುತ್ತಿರುವುದರ ಹಿಂದಿನ ಕಾರಣವನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರಕಾರವೂ ವಿಮಾ ಮೊತ್ತದ ಶೇ.20ರಷ್ಟು ಪಾಲು ಪಾವತಿಸುತ್ತಿರುವುದರಿಂದ ವಿಮಾ ಕಂಪನಿಗಳ ಕಾರ್ಯವೈಖರಿ ಕುರಿತು ರಾಜ್ಯ ಸರಕಾರವೇ ತನಿಖೆ ನಡೆಸಬೇಕು. ರೈತರಿಗೆ ಅನ್ಯಾಯವಾಗುತ್ತಿದ್ದರೂ ಸರಕಾರ ಕಣ್ಮುಚ್ಚಿ ಕುಳಿತಿದೆ ಎಂದು ಅವರು ಆರೋಪಿಸಿದರು.
274 ಗ್ರಾಮ ಪಂಚಾಯಿತಿಗಳ ಪೈಕಿ 231 ಮಳೆ ಮಾಪಕ ಮಾತ್ರ ಕಾರ್ಯನಿರ್ವಹಣೆ
ಬಿಜೆಪಿ ಸತ್ಯಶೋಧನ ಸಮಿತಿ ಜಿಲ್ಲೆಯ ಒಂಬತ್ತು ತಾಲೂಕುಗಳಲ್ಲಿ ನಡೆಸಿದ ಅಧ್ಯಯನದಲ್ಲಿ ಹಲವು ಕಡೆ ಮಳೆ ಮಾಪಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಕಂಡುಬಂದಿದೆ. ಈ ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿತ್ತು. ಬಳಿಕ ಕೆಲವು ಮಳೆ ಮಾಪಕಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ 274 ಗ್ರಾಮ ಪಂಚಾಯಿತಿಗಳಲ್ಲಿ ಮಳೆ ಮಾಪಕಗಳನ್ನು ಅಳವಡಿಸಲಾಗಿದ್ದು, 231 ಮಾತ್ರ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. 20 ಹೋಬಳಿ ಮಟ್ಟದಲ್ಲಿ ಉಷ್ಣಾಂಶ ಮಾಪಕಗಳಿವೆ. ಮಳೆ ಹಾಗೂ ಉಷ್ಣಾಂಶದ ದಾಖಲೆಗಳ ಆಧಾರದಲ್ಲಿ ಟರ್ಮ್‌ಶೀಟ್ ಪ್ರಕಾರ ವಿಮಾ ಪರಿಹಾರ ನಿರ್ಧರಿಸಲಾಗುತ್ತದೆ ಎಂದು ವಿವರಿಸಿದರು.
‘ಗ್ರಾಮಕ್ಕೊಂದು ಮಾನದಂಡ ಸಲ್ಲ’
ತಾಲೂಕಿನ ಎಲ್ಲ ಗ್ರಾಮಗಳ ರೈತರಿಗೆ ಒಂದೇ ಮಾನದಂಡದಲ್ಲಿ ವಿಮಾ ಪರಿಹಾರ ನೀಡಬೇಕು. ಒಂದು ಗ್ರಾಮಕ್ಕೆ ಗರಿಷ್ಠ ಪರಿಹಾರ ನೀಡಲು ಅನ್ವಯಿಸುವ ಮಾನದಂಡವಿದ್ದರೆ, ಅದೇ ಮಾನದಂಡವನ್ನು ಇತರ ಗ್ರಾಮಗಳಿಗೂ ಅನ್ವಯಿಸಬೇಕು. ಪಂಚಾಯಿತಿ, ಹೋಬಳಿ ಹಾಗೂ ಗ್ರಾಮವಾರು ಪ್ರತ್ಯೇಕ ಮಾನದಂಡಗಳಿಂದ ಪರಿಹಾರ ನೀಡಿದರೆ ರೈತರು ಬೆಳೆ ವಿಮಾ ಯೋಜನೆಯ ಮೇಲಿನ ವಿಶ್ವಾಸ ಕಳೆದುಕೊಳ್ಳಲಿದ್ದಾರೆ ಎಂದು ಮಠಂದೂರು ಹೇಳಿದರು.
2025-26ನೇ ಸಾಲಿನಲ್ಲಿ ರೈತರು ಶೇ.5, ರಾಜ್ಯ ಸರಕಾರ ಶೇ.20 ಹಾಗೂ ಕೇಂದ್ರ ಸರಕಾರ ಶೇ.10ರಷ್ಟು ಪಾಲನ್ನು ಪಾವತಿಸಿವೆ. ಜಿಲ್ಲೆಯ ರೈತರಿಂದ ₹42.03 ಕೋಟಿ, ಕೇಂದ್ರದಿಂದ ₹84.07 ಕೋಟಿ ಹಾಗೂ ರಾಜ್ಯದಿಂದ ₹168.14 ಕೋಟಿ ಸೇರಿದಂತೆ ಒಟ್ಟು ₹294.26 ಕೋಟಿ ವಿಮಾ ಮೊತ್ತ ಪಾವತಿಯಾಗಿದೆ ಎಂದರು.
ರೈತರು ಪ್ರತಿ ಹೆಕ್ಟೇರ್ ಅಡಿಕೆಗೆ ₹6,475 ಹಾಗೂ ಕಾಳುಮೆಣಸಿಗೆ ₹2,377ರಂತೆ ವಿಮಾ ಮೊತ್ತ ಪಾವತಿಸಿದ್ದಾರೆ. ಆದರೆ ಬಜತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ₹45 ಸಾವಿರ ವಿಮಾ ಮೊತ್ತ ಪಾವತಿಸಿದ್ದರೂ ಕೆಲ ರೈತರಿಗೆ ಪ್ರತಿ ಹೆಕ್ಟೇರ್‌ಗೆ ಕನಿಷ್ಠ ₹10,800 ಮಾತ್ರ ಪರಿಹಾರ ದೊರೆತಿದೆ. ಅದೇ ಪ್ರದೇಶದ ಕೆಲವು ರೈತರ ಖಾತೆಗೆ ₹51,824 ಪರಿಹಾರ ಜಮೆಯಾಗಿರುವುದಾಗಿ ಅವರು ತಿಳಿಸಿದರು.
‘ರಾಜ್ಯ ಸರಕಾರ ರೈತ ವಿರೋಧಿ’
ಅಡಿಕೆ ಬೆಳೆಗಾರರು ವಿಮಾ ಮೊತ್ತ ಪಾವತಿಸಿದರೂ ಸಮರ್ಪಕ ಪರಿಹಾರ ದೊರೆಯುತ್ತಿಲ್ಲ. ಮತ್ತೊಂದೆಡೆ ಅಡಿಕೆ ಧಾರಣೆಯಲ್ಲೂ ಕುಸಿತವಾಗಿದೆ. ಹಿಂದಿನ ಅವಧಿಯಲ್ಲಿ ರೈತರಿಗೆ ದೊರೆಯುತ್ತಿದ್ದ ಕಿಸಾನ್ ಸನ್ಮಾನ್ ಹಾಗೂ ವಿದ್ಯಾನಿಧಿ ಯೋಜನೆಗಳನ್ನು ಈಗಿನ ಸರಕಾರ ಸ್ಥಗಿತಗೊಳಿಸಿದೆ. ರೈತರಿಗೆ ಒಂದಲ್ಲೊಂದು ರೀತಿಯಲ್ಲಿ ತೊಂದರೆ ನೀಡುತ್ತಿರುವ ರಾಜ್ಯ ಸರಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಮಠಂದೂರು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಬಿಜೆಪಿ ವಕ್ತಾರ ರಾಜೇಶ್ ಬನ್ನೂರು ಹಾಗೂ ರೈತ ಮೋರ್ಚಾ ಅಧ್ಯಕ್ಷ ಶರತ್ನಂದ ಬೈಪಾಡಿತ್ತಾಯ ಉಪಸ್ಥಿತರಿದ್ದರು.
ಅಂತರ ರಾಜ್ಯ
DK Shivakumar-‘ಸ್ಟಿಂಗ್ ಆಪರೇಷನ್’ ಬಗ್ಗೆ ಎಲ್ಲಾ ಮಾಹಿತಿ ಇದೆ..! ಚರ್ಚೆಗೆಂದು ಬಂದು ಏನೇನು ಮಾಡಿದ್ದಾರೆ ಎಂದು ಗೊತ್ತಿದೆ : ಇದರ ಪಿತಾಮಹ ಯಾರೆಂದೂ ತಿಳಿದಿದೆ : ಡಿಕೆಶಿ ಸ್ಫೋಟಕ ಹೇಳಿಕೆ
ಮುಖ್ಯಮಂತ್ರಿ ಆದ ಬಳಿಕ ನನ್ನನ್ನೇ ಟ್ರ್ಯಾಪ್ ಮಾಡಲು ಕೆಲವರು ಪ್ರಯತ್ನಿಸಿದ್ದರು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುರುವಾರ(ಅ8) ಹೇಳಿಕೆ ನೀಡಿ “ಸ್ಟಿಂಗ್ ಆಪರೇಷನ್” ವಿಚಾರದ ಚರ್ಚೆ ವಿಚಾರದಲ್ಲಿ ಇನ್ನಷ್ಟು ಕುತೂಹಲ ಮೂಡಿಸುವಂತೆ ಮಾಡಿದ್ದಾರೆ.
