Connect with us

ಅಪರಾಧ

Sex Racket exposed : ತಂದೆ ಮಗ ಮತ್ತು ಸೊಸೆ ಸೇರಿ ನಡೆಸುತ್ತಿದ್ದರು ದೇಹ ವ್ಯಾಪಾರ – ಮುಂಬೈ, ಪುಣೆಯಿಂದ ಕರೆಸಿ Online ಮೂಲಕ ದಂಧೆ

Published

on



Ad Widget

Ad Widget

Ad Widget

Ad Widget

(ಜಬಲ್ಪುರ : MP Jabalpur ) ಮಧ್ಯಪ್ರದೇಶದ ಜಬಲ್ಪುರ ಸಮೀಪದ  ಜಸುಜಾ ನಗರದ ಬಳಿಯ ವೇಶ್ಯಾಗೃಹಕ್ಕೆ ಸ್ಥಳೀಯ ಪೊಲೀಸರ ತಂಡ ಅ 16 ರಂದು  ದಾಳಿ ನಡೆಸಿದ್ದು  10 ಜನರನ್ನು ಬಂಧಿಸಿದ್ದಾರೆ. ಆದರೇ ಈ ದಾಳಿಯ ವೇಳೆ ಆಘಾತಕಾರಿ ವಿಚಾರವೊಂದು ಹೊರ ಬಿದ್ದಿದೆ. ತಂದೆ, ಮಗ ಮತ್ತು ಸೊಸೆ ಸೇರಿ ಈ ವೇಶ್ಯಾವಾಟಿಕೆ(Prostitution) ವ್ಯವಹಾರ ನಡೆಸುತ್ತಿರುವುದು ಪೊಲೀಸ್‌ ತನಿಖೆಯಿಂದ ಬಯಲಾಗಿದೆ.

Ad Widget

Ad Widget

Ad Widget

Ad Widget

ಈ ವೇಶ್ಯಾಗೃಹಕ್ಕೆ (brothel) ಮುಂಬೈ ಮತ್ತು ನಾಗ್ಪುರದಿಂದ ಯುವತಿಯರನ್ನು ಕರೆಸಲಾಗುತಿತ್ತು. ಸೊಸೆ ಈ ದಂಧೆಯ ಕಿಂಗ್‌ ಪಿನ್‌ ಆಗಿದ್ದಳು. ಆಕೆ ಆನ್‌ಲೈನ್ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದಳು. ಅತ್ಯಂತ ಗುಪ್ತವಾಗಿ ಯಾರಿಗೂ ಗೊತ್ತಾಗದಂತೆ ನಡೆಯುತ್ತಿದ ಈ ಚಟುವಟಿಕೆ ಸ್ಥಳೀಯ ಸಂಜೀವಿನಿ ಠಾಣೆ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿತು. ಹೀಗಾಗಿ ಪೊಲೀಸ್‌ ಇನ್ಸ್​ಪೆಕ್ಟರ್​ ಗ್ರಾಹಕನ ಸೋಗಿನಲ್ಲಿ ತೆರಳಿ ಈ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಮೊದಲಿಗೆ ಆ  ಇನ್ಸ್‌ ಪೆಕ್ಟರ್‌ ಅನ್‌ ಲೈನ್‌ ಮೂಲಕ ಸೊಸೆಯನ್ನು ಸಂಪರ್ಕಿಸಿದ್ದಾರೆ. ವ್ಯವಹಾರ ಕುದುರಿದ ಬಳಿಕ ಆ ಮಹಿಳೆ ವೇಶ್ಯಾಗೃಹದ ವಿಳಾಸ ನೀಡಿದ್ದಾಳೆ.  ಅದರಂತೆ ಅವರು ವೇಶ್ಯಾಗೃಹಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಆರೋಪಿಗಳಾದ , ಕೃಷ್ಣ ಕುಮಾರ್ ದುಬೆ (ತಂದೆ) , ಸುನಿಲ್ ಕುಮಾರ್ ದುಬೆ ( ಮಗ) ಹಾಗೂ ಸೊಸೆ ಮತ್ತು ಇತರ ಮೂವರು ಹಾಸಿಗೆಯಲ್ಲಿ ಕುಳಿತಿದ್ದರು. ಅಲ್ಲಿ ಯುವತಿಯರನ್ನು ಪ್ರದರ್ಶಿಸಿದ ಪಿಂಪ್‌ ಗಳು ಪ್ರತಿ ಯುವತಿಯ  ರೇಟ್‌ ತಿಳಿಸಿದ್ದಾರೆ. ಈ ವೇಳೆ ಓರ್ವ ಯುವತಿಯನ್ನು ಪೊಲೀಸ್‌ ಅಧಿಕಾರಿ ಸೆಲೆಕ್ಟ್‌ ಮಾಡಿದ್ದು ರೂ 2000 ರೂಪಾಯಿ ನೀಡುವಂತೆ ಆರೋಪಿಗಳು ತಿಳಿಸಿದ್ದಾರೆ. ಅದರಂತೆ ಪೊಲೀಸ್‌ ಇನ್ಸ್‌ ಪೆಕ್ಟರ್‌ ಮೊದಲೇ ಸಹಿ ಹಾಕಿ ತಂದಿದ್ದ 2000 ರೂಪಾಯಿಯನ್ನು  ಪಾವತಿಸಿದ್ದಾರೆ.

Ad Widget

Ad Widget <> Ad Widget

ತೃಪ್ತಿ ಪಡಿಸದ ಪತ್ನಿಯನ್ನು ಕರಾವಳಿಗೆ ಟೂರು ಕರೆದೊಯ್ದು ಹತ್ಯೆ – ಚಾಣಕ್ಷ್ಯ ಪ್ಲ್ಯಾನ್ ಮಾಡಿದರೂ ಸಿಕ್ಕಿ ಹಾಕಿಕೊಂಡದ್ದು ಹೇಗೆ ? ಕೊಂದದ್ದು ಎಲ್ಲಿ?



Ad Widget

ಬಳಿಕ ಯುವತಿಯ ಜತೆ ಅವರು ಕೋಣೆಗೆ ಹೋಗಿದ್ದು,  ಅಲ್ಲಿ ಇನ್ನಿಬ್ಬರು ಯುವಕರು ಹಾಗೂ ಯುವತಿಯರು ಆಕ್ಷೇಪಾರ್ಹ ಭಂಗಿಯಲ್ಲಿ ಮಂಚದಲ್ಲಿದ್ದರು . ಕೂಡಲೇ ಪೊಲೀಸ್‌ ಅಧಿಕಾರಿ ತಮ್ಮ ತಂಡಕ್ಕೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹೊರಗಡೆ ಅಡಗಿ ಕೂತಿದ್ದ ಪೊಲೀಸರ ತಂಡ ಮಿಂಚಿನ ದಾಳಿ ನಡೆಸಿದೆ.  ಆಕ್ಷೇಪಾರ್ಹ ಭಂಗಿಯಲ್ಲಿದ್ದ  10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ

Ad Widget

Ad Widget

 ಅಲ್ಲಿದ್ದ ಇಬ್ಬರು ಯುವತಿಯರು ಮುಂಬೈ ಮತ್ತು ನಾಗ್ಪುರದ ನಿವಾಸಿಗಳಾಗಿದ್ದರು.  ಅವರನ್ನು ದೇಹ ವ್ಯಾಪಾರದ  ಉದ್ದೇಶದಿಂದ  ಮಹಾರಾಷ್ಟ್ರದಿಂದ ಜಬಲ್ಪುರಕ್ಕೆ ಕರೆಸಲಾಗಿತು. ಶೋಧ ನಡೆಸಿದಾಗ, ಆರೋಪಿಗಳ  ಬಳಿ 2,000 ರೂ.ಗಳಿರುವುದು ಪತ್ತೆಯಾಗಿದೆ, ಅದರಲ್ಲಿ ತಲಾ 500 ರೂ.ಗಳ ನಾಲ್ಕು ಸಹಿ ಮಾಡಿದ ನೋಟುಗಳಿದ್ದವು. ಸೊಸೆಯ ಬಳಿ ಮೊಬೈಲ್ ಫೋನ್ ಪತ್ತೆಯಾಗಿದೆ. ವಿಚಾರಣೆ ವೇಳೆ , “ಅನೇಕ ಗ್ರಾಹಕರು ಆನ್ಲೈನ್ನಲ್ಲಿ ಹಣ ಪಾವತಿಸುತ್ತಿದ್ದರು” ಎಂದು ಸೊಸೆ  ಬಾಯ್ಬಿಟ್ಟಿದ್ದಾಳೆ.

Whatsapp: ಡಿಲಿಟ್ ಆದ ಮೇಸಜ್ ರಿಕವರಿ ಮಾಡಲು ಬಿಡುಗಡೆಗೊಳಿಸುತ್ತಿದೆ ಹೊಸ ಫೀಚರ್ – ಇಲ್ಲಿದೆ ಅದರ ಮಾಹಿತಿ

ಸೊಸೆಯ ಮೊಬೈಲ್ ಫೋನ್​ ಜಪ್ತಿ ಮಾಡಲಾಗಿದೆ. ಆನ್​ಲೈನ್ ಪಾವತಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಎಲ್ಲ ಆರೋಪಿಗಳ ವಿರುದ್ಧ ಅನೈತಿಕ ವೇಶ್ಯಾವಾಟಿಕೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಇದೀಗ ಆನ್​ಲೈನ್​ ಮೂಲಕ ಹಣವನ್ನು ಪಾವತಿ ಮಾಡಿದವರು ಪೇಚಿಗೆ ಸಿಲುಕಿದ್ದಾರೆ.

Ad Widget
Click to comment

Leave a Reply

ಸ್ಥಳೀಯ

Yatnal-ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ನಕಲಿ ಮರಣ ಪ್ರಮಾಣಪತ್ರ ಲಗತ್ತಿಸಿದ ಆರೋಪ : ಯತ್ನಾಳ್ ವಿರುದ್ಧ ಎಫ್‌ಐಆರ್

Published

on



Ad Widget

Ad Widget

Ad Widget

Ad Widget

ಜೀವಂತವಾಗಿರುವ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ನಕಲಿ ಮರಣ ಪ್ರಮಾಣಪತ್ರ ಲಗತ್ತಿಸಿ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಅರ್ಜಿ ಸಲ್ಲಿಸಿದ ಆರೋಪದ ಮೇಲೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದೇ ರೀತಿಯ ಆರೋಪದಡಿ ಬಿಜೆಪಿ ಪಾಲಿಕೆ ಸದಸ್ಯ ಗಿರೀಶ ಪಾಟೀಲ ಹಾಗೂ ತಿಕೋಟಾದ ಆರು ಮಂದಿ ವಿರುದ್ಧವೂ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

Ad Widget

Ad Widget

Ad Widget

Ad Widget

ವಿಜಯಪುರ: ಜೀವಂತವಾಗಿರುವ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ನಕಲಿ ಮರಣ ಪ್ರಮಾಣಪತ್ರ ಲಗತ್ತಿಸಿ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಅರ್ಜಿ ಸಲ್ಲಿಸಿದ ಆರೋಪದ ಮೇಲೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದೇ ರೀತಿಯ ಆರೋಪದಡಿ ಬಿಜೆಪಿ ಪಾಲಿಕೆ ಸದಸ್ಯ ಗಿರೀಶ ಪಾಟೀಲ ಹಾಗೂ ತಿಕೋಟಾದ ಆರು ಮಂದಿ ವಿರುದ್ಧವೂ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

Ad Widget

Ad Widget

Ad Widget alt="Ad Widget"/>

Ad Widget

ಯತ್ನಾಳ್ ವಿರುದ್ಧ ದೂರು
ವಿಜಯಪುರ ನಗರದ ಬಾಗವಾನ ಕಾಲೊನಿ ನಿವಾಸಿ ಅಬ್ದುಲ ರಜಾಕ ಬಾಗವಾನ್ (50) ಅವರು ಗುರುವಾರ ಜಲನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Ad Widget

Ad Widget <> Ad Widget

ತಾನು ಜೀವಂತವಾಗಿದ್ದು, ತರಕಾರಿ ವ್ಯಾಪಾರ ಮಾಡಿಕೊಂಡಿದ್ದೇನೆ. ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಮತದಾರನಾಗಿದ್ದು, ಮತದಾರರ ಗುರುತಿನ ಚೀಟಿಯನ್ನೂ ಹೊಂದಿದ್ದೇನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.



Ad Widget

ಆದರೆ, ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ತಾನು ಮೃತಪಟ್ಟಿರುವುದಾಗಿ ನಕಲಿ ಮರಣ ಪ್ರಮಾಣಪತ್ರವನ್ನು ಲಗತ್ತಿಸಿ, ತನ್ನ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವಂತೆ ಸೆಪ್ಟೆಂಬರ್ 3ರಂದು ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರಿಗೆ ಎಸ್‌ಐಆರ್ ಫಾರ್ಮ್-7 ಸಲ್ಲಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಮೂಲಕ ವಂಚನೆ ಎಸಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

Ad Widget

Ad Widget

ಪಾಲಿಕೆ ಸದಸ್ಯ ಗಿರೀಶ ಪಾಟೀಲ ವಿರುದ್ಧವೂ ಪ್ರಕರಣ
ವಿಜಯಪುರ ನಗರದ ನಿಸಾರಮಡ್ಡಿ ನಿವಾಸಿ ಜಾವೀದ್ ಇಂಡಿಕರ್ (32) ಅವರು ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ಹಾಗೂ ಶಾಸಕ ಯತ್ನಾಳ್ ಅವರ ಬೆಂಬಲಿಗ ಗಿರೀಶ ಪಾಟೀಲ ವಿರುದ್ಧ ಗಾಂಧಿಚೌಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ತಾನು ನಿಸಾರಮಡ್ಡಿಯಲ್ಲಿ ವಾಸವಿಲ್ಲ ಎಂಬುದಾಗಿ ಸುಳ್ಳು ದಾಖಲೆ ಸೃಷ್ಟಿಸಿ, ತನ್ನ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸುವಂತೆ ಗಿರೀಶ ಪಾಟೀಲ ಅವರು ಎಸ್‌ಐಆರ್ ಫಾರ್ಮ್-7 ಸಲ್ಲಿಸಿದ್ದಾರೆ ಎಂದು ಜಾವೀದ್ ಆರೋಪಿಸಿದ್ದಾರೆ. ಈ ಸಂಬಂಧ ಅಕ್ಟೋಬರ್ 6ರಂದು ದೂರು ದಾಖಲಿಸಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ತಿಕೋಟಾದ ಆರು ಮಂದಿ ವಿರುದ್ಧ ಎಫ್‌ಐಆರ್
ತಿಕೋಟಾ ಪಟ್ಟಣದ ನಿವಾಸಿ ಹಾಜಿಲಾಲ ಕೊಟ್ಟಲಗಿ (68) ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಎಸ್‌ಐಆರ್ ಫಾರ್ಮ್-7 ಸಲ್ಲಿಸಿದ ಆರೋಪದ ಮೇಲೆ ಆರು ಮಂದಿ ವಿರುದ್ಧ ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭೀಮು ಗೊಳಸಂಗಿ, ವಿನಾಯಕ ಮಮದಾಪುರ, ಮಹೇಶ ಮುಕರ್ತಿಹಾಳ, ಆನಂದ ಅಂಬಿಗೇರ, ಹುಚ್ಚಪ್ಪ ಗಾಣಿಗೇರ ಹಾಗೂ ಗೋವಿಂದ ಮುದನೂರ ವಿರುದ್ಧ ಹಾಜಿಲಾಲ ಕೊಟ್ಟಲಗಿ ಅಕ್ಟೋಬರ್ 6ರಂದು ದೂರು ನೀಡಿದ್ದಾರೆ.

ತಾನು ಮುಸ್ಲಿಂ ಎಂಬ ಕಾರಣಕ್ಕೆ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವ ಉದ್ದೇಶದಿಂದ ನಕಲಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

Ad Widget
Continue Reading

ಅಪರಾಧ

Udupi-ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ಬೆದರಿಕೆ ಕರೆ : ಉಡುಪಿ, ಮೂಲ್ಕಿಯಲ್ಲಿ 4 ಪ್ರಕರಣ ದಾಖಲು

Published

on



Ad Widget

Ad Widget

Ad Widget

Ad Widget

ಮುದರಂಗಡಿಯ ಉದ್ಯಮಿ ಡೇವಿಡ್ ಡಿಸೋಜಾ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ಉದ್ಯಮಿಗಳು ಹಾಗೂ ಪ್ರತಿಷ್ಠಿತ ವ್ಯಕ್ತಿಗಳಿಗೆ ಬೆದರಿಕೆ ಕರೆಗಳು ಬರುತ್ತಿರುವ ಪ್ರಕರಣಗಳು ವರದಿಯಾಗಿವೆ. ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಮೂರು ಹಾಗೂ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಒಂದು ಸೇರಿದಂತೆ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Ad Widget

Ad Widget

Ad Widget

Ad Widget

ಉಡುಪಿ, ಅ.8: ಮುದರಂಗಡಿಯ ಉದ್ಯಮಿ ಡೇವಿಡ್ ಡಿಸೋಜಾ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ಉದ್ಯಮಿಗಳು ಹಾಗೂ ಪ್ರತಿಷ್ಠಿತ ವ್ಯಕ್ತಿಗಳಿಗೆ ಬೆದರಿಕೆ ಕರೆಗಳು ಬರುತ್ತಿರುವ ಪ್ರಕರಣಗಳು ವರದಿಯಾಗಿವೆ. ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಮೂರು ಹಾಗೂ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಒಂದು ಸೇರಿದಂತೆ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಕೊಲೆಯಾದ ಉದ್ಯಮಿ ಡೇವಿಡ್ ಡಿಸೋಜಾ ಅವರ ಪುತ್ರನಿಗೆ ವಾಟ್ಸಾಪ್ ಕರೆ ಮಾಡಿರುವ ಅಪರಿಚಿತ ವ್ಯಕ್ತಿಯೊಬ್ಬ, ₹5 ಕೋಟಿ ನೀಡುವಂತೆ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

Ad Widget

Ad Widget <> Ad Widget

“ನಿನ್ನ ತಂದೆಯಿಂದ ನನ್ನ ಸಹೋದರನಿಗೆ ಸಾಕಷ್ಟು ನಷ್ಟವಾಗಿತ್ತು. ಆ ಕಾರಣಕ್ಕೆ ನಾನೇ ಕೊಲೆ ಮಾಡಿಸಿದ್ದೆ. ನಮಗಾಗಿರುವ ನಷ್ಟವನ್ನು ತುಂಬಿಕೊಡಲು ₹5 ಕೋಟಿ ನೀಡಬೇಕು” ಎಂದು ಕರೆ ಮಾಡಿದ ವ್ಯಕ್ತಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Ad Widget

ಇನ್ನೊಬ್ಬ ಉದ್ಯಮಿ ಹಾಗೂ ಖಾಸಗಿ ಸಂಸ್ಥೆಯ ವ್ಯಕ್ತಿಗೂ ಹೇಮಂತ್ ಪೂಜಾರಿ ಹೆಸರಿನಲ್ಲಿ ವಾಟ್ಸಾಪ್ ಕರೆಗಳು ಬಂದಿದ್ದು, ಹಣಕ್ಕೆ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ. ಈ ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲೂ ಪ್ರಕರಣಗಳು ದಾಖಲಾಗಿವೆ.

Ad Widget

Ad Widget

25 ವರ್ಷಗಳಿಂದ ಪೊಲೀಸರಿಗೆ ಬೇಕಾಗಿರುವ ಆರೋಪಿ
ಮುದರಂಗಡಿಯ ಉದ್ಯಮಿ ಡೇವಿಡ್ ಡಿಸೋಜಾ ಕೊಲೆ ಪ್ರಕರಣದಲ್ಲಿ ಭೂಗತ ಪಾತಕಿ ಹೇಮಂತ್ ಪೂಜಾರಿ ಪ್ರಮುಖ ಆರೋಪಿಯಾಗಿದ್ದಾನೆ. ಆತನ ಸಹೋದರ ಹಾಗೂ ಇತರ ಸಹಚರರ ನೆರವಿನಿಂದ ಹೊರರಾಜ್ಯದ ಶೂಟರ್‌ಗಳನ್ನು ಕರೆಸಿ ಕೊಲೆ ಮಾಡಿಸಲಾಗಿದೆ ಎಂಬ ಆರೋಪ ಪ್ರಕರಣದಲ್ಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಮಂತ್ ಪೂಜಾರಿಯನ್ನು ಹೊರತುಪಡಿಸಿ ಉಳಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

ಕಳೆದ 25 ವರ್ಷಗಳಿಂದ ಪೊಲೀಸರಿಗೆ ಬೇಕಾಗಿರುವ ಹೇಮಂತ್ ಪೂಜಾರಿ ಬಗ್ಗೆ ಇದುವರೆಗೂ ಸ್ಪಷ್ಟ ಸುಳಿವು ಲಭ್ಯವಾಗಿಲ್ಲ. ಈ ನಡುವೆ ಆತನ ಹೆಸರಿನಲ್ಲಿ ಉದ್ಯಮಿಗಳು ಹಾಗೂ ಪ್ರತಿಷ್ಠಿತ ವ್ಯಕ್ತಿಗಳಿಗೆ ಬೆದರಿಕೆ ಕರೆಗಳು ಬಂದಿರುವುದು ಪೊಲೀಸರ ಗಮನ ಸೆಳೆದಿದೆ.

ಕರೆ ಮಾಡುತ್ತಿರುವವರು ಯಾರು?
ಹೇಮಂತ್ ಪೂಜಾರಿಯೇ ಕರೆ ಮಾಡುತ್ತಿದ್ದಾನೆಯೇ ಅಥವಾ ಆತನ ಹೆಸರನ್ನು ದುರ್ಬಳಕೆ ಮಾಡಿಕೊಂಡು ಬೇರೆಯವರು ಬೆದರಿಕೆ ಹಾಕುತ್ತಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕರೆಗಳ ಮೂಲ, ಹಣದ ಬೇಡಿಕೆಯ ಹಿಂದಿನ ಉದ್ದೇಶ ಹಾಗೂ ಪ್ರಕರಣಗಳ ನಡುವಿನ ಸಂಬಂಧದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Ad Widget
Continue Reading

ಸ್ಥಳೀಯ

Ganja-ಸಾಗರದ ಲಾಡ್ಜ್‌ನಲ್ಲಿ ಗಾಂಜಾ ಸೇವನೆ: ಯುವತಿ ಸೇರಿ ನಾಲ್ವರು ವಶಕ್ಕೆ – ಗಾಂಜಾ ಸಾಗಾಟಗಾರನ ಮಾಹಿತಿ ಬಿಚ್ಚಿಟ್ಟ ಯುವತಿ..!

Published

on



Ad Widget

Ad Widget

Ad Widget

Ad Widget

ಸಾಗರದ ಜೋಗ ರಸ್ತೆಯಲ್ಲಿರುವ ಲಾಡ್ಜ್‌ನಲ್ಲಿ ಗಾಂಜಾ ಸೇವಿಸುತ್ತಿದ್ದ ಆರೋಪದ ಮೇಲೆ ಯುವತಿ ಸೇರಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಾಗರ ಟೌನ್ ಪೊಲೀಸರು, ಮೂವರು ಯುವಕರು ಹಾಗೂ ಓರ್ವ ಯುವತಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

Ad Widget

Ad Widget

Ad Widget

Ad Widget

ಶಿವಮೊಗ್ಗ, ಅ. 8: ಸಾಗರದ ಜೋಗ ರಸ್ತೆಯಲ್ಲಿರುವ ಲಾಡ್ಜ್‌ನಲ್ಲಿ ಗಾಂಜಾ ಸೇವಿಸುತ್ತಿದ್ದ ಆರೋಪದ ಮೇಲೆ ಯುವತಿ ಸೇರಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಾಗರ ಟೌನ್ ಪೊಲೀಸರು, ಮೂವರು ಯುವಕರು ಹಾಗೂ ಓರ್ವ ಯುವತಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಬಂಧಿತ ಆರೋಪಿಗಳನ್ನು ಶಿವಮೊಗ್ಗದ ಕಾರ್ತಿಕ್ (19), ಬೆಂಗಳೂರಿನ ಶಶಾಂಕ್ (26), ಸಾಗರದ ನಿಶಾಂತ್ (25) ಹಾಗೂ ಯುವತಿ ಎಂದು ಗುರುತಿಸಲಾಗಿದೆ.

Ad Widget

Ad Widget <> Ad Widget

ಲಾಡ್ಜ್ ಮೇಲೆ ದಿಢೀರ್ ದಾಳಿ
ಹೆಚ್ಚುವರಿ ಪೊಲೀಸ್ ಅಧೀಕ್ಷಕರ ನಿರ್ದೇಶನದಂತೆ ಪಿಎಸ್‌ಐ ಶಾಂತರಾಜ್ ಎಚ್.ಜಿ. ಹಾಗೂ ಸಿಬ್ಬಂದಿ ಲಾಡ್ಜ್ ಮೇಲೆ ದಾಳಿ ನಡೆಸಿದರು. ಕೊಠಡಿಯನ್ನು ಪರಿಶೀಲಿಸಿದಾಗ ಮೂವರು ಯುವಕರು ಹಾಗೂ ಯುವತಿಯು ಸಿಗರೇಟ್‌ನಲ್ಲಿ ಗಾಂಜಾ ತುಂಬಿಕೊಂಡು ಸೇವಿಸುತ್ತಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.



Ad Widget

ಬಳಿಕ ನಾಲ್ವರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಕಾರ್ತಿಕ್, ಶಶಾಂಕ್ ಹಾಗೂ ಯುವತಿ ಗಾಂಜಾ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ವರದಿಯಾಗಿದೆ.

Ad Widget

Ad Widget

ವಿಚಾರಣೆ ವೇಳೆ ಸಾಗರದ ಮನು ಹೆಗಡೆ ಎಂಬಾತ ಗಾಂಜಾ ಪೂರೈಸಿದ್ದಾನೆ ಎಂದು ಯುವತಿ ಹೇಳಿಕೆ ನೀಡಿದ್ದಾಳೆ ಎನ್ನಲಾಗಿದೆ. ಈ ಸಂಬಂಧ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading