ಪುತ್ತೂರು
Puttur Kambala | ಕಂಬಳ ಕೂಟದಲ್ಲೇ ಅತೀ ದೊಡ್ಡ ಕಂಬಳವಾದ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳಕ್ಕೆ 30ನೇ ವರ್ಷದ ಸಂಭ್ರಮ – ಜ.28 ಪುತ್ತೂರು ಕಂಬಳ : ಪೂರ್ವಭಾವಿ ಸಭೆ ‘ಕಾಂತಾರ’ ಚಿತ್ರತಂಡ, ಡಿ.ಕೆ ಶಿವಕುಮಾರ್ , ಪ್ರಿಯಾಂಕ ಖರ್ಗೆ ಭಾಗವಹಿಸುವ ನಿರೀಕ್ಷೆ
ಪುತ್ತೂರು : ಕಂಬಳ ಕೂಟದ ಇತಿಹಾಸದಲ್ಲೇ ಅತೀ ದೊಡ್ಡ ಕಂಬಳ ಎಂಬ ಹೆಗ್ಗಳಿಕೆಗೆ ಪಾತ್ರವಾದ ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳಕ್ಕೆ (Puttur Kambala) 30ನೇ ವರ್ಷದ ಸಂಭ್ರಮದಲ್ಲಿದೆ. ಈ ಬಾರಿಯ ಕಂಬಳ ಕೂಟ 2023ರ ಜನವರಿ 28ಕ್ಕೆ ನಡೆಯಲಿದೆ. ಇದರ ಪೂರ್ವಭಾವಿ ಸಭೆ ಪುತ್ತೂರು ಬೊಳುವಾರಿನ ಉದಯಗಿರಿ ಹೊಟೇಲ್ ನಲ್ಲಿ ನಡೆಯಿತು.
ಪುತ್ತೂರು ಕಂಬಳದ ಗೌರವಾಧ್ಯಕ್ಷ, ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ , ದಿ.ಜಯಂತ್ ರೈ ಪ್ರಾರಂಭಿಸಿ ನಂತರ ಮುತ್ತಪ್ಪ ರೈ (Mutthappa Rai) ಗಳ ನೇತೃತ್ವದಲ್ಲಿ ಸಾಗುತಿದ್ದ ಪುತ್ತೂರು ಕಂಬಳ 30 ನೇ ವರ್ಷಕ್ಕೆ ಪಾದರ್ಪಾಣೆ ಮಾಡಿರುವು ನಮ್ಮೆಲ್ಲರ ಹೆಮ್ಮೆಯ ವಿಷಯ ಎಂದರು.ಕಾಂತಾರ (Kanthara) ಸಿನಿಮಾ ಮೂಲಕ ತುಳುನಾಡಿನ ಸಂಸ್ಕೃತಿ ವಿಶ್ವದಲ್ಲೇ ವೈಭ್ರೇಷನ್ ಸೃಷ್ಟಿಸಿದೆ. ತುಳುನಾಡಿನ ವೀರ ಸಂಸ್ಕೃತಿ, ನಮ್ಮವರೇ ಆದ ರಿಷಬ್ ಶೆಟ್ಟಿ ಇದನ್ನು ವಿಶ್ವಮಟ್ಟಕ್ಕೆ ತಲುಪಿಸಿದ್ದಾರೆ. ಕಂಬಳಕ್ಕೆ ವಿಶ್ವಮಟ್ಟದಲ್ಲಿ ಪ್ರಚಾರ ಸಿಗಬೇಕೆಂದು ಹಲವು ವರ್ಷಗಳ ಫಲ ಇಂದು ಪ್ರಯತ್ನಕ್ಕೆ ಕಾಂತಾರದ ಮೂಲಕ ಸಿಕ್ಕಿದೆ ಎಂದರು.

ಕಂಬಳ ಯಶಸ್ವಿಯಾಗಲು ಎಲ್ಲರೂ ಪ್ರಯತ್ನ ಪಟ್ಟವರೆಲ್ಲರ ಮಧ್ಯೆ ಶಕುಂತಳಾ ಶೆಟ್ಟಿಯದು ವಿಶೇಷ, ಅವರ ರಾಜಕೀಯ ಇತಿಹಾಸವೇ ಕಂಬಳ. ಅವರಿಗೆ ಈ ಕಂಬಳ ಬಂದ ಕಾರಣ ಟಿಕೇಟ್ ತಪ್ಪಿದೆ. ನಂತರ ಅವರನ್ನೇ ಗೆಲ್ಲಿಸಿದ್ದೇವೆ. ಅದೇ ರೀತಿ ಕೇರಳದ ಸಿಪಿಎಂ ನ ನಾಯಕರೊಬ್ಬ ಕಂಬಳಕ್ಕೆ ಬಂದು ಅವರನ್ನು ಪಕ್ಷ ವಜಾ ಮಾಡಿತ್ತು ನಂತರ ಅವರೂ ಕಾಂಗ್ರೇಸಿಗೆ ಬಂದರು ಎಂದು ಸೊರಕೆ ರಾಜಕೀಯ ಮೆಲುಕು ಹಾಕಿದರು.
ಕಂಬಳ ಎಂದರೆ ಸೌಹಾರ್ಧತೆಯ ಸಂಕೇತ, ಇಲ್ಲಿ ಎಲ್ಲಾ ಕೆಲಸದಲ್ಲೂ ಎಲ್ಲಾ ಧರ್ಮದವರು ಕೈಜೋಡಿಸುತ್ತಾರೆ. ನಾನು ಪುತ್ತೂರು ಬಿಟ್ಟು 22 ವರ್ಷ ಕಳೆದರೂ ನಿಮ್ಮೊಂದಿಗೆ ಒಟ್ಟಿಗೆ ಇದ್ದೇನೆ. ಕಂಬಳ, ಗಣೇಶೋತ್ಸವದಲ್ಲಿ ಎಲ್ಲರೂ ಒಗ್ಗಟ್ಟಾಗುತ್ತೇವೆ ಎಂದರು.
ಪುತ್ತೂರು ಕಂಬಳಕ್ಕೆ ಖಾವಂದರರ ಆಶೀರ್ವಾದದಲ್ಲಿ ನಡೆಯುವುದರಿಂದ ಅವರನ್ನು ಭೇಟಿಯಾಗಿ ಅವರ ಮಾರ್ಗದರ್ಶನ ಪಡೆದು ಮುನ್ನಡೆಯಬೇಕು ಎಂದರು.
ಮಾಜಿ ಶಾಸಕಿ ಕಂಬಳ ಕೂಟದ ಪ್ರಮುಖರಾದ ಶಕುಂತಳಾ ಶೆಟ್ಟಿ ಮಾತನಾಡಿ, ಪುತ್ತೂರು ಕಂಬಳಕ್ಕೆ ಮಹಾಲಿಂಗೇಶ್ವರ ದೇವರ ಆಶೀರ್ವಾದವಿದೆ, ದೇವಸ್ಥಾನದಲ್ಲಿ ಇಟ್ಟ ಅಷ್ಟಮಂಗಲದಲ್ಲೇ ಅದು ಕಂಡುಬಂದಿದೆ. ಹಾಗಾಗಿ ಮಹಾಲಿಂಗೇಶ್ವರನಿಗೆ ಪ್ರಿಯವಾದ ಕಂಬಳಕ್ಕೆ ಅವರ ರಥೋತ್ಸವಕ್ಕೆ ಬಂದಷ್ಟೇ ಜನ ಕಂಬಳಕ್ಕೂ ಬರ್ತಾರೆ ಎಂದರು.

ಪುತ್ತೂರು ಕಂಬಳ ಕೂಟದ ಅಧ್ಯಕ್ಷ ಎನ್. ಚಂದ್ರಹಾಸ ರೈ ಸ್ವಾಗತಿಸಿ 30 ವರ್ಷದ ಕಂಬಳ ಕೂಟದ ರೂಪುರೇಷದ ಬಗ್ಗೆ ಮಾತನಾಡಿದರು. 30 ನೇ ವರ್ಷದ ಸ್ಮರಣಸಂಚಿಕೆ ಹೊರತರುವ ಬಗ್ಗೆ ಪ್ರಾಸ್ತಾಪಿಸಿದರು.
ಈ ಸಲದ ವಿಶೇಷ ಆಕರ್ಷಣೆಯಾಗಿ ರಿಷಬ್ ಶೆಟ್ಟಿ ಸಹಿತ ಕಾಂತಾರ ಚಿತ್ರತಂಡ ಕರೆತರುವ ಬಗ್ಗೆ ಚರ್ಚಿಸಲಾಯಿತು. ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್, ಕೆಪಿಸಿಸಿ ಸಮಾಜಿಕ ಮತ್ತು ಮಾಧ್ಯಮ ಸೆಲ್ ನ ಅಧ್ಯಕ್ಷ ಪ್ರಿಯಾಂಕ ಖರ್ಗೆ ಅವರು ಈ ಭಾರಿ ಕಂಬಳ ಕೂಟಕ್ಕೆ ಆಗಮಿಸುವ ಬಗ್ಗೆ ಸೊರಕೆ ಸಭೆಯಿಂದಲೇ ಅವರಿಗೆ ಕರೆ ಮಾಡಿ ನಿಗಧಿಪಡಿಸಿದರು.

ಸನ್ಮಾನ: ಕಂಬಳದ ಯಶಸ್ವಿಗಾಗಿ ಶ್ರಮಿಸಿದ, ಮಹಾತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಧಾಕರ್ ಶೆಟ್ಟಿ , 25 ವರ್ಷಗಳ ಕಂಬಳ ಕೂಟದಲ್ಲಿ ಭಾಗವಹಿಸಿ ಹಲವು ಪ್ರಶಸ್ತಿ ಗೆದ್ದ ಕೊಳಚ್ಚೂರು ಕೊಂಡೊಟ್ಟು ಸುಕುಮಾರ್ ಶೆಟ್ರೆನ ‘ಚೆನ್ನ’ ಕೋಣ, ರಾಜ್ಯೋತ್ಸವ ಪ್ರಶಸ್ತಿ ಗೆದ್ದ ಸಮಾಜಸೇವಕ ರವಿ ಶೆಟ್ಟಿ ಮೂಡಂಬೈಲು ಅವರನ್ನು 30 ನೇ ವರ್ಷದ ಕಂಬಳ ಕೂಟದಲ್ಲಿ ಸನ್ಮಾನಿಸುವ ಬಗ್ಗೆ ತೀರ್ಮಾನಿಸಲಾಯಿತು.
30ನೇ ವರ್ಷದ ಸ್ಮರಣ ಸಂಚಿಕೆ ಸಮಿತಿ : ವಸಂತ ಕುಮಾರ್ ರೈ ದುಗ್ಗಳ, ದುರ್ಗಾಪ್ರಸಾದ್ ರೈ ಕುಂಬ್ರ, ಭಾಸ್ಕರ್ ಗೌಡ ಕೊಡಿಂಬಾಳ, ಮಹಮ್ಮದ್ ಬಡಗನ್ನೂರು, ನಿರಂಜನ್ ರೈ ಮಠಂತಬೆಟ್ಟು ಅವರನ್ನೊಳಗೊಂಡ ಸಮಿತಿ ರಚಿಸಲಾಯಿತು.
ಕೋಶಾಧಿಕಾರಿ ಪಂಜಿಗುಡ್ಡೆ ಈಶ್ವರ ಭಟ್ ಧನ್ಯವಾದಗೈದರು. ಉಪಾಧ್ಯಕ್ಷ ನಿರಂಜನ್ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ದಿನೇಶ್ ಪಿ.ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಂಬಳ ಕೂಟದಲ್ಲೇ ಪ್ರಖ್ಯಾತವಾದ ‘ಪುತ್ತೂರು ಕಂಬಳ’ ಹೆಸರಿನ ಪೇಟೆಂಟ್ ಪಡೆಯುವ ಬಗ್ಗೆ ವಿದ್ಯಾಮಾತ ಅಕಾಡೆಮಿಯ ಭಾಗ್ಯೇಶ್ ರೈ ಸಭೆಯಲ್ಲಿ ಪ್ರಸ್ತಾಪಿಸಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ಬಿ.ಕೆ ರಾಜಾರಾಮ್, ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಉಪಸ್ಥಿತರಿದ್ದರು.
ಪುತ್ತೂರು ಕಂಬಳ ಕೂಟದ ಉಪಾಧ್ಯಕ್ಷ ಶಿವರಾಮ್ ಆಳ್ವ, ಜಿನ್ನಪ್ಪ ಪೂಜಾರಿ ಮುರ, ಸುದರ್ಶನ್ ರೈ ಕಂಪ, ವಸಂತ ರೈ ದುಗ್ಗಳ , ಜೋಕೀಂ ಡಿಸೋಜಾ, ನಿರಂಜನ್ ರೈ ಮಠಂತಬೆಟ್ಟು,
ಸದಸ್ಯರಾದ ಶಶಿಕಿರಣ್ ರೈ, ರೋಶನ್ ರೈ ಬನ್ನೂರು , ಪ್ರವೀಣ್ ಶೆಟ್ಟಿ ಅಳಕೆಮಜಲು, ಭಾಗ್ಯೇಶ್ ರೈ, ವಿಕ್ರಮ್ ಶೆಟ್ಟಿ ಅಂತರ , ಗಣೇಶ್ ರಾಜ್, ಉಮೇಶ್ ಕರ್ಕೇರಾ , ಉಮಾಶಂಕರ್ ನಾೖಕ್, ಕೃಷ್ಣಪ್ರಸಾದ್ ಆಳ್ವ , ಎ.ಕೆ ಜಯರಾಮ್ ರೈ, ರಾಕೇಶ್ ಶೆಟ್ಟಿ ಕೆಮ್ಮಾರ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಮಂಜುನಾಥ ಗೌಡ ಶಶಿಧರ್ ನೆಲ್ಲಿಕಟ್ಟೆ, ಸುದರ್ಶನ್ ರೈ ಕಂಪ , ಸದಾಶಿವ ಸಾಮಾನಿ, ಯೋಗೀಶ್ ಸಾಮಾನಿ, ಗಂಗಾಧರ್ ರೈ ಕೈಕಾರ, ಲಿಖಿತ್ ಅಳಕೆಮಜಲು, ಸುದೇಶ್ ನಾಯ್ಕ್, ಸಂತೋಷ್ ಮುರ, ಬಿಪಿನ್ ಶೆಟ್ಟಿ ಸವಣೂರು, ಹಸೈನರ್ ಬನಾರಿ, ಸುಂದರ ಮುರ, ಮಹಾಬಲ ರೈ ಒಳತ್ತಡ್ಕ, ಪ್ರೇಮನಂದ ನಾಯ್ಕ್, ವಿಲ್ಫ್ರೆಡ್ ಫೆರ್ನಾಂಡೀಸ್ , ವಿಜಿತ್ ಗೌಡ, ಯತೀಶ್ ಶೆಟ್ಟಿ ಕೊಡಿಂಬಾಡಿ ಸಹಿತ ನೂರಾರು ಜನ ಸಭೆಯಲ್ಲಿ ಉಪಸ್ಥಿತರಿದ್ದರು.
ಬಿಗ್ ನ್ಯೂಸ್
Puttur-ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್‌ಶಿಪ್‌ನಲ್ಲಿ ಪುತ್ತೂರಿನ ಪಾರ್ಥ ವಾರಣಾಸಿಗೆ ಚಿನ್ನ
ಬೆಂಗಳೂರಿನ ಪಡುಕೋಣೆ ದ್ರಾವಿಡ್ ಸೆಂಟರ್ ಫಾರ್ ಎಕ್ಸೆಲೆನ್ಸ್ (ಡಾಲ್ಫಿನ್ ಆಕ್ವಾಟಿಕ್ಸ್)ನಲ್ಲಿ ಅ.4ರಿಂದ 10ರ ತನಕ ನಡೆಯುತ್ತಿರುವ 2ನೇ ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್ ಶಿಪ್ 2026ರಲ್ಲಿ ಭಾಗವಹಿಸಿದ ಭಾರತದ ಪ್ರಮುಖ ಈಜು ಸ್ಪರ್ಧಿ ವಾರಣಾಸಿ ಸ್ವಿಮ್ಮಿಂಗ್ ಅಕಾಡೆಮಿ ಮತ್ತು ಪುತ್ತೂರು ಅಕ್ವಾಟಿಕ್ ಕ್ಲಬ್ ನ ಪ್ರಧಾನ ಕೋಚ್ ಪಾರ್ಥ ವಾರಣಾಸಿ 50 ಮೀ ಬಟರ್ ಫೈ ನಲ್ಲಿ ಪುಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ.
ಪುತ್ತೂರು: ಬೆಂಗಳೂರಿನ ಪಡುಕೋಣೆ ದ್ರಾವಿಡ್ ಸೆಂಟರ್ ಫಾರ್ ಎಕ್ಸೆಲೆನ್ಸ್ (ಡಾಲ್ಫಿನ್ ಆಕ್ವಾಟಿಕ್ಸ್)ನಲ್ಲಿ ಅ.4ರಿಂದ 10ರ ತನಕ ನಡೆಯುತ್ತಿರುವ 2ನೇ ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್ ಶಿಪ್ 2026ರಲ್ಲಿ ಭಾಗವಹಿಸಿದ ಭಾರತದ ಪ್ರಮುಖ ಈಜು ಸ್ಪರ್ಧಿ ವಾರಣಾಸಿ ಸ್ವಿಮ್ಮಿಂಗ್ ಅಕಾಡೆಮಿ ಮತ್ತು ಪುತ್ತೂರು ಅಕ್ವಾಟಿಕ್ ಕ್ಲಬ್ ನ ಪ್ರಧಾನ ಕೋಚ್ ಪಾರ್ಥ ವಾರಣಾಸಿ 50 ಮೀ ಬಟರ್ ಫೈ ನಲ್ಲಿ ಪುಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ.
9 ರಾಷ್ಟ್ರಗಳ 1,500ಕ್ಕೂ ಹೆಚ್ಚು ಈಜುಗಾರರು ಭಾಗಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ಪ್ರತಿಷ್ಠಿತ ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್‌ಶಿಪ್ ಆಯೋಜಿಸಲಾಗಿದೆ. ಏಷ್ಯಾ ಅಕ್ವಾಟಿಕ್ ಮಾರ್ಗದರ್ಶನದಲ್ಲಿ, ಭಾರತೀಯ ಈಜು ಒಕ್ಕೂಟದ ಅಧೀನದಲ್ಲಿ ಹಾಗೂ ಕರ್ನಾಟಕ ಈಜು ಸಂಸ್ಥೆಯ ಆಯೋಜನಾ ಪಾಲುದಾರಿಕೆಯಲ್ಲಿ ಚಾಂಪಿಯನ್‌ಶಿಪ್ ನಡೆಯುತ್ತಿದೆ.
ಭಾರತ ಸೇರಿದಂತೆ ಶ್ರೀಲಂಕಾ, ಇರಾನ್, ಥೈಲ್ಯಾಂಡ್, ಜಪಾನ್, ಚೀನಾ, ಓಮನ್, ಮಲೇಷ್ಯಾ ಸೇರಿದಂತೆ ಒಟ್ಟು 9 ರಾಷ್ಟ್ರಗಳ 1,500ಕ್ಕೂ ಅಧಿಕ ಈಜುಗಾರರು ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿದ್ದಾರೆ.
ಈ ಪ್ರತಿಷ್ಠಿತ ಅಂತಾರಾಷ್ಟ್ರೀಯ ಮಟ್ಟದ ಕೂಟದಲ್ಲಿ ಪಾರ್ಥ ವಾರಣಾಸಿ ಚಿನ್ನದ ಪದಕ ಗೆದ್ದಿರುವುದು ಪುತ್ತೂರಿನ ಕ್ರೀಡಾಭಿಮಾನಿಗಳಿಗೆ ಸಂತಸದ ವಿಷಯವಾಗಿದೆ.
ಉದ್ಯೋಗ
Puttur-Salesನಿಂದ Technicianವರೆಗೆ; ಪುತ್ತೂರಿನ ಶ್ರೀ ತಿರುಮಲಾ TVSನಲ್ಲಿ ಭರ್ಜರಿ Job Opening
ಉದ್ಯೋಗ ಹುಡುಕುತ್ತಿರುವ ಯುವಕ-ಯುವತಿಯರಿಗೆ ಇಲ್ಲಿದೆ ಉತ್ತಮ ಅವಕಾಶ. ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವವರಿಗೆ ಪುತ್ತೂರಿನ ಶ್ರೀ ತಿರುಮಲಾ TVS ಸಂಸ್ಥೆಯಲ್ಲಿ ಸೇಲ್ಸ್, ಸರ್ವೀಸ್, ಅಕೌಂಟ್ಸ್, ಫೈನಾನ್ಸ್, ಇನ್ಶೂರೆನ್ಸ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಹಲವು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.
ಪುತ್ತೂರು: ಉದ್ಯೋಗ ಹುಡುಕುತ್ತಿರುವ ಯುವಕ-ಯುವತಿಯರಿಗೆ ಇಲ್ಲಿದೆ ಉತ್ತಮ ಅವಕಾಶ. ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವವರಿಗೆ ಪುತ್ತೂರಿನ ಶ್ರೀ ತಿರುಮಲಾ TVS ಸಂಸ್ಥೆಯಲ್ಲಿ ಸೇಲ್ಸ್, ಸರ್ವೀಸ್, ಅಕೌಂಟ್ಸ್, ಫೈನಾನ್ಸ್, ಇನ್ಶೂರೆನ್ಸ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಹಲವು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.
TVS ಸಂಸ್ಥೆಯ ಪ್ರೀಮಿಯಂ, EV ಹಾಗೂ IC ವಿಭಾಗಗಳಲ್ಲಿ ಉದ್ಯೋಗಾವಕಾಶ ಕಲ್ಪಿಸಲಾಗಿದ್ದು, ‘ಪುತ್ತೂರಿನ ಅತಿದೊಡ್ಡ 2-ವೀಲರ್ ಜಾಬ್ ಓಪನಿಂಗ್’ ಎಂಬ ಘೋಷಣೆಯೊಂದಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.
ಸೇಲ್ಸ್ ವಿಭಾಗದಲ್ಲಿ ಹಲವು ಅವಕಾಶ
ಪುತ್ತೂರು ಸೇಲ್ಸ್ ವಿಭಾಗದಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್, ಸೇಲ್ಸ್ ಮ್ಯಾನೇಜರ್, ಎಕ್ಸ್‌ಚೇಂಜ್ ಕೋಆರ್ಡಿನೇಟರ್, ಸೇಲ್ಸ್ ಟೆಲಿಕಾಲಿಂಗ್ (CRE), ಅಕೌಂಟ್ಸ್ ಮ್ಯಾನೇಜರ್, ಫೈನಾನ್ಸ್ ಮ್ಯಾನೇಜರ್, ರಿಸೆಪ್ಷನಿಸ್ಟ್, RTO ಎಕ್ಸಿಕ್ಯೂಟಿವ್, ಇನ್‌ವಾಯ್ಸ್ ಎಕ್ಸಿಕ್ಯೂಟಿವ್, ಅಕೌಂಟ್ಸ್ ಎಕ್ಸಿಕ್ಯೂಟಿವ್, ಫೈನಾನ್ಸ್ ಕೋಆರ್ಡಿನೇಟರ್ ಹಾಗೂ ಇನ್ಶೂರೆನ್ಸ್ ಎಕ್ಸಿಕ್ಯೂಟಿವ್ ಸೇರಿದಂತೆ ಹಲವು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಸರ್ವೀಸ್ ವಿಭಾಗದಲ್ಲೂ ಭರ್ಜರಿ ನೇಮಕಾತಿ
ಸರ್ವೀಸ್ ವಿಭಾಗದಲ್ಲಿ ಅಡ್ವೈಸರ್, ಫ್ಲೋರ್ ಸೂಪರ್‌ವೈಸರ್, ಟೆಕ್ನಿಷಿಯನ್, ಪಾರ್ಟ್ಸ್ ಪಿಕರ್, ಬಿಲ್ಲಿಂಗ್/ರಿಸೆಪ್ಷನಿಸ್ಟ್ ಎಕ್ಸಿಕ್ಯೂಟಿವ್, ಪಾರ್ಟ್ಸ್ ಮ್ಯಾನೇಜರ್, ವಾಷಿಂಗ್ ಸಿಬ್ಬಂದಿ, PDI ಟೆಕ್ನಿಷಿಯನ್, ಸರ್ವೀಸ್ ಮ್ಯಾನೇಜರ್, ನೆಟ್‌ವರ್ಕ್ ಕೋಆರ್ಡಿನೇಟರ್, ವಾರಂಟಿ ಇನ್‌ಚಾರ್ಜ್, ಅಕ್ಸಿಡೆಂಟ್ ಸೂಪರ್‌ವೈಸರ್, CRE ಟೆಲಿಕಾಲಿಂಗ್, CRM, PDI ಸೂಪರ್‌ವೈಸರ್ ಹಾಗೂ ಪೇಂಟರ್ ಮತ್ತು ಡೆಂಟಿಂಗ್ ಹುದ್ದೆಗಳಿಗೆ ಅವಕಾಶವಿದೆ.

ಬೆಳ್ಳಾರೆಯಲ್ಲೂ ಉದ್ಯೋಗದ ಬಾಗಿಲು ತೆರೆದಿದೆ
ಬೆಳ್ಳಾರೆ ಭಾಗದಲ್ಲಿಯೂ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಸರ್ವೀಸ್ ವಿಭಾಗದಲ್ಲಿ ಅಡ್ವೈಸರ್, ಪಾರ್ಟ್ಸ್ ಪಿಕರ್, ಬಿಲ್ಲಿಂಗ್/ರಿಸೆಪ್ಷನಿಸ್ಟ್ ಎಕ್ಸಿಕ್ಯೂಟಿವ್, ಫ್ಲೋರ್ ಸೂಪರ್‌ವೈಸರ್, ಟೆಕ್ನಿಷಿಯನ್ ಹಾಗೂ ವಾಷಿಂಗ್ ಸಿಬ್ಬಂದಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಸೇಲ್ಸ್ ವಿಭಾಗದಲ್ಲಿ 6 ಸೇಲ್ಸ್ ಎಕ್ಸಿಕ್ಯೂಟಿವ್ ಹಾಗೂ 2 ರಿಸೆಪ್ಷನಿಸ್ಟ್ ಹುದ್ದೆಗಳಿಗೂ ಅವಕಾಶವಿದೆ.
PF, ESI ಜೊತೆಗೆ ₹25 ಸಾವಿರದವರೆಗೆ ಗಳಿಕೆ!
ಆಯ್ಕೆಯಾಗುವ ಅಭ್ಯರ್ಥಿಗಳಿಗೆ PF, ESI, ಸ್ಪಾಟ್ ಇನ್ಸೆಂಟಿವ್, ಮಾಸಿಕ ಹಾಗೂ ತ್ರೈಮಾಸಿಕ ಇನ್ಸೆಂಟಿವ್ ಸೌಲಭ್ಯಗಳು ದೊರೆಯಲಿವೆ. 25 ಕಿ.ಮೀ.ಗಿಂತ ಹೆಚ್ಚಿನ ಪ್ರಯಾಣಕ್ಕೆ ಪೆಟ್ರೋಲ್ ವೋಚರ್ ನೀಡಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಗೆ ತಿಂಗಳಿಗೆ ₹25,000 ವರೆಗೆ ಗಳಿಸುವ ಅವಕಾಶ ಇದೆ ಎಂದು ಸಂಸ್ಥೆ ತಿಳಿಸಿದೆ.
ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರು ಮಾತ್ರವಲ್ಲದೆ, ಸೇಲ್ಸ್, ಅಕೌಂಟ್ಸ್, ಫೈನಾನ್ಸ್, ಟೆಲಿಕಾಲಿಂಗ್, ಗ್ರಾಹಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಹುಡುಕುತ್ತಿರುವವರೂ ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ.
ಉದ್ಯೋಗಾವಕಾಶ ಸೀಮಿತವಾಗಿರುವುದರಿಂದ ಆಸಕ್ತ ಅಭ್ಯರ್ಥಿಗಳು ಕೂಡಲೇ ಸಂಪರ್ಕಿಸಬಹುದು.
📞 ಸಂಪರ್ಕ: +91 82965 79206
📍 ವಿಳಾಸ: ಶ್ರೀ ತಿರುಮಲಾ TVS, ಬೈಪಾಸ್ ಜಂಕ್ಷನ್, ಮಂಜಲ್ಪಡ್ಡು, ಮೇನ್ ರೋಡ್, ಬೋಳ್ವಾರ್ ವೆಸ್ಟ್, ಪುತ್ತೂರು–574201.
ಶಿಕ್ಷಣ
Vivekananda-ತಾಲೂಕು ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟ – ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕಿಯರ ತಂಡ ಜಿಲ್ಲಾಮಟ್ಟಕ್ಕೆ ಆಯ್ಕೆ
ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗ ತಾಲೂಕು ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು ಮುಕ್ರಂಪಾಡಿ ಇವರ ಸಹಯೋಗದಲ್ಲಿ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಿತು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ದ್ವಿತೀಯ ಹಾಗೂ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗ ತಾಲೂಕು ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು ಮುಕ್ರಂಪಾಡಿ ಇವರ ಸಹಯೋಗದಲ್ಲಿ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಿತು.
ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ದ್ವಿತೀಯ ಹಾಗೂ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಬಾಲಕರ ತಂಡದಲ್ಲಿ ಪ್ರಥಮ ಪಿಯುಸಿಯ ವಿದ್ಯಾರ್ಥಿಗಳಾದ ಕೆ. ವಿ. ನಿಖಿಲ್ ಕುಮಾರ್, ನಿಹಾಲ್ ಸಿ. ರೈ. ದ್ವಿತೀಯ ಪಿಯುಸಿ ಅಭಿಲಾಷ್, ವಿಕ್ರಮ್ ಎ. ಜಿ ಹಾಗೂ ಬಾಲಕಿಯರ ತಂಡದಲ್ಲಿ ದ್ವಿತೀಯ ಪಿಯುಸಿ ಆತ್ಮಿಕಾ, ಎಚ್. ಮನ್ಮಿತಾ, ಶರಣ್ಯಾ ಎಚ್. ಎನ್ ಭಾಗವಹಿಸಿರುತ್ತಾರೆ.
ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್ ,ಡಾ .ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ .ಇವರನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಹಾಗು ಉಪನ್ಯಾಸಕ ,ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.
-
ದಕ್ಷಿಣ ಕನ್ನಡ24 hours ago
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರಯಾಣಿಸುತ್ತಿದ್ದ ಕಾರು ಅಪಘಾತ
-
ಅಪರಾಧ23 hours agoSomasekhar-ನಕಲಿ ದಾಖಲೆ ಸೃಷ್ಟಿಸಿ ಕೈದಿಯ ಬಿಡುಗಡೆ..! ಪ್ರತಿಯಾಗಿ ಆತನ ಪತ್ನಿಯನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದ ಡಿಐಜಿ ಎಂ. ಸೋಮಶೇಖರ್
-
ನಿಧನ ವಾರ್ತೆ22 hours agoPuttur-ಪುತ್ತೂರು: ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಪಡೆಯುತ್ತಿದ್ದ ಸ್ಕೂಟರ್ ಸವಾರ ಮೃತ್ಯು
-
ಬಿಗ್ ನ್ಯೂಸ್17 hours agoಡಿಕೆಶಿ ಸರ್ಕಾರದಿಂದ ಜನತೆಗೆ ಬಿಗ್ ಶಾಕ್ – ರೈತರಿಗೆ ಬಂಪರ್ ಗಿಫ್ಟ್..! ಹಾಲಿನ ದರ 8 ರೂ. ಏರಿಕೆ : 6 ರೂ. ರೈತರಿಗೆ..! ನ.1 ರಿಂದ ಬಹುತೇಕ ಜಾರಿ
-
ಶಿಕ್ಷಣ21 hours agoPhilomena-ಸಂತ ಫಿಲೋಮಿನಾ ಕಾಲೇಜು : 35 ವರ್ಷಗಳ ಬಳಿಕ ಮತ್ತೆ ಒಂದಾದ 1991ರ ಬಿ.ಎಸ್ಸಿ. ಬ್ಯಾಚ್; ನೆನಪು, ನಂಟು ಮತ್ತು ಗುರು-ಗೌರವದ ಭಾವಪೂರ್ಣ ಸಂಗಮ
-
ನಿಧನ ವಾರ್ತೆ22 hours agoDead body-ಹುಲಿವೇಷ ತರಬೇತಿಗೆಂದು ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ಬಾಲಕ ಸಮುದ್ರ ಪಾಲು; ಮೃತದೇಹ ಪತ್ತೆ
-
ನಿಧನ ವಾರ್ತೆ21 hours agoKerala-ಕೇರಳ: ಸಿಡಿಲು ಬಡಿದು ಖ್ಯಾತ ‘ಪಲ್ಲಟ್ಟು ಬ್ರಹ್ಮದತ್ತನ್’ ಆನೆ ದಾರುಣ ಸಾವು
-
ಬಿಗ್ ನ್ಯೂಸ್22 hours agoPuttur-ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ: ‘ಭಕ್ತರನ್ನು ಕಡೆಗಣಿಸಿ ಜೀರ್ಣೋದ್ಧಾರ ಸಮಿತಿ ರಚನೆ’ – ವಿಹಿಂಪ ಆಕ್ಷೇಪ


















