ಮಂಗಳೂರು
SLV Book House-ಮಂಗಳೂರು: ಟೈಮ್ಸ್ ಬಿಸಿನೆಸ್ ಅವಾರ್ಡ್ಸ್: ಎಸ್ ಎಲ್ ವಿ ಬುಕ್ ಹೌಸ್ ಗೆ “ವಿಶ್ವಾಸಾರ್ಹ ಶಾಲಾ ಸಾಮಗ್ರಿಗಳ ಬ್ರ್ಯಾಂಡ್” ವಿಭಾಗದಲ್ಲಿ ಪ್ರಶಸ್ತಿ
ದ ಟೈಮ್ಸ್ ಆಫ್ ಇಂಡಿಯಾ ಆಯೋಜಿಸಿದ್ದ ಟೈಮ್ಸ್ ಬಿಸಿನೆಸ್ ಅವಾರ್ಡ್ಸ್ & ಕಾಂಕ್ಲೇವ್ 2026 ಕಾರ್ಯಕ್ರಮವು ಮಂಗಳೂರಿನ ಅವತಾರ್ ಹೋಟೆಲ್ನಲ್ಲಿ ನಡೆಯಿತು. ಮಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿ ಭಾಗಗಳ ವಿವಿಧ ಕ್ಷೇತ್ರಗಳ ಉದ್ಯಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪುಸ್ತಕ ಮಾರಾಟ ಮಳಿಗೆಯಲ್ಲಿ ರಾಜ್ಯದ್ಯಂತ ಹೆಸರುವಾಸಿಯಾದ SLV ಬುಕ್ ಹೌಸ್ಗೆ ಟೈಮ್ಸ್ ಬಿಸಿನೆಸ್ ಎವಾರ್ಡ್ ನೀಡಿ ಗೌರವಿಸಲಾಯಿತು.
ಮಂಗಳೂರು, ಫೆ.26: ದ ಟೈಮ್ಸ್ ಆಫ್ ಇಂಡಿಯಾ ಆಯೋಜಿಸಿದ್ದ ಟೈಮ್ಸ್ ಬಿಸಿನೆಸ್ ಅವಾರ್ಡ್ಸ್ & ಕಾಂಕ್ಲೇವ್ 2026 ಕಾರ್ಯಕ್ರಮವು ಮಂಗಳೂರಿನ ಅವತಾರ್ ಹೋಟೆಲ್ನಲ್ಲಿ ನಡೆಯಿತು. ಮಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿ ಭಾಗಗಳ ವಿವಿಧ ಕ್ಷೇತ್ರಗಳ ಉದ್ಯಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪುಸ್ತಕ ಮಾರಾಟ ಮಳಿಗೆಯಲ್ಲಿ ರಾಜ್ಯದ್ಯಂತ ಹೆಸರುವಾಸಿಯಾದ SLV ಬುಕ್ ಹೌಸ್ಗೆ ಟೈಮ್ಸ್ ಬಿಸಿನೆಸ್ ಎವಾರ್ಡ್ ನೀಡಿ ಗೌರವಿಸಲಾಯಿತು.
ವಿವಿಧ ಉದ್ಯಮ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಸಂಸ್ಥೆಗಳು ಮತ್ತು ಉದ್ಯಮಿಗಳನ್ನು ಆಯ್ಕೆ ಮಾಡಿ ಅವರಿಗೆ ಪ್ರಶಸ್ತಿ ಹಾಗೂ ಪ್ರಮಾಣಪತ್ರ ನೀಡಲಾಯಿತು.
ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಶಸ್ತಿಗಳನ್ನು ಪ್ರದಾನಿಸಿದರು.

ಎಸ್ಎಲ್ವಿ ಬುಕ್ ಹೌಸ್ ಸಂಸ್ಥೆಗೆ “ವಿಶ್ವಾಸಾರ್ಹ ಶಾಲಾ ಸಾಮಗ್ರಿಗಳ ಬ್ರ್ಯಾಂಡ್” ವಿಭಾಗದಲ್ಲಿ ಪ್ರಶಸ್ತಿ ಲಭಿಸಿತು. ಸಂಸ್ಥೆಯ ಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ದಿವಾಕರ್ ದಾಸ್ ನೇರ್ಲಾಜೆಯವರು ಮತ್ತು ಎಸ್ ಎಲ್ ವಿ ಬುಕ್ ಹೌಸ್ ನ ಪ್ರಧಾನ ವ್ಯವಸ್ಥಾಪಕರಾದ ರಾಜಾ ಅಂಚನ್ ರವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಚಂದ್ರಕಾಂತ್ ಬೆಂಗಳೂರು, ರಾಮ್ ದಾಸ್ ಶೆಟ್ಟಿ ವಿಟ್ಲ, ಯೋಗೀಶ್ ನೇರ್ಲಾಜೆ, ಅಮಿತ್ ಮೈಸೂರು ಉಪಸ್ಥಿತರಿದ್ದರು.
ಪ್ರಶಸ್ತಿ ಸ್ವೀಕರಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ದಿವಾಕರ್ ದಾಸ್ ರವರು ಈ ಪ್ರಶಸ್ತಿಯನ್ನು ನಾವು ಗ್ರಾಹಕರಿಗೆ ನೀಡಿದ ಉತ್ತಮ ಸೇವೆಯಿಂದ ಈ ಪ್ರಶಸ್ತಿ ಲಭಿಸಿದೆ. ಹಾಗಾಗಿ ಈ ಪ್ರಶಸ್ತಿಯನ್ನು ನಮ್ಮ ಗ್ರಾಹಕರಿಗೆ ಮತ್ತು ಗ್ರಾಹಕಾರೊಂದಿಗೆ ವಿಶೇಷ ಸೇವೆಯನ್ನು ನೀಡಿದ ನಮ್ಮ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳಿಗೂ ಈ ಪ್ರಶಸ್ತಿಯನ್ನು ಅರ್ಪಿಸುತ್ತಿದ್ದೇನೆ ಎಂದರು.
ರಾಜ್ಯಾದ್ಯಂತ ಪುಸ್ತಕ ಮಾರಾಟ ಮಳಿಗೆಯಲ್ಲಿ ಹೆಸರುವಾಸಿಯಾದ SLV ಬುಕ್ ಹೌಸ್ ಬೆಂಗಳೂರು, ಮೈಸೂರು, ಚಾಮರಾಜನಗರ, ಪುತ್ತೂರು, ಮೂಡಬಿದ್ರೆ, ಮಂಗಳೂರಿನ ಬಿಜೈ, ಮೇರಿಹಿಲ್, ಮಾರ್ನೆಮಿ ಕಟ್ಟೆ, ಕೊಡಿಯಾಲ್ ಬೈಲ್ ನಲ್ಲಿ ಕಾರ್ಯಾಚರಿಸುತ್ತಿರುತ್ತಿದ್ದು , ಇದೀಗ ಕೊಡಗಿನ ಕುಶಾಲನಗರದಲ್ಲಿ ಕೆಲವೇ ದಿನಗಳಲ್ಲಿ ಹೊಸ ಶಾಖೆ ಶುಭಾರಂಭಗೊಳ್ಳಲಿದೆ.
ಮಂಗಳೂರು
Sudhir Kumar Reddy-ಭಾರತ ಮಾತೆಯ ಹೆಸರಿನಲ್ಲಿ ಕಾನೂನು ಉಲ್ಲಂಘನೆ ಸಲ್ಲದು – ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಖಡಕ್ ಸ್ಪಷ್ಟನೆ..!
“ಭಾರತ್ ಮಾತಾ ಕೀ ಜೈ ಎಂದಿದ್ದಕ್ಕೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಹಾಗೂ ಪ್ರತಿಭಟನೆ ನಡೆಸಿದ್ದಕ್ಕೆ ಬಾಂಡ್ ಕೇಳಿದ್ದಾರೆ” ಎಂಬ ಎಬಿವಿಪಿ (ABVP) ಮತ್ತು ಬಿಜೆಪಿ ನಾಯಕರ ಆರೋಪ ಹಾಗೂ ಆಕ್ಷೇಪಗಳಿಗೆ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಕಟ್ಟುನಿಟ್ಟಿನ ಪ್ರತಿಕ್ರಿಯೆ ನೀಡಿದ್ದಾರೆ.
“ಭಾರತ್ ಮಾತಾ ಕೀ ಜೈ ಎಂದಿದ್ದಕ್ಕೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಹಾಗೂ ಪ್ರತಿಭಟನೆ ನಡೆಸಿದ್ದಕ್ಕೆ ಬಾಂಡ್ ಕೇಳಿದ್ದಾರೆ” ಎಂಬ ಎಬಿವಿಪಿ (ABVP) ಮತ್ತು ಬಿಜೆಪಿ ನಾಯಕರ ಆರೋಪ ಹಾಗೂ ಆಕ್ಷೇಪಗಳಿಗೆ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಕಟ್ಟುನಿಟ್ಟಿನ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಖಾಕಿ ತೊಡುವಾಗಲೇ ದೇಶದ ರಕ್ಷಣೆಗಾಗಿ ಪಣ ತೊಡುತ್ತೇವೆ. ಆದರೆ, ದೇಶಪ್ರೇಮ ಹಾಗೂ ‘ಭಾರತ್ ಮಾತಾ ಕೀ ಜೈ’ ಘೋಷಣೆಯನ್ನು ಗುರಾಣಿಯನ್ನಾಗಿ ಹಿಡಿದು ಯಾರು ಕೂಡ ಕಾನೂನು ವಿರೋಧಿ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, “ದೇಶದ ಪರ ಜೈಕಾರ ಹಾಕುವುದು ಹಾಗೂ ಆ ಮೂಲಕ ತಾವು ಮಾಡಿರುವ ತಪ್ಪನ್ನು ಮುಚ್ಚಿಹಾಕಲು ಯತ್ನಿಸಿ ಸಾರ್ವಜನಿಕರ ಗಮನ ಬೇರೆಡೆ ಸೆಳೆಯುವುದರಿಂದ ದೇಶಕ್ಕೆ ಯಾವುದೇ ಗೌರವ ಸಲ್ಲಿಸಿದಂತಾಗುವುದಿಲ್ಲ” ಎಂದು ತಿರುಗೇಟು ನೀಡಿದ್ದಾರೆ. ಪ್ರತಿಭಟನೆ ನಡೆಸುವುದಕ್ಕೆ ನಾವು ಯಾವುದೇ ನಿಷೇಧ ಹೇರಿರಲಿಲ್ಲ. ಬದಲಿಗೆ ಸ್ಥಳದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಕೆಲವು ಕಡ್ಡಾಯ ಷರತ್ತುಗಳನ್ನು ವಿಧಿಸಿದ್ದೆವು. ಆದರೆ ಸಂಬಂಧಪಟ್ಟ ವಿದ್ಯಾರ್ಥಿಗಳು ಪ್ರತಿಭಟನೆಗೆ ಪೂರ್ವಾನುಮತಿ ತೆಗೆದುಕೊಂಡಿರಲಿಲ್ಲ. ಅಥವಾ ಪೊಲೀಸರಿಗೆ ಯಾವುದೇ ಅಧಿಕೃತ ಮಾಹಿತಿಯನ್ನೂ ನೀಡಿರಲಿಲ್ಲ. ಆದರೂ ಕಾಲೇಜು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅವರ ವಿರುದ್ಧ ಯಾವುದೇ ಕಠಿಣ ಕ್ರಮ ಜರುಗಿಸಿರಲಿಲ್ಲ ಎಂದು ತಿಳಿಸಿದ್ದಾರೆ.
“ಆದರೆ ಸ್ಥಳೀಯರಲ್ಲದೆ ಹೊರಗಡೆಯಿಂದ ಬಂದ ವ್ಯಕ್ತಿಗಳು ಪ್ರತಿಭಟನೆಗೆ ಇಳಿದಾಗ ಮತ್ತು ಕಾಲೇಜು ಆಡಳಿತ ಮಂಡಳಿಯಿಂದ ಈ ಬಗ್ಗೆ ದೂರು ಬಂದಾಗ ಪೊಲೀಸರು ಸುಮ್ಮನಿರಲು ಸಾಧ್ಯವಿಲ್ಲ. ಸ್ಥಳದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಬರುವ ಆತಂಕವಿದ್ದ ಕಾರಣ ಅಲ್ಲಿದ್ದ ಕೆಲವರನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಮುಂದೆಯೂ ಇಂತಹ ಕೃತ್ಯಗಳಲ್ಲಿ ತೊಡಗಬಾರದೆಂದು ಮುನ್ನೆಚ್ಚರಿಕೆಗಾಗಿ ಬಾಂಡ್ ಬರೆದುಕೊಡುವಂತೆ ಕೋರಲಾಗಿತ್ತು. ಆದರೆ ವಿದ್ಯಾರ್ಥಿಗಳ ಮನವಿ ಹಾಗೂ ಅವರ ಶೈಕ್ಷಣಿಕ ಭವಿಷ್ಯಕ್ಕೆ ಯಾವುದೇ ಅಡಚಣೆಯಾಗಬಾರದೆಂಬ ಕಾರಣಕ್ಕೆ ಅಂತಿಮವಾಗಿ ಆ ರೀತಿಯ ಯಾವುದೇ ಬಾಂಡ್ ಪಡೆದಿರಲಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.
ಮಂಗಳೂರು
D.K. Shivakumar-ಅ.15ರಂದು ಮಂಗಳೂರು, ಉಡುಪಿ ಜಿಲ್ಲೆಗೆ ಡಿ.ಕೆ. ಶಿವಕುಮಾರ್ ಭೇಟಿ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಕ್ಟೋಬರ್ 15ರ ಗುರುವಾರ ಮಂಗಳೂರು ಹಾಗೂ ಉಡುಪಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಗುರುವಾರ ಮಧ್ಯಾಹ್ನ 4.10ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅವರು, ಸಂಜೆ 4.40ಕ್ಕೆ ಕಾಪು ಉಚ್ಚಿಲದಲ್ಲಿ ನಡೆಯುವ ದಸರಾ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ, ಮಹಿಳಾ ದಸರಾವನ್ನು ಉದ್ಘಾಟಿಸಲಿದ್ದಾರೆ.
ಮಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಕ್ಟೋಬರ್ 15ರ ಗುರುವಾರ ಮಂಗಳೂರು ಹಾಗೂ ಉಡುಪಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಗುರುವಾರ ಮಧ್ಯಾಹ್ನ 4.10ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅವರು, ಸಂಜೆ 4.40ಕ್ಕೆ ಕಾಪು ಉಚ್ಚಿಲದಲ್ಲಿ ನಡೆಯುವ ದಸರಾ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ, ಮಹಿಳಾ ದಸರಾವನ್ನು ಉದ್ಘಾಟಿಸಲಿದ್ದಾರೆ.
ಬಳಿಕ ಸಂಜೆ 6.30ಕ್ಕೆ ಮಂಗಳೂರಿನಲ್ಲಿ ನಡೆಯುವ ಮಂಗಳೂರು ದಸರಾ ನವರಾತ್ರಿ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾತ್ರಿ 8 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಲಿರುವ ಅವರು, ಅಲ್ಲಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳೂರು
Dakshina Kannada-ದಕ್ಷಿಣ ಕನ್ನಡ ಜಿಲ್ಲೆಗೆ ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಪ್ರಸ್ತಾವ: ಸಾರ್ವಜನಿಕ ಅಭಿಪ್ರಾಯ ಆಹ್ವಾನಿಸಿದ ಸರ್ಕಾರ
ದಕ್ಷಿಣ ಕನ್ನಡ ಜಿಲ್ಲೆಯನ್ನು ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರ ಉದ್ದೇಶಿಸಿದ್ದು, ಈ ಕುರಿತು ಸಾರ್ವಜನಿಕರಿಂದ ಸಲಹೆ ಹಾಗೂ ಅಭಿಪ್ರಾಯಗಳನ್ನು ಆಹ್ವಾನಿಸಿದೆ. ಅಧಿಸೂಚನೆ ರಾಜ್ಯ ಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ 30 ದಿನಗಳೊಳಗೆ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಬಹುದಾಗಿದೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯನ್ನು ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರ ಉದ್ದೇಶಿಸಿದ್ದು, ಈ ಕುರಿತು ಸಾರ್ವಜನಿಕರಿಂದ ಸಲಹೆ ಹಾಗೂ ಅಭಿಪ್ರಾಯಗಳನ್ನು ಆಹ್ವಾನಿಸಿದೆ. ಅಧಿಸೂಚನೆ ರಾಜ್ಯ ಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ 30 ದಿನಗಳೊಳಗೆ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಬಹುದಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವಂತೆ ರಾಜಕಾರಣಿಗಳು, ಸಾಮಾಜಿಕ ಚಿಂತಕರು, ಸರ್ವಧರ್ಮಗಳ ಹಿರಿಯರು ಹಾಗೂ ಜಿಲ್ಲೆಯ ವಿವಿಧ ಸಂಘಟನೆಗಳಿಂದ ಸರ್ಕಾರಕ್ಕೆ ಹಲವು ಮನವಿಗಳು ಸಲ್ಲಿಕೆಯಾಗಿವೆ. ಸಾರ್ವಜನಿಕರ ಬೇಡಿಕೆ ಹಾಗೂ ಆಡಳಿತಾತ್ಮಕ ಅನುಕೂಲತೆಗಳನ್ನು ಪರಿಗಣಿಸಿ ಈ ಪ್ರಸ್ತಾವವನ್ನು ಸರ್ಕಾರ ಮುಂದಿಟ್ಟಿದೆ.
ಭಾರತ ಸರ್ಕಾರದ ಗೃಹ ಸಚಿವಾಲಯದ 1953ರ ಸೆಪ್ಟೆಂಬರ್ 11ರ ಮಾರ್ಗಸೂಚಿಗಳು ಹಾಗೂ ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಸೆಕ್ಷನ್ 4(4A) ಅಡಿಯಲ್ಲಿ ಲಭ್ಯವಿರುವ ಅಧಿಕಾರಗಳನ್ವಯ ಮರುನಾಮಕರಣ ಪ್ರಕ್ರಿಯೆ ಕೈಗೊಳ್ಳಲು ಉದ್ದೇಶಿಸಲಾಗಿದೆ.
ಈ ಸಂಬಂಧ ಸಾರ್ವಜನಿಕರು ತಮ್ಮ ಸಲಹೆ ಮತ್ತು ಆಕ್ಷೇಪಣೆಗಳನ್ನು ಲಿಖಿತ ರೂಪದಲ್ಲಿ ಅಥವಾ ಇ-ಮೇಲ್ ಮೂಲಕ ಸರ್ಕಾರಕ್ಕೆ ಸಲ್ಲಿಸಬಹುದು. ಸ್ವೀಕೃತವಾಗುವ ಅಭಿಪ್ರಾಯಗಳನ್ನು ಪರಿಶೀಲಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅಭಿಪ್ರಾಯ ಸಲ್ಲಿಸಬೇಕಾದ ವಿಳಾಸಗಳು
- ಮುಖ್ಯಮಂತ್ರಿಯವರ ಸಚಿವಾಲಯ, ಕೊಠಡಿ ಸಂಖ್ಯೆ: 235, 2ನೇ ಮಹಡಿ, ವಿಧಾನಸೌಧ, ಬೆಂಗಳೂರು – 560001; ಇ-ಮೇಲ್: cm.kar@nic.in
- ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ, ಕೊಠಡಿ ಸಂಖ್ಯೆ: 711, 7ನೇ ಮಹಡಿ, ಬಹುಮಹಡಿಗಳ ಕಟ್ಟಡ, ಡಾ. ಬಿ.ಆರ್. ಅಂಬೇಡ್ಕರ್ ವೀದಿ, ಬೆಂಗಳೂರು – 560001; ಇ-ಮೇಲ್: Prs.revenue@gmail.com
- ಗಮನಿಸಿ: ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಅಧಿಸೂಚನೆ ರಾಜ್ಯ ಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ 30 ದಿನಗಳೊಳಗೆ ಸಲ್ಲಿಸಬೇಕು.
-
ಸ್ಥಳೀಯ13 hours agoNavoor clinic-ನಾವೂರು ಕ್ಲಿನಿಕ್ಗೆ ಬೆಂಕಿ ಪ್ರಕರಣ: ರವಿ ಪೂಜಾರಿ ಬಂಧನ, ಇಬ್ಬರು ಶಂಕಿತರ ವಿಚಾರಣೆ
-
ರಾಜಕೀಯ7 hours agoH.D. Kumaraswamy-ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ : ಬಾಂಬ್ ಸಿಡಿಸಿದ ಎಚ್.ಡಿ. ಕುಮಾರಸ್ವಾಮಿ – ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಷಡ್ಯಂತ್ರದಲ್ಲಿ ಕೃಪಾ ಆಳ್ವ..! ಗಂಭೀರ ಆರೋಪ
-
ಅಪರಾಧ11 hours agoB.R. Shetty-ಬ್ಯಾಂಕ್ ಆಫ್ ಬರೋಡಾ ವಿರುದ್ಧ ಯುಎಇ ಎಕ್ಸ್ಚೇಂಜ್ ಸಂಸ್ಥೆಗಳ ಸ್ಥಾಪಕ ಬಿ.ಆರ್. ಶೆಟ್ಟಿ ಕಾನೂನು ಸಮರ; ₹1.25 ಲಕ್ಷ ಕೋಟಿ ಪರಿಹಾರ ಬೇಡಿಕೆ
-
ಅಪರಾಧ7 hours agoPuttur-ಪುತ್ತೂರಿನಲ್ಲಿ ಅಕ್ರಮ ಲಾಟರಿ ಮಾರಾಟ: ಇಬ್ಬರು ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲು
-
ಮಂಗಳೂರು7 hours agoSudhir Kumar Reddy-ಭಾರತ ಮಾತೆಯ ಹೆಸರಿನಲ್ಲಿ ಕಾನೂನು ಉಲ್ಲಂಘನೆ ಸಲ್ಲದು – ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಖಡಕ್ ಸ್ಪಷ್ಟನೆ..!
-
ಬಿಗ್ ನ್ಯೂಸ್13 hours agoRenukashwami murder case-ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು: ಮಾಫಿ ಸಾಕ್ಷಿ ಅರ್ಜಿ ವಾಪಸ್ ಪಡೆದ ಎ10 ವಿನಯ್
-
ಅಂತರ ರಾಜ್ಯ13 hours agoMurder case-ಮೀರತ್ ಬ್ಲೂ ಡ್ರಮ್ ಕೊಲೆ ಪ್ರಕರಣ: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ಗೆ ಗಲ್ಲು ಶಿಕ್ಷೆ..!
-
ರಾಜಕೀಯ11 hours agoAmal Ramachandra-ಒಳ್ಳೆಯ ರೀತಿಯಲ್ಲಿ ಬೆಳೆವಿಮೆ ಬಂದರೆ ಮೋದಿಯಿಂದಾಗಿ ಎಂದು ಬೊಬ್ಬೆ ಹಾಕುತ್ತಿದ್ದ ಬಿಜೆಪಿ ಈಗ ಕಾಂಗ್ರೆಸ್ ನ್ನು ದೂರುತ್ತಿದೆ..! ಟರ್ಮ್ ಶೀಟ್ ಬದಲಾವಣೆ ಮಾಡಿದ್ದು ಬಿಜೆಪಿ ಈ ಬಗ್ಗೆ ದಾಖಲೆಯಿದೆ; ಅಶೋಕ್ ರೈ ಹುಟ್ಟಿಸಿದ ಲಿಸ್ಟ್ ಕೊಡ್ತೇನೆ 8 ವರ್ಷಗಳಲ್ಲಿ ಬೆಳ್ತಂಗಡಿಯಲ್ಲಿ ಪೂಂಜಾ ಹುಟ್ಟಿಸಿದ್ದೇನೂ..? ಪುಡಾ ಅಧ್ಯಕ್ಷ ಅಮಳ ರಾಮಚಂದ್ರ


















