Connect with us

Uncategorized

ಬಲ್ನಾಡು ಉಳ್ಳಾಲ್ತಿ ರಾಜರಾಜೇಶ್ವರಿ ಅಂತರ್ಗತ ಪಾರ್ವತಿ | ಉತ್ಸವ ಬಿಂಬ ಭೂಸ್ಪರ್ಶವಾಗಲು ಅಗೋಚರ ಶಕ್ತಿ ಕಾರಣ | ಗಣಹೋಮ ಸರಿಯಾಗಿ ನಡೆಯುತ್ತಿಲ್ಲ, ಸಾನ್ನಿಧ್ಯ ವೃದ್ದಿಗಿಲ್ಲ ಮನ್ನಣೆ, ದೇವರ ಕೋಪ | ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇಗುಲದ ಅಷ್ಟಮಂಗಲದಲ್ಲಿ ಗೋಚರ

Published

on



Ad Widget

Ad Widget

Ad Widget

Ad Widget

ಪುತ್ತೂರು ಡಿ 6 : ಬಲ್ನಾಡು ಉಳ್ಳಾಲ್ತಿಯೂ ರಾಜರಾಜೇಶ್ವರಿ ಅಂತರ್ಗತ ಪಾರ್ವತಿಯೇ ಆಗಿದ್ದಾಳೆ.  ಕಿರಾತಕ ಸ್ವಭಾವ ಈಕೆಯದಾಗಿದ್ದು, ಅಂಥದ್ದೇ ಸ್ವಭಾವದ ಈಶ್ವರನನ್ನು ಕಾಣಲು ಉತ್ಸಾಹದಿಂದ ಬರುತ್ತಾಳೆ ಎಂದು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜ್ಯೋತಿರ್ ವಿದ್ವಾನ್ ವಳಕುಂಜ ವೆಂಕಟರಮಣ ಭಟ್ ಮತ್ತುಡಾಕ್ಟರ್ ವಳಕುಂಜ ಮುರಳೀಕೃಷ್ಣ ಭಟ್ ನೇತೃತ್ವದಲ್ಲಿ   ನಡೆಯುತ್ತಿರುವ ಅಷ್ಟಮಂಗಲ ಪ್ರಶ್ನೆಚಿಂತನೆಯಲ್ಲಿ ಕಂಡುಬಂದಿದೆ.

Ad Widget

Ad Widget

Ad Widget

Ad Widget

ಕಾಶಿಗೆ ಸಮಾನವಾದ ಕ್ಷೇತ್ರ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ. ಇಲ್ಲಿ ರುದ್ರ ಸಂತೃಪ್ತಿಗೆ ಮಹತ್ವ ಸಿಕ್ಕಿಲ್ಲ. ದೇವಾಲಯದಲ್ಲಿ ಸಾನ್ನಿಧ್ಯ ವೃದ್ಧಿಗೆ ಗಮನ ಕೊಟ್ಟಿಲ್ಲ. ಭೌತಿಕ ಪ್ರಗತಿಗೆ ಕೊಟ್ಟಷ್ಟು ಮನ್ನಣೆ ಸಾನ್ನಿಧ್ಯದ ವೃದ್ಧಿಗೆ ಸಿಕ್ಕಿಲ್ಲ. ನಿತ್ಯಾನುಷ್ಠಾನ, ಆರಾಧನೆಯಲ್ಲಿ ಕಂಡುಬಂದ ಲೋಪ ಹಾಗೆಯೇ ಮುಂದುವರಿದಿದೆ. ದೇವರ ಕೋಪಕ್ಕೆ ಕಾರಣ ಎಂಬ ಅಂಶ ಪ್ರಶ್ನಾ ಚಿಂತನೆಯಲ್ಲಿ ಗೋಚರವಾಯಿತು.

Ad Widget

Ad Widget

Ad Widget alt="Ad Widget"/>

Ad Widget

 ಸಾನ್ನಿಧ್ಯ ವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯ ಕಾಣುತ್ತಿದೆ. ಶಿವನಿಗೆ ಪ್ರಿಯವಾದದು ಇಲ್ಲಿ ನೀಡಲಾಗುತ್ತಿಲ್ಲ ಕಾಶಿ ಕ್ಷೇತ್ರದಲ್ಲಿ ನಿತ್ಯವೂ ರುದ್ರಪಠಣ, ರುದ್ರ ಪಾರಾಯಣ ನಡೆಯುತ್ತದೆ.ಕಾಶಿಗೆ ಸಮಾನವಾದ ಕ್ಷೇತ್ರವಿದು.ಇಲ್ಲಿ ರುದ್ರ ಸಂತೃಪ್ತಿಗೆ ಏನು ನಡೆಯುತ್ತಿದೆ? ಪೂಜೆಯಲ್ಲಿ ರುದ್ರಕ್ಕೆ ಎಷ್ಟು ಮಹತ್ವ ನೀಡಿದ್ದೀರಿ? ಶಿವ ದೇಗುಲದಲ್ಲಿ ರುದ್ರ ಮಾಡದೆ ಮತ್ತೆಲ್ಲಿ ಮಾಡಬೇಕು ಎಂದು ಪ್ರಶ್ನಿಸಿದ ದೈವಜ್ಞರು, ಏಕಾದಶ ರುದ್ರ, ಶತರುದ್ರ ಸೇವೆ ಮಾಡಿದರೆ ಉತ್ತಮ, ಕಾಲಕಾಲಕ್ಕೆ ವೇದ ಮಂತ್ರ ಮಠಣ ನಡೆಯಬೇಕು ಎಂದರು.

Ad Widget

Ad Widget <> Ad Widget

 ದೇವರಿಗೆ ತುಪ್ಪದ ದೀಪ ಪ್ರಧಾನ. ನಂತರದ ಸ್ಥಾನ ಎಳ್ಳೆಣ್ಣೆಗೆ.  ಪರಂಪರೆಯಂತೆ ಇಲ್ಲಿ ಎಳ್ಳೆಣ್ಣೆ ಬಳಸಿ. ಪ್ರಧಾನ ಬಿಂಬದ ಹಿಂದೆ ತುಪ್ಪದ ದೀಪ, ಎದುರು ಎಳ್ಳೆಣ್ಣೆ ದೀಪ ಬೆಳಗಬೇಕು.ಭಕ್ತರು ಶುದ್ಧ ಎಳ್ಳೆಣ್ಣೆ ನೀಡಬಹುದು. ಭಕ್ತರು ದೀಪ ಸೇವೆ ನೀಡಲು ಅವಕಾಶವಿರಬೇಕು. ಬಿಲ್ವಮಾಲೆ ಸೇವೆಯೂ ಇರಬೇಕು ಎಂದರು.



Ad Widget

 ಹಿನ್ನಡೆ ಎಂಬುದು ಭಗವಂತನ ಪರೀಕ್ಷೆ.  ಅದನ್ನು ಸರಿಮಾಡಿಕೊಂಡು ಮುಂದೆ ಹೋದರೆ ವ್ಯವಸ್ಥೆಗಳು ಸರಿಯಾಗುತ್ತವೆ. ಭಗವಂತ ಶಕ್ತಿ ಕೊಟ್ಟಿದ್ದಾನೆ. ಅದನ್ನೆಲ್ಲ ಸೇರಿಸಿಕೊಂಡು ಮು೦ದೆ ಹೋಗಬೇಕು ಎಂದು ದೈವಜ್ಞ ನುಡಿದರು.

Ad Widget

Ad Widget

ಉತ್ಸವ ಬಿಂಬ ಭೂಸ್ಪರ್ಶವಾಗಲು ಕಾರಣ ಅಗೋಚರ ಶಕ್ತಿ:

2 ವರ್ಷದ ಹಿಂದೆ ಶಿವರಾತ್ರಿಯಂದು ಶ್ರೀ ಮಹಾಲಿಂಗೇಶ್ವರ ದೇವರ ಉತ್ಸವ ಬಿಂಬವು ಬ್ರಹ್ಮವಾಹಕರ ಶಿರದಿಂದ ಕೆಳಗೆ ಜಾರಿ ಭೂ ಸ್ಪರ್ಶವಾಗಲು ಬ್ರಹ್ಮವಾಹಕರ ಅಶ್ರದ್ದೆ ಕಾರಣವಲ್ಲ. ಈ ಘಟನೆ ಮೂಲಕ ದೇವರು ನಿದರ್ಶನ ತೋರಿದ್ದಾರೆ. ಬ್ರಹ್ಮವಾಹಕರ ಸ್ವಾಧೀನ ನಷ್ಟವಾಗಿ ಬಿಂಬ ನೆಲ ಸ್ಪರ್ಶವಾಗಿದೆ. ಅಂದು ಅವರ ದೇಹಾರೋಗ್ಯವೂ ಕ್ಷೀಣದಲ್ಲಿತ್ತು.ಯಾರೋ ದೂಡಿದ ಅನುಭವ ಆಗಿರುವಂತಿದೆ.ಇಲ್ಲಿ ಈ ಅನುಭವ ಬ್ರಹ್ಮವಾಹಕರಿಗೆ ಹಿಂದೆಯೂ ಆಗಿದೆ ಎಂದು ಚಿ೦ತನೆಯಲ್ಲಿ ಗೋಚರಿಸಿತು.

ಸುರಂಗ ಮಾರ್ಗ

   ಪ್ರಾಚೀನ ಕಾಲದಲ್ಲಿ ದೇವಳದ ಕೆರೆಗೂ ದೇವಳದ ಗರ್ಭಗುಡಿಗೂ ಸಂಪರ್ಕ ಇರುವ ಸುರಂಗವಿದ್ದು ಅದನ್ನು ಮುಚ್ಚಲಾಗಿದೆ ಎಂದು ದೈವಜ್ಞರು ನುಡಿದಿದ್ದು ಈ ವೇಳೆ ಸಭೆಯಲ್ಲಿದ್ದವರು ಆ ಸುರಂಗದ ಮೂಲಕ  ಹಾವುಬರುತ್ತದೆ ಎಂಬ ಕಾರಣಕ್ಕೆ ಅದನ್ನು  ಮುಚ್ಚಲಾಗಿದೆ ಎಂದು ಮಾಹಿತಿ ನೀಡಿದರು.

ಎರಡು ರಥಗಳಿದ್ದವು

ಶ್ರೀದೇವಳದಲ್ಲಿ ಪ್ರಾಚೀನ ಕಾಲದಲ್ಲಿ 2 ರಥವಿದ್ದ ಲಕ್ಷಣಗಳಿವೆ.ಆಗಿನ ಬ್ರಹ್ಮರಥ ಈಗಿನದ್ದಕ್ಕಿಂತಲೂ ದೊಡ್ಡದಾಗಿತ್ತು. ಅದು ಬೆಂಕಿಗಾಹುತಿಯಾದ ಬಳಿಕ ಬೇರೆ ರಥ ಮಾಡಲಾಯಿತು ಎಂದು ಕಂಡು ಬಂತು.

 ಶಾಸ್ತಾರನ ಪೂಜೆಯಲ್ಲಿ ತಾತ್ಸರ ಸಲ್ಲದು

 ದೇಗುಲದಲ್ಲಿ ಶಾಸ್ತಾರನ ಆರಾಧನೆಯಲ್ಲಿ ಕಡೆಗಣನೆ ಕಾಣುತ್ತಿದೆ, ಇದು ಸರಿಯಲ್ಲ.  ಕಾರ್ಯಸಿದ್ಧಿಗೆ ಶಾಸ್ತಾರ ಪೂಜೆ ಮುಖ್ಯ.  ಎಳ್ಳೆಣ್ಣೆ ದೀಪ, ಪಾಯಸ ಸೇವೆ ನಡೆಸಬೇಕು.   ಶಾಸ್ತಾರನ ಲಿಂಗ ರೂಪದ ಆರಾಧನೆ ಇದೆ. ಮೂಲದಲ್ಲಿ ಶಾಸ್ತಾರನೆಂದರೆ ಬಿಲ್ಲು ಹಿಡಿದು, ಬೇಟೆ ಸ್ವಭಾವದಲ್ಲಿರುವ ಭೂತನಾಥ.  ಈತನೊಂದಿಗೆ ಸತ್ಯಕ, ಪ್ರಭಾದೇವಿ ಮತ್ತು ಪುಷ್ಕರ ಎಂಬ ಶಕ್ತಿಗಳಿದ್ದಾರೆ. ಅಯ್ಯಪ್ಪ ಮತ್ತು ಶಾಸ್ತರ ಬೇರೆ ಬೇರೆ. ಆದರೆ ಅಯ್ಯಪ್ಪನಲ್ಲಿರುವುದು ಶಾಸ್ತರನದೆ ಅಂಶ. ಶಾಸ್ತಾರನ ಆರಾಧನೆಯಲ್ಲಿ ನಿರ್ಲಕ್ಷ್ಯ ಸಲ್ಲದು ಎಂದು ದೈವಜ್ಞರು ನುಡಿದರು.

ಅಯ್ಯಪ ಮಂದಿರದಲ್ಲಿ ಶಬರಿಮಲೆ ಮಾದರಿ ಪೂಜೆ ನಡೆಯಬೇಕು

ದೇಗುಲದ ಹೊರಗಿರುವ ಅಯ್ಯಪ್ಪ ಮಂದಿರವು ಶಬರಿಮಲೆ ಪರಂಪರೆ ಹೊಂದಿದೆ.  ಅಲ್ಲಿ ಶಬರಿಮಲೆ ಮಾದರಿಯ  ಪೂಜೆ ನಡೆಯಬೇಕು.  ಹಿಂದೆ ನಿತ್ಯ ನೈವೇದ್ಯ ಮೂರು ಹೊತ್ತಿನ ಪೂಜೆ ನಡೆಯುತಿತ್ತು. . ಈಗ ನಿತ್ಯ ನೈವೇದ್ಯವಿಲ್ಲ. ಮೂರು ಹೊತ್ತಿನ ಪೂಜೆ ನಡೆಯುತ್ತಿಲ್ಲ. ಎಂದು ಪ್ರಶ್ನೆಯಲ್ಲಿ ಕಂಡು ಬಂತು.

ಜೈನ ಭವನದ ಸ್ಥಳ ಬಸದಿಯಾಗಿತ್ತು:

ಈಗ ಜೈನಭವನ ಇರುವ ಪ್ರದೇಶದಲ್ಲಿ ಹಿಂದೆ ಜೈನ ಬಸದಿಯಿತ್ತು.ಅಲ್ಲಿ ಪದ್ಮಾವತಿ, ಯಕ್ಷಿ ಸಂಕೇತ ಕಾಣುತ್ತಿದೆ.ಈ ಭಾಗದಲ್ಲಿ ಗರಡಿ ಇದ್ದು, ನಾಮಾವಶೇಷಗೊಂಡಿದೆ. ದೇಗುಲದ  ಪಶ್ಚಿಮಾಶ್ರಯದಲ್ಲಿ ಧೂಮಾವತಿ ಸಾನಿಧ್ಯವಿತ್ತು.

ಬಲ್ಲಾಡ್ ಉಳ್ಳಾಲ್ತಿಯ ಮೂಲಕ್ಷೇತ್ರದ ಪರಿಸರದಲ್ಲಿ ಮಗುವೊಂದು ಸಿಕ್ಕಿದ ಘಟನೆ ನಡೆದಿತ್ತು. ಈ ಭಾಗದಲ್ಲಿ  ಅತ್ಯಂತ ಕುಖ್ಯಾತ ವ್ಯಕ್ತಿಯೊಬ್ಬನಿದ್ದ.  ಜಲಮರಣದ ಲಕ್ಷಣ ಕಾಣುತ್ತಿದೆ  ಎಂದು ದೈವಜ್ಞರು ತಿಳಿಸಿದರು

ಮಹಾಲಿಂಗೇಶ್ವರನ ಪೂಜೆಯಷ್ಟೇ ಪ್ರಧಾನವಾದುದು ಗಣಪತಿ ಪೂಜೆ

ಮಹಾಲಿಂಗೇಶ್ವರ  ನೆಲೆಯಾಗುವ ಮುನ್ನವೇ ಇಲ್ಲಿ ಗಣಪತಿ ಉಪಾಸನೆ ಇತ್ತು. ಗಣಪತಿ ಸಂತುಷ್ಟನಾಗದಿದ್ದರೆ ಶಿವನೂ ಸಂತೃಪ್ತನಾಗಲಾರ. ಗಣಪತಿ ದೇವರಿಗೆ ಗಣಹೋಮ ಸರಿಯಾಗಿ ನಡೆಯುತ್ತಿಲ್ಲ. ಅಷ್ಟದ್ರವ್ಯ ಬಳಕೆಯಾಗುತ್ತಿಲ್ಲ, ಹೋಮ ಯಾರು ಮಾಡಬೇಕೆಂಬ ವಿಚಾರದಲ್ಲೇ ಚರ್ಚೆ ನಡೆದು ಶಾಪ ಸ್ವಭಾವ ನಡೆದಿದೆ.  ಪ್ರಧಾನ ಅರ್ಚಕರೆ ಗಣಪತಿ ಹೋಮ ಮಾಡಬೇಕು. ನೈವೇದ್ಯ, ಅಭಿಷೇಕ, ಹೋಮದಲ್ಲಿ ಕಡಿಮೆಯಾಗಬಾರದು. ಮಹಾಲಿಂಗೇಶ್ವರನ ಪೂಜೆಯಷ್ಟೇ ಪ್ರಧಾನವಾದುದು ಗಣಪತಿ ಪೂಜೆ ಎಂದು ದೈವಜ್ಞರು ನುಡಿದರು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಮತ್ತು ಸದಸ್ಯರು, ಬ್ರಹ್ಮಶ್ರೀ ವೇ ಮೂ ಶ್ರೀಧರ ತಂತ್ರಿ, ದೇವಳದ ಮಾಜಿ ಆಡಳಿತ ಮೊತ್ತೇಸರ ಎನ್.ಕೆ.ಜಗನ್ನಿವಾಸ ರಾವ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

ಇದನ್ನೂ ಓದಿ : ಪುತ್ತೂರು: ʼಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರೆಯ ನೀರಿಗೆ ಸಂಜೀವಿನಿ ಶಕ್ತಿಯಿದೆ – ಈ ನೀರನ್ನು ಶಾಸ್ರೋಕ್ತವಾಗಿ ಅಭಿಮಂತ್ರಿಸಿದಲ್ಲಿ ರೋಗನಿವಾರಕ ಶಕ್ತಿಯಾಗಿ ಬಳಸಬಹುದುʼ : ಅಷ್ಟಮಂಗಲ ಪ್ರಶ್ನೆ ಚಿಂತನೆಯಲ್ಲಿ ಪ್ರಕಟ

ಇದನ್ನೂ ಓದಿ : ಶೈಲಿ ಒಂದೆಯಾದರೂ ದೇಗುಲದ ಪ್ರಾಸಾದ ಹಿಂದಿನ ಮಾನದಂತಿಲ್ಲ | ಹಿಂದೆಯೂ ಬ್ರಹ್ಮ ರಥವಿತ್ತು | ಸ್ವರ್ಣ ಪ್ರಭಾವಳಿಯ ಪ್ರಾಚೀನ ಬಿಂಬ ಕಾಲ ಘಟ್ಟದಲ್ಲಿ ಹೊರ ಹೋದ ಜಿಜ್ನಾಸೆ | ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಗೋಚರ

Ad Widget
Click to comment

Leave a Reply

Uncategorized

HYDGEN Innovation Day-HYDGEN ಇನ್ನೋವೇಶನ್ ಡೇ 2026 ಕಾರ್ಯಕ್ರಮ; ಮಂಗಳೂರಿನಲ್ಲಿ 20 ಮೆಗಾವ್ಯಾಟ್ (MW) ಸಾಮರ್ಥ್ಯದ ಎಲೆಕ್ಟ್ರೋಲೈಸರ್ ಉತ್ಪಾದನಾ ಘಟಕವನ್ನು ಉದ್ಘಾಟಿಸಿದ HYDGEN; 250 ಕಿಲೋವ್ಯಾಟ್ (kW) ಸಾಮರ್ಥ್ಯದ AEM ಮತ್ತು PEM ಎಲೆಕ್ಟ್ರೋಲೈಸರ್ಗಳ ಅನಾವರಣ

Published

on



Ad Widget

Ad Widget

Ad Widget

Ad Widget

ಗಂಜಿಮಠದಲ್ಲಿರುವ HYDGEN ಕಂಪನಿಯ ತಯಾರಿಕಾ ಘಟಕದಲ್ಲಿ ಆಯೋಜಿಸಲಾಗಿದ್ದ ‘HYDGEN ಇನ್ನೋವೇಶನ್ ಡೇ 2026’ ಕಾರ್ಯಕ್ರಮದಲ್ಲಿ, ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಈ ಘಟಕವನ್ನು ಉದ್ಘಾಟಿಸಿದರು ಹಾಗೂ ಹೊಸ ಎಲೆಕ್ಟ್ರೋಲೈಸರ್‌ಗಳನ್ನು ಅನಾವರಣಗೊಳಿಸಿದರು.

Ad Widget

Ad Widget

Ad Widget

Ad Widget

ಮಂಗಳೂರು, ಅ.15: ಮಂಗಳೂರಿನ ಗಂಜಿಮಠದಲ್ಲಿ ವಾರ್ಷಿಕ 20 ಮೆಗಾವ್ಯಾಟ್ (MW) ಉತ್ಪಾದನಾ ಸಾಮರ್ಥ್ಯದ ಹೊಸ ಎಲೆಕ್ಟ್ರೋಲೈಸರ್ ತಯಾರಿಕಾ ಘಟಕವನ್ನು ಉದ್ಘಾಟಿಸುವ ಮೂಲಕ, ‘HYDGEN’ ಸಂಸ್ಥೆಯು ಭಾರತದ ಹಸಿರು ಹೈಡ್ರೋಜನ್ (Green Hydrogen) ವಲಯದಲ್ಲಿ ಒಂದು ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದೆ. ಹೈಡ್ರೋಜನ್ ಉತ್ಪಾದನೆಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ, ಮಂಗಳೂರಿನಲ್ಲೇ ವಿನ್ಯಾಸಗೊಳಿಸಿ, ಜೋಡಿಸಿ ಮತ್ತು ಪರೀಕ್ಷಿಸಲಾದ 250 ಕಿಲೋವ್ಯಾಟ್ (kW) ಸಾಮರ್ಥ್ಯದ ‘ಆನಿಯನ್ ಎಕ್ಸ್ಚೇಂಜ್ ಮೆಂಬರೇನ್’ (AEM) ಮತ್ತು ‘ಪ್ರೋಟಾನ್ ಎಕ್ಸ್ಚೇಂಜ್ ಮೆಂಬರೇನ್’ (PEM) ಎಲೆಕ್ಟ್ರೋಲೈಸರ್‌ಗಳನ್ನು ಸಹ ಕಂಪನಿಯು ಇದೇ ವೇಳೆ ಅನಾವರಣಗೊಳಿಸಿತು.

Ad Widget

Ad Widget

Ad Widget alt="Ad Widget"/>

Ad Widget

ಗಂಜಿಮಠದಲ್ಲಿರುವ HYDGEN ಕಂಪನಿಯ ತಯಾರಿಕಾ ಘಟಕದಲ್ಲಿ ಆಯೋಜಿಸಲಾಗಿದ್ದ ‘HYDGEN ಇನ್ನೋವೇಶನ್ ಡೇ 2026’ ಕಾರ್ಯಕ್ರಮದಲ್ಲಿ, ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಈ ಘಟಕವನ್ನು ಉದ್ಘಾಟಿಸಿದರು ಹಾಗೂ ಹೊಸ ಎಲೆಕ್ಟ್ರೋಲೈಸರ್‌ಗಳನ್ನು ಅನಾವರಣಗೊಳಿಸಿದರು.

Ad Widget

Ad Widget <> Ad Widget

ಈ ಉದ್ಘಾಟನಾ ಸಮಾರಂಭದಲ್ಲಿ HYDGEN ನ ಸಹ-ಸ್ಥಾಪಕ ಮತ್ತು ಅಧ್ಯಕ್ಷರಾದ ಡಾ. ಮೈಕೆಲ್ ಗ್ರೈಸೀಲ್ಸ್; Transition VC ಯ ಸಂಸ್ಥಾಪಕ ಮತ್ತು ಮ್ಯಾನೇಜಿಂಗ್ ಪಾರ್ಟ್‌ನರ್ ಮೊಹಮ್ಮದ್ ಶೋಯೆಬ್ ಅಲಿ; AAGM ನ ಸಂಸ್ಥಾಪಕ ಮತ್ತು ಸಿಇಒ ಡಾ. ಅವಿಶೇಕ್ ಕುಮಾರ್; HYDGEN ನ ಸಹ-ಸ್ಥಾಪಕ ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿ ಡಾ. ಗೌತಮ್ ಕುಮಾರ್ ದಲಪತಿ; HYDGEN ನ ಸಹ-ಸ್ಥಾಪಕ ಮತ್ತು ಮುಖ್ಯ ಕಾರ್ಯಾಚರಣೆ ಅಧಿಕಾರಿ ಡಾ. ಕೃಷ್ಣ ಕುಮಾರ್; ಹಾಗೂ HYDGEN ನ ಕಾರ್ಪೊರೇಟ್ ನಿರ್ದೇಶಕಿ ಶ್ರೀಮತಿ ರಮ್ಯಶ್ರೀ ಡಿ.ಎಸ್. ಅವರು ಉಪಸ್ಥಿತರಿದ್ದರು. ಇವರೊಂದಿಗೆ HYDGEN ತಂಡದ ಇತರ ಸದಸ್ಯರು, ಉದ್ಯಮ ಪ್ರತಿನಿಧಿಗಳು ಮತ್ತು ಆಹ್ವಾನಿತ ಅತಿಥಿಗಳು ಕೂಡ ಭಾಗವಹಿಸಿದ್ದರು.



Ad Widget

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು, ವೃತ್ತಿಪರರು ಮತ್ತು ಉದ್ಯಮಿಗಳನ್ನು ತಮ್ಮ ತವರು ಊರುಗಳಿಗೆ ಮರಳಿ ಬರುವಂತೆ ಹಾಗೂ ಪ್ರಾದೇಶಿಕ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ಪ್ರೋತ್ಸಾಹಿಸುವ “ಬ್ಯಾಕ್ ಟು ಊರು” (Back to Ooru) ಉಪಕ್ರಮದ ಮಹತ್ವವನ್ನು ಎತ್ತಿ ತೋರಿಸಿದರು. ಮಂಗಳೂರಿನಲ್ಲಿ ತಮ್ಮ ಉದ್ಯಮವನ್ನು ಸ್ಥಾಪಿಸಿ, ವಿಸ್ತರಿಸುತ್ತಿರುವ HYDGEN ನ ಪ್ರವರ್ತಕರು, ನಿರ್ದೇಶಕರು ಮತ್ತು ಸಂಪೂರ್ಣ ತಂಡವನ್ನು ಅವರು ಸ್ವಾಗತಿಸಿ, ಅಭಿನಂದಿಸಿದರು. ಕಂಪನಿಯ ಬೆಳವಣಿಗೆಯು ಸ್ಥಳೀಯ ಜನರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಲ್ಲದೆ, ಈ ಪ್ರದೇಶದ ಆರ್ಥಿಕ ಅಭಿವೃದ್ಧಿಗೂ ಕೊಡುಗೆ ನೀಡಲಿದೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

Ad Widget

Ad Widget

ತಮ್ಮ ಆರಂಭಿಕ ಭಾಷಣದಲ್ಲಿ, ಡಾ. ಮೈಕೆಲ್ ಗ್ರೈಸೀಲ್ಸ್ ಅವರು HYDGEN ತಂಡದ ಸಮರ್ಪಣಾ ಭಾವ ಮತ್ತು ಕಂಪನಿಯ ಪ್ರಗತಿಗೆ ಅವರು ನೀಡಿದ ಕೊಡುಗೆಗಾಗಿ ಧನ್ಯವಾದ ಅರ್ಪಿಸಿದರು. ‘ಇನ್ನೋವೇಶನ್ ಡೇ’ (Innovation Day) ನಲ್ಲಿ ಪ್ರಸ್ತುತಪಡಿಸಲಾದ ಸಾಧನೆಗಳು ತಂಡದ ನಿರಂತರ ಪ್ರಯತ್ನಗಳ ಫಲವಾಗಿದ್ದು, ಇವುಗಳಲ್ಲಿ ಹೆಚ್ಚಿನವು ತೆರೆಮರೆಯಲ್ಲಿ ನಡೆದಿವೆ ಎಂದು ಅವರು ಒತ್ತಿ ಹೇಳಿದರು.

ಈ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದ ಡಾ. ಗ್ರೈಸೀಲ್ಸ್, ‘HYDGEN ಇನ್ನೋವೇಶನ್ ಡೇ’ಯು ಮುಕ್ತ ಚರ್ಚೆಗಳು, ಪ್ರಾಯೋಗಿಕ ಕಲಿಕೆ ಮತ್ತು ಹೊಸ ಪಾಲುದಾರಿಕೆಗಳನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದರು. ಭಾಗವಹಿಸುವವರು ಪ್ರಶ್ನೆಗಳನ್ನು ಕೇಳಲು, ಅಸ್ತಿತ್ವದಲ್ಲಿರುವ ಊಹೆಗಳನ್ನು ಪ್ರಶ್ನಿಸಲು ಮತ್ತು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಅವರು ಪ್ರೋತ್ಸಾಹಿಸಿದರು. ಇಂತಹ ಪ್ರತಿಕ್ರಿಯೆಗಳು ಕಂಪನಿಯು ಉತ್ತಮ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಮತ್ತು ಹೆಚ್ಚು ಸೂಕ್ತವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತವೆ ಎಂದು ಅವರು ಹೇಳಿದರು.

ಡಾ. ವೈ. ಭರತ್ ಶೆಟ್ಟಿ ಅವರು, ತಮ್ಮ ಕ್ಷೇತ್ರವಾದ ಮಂಗಳೂರು ನಗರ ಉತ್ತರ ವ್ಯಾಪ್ತಿಯ ಗಂಜಿಮಠದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಿರುವುದಕ್ಕಾಗಿ HYDGEN ತಂಡವನ್ನು ಅಭಿನಂದಿಸಿದರು. ಈ ಪ್ರದೇಶದಲ್ಲಿ ಕಂಪನಿಯು ಮಾಡಿರುವ ಹೂಡಿಕೆಯನ್ನು ಸ್ವಾಗತಿಸಿದ ಅವರು, ತಂಡದ ಮುಂದಿನ ಪ್ರಯತ್ನಗಳಿಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು.

ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಯು. ಟಿ. ಖಾದರ್ ಅವರು ಸಂದೇಶವೊಂದರ ಮೂಲಕ HYDGEN ತಂಡಕ್ಕೆ ಶುಭ ಹಾರೈಸಿದರು ಹಾಗೂ ಕಂಪನಿಯ ಈ ಉಪಕ್ರಮಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೂ, ಅವರು ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಯಶಸ್ಸು ಸಿಗಲಿ ಎಂದು ಹಾರೈಸಿದರು.

‘ಟ್ರಾನ್ಸಿಷನ್ ವಿಸಿ’ (Transition VC) ಸಂಸ್ಥೆಯ ಸ್ಥಾಪಕ ಮತ್ತು ವ್ಯವಸ್ಥಾಪಕ ಪಾಲುದಾರರಾದ ಮೊಹಮ್ಮದ್ ಶೋಯೆಬ್ ಅಲಿ ಅವರು, HYDGEN ಸಂಸ್ಥೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ತಂಡವು ತೋರಿದ ಕಠಿಣ ಪರಿಶ್ರಮ, ಸಮರ್ಪಣಾ ಭಾವ ಮತ್ತು ಬದ್ಧತೆಯನ್ನು ಶ್ಲಾಘಿಸಿ ಅಭಿನಂದಿಸಿದರು. ಹೈಡ್ರೋಜನ್ ತಂತ್ರಜ್ಞಾನವನ್ನು ಮುನ್ನಡೆಸುವಲ್ಲಿ ಹಾಗೂ ಮಂಗಳೂರಿನಲ್ಲಿ ಅತ್ಯಾಧುನಿಕ ಉತ್ಪಾದನಾ ಘಟಕವನ್ನು ಸ್ಥಾಪಿಸುವಲ್ಲಿ ತಂಡವು ಕೈಗೊಂಡ ಪ್ರಯತ್ನಗಳನ್ನು ಅವರು ಮೆಚ್ಚಿಕೊಂಡರು. ಅಲ್ಲದೆ, HYDGEN ಸಂಸ್ಥೆಯು ತನ್ನ ಮುಂದಿನ ಪ್ರಯತ್ನಗಳಲ್ಲಿ ನಿರಂತರ ಯಶಸ್ಸು ಮತ್ತು ಬೆಳವಣಿಗೆಯನ್ನು ಕಾಣಲಿ ಎಂದು ಹಾರೈಸಿದರು.
AAGM ನ ಸಂಸ್ಥಾಪಕ ಮತ್ತು CEO ಡಾ. ಅವಿಶೇಕ್ ಕುಮಾರ್, ಮಂಗಳೂರಿನ ಗಂಜಿಮಠದಲ್ಲಿರುವ HYDGEN ನ ಹೊಸ ಎಲೆಕ್ಟ್ರೋಲೈಸರ್ ಉತ್ಪಾದನಾ ಸೌಲಭ್ಯದ ಮಹತ್ವದ ಬಗ್ಗೆ ಮಾತನಾಡುತ್ತಾ, ಭಾರತದಲ್ಲಿ ಹೈಡ್ರೋಜನ್ ತಂತ್ರಜ್ಞಾನ ಅಭಿವೃದ್ಧಿ ಮತ್ತು ಕೈಗಾರಿಕಾ ಉತ್ಪಾದನೆಯನ್ನು ಬಲಪಡಿಸುವ ಸಾಮರ್ಥ್ಯವನ್ನು ಎತ್ತಿ ತೋರಿಸಿದರು. ಈ ಮಹತ್ವದ ಮೈಲಿಗಲ್ಲುಗಾಗಿ ಅವರು HYDGEN ತಂಡವನ್ನು ಅಭಿನಂದಿಸಿದರು ಮತ್ತು ಇಡೀ ತಂಡವು ಅದರ ಭವಿಷ್ಯದ ಪ್ರಯತ್ನಗಳಲ್ಲಿ ಯಶಸ್ಸು, ಬೆಳವಣಿಗೆ ಮತ್ತು ಶ್ರೇಷ್ಠತೆಯನ್ನು ಮುಂದುವರಿಸಲಿ ಎಂದು ಹಾರೈಸಿದರು.
ಉದ್ಯಮವು ಈಗಾಗಲೇ ಆ ಬದಲಾವಣೆಯನ್ನು ಮಾಡುತ್ತಿದೆ. ಕಳೆದ 12 ತಿಂಗಳುಗಳಲ್ಲಿ, HYDGEN ಭಾರತ, ಸಿಂಗಾಪುರ ಮತ್ತು ಥೈಲ್ಯಾಂಡ್‌ನಾದ್ಯಂತ 20+ ಯೋಜನೆಗಳನ್ನು ಕಾರ್ಯಗತಗೊಳಿಸಿದೆ ಮತ್ತು 1 ಮಿಲಿಯನ್ USD ಗಿಂತ ಹೆಚ್ಚಿನ ಮಾರಾಟವನ್ನು ದಾಖಲಿಸಿದೆ. ಗಂಜಿಮಠ ಸೌಲಭ್ಯವನ್ನು ಆ ಬೇಡಿಕೆಯ ಮುಂದಿನ ಹಂತಕ್ಕಾಗಿ ನಿರ್ಮಿಸಲಾಗಿದೆ: ದೊಡ್ಡ ವ್ಯವಸ್ಥೆಗಳು, ಹೆಚ್ಚಿನ ಗ್ರಾಹಕರು ಮತ್ತು ಮಂಗಳೂರಿನಲ್ಲಿ ಸ್ಥಳೀಯ ಘಟಕ ಪೂರೈಕೆದಾರರ ನೆಲೆ, ಭಾರತ ಮತ್ತು ವಿದೇಶಗಳಲ್ಲಿ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ.

ದಿನವು ಕಾರ್ಯಾಗಾರದೊಂದಿಗೆ ಪ್ರಾರಂಭವಾಗುತ್ತದೆ, ಅಲ್ಲಿ ಅತಿಥಿಗಳು ಸ್ಟ್ಯಾಕ್ ಅಸೆಂಬ್ಲಿ, ಸಿಸ್ಟಮ್ ಏಕೀಕರಣ, ಪರೀಕ್ಷೆ ಮತ್ತು ಹೈಡ್ರೋಜನ್ ಗುಣಮಟ್ಟದ ಪರಿಶೀಲನೆಗಳ ಮೂಲಕ ಒಂದೇ ಸ್ಥಳದಲ್ಲಿ ನಡೆಯುತ್ತಾರೆ. ಪುಣೆಯ ಸಿಎಸ್‌ಐಆರ್-ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯದ ನಿರ್ದೇಶಕ ಡಾ. ಆಶಿಶ್ ಲೆಲೆ, ಭಾರತದಲ್ಲಿ ಹೈಡ್ರೋಜನ್ ತಂತ್ರಜ್ಞಾನಗಳು ಪ್ರಯೋಗಾಲಯದಿಂದ ವಾಣಿಜ್ಯ ಬಳಕೆಗೆ ಹೇಗೆ ಚಲಿಸುತ್ತವೆ ಎಂಬುದರ ಕುರಿತು ಮುಖ್ಯ ಭಾಷಣ ಮಾಡುತ್ತಾರೆ. ಆನ್-ಸೈಟ್ ಹೈಡ್ರೋಜನ್ ಈಗಾಗಲೇ ಉದ್ಯಮಕ್ಕೆ ಲಾಭದಾಯಕವಾಗುತ್ತಿರುವ ಪೈಲಟ್ ಘಟಕಗಳಿಂದ ಬಹು-ಮೆಗಾವ್ಯಾಟ್ ಸ್ಥಾವರಗಳಿಗೆ ಮೆಂಬರೇನ್ ಎಲೆಕ್ಟ್ರೋಲೈಸರ್‌ಗಳನ್ನು ಕೊಂಡೊಯ್ಯುವುದು ಮತ್ತು ಕಡಿಮೆ ಹೈಡ್ರೋಜನ್ ವೆಚ್ಚಗಳಿಗೆ ಹಣಕಾಸು ಒದಗಿಸುವುದು ಹೇಗೆ ಎಂಬುದರ ಕುರಿತು ತಜ್ಞರ ಮಾತುಕತೆಗಳು ಮತ್ತು ಫಲಕ ಚರ್ಚೆಗಳು ನಡೆಯುತ್ತವೆ.

ಭಾರತದಾದ್ಯಂತ ನೀತಿ ನಿರೂಪಕರು, ಸರ್ಕಾರಿ ಅಧಿಕಾರಿಗಳು, ಸಂಶೋಧಕರು, ಶಿಕ್ಷಣ ತಜ್ಞರು, ಹೂಡಿಕೆದಾರರು ಮತ್ತು ಉದ್ಯಮಿಗಳು ಒಂದು ದಿನದ ಕಾರ್ಯಕ್ರಮದಲ್ಲಿ ಭಾಗವಹಿದರು.

HYDGEN ಕಂಪನಿ ಬಗ್ಗೆ
HYDGEN ಮಾಡ್ಯುಲರ್ PEM ಮತ್ತು AEM ಎಲೆಕ್ಟ್ರೋಲೈಸರ್ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸುತ್ತದೆ ಮತ್ತು ತಯಾರಿಸುತ್ತದೆ, ಇದು ಕೈಗಾರಿಕಾ ಬಳಕೆದಾರರಿಗೆ ಸ್ಥಳದಲ್ಲೇ ಮತ್ತು ಬೇಡಿಕೆಯ ಮೇರೆಗೆ ಹೈಡ್ರೋಜನ್ ಅನ್ನು ಉತ್ಪಾದಿಸುತ್ತದೆ. ಕಂಪನಿಯ ಪ್ರಧಾನ ಕಚೇರಿಯು ಮಂಗಳೂರಿನ ಗಂಜಿಮಠದಲ್ಲಿರುವ ಅದರ ಉತ್ಪಾದನಾ ಘಟಕದಲ್ಲಿದೆ, ಅಲ್ಲಿ ಸಂಪೂರ್ಣ ಸರಪಳಿ ಒಂದೇ ಸೂರಿನಡಿ ಇರುತ್ತದೆ: R&D, ಮೆಂಬರೇನ್ ಮತ್ತು ವೇಗವರ್ಧಕ ಅಭಿವೃದ್ಧಿ, ಸ್ಟ್ಯಾಕ್ ತಯಾರಿಕೆ, ಸಿಸ್ಟಮ್ ಜೋಡಣೆ, ಪರೀಕ್ಷೆ ಮತ್ತು ಗುಣಮಟ್ಟದ ಪರಿಶೀಲನೆಗಳನ್ನು ಭಾರತದಲ್ಲಿ ಮಾಡಲಾಗುತ್ತದೆ. ಪ್ರಯೋಗಾಲಯದಲ್ಲಿ ಬೆಳೆದ ವಜ್ರಗಳು, ವಿಶೇಷ ರಾಸಾಯನಿಕಗಳು, ಔಷಧಗಳು ಮತ್ತು ಅರೆವಾಹಕಗಳಲ್ಲಿ ಹೆಚ್ಚಿನ ಶುದ್ಧತೆಯ ಹೈಡ್ರೋಜನ್ ಅಗತ್ಯವಿರುವ ತಯಾರಕರಿಗೆ, ಅವರು ಅವಲಂಬಿಸಬಹುದಾದ ವೆಚ್ಚದಲ್ಲಿ HYDGEN ನಿರ್ಮಿಸುತ್ತದೆ. ಭಾರತ, ಸಿಂಗಾಪುರ ಮತ್ತು ಥೈಲ್ಯಾಂಡ್‌ನಾದ್ಯಂತ ವಿತರಿಸಲಾದ ಯೋಜನೆಗಳೊಂದಿಗೆ, HYDGEN ದೇಶೀಯ ಮತ್ತು ವಿದೇಶಗಳ ಗ್ರಾಹಕರಿಗಾಗಿ ಭಾರತದಲ್ಲಿ ತಯಾರಿಸಿದ ಆನ್-ಸೈಟ್ ಕೈಗಾರಿಕಾ ಹೈಡ್ರೋಜನ್‌ಗಾಗಿ ಭಾರತದ ನೆಲೆಯನ್ನು ನಿರ್ಮಿಸುತ್ತಿದೆ.

HYDGEN ನ ಎಲೆಕ್ಟ್ರೋಲೈಸರ್ ಘಟಕಗಳಲ್ಲಿ ಗಮನಾರ್ಹ ಪಾಲನ್ನು ಭಾರತದ ವಜ್ರ ಉದ್ಯಮದ ಪ್ರಮುಖ ಕೇಂದ್ರಗಳಲ್ಲಿ ಒಂದಾದ ಗುಜರಾತ್‌ನ ಸೂರತ್‌ನಲ್ಲಿರುವ ವಜ್ರ ಉತ್ಪಾದನಾ ಕಂಪನಿಗಳಿಗೆ ಸರಬರಾಜು ಮಾಡಲಾಗಿದೆ. ಈ ಸ್ಥಾಪನೆಗಳು ಪ್ರಯೋಗಾಲಯದಲ್ಲಿ ಬೆಳೆದ ವಜ್ರ ವಲಯದಲ್ಲಿ ಆನ್-ಸೈಟ್ ಹೈಡ್ರೋಜನ್ ಉತ್ಪಾದನಾ ಪರಿಹಾರಗಳ ಹೆಚ್ಚುತ್ತಿರುವ ಅಳವಡಿಕೆಯನ್ನು ಎತ್ತಿ ತೋರಿಸುತ್ತವೆ, ಅಲ್ಲಿ ಉತ್ಪಾದನಾ ಕಾರ್ಯಾಚರಣೆಗಳಿಗೆ ಹೆಚ್ಚಿನ ಶುದ್ಧತೆಯ ಹೈಡ್ರೋಜನ್‌ನ ವಿಶ್ವಾಸಾರ್ಹ ಪೂರೈಕೆ ಅತ್ಯಗತ್ಯ. ಈ ಮಾರುಕಟ್ಟೆಯಲ್ಲಿ ಹೈಡ್ಜೆನ್‌ನ ಬೆಳೆಯುತ್ತಿರುವ ಉಪಸ್ಥಿತಿಯು ಭಾರತದಾದ್ಯಂತ ಕೈಗಾರಿಕಾ ಗ್ರಾಹಕರ ವಿಶೇಷ ಅವಶ್ಯಕತೆಗಳನ್ನು ಪೂರೈಸುವಲ್ಲಿ ಅದರ ಸ್ಥಳೀಯ ಎಲೆಕ್ಟ್ರೋಲೈಸರ್ ತಂತ್ರಜ್ಞಾನದ ಪ್ರಸ್ತುತತೆಯನ್ನು ಪ್ರತಿಬಿಂಬಿಸುತ್ತದೆ.

Ad Widget
Continue Reading

Uncategorized

Philomena-ವಿಶ್ವವಿದ್ಯಾನಿಲಯ ಮಟ್ಟದ ಯೂತ್ ರೆಡ್‌ಕ್ರಾಸ್ ಪ್ರೇರಣಾ ಶಿಬಿರ-2026: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಗರಿ

Published

on



Ad Widget

Ad Widget

Ad Widget

Ad Widget

ಪುತ್ತೂರು, ಅ. 8: ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್‌ಕ್ರಾಸ್ ಘಟಕ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ (ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಶಾಖೆ) ಹಾಗೂ ಸುಬ್ರಹ್ಮಣ್ಯದ ಕೆ.ಎಸ್.ಎಸ್. ಕಾಲೇಜಿನ ಸಹಯೋಗದಲ್ಲಿ, ಸುಬ್ರಹ್ಮಣ್ಯದ ಕೆ.ಎಸ್.ಎಸ್. ಕಾಲೇಜಿನಲ್ಲಿ ಅಕ್ಟೋಬರ್ 8ರಿಂದ 10ರವರೆಗೆ ನಡೆದ ಮೂರು ದಿನಗಳ ಪ್ರೇರಣಾ ಶಿಬಿರದಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ತೃತೀಯ ಬಿ.ಕಾಂ ವಿದ್ಯಾರ್ಥಿ ಅಹಮ್ಮದ್ ಜೌಹರ್ ಹಾಗೂ ಪ್ರಥಮ ಬಿ.ಎಸ್ಸಿ ವಿದ್ಯಾರ್ಥಿನಿ ಮನೋನ್ಮಯಿ ಭಾಗವಹಿಸಿ ಆಶುಭಾಷಣ ಸ್ಪರ್ಧೆಯಲ್ಲಿ ಅಹಮ್ಮದ್ ಜೌಹರ್ ದ್ವಿತೀಯ ಬಹುಮಾನ ಗಳಿಸಿ, ಇಬ್ಬರು ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಇವರು ಪ್ರತಿನಿಧಿಸಿದ್ದ ತಂಡವು ಸ್ಪರ್ಧೆಯಲ್ಲಿ ‘ಅತ್ಯುತ್ತಮ ತಂಡ’ (Best Team Award) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

Ad Widget

Ad Widget

Ad Widget

Ad Widget

ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ ಹಾಗೂ ಪ್ರಾಧ್ಯಾಪಕರು ಶುಭ ಹಾರೈಸಿದ್ದಾರೆ

Ad Widget

Ad Widget

Ad Widget alt="Ad Widget"/>

Ad Widget
Ad Widget
Continue Reading

Uncategorized

Inspection-ರಾಜ್ಯದಲ್ಲಿ 80 ಸಿಹಿ ತಯಾರಿಕಾ ಘಟಕಗಳ ತಪಾಸಣೆ, 10 ಘಟಕಗಳಿಗೆ ನೋಟಿಸ್

Published

on



Ad Widget

Ad Widget

Ad Widget

Ad Widget

ರಾಜ್ಯಾದ್ಯಂತ ಸಿಹಿ ತಿಂಡಿ ತಯಾರಿಕಾ ಘಟಕಗಳು ಹಾಗೂ ಮಾರಾಟ ಮಳಿಗೆಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತಾ ವಿಭಾಗ ಗುರುವಾರ ವಿಶೇಷ ತಪಾಸಣಾ ಅಭಿಯಾನ ನಡೆಸಿದೆ. ಈ ವೇಳೆ ಒಟ್ಟು 125 ಆಹಾರ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ 10 ಸಿಹಿ ತಯಾರಿಕಾ ಘಟಕಗಳು ಹಾಗೂ ಆಹಾರ ವಹಿವಾಟುದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ.

Ad Widget

Ad Widget

Ad Widget

Ad Widget

ಬೆಂಗಳೂರು, ಅ.15: ರಾಜ್ಯಾದ್ಯಂತ ಸಿಹಿ ತಿಂಡಿ ತಯಾರಿಕಾ ಘಟಕಗಳು ಹಾಗೂ ಮಾರಾಟ ಮಳಿಗೆಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತಾ ವಿಭಾಗ ಗುರುವಾರ ವಿಶೇಷ ತಪಾಸಣಾ ಅಭಿಯಾನ ನಡೆಸಿದೆ. ಈ ವೇಳೆ ಒಟ್ಟು 125 ಆಹಾರ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ 10 ಸಿಹಿ ತಯಾರಿಕಾ ಘಟಕಗಳು ಹಾಗೂ ಆಹಾರ ವಹಿವಾಟುದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಆಯುಕ್ತ ಕೆ. ಶ್ರೀನಿವಾಸ್ ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ. ಆರೋಗ್ಯ ಸಚಿವರ ನಿರ್ದೇಶನದ ಮೇರೆಗೆ ರಾಜ್ಯದಾದ್ಯಂತ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Ad Widget

Ad Widget <> Ad Widget

ಅನೈರ್ಮಲ್ಯ, ಪರವಾನಗಿ ಕೊರತೆ ಪತ್ತೆ
ರಾಜ್ಯದ ವಿವಿಧೆಡೆ ಒಟ್ಟು 80 ಸಿಹಿ ತಯಾರಿಕಾ ಹಾಗೂ ಮಾರಾಟ ಘಟಕಗಳನ್ನು ಪರಿಶೀಲಿಸಲಾಗಿದೆ. ಈ ಸಂದರ್ಭದಲ್ಲಿ ಕೆಲವು ಘಟಕಗಳಲ್ಲಿ ಆಹಾರ ತಯಾರಿಕೆ ಮತ್ತು ಸಂಗ್ರಹಣಾ ಸ್ಥಳಗಳನ್ನು ಅನೈರ್ಮಲ್ಯಕರವಾಗಿ ನಿರ್ವಹಿಸುತ್ತಿರುವುದು ಪತ್ತೆಯಾಗಿದೆ.



Ad Widget

ಇದಲ್ಲದೆ, ಆಹಾರ ನಿರ್ವಹಣೆಯಲ್ಲಿ ತೊಡಗಿರುವ ಸಿಬ್ಬಂದಿ ವೈದ್ಯಕೀಯ ಪ್ರಮಾಣಪತ್ರಗಳನ್ನು ಹೊಂದಿರದಿರುವುದು ಹಾಗೂ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಪರವಾನಗಿ ಅಥವಾ ನೋಂದಣಿ ಪಡೆಯದಿರುವುದೂ ಕಂಡುಬಂದಿದೆ.

Ad Widget

Ad Widget

ಪ್ರಯೋಗಾಲಯಕ್ಕೆ 125 ಆಹಾರ ಮಾದರಿ
ತಪಾಸಣೆ ವೇಳೆ ಸಂಗ್ರಹಿಸಿದ 125 ಆಹಾರ ಮಾದರಿಗಳನ್ನು ಗುಣಮಟ್ಟ ಹಾಗೂ ಆಹಾರ ಸುರಕ್ಷತಾ ಮಾನದಂಡಗಳ ಪಾಲನೆಯನ್ನು ಪರಿಶೀಲಿಸಲು ಸರ್ಕಾರಿ ಆಹಾರ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. ಪ್ರಯೋಗಾಲಯದ ವರದಿಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.

ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಹಾಗೂ ಸಂಬಂಧಿತ 2011ರ ನಿಯಮಾವಳಿಗಳ ಅನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆಹಾರ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸುವ ಸಿಹಿ ತಯಾರಿಕಾ ಘಟಕಗಳು ಮತ್ತು ಮಾರಾಟ ಮಳಿಗೆಗಳ ವಿರುದ್ಧ ನಿರಂತರ ತಪಾಸಣೆ ನಡೆಸಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಆಯುಕ್ತ ಕೆ. ಶ್ರೀನಿವಾಸ್ ಎಚ್ಚರಿಕೆ ನೀಡಿದ್ದಾರೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading