ಬಿಗ್ ನ್ಯೂಸ್
Maitri-ಪುತ್ತೂರಿನ ಅತಿದೊಡ್ಡ ಎಲೆಕ್ಟ್ರಿಕಲ್ ಶೋರೂಂ ‘ಮೈತ್ರಿ’ಗೆ 30ರ ಸಂಭ್ರಮ..! ಒಂದೇ ಸೂರಿನಡಿ ವಿಶ್ವದರ್ಜೆಯ ಬ್ರ್ಯಾಂಡ್ಗಳ ಸಂಗ್ರಹ| ಗೃಹಾಲಂಕಾರಕ್ಕೆ ಮೆರುಗು ನೀಡಲು ಬಂತು ‘ಮಿಂಚ್’!
ಕರಾವಳಿಯ ಮುತ್ತಿನ ನಗರಿ ಪುತ್ತೂರಿನ ವಿದ್ಯುತ್ ಉಪಕರಣಗಳ ಮಾರುಕಟ್ಟೆಯಲ್ಲಿ ತನ್ನದೇ ಆದ ಅಚ್ಚಳಿಯದ ಛಾಪು ಮೂಡಿಸಿರುವ, ನಗರದ ಅತಿದೊಡ್ಡ ಎಲೆಕ್ಟ್ರಿಕಲ್ ಮಳಿಗೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಮೈತ್ರಿ’ (Maithri) ಸಂಸ್ಥೆಯು ಇದೀಗ ಯಶಸ್ವಿ 30ನೇ ವಸಂತಕ್ಕೆ ಕಾಲಿರಿಸಿದೆ. ಮೂರು ದಶಕಗಳ ಈ ಸಾರ್ಥಕ ಪಯಣವು ಪುತ್ತೂರಿನ ಗ್ರಾಹಕರು ಹಾಗೂ ಸಂಸ್ಥೆಯ ನಡುವಿನ ನಂಬಿಕೆಯ ಪ್ರತೀಕವಾಗಿದೆ.
ಪುತ್ತೂರು: ಕರಾವಳಿಯ ಮುತ್ತಿನ ನಗರಿ ಪುತ್ತೂರಿನ ವಿದ್ಯುತ್ ಉಪಕರಣಗಳ ಮಾರುಕಟ್ಟೆಯಲ್ಲಿ ತನ್ನದೇ ಆದ ಅಚ್ಚಳಿಯದ ಛಾಪು ಮೂಡಿಸಿರುವ, ನಗರದ ಅತಿದೊಡ್ಡ ಎಲೆಕ್ಟ್ರಿಕಲ್ ಮಳಿಗೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಮೈತ್ರಿ’ (Maithri) ಸಂಸ್ಥೆಯು ಇದೀಗ ಯಶಸ್ವಿ 30ನೇ ವಸಂತಕ್ಕೆ ಕಾಲಿರಿಸಿದೆ. ಮೂರು ದಶಕಗಳ ಈ ಸಾರ್ಥಕ ಪಯಣವು ಪುತ್ತೂರಿನ ಗ್ರಾಹಕರು ಹಾಗೂ ಸಂಸ್ಥೆಯ ನಡುವಿನ ನಂಬಿಕೆಯ ಪ್ರತೀಕವಾಗಿದೆ.
‘ಬಾಳು ಬೆಳಗುವ ಬಾಂಧವ್ಯ’ – ಇದುವೇ ಮೈತ್ರಿಯ ಯಶಸ್ಸಿನ ಗುಟ್ಟು!
1997ರಲ್ಲಿ ಸಣ್ಣ ಹೆಜ್ಜೆಯೊಂದಿಗೆ ಆರಂಭವಾದ ‘ಮೈತ್ರಿ’, ಇಂದು ಹೆಮ್ಮರವಾಗಿ ಬೆಳೆದಿದೆ. ‘ಬಾಳು ಬೆಳಗುವ ಬಾಂಧವ್ಯ’ ಎಂಬ ಅರ್ಥಗರ್ಭಿತ ಧ್ಯೇಯವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ, ಕಳೆದ ಮೂರು ದಶಕಗಳಿಂದ ಗ್ರಾಹಕರಿಗೆ ನಿರಂತರವಾಗಿ ಕಳಂಕರಹಿತ ಹಾಗೂ ಗುಣಮಟ್ಟದ ಸೇವೆಯನ್ನು ನೀಡುತ್ತಾ ಬಂದಿದೆ.
ಮಾರುಕಟ್ಟೆಯಲ್ಲಿ ನೂರಕ್ಕೆ ನೂರರಷ್ಟು ಅಸಲಿ (100% Genuine) ಉತ್ಪನ್ನಗಳನ್ನು ಮಾತ್ರ ಒದಗಿಸುವ ದೃಢ ಸಂಕಲ್ಪ ಹಾಗೂ ಪ್ರತಿ ಖರೀದಿಗೂ ಅಧಿಕೃತ ಬಿಲ್ (100% Invoice) ನೀಡುವ ಪಾರದರ್ಶಕತೆಯೇ ‘ಮೈತ್ರಿ’ ಸಂಸ್ಥೆಯು ಸಾವಿರಾರು ಗ್ರಾಹಕರ ವಿಶ್ವಾಸವನ್ನು ಗೆಲ್ಲಲು ಪ್ರಮುಖ ಕಾರಣವಾಗಿದೆ.
ಒಂದೇ ಸೂರಿನಡಿ ವಿಶ್ವದರ್ಜೆಯ ಬ್ರ್ಯಾಂಡ್ಗಳ ಸಂಗ್ರಹ:
ಮನೆ ಕಟ್ಟುವವರ ಪ್ರತಿಯೊಂದು ವಿದ್ಯುತ್ ಅಗತ್ಯಗಳಿಗೂ ‘ಮೈತ್ರಿ’ ಒಂದು ಪರಿಪೂರ್ಣ ತಾಣ (One Stop Destination). ಈ ಬೃಹತ್ ಶೋರೂಂನಲ್ಲಿ ಎಲ್.ಇ.ಡಿ ಬಲ್ಬ್ಗಳು, ಫ್ಯಾನ್ಗಳು, ಪಂಪ್ ಸೆಟ್ಗಳು, ಸ್ವಿಚ್ಗಳು, ಕೇಬಲ್ಗಳು, ಎಂಸಿಬಿಗಳು, ಗ್ರೈಂಡರ್, ಸ್ವಿಚ್ ಗೇರ್ಗಳು ಹಾಗೂ ಕೂಲರ್ ಸೇರಿದಂತೆ ಮನೆ ಮತ್ತು ವಾಣಿಜ್ಯ ಬಳಕೆಗೆ ಅಗತ್ಯವಿರುವ ಸಕಲ ವಿದ್ಯುತ್ ಉಪಕರಣಗಳೂ ಲಭ್ಯವಿವೆ.
ಗ್ರಾಹಕರಿಗೆ ಅತ್ಯುತ್ತಮವಾದುದನ್ನೇ ನೀಡುವ ಉದ್ದೇಶದಿಂದ ಲುಬಿ (Lubi), ಓರಿಯಂಟ್ (Orient), ಫಿನೊಲೆಕ್ಸ್ (Finolex), ಕ್ರಾಮ್ಟನ್ (Crompton), ಆಶೀರ್ವಾದ್ (Ashirvad), ಜಿಎಂ (GM), ಲೆಗ್ರಾಂಡ್ (Legrand), ಲೀಶಾ (Leesha), ಅಟೊಂಬರ್ಗ್ (Atomberg) ಸೇರಿದಂತೆ ದೇಶ-ವಿದೇಶಗಳ ಪ್ರಖ್ಯಾತ ಬ್ರ್ಯಾಂಡ್ಗಳ ಉತ್ಪನ್ನಗಳನ್ನು ಇಲ್ಲಿ ಮಾರುಕಟ್ಟೆಯ ಅತ್ಯುತ್ತಮ ಬೆಲೆಯಲ್ಲಿ ಒದಗಿಸಲಾಗುತ್ತಿದೆ.
ಕಣ್ಣು ಕುಕ್ಕುವ ‘ಮಿಂಚ್’ (MINCH) – ಹೊಸ ಟ್ರೆಂಡ್ನ ಅಲಂಕಾರಿಕ ದೀಪಗಳ ಲೋಕ!
30ನೇ ವರ್ಷದ ಸಂಭ್ರಮಕ್ಕೆ ಕಳಶವಿಟ್ಟಂತೆ, ಮೈತ್ರಿ ಸಂಸ್ಥೆಯು ಪುತ್ತೂರಿನ ಜನತೆಗಾಗಿ ‘ಮಿಂಚ್ – ದಿ ಲುಮಿನರೀಸ್’ (MINCH – The Luminaries) ಹೆಸರಿನಲ್ಲಿ ಹೊಚ್ಚಹೊಸ, ಅತ್ಯಂತ ವಿಭಿನ್ನ ಹಾಗೂ ಕಣ್ಣು ಕುಕ್ಕುವ ಅಲಂಕಾರಿಕ ವಿದ್ಯುತ್ ದೀಪಗಳ (Decorative Lights) ಕಲೆಕ್ಷನ್ ಅನ್ನು ಪರಿಚಯಿಸಿದೆ.
ತಮ್ಮ ನೆಚ್ಚಿನ ಕನಸಿನ ಮನೆಗೆ ಝಗಮಗಿಸುವ ಬೆಳಕಿನ ಸಿಂಗಾರ ಮಾಡಬೇಕು ಎಂದು ಕನಸು ಕಾಣುವ ಹೊಸ ಮನೆ ಮಾಲೀಕರಿಗೆ ಹಾಗೂ ಇಂಟೀರಿಯರ್ ಡಿಸೈನರ್ಗಳಿಗೆ ‘ಮಿಂಚ್’ ಈಗ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಆಧುನಿಕ ವಿನ್ಯಾಸದ ಶ್ಯಾಂಡ್ಲಿಯರ್ಗಳಿಂದ ಹಿಡಿದು ಮೂಡ್ ಲೈಟಿಂಗ್ಗಳವರೆಗೆ ಎಲ್ಲವೂ ಇಲ್ಲಿ ಲಭ್ಯ.
ಇಂದೇ ಭೇಟಿ ನೀಡಿ:
ತನ್ನ ಈ ಸುದೀರ್ಘ ಯಶಸ್ಸಿನ ಪಯಣಕ್ಕೆ ಕೈಜೋಡಿಸಿದ ಪ್ರತಿಯೊಬ್ಬ ಗ್ರಾಹಕರಿಗೂ ಸಂಸ್ಥೆಯು ಈ ಸಂಭ್ರಮದ ಹೊತ್ತಿನಲ್ಲಿ ಕೃತಜ್ಞತೆಗಳನ್ನು ಸಮರ್ಪಿಸಿದೆ. ಜತೆಗೆ ಮನೆಯ ಅಂದವನ್ನು ಇಮ್ಮಡಿಗೊಳಿಸಲು ಹಾಗೂ ಗುಣಮಟ್ಟದ ವಿದ್ಯುತ್ ಉಪಕರಣಗಳ ಖರೀದಿಗೆ ಪುತ್ತೂರಿನ ಮೊಳಹಳ್ಳಿ ಶಿವರಾಯ ಅಡ್ಡರಸ್ತೆಯಲ್ಲಿರುವ ‘ಸುಶಾ ಚೇಂಬರ್ಸ್’ನಲ್ಲಿ ಕಾರ್ಯಾಚರಿಸುತ್ತಿರುವ ‘ಮೈತ್ರಿ’ ಶೋರೂಂಗೆ ಒಮ್ಮೆ ಭೇಟಿ ನೀಡುವಂತೆ ಪ್ರಕಟನೆಯಲ್ಲಿ ತಿಳಿಸಿದೆ.
ಸಂಪರ್ಕ ಸಂಖ್ಯೆ: 9449324436
ಸಾಮಾಜಿಕ ಜಾಲತಾಣ (Instagram/Facebook): maithrielectric
ಅಂತರ ರಾಜ್ಯ
L.K. Advani-ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಆಸ್ಪತ್ರೆಗೆ ದಾಖಲು
ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ (98) ಅವರು ಶ್ವಾಸಕೋಶದ ಸಮಸ್ಯೆಯಿಂದಾಗಿ ಶುಕ್ರವಾರ ಸಂಜೆ ದಿಲ್ಲಿಯ ಇಂದ್ರಪ್ರಸ್ಥ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ಹೊಸದಿಲ್ಲಿ: ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ (98) ಅವರು ಶ್ವಾಸಕೋಶದ ಸಮಸ್ಯೆಯಿಂದಾಗಿ ಶುಕ್ರವಾರ ಸಂಜೆ ದಿಲ್ಲಿಯ ಇಂದ್ರಪ್ರಸ್ಥ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ದಿಲ್ಲಿಯ ಜಸೋಲಾ ವಿಹಾರ್ನಲ್ಲಿರುವ ಆಸ್ಪತ್ರೆಗೆ ಅಡ್ವಾಣಿ ಅವರನ್ನು ಸಂಜೆ ಸುಮಾರು 7.30ರ ವೇಳೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಸದ್ಯ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯ ಸ್ಥಿತಿಯ ಕುರಿತು ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಡಿಸಲಾಗುವುದು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಬಿಜೆಪಿಯ ಮಾಜಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಎಲ್.ಕೆ. ಅಡ್ವಾಣಿ ಅವರು 2002ರಿಂದ 2004ರವರೆಗೆ ದೇಶದ ಉಪ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಬಿಜೆಪಿಯನ್ನು ರಾಷ್ಟ್ರಮಟ್ಟದಲ್ಲಿ ಪ್ರಮುಖ ರಾಜಕೀಯ ಶಕ್ತಿಯಾಗಿ ಬೆಳೆಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು.
ಮಂಗಳೂರು
MRPL explosion-Big Breaking: MRPL ಸ್ಫೋಟ : ತೀವ್ರ ಗಾಯಗೊಂಡಿದ್ದ ರಾಜೇಶ್ ನಿಧನ : ಮನೀಶ್ ಕರ್ಕಡ ಕುಟುಂಬಕ್ಕೆ ನೀಡಿದ ಪರಿಹಾರದಷ್ಟೇ ನೀಡುವಂತೆ ಒತ್ತಾಯ
ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಕಾರ್ಖಾನೆಯಲ್ಲಿ ಸೆಪ್ಟೆಂಬರ್ 30ರಂದು ಸಂಭವಿಸಿದ್ದ ಭೀಕರ ಸ್ಫೋಟ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗುತ್ತಿಗೆ ಕಾರ್ಮಿಕ ರಾಜೇಶ್ ಡಿಸಿಲ್ವ ಶನಿವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಕಾರ್ಖಾನೆಯಲ್ಲಿ ಸೆಪ್ಟೆಂಬರ್ 30ರಂದು ಸಂಭವಿಸಿದ್ದ ಭೀಕರ ಸ್ಫೋಟ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗುತ್ತಿಗೆ ಕಾರ್ಮಿಕ ರಾಜೇಶ್ ಡಿಸಿಲ್ವ ಶನಿವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತ ರಾಜೇಶ್ ಡಿಸಿಲ್ವ ಅವರು ಸುರತ್ಕಲ್ ಇಡ್ಯಾ ಗ್ರಾಮದ ಕಾನ ನಿವಾಸಿಯಾಗಿದ್ದು, ಬ್ಯಾಪಿಸ್ಟ್ ಡಿಸಿಲ್ವ ಎಂಬುವವರ ಐವರು ಮಕ್ಕಳ ಪೈಕಿ ಒಬ್ಬರಾಗಿದ್ದಾರೆ. ಇವರು ಹಲವು ವರ್ಷಗಳಿಂದ ಎಂಆರ್ಪಿಎಲ್ನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದರು. ಅ ಅವಿವಾಹಿತರಾಗಿದ್ದರು ಎಂದು ತಿಳಿದುಬಂದಿದೆ. ಎಂಆರ್ಪಿಎಲ್ನ ಫೇಸ್-3ರ ಸಿಎಚ್ಟಿಯು (Coker Hydro Treating Unit) ಪ್ಲಾಂಟ್ನಲ್ಲಿ ಕಳೆದ ಸೆಪ್ಟೆಂಬರ್ 30ರಂದು ಭಾರೀ ಸ್ಫೋಟ ಸಂಭವಿಸಿತ್ತು. ಅಂದು ಸಂಭವಿಸಿದ ದುರಂತದಲ್ಲಿ ಹಳೆಯಂಗಡಿ ನಿವಾಸಿ ಮನೀಶ್ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದರು.
ಅದೇ ಘಟನೆಯಲ್ಲಿ ತೀವ್ರ ಸುಟ್ಟಗಾಯಗಳಿಗೆ ಒಳಗಾಗಿದ್ದ ರಾಜೇಶ್ ಡಿಸಿಲ್ವ ಅವರನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಐಸಿಯು (ICU) ಘಟಕದಲ್ಲಿ ತೀವ್ರ ನಿಗಾದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಕಳೆದ ಕೆಲವು ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಮೃತರ ದೇಹವನ್ನು ಇಂದು ಸಂಜೆಯ ವೇಳೆ ನಗರದ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ (Post-mortem) ನಡೆಸಲಾಗುವುದು. ಬಳಿಕ ಕಾನೂನು ಪ್ರಕ್ರಿಯೆಗಳನ್ನು ಪೂರೈಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಥಳೀಯ
Kumara Parvata-ಅ.18ರಿಂದ ಕುಮಾರ ಪರ್ವತ ಚಾರಣಕ್ಕೆ ಅನುಮತಿ
ಚಾರಣಿಗರ ನೆಚ್ಚಿನ ತಾಣವಾದ ಕುಮಾರ ಪರ್ವತ ಚಾರಣಕ್ಕೆ ಅಕ್ಟೋಬರ್ 18ರಿಂದ ಮತ್ತೆ ಅವಕಾಶ ಕಲ್ಪಿಸಲಾಗಿದೆ. ಎರಡು ಚಾರಣ ಮಾರ್ಗಗಳ ಪೈಕಿ ಬಿದಹಳ್ಳಿ–ಕುಮಾರ ಪರ್ವತ–ಬಿದಹಳ್ಳಿ ಮಾರ್ಗದಲ್ಲಿ ಮಾತ್ರ ಸದ್ಯಕ್ಕೆ ಚಾರಣಕ್ಕೆ ಅನುಮತಿ ನೀಡಲಾಗಿದೆ.
ಸುಬ್ರಹ್ಮಣ್ಯ: ಚಾರಣಿಗರ ನೆಚ್ಚಿನ ತಾಣವಾದ ಕುಮಾರ ಪರ್ವತ ಚಾರಣಕ್ಕೆ ಅಕ್ಟೋಬರ್ 18ರಿಂದ ಮತ್ತೆ ಅವಕಾಶ ಕಲ್ಪಿಸಲಾಗಿದೆ. ಎರಡು ಚಾರಣ ಮಾರ್ಗಗಳ ಪೈಕಿ ಬಿದಹಳ್ಳಿ–ಕುಮಾರ ಪರ್ವತ–ಬಿದಹಳ್ಳಿ ಮಾರ್ಗದಲ್ಲಿ ಮಾತ್ರ ಸದ್ಯಕ್ಕೆ ಚಾರಣಕ್ಕೆ ಅನುಮತಿ ನೀಡಲಾಗಿದೆ.
ಚಾರಣಕ್ಕೆ ಆಗಮಿಸುವವರು ನಿಗದಿಪಡಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಚಾರಣದ ವೇಳೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಪರಿಸರದ ಸ್ವಚ್ಛತೆಯನ್ನು ಕಾಪಾಡುವುದು ಕಡ್ಡಾಯವಾಗಿದೆ.
ಚಾರಣಿಗರು ನಿಗದಿತ ಸಮಯಕ್ಕೆ ಹಾಜರಾಗಬೇಕು. ಅಲ್ಲದೆ, ಕರ್ತವ್ಯದಲ್ಲಿರುವ ಸಿಬ್ಬಂದಿಯೊಂದಿಗೆ ಸಹಕರಿಸುವಂತೆ ಸೂಚಿಸಲಾಗಿದೆ. ಪ್ರಕೃತಿಯ ಸಂರಕ್ಷಣೆಗೆ ಆದ್ಯತೆ ನೀಡುವ ಮೂಲಕ ಚಾರಣದ ಸಂದರ್ಭದಲ್ಲಿ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಲಾಗಿದೆ.
ಇನ್ನೊಂದೆಡೆ, ಕುಕ್ಕೆ ಸುಬ್ರಹ್ಮಣ್ಯ ಮಾರ್ಗದ ಮೂಲಕ ಕುಮಾರ ಪರ್ವತ ಚಾರಣ ಆರಂಭಿಸಲು ಈವರೆಗೆ ದಿನಾಂಕ ನಿಗದಿಯಾಗಿಲ್ಲ.
-
ನಿಧನ ವಾರ್ತೆ7 hours agoPuttur-ಮುಕ್ರಂಪಾಡಿಯಲ್ಲಿ ಸ್ಕೂಟರ್–ರಿಕ್ಷಾ ಡಿಕ್ಕಿ: ಪುತ್ತೂರು ಅಂಚೆ ಇಲಾಖೆ ಮಹಿಳಾ ಸಿಬ್ಬಂದಿ ಮೃತ್ಯು
-
ಶಿಕ್ಷಣ22 hours agoVidyamata Academy-ವಿದ್ಯಾಮಾತಾ ಅಕಾಡೆಮಿಯಲ್ಲಿ ಮೂರು ದಿನಗಳ “ವಾಯ್ಸ್ ಅಂಡ್ ವಿಷನ್” ತರಬೇತಿ ಕಾರ್ಯಕ್ರಮ ಮತ್ತು ಶಾರದಾ ಪೂಜೆ
-
ಅಪರಾಧ6 hours agoHigh Court-ಕೊಳತ್ತಮಜಲು ರಹ್ಮಾನ್ ಕೊಲೆ ಪ್ರಕರಣ: ಭರತ್ ಕುಮ್ಡೇಲ್ ಸೇರಿ 8 ಆರೋಪಿಗಳ ಜಾಮೀನಿಗೆ ಹೈಕೋರ್ಟ್ ತಡೆ
-
ಸ್ಥಳೀಯ6 hours agoKumara Parvata-ಅ.18ರಿಂದ ಕುಮಾರ ಪರ್ವತ ಚಾರಣಕ್ಕೆ ಅನುಮತಿ
-
Uncategorized22 hours agoHYDGEN Innovation Day-HYDGEN ಇನ್ನೋವೇಶನ್ ಡೇ 2026 ಕಾರ್ಯಕ್ರಮ; ಮಂಗಳೂರಿನಲ್ಲಿ 20 ಮೆಗಾವ್ಯಾಟ್ (MW) ಸಾಮರ್ಥ್ಯದ ಎಲೆಕ್ಟ್ರೋಲೈಸರ್ ಉತ್ಪಾದನಾ ಘಟಕವನ್ನು ಉದ್ಘಾಟಿಸಿದ HYDGEN; 250 ಕಿಲೋವ್ಯಾಟ್ (kW) ಸಾಮರ್ಥ್ಯದ AEM ಮತ್ತು PEM ಎಲೆಕ್ಟ್ರೋಲೈಸರ್ಗಳ ಅನಾವರಣ
-
Uncategorized22 hours agoPhilomena-ವಿಶ್ವವಿದ್ಯಾನಿಲಯ ಮಟ್ಟದ ಯೂತ್ ರೆಡ್ಕ್ರಾಸ್ ಪ್ರೇರಣಾ ಶಿಬಿರ-2026: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಗರಿ
-
ಶಿಕ್ಷಣ22 hours agoVivekananda-ವಿವೇಕಾನಂದ ಕಾಲೇಜಿನಲ್ಲಿ ವಂದೇ ಮಾತರಂ 150ನೇ ವರ್ಷದ ಆಚರಣೆ; ವಂದೇ ಮಾತರಂ ಗೀತೆ ನಮ್ಮ ಅಸ್ಮಿತೆಯ ಗುರುತು : ರಾಜೇಶ ಪದ್ಮಾರ್
-
ಶಿಕ್ಷಣ22 hours agoSahyadri-ವಿಟಿಯು ಮಂಗಳೂರು ವಿಭಾಗದ ಹ್ಯಾಂಡ್ಬಾಲ್ ಪಂದ್ಯಾವಳಿಯಲ್ಲಿ ಸಹ್ಯಾದ್ರಿ ಪುರುಷರ ತಂಡಕ್ಕೆ ರನ್ನರ್-ಅಪ್ ಪ್ರಶಸ್ತಿ


















