Connect with us

ಅಪರಾಧ

Fake Love ಮಂಗಳೂರು : ನಾಟಕ ಕಲಾವಿದನಿಂದ ಪೊಲೀಸ್ ಅಧಿಕಾರಿ ಸೋಗಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಜತೆ ಪ್ರೀತಿ ನಾಟಕ – ನಗ್ನ ಫೋಟೊ ವೈರಲ್

Published

on



Ad Widget

Ad Widget

Ad Widget

Ad Widget

ಮಂಗಳೂರು : ಆ 10: ಬೀದಿ ನಾಟಕ ಕಲಾವಿದನೂಬ್ಬ ತಾನೂ ಪೊಲೀಸ್ ಇನ್ಸ್ಪೆಕ್ಟರ್ ಎಂದು ನಂಬಿಸಿ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿನಿ(19ವ)ಯೊಬ್ಬಳನ್ನು ಪ್ರೀತಿಸುವ ನಾಟಕವಾಡಿ ಆಕೆಯ ಖಾಸಗಿ ಪೋಟೊಗಳನ್ನು ವೈರಲ್ ಮಾಡಿದ ಘಟನೆಯೊಂದು ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ನಡೆದಿದೆ.

Ad Widget

Ad Widget

Ad Widget

Ad Widget


ಈ ಕುರಿತು ಸಂತ್ರಸ್ಥೆ ಯುವತಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ರಾಯಚೂರು ಮೂಲದ ಯಮನೂರ(22) ಪ್ರಕರಣದ ಆರೋಪಿ. ಈತ ಬೀದಿ ನಾಟಕ ಕಲಾವಿದನಾಗಿದ್ದು, ಹೀಗಾಗಿ ಈತನ ಬಳಿ ಪೊಲೀಸ್ ಸಮವಸ್ತ್ರವಿತ್ತು. ಇದನ್ನು ಧರಿಸಿ ತಾನು ಪೊಲೀಸ್ ಅಧಿಕಾರಿಯೆಂದು ಯುವತಿಯನ್ನು ನಂಬಿಸುವಲ್ಲಿ ಸಫಲನಾಗಿದ್ದಾನೆ.

Ad Widget

Ad Widget

Ad Widget alt="Ad Widget"/>

Ad Widget

ವಿದ್ಯಾರ್ಥಿನಿಗೆ ಇನ್ ಸ್ಟಾಗ್ರಾಂ ಮುಖಾಂತರ ಆರೋಪಿಯ ಪರಿಚಯವಾಗಿದೆ.
ಆರೋಪಿಯು ತಾನು ವಾಮಂಜೂರು ಸ್ಟೇಷನ್ ನಲ್ಲಿ ಪಿಎಸ್‌ಐ ಆಗಿ ಕೆಲಸ ಮಾಡಿಕೊಂಡಿರುವುದಾಗಿ ನಂಬಿಸಿದ್ದಾನೆ. ಸಂತ್ರಸ್ತೆಯ ಮನೆಯವರಿಗೆ ಕೆಲಸ ಕೊಡಿಸುವುದಾಗಿ ದಾಖಲಾತಿಗಳನ್ನು ಪಡೆದುಕೊಂಡಿದ್ದಾನೆ.

Ad Widget

Ad Widget <> Ad Widget

2023 ಮೇ ತಿಂಗಳಲ್ಲಿ ಆಕೆಯನ್ನು ಕದ್ರಿ ದೇವಸ್ಥಾನದಲ್ಲಿ ಭೇಟಿ ಮಾಡಿ, ಬಳಿಕ ಅದೇ ವಾರದಲ್ಲಿ ತಣ್ಣೀರು ಬಾವಿ ಬೀಚ್ ಗೆ ಕರೆದುಕೊಂಡು ಹೋಗಿ ಅಲ್ಲಿ ಆಕೆಯೊಂದಿಗೆ ಫೋಟೋ ತೆಗೆದಿದ್ದಾನೆ. ಬಳಿಕ ಆ ಫೋಟೋವನ್ನು ವೈರಲ್ ಮಾಡುವುದಾಗಿ ಹೆದರಿಸಿ ವಿದ್ಯಾರ್ಥಿನಿಯನ್ನು ಬೆಂಗಳೂರು ಸಮೀಪದ ನೆಲಮಂಗಲದ ಲಾಡ್ಜ್ ಗೆ ಕರೆದುಕೊಂಡು ಹೋಗಿದ್ದಾನೆ. ಆಲ್ಲಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಮಾಡಿದ್ದಾನೆ.



Ad Widget

ಬಳಿಕ ಮೂಲ್ಕಿ ಕಿನ್ನಿಗೋಳಿಯ ಲಾಡ್ಜ್ ಗೆ ಕರೆದುಕೊಂಡು ಹೋಗಿ ಅಲ್ಲಿಯೂ ಅತ್ಯಾಚಾರ ಮಾಡಿದ್ದಾನೆ. ಇಷ್ಟು ಮಾತ್ರವಲ್ಲದೆ ಸಂತ್ರಸ್ತ ವಿದ್ಯಾರ್ಥಿನಿಯ ನಗ್ನ ಫೋಟೋಗಳನ್ನು ಆಕೆಯ ಮನೆಯವರ ಮತ್ತು ಸ್ನೇಹಿತರ ಮೊಬೈಲ್ ಗೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿರುತ್ತಾನೆ.

Ad Widget

Ad Widget

ಈ ಫೋಟೋಗಳನ್ನು ಡಿಲೀಟ್ ಮಾಡಬೇಕಾದರೆ ರೂ.1,50,000/- ನೀಡಬೇಕೆಂದು ಡಿಮ್ಯಾಂಡ್ ಮಾಡಿರುತ್ತಾನೆಂದು ಯುವತಿ ದೂರು ನೀಡಿದ್ದಾಳೆ.

ಮಂಗಳೂರು ಮಹಿಳಾ ಠಾಣೆಯಲ್ಲಿ IPC ಕಲಂ: 354(ಡಿ), 376, 384, 506, 170 ಮತ್ತು ಕಲಂ: 67 (ಎ) ಐ.ಟಿ. ಆಕ್ಟ್ ನಂತೆ ಈ ಕುರಿತು ಕೇಸು ದಾಖಲಾಗಿರುತ್ತದೆ.


ಆ.9ರಂದು ಆರೋಪಿ ಯಮನೂರನನ್ನು ಮಂಗಳೂರು ನಗರದಲ್ಲಿ ದಸ್ತಗಿರಿ ಮಾಡಿದ ಪಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಮುಗ್ಧ ಹೆಣ್ಣು ಮಕ್ಕಳನ್ನು, ವಿದ್ಯಾರ್ಥಿನಿಯರನ್ನು ಪರಿಚಯಿಸಿಕೊಂಡು ಪ್ರೀತಿಯ ನಾಟಕಮಾಡಿ ಅತ್ಯಾಚಾರಗೊಳಿಸಿ ಮೋಸ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದೆ. ವಿದ್ಯಾರ್ಥಿನಿಯರಲ್ಲಿ, ಪೋಷಕರಲ್ಲಿ ಹಾಗೂ ಜನ ಸಾಮಾನ್ಯರಲ್ಲಿ ಆಗ್ರಹ ಪಡಿಸುವುದೇನೆಂದರ ಇಂತಹ ಮೋಸದ ಜಾಲಕ್ಕೆ ಹೆಣ್ಣು ಮಕ್ಕಳು ಬೀಳದಂತೆ ಪೋಷಕರು ಮಕ್ಕಳ ಕುರಿತು ನಿಗಾ ವಹಿಸಬೇಕಾದ ಅವಶ್ಯಕತೆ ಇರುತ್ತದೆ

ಕುಲ್ ದೀಪ್ ಕುಮಾರ್ ಆರ್ ಜೈನ್, ಪೊಲೀಸ್ ಕಮೀಷನರ್ ಮಂಗಳೂರು ನಗರ


Ad Widget
Click to comment

Leave a Reply

ಅಪರಾಧ

Bantwal-ಬಂಟ್ವಾಳ: 18 ತಿಂಗಳಿಂದ ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣದ ಆರೋಪಿ ಕೇರಳದಲ್ಲಿ ಬಂಧನ

Published

on



Ad Widget

Ad Widget

Ad Widget

Ad Widget

ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸುಮಾರು 18 ತಿಂಗಳಿನಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕೇರಳದ ಮಲಪ್ಪುರಂ ನಿವಾಸಿ ರಂಶೀದ್‌ ನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

Ad Widget

Ad Widget

Ad Widget

Ad Widget

ಬಂಟ್ವಾಳ: ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸುಮಾರು 18 ತಿಂಗಳಿನಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕೇರಳದ ಮಲಪ್ಪುರಂ ನಿವಾಸಿ ರಂಶೀದ್ ನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ವಿಟ್ಲ ಪೊಲೀಸ್ ಠಾಣೆಯಲ್ಲಿ 2019ರಲ್ಲಿ ದಾಖಲಾಗಿದ್ದ ಅಪರಾಧ ಸಂಖ್ಯೆ 110/2019ರ ಕಳ್ಳತನ ಪ್ರಕರಣದಲ್ಲಿ ಆರೋಪಿ ರಂಶೀದ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಕಲಂ 457 ಮತ್ತು 380ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು ಒಂದೂವರೆ ವರ್ಷದಿಂದ ಆತ ತಲೆಮರೆಸಿಕೊಂಡಿದ್ದ ಎಂದು ತಿಳಿದುಬಂದಿದೆ.

Ad Widget

Ad Widget <> Ad Widget

ಖಚಿತ ಮಾಹಿತಿ ಮೇರೆಗೆ ವಿಟ್ಲ ಪೊಲೀಸ್ ಠಾಣೆಯ ಎಎಸ್‌ಐ ಜಯರಾಮ್ ಮತ್ತು ಸಿಪಿಸಿ 2462 ಶಿವಾನಂದ ಅವರು ಅಕ್ಟೋಬರ್ 13, 2026ರಂದು ಕೇರಳದ ನಿಲಂಬೂರ್‌ನ ವಂಡೂರಿನಲ್ಲಿ ಕಾರ್ಯಾಚರಣೆ ನಡೆಸಿ ರಾಮ್‌ಶೀದ್‌ನನ್ನು ಬಂಧಿಸಿದರು.



Ad Widget

ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Continue Reading

ಅಪರಾಧ

Puttur-ಪುತ್ತೂರಿನಲ್ಲಿ ಅಕ್ರಮ ಲಾಟರಿ ಮಾರಾಟ: ಇಬ್ಬರು ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲು

Published

on



Ad Widget

Ad Widget

Ad Widget

Ad Widget

ಪುತ್ತೂರಿನಲ್ಲಿ ನಿಷೇಧಿತ ಲಾಟರಿ ಮಾರಾಟ ಮಾಡುತ್ತಿದ್ದ ಎರಡು ಅಂಗಡಿಗಳಿಗೆ ಪುತ್ತೂರು ನಗರ ಪೊಲೀಸರು ತೆರಳಿ ಕಾರ್ಯಾಚರಣೆ ನಡೆಸಿದ್ದು, ಇಬ್ಬರು ಅಂಗಡಿ ಮಾಲೀಕರ ವಿರುದ್ಧ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

Ad Widget

Ad Widget

Ad Widget

Ad Widget

ಪುತ್ತೂರು: ನಗರದಲ್ಲಿ ನಿಷೇಧಿತ ಲಾಟರಿ ಮಾರಾಟ ಮಾಡುತ್ತಿದ್ದ ಎರಡು ಅಂಗಡಿಗಳಿಗೆ ಪುತ್ತೂರು ನಗರ ಪೊಲೀಸರು ತೆರಳಿ ಕಾರ್ಯಾಚರಣೆ ನಡೆಸಿದ್ದು, ಇಬ್ಬರು ಅಂಗಡಿ ಮಾಲೀಕರ ವಿರುದ್ಧ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

2026ರ ಅಕ್ಟೋಬರ್ 14ರಂದು ಸಂಜೆ ಪುತ್ತೂರು ಕಸಬ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಅಂಗಡಿಯೊಂದರಲ್ಲಿ ಕೇರಳ ರಾಜ್ಯದ ಲಾಟರಿಯನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಸಹಾಯಕ ಪೊಲೀಸ್ ಉಪನಿರೀಕ್ಷಕ ವಾಸು ನಾಯ್ಕ್ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ಅಂಗಡಿ ಮಾಲೀಕ, ಪುತ್ತೂರು ಕಸಬ ನಿವಾಸಿ ಶ್ರೀನಿವಾಸ ಪೈ (33) ಎಂಬವರು ಮಾರಾಟಕ್ಕಾಗಿ ಇಟ್ಟಿದ್ದ ಲಾಟರಿ ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಯಿತು. ಕೇರಳ ರಾಜ್ಯದ ಲಾಟರಿ ಟಿಕೆಟ್‌ಗಳನ್ನು ತಂದು ಹೆಚ್ಚಿನ ಬೆಲೆಗೆ ಅಕ್ರಮವಾಗಿ ಮಾರಾಟ ಮಾಡುತ್ತಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 124/2026ರ ಅಡಿಯಲ್ಲಿ ಲಾಟರಿ ನಿಷೇಧ ಕಾಯ್ದೆ 1998ರ ಕಲಂ 7(iii)ರಂತೆ ಪ್ರಕರಣ ದಾಖಲಿಸಲಾಗಿದೆ.

Ad Widget

Ad Widget <> Ad Widget

ಇದೇ ದಿನ ಪುತ್ತೂರು ಕಸಬ ಗ್ರಾಮದ ಲಿನೆಟ್ ಜಂಕ್ಷನ್ ಬಳಿಯ ಪಾನ್ ಸ್ಟಾಲ್ ಒಂದರಲ್ಲಿ ನಿಷೇಧಿತ ಲಾಟರಿ ಮಾರಾಟ ಮಾಡುತ್ತಿರುವ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಸಹಾಯಕ ಪೊಲೀಸ್ ಉಪನಿರೀಕ್ಷಕ ಗಂಗಾಧರ ಎ.ಬಿ. ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ವೇಳೆ ಅಂಗಡಿ ಮಾಲೀಕ, ಪುತ್ತೂರು ಪಡ್ನೂರು ಗ್ರಾಮದ ನಿವಾಸಿ ಲಕ್ಷ್ಮಣ (42) ಎಂಬವರ ಬಳಿ ಮಾರಾಟಕ್ಕಾಗಿ ಇಟ್ಟಿದ್ದ ಲಾಟರಿ ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಯಿತು. ಕೇರಳದಿಂದ ಲಾಟರಿ ಟಿಕೆಟ್‌ಗಳನ್ನು ತಂದು ಅಕ್ರಮವಾಗಿ ಮಾರಾಟ ಮಾಡುತ್ತಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.



Ad Widget

ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 125/2026ರ ಅಡಿಯಲ್ಲಿ ಲಾಟರಿ ನಿಷೇಧ ಕಾಯ್ದೆ 1998ರ ಕಲಂ 7(iii)ರಂತೆ ಮತ್ತೊಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

Continue Reading

ಅಪರಾಧ

B.R. Shetty-ಬ್ಯಾಂಕ್ ಆಫ್ ಬರೋಡಾ ವಿರುದ್ಧ ಯುಎಇ ಎಕ್ಸ್‌ಚೇಂಜ್ ಸಂಸ್ಥೆಗಳ ಸ್ಥಾಪಕ ಬಿ.ಆರ್. ಶೆಟ್ಟಿ ಕಾನೂನು ಸಮರ; ₹1.25 ಲಕ್ಷ ಕೋಟಿ ಪರಿಹಾರ ಬೇಡಿಕೆ

Published

on



Ad Widget

Ad Widget

Ad Widget

Ad Widget

ಎನ್‌ಎಂಸಿ ಹೆಲ್ತ್‌ಕೇರ್ ಮತ್ತು ಯುಎಇ ಎಕ್ಸ್‌ಚೇಂಜ್ ಸಂಸ್ಥೆಗಳ ಸ್ಥಾಪಕ ಬಿ.ಆರ್. ಶೆಟ್ಟಿ ಅವರು ಬ್ಯಾಂಕ್ ಆಫ್ ಬರೋಡಾ ವಿರುದ್ಧ ಬಾಂಬೆ ಹೈಕೋರ್ಟ್‌ನಲ್ಲಿ ಬೃಹತ್ ಮೊತ್ತದ ಪರಿಹಾರ ಕೋರಿ ಮೊಕದ್ದಮೆ ಹೂಡಿದ್ದಾರೆ. ತಮ್ಮ ವ್ಯವಹಾರಗಳಿಗೆ ಸಂಬಂಧಿಸಿದ ವಂಚನೆಗೆ ಬ್ಯಾಂಕ್ ಸಹಕರಿಸಿದೆ ಎಂದು ಆರೋಪಿಸಿರುವ ಅವರು, ಒಟ್ಟು 15 ಬಿಲಿಯನ್ ಡಾಲರ್ (ಸುಮಾರು ₹1.25 ಲಕ್ಷ ಕೋಟಿ) ಪರಿಹಾರ ನೀಡುವಂತೆ ಕೋರಿದ್ದಾರೆ.

Ad Widget

Ad Widget

Ad Widget

Ad Widget

ದುಬೈ, ಅ.15: ಎನ್‌ಎಂಸಿ ಹೆಲ್ತ್‌ಕೇರ್ ಮತ್ತು ಯುಎಇ ಎಕ್ಸ್‌ಚೇಂಜ್ ಸಂಸ್ಥೆಗಳ ಸ್ಥಾಪಕ ಬಿ.ಆರ್. ಶೆಟ್ಟಿ ಅವರು ಬ್ಯಾಂಕ್ ಆಫ್ ಬರೋಡಾ ವಿರುದ್ಧ ಬಾಂಬೆ ಹೈಕೋರ್ಟ್‌ನಲ್ಲಿ ಬೃಹತ್ ಮೊತ್ತದ ಪರಿಹಾರ ಕೋರಿ ಮೊಕದ್ದಮೆ ಹೂಡಿದ್ದಾರೆ. ತಮ್ಮ ವ್ಯವಹಾರಗಳಿಗೆ ಸಂಬಂಧಿಸಿದ ವಂಚನೆಗೆ ಬ್ಯಾಂಕ್ ಸಹಕರಿಸಿದೆ ಎಂದು ಆರೋಪಿಸಿರುವ ಅವರು, ಒಟ್ಟು 15 ಬಿಲಿಯನ್ ಡಾಲರ್ (ಸುಮಾರು ₹1.25 ಲಕ್ಷ ಕೋಟಿ) ಪರಿಹಾರ ನೀಡುವಂತೆ ಕೋರಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಮಂಗಳವಾರ ಸಲ್ಲಿಸಿರುವ ಮೊಕದ್ದಮೆಯಲ್ಲಿ ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ಒಟ್ಟು 26 ಮಂದಿಯನ್ನು ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದೆ. ನಕಲಿ ಸಹಿಗಳು, ಅನಧಿಕೃತ ಹಣ ವರ್ಗಾವಣೆ ಹಾಗೂ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದ ಎಚ್ಚರಿಕೆಗಳಿದ್ದರೂ ಬ್ಯಾಂಕ್ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬುದು ಶೆಟ್ಟಿ ಅವರ ಪ್ರಮುಖ ಆರೋಪಗಳಾಗಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ.

Ad Widget

Ad Widget <> Ad Widget

ಆದರೆ, ಬ್ಯಾಂಕ್ ಆಫ್ ಬರೋಡಾ ಈ ಆರೋಪಗಳನ್ನು ನ್ಯಾಯಾಲಯದಲ್ಲಿ ಪರಿಶೀಲಿಸಬೇಕಿದೆ ಎಂದು ಹೇಳಿದ್ದು, ತನಗೆ ಈವರೆಗೆ ಮೊಕದ್ದಮೆಯ ನೋಟಿಸ್ ತಲುಪಿಲ್ಲ ಎಂದು ಸ್ಪಷ್ಟಪಡಿಸಿದೆ. ನೋಟಿಸ್ ಬಂದ ಬಳಿಕ ಕಾನೂನು ಪ್ರಕ್ರಿಯೆ ಎದುರಿಸುವುದಾಗಿ ತಿಳಿಸಿರುವ ಬ್ಯಾಂಕ್, ಶೆಟ್ಟಿ ವಿರುದ್ಧ ಸುಮಾರು ₹28,000 ಕೋಟಿ ಬಾಕಿ ಸಾಲ ವಸೂಲಾತಿ ಕ್ರಮಗಳನ್ನು ಮುಂದುವರಿಸುವುದಾಗಿ ಹೇಳಿದೆ.



Ad Widget

ವೈಯಕ್ತಿಕ ಖಾತರಿಗಳ ದಾಖಲೆಗಳ ಬಗ್ಗೆ ಆಕ್ಷೇಪ
ವೈಯಕ್ತಿಕ ಖಾತರಿಗಳಿಗೆ ಸಂಬಂಧಿಸಿದ ದಾಖಲೆಗಳ ಸತ್ಯಾಸತ್ಯತೆಯೇ ಶೆಟ್ಟಿ ಅವರ ಮೊಕದ್ದಮೆಯ ಪ್ರಮುಖ ಅಂಶವಾಗಿದೆ. ತಾವು ಸಹಿ ಮಾಡದ ದಾಖಲೆಗಳನ್ನು ಆಧರಿಸಿ ಸಾಲ ಮರುಪಾವತಿಗೆ ತಮ್ಮನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಇದೇ ದಾಖಲೆಗಳ ಆಧಾರದಲ್ಲಿ ತಮ್ಮ ವೈಯಕ್ತಿಕ ಆಸ್ತಿಗಳ ವಿರುದ್ಧ ವಸೂಲಾತಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದೂ ದೂರಿದ್ದಾರೆ.

Ad Widget

Ad Widget

ಕೆಲವು ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ನಿರ್ದೇಶನಗಳು ಮತ್ತು ಹಣ ವರ್ಗಾವಣೆಗಳು ಅನಧಿಕೃತವಾಗಿದ್ದವು ಎಂಬುದು ಅವರ ಮತ್ತೊಂದು ಆರೋಪ. ಈ ಹಿನ್ನೆಲೆಯಲ್ಲಿ ವಹಿವಾಟಿನ ಸೂಚನೆಗಳು, ಖಾತೆ ತೆರೆಯುವ ದಾಖಲೆಗಳು, ಗ್ರಾಹಕರ ಪರಿಶೀಲನಾ ದಾಖಲೆಗಳು ಹಾಗೂ ಹಣ ವರ್ಗಾವಣೆಗಳನ್ನು ನಿರ್ವಹಿಸಿದ ಅಥವಾ ಪರಿಶೀಲಿಸಿದ ಅಧಿಕಾರಿಗಳ ವಿವರಗಳನ್ನು ಬಹಿರಂಗಪಡಿಸುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.

ಬ್ಯಾಂಕ್ ಆಫ್ ಬರೋಡಾದ 10 ಅಧಿಕಾರಿಗಳು, ಎನ್‌ಎಂಸಿಯ ಮಾಜಿ ಕಾರ್ಯನಿರ್ವಾಹಕರಾದ ಪ್ರಶಾಂತ್ ಮಂಗತ್ ಮತ್ತು ಪ್ರಮೋತ್ ಮಂಗತ್, ಅವರ ಸಂಬಂಧಿತ ವ್ಯಕ್ತಿಗಳು ಹಾಗೂ ಎರಡು ಭಾರತೀಯ ಕಂಪನಿಗಳನ್ನೂ ಪ್ರತಿವಾದಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.

100ಕ್ಕೂ ಹೆಚ್ಚು ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ ಆರೋಪ
2019ರವರೆಗೆ ಎನ್‌ಎಂಸಿ ಸಮೂಹದ ಪ್ರಮುಖ ಬ್ಯಾಂಕರ್ ಆಗಿದ್ದ ಬ್ಯಾಂಕ್ ಆಫ್ ಬರೋಡಾ, ಸಮೂಹದ ಕಂಪನಿಗಳು ಮತ್ತು ಸ್ವತಂತ್ರ ಪೂರೈಕೆದಾರರೆಂದು ಬಿಂಬಿಸಲಾದ ಸಂಸ್ಥೆಗಳ ಮೂಲಕ ಹಣವನ್ನು ಬೇರೆಡೆಗೆ ವರ್ಗಾಯಿಸಲು ನೆರವಾಗಿದೆ ಎಂದು ಶೆಟ್ಟಿ ಆರೋಪಿಸಿದ್ದಾರೆ.

ಬ್ಯಾಂಕ್ ಅಧಿಕಾರಿಗಳು ‘ರೌಂಡ್ ಟ್ರಿಪ್ಪಿಂಗ್’ ವಹಿವಾಟುಗಳಿಗೆ ಅವಕಾಶ ನೀಡಿದ್ದಾರೆ ಎಂಬುದೂ ಮೊಕದ್ದಮೆಯಲ್ಲಿನ ಆರೋಪ. ಈ ಪ್ರಕ್ರಿಯೆಯಲ್ಲಿ ಹಣವು ಹಲವು ಸಂಸ್ಥೆಗಳ ಮೂಲಕ ಚಲಿಸಿ ಮತ್ತೆ ಮೂಲಕ್ಕೆ ಮರಳುತ್ತದೆ. ಇದರಿಂದ ಹಣದ ನಿಜವಾದ ಉದ್ದೇಶ ಅಥವಾ ಮೂಲವನ್ನು ಮರೆಮಾಚುವ ಸಾಧ್ಯತೆ ಇರುತ್ತದೆ.

ಬ್ಯಾಂಕ್‌ನ ವ್ಯವಸ್ಥೆಗಳು ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ 100ಕ್ಕೂ ಹೆಚ್ಚು ಎಚ್ಚರಿಕೆಗಳನ್ನು ದಾಖಲಿಸಿದ್ದರೂ ಅವುಗಳನ್ನು ಬಳಿಕ ಮುಚ್ಚಲಾಗಿದೆ ಎಂದು ಶೆಟ್ಟಿ ಆರೋಪಿಸಿದ್ದಾರೆ. ಸಾಕಷ್ಟು ಭದ್ರತೆ ಇಲ್ಲದೆ ಸಾಲ ನೀಡುವುದನ್ನು ಮುಂದುವರಿಸಿದ್ದು, ಸಾಲ ಮತ್ತು ವಹಿವಾಟುಗಳ ಕುರಿತಾದ ಕಳವಳಗಳನ್ನು ಲೆಕ್ಕಪರಿಶೋಧಕರ ಗಮನಕ್ಕೆ ತಂದಿಲ್ಲ ಎಂದೂ ಬ್ಯಾಂಕ್ ವಿರುದ್ಧ ದೂರಿದ್ದಾರೆ. ಆದರೆ, ಇಂತಹ ಎಚ್ಚರಿಕೆಗಳು ದಾಖಲಾಗಿರುವುದರಿಂದ ಮಾತ್ರ ಅಕ್ರಮ ಹಣ ವರ್ಗಾವಣೆ ನಡೆದಿರುವುದು ಸಾಬೀತಾಗುವುದಿಲ್ಲ.

ತಲಾ 5 ಬಿಲಿಯನ್ ಡಾಲರ್ ಪರಿಹಾರಕ್ಕೆ ಮನವಿ
ಶೆಟ್ಟಿ ಅವರು ನೇರ ಹಾನಿಗೆ 5 ಬಿಲಿಯನ್ ಡಾಲರ್, ವ್ಯವಹಾರ ಮತ್ತು ಹೂಡಿಕೆ ಅವಕಾಶಗಳ ನಷ್ಟ ಸೇರಿದಂತೆ ಪರೋಕ್ಷ ಹಾನಿಗೆ 5 ಬಿಲಿಯನ್ ಡಾಲರ್ ಹಾಗೂ ತಮ್ಮ ಪ್ರತಿಷ್ಠೆಗೆ ಉಂಟಾದ ಹಾನಿಗಾಗಿ 5 ಬಿಲಿಯನ್ ಡಾಲರ್ ಪರಿಹಾರ ಕೋರಿದ್ದಾರೆ. ಒಟ್ಟು 15 ಬಿಲಿಯನ್ ಡಾಲರ್ ಪರಿಹಾರದ ಜತೆಗೆ, ಪಾವತಿಯಾಗುವವರೆಗೆ ವಾರ್ಷಿಕ ಶೇ. 18ರಷ್ಟು ಬಡ್ಡಿಯನ್ನೂ ನೀಡುವಂತೆ ಮನವಿ ಮಾಡಿದ್ದಾರೆ.

ಬ್ಯಾಂಕಿಂಗ್ ದಾಖಲೆಗಳು ಮತ್ತು ವಿದ್ಯುನ್ಮಾನ ಪುರಾವೆಗಳನ್ನು ಸಂರಕ್ಷಿಸುವುದು, ವಿವಾದಿತ ವಹಿವಾಟುಗಳಿಗೆ ಸಂಬಂಧಿಸಿದ ಆಸ್ತಿಗಳ ವಿವರ ಬಹಿರಂಗಪಡಿಸುವುದು ಹಾಗೂ ಕೆಲವು ಪ್ರತಿವಾದಿಗಳ ವಿರುದ್ದ ಮಧ್ಯಂತರ ನಿರ್ಬಂಧಗಳನ್ನು ವಿಧಿಸುವಂತೆಯೂ ಕೋರಿದ್ದಾರೆ. ವಿವಾದಿತ ಹಣದ ಒಂದು ಭಾಗವನ್ನು ಅವಿಟಿಸ್‌ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ಸ್ ಮತ್ತು ಸ್ಮಾರ್ಟ್ ಬಿಲ್ಡಿಂಗ್‌ ಸೊಲ್ಯೂಷನ್ಸ್‌ನಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಸಾಲ ವಸೂಲಾತಿ ಕ್ರಮ ಮುಂದುವರಿಸಿದ ಬ್ಯಾಂಕ್
ಭಾರತ ಮತ್ತು ಯುಎಇಯಲ್ಲಿ ಸಾಲ ವಸೂಲಾತಿ ಹಾಗೂ ಜಾರಿ ಪ್ರಕ್ರಿಯೆಗಳ ಭಾಗವಾಗಿ ಶೆಟ್ಟಿ ವಿರುದ್ಧ ಹಲವು ನ್ಯಾಯಾಲಯದ ಆದೇಶಗಳನ್ನು ಪಡೆದಿರುವುದಾಗಿ ಬ್ಯಾಂಕ್ ಆಫ್ ಬರೋಡಾ ತಿಳಿಸಿದೆ. 2021ರಲ್ಲಿ ಕರ್ನಾಟಕ ಹೈಕೋರ್ಟ್‌ ಶೆಟ್ಟಿ ಅವರು ತಮ್ಮ ಆಸ್ತಿಗಳನ್ನು ನಿರ್ವಹಿಸುವುದರಿಂದ ಅಥವಾ ವಿಲೇವಾರಿ ಮಾಡುವುದರಿಂದ ನಿರ್ಬಂಧಿಸಿತ್ತು ಎಂದೂ ಬ್ಯಾಂಕ್ ಹೇಳಿದೆ.

ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್ (NCLT) ವಿಚಾರಣೆಗಳಲ್ಲಿ ತಾವು ದಿವಾಳಿಯಾಗಿದ್ದು, ಬ್ಯಾಂಕ್ ಗೆ ಬಾಕಿ ಹಣ ಪಾವತಿಸಲು ಸಾಧ್ಯವಿಲ್ಲ ಎಂದು ಶೆಟ್ಟಿ ಪ್ರತಿಪಾದಿಸಿದ್ದರು ಎಂದು ಬ್ಯಾಂಕ್ ಉಲ್ಲೇಖಿಸಿದೆ. ಇದೇ ರೀತಿಯ ಆರೋಪಗಳನ್ನು ಒಳಗೊಂಡಿದ್ದ ನ್ಯೂಯಾರ್ಕ್ ನ ಮೊಕದ್ದಮೆಯನ್ನು ಜುಲೈ 2024ರಲ್ಲಿ ವಜಾಗೊಳಿಸಲಾಗಿದೆ ಎಂದೂ ತಿಳಿಸಿದೆ.

ಎನ್‌ಎಂಸಿ ಕುಸಿತದ ಬಳಿಕ ಮತ್ತೊಂದು ಕಾನೂನು ಸಮರ
ಗಲ್ಫ್ ಪ್ರದೇಶದ ಅತಿದೊಡ್ಡ ಖಾಸಗಿ ಆರೋಗ್ಯ ಸೇವಾ ಸಂಸ್ಥೆಗಳಲ್ಲಿ ಒಂದಾಗಿದ್ದ ಎನ್‌ಎಂಸಿ ಹೆಲ್ತ್‌ಕೇರ್, 2020ರಲ್ಲಿ 6.6 ಬಿಲಿಯನ್ ಡಾಲರ್ ಸಾಲ ಬಹಿರಂಗವಾದ ಬಳಿಕ ಆಡಳಿತ ಪ್ರಕ್ರಿಯೆಗೆ ಒಳಪಟ್ಟಿತ್ತು. ಈ ಹಿಂದೆ ಸಾಲದ ಮೊತ್ತವನ್ನು 2.1 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿತ್ತು ಎಂದು ರಾಯಿಟರ್ಸ್ ವರದಿ ಮಾಡಿದೆ.

ಎನ್‌ಎಂಸಿ ಸಮೂಹದ ಕಂಪನಿಗಳು ಮತ್ತು ಅವುಗಳ ಜಂಟಿ ನಿರ್ವಾಹಕರು ಹೂಡಿದ್ದ ಮೊಕದ್ದಮೆಗಳನ್ನು ಇತ್ಯರ್ಥಪಡಿಸಲು 600 ಮಿಲಿಯನ್ ಡಾಲ‌ರ್ ಪಾವತಿಸಲು ಬ್ಯಾಂಕ್ ಆಫ್ ಬರೋಡಾ ಒಪ್ಪಿಕೊಂಡಿತ್ತು. ಈ ಇತ್ಯರ್ಥ ಒಪ್ಪಂದವು 2026ರ ಜುಲೈ 1ರಂದು ಮಾಡಿಕೊಳ್ಳಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.

ಆ ಒಪ್ಪಂದದಲ್ಲಿ ಯಾವುದೇ ಹೊಣೆಗಾರಿಕೆಯನ್ನು ಒಪ್ಪಿಕೊಂಡಿಲ್ಲ ಎಂದು ಶೆಟ್ಟಿ ಅವರ ಅರ್ಜಿಯಲ್ಲಿ ಹೇಳಲಾಗಿದೆ. ತಾವು ಆ ಒಪ್ಪಂದದ ಭಾಗವಾಗಿರಲಿಲ್ಲ ಮತ್ತು ಅದು ತಮ್ಮ ಪ್ರತ್ಯೇಕ ಹಕ್ಕುಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅವರು ವಾದಿಸಿದ್ದಾರೆ.

ಇತ್ಯರ್ಥದ ಬಳಿಕ ಅಬುಧಾಬಿ ಗ್ಲೋಬಲ್ ಮಾರ್ಕೆಟ್ ನಲ್ಲಿ ತಮ್ಮ ವಿರುದ್ಧದ ವಿಚಾರಣೆಗಳನ್ನು ಕೈಬಿಡಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ. ವಂಚನೆ ಮತ್ತು ಅಕ್ರಮ ವಹಿವಾಟುಗಳಿಗೆ ಸಂಬಂಧಿಸಿದಂತೆ ಶೆಟ್ಟಿ ಹಾಗೂ ಎನ್‌ಎಂಸಿಯ ಮಾಜಿ ಕಾರ್ಯನಿರ್ವಾಹಕರ ವಿರುದ್ಧದ ಸಂಬಂಧಿತ ವಿಚಾರಣೆಗಳಲ್ಲಿ ತೀರ್ಪು ಕಾಯ್ದಿರಿಸಲಾಗಿದೆ ಎಂದೂ ಹೇಳಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading