ಸ್ಥಳೀಯ
YouTuber Abhishek-ಯೂಟ್ಯೂಬ್ ಹಾಗೂ ಟಿವಿಯಲ್ಲಿ ಸುಳ್ಳು ಆರೋಪ – ಮಾನಸಿಕ ಕಿರುಕುಳ : ಯೂಟ್ಯೂಬರ್ ಅಭಿಷೇಕ್ ರಿಂದ ಪೊಲೀಸರಿಗೆ ದೂರು
ಯೂಟ್ಯೂಬರ್ ಅಭಿಷೇಕ್ ಅವರು ತಮ್ಮ ವಿರುದ್ಧ ಟಿವಿಯಲ್ಲಿ ಸುಳ್ಳು ಆರೋಪ ಮಾಡಿ ತನಗೆ ಹಾಗೂ ತನ್ನ ಕುಟುಂಬಕ್ಕೆ ಮಾನಸಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆ ಸುಮಂತ್ ಎನ್ನುವವರ ವಿರುದ್ಧ ಚನ್ನರಾಯಪಟ್ಟಣ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಯೂಟ್ಯೂಬರ್ ಅಭಿಷೇಕ್ ಅವರು ತಮ್ಮ ವಿರುದ್ಧ ಟಿವಿಯಲ್ಲಿ ಸುಳ್ಳು ಆರೋಪ ಮಾಡಿ ತನಗೆ ಹಾಗೂ ತನ್ನ ಕುಟುಂಬಕ್ಕೆ ಮಾನಸಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆ ಸುಮಂತ್ ಎನ್ನುವವರ ವಿರುದ್ಧ ಚನ್ನರಾಯಪಟ್ಟಣ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರಿನಲ್ಲೇನಿದೆ?
ವೃತ್ತಿಯಿಂದ ಯೂಟ್ಯೂಬರ್ ಆಗಿದ್ದು, “United Media” ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಸಾರ್ವಜನಿಕ ಹಿತಾಸಕ್ತಿ, ವಿಷಯಗಳು, ಸಂದರ್ಶನಗಳು ಮತ್ತು ಸುದ್ದಿಗಳನ್ನು ನಾನು ಪ್ರಸಾರ ಮಾಡುತ್ತಿದ್ದೇನೆ. ಕಳೆದ 6 ತಿಂಗಳಿನಿಂದ ಧರ್ಮಸ್ಥಳ ಪ್ರಕರಣ ಸಂಬಂಧಿಸಿದಂತೆ ಸಾರ್ವಜನಿಕ ಮಾಹಿತಿಯ ಆಧಾರದ ಮೇಲೆ ಗ್ರೌಂಡ್ ರಿಪೋರ್ಟ್ ಮಾಡಿ ಜನತೆಗೆ ತಲುಪಿಸಿದ್ದೇನೆ. ಈ ಹಿನ್ನೆಲೆಯಲ್ಲಿ, ನನಗೆ ತಿಳಿದಿರುವ ಕೆಲವು ಒಳಗಿನ ಮಾಹಿತಿಗಳನ್ನು ತಿಳಿದುಕೊಳ್ಳುವುದಕ್ಕಾಗಿ ವಿಶೇಷ ತನಿಖಾ ತಂಡ ನನ್ನನ್ನು ವಿಚಾರಣೆಗೆ ಕರೆಸಿದ್ದು, ನಾನು ಯಾವುದೇ ಆರೋಪಿತನಲ್ಲ.
ಆದರೆ ಸುಮಂತ್ (Golden Kannadiga YouTube channel owner) ಎಂಬ ವ್ಯಕ್ತಿ, ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ, ವಿವಿಧ ಮಾಧ್ಯಮಗಳಲ್ಲಿ ಪ್ರಚಾರಗೊಳಿಸಿದ್ದಾನೆ. ನಾನು ಧರ್ಮಸ್ಥಳ ದೇವಸ್ಥಾನದ ವಿರುದ್ಧ ಹಣ ಪಡೆದು ವಿಡಿಯೋ ಮಾಡುತ್ತಿರುವುದು, ಆತನಿಗೂ ಹಣ ಕೊಟ್ಟು ದೇವಸ್ಥಾನದ ವಿರುದ್ಧ ವಿಡಿಯೋ ಮಾಡಿಸಬೇಕೆಂದು ಪ್ರೇರೇಪಿಸಿರುವುದು, ನಾನು ಚಂದನ್ ಗೌಡ (Newz Alert) ರವರಿಗೆ ಹಣ ನೀಡಿ ದೇವಸ್ಥಾನದ ವಿರುದ್ಧ ವಿಡಿಯೋ ಮಾಡಿತ್ತಿರುವುದು, ನನ್ನ ಯೂಟ್ಯೂಬ್ ಕ್ಯಾಮೆರಾವನ್ನು ಧರ್ಮಸ್ಥಳ ವಿರೋಧಿ ವ್ಯಕ್ತಿಗಳಿಂದ ಉಡುಗೊರೆಯಾಗಿ ಪಡೆದಿದ್ದೇನೆ ಎಂಬಿತ್ಯಾದಿ ಸುಳ್ಳು ಸುದ್ದಿಯನ್ನು ಸುಮಂತ್ ಪ್ರಚಾರಗೊಳಿಸಿದ್ದಾನೆ.
ನಾನು ಎಂದಿಗೂ ದೇವಸ್ಥಾನದ ವಿರುದ್ಧ ವಿಡಿಯೋ ಮಾಡಿಲ್ಲ :
ನಾನು ಮಾಡಿದದ್ದು ಸಮಾಜಕ್ಕೆ ಸಂಬಂಧಿಸಿದ ವಿಷಯಗಳ ಕುರಿತಷ್ಟೇ. ಸುಮಂತ್ ನನ್ನ ಸ್ನೇಹಿತನಲ್ಲ; ಕೇವಲ 6 ತಿಂಗಳ ಹಿಂದೆ ಒಂದು ಕಾರ್ಯಕ್ರಮದಲ್ಲಿ ನನ್ನ ಸಂಪರ್ಕವನ್ನು ಪಡೆದನು. ಹಣದ ಮಾತು ಎಂದಿಗೂ ನಡೆದಿಲ್ಲ. ಚಂದನ್ ಗೌಡ ರವರು ನನ್ನ ಆತ್ಮೀಯ ಸ್ನೇಹಿತರು, ನಾನು ಹಿಂದೆ ಅವರೊಟ್ಟಿಗೆ ಅವರ ಮಾದ್ಯಮದಲ್ಲಿ ಕೆಲಸ ಮಾಡಿದ್ದೆ. ನನ್ನ ಯೂಟ್ಯೂಬ್ ಕ್ಯಾಮೆರಾವನ್ನು ನನ್ನ ಪೋಷಕರು ತಮ್ಮ ಹಣದಲ್ಲಿ ಖರೀದಿಸಿದ್ದಾರೆ, ಯಾವುದೇ “ವಿರೋಧಿ ಗುಂಪು”ಗಳಿಂದ ಅಲ್ಲ. SIT ನನಗೆ ವಿಚಾರಣೆಗಾಗಿ ಕರೆಸಿದ್ದು, ನಾನು ಮಾಡಿದ ಗೌಂಡ್ ರಿಪೋರ್ಟ್ ಹಾಗೂ ಒಳಗಿನ ಮಾಹಿತಿಗಳನ್ನು ಪಡೆಯಲು ಮಾತ್ರ, ಯಾವುದೇ ಅಪರಾಧ ಸಂಬಂಧದಿಂದಲ್ಲ ಎಂದು ತಿಳಿಸಿದ್ದಾರೆ.
ಈ ಎಲ್ಲಾ ಸುಳ್ಳು ಆರೋಪಗಳನ್ನು ಸುಮಂತ್ ತನ್ನ ಯೂಟ್ಯೂಬ್ ಚಾನೆಲ್ ಮಾತ್ರವಲ್ಲದೆ ಹಲವು ಪ್ರಮುಖ ಮಾಧ್ಯಮಗಳಲ್ಲಿ (TV9 ಕನ್ನಡ, ಸುವರ್ಣ ನ್ಯೂಸ್, ಪಬ್ಲಿಕ್ ಟಿವಿ, ಪವರ್ ಟಿವಿ, NDTV, ಹಾಗೂ ಅನೇಕ ಯೂಟ್ಯೂಬ್ ನ್ಯೂಸ್ ಚಾನೆಲ್‌ಗಳಲ್ಲಿ) ಪ್ರಚಾರ ಮಾಡಿದ್ದಾನೆ. ಇದರಿಂದ ನನ್ನ ಹಾಗೂ ನನ್ನ ಕುಟುಂಬದ ಗೌರವಕ್ಕೆ ತೀವ್ರ ಹಾನಿಯಾಗಿದೆ. ಸಮಾಜದಲ್ಲಿ ನಮ್ಮ ಬಗ್ಗೆ ತಪ್ಪು ಭಾವನೆ ಉಂಟಾಗಿದೆ. ನಾವು ತೀವ್ರ ಮಾನಸಿಕ ಒತ್ತಡ ಮತ್ತು ಹಿಂಸೆ ಅನುಭವಿಸುತ್ತಿದ್ದೇವೆ.
ಹಾಗಾಗಿ ಸುಮಂತ್ ವಿರುದ್ಧ, ಸೂಕ್ತ ಕಾನೂನು ಅಡಿಯಲ್ಲಿ ಪ್ರಕರಣ ದಾಖಲಿಸಿ ತಕ್ಷಣ ಕ್ರಮ ಕೈಗೊಳ್ಳಬೇಕಾಗಿ ವಿನಂತಿಸುತ್ತೇನೆ ಎಂದು ಯೂಟ್ಯೂಬರ್ ಅಭಿಷೇಕ್ ತಾವು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸ್ಥಳೀಯ
Kalaburagi-ಕಲಬುರಗಿ: ಪತ್ನಿಯ ಕತ್ತು ಹಿಸುಕಿ ಹತ್ಯೆ; ಆತ್ಮಹತ್ಯೆಯಂತೆ ಬಿಂಬಿಸಲು ಯತ್ನಿಸಿದ ಪತಿ ಬಂಧನ
ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬಂತೆ ಬಿಂಬಿಸಲು ಯತ್ನಿಸಿದ ಆರೋಪದ ಮೇಲೆ ಪತಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಲಬುರಗಿ: ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬಂತೆ ಬಿಂಬಿಸಲು ಯತ್ನಿಸಿದ ಆರೋಪದ ಮೇಲೆ ಪತಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಪ್ರಿಯಾಂಕಾ ಹಡಪದ್ (30) ಎಂದು ಗುರುತಿಸಲಾಗಿದೆ.
ಆಕೆಯ ಪತಿ ಸೂರ್ಯಕಾಂತ್ ಹಡಪದ್ ಕೊಲೆ ಆರೋಪಿಯಾಗಿದ್ದು, ವಕೀಲ ವೃತ್ತಿ ಮಾಡಿಕೊಂಡಿದ್ದ ಎನ್ನಲಾಗಿದೆ.
ಮಕ್ಕಳಾಗದಿರುವ ವಿಚಾರ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಸಂಬಂಧಿಸಿ ಸೂರ್ಯಕಾಂತ್ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ದಂಪತಿ ನಡುವೆ ಗಲಾಟೆ ನಡೆದಿದ್ದು, ಬಳಿಕ ಸೂರ್ಯಕಾಂತ್ ಪತ್ನಿಯ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಶಿಕ್ಷಣ
Vivekananda-ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಂತ್ರಜ್ಞಾನದ ಮಹಾಸಂಗಮ; IEEE ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಸಜ್ಜು; ಡಿಸ್ಕವರ್–2026: 1,071 ಪ್ರಬಂಧಗಳ ಪೈಕಿ 94ಕ್ಕೆ ಮಂಡನೆ ಅವಕಾಶ
ನೂತನ ತಂತ್ರಜ್ಞಾನ, ಸಂಶೋಧನೆ ಮತ್ತು ನಾವೀನ್ಯತೆಗೆ ವೇದಿಕೆಯಾಗಿರುವ IEEE ಅಂತಾರಾಷ್ಟ್ರೀಯ ಸಮ್ಮೇಳನ ‘ಡಿಸ್ಕವರ್–2026’ ಅ.9 ಮತ್ತು 10ರಂದು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ನಡೆಯಲಿದೆ.
ಪುತ್ತೂರು: ನೂತನ ತಂತ್ರಜ್ಞಾನ, ಸಂಶೋಧನೆ ಮತ್ತು ನಾವೀನ್ಯತೆಗೆ ವೇದಿಕೆಯಾಗಿರುವ IEEE ಅಂತಾರಾಷ್ಟ್ರೀಯ ಸಮ್ಮೇಳನ ‘ಡಿಸ್ಕವರ್–2026’ ಅ.9 ಮತ್ತು 10ರಂದು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ನಡೆಯಲಿದೆ.
ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ, IEEE ಬೆಂಗಳೂರು ವಿಭಾಗ ಹಾಗೂ IEEE ಮಂಗಳೂರು ಉಪವಿಭಾಗದ ಸಹಯೋಗದಲ್ಲಿ ಆಯೋಜಿಸಲಾಗಿರುವ ಸಮ್ಮೇಳನದಲ್ಲಿ ಡಿಸ್ಟ್ರಿಬ್ಯೂಟೆಡ್ ಕಂಪ್ಯೂಟಿಂಗ್, ಕಮ್ಯುನಿಕೇಶನ್, ವಿಎಲ್‌ಎಸ್‌ಐ, ಇಲೆಕ್ಟ್ರಿಕಲ್ ಸರ್ಕ್ಯೂಟ್ಸ್, ರೊಬೋಟಿಕ್ಸ್ ಹಾಗೂ ಹೆಲ್ತ್‌ಕೇರ್ ಕ್ಷೇತ್ರಗಳ ಕುರಿತು ಚರ್ಚೆ ನಡೆಯಲಿದೆ.
ದೇಶ-ವಿದೇಶಗಳಿಂದ 1,071 ಸಂಶೋಧನಾ ಪ್ರಬಂಧಗಳು ಸಲ್ಲಿಕೆಯಾಗಿದ್ದು, ಗುಣಮಟ್ಟದ ಪರಿಶೀಲನೆಯ ಬಳಿಕ 94 ಪ್ರಬಂಧಗಳನ್ನು ಮಂಡನೆಗೆ ಆಯ್ಕೆ ಮಾಡಲಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವಿಕೃಷ್ಣ ಡಿ. ಕಲ್ಲಾಜೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅ.9ರಂದು ಬೆಳಿಗ್ಗೆ 9.30ಕ್ಕೆ ಸಾವರ್ಕರ್ ಸಭಾಭವನದಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರಿನ ಐಐಎಸ್‌ಸಿ ಸೆಂಟರ್ ಆಫ್ ನ್ಯಾನೋ ಸೈನ್ಸಸ್ ಎಂಡ್ ಇಂಜಿನಿಯರಿಂಗ್‌ನ ಪ್ರೊ. ಡಾ. ನವಕಾಂತ ಭಟ್ ಮುಖ್ಯ ಅತಿಥಿಯಾಗಿ, ಟಿಸಿಎಸ್ ಹಿರಿಯ ವಿಜ್ಞಾನಿ ಹಾಗೂ IEEE ಬೆಂಗಳೂರು ವಿಭಾಗದ ಮುಖ್ಯಸ್ಥ ಡಾ. ಪ್ರಶಾಂತ್ ಮಿಶ್ರ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ರವಿಕೃಷ್ಣ ಡಿ. ಕಲ್ಲಾಜೆ ಅಧ್ಯಕ್ಷತೆ ವಹಿಸಲಿದ್ದಾರೆ.
ತಂತ್ರಜ್ಞಾನ ಕ್ಷೇತ್ರದ ದಿಗ್ಗಜರಿಂದ ವಿಚಾರ ಮಂಡನೆ
ಸಮ್ಮೇಳನದಲ್ಲಿ ಸೆಮಿಕಂಡಕ್ಟರ್ ವಿಎಲ್‌ಎಸ್‌ಐ ತಂತ್ರಜ್ಞಾನ, 6G ಸಂಪರ್ಕ ವ್ಯವಸ್ಥೆ ಹಾಗೂ ಎಐ ಆಧಾರಿತ ವಿಕೇಂದ್ರೀಕೃತ ಬುದ್ಧಿಮತ್ತೆ ಕುರಿತು ತಜ್ಞರಿಂದ ವಿಚಾರ ಮಂಡನೆ ನಡೆಯಲಿದೆ. ಡಾ. ನವಕಾಂತ ಭಟ್, ಸ್ಮಾರ್ಟ್‌ಬೀಮ್ ರೆಸೊನೆಟಿಕ್ಸ್‌ನ ಸಂಸ್ಥಾಪಕಿ ಡಾ. ಶ್ವೇತಾ ಅಮಿತ್ ಹಾಗೂ ಬ್ಲೂಟ್ ಟೆಕ್ನಾಲಜೀಸ್‌ನ ಸಂಸ್ಥಾಪಕ-ಸಿಟಿಒ ಸುದರ್ಶನ್ ಶೆನ್ವಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
‘ಸಂಶೋಧನೆ ಮತ್ತು ನಾವೀನ್ಯತೆ: ಗುಣಮಟ್ಟ, ಪ್ರಮಾಣ ಮತ್ತು ನೈತಿಕ ಆಯಾಮಗಳು’ ಕುರಿತು ವಿಶೇಷ ಚರ್ಚೆಯೂ ನಡೆಯಲಿದೆ. ಡಾ. ಪ್ರಶಾಂತ್ ಮಿಶ್ರ, ಡಾ. ನವಕಾಂತ ಭಟ್, ಡೆಲ್ ಟೆಕ್ನಾಲಜೀಸ್‌ನ ಡೇಟಾ ಸೈನ್ಸ್ ನಿರ್ದೇಶಕ ಪಂಡಿತ್ ಕುಲದೀಪ್ ಡೋಂಗ್ರೆ ಹಾಗೂ ಡಾ. ಅಂಬರ್ ಬಾಜ್‌ಪಾಯ್ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಡಾ. ಅಜಿತ್ ಹೆಬ್ಬಾರ್ ಹೊಸಮಠ ಸಮನ್ವಯಕಾರರಾಗಿರುತ್ತಾರೆ.

ಅ.10ರಂದು ಸಂಜೆ 3.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸುದರ್ಶನ್ ಶೆನ್ವಿ ಮುಖ್ಯ ಅತಿಥಿಯಾಗಿ, IEEE ಬೆಂಗಳೂರು ವಿಭಾಗದ ಡಾ. ವಾಸುದೇವ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಪ್ರಸನ್ನ ದರ್ಬೆ ಅಧ್ಯಕ್ಷತೆ ವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಾಂಶುಪಾಲ ಡಾ. ಮಹೇಶ್ ಪ್ರಸನ್ನ ಕೆ., ಡಾ. ಜೀವಿತಾ ಬಿ.ಕೆ., ಡಾ. ರಜನಿ ರೈ ಬಿ. ಹಾಗೂ ಡಾ. ಆಶ್ಲೆ ಡಿ. ಸೋಜ ಉಪಸ್ಥಿತರಿದ್ದರು.
ಬಿಗ್ ನ್ಯೂಸ್
Puttur-ಪುತ್ತೂರು : ಕೋಟಿ- ಚೆನ್ನಯ KSRTC ಬಸ್ ನಿಲ್ದಾಣದ ನಿಲ್ದಾಣಾಧಿಕಾರಿಯಾಗಿ ಕೆ. ಭಾಸ್ಕರ ಶೆಟ್ಟಿ ಬಜನಿಗುತ್ತು ಪದೋನ್ನತಿ
ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ಬಜನಿಗುತ್ತು ಕೆ.ಭಾಸ್ಕರ ಶೆಟ್ಟಿಯವರು ಸಹಾಯಕ ಸಂಚಾರ ನಿರೀಕ್ಷಕರಾಗಿ ಪದನ್ನೋತಿ ಹೊಂದಿ ಪುತ್ತೂರು ಕೋಟಿ- ಚೆನ್ನಯ KSRTC ಬಸ್ ನಿಲ್ದಾಣದ ನಿಲ್ದಾಣಾಧಿಕಾರಿಯಾಗಿ ನಿಯೋಜನೆಗೊಂಡಿದ್ದಾರೆ. 1992 ರಲ್ಲಿ ನಿರ್ವಾಹಕರಾಗಿ KSRTC ಮಂಗಳೂರು ವಿಭಾಗದಲ್ಲಿ ನೇಮಕಗೊಂಡರು.
ಪುತ್ತೂರು : ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ಬಜನಿಗುತ್ತು ಕೆ.ಭಾಸ್ಕರ ಶೆಟ್ಟಿಯವರು ಸಹಾಯಕ ಸಂಚಾರ ನಿರೀಕ್ಷಕರಾಗಿ ಪದನ್ನೋತಿ ಹೊಂದಿ ಪುತ್ತೂರು ಕೋಟಿ- ಚೆನ್ನಯ KSRTC ಬಸ್ ನಿಲ್ದಾಣದ ನಿಲ್ದಾಣಾಧಿಕಾರಿಯಾಗಿ ನಿಯೋಜನೆಗೊಂಡಿದ್ದಾರೆ.
1992 ರಲ್ಲಿ ನಿರ್ವಾಹಕರಾಗಿ KSRTC ಮಂಗಳೂರು ವಿಭಾಗದಲ್ಲಿ ನೇಮಕಗೊಂಡರು.
2022ರಲ್ಲಿ ಸಂಚಾರ ನಿಯಂತ್ರಕರಾಗಿ ಕುಕ್ಕೆ ಸುಬ್ರಹ್ಮಣ್ಯ ಬಸ್ ನಿಲ್ದಾಣದಲ್ಲಿ ಸೇವೆ ಸಲ್ಲಿಸಿದ ಭಾಸ್ಕರ ಶೆಟ್ಟಿಯವರು 2024ರಿಂದ ಪುತ್ತೂರು ಬಸ್ ನಿಲ್ದಾಣದಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸುವ ಕೌಂಟರ್ ನಲ್ಲಿ ಕಾರ್ಯನಿರ್ವಹಿಸಿ, 2026 ಜೂನ್ ನಲ್ಲಿ ಬಸ್ ನಿಲ್ದಾಣದ ಸಹಾಯಕ ಸಂಚಾರ ನಿರೀಕ್ಷಕರಾಗಿ ಪದೋನ್ನತಿ ಹೊಂದಿದ್ದಾರೆ.
