Connect with us

ಪುತ್ತೂರು

Puttur | ಪುತ್ತೂರಿನಲ್ಲಿ ಪತ್ರಕರ್ತನ ಮೇಲೆ ದಾಳಿ – ವಿಡಿಯೋ ಚಿತ್ರಿಕರಿಸುತ್ತಿದ್ದ ವರದಿಗಾರನ ಮೊಬೈಲ್ ಪುಡಿಗೈದ ದುಷ್ಕರ್ಮಿ – ಆರೋಪಿ ಬಗ್ಗೆ ಮಾಹಿತಿ ಕಲೆಹಾಕಲು ಪೊಲೀಸರಿಗಿಲ್ಲ ಆಸಕ್ತಿ..!

Published

on



Ad Widget

Ad Widget

Ad Widget

Ad Widget

ಪುತ್ತೂರಿನಲ್ಲಿ ಪತ್ರಕರ್ತನ ಮೇಲೆ ದಾಳಿ – ವಿಡಿಯೋ ಚಿತ್ರಿಕರಿಸುತ್ತಿದ್ದ ವರದಿಗಾರನ ಮೊಬೈಲ್ ಪುಡಿಗೈದ
ದುಷ್ಕರ್ಮಿ –

Ad Widget

Ad Widget

Ad Widget

Ad Widget

ಆರೋಪಿ ಮಾಹಿತಿ ಕಲೆಹಾಕಲು ಪೊಲೀಸರಿಗಿಲ್ಲ ಆಸಕ್ತಿ

Ad Widget

Ad Widget

Ad Widget alt="Ad Widget"/>

Ad Widget

ಪುತ್ತೂರು: ಸೂಕ್ತ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಅಪಾಯಕಾರಿ ರೀತಿಯಲ್ಲಿ ಮರದ ಗೆಲ್ಲುಗಳನ್ನು ಕಡಿಯುತ್ತಿದ್ದ ಮೆಸ್ಕಾಂ ಸಿಬ್ಬಂದಿಗಳ ವಿಡಿಯೋ ಚಿತ್ರಿಕರಿಸುತ್ತಿದ್ದ ಪತ್ರಕರ್ತರೊಬ್ಬರ ಮೊಬೈಲನ್ನು ಕಸಿದ ದುಷ್ಕರ್ಮಿಯೊಬ್ಬ ಅದನ್ನು ನೆಲಕ್ಕೆ ಬಡಿದು ಹುಡಿ ಮಾಡಿದ ಘಟನೆ ಪುತ್ತೂರು (Puttur) ಕಸಬಾ ನಗರ ಠಾಣಾ ವ್ಯಾಪ್ತಿಯ ಬಪ್ಪಳಿಗೆ ಗುಂಪಕಲ್ಲು ಎಂಬಲ್ಲಿ ಜು .15 ರಂದು ಸಂಜೆ ನಡೆದಿದೆ.

Ad Widget

Ad Widget <> Ad Widget

ಬಪ್ಪಳಿಗೆಯಲ್ಲಿರುವ ಗುಂಪಕಲ್ಲು ಅಂಬಿಕಾ ವಿದ್ಯಾಸಂಸ್ಥೆಯ ಸಮೀಪ ಪುತ್ತೂರಿನಿಂದ ಬಲ್ನಾಡು ತೆರಳುವ ರಸ್ತೆಯಲ್ಲಿ ವಿದ್ಯುತ್ ತಂತಿಗಳಿಗೆ ತಾಗುತ್ತಿದ್ದ ಮರದ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತಿತ್ತು. ಮೆಸ್ಕಾಂ ನಿಂದ ಈ ಕೆಲಸದ ಗುತ್ತಿಗೆ ಪಡೆದಿರುವ ಕಂಟ್ರಾಕ್ಟರ್ ದಾರನ ಕಾರ್ಮಿಕರು ಈ ಕೆಲಸ ಮಾಡುತಿದ್ದರು. ಆದರೇ ಅವರ್ಯಾರು ಮೆಸ್ಕಾಂ ನ ಮಾನದದಂಡದ ಪ್ರಕಾರ ಅಗತ್ಯ ಸುರಕ್ಷತಾ ಸಾಧನಗಳನ್ನು ಬಳಸಿರಲಿಲ್ಲ. ಅಪಾಯವನ್ನು ಆಹ್ವಾನಿಸುವ. ರೀತಿಯಲ್ಲಿ ವಿದ್ಯುತ್ ತಂತಿಯ ಪಕ್ಕ ಕೆಲಸದಲ್ಲಿ ನಿರತರಾಗಿದ್ದರು.



Ad Widget

ಇದನ್ನು ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಿಜಯವಾಣಿ ಪತ್ರಿಕೆ ಹಾಗೂ ದಿಗ್ವಿಜಯ ವಾಹಿನಿಯ ವರದಿಗಾರ ನಿಶಾಂತ್ ಬಿಲ್ಲಂಪದವು ಅಪಾಯಕಾರಿ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿರುವ ಕುರಿತು ಮೆಸ್ಕಾಂ ಹಿರಿಯ ಅಧಿಕಾರಿಗಳಿಗೆ ತಿಳಿಸಿ ವಿಡಿಯೋ ಚಿತ್ರಿಕರಿಸಿದ್ದಾರೆ. ಆಗಲೇ ಮೆಸ್ಕಾಂ ಸಿಬ್ಬಂದಿಗಳಿಗಬ್ಬರು ಕ್ರೇನ್ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ. ಕೂಡಲೇ ಓರ್ವ ಸ್ಥಳೀಯ ವ್ಯಕ್ತಿ ನಿಶಾಂತ್ ಬಿಲ್ಲಂಪದವು ಅವರ ಕೈಯಿಂದ ಮೊಬೈಲ್ ಕಸಿದು ಅದನ್ನು‌ ಮಾರ್ಗಕ್ಕೆ ಎಸೆದು ಹುಡಿ ಮಾಡಿದ್ದಾರೆ. ಕೊಲ್ಲುವುದಾಗಿ ಜೀವ ಬೆದರಿಕೆಯೊಡ್ಡಿ ಪರಾರಿಯಾಗುವುದಾಗಿ ತಿಳಿದು ಬಂದಿದೆ.

Ad Widget

Ad Widget

ಅಸಡ್ಡೆ ತೋರಿಸುತಿದ್ದಾರೆಯೇ ಪೊಲೀಸರು ..?

ಪ್ರಕರಣ ಎಸಗಿದ ಆರೋಪಿ , ಪುತ್ತೂರು ಪೊಲೀಸರೊಂದಿಗೆ ಸೇರಿಕೊಂಡು ವರ್ಷಂಪ್ರತಿ ನಡೆಯುವ ಅಮರ್ ಅಕ್ಬರ್ ಅಂತೋನಿ ಕ್ರಿಕೆಟ್ ಟೂರ್ನಿಯ ಆಯೋಜಕರ ಪೈಕಿ ಓರ್ವರ ಹತ್ತಿರದ ಸಂಬಂಧಿ ಎಂದು ತಿಳಿದುಬಂದಿದೆ. ಘಟನೆ ನಡೆದಾಗ ಆ ವ್ಯಕ್ತಿಯು ಸ್ಥಳದಲ್ಲಿದ್ದರು.

ಪುತ್ತೂರು ಪೊಲೀಸರ ಆತ್ಮೀಯರಾದ ಕ್ರೀಡಾ ಆಯೋಜಕ ಘಟನಾ ಸ್ಥಳದಲ್ಲಿದ್ದರೂ ಪೊಲೀಸರು ಆರೋಪಿಯ ಕುರಿತು ಆತನಿಂದ ಮಾಹಿತಿ ಕಲೆ ಹಾಕಲು ಅಸಡ್ಡೆ ತೋರಿಸುತ್ತಿರುವುದು ಠಾಣೆಯಲ್ಲಿ ಕಂಡು ಬಂದಿದೆ.

ಘಟನೆ ಖಂಡಿಸಿದ ಪುತ್ತಿಲ:
ರಾಜ್ಯದಲ್ಲಿ ಕಾಂಗ್ರೆಸ್ ಅಡಳಿತ ಬಂದ ಮೇಲೆ ಅನ್ಯ ಕೋಮಿನವರ ಅಟ್ಟಹಾಸ ಮೇರೆ ಮೀರಿದೆ. ಪತ್ರಕರ್ತರ ಮೇಲಿನ ದಾಳಿಯನ್ನು ಎಷ್ಟು ಮಾತ್ರಕ್ಕೂ ಸಹಿಸಲು ಸಾಧ್ಯವಿಲ್ಲ‌ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು. ಕೂಡಲೇ ಆರೋಪಿಗಳ ಬಂಧನ ಆಗಬೇಕು ಎಂದು ಪೊಲೀಸ್ ಅಧಿಕಾರಿ ಒತ್ತಾಯಿಸಿದರು.

ಸ್ಥಳೀಯರಲ್ಲಿ ವಿಚಾರಿಸುತ್ತೇನೆ : ಶಾಸಕ ಅಶೋಕ್ ರೈ

ಘಟನೆಯನ್ನು ಖಂಡಿಸಿದ ಶಾಸಕ ಅಶೋಕ್ ರೈಯವರು , ಆರೋಪಿ ಬಗ್ಗೆ ಮಾಹಿತಿಯನ್ನು ಸ್ಥಳೀಯ ನಾಯಕರಲ್ಲಿ ವಿಚಾರಿಸಿ ಪಡೆಯುವುದಾಗಿ ತಿಳಿಸಿದರು. ಆರೋಪಿಯ ವಿರುದ್ಧ ಕ್ರಮಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಮಾತನಾಡುವುದಾಗಿ ತಿಳಿಸಿದರು

Ad Widget
Click to comment

Leave a Reply

ಕಾರ್ಯಕ್ರಮಗಳು

Piligobbu-ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಜೆ. ಗೌಡ ಪುತ್ತೂರುದ ಪಿಲಿಗೊಬ್ಬು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮನ

Published

on



Ad Widget

Ad Widget

Ad Widget

Ad Widget

ವಿಜಯಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ (ರಿ.), ಪುತ್ತೂರು ಇದರ ಆಶ್ರಯದಲ್ಲಿ ಅಕ್ಟೋಬರ್ 17ರಂದು ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿ ನಡೆಯಲಿರುವ ‘ಪುತ್ತೂರುದ ಪಿಲಿಗೊಬ್ಬು-2026 ಸೀಸನ್-4’ ಕಾರ್ಯಕ್ರಮಕ್ಕೆ ಹಾಸನ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಬಿಜೆಪಿ ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಜೆ. ಗೌಡ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

Ad Widget

Ad Widget

Ad Widget

Ad Widget

ಪುತ್ತೂರು: ವಿಜಯಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ (ರಿ.), ಪುತ್ತೂರು ಇದರ ಆಶ್ರಯದಲ್ಲಿ ಅಕ್ಟೋಬರ್ 17ರಂದು ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿ ನಡೆಯಲಿರುವ ‘ಪುತ್ತೂರುದ ಪಿಲಿಗೊಬ್ಬು-2026 ಸೀಸನ್-4’ ಕಾರ್ಯಕ್ರಮಕ್ಕೆ ಹಾಸನ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಬಿಜೆಪಿ ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಜೆ. ಗೌಡ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಕರಾವಳಿಯ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯಾದ ಹುಲಿವೇಷ ಕಲೆಯನ್ನು ಉಳಿಸಿ ಬೆಳೆಸುವ ಹಾಗೂ ಯುವ ಸಮುದಾಯದಲ್ಲಿ ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಕಲೆಯ ಬಗ್ಗೆ ಅಭಿಮಾನ ಮೂಡಿಸುವ ಉದ್ದೇಶದಿಂದ ಪುತ್ತೂರುದ ಪಿಲಿಗೊಬ್ಬು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸೀಸನ್-4 ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಹುಲಿವೇಷ ತಂಡಗಳು ಭಾಗವಹಿಸಲಿದ್ದು, ವಿಶೇಷ ಆಕರ್ಷಣೆಯಾಗಿ ಫುಡ್ ಫೆಸ್ಟ್ ಕೂಡ ನಡೆಯಲಿದೆ.

Ad Widget

Ad Widget <> Ad Widget

ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿ ನಡೆಯಲಿರುವ ಈ ಕಾರ್ಯಕ್ರಮವು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನರಂಜನಾ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ.



Ad Widget

ವಿಜಯಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜ ಅವರ ನೇತೃತ್ವದಲ್ಲಿ ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಪಿಲಿಗೊಬ್ಬು ಸಮಿತಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕಾರ್ಯಕ್ರಮದ ಯಶಸ್ಸಿಗಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

Continue Reading

ಅಪರಾಧ

Puttur-ಪುತ್ತೂರಿನಲ್ಲಿ ಅಕ್ರಮ ಲಾಟರಿ ಮಾರಾಟ: ಇಬ್ಬರು ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲು

Published

on



Ad Widget

Ad Widget

Ad Widget

Ad Widget

ಪುತ್ತೂರಿನಲ್ಲಿ ನಿಷೇಧಿತ ಲಾಟರಿ ಮಾರಾಟ ಮಾಡುತ್ತಿದ್ದ ಎರಡು ಅಂಗಡಿಗಳಿಗೆ ಪುತ್ತೂರು ನಗರ ಪೊಲೀಸರು ತೆರಳಿ ಕಾರ್ಯಾಚರಣೆ ನಡೆಸಿದ್ದು, ಇಬ್ಬರು ಅಂಗಡಿ ಮಾಲೀಕರ ವಿರುದ್ಧ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

Ad Widget

Ad Widget

Ad Widget

Ad Widget

ಪುತ್ತೂರು: ನಗರದಲ್ಲಿ ನಿಷೇಧಿತ ಲಾಟರಿ ಮಾರಾಟ ಮಾಡುತ್ತಿದ್ದ ಎರಡು ಅಂಗಡಿಗಳಿಗೆ ಪುತ್ತೂರು ನಗರ ಪೊಲೀಸರು ತೆರಳಿ ಕಾರ್ಯಾಚರಣೆ ನಡೆಸಿದ್ದು, ಇಬ್ಬರು ಅಂಗಡಿ ಮಾಲೀಕರ ವಿರುದ್ಧ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

2026ರ ಅಕ್ಟೋಬರ್ 14ರಂದು ಸಂಜೆ ಪುತ್ತೂರು ಕಸಬ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಅಂಗಡಿಯೊಂದರಲ್ಲಿ ಕೇರಳ ರಾಜ್ಯದ ಲಾಟರಿಯನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಸಹಾಯಕ ಪೊಲೀಸ್ ಉಪನಿರೀಕ್ಷಕ ವಾಸು ನಾಯ್ಕ್ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ಅಂಗಡಿ ಮಾಲೀಕ, ಪುತ್ತೂರು ಕಸಬ ನಿವಾಸಿ ಶ್ರೀನಿವಾಸ ಪೈ (33) ಎಂಬವರು ಮಾರಾಟಕ್ಕಾಗಿ ಇಟ್ಟಿದ್ದ ಲಾಟರಿ ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಯಿತು. ಕೇರಳ ರಾಜ್ಯದ ಲಾಟರಿ ಟಿಕೆಟ್‌ಗಳನ್ನು ತಂದು ಹೆಚ್ಚಿನ ಬೆಲೆಗೆ ಅಕ್ರಮವಾಗಿ ಮಾರಾಟ ಮಾಡುತ್ತಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 124/2026ರ ಅಡಿಯಲ್ಲಿ ಲಾಟರಿ ನಿಷೇಧ ಕಾಯ್ದೆ 1998ರ ಕಲಂ 7(iii)ರಂತೆ ಪ್ರಕರಣ ದಾಖಲಿಸಲಾಗಿದೆ.

Ad Widget

Ad Widget <> Ad Widget

ಇದೇ ದಿನ ಪುತ್ತೂರು ಕಸಬ ಗ್ರಾಮದ ಲಿನೆಟ್ ಜಂಕ್ಷನ್ ಬಳಿಯ ಪಾನ್ ಸ್ಟಾಲ್ ಒಂದರಲ್ಲಿ ನಿಷೇಧಿತ ಲಾಟರಿ ಮಾರಾಟ ಮಾಡುತ್ತಿರುವ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಸಹಾಯಕ ಪೊಲೀಸ್ ಉಪನಿರೀಕ್ಷಕ ಗಂಗಾಧರ ಎ.ಬಿ. ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ವೇಳೆ ಅಂಗಡಿ ಮಾಲೀಕ, ಪುತ್ತೂರು ಪಡ್ನೂರು ಗ್ರಾಮದ ನಿವಾಸಿ ಲಕ್ಷ್ಮಣ (42) ಎಂಬವರ ಬಳಿ ಮಾರಾಟಕ್ಕಾಗಿ ಇಟ್ಟಿದ್ದ ಲಾಟರಿ ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಯಿತು. ಕೇರಳದಿಂದ ಲಾಟರಿ ಟಿಕೆಟ್‌ಗಳನ್ನು ತಂದು ಅಕ್ರಮವಾಗಿ ಮಾರಾಟ ಮಾಡುತ್ತಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.



Ad Widget

ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 125/2026ರ ಅಡಿಯಲ್ಲಿ ಲಾಟರಿ ನಿಷೇಧ ಕಾಯ್ದೆ 1998ರ ಕಲಂ 7(iii)ರಂತೆ ಮತ್ತೊಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

Continue Reading

ರಾಜಕೀಯ

Amal Ramachandra-ಒಳ್ಳೆಯ ರೀತಿಯಲ್ಲಿ ಬೆಳೆವಿಮೆ ಬಂದರೆ ಮೋದಿಯಿಂದಾಗಿ ಎಂದು ಬೊಬ್ಬೆ ಹಾಕುತ್ತಿದ್ದ ಬಿಜೆಪಿ ಈಗ ಕಾಂಗ್ರೆಸ್ ನ್ನು ದೂರುತ್ತಿದೆ..! ಟರ್ಮ್ ಶೀಟ್ ಬದಲಾವಣೆ ಮಾಡಿದ್ದು ಬಿಜೆಪಿ ಈ ಬಗ್ಗೆ ದಾಖಲೆಯಿದೆ; ಅಶೋಕ್ ರೈ ಹುಟ್ಟಿಸಿದ ಲಿಸ್ಟ್ ಕೊಡ್ತೇನೆ 8 ವರ್ಷಗಳಲ್ಲಿ ಬೆಳ್ತಂಗಡಿಯಲ್ಲಿ ಪೂಂಜಾ ಹುಟ್ಟಿಸಿದ್ದೇನೂ..? ಪುಡಾ ಅಧ್ಯಕ್ಷ ಅಮಳ ರಾಮಚಂದ್ರ

Published

on



Ad Widget

Ad Widget

Ad Widget

Ad Widget

ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಒಂದು ನಿಗೂಢ ಯೋಜನೆ. ಕಾರ್ಪೊರೇಟ್ ಜಗತ್ತಿನ ಪರವಾಗಿ ಕಾರ್ಯನಿರ್ವಹಿಸುವ ಮೋದಿ ಸರಕಾರ ರೈತರನ್ನು ಕತ್ತಲಲ್ಲಿಟ್ಡು, ವಿಮಾ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದಲೇ ತಂದ ಯೋಜನೆ ಇದು ಎಂದು ಪುಡಾ ಅಧ್ಯಕ್ಷರಾದ ಅಮಳ ರಾಮಚಂದ್ರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Ad Widget

Ad Widget

Ad Widget

Ad Widget

ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಒಂದು ನಿಗೂಢ ಯೋಜನೆ. ಕಾರ್ಪೊರೇಟ್ ಜಗತ್ತಿನ ಪರವಾಗಿ ಕಾರ್ಯನಿರ್ವಹಿಸುವ ಮೋದಿ ಸರಕಾರ ರೈತರನ್ನು ಕತ್ತಲಲ್ಲಿಟ್ಡು, ವಿಮಾ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದಲೇ ತಂದ ಯೋಜನೆ ಇದು.

Ad Widget

Ad Widget

Ad Widget alt="Ad Widget"/>

Ad Widget

ಈ ಯೋಜನೆಯಲ್ಲಿ ಸರಕಾರ ಮತ್ತು ವಿಮಾ ಕಂಪೆನಿಗಳ ನಡುವೆ ಒಪ್ಪಂದ ಏರ್ಪಟ್ಟು , ರೈತ ಪ್ರೀಮಿಯಂ ಪಾವತಿಸಿದ 1.5 ವರ್ಷದ ನಂತರ ಸ್ವಯಂಚಾಲಿತವಾಗಿ ರೈತರ ಖಾತೆಗೆ ವಿಮಾ ಮೊತ್ತ ಪಾವತಿಯಾಗುವ ವ್ಯವಸ್ಥೆ. ಈ ಯೋಜನೆಗೆ ಅಪ್ಪ ಯಾರು, ಇದನ್ನು ನಿರ್ವಹಿಸುವವರು ಯಾರು, ಸರಿಯಾದ ವಿಮಾ ಮೊತ್ತ ಪಾವತಿಯಾಗದೇ ಹೋದರೆ ದೂರು ದುಮ್ಮಾನಗಳನ್ನು ಯಾರಿಗೆ ಸಲ್ಲಿಸಬೇಕು , ಎಷ್ಟು ಮಳೆ ಬಂದಿದೆ, ಎಷ್ಟು ಉಷ್ಣಾಂಶ ಹೆಚ್ಚಾಗಿದೆ, ನಮಗೆ ನ್ಯಾಯವಾಗಿ ಎಷ್ಟು ಪರಿಹಾರ ಸಿಗಬೇಕು, ಪರಿಹಾರ ನ್ಯಾಯಬದ್ಧವಾಗಿದೆಯೇ ಎಂಬ ಯಾವುದೇ ವಿವರಗಳು ಪಾಲಿಸಿದಾರರಿಗೆ ಸಿಗದ , ಪಾರದರ್ಶಕತೆಯ ಲವಲೇಷವೂ ಇಲ್ಲದ ಒಂದು ವ್ಯವಸ್ಥೆ ಇದು ಎಂದು ಪುಡಾ ಅಧ್ಯಕ್ಷರಾದ ಅಮಳ ರಾಮಚಂದ್ರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Ad Widget

Ad Widget <> Ad Widget

ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅಮಳ ರಾಮಚಂದ್ರ , ವಿಮಾ ಮೊತ್ತ ಪ್ರತಿ ಹೆಕ್ಟೇರಿಗೆ ಅಡಿಕೆಗೆ 1,28,000, ಕಾಳು ಮೆಣಸಿಗೆ 47,000 , ಒಟ್ಟು 1,75,000. ಇದರ ಪ್ರೀಮಿಯಂ ಕಂತು 25% ಆದರೆ ಸರಕಾರಗಳು ವಿಮಾ ಕಂಪೆನಿಗೆ ನೀಡುವ ತಲಾ 20% ಹಣ ರೂ 35,000. ಪ್ರೀಮಿಯಂ ಅಡಿಕೆಗೆ 35℅ ಕಾಳುಮೆಣಸಿಗೆ 30% ಆದರೆ ಉಭಯ ಸರಕಾರಗಳು ಕಂಪೆನಿಗೆ ನೀಡುವ 30%ಹಣದ ಮೊತ್ತ ರೂ ಅಡಿಕೆಗೆ ರೂ38,400, ಕಾಳುಮೆಣಸಿಗೆ ರೂ11750, ಒಟ್ಟು ರೂ50,150. ಇಷ್ಟು ದೊಡ್ಡ ಮೊತ್ತದ ನಮ್ಮ ತೆರಿಗೆಯ ಹಣ ಸರಕಾರ ವಿಮಾ ಕಂಪೆನಿಗೆ ನೀಡುವುದಾದರೆ, ಪರಿಹಾರ ಬಂದರೆ ಬಂತು, ಬಾರದಿದ್ದರೆ ಇಲ್ಲ, ಇದರಿಂದ ವಿಮಾ ಕಂಪೆನಿಗಳಿಗೆ ಲಾಭ ಆಗುವುದಾದರೆ, ನಮ್ಮ ಮತ್ತು ಸರಕಾರದ ಮದ್ಯೆ ವಿಮಾ ಕಂಪೆನಿ ಯಾಕೆ ಬೇಕು? ಸರಕಾರಗಳು ನೇರವಾಗಿಯೇ ಪ್ರತಿವರ್ಷ ಪ್ರತಿ ಹೆಕ್ಟೇರಿಗೆ ರೂ 50150ರಂತೆ ರೈತರ ಖಾತೆಗೆ ನೇರವಾಗಿ ಹಾಕಬಹುದಲ್ಲವೇ ? ಸರಕಾರದ ಹಣದಲ್ಲಿ ವಿಮಾ ಕಂಪೆನಿಗಳಿಗೆ ಲಾಭ ಮಾಡಿಕೊಡುವುದಕ್ಕಾಗಿಯೇ ಈ ಯೋಜನೆಯನ್ನು ಕೇಂದ್ರದ ಮೋದಿ ಸರಕಾರ ಜಾರಿಗೆ ತಂದಿದೆ.



Ad Widget

2016ರಲ್ಲಿ ಮರುವಿನ್ಯಾಸಗೊಳಿಸಿದ ಬೆಳೆ ವಿಮಾ ಯೋಜನೆ ಆರಂಭಗೊಂಡ ನಂತರ ಮೊದಲ ಕೆಲವು ವರ್ಷಗಳಲ್ಲಿ ಯೋಜನೆ ಬಹಳ ಚೆನ್ನಾಗಿತ್ತು. ಹತ್ತು ಸಾವಿರ 20 ಸಾವಿರ ಪ್ರೀಮಿಯಂ ಕಟ್ಟಿದ ರೈತರಿಗೆ ಲಕ್ಷ ಲಕ್ಷ ಹಣ ಬರುತ್ತಿತ್ತು. ರಾಜ್ಯ ಮತ್ತು ಕೇಂದ್ರದ ಸರಕಾರಗಳು ಸೇರಿ ಅನುಷ್ಟಾನಗೊಳಿಸಿದ ಈ ಯೋಜನೆಯಲ್ಲಿ ರೈತರಿಗೆ ಒಳ್ಳೆಯ ಪರಿಹಾರ ಬಂದಾಗ ಮೋದಿಯಿಂದಾಗಿ ಹಣ ರೈತರಿಗೆ ಬಂತು ಎಂದು ಬೊಬ್ಬೆ ಹಾಕುತ್ತಿದ್ದ ಬಿಜೆಪಿಯವರಿಗೆ ಈಗ ರಾಜ್ಯ ಸರ್ಕಾರವನ್ನು ದೂರುತ್ತಿರುವುದು ಅತ್ಯಂತ ನಾಚಿಕೆಗೇಡು ಸಂಗತಿಯಾಗಿ. ಅದರಲ್ಲಿಯೂ ಯಾವ ತಪ್ಪನ್ನು ಮಾಡದ ರಾಜ್ಯ ಕಾಂಗ್ರೆಸ್ ಸರಕಾರವನ್ನು ವಿನಾಕಾರಣ ತಪ್ಪು ಮಾಹಿತಿ ನೀಡಿ ದೂಷಿಸುವುದು ಮತ್ತು ತಮ್ಮದೇ ಪಕ್ಷದ ಜೋಪಾಸಣಾ ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರು ಮಾಡಿದ ತಪ್ಪನ್ನು ಕಾಂಗ್ರೆಸ್ ಸರಕಾರದ ಮೇಲೆ ಹೇರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ.

Ad Widget

Ad Widget

2023ರಲ್ಲಿ ಟರ್ಮಶೀಟ್ ಬದಲಾವಣೆ ಮಾಡಲಾಯಿತು ಎಂದು ಬಿಜೆಪಿಯವರು ಆರೂಪಿಸುತ್ತಿರುವುದು ನಿಜ. ಆದರೆ ಈ ಟರ್ಮ್ ಶೀಟ್ 2023ರಲ್ಲಿ ಯಾವಾಗ ಬದಲಾವಣೆ ಆಯಿತು , ಯಾವಾಗ ಟೆಂಡರ್ ಕರೆಯಲಾಯಿತು, ಯಾವಾಗ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು ಎನ್ನುವುದನ್ನು ನೋಡಿದರೆ ಬಿಜೆಪಿಯವರು ಎಷ್ಟು ಸುಳ್ಳು ಹೇಳುತ್ತಿದ್ದಾರೆ ಅನ್ನೋದು ಅರ್ಥ ಆಗುತ್ತದೆ. ಕರ್ನಾಟಕದಲ್ಲಿ ಕಳೆದ ವಿಧಾನಸಭಾ ಚುನಾವಣೆ ನಡೆದದ್ದು 2023ರ ಮೇ ಹತ್ತರಂದು. ಫಲಿತಾಂಶ ಪ್ರಕಟವಾದದ್ದು 2023 ನೇ ಇಸವಿಯ ಮೇ 13 ರಂದು. ಫಲಿತಾಂಶ ಪ್ರಕಟವಾದ ನಂತರ, ಕಾಂಗ್ರೆಸ್ ಪಕ್ಷ ಬಹುಮತವನ್ನು ಪಡೆದು, ಮಾನ್ಯ ಸಿದ್ದರಾಮಯ್ಯನವರು ಆಡಳಿತ ಪಕ್ಷದ ನಾಯಕರಾಗಿ ಆಯ್ಕೆಗೊಂಡು, ಅವರು ಅಧಿಕಾರ ಸ್ವೀಕರಿಸಿದ್ದು 20 ಮೇ 2023 ರಂದು. ಆದರೆ ಈ ಟರ್ಮ್ ಶೀಟ್ ಬದಲಾವಣೆ, ಇಲ್ಲವಾರು ಟೆಂಡರ್ ಆದೇಶ ಮೇ ತಿಂಗಳ 19ನೇ ತಾರೀಕಿನಂದೇ ಆಗಿತ್ತು. ಅಂದರೆ ಕಾಂಗ್ರೆಸ್ ಸರಕಾರ 2023ರಲ್ಲಿ ಅಧಿಕಾರ ವಹಿಸಿಕೊಂಡು , ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸುವುದಕ್ಕೆ ಒಂದು ದಿನಕ್ಕೆ ಮೊದಲೇ ಟೆಂಡರ್ ಕರೆಯಲಾಗಿತ್ತು. ಈ ಬಗ್ಗೆ ಸ್ಪಷ್ಟವಾದ ದಾಖಲೆಗಳಿದ್ದು, ಈ ದಾಖಲೆಗಳನ್ನು ನಾನು ದ.ಕ. ಜಿಲ್ಲೆಯ ಮಹಾಜನತೆಗೆ ಮತ್ತು ಪುತ್ತೂರಿನ ಎಲ್ಲಾ ಅಡಿಕೆ ಬೆಳೆಗಾರರಿಗೆ ಈ ಪತ್ರಿಕಾಗೋಷ್ಠಿಯಲ್ಲಿ ಸಲ್ಲಿಸುತ್ತಿದ್ದೇನೆ.

ಒಂದು ಸರಕಾರದ ಅವಧಿ ಮುಗಿದ ನಂತರ ನಂತರ ಇನ್ನೊಂದು ಸರಕಾರದ ಆಯ್ಕೆಗಾಗಿ ಚುನಾವಣೆ ನಡೆದು ಹೊಸ ಸರಕಾರ ಅಧಿಕಾರ ಸ್ವೀಕರಿಸುವವರೆಗೆ ಹಿಂದಿನ ಸರಕಾರದ ಮುಖ್ಯಮಂತ್ರಿಗಳೇ ಜೋಪಾಸಣಾ ಮುಖ್ಯಮಂತ್ರಿಗಳಾಗಿರುತ್ತಾರೆ. ಜೋಪಾಸಣಾ ಮುಖ್ಯಮಂತ್ರಿಗಳು ಕೇವಲ ಸರಕಾರವನ್ನು ನೋಡಿಕೊಳ್ಳುತ್ತಾರೆ ಅಷ್ಟೇ ಹೊರತು ನಿರ್ಧಾರಗಳನ್ನು ತೆಗೆದುಕೊಳ್ಳುವ ಎಲ್ಲಾ ಅಧಿಕಾರವೂ ರಾಜ್ಯಪಾಲರಲ್ಲೇ ಕೇಂದ್ರೀಕೃತವಾಗಿರುತ್ತದೆ. ಆಗಿನ ಜೋಪಾಸಣಾ ಮುಖ್ಯಮಂತ್ರಿಗಳಾಗಿದ್ದವರು ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಯವರು ಮತ್ತು ಕರ್ನಾಟಕ ರಾಜ್ಯದ ರಾಜ್ಯಪಾಲರಾಗಿದ್ದವರು, ಕೇಂದ್ರದ ಬಿಜೆಪಿ ಸರಕಾರ ನೇಮಿಸಿದ, ಬಿಜೆಪಿಯ ಹಿರಿಯ ನಾಯಕರಾದ ಥಾವರ್ ಚಂದ್ ಗೆಹ್ಲೋಟ್ ಆಗಿದ್ದರು. ಅಂದರೆ ಇವತ್ತು ಟರ್ಮ್ ಶೀಟಿನಲ್ಲಿ ಏನಾದರೂ ಬದಲಾವಣೆಗಳಾಗಿ, ಅದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ವಿಮೆಯ ಪರಿಹಾರದ ಮೊತ್ತ ಕಡಿಮೆಯಾಗಿ ಏನಾದರೂ ತೊಂದರೆ ಆಗಿದ್ದರೆ ಅದಕ್ಕೆ ಮೂಲಕ ಕಾರಣ ಅಂದಿನ ಕರ್ನಾಟಕದ ಸರಕಾರದ ಜೋಪಸನಾ ಮುಖ್ಯಮಂತ್ರಿಗಳಾದ ಬಿಜೆಪಿಯ ಬಸವರಾಜ ಬೊಮ್ಮಾಯಿ ಅವರು ಮತ್ತು ಅಂದಿನ ರಾಜ್ಯಪಾಲರಾಗಿದ್ದ ಥಾವರ್ ಚಂದ್ ಗೆಹ್ಲೋಟ್ ಅವರೇ ಆಗಿದ್ದಾರೆ. ಮತ್ತು ಈ ಎಲ್ಲದರ ಹಿಂದೆ ಇರುವುದು ಭಾರತೀಯ ಜನತಾ ಪಕ್ಷವೇ ಆಗಿದೆ. 2023ರಲ್ಲಿ ಟರ್ಮ್ ಶೀಟ್ ಬದಲಾಯಿತು ಅನ್ನುವುದು ಸತಗಯ, 2023ರಲ್ಲಿ ಕಾಂಗ್ರೆಸ್ ಸರಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂತು ಅನ್ನೂವುದೂ ಸತ್ಯ. ಹೀಗೆ ಈ 2 ಸತ್ಯಗಳನ್ನು ಮುಂದಿಟ್ಡುಕೊಂಡು ಬಿಜೆಪಿಯವರು ಸತ್ಯದ ತಲೆಯ ಮೇಲೆ ಹೊಡೆದು ಸುಳ್ಳನ್ನು ಪ್ರತಿಷ್ಠಾಪಿಸಲು ಹೊರಟಿದ್ದಾರೆ. ಜಿಲ್ಲೆಯ ಜನರಿಗೆ ಮೋಸ ಮಾಡಿ ಕಾಂಗ್ರೆಸ್ ಪಕ್ಷವನ್ನು ಕಟಕಟೆಯಲ್ಲಿ ನಿಲ್ಲಿಸಲು ವಿಫಲ ಪ್ರಯತ್ನ ನಡೆಸಿದ್ದಾರೆ.

ತಮ್ಮ ಇತಿಹಾಸದುದ್ದಕ್ಕೂ ಸುಳ್ಳುಗಳನ್ನು ಹೇಳಿ ಅಧಿಕಾರ ಪಡೆದ ಬಿಜೆಪಿಯವರು ಮತ್ತು ಅದರ ನಾಯಕರು ದೇಶದಲ್ಲಿ ನಡೆಯುತ್ತಿರುವ ಪ್ರತಿಯೊಂದು ವಿಷಯದಲ್ಲಿಯೂ ಸುಳ್ಳನ್ನೇ ಹೇಳುತ್ತಿದ್ದಾರೆ ಮತ್ತು ಆ ಮೂಲಕ ದೇಶದ ಜನರ ದಾರಿಯನ್ನು ತಪ್ಪಿಸುತ್ತಿದ್ದಾರೆ. ಯಾವುದೇ ಆಧಾರಗಳಿಲ್ಲದೆ ಕಪೋಲ ಕಲ್ಪಿತ ವಿಚಾರಗಳನ್ನು ಜನರ ಮುಂದಿಟ್ಟು, ಸಂದರ್ಭಕ್ಕೆ ಸರಿಯಾಗಿ ಸುಳ್ಳುಗಳನ್ನು ಹೇಳಿ, ಜನರ ದಾರಿ ತಪ್ಪಿಸಿ, ವೋಟು ಪಡೆದು ಅಧಿಕಾರಕ್ಕೆ ಇರುವ ಕಲೆಯನ್ನು ಇವರು ಅತ್ಯಂತ ವ್ಯವಸ್ಥಿತವಾಗಿ ಮಾಡುತ್ತಾ ಬಂದಿದ್ದಾರೆ. ಮತಯಂತ್ರಗಳನ್ನು ತಿಳಿಸಿ , ದೇಶದ ದಲಿತ ದಮನಿತ, ಅಲ್ಪಸಂಖ್ಯಾತರ ಮತಗಳನ್ನು ವೋಟರ್ ಲಿಸ್ಟ್ ಇಂದ ಇಡೀ ದೇಶಕ್ಕೂ ಸಮಸ್ತ ಹಿಂದೂ ಸಮಾಜಕ್ಕೂ ಮೋಸ ಮಾಡಿದ ಇವರು ಅಡಿಕೆಯ ಬೆಳೆ ವಿಮೆಯ ವಿಚಾರದಲ್ಲಿ ಒಂದು ಕಪೋಲ ಕಲ್ಪಿತ ಸುಳ್ಳು ವಿಚಾರವನ್ನು ಮುಂದಿಟ್ಟು , ಇಡೀ ಜಿಲ್ಲೆಯಲ್ಲಿ ಹಂಗಾಮ ನಡೆಸಿ , ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಡಿಕೆ ಬೆಳೆಗಾರರಿಗೆ ದ್ರೋಹವನ್ನು ಎಸೆಗಿದ್ದಾರೆ.

ಹೀಗೆ ಬಿಜೆಪಿಯವರು ರಾಜ್ಯಸರಕಾರದ ಮೇಲೆ ಗೂಬೆ ಕೂರಿಸಿ ಜನರ ಕಣ್ಣಿ ಮಂಕುಬೂದಿ ಎರಚಿ ಮುಂದಿನ ಚುನಾವಣೆ ಎದುರಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ಈ ಎಲ್ಲಾ ವಿಚಾರಗಳು ಬಿಜೆಪಿಯವರಿಗಾಗಲೀ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರಿಗಾಗಲೀ ತಿಳಿಯದ ವಿಚಾರ ಏನೆಲ್ಲ. ಆದರೆ ಅವರು ಅರ್ಧ ಸತ್ಯವನ್ನು ಹೇಳಿ ಇನ್ನರ್ಧ ಸತ್ಯವನ್ನು ಮುಚ್ಚಿಟ್ಟು, ಮತ್ತೆ ಇನ್ನೊಂದಷ್ಟು ವಿಚಾರಗಳನ್ನು ತಿರುಚಿ ಜಿಲ್ಲೆಯ ಜನರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಇವರ ಉದ್ದೇಶ ಮುಂದಿನ ಚುನಾವಣೆಯಲ್ಲಿ ಮತ ಕದಿಯುವುದು. ಓಟ್ ಚೋರಿ ಮಾಡಿ ಸಿಕ್ಕಿಹಾಕಿಕೊಂಡ ಮೋದಿ , ಶಾ ಜೋಡಿ ಇಂದು ಇಡೀ ದೇಶದಲ್ಲಿ ಮುಖ ಮುಚ್ಚಿ ಓಡಾಡಿಕೊಂಡಿರುವುದರಿಂದ ಧೃತಿಗೆಟ್ಟ ಬಿಜೆಪಿಯವರು ಮತ್ತೆ ಪುನಃ ಸುಳ್ಳಿನ ರಾಜಕೀಯಕ್ಕೆ ಹಿಂತಿರುಗಿದ್ದಾರೆ. ಇದು ಖಂಡನಾರ್ಹ.ಸುಳ್ಳು ಹೇಳಿ ದ.ಕ. ಜಿಲ್ಲೆಯ ಜನರಿಗೆ ಮೋಸ ಮಾಡುತ್ತಿರುವ ಬಿಜೆಪಿಯ ನಡವಳಿಕೆ ಅಕ್ಷಮ್ಯ ಅಪರಾಧವಾಗಿದೆ.

ಇದರ ಜೊತೆಗೆ ಮಾನ್ಯ ಹರೀಶ್ ಪೂಂಜಾರವರು ಪುತ್ತೂರಿನ ಶಾಸಕರಾದ ಅಶೋಕ್‌ಕುಮಾರ್ ರೈವರ ಮೇಲೆ ವೈಯ್ಯಕ್ತಿ ದಾಳಿ ನಡೆಸಿದ್ದಾರೆ. ತನಾನು ಹುಟ್ಟಿಸಿದ ಮಗುವಿಗೆ ನಾನೇ ಅಪ್ಪ ಎಂದು ಹೇಳುವ ಪೂಂಜಾರವರ ಕೀಳು ಮಾತುಗಳಿಗೆ ಮಾನ್ಯ ಶಾಸಕರು ಸರಿಯಾದ ಉತ್ತರ ನೀಡಿದ್ದಾರೆ. ಹುಟ್ಡಿಸುವ ಮಾತುಗಳನ್ನ ಆಡುತ್ತಿರುವ ಹರೀಶ್‌ ಪೂಂಜಾರವರು ಅಶೋಕ್ ರೈಯವರು ಪುತ್ತೂರಿನಲ್ಲಿ ಏನನ್ನು ಹುಟ್ಟಿಸಿದ್ದಾರೆ ಮತ್ತು ಸ್ವತಃ ತಾನು ಬೆಳ್ತಂಗಡಿಯಲ್ಲಿ ಏನನ್ನು ಹುಟ್ಟಿಸಿದ್ದಾರೆ ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳುವುದು ಒಳಿತು.

ಬಾಯಿ ಚಪಲಕ್ಕೆ ಮಾತನಾಡುವ ಹರೀಶ್ ಪೂಂಜಾರವರಿಗೆ ನಾವು ಕೊಡುವ ಉತ್ತರ ಇದು. ಪುತ್ತೂರಿನಲ್ಲಿ ನಮ್ಮ ಶಾಸಕರು ಒಂದು ಸರಕಾರಿ ಮೆಡಿಕಲ್ ಕಾಲೇಜು ಹುಟ್ಟಿಸಿದ್ದಾರೆ.
ಮುಂಡೂರು ಗ್ರಾಮದಲ್ಲಿ ಒಂದು ಕ್ರೀಡಾಂಗಣವನ್ನು ಹುಟ್ಟಿಸಿದ್ದಾರೆ,
ಅಲ್ಲೇ ಪಕ್ಕದಲ್ಲಿ ಒಂದು ಸರ್ವ ಸುಸಜ್ಜಿತ ಆರ್.ಟಿ.ಒ. ಟ್ರ್ಯಾಕ್ ಹುಟ್ಡಿಸಿದ್ದಾರೆ, ಬಜತ್ತೂರು ಗ್ರಾಮದಲ್ಲಿ ಒಂದು ಅಂಬೇಡ್ಕರ್ ವಸತಿ ಶಾಲೆ ಹುಟ್ಟಿಸಿದ್ದಾರೆ,
ಕುರಿಯ ಗ್ರಾಮದಲ್ಲಿ ಒಂದು ಶ್ರಮಿಕ ವಸತಿ ಶಾಲೆ ಹುಟ್ಟಿಸಿದ್ದಾರೆ.
ಬಿರುಮಲೆ ಬೆಟ್ಟದಲ್ಲಿ ಅಭಿವೃದ್ಧಿಯ ಪರ್ವವನ್ನು ಹುಟ್ಡಿಸಿದ್ದಾರೆ ,
ಬನ್ನೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಒಂದು ಹಾಸ್ಟೆಲ್ ಹುಟ್ಟಿಸಿದ್ದಾರೆ.
ತಾಲೂಕು ಪಂಚಾಯತ್‌ಗೆ ಒಂದು ನೂತನ ಕಟ್ಟಡ ಹುಟ್ಟಿಸಿದ್ದಾರೆ. ನಗರದಲ್ಲಿ ಒಂದು
ನೂತನ ಪ್ರವಾಸಿ ಮಂದಿರ ಹುಡ್ಟಿಸಿದ್ದಾರೆ.
ಕಬಕದಿಂದ ವಿಟ್ಲಕ್ಕೆ ಒಂದು ಚತುಷ್ಪತ ರಸ್ತೆ ಹುಟ್ಟಿಸಿದ್ದಾರೆ.
ನಿವೇಶನ ರಹಿತ ಬಡವರಿಗೆ ನೂರಾರು ಮನೆ ನಿವೇಶನ ಹುಟ್ಟಿಸಿದ್ದಾರೆ. ನಿಮ್ಮದೇ ಪಕ್ಷದ ಖದೀಮರು ನುಂಗಿ ನೀರು ಕುಡಿಯಲು ನೋಡಿದ್ದ ಮಹಾಲಿಂಗೇಶ್ವರ ದೇವಸ್ಥಾನದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಭೂಮಿಯನ್ನು ದೇವಾಲಯದ ಸ್ವಾದೀನಕ್ಕೆ ಮರು ಒಪ್ಪಿಸಿ ಮರು ಹುಟ್ಟು ನೀಡಿದ್ದಾರೆ. ಕಳೆದ 8 ವರ್ಷಗಳಿಂದ ಶಾಸಕರಾಗಿರುವ ನೀವೇನು ಹುಟ್ಟಸಿದಿರಿ ? ನೀವು ಹುಟ್ಟಿಸಿದ್ದು ಕೋಮುವಾದ ಮಾತ್ರ ! ನೀವು ಹುಟ್ಟಿಸಿದ್ದು ಹಿಂದೂ ಮುಸ್ಲಿಂ ದ್ವೇಷ ಮಾತ್ರ ! ನೀವು ಹುಟ್ಟಿಸಿದ್ದು ಗೋಣಿ ಚೀಲದ ತುಂಬಾ ಕಂತೆ ಕಂತೆ ಹಣ ಮಾತ್ರ ! ನೀವು ಹುಟ್ಟಿಸಿದ್ದು ಅದೇ ಸುಳ್ಳಿನ ರಾಜಕಾರಣ ಮಾತ್ರ ! ಒಂದು ಅವಧಿಗೆ ನಿಮ್ಮದೇ ಪಕ್ಷದ ಸರಕಾರ ಇದ್ದಾಗ ನೀವು ಹುಟ್ಟಿಸಿದ್ದು ಏನಾದರೂ ಒಂದು ಇದ್ದರೆ ಹೇಳಿ ನೋಡೋಣ ! ನಿಮ್ಮ ಕ್ಷೇತ್ರಕ್ಕೆ ಸ್ವಾಗತಿಸುವ ಹೊಂಡ ಬಿದ್ದ ರಸ್ತೆಗಳೇ ನಿಮ್ಮ ಹಣೆ ಬರಹವನ್ನು ಸಾರಿ ಸಾರಿ ಹೇಳುತ್ತದೆ. ನಾಚಿಕೆಯಾಗಬೇಕು ನಿಮಗೆ.

ದಾಖಲೆ : ಕರ್ನಾಟಕ ಸರಕಾರದ ನಡವಳಿಗಳು.
https://samrakshane.karnataka.gov.in/Docs/RWBCIS_Kharif_6_Districts_GO_2023_24.pdf

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading