ಅಪರಾಧ
High Drama : ಕಟ್ಟಿಕೊಂಡವಳಿಗೆ ಕೈ ಕೊಟ್ಟು, ಇಟ್ಟುಕೊಂಡವಳ ಜತೆಯಿರಲು ಉಡುಪಿಯಲ್ಲಿ ಯುವಕನ ಹೈಡ್ರಾಮ : ಸೇತುವೆ ಬಳಿ ಬೈಕ್ ಅಪಘಾತವಾಗಿದೆ ಬಿಂಬಿಸಿ ಕೋಳಿ ರಕ್ತ ಹರಿಸಿ ಈತ ಮಾಡಿದ ಡ್ರಾಮ ಒಂದೇ ಎರಡೇ ?
ಮಲ್ಪೆ Malpe ಸೆ 28: ಸೇತುವೆ ಬಳಿ ಬೈಕ್ ಅಪಘಾತವಾಗಿ ಉರುಳಿ ನದಿಗೆ ಬಿದ್ದು ಕಣ್ಮರೆಯಾಗಿದ್ದಾನೆಂದು ಬಿಂಬಿಸಿ ನಾಪತ್ತೆಯಾಗಿದ್ದ ಯುವಕನನ್ನು ಉಡುಪಿ ಜಿಲ್ಲಾ ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಸೋಮವಾರ ಸಫಲರಾಗಿದ್ದಾರೆ. ಕಟ್ಟಿಕೊಂಡವಳನ್ನು ತ್ಯಜಿಸಿ ಇಟ್ಟುಕೊಂಡವಳ ಜತೆ ಸಂಸಾರ ಮಾಡುವ ಉದ್ಧೇಶದಿಂದ ಈ ಯುವಕ ಅಪಘಾತದ ನಾಟಕವಾಡಿದ್ದ .
ದಾವಣಗೆರೆಯ ಯುವಕ ಶಿವಪ್ಪ ನಾಯ್ಕ ನಾಟಕವಾಡಿದ ಅಸಾಮಿ. ಈತ ಮಲ್ಪೆಯಲ್ಲಿ ಮೀನು ಹೊರುವ ಕಾರ್ಮಿಕ. ಈತ ವಿವಾಹಿತನಾಗಿದ್ದು, ಇನ್ನೊಂದು ಹುಡುಗಿಯ ಮೋಹಕ್ಕೆ ಬಿದ್ದು ಈ ರೀತಿ ನಾಟಕವಾಡಿರುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಏನಿದು ಪ್ರಕರಣ ?
ನಾಲ್ಕು ದಿನಗಳ ಹಿಂದೆ ಮಲ್ಪೆ ಪಡುಕರೆ ಸೇತುವೆ ತಡೆಗೋಡೆ ಬಳಿ ಶಿವಪ್ಪ ನಾಯ್ಕ ಎಂಬವನ ಬೈಕ್, ಮೊಬೈಲ್ ಫೋನ್ ಮತ್ತು ಚಪ್ಪಲಿ ಪತ್ತೆಯಾಗಿತ್ತು. ಸೇತುವೆ ಬಳಿ ರಕ್ತದ ಗುರುತು ಕೂಡ ಪತ್ತೆಯಾಗಿತ್ತು. ಈ ಬಗ್ಗೆ ನಾಪತ್ತೆ ಪ್ರಕರಣ ದಾಖಲಾಗಿತ್ತು. ಈತ ಸೇತುವೆ ಕೆಳಗೆ ಬಿದ್ದಿದ್ದಾನೆ ಎಂಬ ಶಂಕೆಯಿಂದ ಪೊಲೀಸರ ವಿನಂತಿಯ ಮೇರೆಗೆ ಮುಳುಗು ತಜ್ಞ ಈಶ್ವರ ಮಲ್ಪೆ ಅವರು ಸ್ಕೂಬಾ ಧರಿಸಿ ಸುಮಾರು ಒಂದು ತಾಸು ನೀರಿನಲ್ಲಿ ಜಾಲಾಡಿದರೂ ಪತ್ತೆಯಾಗಲಿಲ್ಲ.
Gold Rate Today : ಚಿನ್ನದ ದರ ಯಥಾಸ್ಥಿತಿ – ಖರೀದಿಗೂ ಮುನ್ನ ಇಂದಿನ ಚಿನ್ನ ಹಾಗೂ ಬೆಳ್ಳಿಯ ರೇಟ್ ತಿಳಿಯಿರಿ
ರಹಸ್ಯ ಬಿಡಿಸಿದ ಮೊಬೈಲ್
ಇದರಿಂದ ಶಂಕೆಗೊಂಡ ಪೊಲೀಸರು ಆತನ ಮೊಬೈಲ್ ಪೋನ್ ಅನ್ನು ಟ್ರೇಸ್ ಮಾಡಲು ಆರಂಭಿಸಿದ್ದರು. ಘಟನಾ ಸ್ಥಳದಲ್ಲಿ ಪತ್ತೆಯಾಗಿದ್ದ ಆತನ ಮೊಬೈಲ್ ಆನ್ ಮಾಡಿದಾಗ ಕುಂಜಿಬೆಟ್ಟಿನ ಬ್ಯಾಂಕಿನಿಂದ ಶಿವಪ್ಪ 24 ಸಾವಿರ ರೂ. ಡ್ರಾ ಮಾಡಿದ ಮೆಸೇಜ್ ಬಂದಿತ್ತು. ಇದರ ಆಧಾರದಲ್ಲಿ ಆತ ಜೀವಂತ ಇದ್ದಾನೆಂದು ಪೊಲೀಸರಿಗೆ ತಿಳಿಯಿತು. ಹೀಗಾಗಿ ತನಿಖೆ ಚುರುಕುಗೊಳಿಸಿದ ಪೊಲೀಸರು ದಾವಣೆಗೆರೆಯ ಸಂಬಂಧಿಕರ ಮನೆಯಲ್ಲಿ ಆತನ ಇರುವಿಕೆಯನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಆತನನ್ನು ಉಡುಪಿಗೆ ಕರೆಸಲಾಯಿತು.
ಹೀಗೆ ನಾಟಕವಾಡಿದ್ದ
ಬೈಕ್ ಅಪಘಾತವಾಗಿ ಸೇತುವೆಯಿಂದ ಹೊಳೆಗೆ ಬಿದ್ದು ನಾಪತ್ತೆಯಾಗಿರುವಂತೆ ಬಿಂಬಿಸುವ ಯತ್ನ ಮಾಡಿದ್ದಾನೆ. ಸೇತುವೆಯಲ್ಲಿ ಬೈಕ್ನ ಬ್ರೇಕ್ ಒತ್ತಿ, ಎಕ್ಸಲೇಟರ್ ಜಾಸ್ತಿ ಮಾಡಿ ಒಮ್ಮೆಲೆ ಬಿಟ್ಟಾಗ ಅದು ಸೇತುವೆ ತಡೆಗೋಡೆಗೆ ತಾಗಿದೆ. ಈ ಮೂಲಕ ಪೊಲೀಸರು ಹಾಗು ಸಾರ್ವಜನಿಕರು ಅದೊಂದು ಅಪಘಾತ ಎಂದು ಭಾವಿಸುವಂತೆ ಮಾಡಿದ್ದಾನೆ.
ONGC Recruitment 2022 : 871 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ – ಇಲ್ಲಿದೆ ಅರ್ಜಿ ಸಲ್ಲಿಸುವ ವಿವರ
ಬಳಿಕ ಆ ಸ್ಥಳದಲ್ಲಿ ಕೋಳಿಯನ್ನು ಕೊಯ್ದು ಅದರ ರಕ್ತವನ್ನು ರಸ್ತೆ ಮೇಲೆ ಹರಿಸಿ ಅಪಘಾತವಾಗಿ ತಾನು ಹೊಳೆಗೆ ಎಸೆಯಲ್ಪಟ್ಟಿದ್ದೇನೆ ಎಂಬ ನಾಟಕವಾಡಿದ. ಒಂದು ಕಾಲಿನ ಚಪ್ಪಲಿ ಮತ್ತು ಮೊಬೈಲನ್ನು ಅಲ್ಲೇ ಬಿಟ್ಟಿದ್ದಾನೆ. ಆ ಬಳಿಕ ಉಡುಪಿಯ ಲಾಡ್ಜ್ನಲ್ಲಿ ಇದ್ದು ಅಂದು ರಾತ್ರಿ ಊರಿಗೆ ತೆರಳಿ ಸಂಬಂಧಿಕರ ಮನೆಯಲ್ಲಿ ತಂಗಿದ್ದೆನೆಂದು ಪೊಲೀಸರ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾನೆ. ಇದೆಲ್ಲ ಜನರ ಹಾದಿ ತಪ್ಪಿಸಲು ಈತ ಮಾಡಿದ ನಾಟಕ ಎಂದು ಒಪ್ಪಿಕೊಂಡಿದ್ದಾನೆ.
ಅಷ್ಟಕ್ಕೂ ಈತ ಹೀಗೆ ಮಾಡಿದು ಯಾಕೇ ಗೊತ್ತೇ ?
6 ತಿಂಗಳ ಹಿಂದೆ ದಾವಣಗೆರೆಯ ಉತ್ಕಟಿ ತಾಂಡದ ಆಶಾ ಅವರನ್ನು ಶಿವಪ್ಪ ಪ್ರೀತಿಸಿ ವಿವಾಹವಾಗಿದ್ದ. ಬಳಿಕ ಅವರಿಬ್ಬರು ಮಲ್ಪೆ ಕೊಳದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಏತನ್ಮಧ್ಯೆ ಹೊಸಪೇಟೆ ಹರಪ್ಪನಹಳ್ಳಿಯ ಕಮಲಿಯೊಂದಿಗೆ ಈತ ಸಂಪರ್ಕ ಬೆಳೆಸಿಕೊಂಡಿದ್ದ. ಇದೇ ವಿಚಾರವಾಗಿ ಗಂಡ ಹೆಂಡತಿಯ ಮಧ್ಯೆ ವೈಮನಸ್ಸು ಉಂಟಾಗಿತ್ತು. . ಕಮಲಿಯೂ ಕೂಡ ಮೀನುಗಾರಿಕೆ ಬಂದರಿನಲ್ಲಿ ಕೆಲಸ ಮಾಡುತ್ತಿದ್ದಳು. ಕೊನೆಗೆ ಕಟ್ಟಿಕೊಂಡವಳನ್ನು ಬಿಟ್ಟು ಇಟ್ಟುಕೊಂಡವಳೊಂದಿಗೆ ಸಂಸಾರ ನಡೆಸುವ ತೀರ್ಮಾನಕ್ಕೆ ಶಿವಪ್ಪ ಬಂದಿದ್ದಾನೆ. ಹೀಗಾಗಿ ಪೊಲೀಸರ ಹಾಗೂ ಜನ ಹಾದಿ ತಪ್ಪಿಸಲು ಅಪಘಾತದ ನಾಟಕವಾಡಿದ್ದ. ಒಮ್ಮೆ ತಾನೂ ನಾಪತ್ತೆಯಾಗಿದ್ದೇನೆ ಎಂದು ಸಾರ್ವಜನಿಕ ವಲಯದಲ್ಲಿ ಬಿಂಬಿತವಾದರೇ ಬಳಿಕ ಕಟ್ಟಿಕೊಂಡವಳ ಜತೆ ಸಂಸಾರ ಮಾಡಬಹುದು ಎನ್ನುವುದು ಶಿವಪ್ಪನ ಲೆಕ್ಕಚಾರವಾಗಿತ್ತು.
PFI ban | Big Breaking: ಪಿಎಫ್ಐ ಹಾಗೂ ಅದರ ಸಹವರ್ತಿ ಸಂಘಟನೆಗಳು ದೇಶಾದ್ಯಂತ 5 ವರ್ಷ ನಿಷೇಧ
ಆದರೇ ಪೊಲೀಸರ ಕುಶಾಗ್ರಮತಿಯ ತನಿಖೆ ಶಿವಪ್ಪನ ಆಶೆಗೆ ತಣ್ಣೀರು ಎರಚಿದೆ. ಸೋಮವಾರ ಮಲ್ಪೆ ಠಾಣೆಗೆ ಕರೆ ತಂದ ಪೊಲೀಸರು ಮೊದಲ ಹೆಂಡತಿ ಜತೆ ಸಂಸಾರ ನಡೆಸುವಂತೆ ಬುದ್ದಿವಾದ ಹೇಳಿ ಕಳುಹಿಸಿಕೊಟ್ಟಿದ್ದಾರೆ
ಅಪರಾಧ
Bantwal-ಬಂಟ್ವಾಳ: 18 ತಿಂಗಳಿಂದ ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣದ ಆರೋಪಿ ಕೇರಳದಲ್ಲಿ ಬಂಧನ
ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸುಮಾರು 18 ತಿಂಗಳಿನಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕೇರಳದ ಮಲಪ್ಪುರಂ ನಿವಾಸಿ ರಂಶೀದ್ ನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ: ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸುಮಾರು 18 ತಿಂಗಳಿನಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕೇರಳದ ಮಲಪ್ಪುರಂ ನಿವಾಸಿ ರಂಶೀದ್ ನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ವಿಟ್ಲ ಪೊಲೀಸ್ ಠಾಣೆಯಲ್ಲಿ 2019ರಲ್ಲಿ ದಾಖಲಾಗಿದ್ದ ಅಪರಾಧ ಸಂಖ್ಯೆ 110/2019ರ ಕಳ್ಳತನ ಪ್ರಕರಣದಲ್ಲಿ ಆರೋಪಿ ರಂಶೀದ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಕಲಂ 457 ಮತ್ತು 380ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು ಒಂದೂವರೆ ವರ್ಷದಿಂದ ಆತ ತಲೆಮರೆಸಿಕೊಂಡಿದ್ದ ಎಂದು ತಿಳಿದುಬಂದಿದೆ.
ಖಚಿತ ಮಾಹಿತಿ ಮೇರೆಗೆ ವಿಟ್ಲ ಪೊಲೀಸ್ ಠಾಣೆಯ ಎಎಸ್ಐ ಜಯರಾಮ್ ಮತ್ತು ಸಿಪಿಸಿ 2462 ಶಿವಾನಂದ ಅವರು ಅಕ್ಟೋಬರ್ 13, 2026ರಂದು ಕೇರಳದ ನಿಲಂಬೂರ್ನ ವಂಡೂರಿನಲ್ಲಿ ಕಾರ್ಯಾಚರಣೆ ನಡೆಸಿ ರಾಮ್ಶೀದ್ನನ್ನು ಬಂಧಿಸಿದರು.
ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಅಪರಾಧ
Puttur-ಪುತ್ತೂರಿನಲ್ಲಿ ಅಕ್ರಮ ಲಾಟರಿ ಮಾರಾಟ: ಇಬ್ಬರು ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲು
ಪುತ್ತೂರಿನಲ್ಲಿ ನಿಷೇಧಿತ ಲಾಟರಿ ಮಾರಾಟ ಮಾಡುತ್ತಿದ್ದ ಎರಡು ಅಂಗಡಿಗಳಿಗೆ ಪುತ್ತೂರು ನಗರ ಪೊಲೀಸರು ತೆರಳಿ ಕಾರ್ಯಾಚರಣೆ ನಡೆಸಿದ್ದು, ಇಬ್ಬರು ಅಂಗಡಿ ಮಾಲೀಕರ ವಿರುದ್ಧ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಪುತ್ತೂರು: ನಗರದಲ್ಲಿ ನಿಷೇಧಿತ ಲಾಟರಿ ಮಾರಾಟ ಮಾಡುತ್ತಿದ್ದ ಎರಡು ಅಂಗಡಿಗಳಿಗೆ ಪುತ್ತೂರು ನಗರ ಪೊಲೀಸರು ತೆರಳಿ ಕಾರ್ಯಾಚರಣೆ ನಡೆಸಿದ್ದು, ಇಬ್ಬರು ಅಂಗಡಿ ಮಾಲೀಕರ ವಿರುದ್ಧ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
2026ರ ಅಕ್ಟೋಬರ್ 14ರಂದು ಸಂಜೆ ಪುತ್ತೂರು ಕಸಬ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಅಂಗಡಿಯೊಂದರಲ್ಲಿ ಕೇರಳ ರಾಜ್ಯದ ಲಾಟರಿಯನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಸಹಾಯಕ ಪೊಲೀಸ್ ಉಪನಿರೀಕ್ಷಕ ವಾಸು ನಾಯ್ಕ್ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ಅಂಗಡಿ ಮಾಲೀಕ, ಪುತ್ತೂರು ಕಸಬ ನಿವಾಸಿ ಶ್ರೀನಿವಾಸ ಪೈ (33) ಎಂಬವರು ಮಾರಾಟಕ್ಕಾಗಿ ಇಟ್ಟಿದ್ದ ಲಾಟರಿ ಟಿಕೆಟ್ಗಳನ್ನು ವಶಪಡಿಸಿಕೊಳ್ಳಲಾಯಿತು. ಕೇರಳ ರಾಜ್ಯದ ಲಾಟರಿ ಟಿಕೆಟ್ಗಳನ್ನು ತಂದು ಹೆಚ್ಚಿನ ಬೆಲೆಗೆ ಅಕ್ರಮವಾಗಿ ಮಾರಾಟ ಮಾಡುತ್ತಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 124/2026ರ ಅಡಿಯಲ್ಲಿ ಲಾಟರಿ ನಿಷೇಧ ಕಾಯ್ದೆ 1998ರ ಕಲಂ 7(iii)ರಂತೆ ಪ್ರಕರಣ ದಾಖಲಿಸಲಾಗಿದೆ.
ಇದೇ ದಿನ ಪುತ್ತೂರು ಕಸಬ ಗ್ರಾಮದ ಲಿನೆಟ್ ಜಂಕ್ಷನ್ ಬಳಿಯ ಪಾನ್ ಸ್ಟಾಲ್ ಒಂದರಲ್ಲಿ ನಿಷೇಧಿತ ಲಾಟರಿ ಮಾರಾಟ ಮಾಡುತ್ತಿರುವ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಸಹಾಯಕ ಪೊಲೀಸ್ ಉಪನಿರೀಕ್ಷಕ ಗಂಗಾಧರ ಎ.ಬಿ. ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ವೇಳೆ ಅಂಗಡಿ ಮಾಲೀಕ, ಪುತ್ತೂರು ಪಡ್ನೂರು ಗ್ರಾಮದ ನಿವಾಸಿ ಲಕ್ಷ್ಮಣ (42) ಎಂಬವರ ಬಳಿ ಮಾರಾಟಕ್ಕಾಗಿ ಇಟ್ಟಿದ್ದ ಲಾಟರಿ ಟಿಕೆಟ್ಗಳನ್ನು ವಶಪಡಿಸಿಕೊಳ್ಳಲಾಯಿತು. ಕೇರಳದಿಂದ ಲಾಟರಿ ಟಿಕೆಟ್ಗಳನ್ನು ತಂದು ಅಕ್ರಮವಾಗಿ ಮಾರಾಟ ಮಾಡುತ್ತಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 125/2026ರ ಅಡಿಯಲ್ಲಿ ಲಾಟರಿ ನಿಷೇಧ ಕಾಯ್ದೆ 1998ರ ಕಲಂ 7(iii)ರಂತೆ ಮತ್ತೊಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಅಪರಾಧ
B.R. Shetty-ಬ್ಯಾಂಕ್ ಆಫ್ ಬರೋಡಾ ವಿರುದ್ಧ ಯುಎಇ ಎಕ್ಸ್ಚೇಂಜ್ ಸಂಸ್ಥೆಗಳ ಸ್ಥಾಪಕ ಬಿ.ಆರ್. ಶೆಟ್ಟಿ ಕಾನೂನು ಸಮರ; ₹1.25 ಲಕ್ಷ ಕೋಟಿ ಪರಿಹಾರ ಬೇಡಿಕೆ
ಎನ್ಎಂಸಿ ಹೆಲ್ತ್ಕೇರ್ ಮತ್ತು ಯುಎಇ ಎಕ್ಸ್ಚೇಂಜ್ ಸಂಸ್ಥೆಗಳ ಸ್ಥಾಪಕ ಬಿ.ಆರ್. ಶೆಟ್ಟಿ ಅವರು ಬ್ಯಾಂಕ್ ಆಫ್ ಬರೋಡಾ ವಿರುದ್ಧ ಬಾಂಬೆ ಹೈಕೋರ್ಟ್ನಲ್ಲಿ ಬೃಹತ್ ಮೊತ್ತದ ಪರಿಹಾರ ಕೋರಿ ಮೊಕದ್ದಮೆ ಹೂಡಿದ್ದಾರೆ. ತಮ್ಮ ವ್ಯವಹಾರಗಳಿಗೆ ಸಂಬಂಧಿಸಿದ ವಂಚನೆಗೆ ಬ್ಯಾಂಕ್ ಸಹಕರಿಸಿದೆ ಎಂದು ಆರೋಪಿಸಿರುವ ಅವರು, ಒಟ್ಟು 15 ಬಿಲಿಯನ್ ಡಾಲರ್ (ಸುಮಾರು ₹1.25 ಲಕ್ಷ ಕೋಟಿ) ಪರಿಹಾರ ನೀಡುವಂತೆ ಕೋರಿದ್ದಾರೆ.
ದುಬೈ, ಅ.15: ಎನ್ಎಂಸಿ ಹೆಲ್ತ್ಕೇರ್ ಮತ್ತು ಯುಎಇ ಎಕ್ಸ್ಚೇಂಜ್ ಸಂಸ್ಥೆಗಳ ಸ್ಥಾಪಕ ಬಿ.ಆರ್. ಶೆಟ್ಟಿ ಅವರು ಬ್ಯಾಂಕ್ ಆಫ್ ಬರೋಡಾ ವಿರುದ್ಧ ಬಾಂಬೆ ಹೈಕೋರ್ಟ್ನಲ್ಲಿ ಬೃಹತ್ ಮೊತ್ತದ ಪರಿಹಾರ ಕೋರಿ ಮೊಕದ್ದಮೆ ಹೂಡಿದ್ದಾರೆ. ತಮ್ಮ ವ್ಯವಹಾರಗಳಿಗೆ ಸಂಬಂಧಿಸಿದ ವಂಚನೆಗೆ ಬ್ಯಾಂಕ್ ಸಹಕರಿಸಿದೆ ಎಂದು ಆರೋಪಿಸಿರುವ ಅವರು, ಒಟ್ಟು 15 ಬಿಲಿಯನ್ ಡಾಲರ್ (ಸುಮಾರು ₹1.25 ಲಕ್ಷ ಕೋಟಿ) ಪರಿಹಾರ ನೀಡುವಂತೆ ಕೋರಿದ್ದಾರೆ.
ಮಂಗಳವಾರ ಸಲ್ಲಿಸಿರುವ ಮೊಕದ್ದಮೆಯಲ್ಲಿ ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ಒಟ್ಟು 26 ಮಂದಿಯನ್ನು ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದೆ. ನಕಲಿ ಸಹಿಗಳು, ಅನಧಿಕೃತ ಹಣ ವರ್ಗಾವಣೆ ಹಾಗೂ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದ ಎಚ್ಚರಿಕೆಗಳಿದ್ದರೂ ಬ್ಯಾಂಕ್ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬುದು ಶೆಟ್ಟಿ ಅವರ ಪ್ರಮುಖ ಆರೋಪಗಳಾಗಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಆದರೆ, ಬ್ಯಾಂಕ್ ಆಫ್ ಬರೋಡಾ ಈ ಆರೋಪಗಳನ್ನು ನ್ಯಾಯಾಲಯದಲ್ಲಿ ಪರಿಶೀಲಿಸಬೇಕಿದೆ ಎಂದು ಹೇಳಿದ್ದು, ತನಗೆ ಈವರೆಗೆ ಮೊಕದ್ದಮೆಯ ನೋಟಿಸ್ ತಲುಪಿಲ್ಲ ಎಂದು ಸ್ಪಷ್ಟಪಡಿಸಿದೆ. ನೋಟಿಸ್ ಬಂದ ಬಳಿಕ ಕಾನೂನು ಪ್ರಕ್ರಿಯೆ ಎದುರಿಸುವುದಾಗಿ ತಿಳಿಸಿರುವ ಬ್ಯಾಂಕ್, ಶೆಟ್ಟಿ ವಿರುದ್ಧ ಸುಮಾರು ₹28,000 ಕೋಟಿ ಬಾಕಿ ಸಾಲ ವಸೂಲಾತಿ ಕ್ರಮಗಳನ್ನು ಮುಂದುವರಿಸುವುದಾಗಿ ಹೇಳಿದೆ.
ವೈಯಕ್ತಿಕ ಖಾತರಿಗಳ ದಾಖಲೆಗಳ ಬಗ್ಗೆ ಆಕ್ಷೇಪ
ವೈಯಕ್ತಿಕ ಖಾತರಿಗಳಿಗೆ ಸಂಬಂಧಿಸಿದ ದಾಖಲೆಗಳ ಸತ್ಯಾಸತ್ಯತೆಯೇ ಶೆಟ್ಟಿ ಅವರ ಮೊಕದ್ದಮೆಯ ಪ್ರಮುಖ ಅಂಶವಾಗಿದೆ. ತಾವು ಸಹಿ ಮಾಡದ ದಾಖಲೆಗಳನ್ನು ಆಧರಿಸಿ ಸಾಲ ಮರುಪಾವತಿಗೆ ತಮ್ಮನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಇದೇ ದಾಖಲೆಗಳ ಆಧಾರದಲ್ಲಿ ತಮ್ಮ ವೈಯಕ್ತಿಕ ಆಸ್ತಿಗಳ ವಿರುದ್ಧ ವಸೂಲಾತಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದೂ ದೂರಿದ್ದಾರೆ.
ಕೆಲವು ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ನಿರ್ದೇಶನಗಳು ಮತ್ತು ಹಣ ವರ್ಗಾವಣೆಗಳು ಅನಧಿಕೃತವಾಗಿದ್ದವು ಎಂಬುದು ಅವರ ಮತ್ತೊಂದು ಆರೋಪ. ಈ ಹಿನ್ನೆಲೆಯಲ್ಲಿ ವಹಿವಾಟಿನ ಸೂಚನೆಗಳು, ಖಾತೆ ತೆರೆಯುವ ದಾಖಲೆಗಳು, ಗ್ರಾಹಕರ ಪರಿಶೀಲನಾ ದಾಖಲೆಗಳು ಹಾಗೂ ಹಣ ವರ್ಗಾವಣೆಗಳನ್ನು ನಿರ್ವಹಿಸಿದ ಅಥವಾ ಪರಿಶೀಲಿಸಿದ ಅಧಿಕಾರಿಗಳ ವಿವರಗಳನ್ನು ಬಹಿರಂಗಪಡಿಸುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.
ಬ್ಯಾಂಕ್ ಆಫ್ ಬರೋಡಾದ 10 ಅಧಿಕಾರಿಗಳು, ಎನ್ಎಂಸಿಯ ಮಾಜಿ ಕಾರ್ಯನಿರ್ವಾಹಕರಾದ ಪ್ರಶಾಂತ್ ಮಂಗತ್ ಮತ್ತು ಪ್ರಮೋತ್ ಮಂಗತ್, ಅವರ ಸಂಬಂಧಿತ ವ್ಯಕ್ತಿಗಳು ಹಾಗೂ ಎರಡು ಭಾರತೀಯ ಕಂಪನಿಗಳನ್ನೂ ಪ್ರತಿವಾದಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.
100ಕ್ಕೂ ಹೆಚ್ಚು ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ ಆರೋಪ
2019ರವರೆಗೆ ಎನ್ಎಂಸಿ ಸಮೂಹದ ಪ್ರಮುಖ ಬ್ಯಾಂಕರ್ ಆಗಿದ್ದ ಬ್ಯಾಂಕ್ ಆಫ್ ಬರೋಡಾ, ಸಮೂಹದ ಕಂಪನಿಗಳು ಮತ್ತು ಸ್ವತಂತ್ರ ಪೂರೈಕೆದಾರರೆಂದು ಬಿಂಬಿಸಲಾದ ಸಂಸ್ಥೆಗಳ ಮೂಲಕ ಹಣವನ್ನು ಬೇರೆಡೆಗೆ ವರ್ಗಾಯಿಸಲು ನೆರವಾಗಿದೆ ಎಂದು ಶೆಟ್ಟಿ ಆರೋಪಿಸಿದ್ದಾರೆ.
ಬ್ಯಾಂಕ್ ಅಧಿಕಾರಿಗಳು ‘ರೌಂಡ್ ಟ್ರಿಪ್ಪಿಂಗ್’ ವಹಿವಾಟುಗಳಿಗೆ ಅವಕಾಶ ನೀಡಿದ್ದಾರೆ ಎಂಬುದೂ ಮೊಕದ್ದಮೆಯಲ್ಲಿನ ಆರೋಪ. ಈ ಪ್ರಕ್ರಿಯೆಯಲ್ಲಿ ಹಣವು ಹಲವು ಸಂಸ್ಥೆಗಳ ಮೂಲಕ ಚಲಿಸಿ ಮತ್ತೆ ಮೂಲಕ್ಕೆ ಮರಳುತ್ತದೆ. ಇದರಿಂದ ಹಣದ ನಿಜವಾದ ಉದ್ದೇಶ ಅಥವಾ ಮೂಲವನ್ನು ಮರೆಮಾಚುವ ಸಾಧ್ಯತೆ ಇರುತ್ತದೆ.
ಬ್ಯಾಂಕ್ನ ವ್ಯವಸ್ಥೆಗಳು ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ 100ಕ್ಕೂ ಹೆಚ್ಚು ಎಚ್ಚರಿಕೆಗಳನ್ನು ದಾಖಲಿಸಿದ್ದರೂ ಅವುಗಳನ್ನು ಬಳಿಕ ಮುಚ್ಚಲಾಗಿದೆ ಎಂದು ಶೆಟ್ಟಿ ಆರೋಪಿಸಿದ್ದಾರೆ. ಸಾಕಷ್ಟು ಭದ್ರತೆ ಇಲ್ಲದೆ ಸಾಲ ನೀಡುವುದನ್ನು ಮುಂದುವರಿಸಿದ್ದು, ಸಾಲ ಮತ್ತು ವಹಿವಾಟುಗಳ ಕುರಿತಾದ ಕಳವಳಗಳನ್ನು ಲೆಕ್ಕಪರಿಶೋಧಕರ ಗಮನಕ್ಕೆ ತಂದಿಲ್ಲ ಎಂದೂ ಬ್ಯಾಂಕ್ ವಿರುದ್ಧ ದೂರಿದ್ದಾರೆ. ಆದರೆ, ಇಂತಹ ಎಚ್ಚರಿಕೆಗಳು ದಾಖಲಾಗಿರುವುದರಿಂದ ಮಾತ್ರ ಅಕ್ರಮ ಹಣ ವರ್ಗಾವಣೆ ನಡೆದಿರುವುದು ಸಾಬೀತಾಗುವುದಿಲ್ಲ.
ತಲಾ 5 ಬಿಲಿಯನ್ ಡಾಲರ್ ಪರಿಹಾರಕ್ಕೆ ಮನವಿ
ಶೆಟ್ಟಿ ಅವರು ನೇರ ಹಾನಿಗೆ 5 ಬಿಲಿಯನ್ ಡಾಲರ್, ವ್ಯವಹಾರ ಮತ್ತು ಹೂಡಿಕೆ ಅವಕಾಶಗಳ ನಷ್ಟ ಸೇರಿದಂತೆ ಪರೋಕ್ಷ ಹಾನಿಗೆ 5 ಬಿಲಿಯನ್ ಡಾಲರ್ ಹಾಗೂ ತಮ್ಮ ಪ್ರತಿಷ್ಠೆಗೆ ಉಂಟಾದ ಹಾನಿಗಾಗಿ 5 ಬಿಲಿಯನ್ ಡಾಲರ್ ಪರಿಹಾರ ಕೋರಿದ್ದಾರೆ. ಒಟ್ಟು 15 ಬಿಲಿಯನ್ ಡಾಲರ್ ಪರಿಹಾರದ ಜತೆಗೆ, ಪಾವತಿಯಾಗುವವರೆಗೆ ವಾರ್ಷಿಕ ಶೇ. 18ರಷ್ಟು ಬಡ್ಡಿಯನ್ನೂ ನೀಡುವಂತೆ ಮನವಿ ಮಾಡಿದ್ದಾರೆ.
ಬ್ಯಾಂಕಿಂಗ್ ದಾಖಲೆಗಳು ಮತ್ತು ವಿದ್ಯುನ್ಮಾನ ಪುರಾವೆಗಳನ್ನು ಸಂರಕ್ಷಿಸುವುದು, ವಿವಾದಿತ ವಹಿವಾಟುಗಳಿಗೆ ಸಂಬಂಧಿಸಿದ ಆಸ್ತಿಗಳ ವಿವರ ಬಹಿರಂಗಪಡಿಸುವುದು ಹಾಗೂ ಕೆಲವು ಪ್ರತಿವಾದಿಗಳ ವಿರುದ್ದ ಮಧ್ಯಂತರ ನಿರ್ಬಂಧಗಳನ್ನು ವಿಧಿಸುವಂತೆಯೂ ಕೋರಿದ್ದಾರೆ. ವಿವಾದಿತ ಹಣದ ಒಂದು ಭಾಗವನ್ನು ಅವಿಟಿಸ್ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ಸ್ ಮತ್ತು ಸ್ಮಾರ್ಟ್ ಬಿಲ್ಡಿಂಗ್ ಸೊಲ್ಯೂಷನ್ಸ್ನಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಸಾಲ ವಸೂಲಾತಿ ಕ್ರಮ ಮುಂದುವರಿಸಿದ ಬ್ಯಾಂಕ್
ಭಾರತ ಮತ್ತು ಯುಎಇಯಲ್ಲಿ ಸಾಲ ವಸೂಲಾತಿ ಹಾಗೂ ಜಾರಿ ಪ್ರಕ್ರಿಯೆಗಳ ಭಾಗವಾಗಿ ಶೆಟ್ಟಿ ವಿರುದ್ಧ ಹಲವು ನ್ಯಾಯಾಲಯದ ಆದೇಶಗಳನ್ನು ಪಡೆದಿರುವುದಾಗಿ ಬ್ಯಾಂಕ್ ಆಫ್ ಬರೋಡಾ ತಿಳಿಸಿದೆ. 2021ರಲ್ಲಿ ಕರ್ನಾಟಕ ಹೈಕೋರ್ಟ್ ಶೆಟ್ಟಿ ಅವರು ತಮ್ಮ ಆಸ್ತಿಗಳನ್ನು ನಿರ್ವಹಿಸುವುದರಿಂದ ಅಥವಾ ವಿಲೇವಾರಿ ಮಾಡುವುದರಿಂದ ನಿರ್ಬಂಧಿಸಿತ್ತು ಎಂದೂ ಬ್ಯಾಂಕ್ ಹೇಳಿದೆ.
ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್ (NCLT) ವಿಚಾರಣೆಗಳಲ್ಲಿ ತಾವು ದಿವಾಳಿಯಾಗಿದ್ದು, ಬ್ಯಾಂಕ್ ಗೆ ಬಾಕಿ ಹಣ ಪಾವತಿಸಲು ಸಾಧ್ಯವಿಲ್ಲ ಎಂದು ಶೆಟ್ಟಿ ಪ್ರತಿಪಾದಿಸಿದ್ದರು ಎಂದು ಬ್ಯಾಂಕ್ ಉಲ್ಲೇಖಿಸಿದೆ. ಇದೇ ರೀತಿಯ ಆರೋಪಗಳನ್ನು ಒಳಗೊಂಡಿದ್ದ ನ್ಯೂಯಾರ್ಕ್ ನ ಮೊಕದ್ದಮೆಯನ್ನು ಜುಲೈ 2024ರಲ್ಲಿ ವಜಾಗೊಳಿಸಲಾಗಿದೆ ಎಂದೂ ತಿಳಿಸಿದೆ.
ಎನ್ಎಂಸಿ ಕುಸಿತದ ಬಳಿಕ ಮತ್ತೊಂದು ಕಾನೂನು ಸಮರ
ಗಲ್ಫ್ ಪ್ರದೇಶದ ಅತಿದೊಡ್ಡ ಖಾಸಗಿ ಆರೋಗ್ಯ ಸೇವಾ ಸಂಸ್ಥೆಗಳಲ್ಲಿ ಒಂದಾಗಿದ್ದ ಎನ್ಎಂಸಿ ಹೆಲ್ತ್ಕೇರ್, 2020ರಲ್ಲಿ 6.6 ಬಿಲಿಯನ್ ಡಾಲರ್ ಸಾಲ ಬಹಿರಂಗವಾದ ಬಳಿಕ ಆಡಳಿತ ಪ್ರಕ್ರಿಯೆಗೆ ಒಳಪಟ್ಟಿತ್ತು. ಈ ಹಿಂದೆ ಸಾಲದ ಮೊತ್ತವನ್ನು 2.1 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿತ್ತು ಎಂದು ರಾಯಿಟರ್ಸ್ ವರದಿ ಮಾಡಿದೆ.
ಎನ್ಎಂಸಿ ಸಮೂಹದ ಕಂಪನಿಗಳು ಮತ್ತು ಅವುಗಳ ಜಂಟಿ ನಿರ್ವಾಹಕರು ಹೂಡಿದ್ದ ಮೊಕದ್ದಮೆಗಳನ್ನು ಇತ್ಯರ್ಥಪಡಿಸಲು 600 ಮಿಲಿಯನ್ ಡಾಲರ್ ಪಾವತಿಸಲು ಬ್ಯಾಂಕ್ ಆಫ್ ಬರೋಡಾ ಒಪ್ಪಿಕೊಂಡಿತ್ತು. ಈ ಇತ್ಯರ್ಥ ಒಪ್ಪಂದವು 2026ರ ಜುಲೈ 1ರಂದು ಮಾಡಿಕೊಳ್ಳಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.
ಆ ಒಪ್ಪಂದದಲ್ಲಿ ಯಾವುದೇ ಹೊಣೆಗಾರಿಕೆಯನ್ನು ಒಪ್ಪಿಕೊಂಡಿಲ್ಲ ಎಂದು ಶೆಟ್ಟಿ ಅವರ ಅರ್ಜಿಯಲ್ಲಿ ಹೇಳಲಾಗಿದೆ. ತಾವು ಆ ಒಪ್ಪಂದದ ಭಾಗವಾಗಿರಲಿಲ್ಲ ಮತ್ತು ಅದು ತಮ್ಮ ಪ್ರತ್ಯೇಕ ಹಕ್ಕುಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅವರು ವಾದಿಸಿದ್ದಾರೆ.
ಇತ್ಯರ್ಥದ ಬಳಿಕ ಅಬುಧಾಬಿ ಗ್ಲೋಬಲ್ ಮಾರ್ಕೆಟ್ ನಲ್ಲಿ ತಮ್ಮ ವಿರುದ್ಧದ ವಿಚಾರಣೆಗಳನ್ನು ಕೈಬಿಡಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ. ವಂಚನೆ ಮತ್ತು ಅಕ್ರಮ ವಹಿವಾಟುಗಳಿಗೆ ಸಂಬಂಧಿಸಿದಂತೆ ಶೆಟ್ಟಿ ಹಾಗೂ ಎನ್ಎಂಸಿಯ ಮಾಜಿ ಕಾರ್ಯನಿರ್ವಾಹಕರ ವಿರುದ್ಧದ ಸಂಬಂಧಿತ ವಿಚಾರಣೆಗಳಲ್ಲಿ ತೀರ್ಪು ಕಾಯ್ದಿರಿಸಲಾಗಿದೆ ಎಂದೂ ಹೇಳಿದೆ.
-
ಸ್ಥಳೀಯ13 hours agoNavoor clinic-ನಾವೂರು ಕ್ಲಿನಿಕ್ಗೆ ಬೆಂಕಿ ಪ್ರಕರಣ: ರವಿ ಪೂಜಾರಿ ಬಂಧನ, ಇಬ್ಬರು ಶಂಕಿತರ ವಿಚಾರಣೆ
-
ರಾಜಕೀಯ7 hours agoH.D. Kumaraswamy-ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ : ಬಾಂಬ್ ಸಿಡಿಸಿದ ಎಚ್.ಡಿ. ಕುಮಾರಸ್ವಾಮಿ – ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಷಡ್ಯಂತ್ರದಲ್ಲಿ ಕೃಪಾ ಆಳ್ವ..! ಗಂಭೀರ ಆರೋಪ
-
ಅಪರಾಧ8 hours agoPuttur-ಪುತ್ತೂರಿನಲ್ಲಿ ಅಕ್ರಮ ಲಾಟರಿ ಮಾರಾಟ: ಇಬ್ಬರು ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲು
-
ಅಪರಾಧ12 hours agoB.R. Shetty-ಬ್ಯಾಂಕ್ ಆಫ್ ಬರೋಡಾ ವಿರುದ್ಧ ಯುಎಇ ಎಕ್ಸ್ಚೇಂಜ್ ಸಂಸ್ಥೆಗಳ ಸ್ಥಾಪಕ ಬಿ.ಆರ್. ಶೆಟ್ಟಿ ಕಾನೂನು ಸಮರ; ₹1.25 ಲಕ್ಷ ಕೋಟಿ ಪರಿಹಾರ ಬೇಡಿಕೆ
-
ಮಂಗಳೂರು8 hours agoSudhir Kumar Reddy-ಭಾರತ ಮಾತೆಯ ಹೆಸರಿನಲ್ಲಿ ಕಾನೂನು ಉಲ್ಲಂಘನೆ ಸಲ್ಲದು – ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಖಡಕ್ ಸ್ಪಷ್ಟನೆ..!
-
ಬಿಗ್ ನ್ಯೂಸ್13 hours agoRenukashwami murder case-ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು: ಮಾಫಿ ಸಾಕ್ಷಿ ಅರ್ಜಿ ವಾಪಸ್ ಪಡೆದ ಎ10 ವಿನಯ್
-
ಅಂತರ ರಾಜ್ಯ13 hours agoMurder case-ಮೀರತ್ ಬ್ಲೂ ಡ್ರಮ್ ಕೊಲೆ ಪ್ರಕರಣ: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ಗೆ ಗಲ್ಲು ಶಿಕ್ಷೆ..!
-
ರಾಜಕೀಯ11 hours agoAmal Ramachandra-ಒಳ್ಳೆಯ ರೀತಿಯಲ್ಲಿ ಬೆಳೆವಿಮೆ ಬಂದರೆ ಮೋದಿಯಿಂದಾಗಿ ಎಂದು ಬೊಬ್ಬೆ ಹಾಕುತ್ತಿದ್ದ ಬಿಜೆಪಿ ಈಗ ಕಾಂಗ್ರೆಸ್ ನ್ನು ದೂರುತ್ತಿದೆ..! ಟರ್ಮ್ ಶೀಟ್ ಬದಲಾವಣೆ ಮಾಡಿದ್ದು ಬಿಜೆಪಿ ಈ ಬಗ್ಗೆ ದಾಖಲೆಯಿದೆ; ಅಶೋಕ್ ರೈ ಹುಟ್ಟಿಸಿದ ಲಿಸ್ಟ್ ಕೊಡ್ತೇನೆ 8 ವರ್ಷಗಳಲ್ಲಿ ಬೆಳ್ತಂಗಡಿಯಲ್ಲಿ ಪೂಂಜಾ ಹುಟ್ಟಿಸಿದ್ದೇನೂ..? ಪುಡಾ ಅಧ್ಯಕ್ಷ ಅಮಳ ರಾಮಚಂದ್ರ


