ನವದೆಹಲಿ: ಮುಖ್ಯಮಂತ್ರಿ ಆದ ಬಳಿಕ ನನ್ನನ್ನೇ ಟ್ರ್ಯಾಪ್ ಮಾಡಲು ಕೆಲವರು ಪ್ರಯತ್ನಿಸಿದ್ದರು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುರುವಾರ(ಅ8) ಹೇಳಿಕೆ ನೀಡಿ “ಸ್ಟಿಂಗ್ ಆಪರೇಷನ್” ವಿಚಾರದ ಚರ್ಚೆ ವಿಚಾರದಲ್ಲಿ ಇನ್ನಷ್ಟು ಕುತೂಹಲ ಮೂಡಿಸುವಂತೆ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ”ನನ್ನ ಬಳಿ “ಸ್ಟಿಂಗ್ ಆಪರೇಷನ್” ಬಗ್ಗೆ ಎಲ್ಲ ಮಾಹಿತಿ ಇದೆ. ನಾನು ಸಿಎಂ ಆದ ಬಳಿಕ ಕೆಲವರು ಬಂದಿದ್ದರು. ಫೋಟೋ ಬೇಕಿದ್ದರೆ ನೀಡುತ್ತೇನೆ, ಚರ್ಚೆಗೆಂದು ಬಂದು ಏನೇನು ಮಾಡಿದ್ದಾರೆ ಎಂಬುದು ಗೊತ್ತಿದೆ. ಈ ವಿಚಾರದ ಹಿಂದಿನ ಪಿತಾಮಹ ಯಾರು ಎಂಬುದೂ ಗೊತ್ತಿದೆ. ಯಾರು ಹಣಕಾಸಿನ ನೆರವು ನೀಡುತ್ತಿದ್ದಾರೆ ಎಂಬ ಮಾಹಿತಿಯೂ ಇದೆ.ನಾನು ಜವಾಬ್ದಾರಿಯುತ ಸ್ಥಾನದಲ್ಲಿರುವುದರಿಂದ ಸುಮ್ಮನೆ ಮಾತನಾಡುವುದಿಲ್ಲ. ಎಲ್ಲ ಸಾಕ್ಷ್ಯಾಧಾರಗಳು ಇವೆ” ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಫಾರ್ಮ್-7 ಮುದ್ರಣ
ಬಿಜೆಪಿ ಕಾರ್ಯಕರ್ತರು ಅಲ್ಪಸಂಖ್ಯಾಕರ ಮತಗಳನ್ನು ದೊಡ್ಡ ಪ್ರಮಾಣದಲ್ಲಿ ಅಳಿಸಲು, ಮತದಾರರ ವಿವರಗಳನ್ನು ಮೊದಲೇ ಭರ್ತಿ ಮಾಡಲಾಗಿರುವ ಫಾರ್ಮ್-7ಗಳನ್ನು ಮುದ್ರಿಸಿ ಬಳಸಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಆರೋಪಿಸಿದರು.
ಮತದಾರರ ವಿವರಗಳನ್ನು ಮೊದಲೇ ನಮೂದಿಸಿರುವ ಫಾರ್ಮ್-7ಗಳನ್ನು ಪ್ರದರ್ಶಿಸಿದ ಅವರು, ಈ ಫಾರ್ಮ್‌ಗಳನ್ನು ಬಿಜೆಪಿಯವರು ಮತದಾರರ ಹೆಸರುಗಳನ್ನು ಅಳಿಸಲು ಬಳಸಿದ್ದಾರೆ ಎಂದು ಆರೋಪಿಸಿದರು.
‘ಫಾರ್ಮ್-7 ದುರ್ಬಳಕೆಯನ್ನು ತಡೆಯಲು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಯಾವುದೇ ಕ್ರಮ ಕೈಗೊಂಡಿಲ್ಲ. ಇಡೀ ಜಗತ್ತು ಈ ಬೆಳವಣಿಗೆಯನ್ನು ಗಮನಿಸುತ್ತಿದೆ’ ಎಂದು ಶಿವಕುಮಾರ್ ಹೇಳಿದರು.
ಜಿಎಸ್‌ಟಿ ಮಂಡಳಿ ಸಭೆಗೆ ದೆಹಲಿಗೆ
ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಬಂದಿರುವುದಾಗಿ ತಿಳಿಸಿದ ಶಿವಕುಮಾರ್, ‘ಇಂದು ಕೆಲವು ಮಹತ್ವದ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ’ ಎಂದರು.
ರಾಹುಲ್ ಗಾಂಧಿ ಉತ್ತಮ ಕೆಲಸ ಮಾಡುತ್ತಿದ್ದಾರೆ
ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ದೇಶಾದ್ಯಂತ ನಡೆದಿರುವ ಬೆಳವಣಿಗೆಗಳು ಈಗಾಗಲೇ ಬಹಿರಂಗಗೊಂಡಿವೆ. ಚುನಾವಣಾ ಆಯೋಗದ ಸದಸ್ಯರೂ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ನ್ಯಾಯಾಲಯಗಳೂ ಇದನ್ನು ಗಮನಕ್ಕೆ ತೆಗೆದುಕೊಂಡಿವೆ. ಸೂಕ್ತ ನಿರ್ದೇಶನ ನೀಡಿದ ನ್ಯಾಯಾಲಯಗಳಿಗೆ ನಾನು ಕೃತಜ್ಞನಾಗಿದ್ದೇನೆ’ ಎಂದರು.
‘ನನ್ನ ರಾಜ್ಯದಲ್ಲಿ ಲಕ್ಷಾಂತರ ಮತದಾರರ ಹೆಸರುಗಳನ್ನು ಅಳಿಸಲು ಪ್ರಯತ್ನಿಸಲಾಗುತ್ತಿದೆ. ಫಾರ್ಮ್-7 ಅರ್ಜಿಗಳನ್ನು ಬಿಜೆಪಿ ಕೇಂದ್ರ ಕಚೇರಿಯಲ್ಲೇ ಮುದ್ರಿಸಲಾಗಿದೆ ಎಂಬ ಆರೋಪವಿದೆ. ನಾವು ದೂರು ಸಲ್ಲಿಸಿದ ಬಳಿಕ ಅವರು ಕೂಡಲೇ ಹಲವು ಬಿಎಲ್‌ಒಗಳನ್ನು ಸಂಪರ್ಕಿಸಿ, ಆ ಫಾರ್ಮ್‌ಗಳನ್ನು ವಾಪಸ್ ಪಡೆದಿದ್ದಾರೆ. ಇದು ಅಪರಾಧವಲ್ಲವೇ? ತಡೆಯುವ ಮುನ್ನವೇ ಮತದಾರರ ಹೆಸರುಗಳನ್ನು ಅಳಿಸುವ ಪ್ರಯತ್ನ ನಡೆದಿತ್ತು’ ಎಂದು ಸಿಎಂ ಪ್ರಶ್ನಿಸಿದರು.
ಸ್ಟಿಂಗ್ ಆಪರೇಷನ್
ಡಿ.ಕೆ.ಶಿವಕುಮಾರ್ ಅವರೇ ಸಚಿವ ಸಂಪುಟ ಸಭೆಯಲ್ಲಿ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಈ ಎಚ್ಚರಿಕೆ ನೀಡಿರುವುದು ಈಗ ತೀವ್ರ ಚರ್ಚೆಗೆ ಕಾರಣವಾಗಿದ್ದು, ವಿಪಕ್ಷಗಳಿಂದ ಕೆಲ ಸಚಿವರು ‘ಟಾರ್ಗೆಟ್’ ಆಗಿದ್ದು, ರಹಸ್ಯ ಕಾರ್ಯಾಚರಣೆ ನಡೆಸಲು ತಂಡಗಳನ್ನೇ ರಚನೆ ಮಾಡಲಾಗಿದೆ ಎಂಬುದಾಗಿ ಹೇಳಿದ್ದಾರೆನ್ನಲಾಗಿದೆ. ಈ ಬೆಳವಣಿಗೆ ಬಗ್ಗೆ ವಿಪಕ್ಷಗಳು ಖಾರವಾದ ಪ್ರತಿಕ್ರಿಯೆಯನ್ನೂ ನೀಡಿವೆ.
ಅಂತರ ರಾಜ್ಯ
Rahul Gandhi-‘45 FIR ನನಗೆ ಪದಕವಿದ್ದಂತೆ, 100 FIR ನನ್ನ ಗುರಿ’-ರಾಹುಲ್ ಗಾಂಧಿ
ತಮ್ಮ ವಿರುದ್ಧ ದಾಖಲಾಗಿರುವ 45 ಎಫ್‌ಐಆರ್‌ಗಳ ಕುರಿತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರ ಪ್ರತಿಕ್ರಿಯಿಸಿದ್ದು, ಪ್ರತಿಯೊಂದು ಎಫ್‌ಐಆರ್ ಕೂಡ ತಮಗೆ ಒಂದು ಪದಕದಂತೆ ಎಂದು ಹೇಳಿದ್ದಾರೆ. ಅಲ್ಲದೆ, ತಮ್ಮ ವಿರುದ್ಧ 100 ಎಫ್‌ಐಆರ್‌ಗಳು ದಾಖಲಾಗುವುದು ತಮ್ಮ ಗುರಿ ಎಂದೂ ಅವರು ಹೇಳಿದ್ದಾರೆ.
ಹೊಸದಿಲ್ಲಿ, ಅ.7: ತಮ್ಮ ವಿರುದ್ಧ ದಾಖಲಾಗಿರುವ 45 ಎಫ್‌ಐಆರ್‌ಗಳ ಕುರಿತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರ ಪ್ರತಿಕ್ರಿಯಿಸಿದ್ದು, ಪ್ರತಿಯೊಂದು ಎಫ್‌ಐಆರ್ ಕೂಡ ತಮಗೆ ಒಂದು ಪದಕದಂತೆ ಎಂದು ಹೇಳಿದ್ದಾರೆ. ಅಲ್ಲದೆ, ತಮ್ಮ ವಿರುದ್ಧ 100 ಎಫ್‌ಐಆರ್‌ಗಳು ದಾಖಲಾಗುವುದು ತಮ್ಮ ಗುರಿ ಎಂದೂ ಅವರು ಹೇಳಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ವಿರುದ್ಧವೂ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದರು. ಅವರ ಕಾರ್ಯವೈಖರಿ ಹಾಗೂ ಅಧೀನ ಅಧಿಕಾರಿಗಳೊಂದಿಗಿನ ಭಿನ್ನಮತದ ಕುರಿತು ಪ್ರತಿಪಕ್ಷಗಳು ಪ್ರಶ್ನೆಗಳನ್ನು ಎತ್ತುತ್ತಿರುವ ಹಿನ್ನೆಲೆಯಲ್ಲಿ ರಾಹುಲ್, ಕುಮಾರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ದೆಹಲಿಯ ಜಂತರ್ ಮಂತರ್‌ನಲ್ಲಿ ದಿಢೀರ್ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ ಅವರು, ಜ್ಞಾನೇಶ್ ಕುಮಾರ್ ಅವರನ್ನು ‘ಅಕ್ರಮ ಚುನಾವಣಾ ಆಯೋಗದ ಮುಖ್ಯಸ್ಥ’ ಎಂದು ಆರೋಪಿಸಿದರು.
“ನಾವು ಜಂತರ್ ಮಂತರ್‌ಗೆ ತೆರಳಿ ಒಟ್ಟಾಗಿ ಕುಳಿತು, ಕುಮಾರ್ ಈ ದೇಶದ ಕಾನೂನುಬದ್ಧ ಚುನಾವಣಾ ಆಯುಕ್ತರಲ್ಲ ಎಂಬುದನ್ನು ದೇಶಕ್ಕೆ ತಿಳಿಸುತ್ತೇವೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧವೂ ಅವರು ಆರೋಪಗಳನ್ನು ಮಾಡಿದರು. ಈ ಮೂವರು ಜ್ಞಾನೇಶ್ ಕುಮಾರ್ ಅವರೊಂದಿಗೆ ಸೇರಿ ದೇಶದ ಪ್ರಜಾಪ್ರಭುತ್ವವನ್ನು ನಾಶಗೊಳಿಸಿದ್ದಾರೆ ಎಂದು ರಾಹುಲ್ ಗಾಂಧಿ ದೂರಿದರು.
ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳ ಕುರಿತು ಮಾತನಾಡಿದ ಅವರು, “ನನ್ನ ವಿರುದ್ಧ 45 ಎಫ್‌ಐಆರ್‌ಗಳಿವೆ. 100 ಎಫ್‌ಐಆರ್‌ಗಳನ್ನು ಹೊಂದುವುದು ನನ್ನ ಗುರಿ. ಪ್ರತಿಯೊಂದು ಎಫ್‌ಐಆರ್ ನನಗೆ ಪದಕವಿದ್ದಂತೆ” ಎಂದು ಹೇಳಿದರು.
ಇದೇ ವೇಳೆ, ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಪಕ್ಷಗಳ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ಮಂಗಳವಾರ ಪ್ರತಿಪಕ್ಷಗಳ ನಾಯಕರು ದಿನವಿಡೀ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪೊಲೀಸರು ರಾಹುಲ್ ಗಾಂಧಿ ಅವರನ್ನು ವಶಕ್ಕೆ ಪಡೆದಿದ್ದರು. ಚುನಾವಣಾ ಆಯುಕ್ತರು ರಾಜೀನಾಮೆ ನೀಡುವವರೆಗೆ ಹೋರಾಟ ಮುಂದುವರಿಸುವುದಾಗಿ ಕಾಂಗ್ರೆಸ್ ತಿಳಿಸಿದೆ.
ಮತ್ತೊಂದೆಡೆ, ‘ಮತ ಕಳವು’ ಆರೋಪಕ್ಕೆ ಸಂಬಂಧಿಸಿ ದೆಹಲಿ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಪ್ರತಿಭಟನಾ ಜಾಥಾ ನಡೆಸಲು ಮುಂದಾದ ಆಮ್ ಆದ್ಮಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬ್ಯಾರಿಕೇಡ್‌ಗಳ ಮೂಲಕ ತಡೆದರು.
-
Uncategorized15 hours ago
Naana Paatekar No More : ವ್ಯವಸ್ಥೆಯ ವಿರುದ್ಧದ ಧ್ವನಿಗೆ ರೂಪ ನೀಡಿದ, ತನ್ನ ಡೈಲಾಗ್ ನಿಂದಲೇ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿದ್ದ ಅಭಿಜಾತ ಕಲಾವಿದ ನಾನಾಪಾಟೇಕರ್ ಇನ್ನಿಲ್ಲ
-
ಬಿಗ್ ನ್ಯೂಸ್10 hours agoSting Operation | ಸ್ಟಿಂಗ್ ಆಪರೇಷನ್ ಚರ್ಚೆ: ಪುತ್ತೂರಿಗೂ ವ್ಯಾಪಿಸಿದೆಯೇ ರಾಜಕೀಯದ ‘ಸ್ಟಿಂಗ್’ ಸದ್ದು..?
-
ಮಂಗಳೂರು13 hours agoMangalore-ರಿಕ್ಷಾದಲ್ಲಿ ಬಿಟ್ಟುಹೋದ 48 ಗ್ರಾಂ ಚಿನ್ನದ ನೆಕ್ಲೇಸ್ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದ ಚಾಲಕ
-
Uncategorized14 hours agoAshok Rai-ಬದ್ಯಾರ್ನಲ್ಲಿ 50 ವರ್ಷದ ರಸ್ತೆ ವಿವಾದಕ್ಕೆ ತೆರೆ ಎಳೆದ ಶಾಸಕ ಅಶೋಕ್ ರೈ
-
ನಿಧನ ವಾರ್ತೆ14 hours agoBeltangadi-ಬೆಳ್ತಂಗಡಿ: ಅಡಿಕೆ ಕೊಯ್ಯುವ ವೇಳೆ ವಿದ್ಯುತ್ ತಂತಿಗೆ ದೋಟಿ ತಾಗಿ ವ್ಯಕ್ತಿ ಸಾವು
-
ಅಪರಾಧ14 hours agoUppinangadi-ಉಪ್ಪಿನಂಗಡಿ: ತೋಟದ ಕೆಲಸಕ್ಕೆ ಬರುತ್ತೇನೆಂದು ಹಣ ಪಡೆದು ನಾಪತ್ತೆ
-
ನಿಧನ ವಾರ್ತೆ13 hours agoAccident-ಮೂಡುಬಿದಿರೆ: ಸ್ಕೂಟರ್ ನಿಯಂತ್ರಣ ತಪ್ಪಿ ಬಿದ್ದು ಕಾಲೇಜು ವಿದ್ಯಾರ್ಥಿ ಸಾವು
-
ಬಿಗ್ ನ್ಯೂಸ್14 hours agoHalf helmet-ಕರ್ನಾಟಕದಲ್ಲಿ ಹಾಫ್ ಹೆಲ್ಮೆಟ್ ಸಂಪೂರ್ಣ ನಿಷೇಧ


















