Uncategorized
ಸ್ನೇಹಿತನನ್ನು ಉಪ್ಪಿನಂಗಡಿಯಲ್ಲಿ ಹತ್ಯೆ ಮಾಡಿ, ಹೊನ್ನಾವರದಲ್ಲಿ ಶವ ಎಸೆದು ಮಂಗಳೂರಿನಲ್ಲಿ ಕಾರು ಬಿಟ್ಟು ತಮಿಳುನಾಡಿಗೆ ಪರಾರಿ | 13 ವರ್ಷಗಳ ಬಳಿಕ ಸೆರೆ ಸಿಕ್ಕಿ ಆರೋಪಿ | ಕೊಲೆ ನಡೆದು 20 ವರ್ಷಗಳ ನಂತರ ಶಿಕ್ಷೆ ವಿಧಿಸಿದ ಕೋರ್ಟ್ | ಈ ಕೊಲೆಯ ತನಿಖೆ ಅತೀ ರೋಚಕ
ಪುತ್ತೂರು : ಡಿ 17 : 20 ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣವೊಂದರ ತೀರ್ಪನ್ನು ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಪ್ರಕಟಿಸಿದ್ದು ಕೃತ್ಯ ಎಸಗಿದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಉಪ್ಪಿನಂಗಡಿ ಶಿವ ಫೈನಾನ್ಸ್ ನ ಮಾಲೀಕರಾಗಿದ್ದ, ಪುತ್ತೂರು ಮೂಲದ ಸೂತ್ರಬೆಟ್ಟು ವಿಶ್ವನಾಥ ರೈಯವರನ್ನು 2001ರ ಜೂನ್ 7 ರಂದು ರಾತ್ರಿ ಉಪ್ಪಿನಂಗಡಿಯ ಅವರದೇ ಮನೆಯಲ್ಲಿ ಹತ್ಯೆಗೆಯ್ಯಲಾಗಿತ್ತು. ಅದೇ ಪೈನಾನ್ಸ್ ನಲ್ಲಿ ಮ್ಯಾನೇಜರ್ ಆಗಿದ್ದ ಹಾಗೂ ಹತ್ಯೆಯಾದ ವಿಶ್ವನಾಥ್ ರವರ ಪರಮಾಪ್ತನಾಗಿದ್ದ ಕೋಡಿಂಬಾಡಿ ನಿವಾಸಿ ವಿಶ್ವನಾಥ ಶೆಟ್ಟಿ ಶಿಕ್ಷೆಗೊಳಗಾದ ಅಪರಾಧಿ.
ಕೊಲೆ ಅಪರಾಧಕ್ಕೆ ಸಂಬಂಧಿಸಿದಂತೆ ಐಪಿಸಿ 302 ಕಲಂ ಪ್ರಕಾರ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ತಪ್ಪಿದಲ್ಲಿ 1 ವರ್ಷ ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಲಾಗಿದೆ. ಸಾಕ್ಷಿ ನಾಶ ಮಾಡಿದ ಅಪರಾಧಕ್ಕೆ ಐಪಿಸಿ 201 ಕಲಂ ಪ್ರಕಾರ ಐದು ವರ್ಷ ಜೈಲು ಶಿಕ್ಷೆ, 20 ಸಾವಿರ ರೂ. ದಂಡ ಹಾಗೂ ದಂಡ ತೆರಲು ತಪ್ಪಿದಲ್ಲಿ 8 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಲಾಗಿದೆ.
ಕೊಲೆ ಬೆದರಿಕೆ ಅಪರಾಧಕ್ಕೆ ಐಪಿಸಿ 506 ಕಲಂ ಪ್ರಕಾರ ಮೂರು ವರ್ಷ ಜೈಲು ಶಿಕ್ಷೆ, 25 ಸಾವಿರ ರೂ. ದಂಡ ಮತ್ತು ದಂಡ ತೆರಲು ತಪ್ಪಿದಲ್ಲಿ 6 ತಿಂಗಳು ಹೆಚ್ಚುವರಿ ಕಾರಾಗೃಹ ವಾಸ ಶಿಕ್ಷೆ ವಿಧಿಸಲಾಗಿದೆ.

ಏನಿದು ಪ್ರಕರಣ ?
ವಿಶ್ವನಾಥ ರೈ ಅವರನ್ನು 2001ರ ಜೂನ್ 7 ರಂದು ರಾತ್ರಿ ಉಪ್ಪಿನಂಗಡಿಯ ಮನೆಯಲ್ಲಿ ತಲೆಗೆ ಹೊಡೆದು ಕೊಲೆ ಮಾಡಲಾಗಿತ್ತು. ಆದರೇ ಈ ವಿಚಾರ ಹೊರ ಪ್ರಪಂಚಕ್ಕೆ ಬಹಿರಂಗವಾದದದ್ದು ಎಷ್ಟೋ ಸಮಯಗಳ ಬಳಿಕ. ಕೊಲೆ ನಡೆದ ರಾತ್ರಿ ವಿಶ್ವನಾಥ ರೈ , ವಿಶ್ವನಾಥ ಶೆಟ್ಟಿ ಹಾಗೂ ಅವರ ಪೈನಾನ್ಸಿನ ಸಾಲ ವಸೂಲತಿ ಮಾಡುತ್ತಿದ್ದ ಸುಭಾಷ್ ಗೌಡ ಜತೆಯಾಗಿಯೇ ಇದ್ದರು. ಈ ವೇಳೆ ಹಣದ ವ್ಯವಹಾರದ ವಿಚಾರವಾಗಿ ವಿಶ್ವನಾಥ್ ಧ್ವಯರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆರೋಪಿ ವಿಶ್ವನಾಥ್ ರವರನ್ನು ಬಿಯರ್ ತರಲು ಬಾರ್ ಗೆ ಕಳುಹಿಸಿದ್ದಾನೆ. ಸುಭಾಷ್ ಅತ್ತ ಹೊಗುತ್ತಲೆ ಇತ್ತ ವಿಶ್ವನಾಥ್ ಶೆಟ್ಟಿಯೂ ರೈ ತಲೆಗೆ ರಾಡ್ ನಿಂದ ಒಡೆದು ಹತ್ಯೆ ಮಾಡಿದ್ದಾನೆ.
ಈ ವೇಳೆ ಬಾರ್ ಗೆ ಹೋದ ಸುಭಾಷ್ ಹಿಂತಿರುಗಿದ್ದು, ಅವನನ್ನು ಬೆದರಿಸಿದ ಶೆಟ್ಟಿಯು ಮನೆಯಲ್ಲಿ ಬಿದ್ದಿದ್ದ ರಕ್ತದ ಕಲೆಗಳನ್ನು ಹಾಗೂ ಇತರ ಸಾಕ್ಷಿಗಳನ್ನು ನಾಶ ಮಾಡಿದ್ದಾನೆ. ಬಳಿಕ ಸುಭಾಷ್ ನೆರವಿನಿಂದ ಶವವನ್ನು ತನ್ನ ಮಾರುತಿ ಕಾರಿನಲ್ಲಿ ಹಾಕಿದ್ದಾನೆ. ಬಳಿಕ ಈ ವಿಚಾರವನ್ನು ಯಾರಿಗೂ ಬಾಯ್ಬಿಡಬಾರದು ಜೀವ ಬೆದರಿಕೆ ಒಡ್ಡಿ ಪರಾರಿಯಾಗಿದ್ದಾನೆ. ಬೆದರಿಕೆಯಿಂದ ಭಯಭೀತನಾದ ಸುಭಾಷ್ ಹಲವು ಸಮಯ ಈ ವಿಚಾರವನ್ನು ಯಾರಲ್ಲಿಯೂ ಬಾಯ್ಬಿಟ್ಟಿರಲಿಲ್ಲ. ಹಾಗಾಗಿ ಜೂ.7 ರಿಂದ ಕಣ್ಮರೆಯಾದ ವಿಶ್ವನಾಥ ದ್ವಯರು ಎಲ್ಲಿ ಹೋದರು ಎನ್ನುವ ಕಣ್ಮರೆ ಪೊಲೀಸರು ಹಾಗೂ ಸಾರ್ವಜನಿಕ ವಲಯದಲ್ಲಿ ಸೃಷ್ಟಿಯಾಗಿತ್ತು.

ರೋಚಕ ತನಿಖೆ :
ಶೆಟ್ಟಿಯ ಹತ್ಯೆಯ ಬಳಿಕ ಈ ಪ್ರಕರಣ ಸೃಷ್ಟಿಸಿದ ಕೌತುಕ , ಪಡೆದ ತಿರುವುಗಳು, ತನಿಖೆ ಉಂಟು ಮಾಡಿದ ರೋಚಕತೆ, ಸಾರ್ವಜನಿಕ ವಲಯದಲ್ಲಿ ಹರಡುತ್ತಿದ್ದ ತರಹವೇರಿ ವದಂತಿಗಳು ಹತ್ಯೆಯಿಂದ ಮೊದಲುಗೊಂಡು ಆರೋಪಿ ಪತ್ತೆಯಾಗುವವರಿಗಿನ ನಿಗೂಢತೆಗಳು ನಿಜಕ್ಕೂ ಸಸ್ಪೆನ್ಸ್ ಸಿನಿಮಾಕ್ಕಿಂತ ಕಮ್ಮಿಯಿರಲಿಲ್ಲ.
ಕೊಲೆಯಾದ ವ್ಯಕ್ತಿಯೂ ಕ್ರಿಮಿನಲ್ ಹಿನ್ನಲೆಯವರೆ ಆಗಿದಿದ್ದು ಪ್ರಕರಣ ಭೇದಿಸಲು ಪೊಲೀಸರು ಹರ ಸಾಹಸ ಪಡುವಂತೆ ಮಾಡಿತ್ತು. ಪುತ್ತೂರಿನಲ್ಲಿ ನಡೆದಿದ್ದ ಗೋಪಿ ಮರ್ಡರ್ ಕೇಸಿನಲ್ಲಿ ಹತ್ಯೆಯಾದ ವಿಶ್ವನಾಥ ರೈಯೂ ಜೈಲಿಗೆ ಹೋಗಿ ಬಂದಿದ್ದದ್ದು, ಅಲ್ಲದೆ ಕೋಡಿಬಾಂಡಿ ಮೂಲದ ಅಂದಿನ ಜಿ.ಪಂ ಅಧ್ಯಕ್ಷರಿಗೆ ಹಲ್ಲೆನಡೆಸಿದ ಆರೋಪಗಳು ಅವರ ಮೇಲಿದ್ದವು. ಅಲ್ಲದೇ ಅವರು ಮಾಡುತ್ತಿದ್ದ ವ್ಯವಹಾರವೂ ಪ್ರಕರಣವನ್ನು ನಿಗೂಢತೆಗೆ ತಳ್ಳಿತ್ತು. ಅವರಿಂದ ಫೈನಾನ್ಸ್ ನಲ್ಲಿ ಮೀಟರ್ ಬಡ್ಡಿಗೆ ಹಣ ಪಡೆದಿದ್ದ ಹಲವರು ಅವರಿಂದ ನೋವು ಅನುಭವಿಸಿದ್ದು, ಸಾಲ ಮರು ಪಾವತಿ ಮಾಡದವರ ಕರಿಮಣಿಯನ್ನು ಬಿಡದೆ ಕಿತ್ತುಕೊಂಡು ಹೋಗುತ್ತಿದ್ದರು ಎಂಬ ಆರೋಪಗಳು ಅವರ ಮೇಲಿದ್ದದ್ದು ಕೂಡ ಪ್ರಕರಣವನ್ನು ಜಟಿಲವಾಗಿಸಿತ್ತು.
250 ಕಿಮೀ ದೂರದಲ್ಲಿ ಶವ ಪತ್ತೆ…!
ಇಬ್ಬರು ವಿಶ್ವನಾಥರನ್ನು ಯಾರೋ ಅಪಹರಿಸಿದ್ದರೇ, ಇಬ್ಬರು ಪರಾರಿಯಾಗಿದ್ದಾರೆ ಹೀಗೆ ಥರಹವೇರಿ ಅನುಮಾನಗಳು ಉಪ್ಪಿನಂಗಡಿ ಅಸುಪಾಸಿನಲ್ಲಿ ಕೇಳಿ ಬಂದಿತ್ತು . ಇದೇ ವೇಳೆ ಜೂ .11 ರಂದು ಉಪ್ಪಿನಂಗಡಿಯಿಂದ 250 ಕಿ.ಮೀ ದೂರದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪಾ ಸಮೀಪದ ಮೂಡ್ಕಾಣಿ ಎಂಬಲ್ಲಿ ಸುಮಾರು 20 ಅಡಿ ಆಳದ ಪ್ರಪಾತದಲ್ಲಿ ಮೃತದೇಹವೊಂದು ಪತ್ತೆಯಾಗಿತ್ತು .ಇದನ್ನು ನೋಡಿ ಸ್ಥಳೀಯರು ಅಲ್ಲಿನ ಪೊಲೀಸರಿಗೆ ತಿಳಿಸಿದ್ದು ಅವರು ಶವವನ್ನು ಪರಿಶೀಲಿಸಿದಾಗ ಶಅದರ ಅಂಗಿಯಲ್ಲಿ ಪುತ್ತೂರು ಸಿಂಧು ಟೈಲರ್ ಎಂಬ ಸ್ಟಿಕ್ಕರ್ ಪತ್ತೆಯಾಗಿತ್ತು . ಹೀಗಾಗಿ ಶವದ ಗುರುತು ಪತ್ತೆಗೆ ಅವರು ಪುತ್ತೂರು ಪೊಲೀಸರ ನೆರವು ಪಡೆದಿದ್ದರು. ಪೊಲೀಸರು ಟೈಲರನ್ನು ಕರೆದೊಯ್ದು ಪರಿಶೀಲಿಸಿದಾಗ ಶವ ಸೂತ್ರಬೆಟ್ಟು ವಿಶ್ವನಾಥ ರೈ ಅವರದ್ದೆಂಬುದು ಖಚಿತವಾಗಿತ್ತು. ಆ ಮೂಲಕ ಕಣ್ಮರೆಯಾದ ವಿಶ್ವನಾಥ ರೈ ಹತ್ಯೆಯಾಗಿದ್ದಾರೆ ಎನ್ನುವುದು ಖಚಿತವಾಗಿತ್ತು. ಆದರೇ ಇನ್ನೊಬ್ಬ ವಿಶ್ವನಾಥ್ ಪತ್ತೆಯಾಗದೇ ಆತನೂ ಕೊಲೆಯಾಗಿರಬಹುದೇ ಎಂಬ ಅನುಮಾನ ಜನಮಾನಸದಲ್ಲಿ ಸೃಷ್ಟಿಯಾಗಿತ್ತು.
ಅನಾಥ ಸ್ಥಿತಿಯಲ್ಲಿದ ರಕ್ತದ ಕಲೆಗಳುಳ್ಳ ಕಾರು :
ಇದೆ ವೇಳೆ ಮಂಗಳೂರಿನ ಕದ್ರಿ ಪಾರ್ಕ್ ಬಳಿ ಅನಾಥ ಸ್ಥಿತಿಯಲ್ಲಿ ಮಾರುತಿ ಝೆನ್ ಕಾರು ಹಲವು ದಿನಗಳಿಂದ ಪಾರ್ಕ್ ಮಾಡಿರುವುದನ್ನು ಸ್ಥಳೀಯರು ಪೊಲೀಸರ ಗಮನ ಸೆಳೆದರು . ಆ ಕಾರನ್ನು ಬಂದು ಪರೀಶೀಲನೆ ನಡೆದ ಪೊಲೀಸರಿಗೆ ಕಾರಿನಲ್ಲಿ ರಕ್ತದ ಕಲೆಗಳು ಪತ್ತೆಯಾಗಿದ್ದವು. ಹೀಗಾಗಿ ಕಾರಿನ ಮಾಲಕನ ಬೆನ್ನು ಹತ್ತಿ ಹೋದ ಪೊಲೀಸರಿಗೆ ಅದರ ನಿಜವಾದ ಬಳಕೆದಾರ ಪರಾರಿಯಾಗಿರುವ ಕೋಡಿಂಬಾಡಿಯ ವಿಶ್ವನಾಥ ರೈ ಎಂದು ತಿಳಿದು ಬಂದಿತ್ತು.
ಸ್ಫೋಟಕ ತಿರುವು :
ಇಷ್ಟೆಲ್ಲಾ ಆಗುವಾಗ ಪ್ರಕರಣ ಮತ್ತೊಂದು ತಿರುವು ಪಡೆಯಿತು. ಕೊಲೆಯ ಪ್ರತ್ಯಕ್ಷದರ್ಶಿ ಸುಭಾಷ್ ಚಂದ್ರ ಗೌಡ ರಿಗೆ ಕಾರು ಮತ್ತು ಶವ ಸಿಕ್ಕಿದ್ದು ತಿಳಿಯುತ್ತಲೇ ಬೆಳ್ತಂಗಡಿಯ ವಕೀಲರೊಬ್ಬರಲ್ಲಿ ಘಟನೆಯ ವಿಷಯ ತಿಳಿಸಿದ್ದು, ಅವರ ಸಲಹೆಯಂತೆ ಜೂ 7 ರಂದು ರಾತ್ರಿ ನಡೆದ ಎಲ್ಲ ಘಟನೆಯನ್ನು ಪ್ರಕರಣದ ತನಿಖಾಧಿಕಾರಿಗೆ ತಿಳಿಸಿದರು. ಈ ಮೂಲಕ ವಿಶ್ವನಾಥ ರೈ ಯನ್ನು ಅವರ ಪರಮಾಪ್ತನಾಗಿದ್ದ ವಿಶ್ವನಾಥ ಶೆಟ್ಟಿಯೂ ಹತ್ಯೆ ಮಾಡಿ ಶವವನ್ನು ಹೊನ್ನಾವರದಲ್ಲಿ ಬೀಸಾಡಿ ವಾಪಸ್ಸು ಮಂಗಳೂರಿಗೆ ಬಂದು ಕದ್ರಿ ಪಾರ್ಕ್ ಬಳಿ ಕಾರಿಟ್ಟು ಪರಾರಿಯಾಗಿದ್ದಾನೆ ಎಂಬ ಅಂಶವು ಬಯಲಾಯಿತು. ಕೊಲೆಗೆ ಸಹಕರಿಸಿದ ಆರೋಪದಲ್ಲಿ ಬಂಧಿಸಲ್ಪಟ್ಟ ಸುಭಾಷ್ ಹಲವು ದಿನಗಳ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು
ಬಳಿಕ ನಡೆದದ್ದು ಆರೋಪಿಯ ಪತ್ತೆಗಾಗಿ ನಡೆದ ಕಾರ್ಯಚರಣೆ :
ಮಂಗಳೂರಿನಲ್ಲಿ ಕಾರು ಪತ್ತೆಯಾದ ಹಿನ್ನಲೆಯಲ್ಲಿ ವಿಶ್ವನಾಥ ಶೆಟ್ಟಿ ವಿದೇಶಕ್ಕೆ ಅದರಲ್ಲೂ ವಿಶೇಷವಾಗಿ ಕರಾವಳಿ ಬಹುತೇಕರು ಹೋಗುವ ಗಲ್ಫ್ ದೇಶಕ್ಕೆ ವಿಶ್ವನಾಥ ಶೆಟ್ಟಿ ಪರಾರಿಯಾಗಿದ್ದಾನೆ ಎಂಬ ವದಂತಿಗಳು ಹಬ್ಬಿತ್ತು. ಪೊಲೀಸರು ಹಲವು ತಿಂಗಳುಗಳ ಕಾಲ ವಿಶ್ವನಾಥ ಶೆಟ್ಟಿಯ ಆಪ್ತ ಬಳಗದಲ್ಲಿ ತಡಕಾಡಿದರು ಆರೋಪಿ ಪತ್ತೆಯಾಗಲೇ ಇಲ್ಲ. ಹೀಗೆ ಈ ಪ್ರಕರಣ ನಿಧಾನಕ್ಕೆ ಹಳ್ಳ ಹಿಡಿಯಲು ಆರಂಭಿಸಿತ್ತು. ಜನರ ಮನಸ್ಸಿನ ಪರದೆಯಿಂದಲೂ ಮೆಲ್ಲಮೆಲ್ಲನೆ ಮರೆಯಾಗಲು ಶುರುವಾಯಿತು.
ಹತ್ಯೆ ನಡೆದ ಬರೋಬ್ಬರಿ 13 ವರ್ಷಗಳ ಬಳಿಕ , 2014ರ ಆಗಸ್ಟ್ 11ರಂದು ಆರೋಪಿ ವಿಶ್ಚನಾಥ ಶೆಟ್ಟಿಯನ್ನು ತಮಿಳುನಾಡಿನಲ್ಲಿ ಪೊಲೀಸರು ಬಂಧಿಸಿದ್ದಾರೆ ಎನ್ನುವ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಲೇ ಜನರ ನೆನಪಿನ ಪುಟಗಳು ಮತ್ತೆ ತೆರೆಯಲು ಆರಂಭಿಸಿತ್ತು.
ಸಿನಿಮೀಯ ಶೈಲಿಯಲ್ಲಿ ಅಡಗಿ ಸಹಜ ಜೀವನ ನಡೆಸುತ್ತಿದ್ದ ಆರೋಪಿ :
ಹತ್ಯೆ ಮಾಡಿ ತಮಿಳುನಾಡಿಗೆ ಪರಾರಿಯಾಗಿದ್ದ ಪಂಚಮಿ ವಿಶ್ವ ಅಲ್ಲಿ ರಾಜ್ ಎಂದು ಹೆಸರು ಬದಲಾಯಿಸಿಕೊಂಡು ಆಸ್ಪತ್ರೆಯೊಂದರ ಅಂಬ್ಯುಲೆನ್ಸ್ ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದ. ಬಳಿಕ ಆ ಅಸ್ಪತ್ರೆಯಲ್ಲಿ ಪರಿಚಿತರಾದ ವೈದ್ಯರೊಬ್ಬರ ಸತ್ಯ ಮಂಗಲ ಸಮೀಪದ ಕಡಂಬೂರು ಎಂಬಲ್ಲಿದ್ದ ತೋಟವನ್ನು ನೋಡಿಕೊಳ್ಳುವ ರೈಟರ್ ಆಗಿ ಸುಮಾರು 8 ವರ್ಷ ಕೆಲಸ ಮಾಡಿಕೊಂಡಿದ್ದ.
ಇದಾದ ಬಳಿಕ ಆತ ಕಡಂಬೂರು ನಲ್ಲಿ ʼರಾಜ್ ಪೈನಾನ್ಸ್ ಚಿಟ್ ಫಂಡ್ʼ ಅನ್ನು ಆರಂಭಿಸಿ ವ್ಯವಹಾರ ನಡೆಸುತ್ತಿದ್ದ. ಈ ವೇಳೆ ಅಲ್ಲಿಯ ಯಾರಿಗೂ ಈತನ ಬಗ್ಗೆ ಸಂಶಯಗೊಂಡು ಮಾಹಿತಿ ನೀಡಿದ್ದು , ಹೀಗಾಗಿ ಈತನ ಚಲನವಲನದ ಬಗ್ಗೆ ಕಣ್ಣಿಟ್ಟ ತಮಿಳುನಾಡು ಪೊಲೀಸರಿಗೆ ಈತನಿಗೆ ಪುತ್ತೂರಿನ ಲಿಂಕ್ ಇರುವುದು ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಅವರು .ದ.ಕ. ಪೊಲೀಸರಿಗೆ ಮಾಹಿತಿ ನೀಡಿದ್ದರು.

ದ.ಕ. ಅಪರಾಧ ಪತ್ತೆದಳದ ಪೊಲೀಸರು ಹಾಗೂ ತಮಿಳುನಾಡು ಪೊಲೀಸರು ನಡೆಸಿದ ಜಂಟಿ ತನಿಖೆಯ ವೇಳೆ ಈತ ಉಪ್ಪಿನಂಗಡಿ ಪೊಲೀಸರಿಗೆ ಬೇಕಾಗಿರುವ (ವಾಂಟೆಡ್ ಕ್ರಿಮಿನಲ್) ವಿಶ್ವನಾಥ ರೈ ಮರ್ಡರ್ ನ ಪ್ರಮುಖ ಆರೋಪಿ ಎಂಬುದು ಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ಆತನನ್ನು ಬಂಧಿಸಿ ಪುತ್ತೂರು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಈ ವೇಳೆ ಪ್ರಕರಣದ ಇತರ ತನಿಖೆ ಮಹಜರು ಕಾರ್ಯ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.
ಮಾಫಿ ಸಾಕ್ಷಿ
ಈ ವೇಳೆ ಕೊಲೆಯ ರಾತ್ರಿ ಆ ಕೃತ್ಯದ ಪ್ರತ್ಯಕ್ಷದರ್ಶಿಯಾಗಿದ್ದ ಸುಭಾಷ್ ಮಾಫಿ ಸಾಕ್ಷಿಯಾಗಿ ಬದಲಾಗಿದ್ದರು. ಅಲ್ಲದೇ ನ್ಯಾಯಲಯದಲ್ಲಿ ಆರೋಪಿ ವಿರುದ್ದ ಪ್ರಭಲ ಸಾಕ್ಷಿ ನುಡಿದಿದ್ದರು. ಇದು ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಪ್ರಧಾನ ಪಾತ್ರವಹಿಸಿತ್ತು. ಉಳಿದ ಸಾಂಧರ್ಬಿಕ ಸಾಕ್ಷ್ಯಗಳು ಆರೋಪಿಗೆ ಶಿಕ್ಷೆಯನ್ನು ನಿಗದಿಗೊಳಿಸಿತು.
ಡಿ .13 ರಂದು ಪ್ರಕರಣದ ವಿಚಾರಣೆ ಮುಕ್ತಾಯಗೊಳಿಸಿದ ಪುತ್ತೂರಿನ ನ್ಯಾಯಲಯವು ಆರೋಪಿಯನ್ನು ತಪಿತಸ್ಥ ಎಂದು ಘೋಷಿಸಿತ್ತು. ಡಿ.15 ರಂದು ಸಂಜೆ ಆಪರಾಧಿ ಅನುಭವಿಸಬೇಕಾದ ಶಿಕ್ಷೆಯ ಸ್ವರೂಪವನ್ನು ಘೋಷಿಸಿತ್ತು. ಪ್ರವೀಣ್ ಕುಮಾರ್ ಪ್ರಾಷಿಕ್ಯೂಷನ್ ಪರವಾಗಿ ವಾದಿಸಿದರು.
Uncategorized
Ambika Vidyalaya-ಅಂಬಿಕಾ ವಿದ್ಯಾಲಯ ಸಿಬಿಎಸ್ಇ ವಿದ್ಯಾರ್ಥಿಗಳಿಗೆ ರಾಷ್ಟ್ರ ಮಟ್ಟದಲ್ಲಿ ಬಹುಮಾನ
ಪುತ್ತೂರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ ಸಂಸ್ಥೆಯ ವಿದ್ಯಾರ್ಥಿಗಳು ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದಾರೆ.

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ ಸಂಸ್ಥೆಯ ವಿದ್ಯಾರ್ಥಿಗಳು ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದಾರೆ.
14 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಪೆರ್ನೆಯ ನಿವಾಸಿ ಗಿರೀಶ ಗೌಡ ಮತ್ತು ಸುಮಿತ್ರ ದಂಪತಿಯ ಪುತ್ರಿ 8ನೇ ತರಗತಿಯ ಸಾನ್ವಿ ಜಿ, ದರ್ಬೆಯ ನಿವಾಸಿ ಕೆ ಜಿ ಮುರಳೀಧರ ಮತ್ತು ಕೆ ಉಷಾ ಮುರಳೀಧರ ದಂಪತಿಯ ಪುತ್ರಿ 8ನೇ ತರಗತಿಯ ಕೆ ಎಂ ಶಮಿತ ಭಟ್ ಹಾಗೂ ಪಡೀಲ್ ನ ನಿವಾಸಿ ಸಂಜೀವ ರಂಜನ್ ಮತ್ತು ಅರ್ಪಣಾ ಕುಮಾರಿ ದಂಪತಿಯ ಪುತ್ರಿ 8ನೇ ತರಗತಿಯ ಶಾಂಭವಿ ರಂಜನ್,
ಸಂಪ್ಯದ ನಿವಾಸಿ ರವಿಕುಮಾರ ಕೆ ಮತ್ತು ಸುಮಿತ್ರ ಕೆ ದಂಪತಿಯ ಪುತ್ರಿ 8ನೇ ತರಗತಿಯ ನೈನಿಕ ಎ ಆರ್ ಪ್ರಥಮ ಸ್ಥಾನವನ್ನು ಗಳಿಸಿ, ಮಧ್ಯ ಪ್ರದೇಶದಲ್ಲಿ ನಡೆಯಲಿರುವ ಎಸ್ ಜಿ ಎಫ್ ಐ ( ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ) ಮಟ್ಟದ ಚದುರಂಗ ಸ್ಪರ್ಧೆಗೆ ಆಯ್ಕೆಗೊಂಡಿರುತ್ತಾರೆ.
14ರ ವಯೋಮಾನದ ಬಾಲಕರ ವಿಭಾಗದಲ್ಲಿ ಉಪ್ಪಿನಂಗಡಿ ನೆಕ್ಕಿಲಾಡಿಯ ನಿವಾಸಿ ಡಾ.ಸುಪ್ರೀತ್ ಜೋಯಲ್ ಲೋಬೋ ಮತ್ತು ಡಾ. ಶೈನಿ ಪಾಯಸ್ ದಂಪತಿಯ ಪುತ್ರ 7ನೇ ತರಗತಿಯ ಸಂಹಿತ್ ಜೊಸ್ಸಿ ಲೋಬೋ, ಕಾಣಿಯೂರಿನ ನಿವಾಸಿ ಅರವಿಂದ ಕುಮಾರ್ ಕೆ ಮತ್ತು ಜ್ಯೋತಿ ಕುಮಾರಿ ಕೆ ದಂಪತಿಯ ಪುತ್ರ 7ನೇ ತರಗತಿಯ ರತುಲ್ ಅದ್ವೈತ್, ಕುಂಜುರ್ ಪಂಜದ ನಿವಾಸಿ ಶ್ರೀನಿವಾಸ ಮಯ್ಯ ಡಿ ಮತ್ತು ಜಯಲಕ್ಷ್ಮೀ ಎಸ್ ಮಯ್ಯ ದಂಪತಿಯ ಪುತ್ರ 7ನೇ ತರಗತಿಯ ಮಯೂರ್ ಎಸ್ ಮಯ್ಯ ಹಾಗೂ ಕಲ್ಲಾರೆಯ ನಿವಾಸಿ ಪ್ರವೀಣ್ ರೈ ಸಿ ಮತ್ತು ತೃಪ್ತಿ ರೈ ದಂಪತಿಯ ಪುತ್ರ 7ನೇ ತರಗತಿಯ ತ್ರಿನಯ್ ರೈ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ.
Uncategorized
Kumaraswamy-ಸ್ಟಿಂಗ್ ಆಪರೇಷನ್ ವಿವಾದ: ಸಿದ್ದರಾಮಯ್ಯ ಮೌನವಾಗಿರಬಾರದು – ಸಿಬಿಐ ತನಿಖೆಗೆ ಕುಮಾರಸ್ವಾಮಿ ಆಗ್ರಹ
ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ಗಳ ಹೆಸರಿನಲ್ಲಿ ರಾಜಕೀಯ ನಾಯಕರು ಹಾಗೂ ಅವರ ಕುಟುಂಬಗಳನ್ನು ಗುರಿಯಾಗಿಸಲಾಗುತ್ತಿದೆ ಎಂಬ ಆರೋಪಗಳ ಕುರಿತು ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಈ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ಗಳ ಹೆಸರಿನಲ್ಲಿ ರಾಜಕೀಯ ನಾಯಕರು ಹಾಗೂ ಅವರ ಕುಟುಂಬಗಳನ್ನು ಗುರಿಯಾಗಿಸಲಾಗುತ್ತಿದೆ ಎಂಬ ಆರೋಪಗಳ ಕುರಿತು ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಈ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಚರ್ಚಿಸುವುದರ ಜೊತೆಗೆ ದೂರು ಸಲ್ಲಿಸುವುದಾಗಿಯೂ ಅವರು ತಿಳಿಸಿದ್ದಾರೆ.
ಬೆಂಗಳೂರಿನ ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸ್ಟಿಂಗ್ ಆಪರೇಷನ್ಗಳ ಹಿಂದೆ ಯಾರಿದ್ದಾರೆ, ಅವುಗಳನ್ನು ಯಾರು ನಡೆಸಿದ್ದಾರೆ ಮತ್ತು ಇದರಲ್ಲಿ ಯಾರ ಪಾತ್ರವಿದೆ ಎಂಬುದನ್ನು ತನಿಖೆಯ ಮೂಲಕ ಪತ್ತೆಹಚ್ಚಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಮೌನವಾಗಿರಬಾರದು: ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವಿರುದ್ಧ ನಡೆಯುತ್ತಿದೆ ಎನ್ನಲಾದ ಷಡ್ಯಂತ್ರಕ್ಕೆ ಹೆದರುವ ಅಗತ್ಯವಿಲ್ಲ ಎಂದು ಹೇಳಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರು ತಮ್ಮ ಹಿಂದಿನ ಹೋರಾಟದ ಮನೋಭಾವದೊಂದಿಗೆ ಮಾತನಾಡಬೇಕು. ಇಂತಹ ಬೆಳವಣಿಗೆಗಳ ಬಗ್ಗೆ ಮೌನ ವಹಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಹಿಂದೆ ಮಾಜಿ ಮುಖ್ಯಮಂತ್ರಿಯೊಬ್ಬರ ವಿರುದ್ಧ ಸ್ಟಿಂಗ್ ಆಪರೇಷನ್ ನಡೆಸಲಾಗಿತ್ತು. ಬಳಿಕ ರಮೇಶ್ ಜಾರಕಿಹೊಳಿ ಹಾಗೂ ಕೆ.ಎನ್. ರಾಜಣ್ಣ ಅವರ ವಿಚಾರಗಳೂ ಮುನ್ನೆಲೆಗೆ ಬಂದವು. ಇದೀಗ ಸಿದ್ದರಾಮಯ್ಯ ಅವರ ಸರದಿ ಬಂದಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ಸದಾಶಿವನಗರದಲ್ಲಿ ನಿಗಾ ವ್ಯವಸ್ಥೆ ಇದೆ ಎಂಬ ಆರೋಪ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರದ ನಿವಾಸದಲ್ಲಿ ನಾಲ್ವರು ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ನೇಮಿಸಿಕೊಂಡು, ಅತ್ಯಾಧುನಿಕ ಉಪಕರಣಗಳ ಮೂಲಕ ಸಚಿವರು ಹಾಗೂ ಇತರರ ಮಾತುಕತೆಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂಬ ಮಾಹಿತಿ ತಮಗೆ ಲಭಿಸಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ರಾಜಕೀಯ ನಾಯಕರು ಹಾಗೂ ಸಚಿವರ ಫೋನ್ಗಳನ್ನು ಕದ್ದಾಲಿಸಲಾಗುತ್ತಿದೆ ಎಂಬ ಆರೋಪ ಗಂಭೀರವಾಗಿದ್ದು, ಈ ಬಗ್ಗೆ ಪೊಲೀಸ್ ಇಲಾಖೆಯಲ್ಲೂ ಚರ್ಚೆಯಾಗುತ್ತಿದೆ ಎಂಬ ಮಾಹಿತಿ ಬಂದಿದೆ ಎಂದು ಅವರು ಹೇಳಿದರು.
ಆದರೆ, ಮುಖ್ಯಮಂತ್ರಿ ಸ್ವತಃ ಇಂತಹ ಚಟುವಟಿಕೆಗಳಿಗೆ ಆದೇಶ ನೀಡಿದ್ದಾರೆ ಎಂದು ತಾನು ಹೇಳುತ್ತಿಲ್ಲ. ಇಲಾಖೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸಮಗ್ರ ತನಿಖೆಯ ಮೂಲಕ ಪರಿಶೀಲಿಸಬೇಕು ಎಂದು ಸ್ಪಷ್ಟಪಡಿಸಿದರು.
ಪೆನ್ಡ್ರೈವ್ ಪ್ರಕರಣದ ಬಗ್ಗೆಯೂ ಪ್ರಶ್ನೆ
2024ರ ಲೋಕಸಭಾ ಚುನಾವಣೆಗೆ ಎರಡು ದಿನ ಬಾಕಿ ಇರುವಾಗ ಮಂಡ್ಯ ಮತ್ತು ಹಾಸನ ಭಾಗಗಳಲ್ಲಿ ವಿಡಿಯೊಗಳನ್ನು ಪೆನ್ಡ್ರೈವ್ಗಳಲ್ಲಿ ಹಂಚಲಾಗಿದೆ ಎಂದು ಹೇಳಿದ ಕುಮಾರಸ್ವಾಮಿ ಅವರು, ವಿಡಿಯೋಗಳಲ್ಲಿ ಇದ್ದ ಮಹಿಳೆಯರ ಮುಖಗಳನ್ನು ಮರೆಮಾಚಲಿಲ್ಲ. ಲೋಕಸಭೆಯ ಇವತ್ತಿನ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ನಾನೂರು ಮಹಿಳೆಯರ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿದ್ದರು. ಆ ನಾನೂರು ಜನ ಮಹಿಳೆಯರಲ್ಲಿ ಎಷ್ಟು ಜನ ಬಂದು ಕೇಸು ದಾಖಲು ಮಾಡಿದ್ದಾರೆ? ಎಂದು ಪ್ರಶ್ನಿಸಿದರು.
ಆ ವಿಡಿಯೊಗಳನ್ನು ಸಿದ್ಧಪಡಿಸಿದವರು ಯಾರು, ಅವುಗಳನ್ನು ಯಾವ ಸ್ಥಳದಲ್ಲಿ ಸಿದ್ಧಪಡಿಸಲಾಯಿತು ಮತ್ತು ಹಂಚಿದವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಪ್ರಶ್ನೆಗಳಿಗೆ ರಾಜ್ಯ ಸರ್ಕಾರ ಉತ್ತರಿಸಬೇಕು ಎಂದು ಆಗ್ರಹಿಸಿದರು.
ತಮ್ಮ ಕುಟುಂಬದವರ ಬಗ್ಗೆಯೂ ಅವಹೇಳನಕಾರಿ ಸುದ್ದಿಗಳನ್ನು ಪ್ರಸಾರ ಮಾಡಲಾಗಿತ್ತು. ತಮ್ಮ ತಾಯಿಯ ವಿರುದ್ಧವೂ ಆರೋಪಗಳು ಮತ್ತು ಸುದ್ದಿಗಳನ್ನು ಹರಡಲಾಗಿತ್ತು. ಇಂತಹ ಸಂದರ್ಭಗಳಲ್ಲಿಯೂ ತಮ್ಮ ಕುಟುಂಬ ನ್ಯಾಯಾಲಯದ ಮೊರೆ ಹೋಗಿರಲಿಲ್ಲ ಎಂದು ಅವರು ಹೇಳಿದರು.
ಸಿದ್ದರಾಮಯ್ಯ ನ್ಯಾಯಾಲಯದ ಮೊರೆ ಹೋಗಿರುವುದಕ್ಕೆ ಆಕ್ಷೇಪ
ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ ಎಂಬ ವರದಿಗಳನ್ನು ಉಲ್ಲೇಖಿಸಿದ ಕುಮಾರಸ್ವಾಮಿ, ಯಾವುದೇ ಪ್ರಕರಣದಲ್ಲಿಯೂ ಸತ್ಯಾಸತ್ಯತೆ ನ್ಯಾಯಾಂಗದ ಮೂಲಕ ಹೊರಬರಬೇಕು. ನ್ಯಾಯಾಲಯದ ತೀರ್ಪಿಗೆ ಎಲ್ಲರೂ ತಲೆಬಾಗಬೇಕು ಎಂಬುದು ತಮ್ಮ ನಿಲುವು ಎಂದು ತಿಳಿಸಿದರು.
ಸುದೀರ್ಘ ರಾಜಕೀಯ ಅನುಭವ ಹೊಂದಿರುವ ಸಿದ್ದರಾಮಯ್ಯ ಅವರು ನ್ಯಾಯಾಲಯದ ತಡೆಯಾಜ್ಞೆ ಪಡೆಯುವ ಬದಲು ದಿಟ್ಟವಾಗಿ ನಿಂತು ಇಂತಹ ಬೆಳವಣಿಗೆಗಳನ್ನು ಎದುರಿಸಬೇಕು ಎಂದು ಅವರು ಮನವಿ ಮಾಡಿದರು.
ಸಿಬಿಐ ತನಿಖೆಗೆ ಮತ್ತೆ ಒತ್ತಾಯ
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸಿರುವುದನ್ನು ತಾವು ವಿರೋಧಿಸಿಲ್ಲ ಎಂದ ಕುಮಾರಸ್ವಾಮಿ, ಇದೇ ರೀತಿಯ ಗಂಭೀರತೆಯನ್ನು ಇತರ ಪ್ರಕರಣಗಳಲ್ಲಿಯೂ ತೋರಿಸಬೇಕು ಎಂದು ಹೇಳಿದರು.
ಸ್ಟಿಂಗ್ ಆಪರೇಷನ್ಗಳ ಹಿಂದೆ ಇರುವವರನ್ನು ಪತ್ತೆಹಚ್ಚಿ, ಆರೋಪಗಳ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಲು ಸಿಬಿಐ ತನಿಖೆ ಅಗತ್ಯವಿದೆ. ಈ ಕುರಿತು ಅಮಿತ್ ಶಾ ಅವರನ್ನು ಭೇಟಿಯಾಗಿ ದೂರು ಸಲ್ಲಿಸುವುದಾಗಿ ಪುನರುಚ್ಚರಿಸಿದರು.
Uncategorized
Lawyer Amrutesh-ಸೌಜನ್ಯ ಪ್ರಕರಣ ಮರುತನಿಖೆ : ಸಂತೋಷ್ ರಾವ್ ವಿರುದ್ಧ ಬಲವಾದ ಸಾಕ್ಷ್ಯಗಳಿವೆ: ಧಾರ್ಮಿಕ ಕ್ಷೇತ್ರದ ಮೇಲೆ ಷಡ್ಯಂತ್ರ ನಡೆಯುತ್ತಿದೆ : ಹೈಕೋರ್ಟ್ ವಕೀಲ ಅಮೃತೇಶ್
ಸೌಜನ್ಯಾ ಪ್ರಕರಣದ ಮರುತನಿಖೆಗಾಗಿ ಸುಪ್ರೀಂ ಕೋರ್ಟ್ ಆದೇಶದಂತೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲಾಗಿದೆ. ಆದರೆ ಈ ತನಿಖೆಯಿಂದ ಪ್ರಕರಣ ತಾರ್ಕಿಕ ಅಂತ್ಯ ಕಾಣುವುದು ಸಾಧ್ಯವಿಲ್ಲ ಎಂದು ಹೈಕೋರ್ಟ್ ವಕೀಲ ಅಮೃತೇಶ್ ಅಭಿಪ್ರಾಯಪಟ್ಟಿದ್ದಾರೆ. ಸಂತೋಷ್ ರಾವ್ ಅವರನ್ನು ತನಿಖೆಯಿಂದ ಹೊರಗಿಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ ಎಂದು ಉಲ್ಲೇಖಿಸಿದ ಅಮೃತೇಶ್, ಅವರ ವಿರುದ್ಧ ಬಲವಾದ ಸಾಕ್ಷ್ಯಗಳಿವೆ ಎಂದು ಹೇಳಿದರು.
ಬೆಂಗಳೂರು: ಸೌಜನ್ಯಾ ಪ್ರಕರಣದ ಮರುತನಿಖೆಗಾಗಿ ಸುಪ್ರೀಂ ಕೋರ್ಟ್ ಆದೇಶದಂತೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲಾಗಿದೆ. ಆದರೆ ಈ ತನಿಖೆಯಿಂದ ಪ್ರಕರಣ ತಾರ್ಕಿಕ ಅಂತ್ಯ ಕಾಣುವುದು ಸಾಧ್ಯವಿಲ್ಲ ಎಂದು ಹೈಕೋರ್ಟ್ ವಕೀಲ ಅಮೃತೇಶ್ ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ‘ವಾಯ್ಸ್ ಆಫ್ ಪಬ್ಲಿಕ್’ ಸಂಘಟನೆ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೌಜನ್ಯಾ ಪ್ರಕರಣದ ಮರುತನಿಖೆ, ಸಂತೋಷ್ ರಾವ್ ಪಾತ್ರ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ವಿವಿಧ ಬೆಳವಣಿಗೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಸಂತೋಷ್ ರಾವ್ ಅವರನ್ನು ತನಿಖೆಯಿಂದ ಹೊರಗಿಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ ಎಂದು ಉಲ್ಲೇಖಿಸಿದ ಅಮೃತೇಶ್, ಅವರ ವಿರುದ್ಧ ಬಲವಾದ ಸಾಕ್ಷ್ಯಗಳಿವೆ ಎಂಬುದು ತಮ್ಮ ವಾದವಾಗಿದೆ ಎಂದು ಹೇಳಿದರು. ಸಿಬಿಐ ತನಿಖೆಯ ವೇಳೆ ಫೋರೆನ್ಸಿಕ್ ವರದಿಗಳಲ್ಲಿ ಸಂತೋಷ್ ರಾವ್ ಅವರ ದೇಹದಲ್ಲಿದ್ದ ಗಾಯಗಳ ಬಗ್ಗೆ ಉಲ್ಲೇಖವಾಗಿತ್ತು ಎಂದು ತಿಳಿಸಿದರು.
ಸಿಬಿಐನ ವಿಶೇಷ ಸಾರ್ವಜನಿಕ ಅಭಿಯೋಜಕರಾಗಿದ್ದ ಬಿ.ಆರ್. ಶಿವಾನಂದ ಅವರು ಪ್ರಕರಣದ ವಿಚಾರದಲ್ಲಿ ನಿರ್ದಿಷ್ಟ ಸಂಘಟನೆಗಳ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಅಮೃತೇಶ್ ಆರೋಪಿಸಿದರು. ಈ ಆರೋಪಗಳಿಗೆ ಸಂಬಂಧಿಸಿದಂತೆ ಸ್ವತಂತ್ರವಾಗಿ ದೃಢೀಕರಿಸಿದ ಮಾಹಿತಿ ಲಭ್ಯವಿಲ್ಲ.
ಕ್ಷೇತ್ರದ ವಿರುದ್ಧ ಅಪಪ್ರಚಾರದ ಆರೋಪ
ಸೌಜನ್ಯಾ ಪ್ರಕರಣವನ್ನು ಮುಂದಿಟ್ಟುಕೊಂಡು ಕೆಲವರು ಹಣ ಸಂಪಾದಿಸಿದ್ದಾರೆ ಹಾಗೂ ಪ್ರಸಿದ್ಧ ಧಾರ್ಮಿಕ ಕ್ಷೇತ್ರದ ವಿರುದ್ಧ ಅಪಪ್ರಚಾರ ನಡೆಸುವ ಉದ್ದೇಶದಿಂದ ಷಡ್ಯಂತ್ರ ರೂಪಿಸಿದ್ದಾರೆ ಎಂದು ಅಮೃತೇಶ್ ಆರೋಪಿಸಿದರು. ಪ್ರಕರಣದ ಹಿಂದೆ ಎಡಪಂಥೀಯರು ಹಾಗೂ ನಗರ ನಕ್ಸಲರ ಕೈವಾಡವಿದೆ ಎಂಬ ಆರೋಪವನ್ನೂ ಅವರು ಮಾಡಿದರು.
ಬುರುಡೆ ಪ್ರಕರಣದ ಅಂತಿಮ ವರದಿ ಬಹಿರಂಗಪಡಿಸಲು ಆಗ್ರಹ
ಸೌಜನ್ಯಾ ಪ್ರಕರಣದಲ್ಲಿ ಹಿನ್ನಡೆಯಾದ ಬಳಿಕ ಕೆಲವು ಗುಂಪುಗಳು ಬುರುಡೆ ಪ್ರಕರಣವನ್ನು ಮುನ್ನೆಲೆಗೆ ತಂದವು ಎಂದು ಅಮೃತೇಶ್ ಹೇಳಿದರು. ಸರ್ಕಾರದ ವೆಚ್ಚದಲ್ಲಿ ನಡೆದಿದ್ದ ಅನಧಿಕೃತ ಶವಗಳ ಅಂತ್ಯಸಂಸ್ಕಾರಕ್ಕೆ ಸಂಬಂಧಿಸಿದ ತನಿಖೆಯ ಅಂತಿಮ ವರದಿ ಇನ್ನೂ ಬಹಿರಂಗವಾಗಿಲ್ಲ ಎಂದು ಅವರು ಆಕ್ಷೇಪಿಸಿದರು.
ಚಿನ್ನಯ್ಯ ಆರೋಪಿಸಿರುವ ಮಹೇಶ್ ಶೆಟ್ಟಿ ತಿಮರೋಡಿ, ಮಟ್ಟೆಣ್ಣವರ್ ಹಾಗೂ ಯೂಟ್ಯೂಬರ್ ಸಮೀರ್ ಸೇರಿದಂತೆ ಕೆಲವರ ವಿರುದ್ಧ ಪ್ರಕರಣ ದಾಖಲಾಗದಿರುವುದರ ಬಗ್ಗೆಯೂ ಅವರು ಪ್ರಶ್ನೆ ಎತ್ತಿದರು.
ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸುವುದು ಕಷ್ಟ
ಸೌಜನ್ಯಾ ತಾಯಿ ಕುಸುಮಾವತಿ ಹಾಗೂ ಕೆಲವು ಗ್ಯಾಂಗ್ ಹಣ ಮಾಡುವ ಉದ್ದೇಶದಿಂದ ಕ್ಷೇತ್ರದ ವಿರುದ್ಧ ಕುತಂತ್ರ ನಡೆಸುತ್ತಿದೆ. ಕೆಲವು ವಿಷಯ ಮುಚ್ಚಿಟ್ಟು ಅವರು ಸುಪ್ರೀಂಕೋರ್ಟ್ಗೆ ಹೋಗಿದ್ದಾರೆ. ಸುಪ್ರಿಂಕೋರ್ಟ್ ಸಂಪೂರ್ಣವಾಗಿ ಹೊಸದಾಗಿ ತನಿಖೆ ಮಾಡಲು ಎಸ್ಐಟಿ ರಚನೆ ಮಾಡಲು ಸೂಚಿಸಿದೆ. ಆದರೆ ಮೂರು ತಿಂಗಳಲ್ಲಿ ಪ್ರಕರಣದ ತೀರ್ಪು ಬರಲು ಸಾಧ್ಯವಿಲ್ಲ. 14 ವರ್ಷದ ಸಾಕ್ಷ್ಯಾಧಾರಗಳು ಈಗ ಸಿಗಲು ಸಾಧ್ಯವಿಲ್ಲ. ಈ ಗ್ಯಾಂಗ್ನ ನಿಜವಾದ ಟಾರ್ಗೆಟ್ ಮಲ್ಲಿಕ್ ಜೈನ್, ಧೀರಜ್ ಜೈನ್, ಉದಯ್ ಜೈನ್ ಅಲ್ಲ. ಬದಲಾಗಿ ಕ್ಷೇತ್ರವೇ ಆಗಿದೆ ಎಂದು ಅಮೃತೇಶ್ ತಿಳಿಸಿದ್ದಾರೆ.
ಹಿಂದಿನ ಹೇಳಿಕೆಗಳನ್ನು ಉಲ್ಲೇಖಿಸಿದ ವಕೀಲ
ಸೌಜನ್ಯಾ ಪ್ರಕರಣ ನಡೆದು 14 ವರ್ಷಗಳಾಗಿವೆ ಎಂದು ತಿಳಿಸಿದ ಅಮೃತೇಶ್, ಆರಂಭದಲ್ಲಿ ನಾಪತ್ತೆ ದೂರು ದಾಖಲಾಗಿತ್ತು. ಬಳಿಕ ಮೃತದೇಹ ಪತ್ತೆಯಾದ ನಂತರ ಅತ್ಯಾಚಾರ ಮತ್ತು ಕೊಲೆ ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು. ನಂತರ ತನಿಖೆಯನ್ನು ಸಿಐಡಿಯಿಂದ ಸಿಬಿಐಗೆ ವರ್ಗಾಯಿಸಲಾಗಿತ್ತು ಎಂದು ವಿವರಿಸಿದರು.
ಘಟನೆಯ ಬಳಿಕ ಸೌಜನ್ಯಾ ಅವರ ಕುಟುಂಬದವರು ಬೆಳ್ತಂಗಡಿಯಲ್ಲಿ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಧರ್ಮಸ್ಥಳದಿಂದ ಯಾವುದೇ ಒತ್ತಡ ಅಥವಾ ಬೆದರಿಕೆ ಇರಲಿಲ್ಲ ಎಂದು ಹೇಳಿದ್ದರೆಂದು ಅಮೃತೇಶ್ ಉಲ್ಲೇಖಿಸಿದರು. ಬಳಿಕ ಕೆಲವು ಗುಂಪುಗಳು ಧಾರ್ಮಿಕ ಗುರುಗಳು ಹಾಗೂ ಮಠಾಧೀಶರನ್ನು ಗುರಿಯಾಗಿಸಿಕೊಂಡು ಕ್ಷೇತ್ರದ ವಿರುದ್ಧ ಆರೋಪಗಳನ್ನು ಹರಡಿವೆ ಎಂದು ದೂರಿದರು.
ಸಂತೋಷ್ ರಾವ್ ಅವರನ್ನು ಪ್ರಕರಣದಿಂದ ಬಿಡುಗಡೆಗೊಳಿಸಲು ಸಾಕಷ್ಟು ಹಣ ಖರ್ಚು ಮಾಡಿರುವುದಾಗಿ ಮಹೇಶ್ ಶೆಟ್ಟಿ ತಿಮರೋಡಿ ಅವರೇ ಹೇಳಿದ್ದಾರೆ ಎಂದೂ ಅಮೃತೇಶ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವಕೀಲ ಸದಾನಂದ ಗೌಡ ಉಪಸ್ಥಿತರಿದ್ದರು.
-
ಸ್ಥಳೀಯ6 hours agoNavoor clinic-ನಾವೂರು ಕ್ಲಿನಿಕ್ಗೆ ಬೆಂಕಿ ಪ್ರಕರಣ: ರವಿ ಪೂಜಾರಿ ಬಂಧನ, ಇಬ್ಬರು ಶಂಕಿತರ ವಿಚಾರಣೆ
-
ಕಾರ್ಯಕ್ರಮಗಳು24 hours agoPuttur-ಪುತ್ತೂರು: ಅ.16ರಂದು ಪ್ರವೀಣ್ ಕ್ಯಾಪಿಟಲ್ನ ನವೀಕೃತ ಪ್ರಧಾನ ಕಚೇರಿ ಉದ್ಘಾಟನೆ
-
ಕಾರ್ಯಕ್ರಮಗಳು23 hours ago‘Havells Experience Center-ನಾಳೆ (ಅ. 15) ರಂದು ಮೈತ್ರಿ ಎಲೆಕ್ಟ್ರಿಕ್ನಲ್ಲಿ ʻಹ್ಯಾವೆಲ್ಸ್ ಎಕ್ಸ್ಪೀರಿಯನ್ಸ್ ಸೆಂಟರ್ʼ ಶುಭಾರಂಭ
-
ಕಾರ್ಯಕ್ರಮಗಳು24 hours agoPuttur-ಪುತ್ತೂರು: ಅ.15ರಂದು ‘ಮೈ ಡ್ರೆಸ್ ಕೋಡ್’ ನೂತನ ಮಳಿಗೆ ಗ್ರಾಂಡ್ ರೀ-ಓಪನಿಂಗ್
-
ಅಂತರ ರಾಜ್ಯ6 hours agoMurder case-ಮೀರತ್ ಬ್ಲೂ ಡ್ರಮ್ ಕೊಲೆ ಪ್ರಕರಣ: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ಗೆ ಗಲ್ಲು ಶಿಕ್ಷೆ..!
-
ಬಿಗ್ ನ್ಯೂಸ್6 hours agoRenukashwami murder case-ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು: ಮಾಫಿ ಸಾಕ್ಷಿ ಅರ್ಜಿ ವಾಪಸ್ ಪಡೆದ ಎ10 ವಿನಯ್
-
ಅಪರಾಧ5 hours agoB.R. Shetty-ಬ್ಯಾಂಕ್ ಆಫ್ ಬರೋಡಾ ವಿರುದ್ಧ ಯುಎಇ ಎಕ್ಸ್ಚೇಂಜ್ ಸಂಸ್ಥೆಗಳ ಸ್ಥಾಪಕ ಬಿ.ಆರ್. ಶೆಟ್ಟಿ ಕಾನೂನು ಸಮರ; ₹1.25 ಲಕ್ಷ ಕೋಟಿ ಪರಿಹಾರ ಬೇಡಿಕೆ
-
ಶಿಕ್ಷಣ22 hours agoSanidhya S. Rao-ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆಯಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ನ ಸಾನಿಧ್ಯ ಎಸ್. ರಾವ್ಗೆ ಪ್ರಥಮ ಸ್ಥಾನ; SGFI ಸ್ಪರ್ಧೆಗೆ ಆಯ್ಕೆ


