ಬಜನಿಯಲ್ಲಿ ಕೃಷಿಕರಾಗಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಭಾಸ್ಕರ ಶೆಟ್ಟಿಯವರ ಪತ್ನಿ ಸೀಮಾ ಬಿ. ಶೆಟ್ಟಿ, ಹಿರಿಯ ಪುತ್ರಿ ಕು. ಸನ್ಮಿತಾ ಶೆಟ್ಟಿ ಬಿ.ಇ ಪದವೀಧರೆಯಾಗಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಉದ್ಯೋಗದಲ್ಲಿದ್ದಾರೆ.
-
ಬಿಗ್ ನ್ಯೂಸ್19 hours agoಡಿಕೆಶಿ ಸರ್ಕಾರದಿಂದ ಜನತೆಗೆ ಬಿಗ್ ಶಾಕ್ – ರೈತರಿಗೆ ಬಂಪರ್ ಗಿಫ್ಟ್..! ಹಾಲಿನ ದರ 8 ರೂ. ಏರಿಕೆ : 6 ರೂ. ರೈತರಿಗೆ..! ನ.1 ರಿಂದ ಬಹುತೇಕ ಜಾರಿ
-
ನಿಧನ ವಾರ್ತೆ23 hours agoPuttur-ಪುತ್ತೂರು: ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಪಡೆಯುತ್ತಿದ್ದ ಸ್ಕೂಟರ್ ಸವಾರ ಮೃತ್ಯು
-
ಶಿಕ್ಷಣ22 hours agoPhilomena-ಸಂತ ಫಿಲೋಮಿನಾ ಕಾಲೇಜು : 35 ವರ್ಷಗಳ ಬಳಿಕ ಮತ್ತೆ ಒಂದಾದ 1991ರ ಬಿ.ಎಸ್ಸಿ. ಬ್ಯಾಚ್; ನೆನಪು, ನಂಟು ಮತ್ತು ಗುರು-ಗೌರವದ ಭಾವಪೂರ್ಣ ಸಂಗಮ
-
ನಿಧನ ವಾರ್ತೆ23 hours agoDead body-ಹುಲಿವೇಷ ತರಬೇತಿಗೆಂದು ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ಬಾಲಕ ಸಮುದ್ರ ಪಾಲು; ಮೃತದೇಹ ಪತ್ತೆ
-
ನಿಧನ ವಾರ್ತೆ23 hours agoKerala-ಕೇರಳ: ಸಿಡಿಲು ಬಡಿದು ಖ್ಯಾತ ‘ಪಲ್ಲಟ್ಟು ಬ್ರಹ್ಮದತ್ತನ್’ ಆನೆ ದಾರುಣ ಸಾವು
-
ಬಿಗ್ ನ್ಯೂಸ್24 hours agoPuttur-ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ: ‘ಭಕ್ತರನ್ನು ಕಡೆಗಣಿಸಿ ಜೀರ್ಣೋದ್ಧಾರ ಸಮಿತಿ ರಚನೆ’ – ವಿಹಿಂಪ ಆಕ್ಷೇಪ
-
Uncategorized20 hours ago
ಶಿಕ್ಷೆಯ ವಿರುದ್ಧ ಹೈಕೋರ್ಟಿಗೆ ಅಪೀಲು; ನ್ಯಾಯಾಲಯಕ್ಕೆ ಗೈರು: ನೆಕ್ಕಿಲಾಡಿಯಲ್ಲಿ ಆರೋಪಿಯ ಬಂಧನ
-
ಅಂತರ ರಾಜ್ಯ22 hours agoYouTuber-89 ವರ್ಷದ ವೃದ್ಧನ 5 ಸವರನ್ ಚಿನ್ನದ ಸರ ಕಳವು ಆರೋಪ; 118 ಸವರನ್ ಚಿನ್ನ ಕಳವು ಪ್ರಕರಣದ ಯೂಟ್ಯೂಬರ್ ವಿರುದ್ಧ ಪ್ರಕರಣ ದಾಖಲು


















