ಸ್ಥಳೀಯ
Pen Drive case-ಪೆನ್ಡ್ರೈವ್ ಪ್ರಕರಣ ಬಿಗ್ ಟ್ವಿಸ್ಟ್ : ಬಂಧನ ಭೀತಿಯಲ್ಲಿ ಹೆಚ್.ಡಿ. ರೇವಣ್ಣ – ಪ್ರಜ್ವಲ್ ವಿರುದ್ದ ಅತ್ಯಾಚಾರ ಪ್ರಕರಣ
ಮೈಸೂರು: ಪ್ರಜ್ವಲ್ ರೇವಣ್ಣನ ಪೆನ್ಡ್ರೈವ್ ಪ್ರಕರಣ ಬೆಳಕಿಗೆ ಬಂದ ಬಳಿಕ ಅಪ್ಪ ಎಚ್.ಡಿ. ರೇವಣ್ಣನ ಮೇಲೂ ಸಂಕಷ್ಟ ಹೆಚ್ಚಾಗಿದ್ದು ಬಂಧನದ ಭೀತಿ ತಲೆ ದೋರಿದೆ. ಪೆನ್ಡ್ರೈವ್ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ (H.D Revanna) ವಿರುದ್ಧ ಇದೀಗ ಅಪಹರಣ ಪ್ರಕರಣ ದಾಖಲಾಗಿದೆ.
ಮೈಸೂರು ಜಿಲ್ಲೆ ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಮಗನಿಂದ ರೇವಣ್ಣ ವಿರುದ್ಧ ದೂರು ದಾಖಲಿಸಲಾಗಿದೆ. ಹೀಗಾಗಿ ಇದೀಗ ರೇವಣ್ಣ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇನ್ನೂ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಹೊಸದಾಗಿ ‘ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದ’ ಆರೋಪದಡಿ ಅತ್ಯಾಚಾರ (ಐಪಿಸಿ 376) ಪ್ರಕರಣ ದಾಖಲಾಗಿದೆ.
ಮನೆ ಕೆಲಸದ ಮಹಿಳೆ ಹಾಗೂ ಅವರ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಹಾಗೂ ಪ್ರಜ್ವಲ್ ವಿರುದ್ಧ ಹೊಳೆನರಸೀಪುರ ಟೌನ್ ಠಾಣೆಯಲ್ಲಿ ಏ. 28ರಂದು ಎಫ್ಐಆರ್ ದಾಖಲಾಗಿತ್ತು. ಹಾಸನದ ಸಂತ್ರಸ್ತೆಯೊಬ್ಬರು ಪ್ರತ್ಯೇಕ ದೂರು ನೀಡಿದ್ದಾರೆ. ತಮ್ಮ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿದ್ದು, ಎಸ್ಐಟಿ ಅಧಿಕಾರಿಗಳು ಚಾಲ್ತಿಯಲ್ಲಿರುವ ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 376 ಸೇರ್ಪಡೆ ಮಾಡಿಕೊಂಡು ತನಿಖೆ ಮುಂದುವರಿಸಿದ್ದಾರೆ.
‘ಮೊದಲ ಪ್ರಕರಣದಲ್ಲಿ ರೇವಣ್ಣ ಹಾಗೂ ಪ್ರಜ್ವಲ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪವಿತ್ತು. ಇದೀಗ, ಪ್ರಜ್ವಲ್ ವಿರುದ್ಧ ಮಾತ್ರ ಅತ್ಯಾಚಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಎಸ್ಐಟಿ ಮೂಲಗಳು ಹೇಳಿವೆ.
ಈ ಬೆಳವಣಿಗೆಗಳ ಮಧ್ಯೆಯೇ, ಬಂಧನದ ಭೀತಿಯಲ್ಲಿರುವ ಶಾಸಕ ರೇವಣ್ಣ, ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಜರ್ಮನಿಯಲ್ಲಿ ಇದ್ದಾರೆ ಎನ್ನಲಾಗಿದ್ದ ಪ್ರಜ್ವಲ್, ದುಬೈಗೆ ಸ್ಥಳಾಂತರ ಗೊಂಡಿದ್ದು, ಅವರ ಪತ್ತೆಗೆ ಎಸ್ಐಟಿ ಬಲೆ ಬೀಸಿದೆ.
ಎಸ್ಐಟಿ ತಂಡ ಪ್ರಕರಣದ ಸಂತ್ರಸ್ತೆಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿತ್ತು. ಸಿಆರ್ಪಿಸಿ 164 ಅನ್ವಯ ನ್ಯಾಯಾಧೀಶರ ಸಮ್ಮುಖದಲ್ಲಿ ಸಂತ್ರಸ್ತೆ ಹೇಳಿಕೆ ದಾಖಲಿಸಿದ್ದಾರೆ. ಗೌಪ್ಯವಾಗಿ ಸಂತ್ರಸ್ತೆ ಹೇಳಿಕೆಯನ್ನು ದಾಖಲು ಮಾಡಲಾಗಿದೆ. ಸಂತ್ರಸ್ತೆ ಘಟನೆ ಕುರಿತು ವಿವರವಾಗಿ ಮಾಹಿತಿ ನೀಡಿದರು ಎಂದು ಮೂಲಗಳು ತಿಳಿಸಿವೆ.
ಬಂಧನ ಭೀತಿಯಲ್ಲಿ ರೇವಣ್ಣ
ಈ ನಡುವೆ, ಎಸ್ಐಟಿ ವಿಚಾರಣೆಗೆ ಗೈರಾಗಿ ಬಂಧನ ಭೀತಿ ಎದುರಿಸುತ್ತಿರುವ ಆರೋಪಿ ಎಚ್.ಡಿ. ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದಾರೆ. ರೇವಣ್ಣ ಅರ್ಜಿ ಕುಧಿರಿತು ತುರ್ತು ವಿಚಾರಣೆ ನಡೆಸಿದ ನ್ಯಾಯಾಲಯ, ಆಕ್ಷೇಪಣೆ ಸಲ್ಲಿಸುವಂತೆ ಎಸ್ಐಟಿಗೆ ನೋಟಿಸ್ ಜಾರಿಗೊಳಿಸಿ ಶುಕ್ರವಾರಕ್ಕೆ ವಿಚಾರಣೆ ಮುಂದೂಡಿತು.
ರೇವಣ್ಣ ಪರ ಹಾಜರಾಗಿದ್ದ ಹಿರಿಯ ವಕೀಲ ಮೂರ್ತಿ ಡಿ. ನಾಯ್ಕ್, ‘ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅರ್ಜಿದಾರರ ವಿರುದ್ಧ ಅತ್ಯಾಚಾರ ಆರೋಪ ಸೇರ್ಪಡೆಗೊಳಿಸಿದೆ. ಜತೆಗೆ, ಗೃಹ ಸಚಿವರು ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದ್ದಾರೆ. ಹೀಗಾಗಿ, ಅರ್ಜಿದಾರರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು ‘ ಎಂದು ಮನವಿ ಮಾಡಿದರು.
ಕಾರ್ಯಕ್ರಮಗಳು
Praveen Capital-ಪ್ರವೀಣ್ ಕ್ಯಾಪಿಟಲ್ ನವೀಕೃತ ಪ್ರಧಾನ ಕಚೇರಿ ಉದ್ಘಾಟನೆ: 2030ರ ವೇಳೆಗೆ 100 ಶಾಖೆ ಸ್ಥಾಪನೆಯ ಗುರಿ; ಸತ್ಯ ಶಂಕರ್ ಅವರ ಸಾಧನೆಯನ್ನು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ ಉಲ್ಲೇಖಿಸುತ್ತೇನೆ – ಅಶೋಕ್ ರೈ
1994ರಿಂದ ಹಣಕಾಸು ಸೇವಾ ಕ್ಷೇತ್ರದಲ್ಲಿ ಗ್ರಾಹಕರ ವಿಶ್ವಾಸ ಗಳಿಸಿರುವ ಪ್ರವೀಣ್ ಕ್ಯಾಪಿಟಲ್ ಸಂಸ್ಥೆಯ ನವೀಕೃತ ಪ್ರಧಾನ ಕಚೇರಿ ಅ.16ರಂದು ಪುತ್ತೂರಿನ ಕಲ್ಲಾರೆಯ ಶ್ರೀ ಗಣೇಶ್ ಕಾಂಪ್ಲೆಕ್ಸ್ನಲ್ಲಿ ಉದ್ಘಾಟನೆಗೊಂಡಿತು. ಶಾಸಕ ಅಶೋಕ್ ಕುಮಾರ್ ರೈ ಅವರು ದೀಪ ಬೆಳಗಿಸಿ ನವೀಕೃತ ಕಚೇರಿಯನ್ನು ಉದ್ಘಾಟಿಸಿದರು.
ಪುತ್ತೂರು: 1994ರಿಂದ ಹಣಕಾಸು ಸೇವಾ ಕ್ಷೇತ್ರದಲ್ಲಿ ಗ್ರಾಹಕರ ವಿಶ್ವಾಸ ಗಳಿಸಿರುವ ಪ್ರವೀಣ್ ಕ್ಯಾಪಿಟಲ್ ಸಂಸ್ಥೆಯ ನವೀಕೃತ ಪ್ರಧಾನ ಕಚೇರಿ ಅ.16ರಂದು ಪುತ್ತೂರಿನ ಕಲ್ಲಾರೆಯ ಶ್ರೀ ಗಣೇಶ್ ಕಾಂಪ್ಲೆಕ್ಸ್ನಲ್ಲಿ ಉದ್ಘಾಟನೆಗೊಂಡಿತು. ಶಾಸಕ ಅಶೋಕ್ ಕುಮಾರ್ ರೈ ಅವರು ದೀಪ ಬೆಳಗಿಸಿ ನವೀಕೃತ ಕಚೇರಿಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪುತ್ತೂರಿನ ಉದ್ಯಮಿಯೊಬ್ಬರು ಸುಮಾರು 3,500 ಕೋಟಿ ರೂ. ವ್ಯವಹಾರ ನಡೆಸುತ್ತಿರುವುದು ಹೆಮ್ಮೆಯ ಸಂಗತಿ. ಸಂಸ್ಥೆಯ ಆಡಳಿತ ನಿರ್ದೇಶಕ ಸತ್ಯ ಶಂಕರ್ ಅವರ ಸಾಧನೆಯನ್ನು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ ಉಲ್ಲೇಖಿಸುತ್ತೇನೆ. ನಡೆದು ಬಂದ ಹಾದಿಯನ್ನು ಮರೆಯದೆ ಮುನ್ನಡೆಯುತ್ತಿರುವ ಅವರು ಪುತ್ತೂರಿನಲ್ಲಿ ಇನ್ನೂ 1,000 ಮಂದಿಗೆ ಉದ್ಯೋಗ ನೀಡಬೇಕು ಎಂಬುದು ನನ್ನ ಕನಸು. ಯುವಜನರು ರಾಜಕೀಯಕ್ಕೆ ಪ್ರವೇಶಿಸಿ ಬದಲಾವಣೆ ಹಾಗೂ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಹೇಳಿದರು. ಪ್ರವೀಣ್ ಕ್ಯಾಪಿಟಲ್ ಸಂಸ್ಥೆ ಇನ್ನಷ್ಟು ದೊಡ್ಡದಾಗಿ ಬೆಳೆದು ಸಾವಿರಾರು ಜನರಿಗೆ ಉದ್ಯೋಗ ಹಾಗೂ ಬದುಕಿಗೆ ಆಸರೆಯಾಗಲಿ ಎಂದು ಶುಭ ಹಾರೈಸಿದರು.
ಕಮಿಟ್ಮೆಂಟ್ ಇದ್ದಾಗ ಸಂಸ್ಥೆ ಉತ್ತಮವಾಗಿ ಮುನ್ನಡೆಯುತ್ತದೆ
ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ನ ಆಡಳಿತ ನಿರ್ದೇಶಕ ಜಿ.ಎಲ್. ಬಲರಾಮ ಆಚಾರ್ಯ ಮಾತನಾಡಿ, ಸಂಸ್ಥೆಯು ಸಿಬ್ಬಂದಿಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸಿ ಆಹ್ಲಾದಕರ ಕೆಲಸದ ವಾತಾವರಣ ನಿರ್ಮಿಸಿರುವುದು ಶ್ಲಾಘನೀಯ. ಹಣಕಾಸು ಕ್ಷೇತ್ರದಲ್ಲಿ ನೀಡಿದ ಸಾಲ ಮರುಪಾವತಿಯಾದಾಗ ಮಾತ್ರ ಸಂಸ್ಥೆ ಅಭಿವೃದ್ಧಿ ಹೊಂದಲು ಸಾಧ್ಯ. ಸತ್ಯ ಶಂಕರ್ ಅವರು ವ್ಯವಹಾರದ ಬಗ್ಗೆ ನಿರಂತರವಾಗಿ ಚಿಂತಿಸುವ ಬದ್ಧತೆಯುಳ್ಳ ವ್ಯಕ್ತಿ. ಬದ್ಧತೆ ಇದ್ದಾಗ ಸಂಸ್ಥೆ ಉತ್ತಮವಾಗಿ ಮುನ್ನಡೆಯುತ್ತದೆ. ಪ್ರವೀಣ್ ಕ್ಯಾಪಿಟಲ್ ದೇಶಾದ್ಯಂತ ಶಾಖೆಗಳನ್ನು ಹೊಂದಿ ಪ್ರಥಮ ಸ್ಥಾನಕ್ಕೇರಲಿ ಎಂದು ಹಾರೈಸಿದರು.
ಸಾವಿರಾರು ಮಂದಿಯ ಮಂದಿಯ ಜೀವನೋಪಾಯಕ್ಕೆ ಆಸರೆ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿ, ಗೋಸೇವೆಯಿಂದ ಆರಂಭಿಸಿ ವಿವಿಧ ಉದ್ಯಮಗಳಲ್ಲಿ ತೊಡಗಿಸಿಕೊಂಡು ದೇಶದಾದ್ಯಂತ ಗುರುತಿಸಿಕೊಂಡಿರುವ ಸತ್ಯ ಶಂಕರ್ ಅವರು ಉದ್ಯಮದಲ್ಲಿ ಪ್ರಾಮಾಣಿಕತೆಗೆ ಮಹತ್ವ ನೀಡಿದ್ದಾರೆ. ಉದ್ಯಮಗಳ ಬೆಳವಣಿಗೆಯಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ಬಿಂದು ಸಂಸ್ಥೆ ಸಾವಿರಾರು ಮಂದಿಯ ಜೀವನೋಪಾಯಕ್ಕೆ ಆಸರೆಯಾಗಿದೆ. ಸಮಾಜಕ್ಕೆ ಸದ್ದಿಲ್ಲದೆ ನೆರವು ನೀಡುವ ಅವರ ಸೇವೆ ಶ್ಲಾಘನೀಯ ಎಂದು ಹೇಳಿದರು.
1994ರಲ್ಲಿ ಆರಂಭ, ಇಂದು 25 ಶಾಖೆಗಳು
ಎಸ್.ಜಿ. ಗ್ರೂಪ್ನ ಆಡಳಿತ ನಿರ್ದೇಶಕ ಸತ್ಯ ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿ, 1994ರಲ್ಲಿ ಪ್ರವೀಣ್ ಫೈನಾನ್ಸ್ ಕಾರ್ಪೊರೇಷನ್ ಹೆಸರಿನಲ್ಲಿ ಸಂಸ್ಥೆಯನ್ನು ಆರಂಭಿಸಲಾಯಿತು. ಆಗ ಬ್ಯಾಂಕ್ಗಳಿಂದ ಸಾಲ ಪಡೆಯುವುದು ಕಷ್ಟವಾಗಿದ್ದ ಹಿನ್ನೆಲೆಯಲ್ಲಿ ವಾಹನ ಖರೀದಿಗೆ ಹಣಕಾಸಿನ ನೆರವು ಒದಗಿಸುವ ಉದ್ದೇಶದಿಂದ ಸಂಸ್ಥೆ ಕಾರ್ಯಾರಂಭಿಸಿತು. ಇಂದು ಕರ್ನಾಟಕದಾದ್ಯಂತ 25 ಶಾಖೆಗಳನ್ನು ಹೊಂದಿದ್ದು, ತಿಂಗಳಿಗೆ ಸುಮಾರು 400 ಗ್ರಾಹಕರಿಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ. ಒಟ್ಟು 8,000 ಗ್ರಾಹಕರು ಸಂಸ್ಥೆಯೊಂದಿಗೆ ವ್ಯವಹರಿಸುತ್ತಿದ್ದಾರೆ. ಪ್ರಸಕ್ತ ವರ್ಷ 550 ಕೋಟಿ ರೂ. ವ್ಯವಹಾರದ ಗುರಿ ಹೊಂದಿದ್ದು, 200ಕ್ಕೂ ಅಧಿಕ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
1987ರ ಅವಧಿಯಲ್ಲಿ ಆಟೋಮೊಬೈಲ್ ಮತ್ತು ಟೈರ್ ವ್ಯಾಪಾರ ಆರಂಭಿಸಿದ ಅನುಭವದಿಂದ ವಾಹನ ಚಾಲಕರು ಹಾಗೂ ಮಾಲೀಕರ ಹಣಕಾಸಿನ ಅಗತ್ಯಗಳನ್ನು ಅರಿತುಕೊಳ್ಳಲಾಯಿತು. ಬಳಿಕ 1994ರಲ್ಲಿ ಹಳೆಯ ಹಾಗೂ ಸೆಕೆಂಡ್ಹ್ಯಾಂಡ್ ವಾಹನಗಳಿಗೆ ಸಾಲ ನೀಡುವ ಉದ್ದೇಶದಿಂದ ಪ್ರವೀಣ್ ಫೈನಾನ್ಸ್ ಕಾರ್ಪೊರೇಷನ್ ಸ್ಥಾಪಿಸಲಾಯಿತು. 2008ರಲ್ಲಿ ಸಂಸ್ಥೆಯನ್ನು ವಿಸ್ತರಿಸುವ ಉದ್ದೇಶದಿಂದ ಪ್ರವೀಣ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ಆಗಿ ಪರಿವರ್ತಿಸಲಾಯಿತು ಎಂದು ಅವರು ಸಂಸ್ಥೆಯ ಬೆಳವಣಿಗೆಯ ಹಾದಿಯನ್ನು ವಿವರಿಸಿದರು.
2030ರ ವೇಳೆಗೆ 100 ಶಾಖೆಗಳ ಗುರಿ
ಪ್ರವೀಣ್ ಕ್ಯಾಪಿಟಲ್ ಪ್ರಸ್ತುತ ಕರ್ನಾಟಕದಲ್ಲಿ 25 ಶಾಖೆಗಳನ್ನು ಹೊಂದಿದ್ದು, ವಾಹನ ಸಾಲ, ಆಸ್ತಿ ಅಡಮಾನ ಸಾಲ, ಚಿನ್ನದ ಸಾಲ ಹಾಗೂ ಎಂಎಸ್ಎಂಇ ಸಾಲ ಸೌಲಭ್ಯಗಳನ್ನು ಒದಗಿಸುತ್ತಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದ ಎಲ್ಲ ಜಿಲ್ಲೆ ಹಾಗೂ ತಾಲೂಕುಗಳಿಗೆ ಜಾಲ ವಿಸ್ತರಿಸುವುದರ ಜತೆಗೆ ದಕ್ಷಿಣ ಭಾರತದ ಇತರ ರಾಜ್ಯಗಳಿಗೂ ಕಾರ್ಯಾಚರಣೆ ವಿಸ್ತರಿಸುವ ಯೋಜನೆ ಹೊಂದಿದೆ.
2030ರ ವೇಳೆಗೆ ಕರ್ನಾಟಕದಲ್ಲಿ 100 ಶಾಖೆಗಳನ್ನು ಸ್ಥಾಪಿಸಿ 1,500 ಕೋಟಿ ರೂ. ವ್ಯವಹಾರ ಸಾಧಿಸುವ ಗುರಿ ಹೊಂದಲಾಗಿದೆ. ದೊಡ್ಡ ಗುರಿಗಳನ್ನು ಇಟ್ಟುಕೊಂಡು ಗ್ರಾಹಕರಿಗೆ ಉತ್ತಮ ಸೇವೆ ನೀಡುವುದು, ವ್ಯವಹಾರದಲ್ಲಿ ನಿರಂತರತೆ ಕಾಪಾಡುವುದು, ಉದ್ಯೋಗಿಗಳಿಗೆ ಭದ್ರತೆ ಒದಗಿಸುವುದು ಹಾಗೂ ಸಾಮಾಜಿಕ ಸೇವೆಗೆ ಆದ್ಯತೆ ನೀಡುವುದರಿಂದ ಸಂಸ್ಥೆಯ ಬೆಳವಣಿಗೆ ಸಾಧ್ಯವಾಗಿದೆ ಎಂದು ಸತ್ಯ ಶಂಕರ್ ತಿಳಿಸಿದರು.
ಎಸ್.ಜಿ.ಗ್ರೂಪ್ನ ಕಾರ್ಯನಿರ್ವಾಹಕ ನಿರ್ದೇಶಕಿ ರಂಜಿತಾ ಶಂಕರ್, ಮೇಘಾ ಶಂಕರ್, ಮಹಿಮಾ ಶಂಕರ್, ಮನಸ್ವಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೌರವಾರ್ಪಣೆ:
ಕಛೇರಿಯ ಸಿವಿಲ್ ಕೆಲಸ ನಿರ್ವಹಿಸಿರುವ ಸುದರ್ಶನ್, ಇಂಟೀರಿಯರ್ ಕೆಲಸ ನಿರ್ವಹಿಸಿರುವ ಪೂರ್ಣಿಮಾ, ಸಂಖ್ಯೆ ಆನಂದಾಶ್ರಮ ಸೇವಾ ಟ್ರಸ್ಟ್ನ ಅಧ್ಯಕ್ಷೆ ಡಾ.ಗೌರಿಪೈ, ಉದ್ಯಮಿ ಶಿವರಾಮ ಆಳ್ವ ಕುರಿಯ, ಎಸ್ಡಿಪಿ ರೆಮಿಡೀಸ್ನ ರೂಪಲೇಖ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ನವೀನ್ ಭಂಡಾರಿ ಹಾಗೂ ಗ್ರಾಹಕರಾದ ಅಬ್ದುಲ್ ರಝಾಕ್, ಸಂಜೀವ ಕಲ್ಲೇರಿ, ಅಬ್ದುಲ್ ಖಾದರ್ ಹಾಗೂ ಜಗದೀಶ್ ಅಮೀನ್ ರವರನ್ನು ಗೌರವಿಸಲಾಯಿತು.
ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸೀತಾರಾಮ ರೈ ಸವಣೂರು, ಜಿ.ಎಲ್. ಆಚಾರ್ಯ ಜ್ಯುವೆರ್ಲ್ಸನ ನಿರ್ದೇಶಕರಾದ ಲಕ್ಷ್ಮೀಕಾಂತ ಆಚಾರ್ಯ, ಸುಧನ್ವ ಆಚಾರ್ಯ, ಎಸ್ಡಿಪಿ ರೆಮಿಡೀಸ್ನ ಡಾ.ಹರಿಕೃಷ್ಣ ಪಾಣಾಜೆ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ. ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ನಗರಸಭಾ ಮಾಜಿ ಉಪಾಧ್ಯಕ್ಷೆ ವಿದ್ಯಾ ಆರ್.ಗೌರಿ, ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಬಲ ರೈ ವಳತ್ತಡ್ಕ, ಶಿವಶಂಕರ್ ಭಟ್ ಬೋನಂತಾಯ, ಗೋವಿಂದರಾಜ್ ಪಿ., ಹರಿಕೃಷ್ಣವಾಟೆ, ರಮೇಶ್ ಭಟ್, ಡಾ.ಕೃಷ್ಣಪ್ರಸಾದ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಮುಖ್ಯ ಲೆಕ್ಕಪತ್ರ ಅಧಿಕಾರಿ ಹೇಮಂತ್ ಪೈ, ಡಿಜಿಎಂ ಶ್ರೀವತ್ಸರಾಜ್ ಎಮ್.ಜಿ., ಎಜಿಎಮ್ ಕಾರ್ತಿಕ್ ಎಸ್.ಎನ್. ಸೇರಿದಂತೆ ಸಿಬ್ಬಂದಿಗಳು ಸಹಕರಿಸಿದರು. ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಬೆಳ್ಳಿಪ್ಪಾಡಿ ಅವೋಘ್ ಜೆ. ರೈ ವಂದಿಸಿದರು. ಚೇತನ್ ಶೆಟ್ಟಿ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು.
ಪ್ರವೀಣ್ ಕ್ಯಾಪಿಟಲ್ ನವೀಕೃತ ಪ್ರಧಾನ ಕಚೇರಿ ಉದ್ಘಾಟನೆ
‘ಪ್ರವೀಣ್ ಕ್ಯಾಪಿಟಲ್’ ಸಂಸ್ಥೆಯು 1994ರಲ್ಲಿ ಪ್ರಾರಂಭಗೊಂಡಿದ್ದು, ‘ಯುವರ್ ಡ್ರೀಮ್, ಅವರ್ ಕ್ಯಾಪಿಟಲ್’ ಅಂದರೆ ‘ನಿಮ್ಮ ಕನಸು ನಮ್ಮ ಬಂಡವಾಳ’ ಎನ್ನುವ ಧೈಯವಾಕ್ಯದೊಂದಿಗೆ ಕಾರ್ಯಾಚರಿಸುತ್ತಿದೆ. ಆರ್ ಬಿಐನಿಂದ ಅಧಿಕೃತ ಅನುಮೋದನೆ ಪಡೆದಿರುವ ಎನ್ಬಿಎಫ್ಸಿ ಸಂಸ್ಥೆಯಾಗಿದ್ದುಕೊಂಡು ನಿರಂತರವಾಗಿ ಗ್ರಾಹಕರ ನಂಬಿಕೆ, ಪ್ರೀತಿ, ವಿಶ್ವಾಸವನ್ನು ಗಳಿಸಿಕೊಂಡು ಬೆಳೆಯುತ್ತಾ ಬಂದಿದೆ. ಸಂಸ್ಥೆಯ ಪ್ರಧಾನ ಕಚೇರಿಯು ಪುತ್ತೂರಿನಲ್ಲಿದ್ದು, ನೋಂದಾಯಿತ ಕಚೇರಿಯು ಮಂಗಳೂರಿನಲ್ಲಿದೆ. ಸದ್ಯ ಕರ್ನಾಟಕದಲ್ಲಿ 25 ಶಾಖೆಗಳಿದ್ದು, ವಾಹನ ಸಾಲ, ಆಸ್ತಿ ಅಡಮಾನ ಸಾಲ, ಚಿನ್ನದ ಸಾಲದ ಜೊತೆಗೆ ಎಂಎಸ್ ಎಂಇ ಸಾಲ ಸೌಲಭ್ಯಗಳನ್ನು ಒದಗಿಸುತ್ತಿದೆ. ಸದ್ಯ ಪ್ರತೀ 70 ಕಿ.ಮೀ. ಗೆ ಒಂದರಂತೆ ಶಾಖೆಗಳನ್ನು ಹೊಂದಿದ್ದು, ಮುಂದಕ್ಕೆ ದಕ್ಷಿಣ ಭಾರತದಲ್ಲಿ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರದಲ್ಲಿ ವಿಸ್ತರಿಸಲು ಯೋಜನೆ ಇದೆ. ಉತ್ತಮ ನಿಯಮಬದ್ದ ಕಾರ್ಯನಿರ್ವಹಣೆ, ಕ್ಷಮತೆಯ ಮೂಲಕ ‘ಎನ್ಸಿಡಿ’ ಪ್ರೈವೇಟ್ ಪ್ಲೇಸ್ಮೆಂಟ್ ಮಾಡಿರುವ “ಜಿಲ್ಲೆಯ ಮೊದಲ ಖಾಸಗಿ ಹಣಕಾಸು ಸಂಸ್ಥೆ ಎನ್ನುವ ಹೆಗ್ಗಳಿಕೆಯೂ ‘ಪ್ರವೀಣ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್’ನದ್ದು.
ಪ್ರವೀಣ್ ಕ್ಯಾಪಿಟಲ್ಸ್ ಬೆಳೆದು ಬಂದ ಹಾದಿ..
‘1987ರ ಅವಧಿಯಲ್ಲಿ ಪುತ್ತೂರಿನಲ್ಲಿ ಆಟೋಮೊಬೈಲ್ ಶಾಪ್ ಮತ್ತು ಟೈರ್ ಶಾಪ್ನ್ನು ಆರಂಭಿಸಿದ್ದೆವು. ಆ ಸಮಯದಲ್ಲಿ ವಾಹನಗಳ ಚಾಲಕರು ಮತ್ತು ಮಾಲಕರುಗಳಿಗೆ ಹಣಕಾಸಿನ ಅವಶ್ಯಕತೆಗಳು ಇರುತ್ತಿದ್ದವು. ಇಂತಹ ಸಂದರ್ಭದಲ್ಲಿ ವಾಹನ ಚಾಲಕರಿಗೆ, ಮಾಲಕರಿಗೆ ವಾಹನದ ಬಿಡಿಭಾಗಗಳು ಮತ್ತು ಟೈರು ಸಾಲದ ರೂಪದಲ್ಲಿ ನೀಡುತ್ತಿದ್ದೆವು. ಇದೇ ಪರಿಕಲ್ಪನೆಯಲ್ಲಿ 1994ರಲ್ಲಿ ಪ್ರವೀಣ್ ಫೈನಾನ್ಸ್ ಕಾರ್ಪೊರೇಷನ್’ ಎಂದು ಖಾಸಗಿ ಹಣಕಾಸು ಸಂಸ್ಥೆಯನ್ನು ಆರಂಭಿಸಿದ್ದೆವು. ಈ ಮೂಲಕ ಹಳೆಯ/ಸೆಕೆಂಡ್ ಹ್ಯಾಂಡ್ ವಾಹನಗಳಿಗೆ ಸಾಲ ಸೌಲಭ್ಯ ನೀಡುವ ವ್ಯವಸ್ಥೆಯನ್ನು ಪುತ್ತೂರಿನಲ್ಲಿ ಆರಂಭಿಸಿದೆವು. 2008ರಲ್ಲಿ ‘ಪ್ರವೀಣ್ ಫೈನಾನ್ಸ್ ಕಾರ್ಪೊರೇಷನ್’ನ್ನು ಮತ್ತಷ್ಟು ಅಭಿವೃದ್ಧಿ, ವಿಸ್ತರಣೆ ಮಾಡುವ ಉದ್ದೇಶದಿಂದ ಎನ್ಬಿಎಫ್ಸಿ ಸಂಸ್ಥೆ ‘ಪ್ರವೀಣ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್’ನಾಗಿ ಪರಿವರ್ತಿಸಿದೆವು. ಈಗ ‘ಪ್ರವೀಣ್ ಕ್ಯಾಪಿಟಲ್ನ 25 ಶಾಖೆಗಳಿವೆ. 200ಕ್ಕೂ ಅಧಿಕ ಮಂದಿ ಉದ್ಯೋಗ ಪಡೆಯುವ ಮೂಲಕ ಜೀವನೋಪಾಯ ಕಂಡುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಪ್ರವೀಣ್ ಕ್ಯಾಪಿಟಲ್ನ ಜಾಲವನ್ನು ವಿಸ್ತರಿಸುವ ಚಿಂತನೆ ಇದೆ. 2030ಕ್ಕೆ 100 ಶಾಖೆಗಳು ಕರ್ನಾಟಕದಲ್ಲಿ ಮತ್ತೆ 1,500 ಕೋಟಿ ರೂ.ಗಳ ವ್ಯವಹಾರದ ಗುರಿಯನ್ನು ಇಟ್ಟುಕೊಂಡಿದ್ದೇವೆ” ಎನ್ನುವುದು ಎಸ್.ಜಿ. ಗ್ರೂಪ್ನ ಆಡಳಿತ ನಿರ್ದೇಶಕರಾದ ಸತ್ಯ ಶಂಕರ್ ಅವರ ಮಾತು.
ದೊಡ್ಡ ಗುರಿ ಇಟ್ಟುಕೊಂಡರೆ ಯಶಸ್ಸು ಸಾಧ್ಯ:
2030ಕ್ಕೆ ಕರ್ನಾಟಕದಾದ್ಯಂತ 100 ಶಾಖೆಗಳನ್ನು ಮಾಡುವ ಯೋಚನೆ ಇದ್ದು 1500 ಕೋಟಿ ರೂ. ವ್ಯವಹಾರ ಮಾಡುವ ಗುರಿ ಹೊಂದಿದ್ದೇವೆ. ದೊಡ್ಡ ಗುರಿ ಇಟ್ಟುಕೊಂಡರೆ ಯಾವುದೇ ಸಂಸ್ಥೆ ಯಶಸ್ಸು ಕಾಣಲು ಸಾಧ್ಯ. ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವುದು ಅಗತ್ಯ. ವ್ಯವಹಾರದಲ್ಲಿ ನಿರಂತರತೆ ಹಾಗೂ ಉದ್ಯೋಗಿಗಳಿಗೆ ಭದ್ರತೆ ಮುಖ್ಯ. ಅಲ್ಲದೆ ಸಾಮಾಜಿಕ ಸೇವೆ, ಜನರ ಸಹಕಾರ ಮುಖ್ಯ. ಇದನ್ನು ಅಳವಡಿಸಿಕೊಂಡ ಕಾರಣ ನಮ್ಮ ಸಂಸ್ಥೆ ಅಭಿವೃದ್ಧಿ ಹೊಂದಿದೆ.
-ಸತ್ಯ ಶಂಕರ್, ಆಡಳಿತ ನಿರ್ದೇಶಕರು, ಎಸ್.ಜಿ. ಗ್ರೂಫ್
ದಸರಾ, ದೀಪಾವಳಿ ಪ್ರಯುಕ್ತ ವಿಶೇಷ ಆಫರ್
ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗಾಗಿ ಸಂಸ್ಥೆಯಲ್ಲಿ ವಿಶೇಷ ಆಫರ್ ಆಯೋಜಿಸಲಾಗಿದೆ. ಅಕ್ಟೋಬರ್ 1 ರಿಂದ ನವೆಂಬರ್ 30ರವರೆಗೆ ಆಫರ್ ಲಭ್ಯವಿದ್ದು ಗರಿಷ್ಠ ಹಣಕಾಸಿನ ನೆರವು, ಸುಲಭ ಸಾಲ ಸೌಲಭ್ಯ, ಶೀಘ್ರ ಅನುಮೋದನೆ ವ್ಯವಸ್ಥೆ ಗ್ರಾಹಕರಿಗೆ ದೊರೆಯಲಿದೆ. ಜತೆಗೆ ಅದೃಷ್ಟ ಕೂಪನ್ ದೊರೆಯಲಿದೆ. ಲಕ್ಕಿ ಡ್ರಾದಲ್ಲಿ ಸ್ಟಾರ್ಟ್ ಟಿವಿ, ಫ್ರಿಡ್ಜ್, ಮುಂತಾದ ಅನೇಕ ಆಕರ್ಷಕ ಬಹುಮಾನ ಗೆಲ್ಲುವ ಸುವರ್ಣಾವಕಾಶ ನಿಮ್ಮದಾಗಿಸಿಕೊಳ್ಳಬಹುದು ಎಂದು ಸಂಸ್ಥೆಯ ಸಿಇಒ ಹೇಳಿದರು.
ಅಪರಾಧ
Uppinangadi-ಬೈಕ್ ಅಡ್ಡಗಟ್ಟಿ ಚೂರಿ ತೋರಿಸಿ ಬೆದರಿಸಿ ನಗದು, ಮೊಬೈಲ್ ದರೋಡೆ; ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು
ಬೈಕ್ನಲ್ಲಿ ತೆರಳುತ್ತಿದ್ದ ಯುವಕ ಹಾಗೂ ಮಹಿಳೆಯನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿ, ಚೂರಿ ತೋರಿಸಿ ಬೆದರಿಸಿ ನಗದು ಮತ್ತು ಮೊಬೈಲ್ ಫೋನ್ಗಳನ್ನು ದೋಚಿದ ಆರೋಪದ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಬ ತಾಲೂಕಿನ ಕೋನಾಜೆ ಗ್ರಾಮದ ಸಿ.ಆರ್.ಸಿ. ಕಾಲೋನಿ ನಿವಾಸಿ ಮಿಥಿಲೇಶ್ (18) ಅವರು ನೀಡಿದ ದೂರಿನ ಪ್ರಕಾರ, ಅ.16ರಂದು ಬೆಳಗ್ಗೆ 11.45ರ ಸುಮಾರಿಗೆ ಈ ಘಟನೆ ನಡೆದಿದೆ.
ಉಪ್ಪಿನಂಗಡಿ: ಬೈಕ್ನಲ್ಲಿ ತೆರಳುತ್ತಿದ್ದ ಯುವಕ ಹಾಗೂ ಮಹಿಳೆಯನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿ, ಚೂರಿ ತೋರಿಸಿ ಬೆದರಿಸಿ ನಗದು ಮತ್ತು ಮೊಬೈಲ್ ಫೋನ್ಗಳನ್ನು ದೋಚಿದ ಆರೋಪದ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಬ ತಾಲೂಕಿನ ಕೋನಾಜೆ ಗ್ರಾಮದ ಸಿ.ಆರ್.ಸಿ. ಕಾಲೋನಿ ನಿವಾಸಿ ಮಿಥಿಲೇಶ್ (18) ಅವರು ನೀಡಿದ ದೂರಿನ ಪ್ರಕಾರ, ಅ.16ರಂದು ಬೆಳಗ್ಗೆ 11.45ರ ಸುಮಾರಿಗೆ ಈ ಘಟನೆ ನಡೆದಿದೆ.
ಮಿಥಿಲೇಶ್ ಅವರು ತಮ್ಮ ಅತ್ತೆ ಮಹಾದೇವಿ ಅವರೊಂದಿಗೆ ಪಡಿತರ ಚೀಟಿಯ ಕೆವೈಸಿಗಾಗಿ ಹೆಬ್ಬೆಟ್ಟು ನೀಡಲು ಬೈಕ್ನಲ್ಲಿ ಬಳಂಜದಿಂದ ಕೋನಾಜೆಗೆ ತೆರಳುತ್ತಿದ್ದರು. ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಹಲೇಜಿ ಎಂಬಲ್ಲಿ ಗುರುವಾಯನಕೆರೆ–ಉಪ್ಪಿನಂಗಡಿ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಕಾರಿನಲ್ಲಿ ಬಂದ ಆರೋಪಿಗಳು ಬೈಕ್ಗೆ ಅಡ್ಡಗಟ್ಟಿ ನಿಲ್ಲಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ತನ್ನೀಶ್ ಹಾಗೂ ಇತರ ಇಬ್ಬರು ಕಾರಿನಿಂದ ಇಳಿದು, ಹಣದ ವಿಚಾರವಾಗಿ ಪ್ರಶ್ನಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅವರೊಂದಿಗೆ ಇದ್ದ ಮತ್ತೊಬ್ಬ ವ್ಯಕ್ತಿ ಚೂರಿ ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಬಳಿಕ ಮಿಥಿಲೇಶ್ ಅವರ ಪ್ಯಾಂಟ್ ಕಿಸೆಯಲ್ಲಿದ್ದ ಜಿಯೋ ಸಿಮ್ ಹೊಂದಿದ್ದ ಸುಮಾರು 3,000 ರೂ. ಮೌಲ್ಯದ ಮೊಬೈಲ್ ಫೋನ್ ಹಾಗೂ ಅಂಗಿಯ ಕಿಸೆಯಲ್ಲಿದ್ದ 5,200 ರೂ. ನಗದನ್ನು ಬಲವಂತವಾಗಿ ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನು ಪ್ರಶ್ನಿಸಿದ ಮಿಥಿಲೇಶ್ ಅವರ ಅತ್ತೆಯ ಕೈಯಲ್ಲಿದ್ದ ಜಿಯೋ ಸಿಮ್ ಹೊಂದಿದ್ದ ಸುಮಾರು 2,000 ರೂ. ಮೌಲ್ಯದ ಮೊಬೈಲ್ ಫೋನ್ನ್ನೂ ಕಿತ್ತುಕೊಂಡು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 134/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್), 2023ರ ಕಲಂ 126(2), 308(5) ಹಾಗೂ 3(5)ರ ಪ್ರಕಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸ್ಥಳೀಯ
Youth Congress-ನಾವೂರು ಪ್ರಕರಣ ಕಾಂಗ್ರೆಸ್ ಪಕ್ಷ ಹಾಗೂ ನಾಯಕರ ವಿರುದ್ಧ ಅಪಪ್ರಚಾರಕ್ಕೆ ಯುವ ಕಾಂಗ್ರೆಸ್ ನಿಂದ ಪೊಲೀಸ್ ಠಾಣೆಗೆ ದೂರು
ಬೆಳ್ತಂಗಡಿ ತಾಲೂಕಿನ ನಾವುರಿನಲ್ಲಿ ಇತ್ತೀಚೆಗೆ ನಡೆದ ಕ್ಲಿನಿಕ್ಗೆ ಬೆಂಕಿ ಹಚ್ಚಿದ ಅಹಿತಕರ ಘಟನೆಯನ್ನು ಬಂಡವಾಳ ಮಾಡಿಕೊಂಡು, ಕಾಂಗ್ರೆಸ್ ಪಕ್ಷ ಹಾಗೂ ಅದರ ನಾಯಕರ ವರ್ಚಸ್ಸಿಗೆ ಮಸಿ ಬಳಿಯಲು ವ್ಯವಸ್ಥಿತ ಸಂಚು ರೂಪಿಸಲಾಗಿದೆ ಎಂದು ಬೆಳ್ತಂಗಡಿ ಯುವ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿ , ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸುವವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಬೆಳ್ತಂಗಡಿ ಪೋಲಿಸ್ ಠಾಣೆಗೆ ದೂರು ನೀಡಲಾಗಿದೆ.
ಬೆಳ್ತಂಗಡಿ: ತಾಲೂಕಿನ ನಾವುರಿನಲ್ಲಿ ಇತ್ತೀಚೆಗೆ ನಡೆದ ಕ್ಲಿನಿಕ್ಗೆ ಬೆಂಕಿ ಹಚ್ಚಿದ ಅಹಿತಕರ ಘಟನೆಯನ್ನು ಬಂಡವಾಳ ಮಾಡಿಕೊಂಡು, ಕಾಂಗ್ರೆಸ್ ಪಕ್ಷ ಹಾಗೂ ಅದರ ನಾಯಕರ ವರ್ಚಸ್ಸಿಗೆ ಮಸಿ ಬಳಿಯಲು ವ್ಯವಸ್ಥಿತ ಸಂಚು ರೂಪಿಸಲಾಗಿದೆ ಎಂದು ಬೆಳ್ತಂಗಡಿ ಯುವ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿ , ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸುವವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಬೆಳ್ತಂಗಡಿ ಪೋಲಿಸ್ ಠಾಣೆಗೆ ದೂರು ನೀಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ , ರಕ್ಷಿತ್ ಶಿವರಾಂ ರವರಿಗೆ ಸಂಬಂಧ ಕಲ್ಪಿಸಿ ಸಾಮಾಜಿಕ ಜಾಲತಾಣ ಫೇಸ್ಬುಕ್ , ವಾಟ್ಸಾಪ್ , ಇನ್ಸ್ಟಾಗ್ರಾಮ್ ಗಳಲ್ಲಿ ನಿರಂತರವಾಗಿ ಸುಳ್ಳು ಹಾಗೂ ಅವಹೇಳನಕಾರಿ ಸಂದೇಶಗಳನ್ನು ಹರಡುತ್ತಿರುವ ಕಿಡಿಗೇಡಿಗಳ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಗೆ ಯುವ ಕಾಂಗ್ರೆಸ್ ಬೆಳ್ತಂಗಡಿ ವತಿಯಿಂದ ದೂರು ನೀಡಲಾಗಿದೆ.
‘ಶ್ರೀ ಹರೀಶ್ ಪೂಂಜಾ ಅಭಿಮಾನಿ ಬಳಗ ಕರ್ನಾಟಕ’ ಹೆಸರಿನ ಫೇಸ್ಬುಕ್ ಪೇಜ್ ಹಾಗೂ ಇದೇ ಬಳಗದ ಹೆಸರಿನಲ್ಲಿರುವ ವಿವಿಧ ವಾಟ್ಸಾಪ್ ಗ್ರೂಪ್ಗಳು ಮತ್ತು ಇನ್ಸ್ಟಾಗ್ರಾಮ್ ಹ್ಯಾಂಡಲ್ಗಳ ಮೂಲಕ, ಹಾಗೂ ಬ್ರೇಕಿಂಗ್ ನ್ಯೂಸ್ ವಾಟ್ಸಪ್ ಗ್ರೂಪ್ ಗಳಲ್ಲಿ ನಾವೂರು ಪ್ರಕರಣಕ್ಕೂ ಕಾಂಗ್ರೆಸ್ ನಾಯಕರಿಗೂ ಇಲ್ಲದ ಸಲ್ಲದ ಲಿಂಕ್ ಕಲ್ಪಿಸಿ, ಉದ್ದೇಶಪೂರ್ವಕ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಯುವ ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.
ಯಾವುದೇ ಸಾಕ್ಷಿ , ಆಧಾರಗಳಿಲ್ಲದೆ ಫೇಸ್ಬುಕ್, ವಾಟ್ಸಾಪ್ ಹಾಗೂ ಇನ್ಸ್ಟಾಗ್ರಾಮ್ನಂತಹ ಪ್ರಮುಖ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ನಾಯಕರ ವಿರುದ್ಧ ನಿರಂತರವಾಗಿ ಸುಳ್ಳು ಪೋಸ್ಟ್ ಹರಡಲಾಗುತ್ತಿದೆ. ಇದು ಶಾಸಕ ಹರೀಶ್ ಪೂಂಜಾ ಅವರ ಅಭಿಮಾನಿ ಬಳಗದ ಹೆಸರಿನಲ್ಲಿ ನಡೆಯುತ್ತಿರುವ ಅಗ್ಗದ ಹಾಗೂ ಕೀಳು ಮಟ್ಟದ ರಾಜಕೀಯ.
ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಪಕ್ಷದ ತೇಜೋವಧೆಗೆ ಯತ್ನಿಸುತ್ತಿರುವ ಹಾಗೂ ವಾಟ್ಸಾಪ್, ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಮೂಲಕ ಸುಳ್ಳು ಸುದ್ದಿ ಹರಡುತ್ತಿರುವ ‘ಶ್ರೀ ಹರೀಶ್ ಪೂಂಜಾ ಅಭಿಮಾನಿ ಬಳಗ ಕರ್ನಾಟಕ’ ಹೆಸರಿನ ಎಲ್ಲ ಸೋಶಿಯಲ್ ಮೀಡಿಯಾ ಅಕೌಂಟ್ಗಳನ್ನು ತಕ್ಷಣವೇ ನಿರ್ಬಂಧಿಸಬೇಕು ಜತೆಗೆ, ಇವುಗಳನ್ನು ನಿರ್ವಹಿಸುತ್ತಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸೈಬರ್ ಕ್ರೈಮ್ ಕಾಯ್ದೆಯಡಿ ಸೂಕ್ತ ಹಾಗೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯುವ ಕಾಂಗ್ರೆಸ್ ಬೆಳ್ತಂಗಡಿ ಘಟಕವು ಪೊಲೀಸರನ್ನು ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಬ್ಲಾಕ್ ಯುವ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ನವೀನ್ ಕುಮಾರ್ ಗೌಡ , ತಾಲೂಕು ಯುವ ಕಾಂಗ್ರೆಸ್ ಉಪಾಧ್ಯಕ್ಷ ಅರುಣ್ ಲೋಬೋ , ಯುವ ಕಾಂಗ್ರೆಸ್ ಮುಖಂಡರಾದ ಗಣೇಶ್ ಕಣಿಯೂರು , ಅರುಣ್ ಪಿಂಟೊ ಉಪಸ್ಥಿತರಿದ್ದರು.
-
ಮೈಸೂರು20 hours agoMysuru-ಮೈಸೂರು ದಸರಾ ವೇಳೆ 10 ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ
-
ಅಪರಾಧ19 hours agoPuttur-ಪುತ್ತೂರು: ಮಹಿಳೆಯ ಮೇಲೆ ಹಲ್ಲೆ, ಮಾನಭಂಗ ಪ್ರಕರಣ; ಮೂವರು ಆರೋಪಿಗಳಿಗೆ ಜೈಲು ಶಿಕ್ಷೆ
-
ಮಂಗಳೂರು21 hours agoMRPL explosion-Big Breaking: MRPL ಸ್ಫೋಟ : ತೀವ್ರ ಗಾಯಗೊಂಡಿದ್ದ ರಾಜೇಶ್ ನಿಧನ : ಮನೀಶ್ ಕರ್ಕಡ ಕುಟುಂಬಕ್ಕೆ ನೀಡಿದ ಪರಿಹಾರದಷ್ಟೇ ನೀಡುವಂತೆ ಒತ್ತಾಯ
-
ಅಪರಾಧ19 hours agoUppinangadi-ಬೈಕ್ ಅಡ್ಡಗಟ್ಟಿ ಚೂರಿ ತೋರಿಸಿ ಬೆದರಿಸಿ ನಗದು, ಮೊಬೈಲ್ ದರೋಡೆ; ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು
-
ಅಪರಾಧ20 hours agoMangalore:-ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ; ಚರ್ಚ್ನ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ
-
ಅಂತರ ರಾಜ್ಯ20 hours agoL.K. Advani-ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಆಸ್ಪತ್ರೆಗೆ ದಾಖಲು
-
ಕಾರ್ಯಕ್ರಮಗಳು18 hours agoPraveen Capital-ಪ್ರವೀಣ್ ಕ್ಯಾಪಿಟಲ್ ನವೀಕೃತ ಪ್ರಧಾನ ಕಚೇರಿ ಉದ್ಘಾಟನೆ: 2030ರ ವೇಳೆಗೆ 100 ಶಾಖೆ ಸ್ಥಾಪನೆಯ ಗುರಿ; ಸತ್ಯ ಶಂಕರ್ ಅವರ ಸಾಧನೆಯನ್ನು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ ಉಲ್ಲೇಖಿಸುತ್ತೇನೆ – ಅಶೋಕ್ ರೈ
-
ಸ್ಥಳೀಯ19 hours agoYouth Congress-ನಾವೂರು ಪ್ರಕರಣ ಕಾಂಗ್ರೆಸ್ ಪಕ್ಷ ಹಾಗೂ ನಾಯಕರ ವಿರುದ್ಧ ಅಪಪ್ರಚಾರಕ್ಕೆ ಯುವ ಕಾಂಗ್ರೆಸ್ ನಿಂದ ಪೊಲೀಸ್ ಠಾಣೆಗೆ ದೂರು


















