ವರದಿಗಳು
ಶಂಕರಾಚಾರ್ಯರ ಆಧ್ಯಾತ್ಮ ಭಾರತ – ಸೇನಾಶಕ್ತಿ – ಶಿವಾಜಿ ಕ್ಷಾತ್ರ ತೇಜಸ್ಸು – ದೇಶಪ್ರೇಮಿಗಳ ಟ್ಯಾಬ್ಲೋದೊಂದಿಗೆ ನಾಲ್ಕು ದಿಕ್ಕಿನಿಂದ ಮೆರವಣಿಗೆ – ದಕ್ಷಿಣ ಭಾರತದ ಏಕೈಕ ಅಮರ್ ಜವಾನ್ ಜ್ಯೋತಿಯಲ್ಲಿ ಸಂಗಮ : ಪುತ್ತೂರಿನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಬೃಹತ್ ‘ಸ್ವಾತಂತ್ರ್ಯ ನಡಿಗೆ’ ವಿಶೇಷತೆ ಇಲ್ಲಿದೆ
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿಂದ ನಡೆದ ವೈಭವೋಪೇತ ‘ಸ್ವಾತಂತ್ರ್ಯ ನಡಿಗೆ’
ಪುತ್ತೂರು ನಗರದಾದ್ಯಂತ ದೇಶಪ್ರೇಮ ಪಸರಿಸಿದ ಅಂಬಿಕಾ ವಿದ್ಯಾರ್ಥಿಗಳು
ಪುತ್ತೂರು: ಒಂದೆಡೆಯಲ್ಲಿ ಆದ್ಯಾತ್ಮ ಭಾರತದ ಸೊಗಡು, ಭಾರತಾಂಬೆಯ ಮಡಿಲಲ್ಲಿ ಕುಳಿತ ಶ್ರೀ ಶಂಕರಾಚಾರ್ಯರ ಚಿನ್ಮಯ ಮುದ್ರೆ, ಚತುರಾಮ್ನಾಯ ಪೀಠದ ಪ್ರಸ್ತುತಿ. ಅಮೃತ ಭಾರತ – ಆಧ್ಯಾತ್ಮ ಭಾರತ ಎಂಬ ಕಲ್ಪನೆಯ ಅನಾವರಣ. ಮತ್ತೊಂದೆಡೆ ಭಾರತದ ಬ್ರಹ್ಮ ಶಕ್ತಿಯಾದ ಬ್ರಹ್ಮೋಸ್ ಕ್ಷಿಪಣಿಯ ವೈಭವ, ಇನ್ನೊಂದೆಡೆ ಶಿವಾಜಿ ಮಹಾರಾಜನ ಕ್ಷಾತ್ರ ತೇಜಸ್ಸು, ಹಾಗೆಯೇ ದೇಶಕ್ಕಾಗಿ ಪ್ರಾಣಾರ್ಪಣೆಗೈದ ಭಗತ್ ಸಿಂಗ್ ರಾಜಗುರು ಸುಖದೇವ್ ಅವರಂತಹ ಮಹಾನ್ ದೇಶಪ್ರೇಮಿಗಳ ಚಿತ್ರಣ. ಅಂತೆಯೇ ಕಾರ್ಗಿಲ್ನ ಹಿಮಾಚ್ಛಾದಿತ ಪ್ರದೇಶದಲ್ಲಿ ದೇಶರಕ್ಷಣೆಗಾಗಿ ಸೆಟೆದು ನಿಂತಿರುವ ಯೋಧರ ಸನ್ನಿವೇಶ. ಜತೆಗೆ ಇತ್ತೀಚೆಗಷ್ಟೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ ದ್ರೌಪದಿ ಮುರ್ಮು ಅವರ ಪ್ರಸ್ತುತಿ. ಹೀಗೆ ದೇಶದ ಬಗೆಗೆ ಹೆಮ್ಮೆ ಉಕ್ಕಿಸುವ ಹತ್ತು ಹಲವು ವಿಚಾರಧಾರೆಗಳು.
ಇವೆಲ್ಲವೂ ಕಂಡು ಬಂದದ್ದು ಪುತ್ತೂರಿನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ನಡೆದ ಸ್ವಾತಂತ್ರ್ಯದ ನಡಿಗೆ ಎಂಬ ಬೃಹತ್ ಜಾಥಾದಲ್ಲಿ(AzadiKaAmruthMahotsava).
ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿಂದ 75ನೆಯ ಸ್ವಾತಂತ್ರ್ಯ ದಿನಾಚರಣೆ – ಅಮೃತ ಮಹೋತ್ಸವ ಅದ್ಧೂರಿಯಿಂದ ಆಚರಿಸಲ್ಪಟ್ಟಿತು.
ಸದಾ ದೇಶಭಕ್ತಿಯನ್ನು ಎಳೆಯ ಮನಸ್ಸುಗಳಲ್ಲಿ ತುಂಬುವ ಅಂಬಿಕಾ ಶಿಕ್ಷಣ ಸಂಸ್ಥೆ ಈ ಬಾರಿಯ ಅಮೃತ ಮಹೋತ್ಸವಕ್ಕೆ ವಿಶೇಷ ಮೆರುಗನ್ನು ನೀಡುವ ಪ್ರಯತ್ನ ನಡೆಸಿ, ಸಫಲವಾಯಿತು.
ದರ್ಭೆ, ಬೊಳುವಾರು, ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆಯಿಂದ ಏಕಕಾಲಕ್ಕೆ ಬೃಹತ್ ಮೆರವಣಿಗೆ ನಡೆಯಿತು. ಪ್ರತಿಯೊಂದು ಮೆರವಣಿಗೆಯಲ್ಲೂ ವಿವಿಧ ಸ್ಥಬ್ಧ ಚಿತ್ರಗಳು ಮೆರೆದಾಡಿದವು. ಸಾವಿರಾರು ಮಂದಿ ವಿದ್ಯಾರ್ಥಿಗಳು ಭಾರತ ಮಾತೆಗೆ ಜೈಕಾರ ಕೂಗುತ್ತಾ, ವಂದೇ ಮಾತರಂ ಘೋಷಣೆ ಮೊಳಗಿಸುತ್ತಾ, ಕೈಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದು ಮುನ್ನಡೆಯುತ್ತಿದ್ದರೆ ಇಡಿಯ ನಗರವೇ ಶೃಂಗಾರಗೊಂಡಂತೆ ಕಂಡುಬಂತು. ದರ್ಭೆಯಲ್ಲಿ ಶಾಸಕ ಸಂಜೀವ ಮಠಂದೂರು ಜಾಥಾಕ್ಕೆ ಚಾಲನೆ ನೀಡಿದರೆ ಉಳಿದ ಕಡೆಗಳಲ್ಲಿ ಮಾಜಿ ಸೈನಿಕರು ಚಾಲನೆ ನೀಡಿದರು.

75ರ ಅಮೃತ ಮಹೋತ್ಸವದ ನೆಲೆಯಲ್ಲಿ ಸ್ವಾತಂತ್ರ್ಯದ ನಡಿಗೆ ಎಂಬ ಮಹತ್ವದ ಕಲ್ಪನೆಯನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ಯೋಜಿಸಿದ್ದವು. ಅದರನ್ವಯ ಅಂಬಿಕಾ ಸಂಸ್ಥೆಗಳೊಡನೆ ಸಂತ ಫಿಲೋಮಿನಾವೂ ಸೇರಿದಂತೆ ವಿವಿಧ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಬೋಧಕರು ಜತೆಸೇರಿದ್ದರು. ಅಂಬಿಕಾದ ವಿದ್ಯಾರ್ಥಿಗಳಲ್ಲದೆ ಹೆತ್ತವರು, ಆಡಳಿತ ಮಂಡಳಿ, ಬೋಧಕ-ಬೋಧಕೇತರ ವೃಂದದವರೆಲ್ಲರೂ ಈ ಸ್ವಾತಂತ್ರ್ಯದ ನಡಿಗೆಯಲ್ಲಿ ಪಾಲ್ಗೊಂಡದ್ದು ವಿಶೇಷವಾಗಿತ್ತು.
ಈ ಬೃಹತ್ ಜಾಥಾ ಅಂತಿಮವಾಗಿ ಕಿಲ್ಲೆ ಮೈದಾನದ ಬಳಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ರೂಪಿಸಲಾಗಿರುವ ದಕ್ಷಿಣ ಭಾರತದ ಏಕೈಕ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಕೊನೆಗೊಂಡು ಅಲ್ಲಿ ಸರ್ಕಾರದ ವತಿಯಿಂದ ಆಯೋಜಿಸಲಾದ ಸ್ವಾತಂತ್ರ್ಯದ ದಿನಾಚರಣೆಗೆ ಸಾಕ್ಷಿಯಾಯಿತು.

ಸಭಾ ಕಾರ್ಯಕ್ರಮ
ಸ್ವಾತಂತ್ರ್ಯದ ನಡಿಗೆಯ ನಂತರ ಪುತ್ತೂರಿನ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಅಂಬಿಕಾ ಸಂಸ್ಥೆಗಳ ವತಿಯಿಂದ ಸಭಾಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಿವಮೊಗ್ಗದ ವಾಗ್ಮಿ ಕಿರಣ್ ಹೆಗ್ಗದ್ದೆ ಮಾತನಾಡಿ ಸ್ವಾತಂತ್ರ್ಯ ಸುದೀರ್ಘವಾದ ಇತಿಹಾಸವನ್ನು ಹೊಂದಿದೆ. ಭಾರತದಲ್ಲಿ ವಂದೇ ಮಾತರಂ ಎಂದು ಕೂಗಲು, ರಾಷ್ಟ್ರ ಧ್ವಜವನ್ನು ಹಾರಿಸಲು ಅವಕಾಶವಿಲ್ಲದ ಕಾಲವಿತ್ತು. ಅಂತಹ ಸಂದರ್ಭದಲ್ಲಿಯೂ ಭಾರತೀಯರು ಆ ನಿಯಮಗಳ ವಿರುದ್ಧವಾಗಿ ನಿಂತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಹಲವಾರು ಮಂದಿ ತಮ್ಮ ಪ್ರಾಣವನ್ನು ಭಾರತಮಾತೆಗಾಗಿ ಅರ್ಪಿಸಿದ್ದಾರೆ. ಕೆಚ್ಚಿನಿಂದ ಹೋರಾಡಿ, ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದಾರೆ ಎಂದು ಹೇಳಿದರು.

ಮಣ್ಣಿನ ಗುಣವನ್ನು ಅರಿತವರು ಭಾರತಾಂಬೆಯ ರಕ್ಷಣೆಗೆ ಧಾವಿಸುತ್ತಾರೆ. ಶತ್ರುಗಳ ಅಡಿಯಲ್ಲಿಯೇ ಇದ್ದು, ಅವರ ಜಾಲವನ್ನು ಅರಿಯುತ್ತಾರೆ ಹಾಗೂ ತಾಯಿ ಭಾರತಿಯನ್ನು ಶತ್ರುವಿನ ಕಪಿಮುಷ್ಠಿಯಿಂದ ರಕ್ಷಿಸುತ್ತಾರೆ. ಶಿವಾಜಿ, ಹರಿಹರ, ಚೆನ್ನಮ್ಮ, ಝಾನ್ಸಿರಾಣಿ, ಸಂಗೊಳ್ಳಿ ರಾಯಣ್ಣ, ನಾನಾ ಸಾಹೇಬ್, ಚಂದ್ರಶೇಖರ ಆಜಾದ್, ಭಗತ್ ಸಿಂಗ್, ಸಾವರ್ಕರ್, ಭಟುಕೇಶ್ವರ ದತ್ತ ಹೀಗೆ ಅದೆಷ್ಟೋ ಮಂದಿ ವೀರರು ಅನ್ಯರ ಬಂಧನದಿಂದ ಹೊರಬರಲು ಜೀವವನ್ನು, ಜೀವನವನ್ನು ಒತ್ತೆಯಿರಿಸಿದ್ದಾರೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಇಂದು ನಾವು ನೆಮ್ಮದಿಯಿಂದ ಬದುಕುತ್ತಿದ್ದೇವೆ ಎಂದರೆ ಹಿಂದೆ ಹಲವಾರು ಹೋರಾಟಗಳು ನಡೆದಿವೆ. ಬದುಕಿಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟ ದೇಶದ ಇತಿಹಾಸವನ್ನು ಪ್ರತಿಯೊಬ್ಬ ಪ್ರಜೆಯೂ ತಿಳಿದುಕೊಳ್ಳಬೇಕು. ಪೂರ್ವಜರ ಶೌರ್ಯ, ಪರಾಕ್ರಮಗಳು ಇಂದಿನ ಪೀಳಿಗೆಯವರಲ್ಲಿ ಮುಂದುವರೆಯಬೇಕು. ಅನ್ಯಾಯ, ದೌರ್ಜನ್ಯಗಳು ಕಂಡುಬಂದಲ್ಲಿ, ಸೆಟೆದು ನಿಲ್ಲಬೇಕಾದ ಅಗತ್ಯವಿದೆ. ಯಾವುದೇ ವೃತ್ತಿಯಲ್ಲಿದ್ದರೂ ದೇಶಕ್ಕಾಗಿ ಮಿಡಿಯುವ ಅಂತಃಕರಣ ನಮ್ಮದಾಗಬೇಕಿದೆ. ದೇಶ ಪ್ರೇಮವನ್ನು ತೋರಿ, ಭಾರತವನ್ನು ವಿಶ್ವಗುರುವಾಗಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅಂಬಿಕಾ ವಿದ್ಯಾಲಯ, ಸಿಬಿಎಸ್ಇ, ಪದವಿಪೂರ್ವ ವಿದ್ಯಾಲಯ ಹಾಗೂ ಮಹಾವಿದ್ಯಾಲಯದ ಮಕ್ಕಳಿಗೆ ನಡೆಸಿದ್ದ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾರ್ಥಿಗಳು ಸಂಕಲಿಸಿದ 75 ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರ ಕುರಿತಾದ ಪರಿಚಯ ಕೃತಿ ‘ಕೇಳಿಸದ ದನಿ’ ಯನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಆಡಳಿತ ಮಂಡಳಿಯ ಸದಸ್ಯರಾದ ಸುರೇಶ್ ಶೆಟ್ಟಿ ಹಾಗೂ ಡಾ.ಎಚ್. ಮಾಧವ ಭಟ್ ಮತ್ತು ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶೈಲೇಶ್, ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸೀಮಾ ನಾಗರಾಜ್, ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಎಂ, ಬಪ್ಪಳಿಗೆ ಅಂಬಿಕಾ ವಿದ್ಯಾಲಯ ಸಿಬಿಎಸ್ಇಯ ಪ್ರಾಚಾರ್ಯೆ ಮಾಲತಿ ಡಿ ಉಪಸ್ಥಿತರಿದ್ದರು.
ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿ, ಬಪ್ಪಳಿಗೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲೆ ಸುಚಿತ್ರಾ ಪ್ರಭು ವಂದಿಸಿದರು. ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿ ಕೌಶಲ್ಯ ಕಾರ್ಯಕ್ರಮ ನಿರೂಪಿಸಿದರು.
ಅಂತರ ರಾಜ್ಯ
L.K. Advani-ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಆಸ್ಪತ್ರೆಗೆ ದಾಖಲು
ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ (98) ಅವರು ಶ್ವಾಸಕೋಶದ ಸಮಸ್ಯೆಯಿಂದಾಗಿ ಶುಕ್ರವಾರ ಸಂಜೆ ದಿಲ್ಲಿಯ ಇಂದ್ರಪ್ರಸ್ಥ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ಹೊಸದಿಲ್ಲಿ: ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ (98) ಅವರು ಶ್ವಾಸಕೋಶದ ಸಮಸ್ಯೆಯಿಂದಾಗಿ ಶುಕ್ರವಾರ ಸಂಜೆ ದಿಲ್ಲಿಯ ಇಂದ್ರಪ್ರಸ್ಥ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ದಿಲ್ಲಿಯ ಜಸೋಲಾ ವಿಹಾರ್ನಲ್ಲಿರುವ ಆಸ್ಪತ್ರೆಗೆ ಅಡ್ವಾಣಿ ಅವರನ್ನು ಸಂಜೆ ಸುಮಾರು 7.30ರ ವೇಳೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಸದ್ಯ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯ ಸ್ಥಿತಿಯ ಕುರಿತು ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಡಿಸಲಾಗುವುದು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಬಿಜೆಪಿಯ ಮಾಜಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಎಲ್.ಕೆ. ಅಡ್ವಾಣಿ ಅವರು 2002ರಿಂದ 2004ರವರೆಗೆ ದೇಶದ ಉಪ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಬಿಜೆಪಿಯನ್ನು ರಾಷ್ಟ್ರಮಟ್ಟದಲ್ಲಿ ಪ್ರಮುಖ ರಾಜಕೀಯ ಶಕ್ತಿಯಾಗಿ ಬೆಳೆಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು.
ಅಂತರ ರಾಜ್ಯ
Supreme Court-ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ತಡೆ ನೀಡಲು ಸುಪ್ರೀಂಕೋರ್ಟ್ ನಕಾರ..!
ಹಬ್ಬದ ಋತುವಿನಲ್ಲಿ ವ್ಯಾಪಾರಕ್ಕೆ ನಷ್ಟವಾಗುವ ಆತಂಕ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ದೆಹಲಿಯ ಕಾನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸುತ್ತಿರುವ ಪ್ರತಿಭಟನೆಗೆ ತಡೆ ನೀಡುವಂತೆ ತುರ್ತು ನಿರ್ದೇಶನಗಳನ್ನು ಹೊರಡಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಹೊಸದಿಲ್ಲಿ: ಹಬ್ಬದ ಋತುವಿನಲ್ಲಿ ವ್ಯಾಪಾರಕ್ಕೆ ನಷ್ಟವಾಗುವ ಆತಂಕ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ದೆಹಲಿಯ ಕಾನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸುತ್ತಿರುವ ಪ್ರತಿಭಟನೆಗೆ ತಡೆ ನೀಡುವಂತೆ ತುರ್ತು ನಿರ್ದೇಶನಗಳನ್ನು ಹೊರಡಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಪ್ರತಿಭಟನೆಯಿಂದ ಹಬ್ಬದ ವ್ಯಾಪಾರಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿದ್ದ ವರ್ತಕರು, ಪ್ರತಿಭಟನೆಗೆ ತಡೆ ನೀಡುವಂತೆ ಕೋರಿ ಮನವಿ ಸಲ್ಲಿಸಿದ್ದರು.
ಈ ಮನವಿಯ ವಿಚಾರವಾಗಿ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ವಿವೇಕವನ್ನು ಪ್ರತಿಭಟನಾಕಾರರು ಹೊಂದಿರುತ್ತಾರೆ ಎಂದು ಆಶಿಸಿರುವುದಾಗಿ ತಿಳಿಸಿದೆ.
ಹಬ್ಬದ ಸಂದರ್ಭದಲ್ಲಿ ವ್ಯಾಪಾರ ಚಟುವಟಿಕೆಗಳಿಗೆ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಬೇಕೆಂಬ ವರ್ತಕರ ಆತಂಕದ ನಡುವೆಯೇ, ಪ್ರತಿಭಟನೆಗೆ ಸಂಬಂಧಿಸಿದಂತೆ ತುರ್ತು ನಿರ್ಬಂಧಗಳನ್ನು ವಿಧಿಸಲು ನ್ಯಾಯಾಲಯ ನಿರಾಕರಿಸಿರುವುದು ಗಮನ ಸೆಳೆದಿದೆ.
ಅಂತರ ರಾಜ್ಯ
Controversial statement-“ಅಮೆರಿಕ–ಪಾಕ್ ಯುದ್ಧ ನಡೆದರೆ ಪಾಕಿಸ್ತಾನದ ಪರ ನಿಲ್ಲುತ್ತೇವೆ” – ರಾಜಸ್ಥಾನ ಬಿಜೆಪಿ ಅಧ್ಯಕ್ಷನಿಂದ ವಿವಾದಾತ್ಮಕ ಹೇಳಿಕೆ..!
ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ, ನೆರೆಯ ರಾಷ್ಟ್ರ ಎಂಬ ಕಾರಣಕ್ಕೆ ಪಾಕಿಸ್ತಾನದ ಪರವಾಗಿ ಭಾರತ ನಿಲ್ಲಲಿದೆ ಎಂದು ರಾಜಸ್ಥಾನ ಬಿಜೆಪಿ ಅಧ್ಯಕ್ಷ ಮದನ್ ರಾಥೋರ್ ನೀಡಿರುವ ವಿವಾದಾತ್ಮಕ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅವರ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರು ಬಿಜೆಪಿಯನ್ನು ತೀವ್ರವಾಗಿ ಟೀಕಿಸಿದ್ದಾರೆ.
ಹೊಸದಿಲ್ಲಿ: ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ, ನೆರೆಯ ರಾಷ್ಟ್ರ ಎಂಬ ಕಾರಣಕ್ಕೆ ಪಾಕಿಸ್ತಾನದ ಪರವಾಗಿ ಭಾರತ ನಿಲ್ಲಲಿದೆ ಎಂದು ರಾಜಸ್ಥಾನ ಬಿಜೆಪಿ ಅಧ್ಯಕ್ಷ ಮದನ್ ರಾಥೋರ್ ನೀಡಿರುವ ವಿವಾದಾತ್ಮಕ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅವರ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರು ಬಿಜೆಪಿಯನ್ನು ತೀವ್ರವಾಗಿ ಟೀಕಿಸಿದ್ದಾರೆ.
ಗುರುವಾರ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮದನ್ ರಾಥೋರ್, “ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ, ಪಾಕಿಸ್ತಾನ ನಮ್ಮ ನೆರೆಯ ರಾಷ್ಟ್ರವಾಗಿರುವುದರಿಂದ ನಾವು ಅದರ ಪರವಾಗಿ ನಿಲ್ಲುತ್ತೇವೆ. ಆದರೆ, ನಮ್ಮ ಆಂತರಿಕ ವಿಷಯಗಳ ವಿಚಾರದಲ್ಲಿ ಭಾರತದ ಪರವಾಗಿ ನಿಲ್ಲುತ್ತೇವೆ. ಈ ವ್ಯತ್ಯಾಸವನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು” ಎಂದು ಹೇಳಿದ್ದಾರೆ.
ಕಾಂಗ್ರೆಸ್ನಿಂದ ತೀವ್ರ ಖಂಡನೆ
ರಾಥೋರ್ ಅವರ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಶಮಾ ಮೊಹಮ್ಮದ್, ಇದನ್ನು ರಾಷ್ಟ್ರವಿರೋಧಿ ಹೇಳಿಕೆ ಎಂದು ಟೀಕಿಸಿದ್ದಾರೆ. ಭಾರತದ ಸೈನಿಕರು ಮತ್ತು ನಾಗರಿಕರ ಸಾವಿಗೆ ಕಾರಣವಾಗುವ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ನಾಯಕನ ಹೇಳಿಕೆಗೆ ಪಕ್ಷದ ವರಿಷ್ಠರು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
“ಪಾಕಿಸ್ತಾನದ ಪರವಾಗಿ ನಿಲ್ಲುವುದಾಗಿ ರಾಜಸ್ಥಾನ ಬಿಜೆಪಿ ಅಧ್ಯಕ್ಷರು ಹೇಳಿರುವುದು ಬಿಜೆಪಿಯ ನಿಲುವಿನ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಇದೇ ಅಭಿಪ್ರಾಯ ಹೊಂದಿದ್ದಾರೆಯೇ? ಇಲ್ಲದಿದ್ದರೆ, ಈ ಹೇಳಿಕೆ ನೀಡಿದವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು” ಎಂದು ಶಮಾ ಮೊಹಮ್ಮದ್ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ರಾಷ್ಟ್ರೀಯ ಸಂಯೋಜಕ ಸಂದೀಪ್ ಗುಪ್ತಾ ಕೂಡ ರಾಥೋರ್ ಅವರ ಹೇಳಿಕೆಯನ್ನು ಟೀಕಿಸಿದ್ದಾರೆ. ಈ ಹೇಳಿಕೆಯು ಪಾಕಿಸ್ತಾನದ ಬಗ್ಗೆ ಬಿಜೆಪಿಗಿರುವ ಒಲವನ್ನು ಬಹಿರಂಗಪಡಿಸಿದೆ ಎಂದು ಆರೋಪಿಸಿರುವ ಅವರು, ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ–ಪಾಕಿಸ್ತಾನ ಒಂದೇ ಡಿಎನ್ಎ: ಎಎಪಿ ಟೀಕೆ
ಈ ವಿವಾದಕ್ಕೆ ಆಮ್ ಆದ್ಮಿ ಪಕ್ಷದ ನಾಯಕರೂ ಧ್ವನಿಗೂಡಿಸಿದ್ದಾರೆ. ದಿಲ್ಲಿ ಎಎಪಿ ಘಟಕದೊಂದಿಗೆ ಗುರುತಿಸಿಕೊಂಡಿರುವ ಯುವ ಘಟಕದ ರಾಜ್ಯಾಧ್ಯಕ್ಷ ರಮೇಶ್ ಮಟಿಯಾಲ ಹಾಗೂ ಎಎಪಿ ನಾಯಕ ವಿನಯ್ ಮಹಾಬಲ್ ಮಿಶ್ರಾ ಅವರು ರಾಥೋರ್ ಅವರ ಭಾಷಣದ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಇದೇ ವೇಳೆ, ಬಿಜೆಪಿ ಮತ್ತು ಪಾಕಿಸ್ತಾನದ ನಡುವೆ ಸೈದ್ಧಾಂತಿಕ ಸಾಮ್ಯತೆಯಿದೆ ಎಂದು ಆರೋಪಿಸಿರುವ ಎಎಪಿ ಉತ್ತರ ಪ್ರದೇಶ ಘಟಕದ ಉಪಾಧ್ಯಕ್ಷ ರಾಮ್ ಗುಪ್ತಾ, ರಾಥೋರ್ ಅವರ ಹೇಳಿಕೆಯನ್ನು ಟೀಕಿಸಿದ್ದಾರೆ.
“ಇನ್ನೂ ಯಾರಿಗಾದರೂ ಅನುಮಾನವಿದೆಯೇ? ಬಿಜೆಪಿ ಮತ್ತು ಪಾಕಿಸ್ತಾನ ಎರಡೂ ಒಂದೇ ಡಿಎನ್ಎ ಹೊಂದಿವೆ. ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ ನಾವು ಪಾಕಿಸ್ತಾನದ ಪರವಾಗಿ ನಿಲ್ಲುತ್ತೇವೆ ಎಂದು ರಾಜಸ್ಥಾನ ಬಿಜೆಪಿ ಅಧ್ಯಕ್ಷ ಮದನ್ ರಾಥೋರ್ ಹೇಳಿದ್ದಾರೆ” ಎಂದು ಅವರು ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.
ರಾಥೋರ್ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮತ್ತು ಎಎಪಿ ನಾಯಕರು ಬಿಜೆಪಿಯನ್ನು ಗುರಿಯಾಗಿಸಿಕೊಂಡಿದ್ದು, ಈ ವಿಚಾರ ರಾಜಕೀಯ ವಲಯದಲ್ಲಿ ವಾಗ್ವಾದಕ್ಕೆ ಕಾರಣವಾಗಿದೆ.
-
ನಿಧನ ವಾರ್ತೆ21 hours agoPuttur-ಮುಕ್ರಂಪಾಡಿಯಲ್ಲಿ ಸ್ಕೂಟರ್–ರಿಕ್ಷಾ ಡಿಕ್ಕಿ: ಪುತ್ತೂರು ಅಂಚೆ ಇಲಾಖೆ ಮಹಿಳಾ ಸಿಬ್ಬಂದಿ ಮೃತ್ಯು
-
ಸ್ಥಳೀಯ21 hours agoKumara Parvata-ಅ.18ರಿಂದ ಕುಮಾರ ಪರ್ವತ ಚಾರಣಕ್ಕೆ ಅನುಮತಿ
-
ಅಪರಾಧ21 hours agoHigh Court-ಕೊಳತ್ತಮಜಲು ರಹ್ಮಾನ್ ಕೊಲೆ ಪ್ರಕರಣ: ಭರತ್ ಕುಮ್ಡೇಲ್ ಸೇರಿ 8 ಆರೋಪಿಗಳ ಜಾಮೀನಿಗೆ ಹೈಕೋರ್ಟ್ ತಡೆ
-
ಮೈಸೂರು15 hours agoMysuru-ಮೈಸೂರು ದಸರಾ ವೇಳೆ 10 ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ
-
ಅಪರಾಧ14 hours agoPuttur-ಪುತ್ತೂರು: ಮಹಿಳೆಯ ಮೇಲೆ ಹಲ್ಲೆ, ಮಾನಭಂಗ ಪ್ರಕರಣ; ಮೂವರು ಆರೋಪಿಗಳಿಗೆ ಜೈಲು ಶಿಕ್ಷೆ
-
ಮಂಗಳೂರು15 hours agoMRPL explosion-Big Breaking: MRPL ಸ್ಫೋಟ : ತೀವ್ರ ಗಾಯಗೊಂಡಿದ್ದ ರಾಜೇಶ್ ನಿಧನ : ಮನೀಶ್ ಕರ್ಕಡ ಕುಟುಂಬಕ್ಕೆ ನೀಡಿದ ಪರಿಹಾರದಷ್ಟೇ ನೀಡುವಂತೆ ಒತ್ತಾಯ
-
ಅಪರಾಧ15 hours agoMangalore:-ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ; ಚರ್ಚ್ನ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ
-
ಅಪರಾಧ13 hours agoUppinangadi-ಬೈಕ್ ಅಡ್ಡಗಟ್ಟಿ ಚೂರಿ ತೋರಿಸಿ ಬೆದರಿಸಿ ನಗದು, ಮೊಬೈಲ್ ದರೋಡೆ; ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು


















