ರಾಜಕೀಯ
Ashok Rai-ಕೊಟ್ಟ ಮಾತನ್ನು ತಪ್ಪಲಾರೆ ಮನೆಮನೆಗೆ ಹಕ್ಕು ಪತ್ರ ವಿತರಣೆ ಮಾಡಿಯೇ ಸಿದ್ದ: ಶಾಸಕ ಅಶೋಕ್ ರೈ
ಪುತ್ತೂರು: ಚುನಾವಣಾ ಪ್ರಚಾರದ ವೇಳೆ ನನ್ನ ಕ್ಷೇತ್ರದ ಜನರಿಗೆ ಕೊಟ್ಟ ಮಾತನ್ನು ಎಂದುತಪ್ಪಲಾರೆ ಗ್ರಾಮದಪ್ರತೀ ಮನೆ ಮನೆಗೂ ಹಕ್ಕು ಪತ್ರ ತಲುಪಿಸುವ ಕೆಲಸವನ್ನು ಮಾಡಿಯೇ ಸಿದ್ದ ಇದರಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ನೆಟ್ಡಣಿಗೆ ಮುಡ್ನೂರು ಗ್ರಾಪಂ ಸಭಾಂಗಣದಲ್ಲಿ ನಡೆದ ಅಕ್ರಮ ಸಕ್ರಮ ಬೈಠಕ್ ಹಾಗೂ ಹಕ್ಕುಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂದು ಅಕ್ರಮ ಸಕ್ರಮ ಹಕ್ಕು ಪತ್ರ ವಿತರಣೆಗೆ ಚಾಲನೆ ನೀಡಲಾಗಿದೆ. ಒಟ್ಟು 13000 ಅರ್ಜಿಗಳು ಇದೆ. ಇವೆಲ್ಲವನ್ನೂ ಹಂತ ಹಂತವಾಗಿ ವಿಲೇವಾರಿ ಮಾಡಿಯೇ ಮಾಡುತ್ತೇವೆ. ನನ್ನ ಅರ್ಜಿ ಏನಾಗಬಹುದೋ ಎಂಬ ಭಯ ಯಾರಿಗೂ ಬೇಡ ಖಂಡಿತವಾಗಿಯೂ ನಿಮಗೆ ಹಕ್ಕುಪತ್ರ ಸಿಕ್ಕೇ ಸಿಗ್ತದೆ ಅನುಮಾನವೇ ಬೇಡ ಎಂದು ಹೇಳಿದರು.
ಅಕ್ರಮ ಸಕ್ರಮ/ 94 ಸಿ ಕೊಡುವುದೇ ನನ್ನ ಮುಖ್ಯ ಉದ್ದೇಶವಾಗಿತ್ತು:
ನಾನು ರಾಜಕೀಯಕ್ಕೆ ಬರುವ ಮೊದಲು ಅಕ್ರಮ ಸಕ್ರಮ ಮತ್ತು 94 ಸಿ ಮತ್ತು ಸಿಸಿ ಇದರಲ್ಲಿನ ಭೃಷ್ಟಾಚಾರತೆಯ ಬಗ್ಗೆ ಗೊತ್ತಿತ್ತು. ನಾನು ಶಾಸಕನಾದರೆ ಇವೆಲ್ಲವನ್ನೂ ಭೃಷ್ಟಾಚಾರವಿಲ್ಲದೆ ವಿಲೇವಾರಿಮಾಡುತ್ತಿದ್ದೆ ,ಬಡವರಿಗೆ ಸಹಾಯ ಮಾಡುತ್ತಿದ್ದೆ ಎಂಬ ಆಸೆ ಇತ್ತು. ಈಗ ನಾನು ಶಾಸಕನಾಗಿದ್ದೇನೆ ಆವತ್ತು ನಾನು ವ್ಯಕ್ತಪಡಿಸಿದ ಆಸೆಯನ್ನು ನಾನೇ ಈಡೇರಿಸಲಿದ್ದೇನೆ. ನಾನು ಎಂದೂ ಭೃಷ್ಟಾಚಾರದ ವಿರುದ್ದವೇ ಇದರಲ್ಲಿ ರಾಜಿಯೇ ಇಲ್ಲ ಎಂದುಶಾಸಕರು ಹೇಳಿದರು.
ಕರ್ನಾಟಕದ ಪ್ರಥಮ ಭೈಠಕ್:
ಇದುವರೆಗೆ ರಾಜ್ಯದಲ್ಲಿ ಎಲ್ಲೂ ಅಕ್ರಮ ಸಕ್ರಮ ಭೈಠಕ್ ನಡೆದಿಲ್ಲ ಮೊದಲ ಬಾರಿಗೆ ಪುತ್ತೂರಿನಲ್ಲಿ ಬೈಠಕ್ ನಡೆದ ಆರಂಭದ ಅಂಗವಾಗಿ 12 ಕಡತಗಳನ್ನು ವಿಲೇವಾರಿ ಮಾಡಲಾಗುತ್ತದೆ. ಕಂದಾಯ ಸಚಿವರ ಬಳಿ ಒತ್ತಡ ತಂದು ಈ ಕಾರ್ಯವನ್ನು ಮಾಡುತ್ತಿದ್ದೇನೆ. 94 ಸಿ ಹಕ್ಕು ಪತ್ರ ಅರ್ಜಿ ಹಾಕಿದ ಎಲ್ಲರಿಗೂ ದೊರೆಯಲಿದೆ ಎಂದು ಹೇಳಿದರು.
ಒಟ್ಟು19 ಮಂದಿಗೆ 94 ಸಿ ಹಕ್ಕು ಪತ್ರವನ್ನು ವಿತರಣೆ ಮಾಡುತ್ತಿದ್ದೇವೆ ಎಂದು ಶಾಸಕರು ತಿಳಿಸಿದ್ದು ಇದುವರೆಗೆ ಒಟ್ಡು 2400 ಹಕ್ಕು ಪತ್ರ ವಿತರಣೆ ನಡೆದಿದೆ ಎಂದು ಶಾಸಕರು ಹೇಳಿದರು.
ತಹಶಿಲ್ದಾರನ್ನು ನಾನೇ ಕರೆಸಿದ್ದು:
ಈಗಿನ ತಹಶಿಲ್ದಾರನ್ನು ನಮಗೆ ಕೊಡಿಎಂದು ಕಂದಾಯಸಚಿವರ ಬಳಿ ಒತ್ತಡ ತಂದು ಕರೆಸಿದ್ದೇನೆ. ಇವರು ತಹಶಿಲ್ದಾರ್ ಆಗಿದ್ದ ವೇಳೆ 28000 ಅಕ್ರಮ ಸಕ್ರಮ ಕಡತವನ್ನು ವಿಲೇವಾರಿ ಮಾಡಿದ್ದರು ಅದಕ್ಕಾಗಿ ಅವರನ್ನು ಕರೆಸಿದ್ದೇನೆ.ಮುಂದೆ ಅವರು ಪುತ್ತೂರು ತಾಲೂಕಿನಲ್ಲಿ ಬಾಕಿ ಇರುವ ಎಲ್ಲಾ ಕಡತಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಲಿದ್ದಾರೆ ಎಂದು ಹೇಳಿದರು.
ರಾಜಕೀಯ ಮಾಡಲ್ಲ:
ಅಕ್ರಮ ಸಕ್ರಮ 94 ಸಿ ಹಕ್ಕು ಪತ್ರ ವಿತರಣೆ ಮಾಡುವಾಗ ರಾಜಕೀಯ ಮಾಡಲ್ಲ ಅದರ ಅಗತ್ಯವೂ ನನಗಿಲ್ಲ. ನಾನು ಶಾಸಕನಾದ ಮೇಲೆ ರಾಜಧರ್ಮ ಪಾಲಿಸಬೇಕು ,ರಾಜಧರ್ಮ ಪಾಲನೆ ಮಾಡದವರಾದರೆ ಜನಪ್ರತಿನಿಧಿಯಾಗಿ ಅರ್ಥವಿಲ್ಲ. ಅರ್ಹ ಎಲ್ಲರಿಗೂ ಹಕ್ಕು ಪತ್ರ ಕೊಡುವುದೇ ನನ್ನ ಉದ್ದೇಶವಾಗಿದೆ ಎಂದು ಹೇಳಿದರು.
ಲಂಚ ತಗೊಂಡ್ರೆ ಹೇಳಿ
ಅಕ್ರಮ ಸಕ್ರಮ ಫೈಲು ವಿಲೇವಾರಿಮಾಡುವಾಗ ಯಾರಾದ್ರು ಲಂಚ ಕೇಳಿದ್ರೆ ತಕ್ಷಣ ನನ್ನಗಮನಕ್ಕೆ ತನ್ನಿ .ಯಾವುದೇ ಮುಲಾಜಿಲ್ಲದೆ ಕ್ರಮಕೈಗೊಳ್ಳುತ್ತೇನೆ ಎಂದು ಶಾಸಕರು ತಿಳಿಸಿದರು.
ವೋಟು ಹಾಕಲು ಮರೆಯಬೇಡಿ
ಬಹಳ ಕಷ್ಟಪಟ್ಟುಸರಕಾರದಮೇಲೆ ಒತ್ತಡ ತಂದು ನಾನು ನನ್ನ ಕ್ಷೇತ್ರದ ಜನರಕಷ್ಟಗಳಿಗೆ ಸ್ಪಂದನೆ ನೀಡಿದ್ದೇನೆ. ನಾನು ಯಾವುದೇ ಭೃಷ್ಟಾಚಾರಿಯಲ್ಲ, ಈ ಹಿಂದೆ ಅಕ್ರಮ ಸಕ್ರಮದಲ್ಲಿ ಏನೆಲ್ಲಾ ನಡೆಯುತ್ತಿತ್ತು ಈ ಬಾರಿ ಅದು ಇದು ನಡೆಯುವುದಿಲ್ಲ, ಅದೂ ಇದುಮಾಡಲು ಬಿಡುವುದೇ ಇಲ್ಲ.ನನಗೆ ಒಂದು ವೋಟು ಕೊಟ್ಟು ಕೃತಜ್ಞತೆ ಸಲ್ಲಿಸಿ ಎಂದುಶಾಸಕರು ಮನವಿಮಾಡಿದರು.
ತಹಶಿಲ್ದಾರ್ ಪುರಂದರ್ ರವರು ಮಾತನಾಡಿಕರ್ನಾಟಕದಲ್ಲೇ ಮೊದಲ ಅಕ್ರಮಸಕ್ರಮ ಬೈಠಕ್ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಆರಂಭವಾಗಿದೆ.
ಕೃಷಿಗಾಗಿ ಸರಕಾರನೀಡಿರುವ ಭೂಮಿಯನ್ನು ಸಕ್ರಮ ಮಾಡುವುದು ಬೈಟಕ್ ಉದ್ದೇಶವಾಗಿದೆ. ಈ ಬಾರಿ ಆನ್ ಲೈನ್ ಮೂಲಕ ಅರ್ಜಿ ವಿಲೇವಾರಿ ಮಾಡಲಾಗುತ್ತದೆ. ಪಾರದರ್ಶಕವಾಗಿ ಇಲ್ಲಿ ಎಲ್ಲವೂ ನಡೆಯುತ್ತಿದೆ. ಅಕ್ರಮ ಸಕ್ರಮದಲ್ಲಿ ಅಕ್ರಮಕ್ಕೆ ಯಾವುದೇ ಅವಕಾಶವಿಲ್ಲ.
12 ಕಡತಗಳುಆರಂಭದಲ್ಲಿ ನೀಡಲಾಗುತ್ತದೆ.13000 ಅರ್ಜಿಗಳು ಬಾಕಿ ಇದೆ. ಅಕ್ರಮಸಕ್ರಮ ಮಂಜೂರಾದ ಬಳಿಕ ಹಕ್ಕು ಪತ್ರ ನೀಡಲಾಗುತ್ತದೆ ಆ ಬಳಿಕ ಫ್ಲಾಟಿಂಗ್ ನಂತರ ಆರ್ ಟಿ ಸಿ ನೀಡಲಾಗುತ್ತದೆ. ಅರ್ಹ ಪ್ರಕರಣಗಳನ್ನು ಇತ್ಯರ್ಥ ಮಾಡಲು ಮಾತ್ರ ಅವಕಾಶವಿದೆ. 94 ಸಿ ಹಕ್ಕು ಪತ್ರವನ್ನು ನೀಡಲಾಗುತ್ತದೆ ಎಂದು ಹೇಳಿದರು
ಅಕ್ರಮ ಸಕ್ರಮಕ್ಕೆ ಹೊಸ ಆ್ಯಪ್; ಇದು ಬಿಜೆಪಿ ಸರಕಾರದ ಕೊಡುಗೆ
ಇಷ್ಟು ವರ್ಷಗಳಲ್ಲಿ ಅಕ್ರಮ ಸಕ್ರಮ ಕಡತಗಳು ಮ್ಯಾನುವಲ್ ಆಗಿಯೇ ಮಾಡಲಾಗುತ್ತಿತ್ತು ಇದನ್ನು ಕಳೆದ ಅವಧಿಯ ಬಿಜೆಪಿ ಸರಕಾರ ಅ್ಯಾಪ್ ಜಾರಿಗೆ ತಂದಿದ್ದು ಅದರಮೂಲಕ ಅಕ್ರಮ ಸಕ್ರಮ ಸಿಟ್ಟಿಂಗ್ ನಡೆಸಲಾಗುತ್ತದೆ. ಹೊಸ ಅ್ಯಾಪ್ ನಿಂದ ಜನರಿಗೆ ತೊಂದರೆಯಾಗುತ್ತದೆಯಾದರೂ ಸರಕಾರಿಭೂಮಿಯನ್ನು ಉಳಿಸಿಕೊಳ್ಳುವ ನಿಟ್ಡಿನಲ್ಲೂ ಈ ಕಾನೂನು ಸಹಕಾರಿಯಾಗಲಿದೆ ಎಂದಜಸಮಿತಿಸದಸ್ಯ ಮಹಮದ್ ಬಡಗನ್ನೂರು ಹೇಳಿದರು.
ಹೊಸ ಅ್ಯಾಪ್ ಮೂಲಕ ಅಕ್ರಮ ಸಕ್ರಮ ಕಡತಗಳನ್ನು ವಿಲೇವಾರಿಮಾಡಲು ತುಂಬಾ ಕಷ್ಡ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ.ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಕರ್ನಾಟಕದಲ್ಲೇ ಪ್ರಥಮ ಬಾರಿಗೆ ಇಂದು ಪುತ್ತೂರು ಕ್ಷೇತ್ರದಲ್ಲಿ ಅಕ್ರಮಸಕ್ರಮ ಬೈಠಕ್ ನಡೆಯುತ್ತಿರುವುದು ಶಾಸಕರ ಅಭಿವೃದ್ದಿ ಕಾಳಜಿಗೆ ಸಾಕ್ಷಿಯಾಗಿದೆ. ಇರುವ ಎಲ್ಲಾಅರ್ಜಿಗಳು ವಿಲೇವಾರಿಯಾಗಬೇಕು ಎಂಬುದು ಶಾಸಕರ ಉದ್ದೇಶವಾಗಿದೆ. ಮುಂದೆ ಹಂತ ಹಂತವಾಗಿ ಬೈಠಕ್ ಪ್ರತೀ ಗ್ರಾಮದಲ್ಲೂ ನಡೆಯಲಿದೆ ಎಂದು ಹೇಳಿದರು.
ನೆಟ್ಡಣಿಗೆ ಮುಡ್ನೂರು ಗ್ರಾಪಂ ಅಧ್ಯಕ್ಷೆ ಫೌಝಿಯಾ ರವರು ಮಾತನಾಡಿ ಅಕ್ರಮ ಸಕ್ರಮ ಬೈಠಕ್ ಒಳ್ಳೆಯ ಯೋಜನೆಯಾಗಿದೆ . ಸರಕಾರಜನ ಪರ ಇದೆ ಮತ್ತು ಶಾಸಕರು ಬಡವರ ಎಂಬುದಕ್ಕೆ ಇಂಥಹ ಯೋಜನೆಗಳೇ ಸಾಕ್ಷಿಯಾಗಿದೆ ಎಂದು ಹೇಳಿದರು.
ಸ್ವಾಗತ: ಗ್ರಾಪಂ ಆಡಳಿತಾಧಿಕಾರಿ ರಾಧಾಕೃಷ್ಣ, ವೇದಿಕೆಯಲ್ಲಿ ಶಾಸಕರಾದ ಅಶೋಕ್ ರೈ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು, ರಾಮಣ್ಣ ಪಿಲಿಂಜ, ರೂಪರೇಖ ಆಳ್ವ, ಗ್ರಾಪಂ ಅಧ್ಯಕ್ಷೆ ಫೌಝಿಯಾ, ಉಪಾಧ್ಯಕ್ಷ ರಾಮಕೆ ಮೇನಾಲ ಉಪಸ್ಥಿತರಿದ್ದರು.
ರಾಜಕೀಯ
Vijayendra-ಚುನಾವಣೆ ನಡೆದರೆ ಕಾಂಗ್ರೆಸ್‌ನ 25 ಶಾಸಕರು ಬಿಜೆಪಿ ಸೇರುವ ಸಾಧ್ಯತೆ-ವಿಜಯೇಂದ್ರ
ರಾಜ್ಯದಲ್ಲಿ ಯಾವುದೇ ಕ್ಷಣದಲ್ಲಿ ವಿಧಾನಸಭೆ ಚುನಾವಣೆ ನಡೆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದ ಸದಸ್ಯರು ಸೇರಿದಂತೆ ಕಾಂಗ್ರೆಸ್‌ನ 25 ಶಾಸಕರು ಪಕ್ಷ ತೊರೆದು ಬಿಜೆಪಿಗೆ ಸೇರುವ ಸಾಧ್ಯತೆಯಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಯಾವುದೇ ಕ್ಷಣದಲ್ಲಿ ವಿಧಾನಸಭೆ ಚುನಾವಣೆ ನಡೆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದ ಸದಸ್ಯರು ಸೇರಿದಂತೆ ಕಾಂಗ್ರೆಸ್‌ನ 25 ಶಾಸಕರು ಪಕ್ಷ ತೊರೆದು ಬಿಜೆಪಿಗೆ ಸೇರುವ ಸಾಧ್ಯತೆಯಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಶಂಭುಲಿಂಗೇಗೌಡ ಹಲಗೇರಿ ನೇತೃತ್ವದಲ್ಲಿ ನಿವೃತ್ತ ಶಿಕ್ಷಕರು ಬಿಜೆಪಿಗೆ ಸೇರ್ಪಡೆಯಾದ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯೇಂದ್ರ, ರಾಜ್ಯದ ರಾಜಕೀಯ ವಾತಾವರಣ ಬದಲಾಗುತ್ತಿದೆ ಎಂದು ಹೇಳಿದರು.
ಕಳೆದ ಚುನಾವಣೆಯಲ್ಲಿ ಜನರು ಕಾಂಗ್ರೆಸ್‌ಗೆ ಬಹುಮತ ನೀಡಿದ್ದರೂ, ಮುಂದಿನ ಚುನಾವಣೆಯಲ್ಲಿ ಇದೇ ಪರಿಸ್ಥಿತಿ ಮರುಕಳಿಸುವುದಿಲ್ಲ. ರಾಹುಲ್ ಗಾಂಧಿ ಅವರ ನಾಯಕತ್ವದಿಂದ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಇನ್ನಷ್ಟು ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸರ್ಕಾರ ಆರ್ಥಿಕ ದಿವಾಳಿಯತ್ತ ಸಾಗುತ್ತಿದೆ: ವಿಜಯೇಂದ್ರ
ರಾಜ್ಯದಲ್ಲಿ ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದರೂ ಘೋಷಿಸಿದ ಪರಿಹಾರವನ್ನು ಸಮರ್ಪಕವಾಗಿ ನೀಡಿಲ್ಲ ಎಂದು ವಿಜಯೇಂದ್ರ ಆರೋಪಿಸಿದರು. ರೈತರಿಗೆ ಪರಿಹಾರ ಒದಗಿಸಲು ಸಾಧ್ಯವಾಗದ ಸರ್ಕಾರ, ಸ್ಟಿಂಗ್ ಆಪರೇಷನ್ ವಿಚಾರವನ್ನು ಮುನ್ನೆಲೆಗೆ ತಂದು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂದು ಟೀಕಿಸಿದರು.
ರಾಜ್ಯ ಆರ್ಥಿಕ ದಿವಾಳಿಯತ್ತ ಸಾಗುತ್ತಿದೆ. ಆದರೆ, ಈ ವಾಸ್ತವವನ್ನು ಒಪ್ಪಿಕೊಳ್ಳುವ ಧೈರ್ಯ ಮುಖ್ಯಮಂತ್ರಿ ಮತ್ತು ಸರ್ಕಾರಕ್ಕಿಲ್ಲ. ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದೇ ರಾಜ್ಯ ಸರ್ಕಾರದ ಕೆಲಸವಾಗಿದೆ ಎಂದು ದೂರಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ಮನೆ ಕಳೆದುಕೊಂಡವರಿಗೆ ₹5 ಲಕ್ಷ ಪರಿಹಾರ ಹಾಗೂ ಮನೆ ಬಳಕೆಯ ಪಾತ್ರೆಗಳಿಗೆ ₹10 ಸಾವಿರ ನೀಡಲಾಗಿತ್ತು ಎಂದು ಅವರು ಸ್ಮರಿಸಿದರು.
ತೈಲ ಕಂಪನಿಗಳಿಗೆ ಬಾಕಿ ಪಾವತಿಸದ ಕಾರಣ ಸಾರಿಗೆ ಬಸ್‌ಗಳು ಡಿಪೊಗಳಲ್ಲೇ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದ ವಿಜಯೇಂದ್ರ, ಹಣಕಾಸಿನ ಸಮಸ್ಯೆಯ ನಡುವೆಯೂ ತಾಲೂಕುಗಳಲ್ಲಿ ರಿಂಗ್ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವ ಸರ್ಕಾರದ ಉದ್ದೇಶದ ಬಗ್ಗೆಯೂ ಪ್ರಶ್ನೆ ಎತ್ತಿದರು. ಈ ಯೋಜನೆಗಳ ಮೂಲಕ ರಿಯಲ್ ಎಸ್ಟೇಟ್ ವ್ಯವಹಾರ ನಡೆಸಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ವಿರುದ್ಧ ಅರಾಜಕತೆ ಆರೋಪ
ಎಸ್‌ಐಆರ್ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿರುವಾಗ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಭೇಟಿ ಮಾಡಲು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಮನವಿ ಮಾಡಿರುವುದು ಸರಿಯಲ್ಲ ಎಂದು ವಿಜಯೇಂದ್ರ ಟೀಕಿಸಿದರು.
ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ನಡೆದ ಘಟನೆಗಳ ಮಾದರಿಯಲ್ಲಿ ಭಾರತದಲ್ಲಿಯೂ ಅರಾಜಕತೆ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗಳು ಆತಂಕಕಾರಿ ಎಂದು ಹೇಳಿದರು.
ಕಾಂಗ್ರೆಸ್‌ಗೆ ಜನರ ವಿಶ್ವಾಸ ಗಳಿಸಿ ಅಧಿಕಾರಕ್ಕೆ ಬರುವ ಸಾಮರ್ಥ್ಯವಿದ್ದರೆ ಅದನ್ನು ಸಾಧಿಸಲಿ. ಸುಳ್ಳುಗಳನ್ನು ಪದೇಪದೆ ಹೇಳಿ ಗೊಂದಲ ಸೃಷ್ಟಿಸುವುದರಿಂದ ಯಾವುದೇ ಸಾಧನೆ ಸಾಧ್ಯವಿಲ್ಲ ಎಂದು ಟೀಕಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಗೋವಿಂದ ಕಾರಜೋಳ, ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಸಚಿವ ರೇಣುಕಾಚಾರ್ಯ ಹಾಗೂ ಎನ್. ರವಿಕುಮಾರ್ ಉಪಸ್ಥಿತರಿದ್ದರು.
ರಾಜಕೀಯ
Siddaramaiah-ವಿಡಿಯೋ ಮೂಲಕ ತೇಜೋವಧೆ ಆರೋಪ; ಸೈಬರ್ ಕ್ರೈಂ ಪೊಲೀಸರಿಗೆ ಸಿದ್ದರಾಮಯ್ಯ ದೂರು
ತಮ್ಮ ವಿರುದ್ಧ ಉದ್ದೇಶಪೂರ್ವಕವಾಗಿ ವಿಡಿಯೋಗಳನ್ನು ಸೃಷ್ಟಿಸಿ, ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರು: ತಮ್ಮ ವಿರುದ್ಧ ಉದ್ದೇಶಪೂರ್ವಕವಾಗಿ ವಿಡಿಯೋಗಳನ್ನು ಸೃಷ್ಟಿಸಿ, ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಿದ್ದರಾಮಯ್ಯ ಅವರು ತಮ್ಮ ಆಪ್ತರ ಮೂಲಕ ದೂರು ಸಲ್ಲಿಸಿದ್ದು, ಈ ಸಂಬಂಧ ಈಗಾಗಲೇ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.
ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ತಮ್ಮ ಕುರಿತ ವಿಡಿಯೋವನ್ನು ಸೃಷ್ಟಿಸಿ ಪ್ರಸಾರ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಉದ್ದೇಶಪೂರ್ವಕವಾಗಿ ವಿಡಿಯೋಗಳನ್ನು ಸಿದ್ಧಪಡಿಸಿ, ಅವುಗಳನ್ನು ಹರಡುವ ಮೂಲಕ ತಮ್ಮ ತೇಜೋವಧೆ ಮಾಡಲು ಸಂಚು ರೂಪಿಸಲಾಗಿದೆ ಎಂದು ಸಿದ್ದರಾಮಯ್ಯ ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಸ್ಪಿಂಗ್ ಆಪರೇಷನ್‌ಗೆ ತಡೆಯಾಜ್ಞೆ ಕೋರಿ ಅರ್ಜಿ
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ಸಿಸಿಎಚ್-18ನೇ ನ್ಯಾಯಾಲಯದಲ್ಲಿ ‘ಸ್ಪಿಂಗ್ ಆಪರೇಷನ್’ಗೆ ಸಂಬಂಧಿಸಿ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ಕುರಿತು ನ್ಯಾಯಾಲಯ ನಾಳೆ ಆದೇಶ ಪ್ರಕಟಿಸಲಿದೆ ಎಂದು ತಿಳಿದುಬಂದಿದೆ.
ರಾಜಕೀಯ
Sudha Yadav-ಆರು ರಾಜ್ಯಗಳಿಗೆ ರಾಜ್ಯಪಾಲರ ಬದಲಾವಣೆ: ಕರ್ನಾಟಕಕ್ಕೆ ನೂತನ ರಾಜ್ಯಪಾಲರಾಗಿ ಸುಧಾ ಯಾದವ್
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ನಾಟಕ ಸೇರಿದಂತೆ ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿದ್ದಾರೆ. ಸುಧಾ ಯಾದವ್ ಅವರನ್ನು ಕರ್ನಾಟಕದ ನೂತನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.
ಹೊಸದಿಲ್ಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ನಾಟಕ ಸೇರಿದಂತೆ ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿದ್ದಾರೆ.
ಸುಧಾ ಯಾದವ್ ಅವರನ್ನು ಕರ್ನಾಟಕದ ನೂತನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಸಿಕ್ಕಿಂ ರಾಜ್ಯಪಾಲರಾಗಿದ್ದ ಓಂ ಪ್ರಕಾಶ್ ಮಾಥುರ್ ಅವರನ್ನು ಕೇರಳದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಕೇರಳದ ರಾಜ್ಯಪಾಲರಾಗಿದ್ದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರಿಗೆ ತಮಿಳುನಾಡಿನ ರಾಜ್ಯಪಾಲರ ಜವಾಬ್ದಾರಿ ನೀಡಲಾಗಿದೆ.
ಇತರ ನೇಮಕಾತಿಗಳ ವಿವರ ಹೀಗಿದೆ:
ಒಡಿಶಾ: ಬ್ರಜ್ ಮೋಹನ್ ರಾಮ್
ಉತ್ತರಾಖಂಡ: ಧಲ್ ಸಿಂಗ್ ಬಿಸೇನ್
ಸಿಕ್ಕಿಂ: ದುಷ್ಯಂತ್ ಗೌತಮ್
ಈ ನೇಮಕಾತಿಗಳೊಂದಿಗೆ ಆರು ರಾಜ್ಯಗಳ ರಾಜ್ಯಪಾಲರ ಹುದ್ದೆಗಳಲ್ಲಿ ಬದಲಾವಣೆಗಳಾಗಿವೆ.
-
ಮಂಗಳೂರು21 hours agoMangalore-ಮಂಗಳೂರು: ಅನೈತಿಕ ಸಂಬಂಧ ಶಂಕೆ; ಪತ್ನಿಯನ್ನು ಚೂರಿಯಿಂದ ಇರಿದು ಕೊಂದ ಪತಿ
-
ಬಿಗ್ ನ್ಯೂಸ್22 hours agoGolithottu-ಗೋಳಿತ್ತೊಟ್ಟು: ತೋಡಿನ ನೀರಿನಲ್ಲಿ ಮೀನುಗಳ ಮಾರಣಹೋಮ; ತನಿಖೆಗೆ ಸ್ಥಳೀಯರ ಆಗ್ರಹ
-
Uncategorized17 hours ago
Digitel Arrest ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಪುತ್ತೂರಿನ ವ್ಯಕ್ತಿಗೆ ₹1.31 ಕೋಟಿ ವಂಚನೆ
-
ಮಂಗಳೂರು22 hours agoABVP protest-ಮಂಗಳೂರಿನ ಆಗ್ನೆಸ್ ಕಾಲೇಜಿನಲ್ಲಿ ದಸರಾ ರಜೆಯಲ್ಲೂ ಪರೀಕ್ಷೆ; ಎಬಿವಿಪಿ ಪ್ರತಿಭಟನೆ ವೇಳೆ ನೂಕಾಟ; ವಿದ್ಯಾರ್ಥಿನಿಯರನ್ನು ತಳ್ಳಿದ ಪೊಲೀಸರ ವಿರುದ್ಧ ಆಕ್ರೋಶ
-
ನಿಧನ ವಾರ್ತೆ3 hours agoSullia-Big Breaking: ಸುಳ್ಯ: ವಿದ್ಯುತ್ ಶಾಕ್ಗೆ ಇಬ್ಬರು ಯುವಕರು ಬಲಿ; ಬಾಲಕನಿಗೆ ಗಾಯ
-
ಕ್ರೀಡೆ21 hours agoMCC:ಎಂಸಿಸಿಯಿಂದ ಕ್ರಿಕೆಟ್ ನಿಯಮಗಳ ಪರಿಷ್ಕರಣೆ: ಅ.1ರಿಂದ ಹೊಸ ಬದಲಾವಣೆಗಳು ಜಾರಿ
-
ನಿಧನ ವಾರ್ತೆ24 hours agoNana Patekar-ನಟ ನಾನಾ ಪಾಟೇಕರ್ ಸಾವು: ಮರಣೋತ್ತರ ಪರೀಕ್ಷೆಯಲ್ಲಿ ಹೃದಯಾಘಾತ ದೃಢ
-
ಮಂಗಳೂರು21 hours agoMangalore Dasara-ಮಂಗಳೂರು ದಸರಾಕ್ಕೆ ಚಾಲನೆ: ಸಿಎಂ ಆಗಮನ ಮುಂದೂಡಿಕೆ


















