Uncategorized
ಮಹಾವಿಷ್ಣುವಿನ ದಶಾವತಾರಗಳಲ್ಲಿ ಒಂದಾದ ಕೂರ್ಮ ವಿಗ್ರಹವನ್ನು ಮನೆಯಲ್ಲಿ ಇಡಲು ಕಾರಣವೇನು, ಅದರಿಂದ ಆಗುವ ಲಾಭವೇನು-ತಿಳಿಯಲು ಈ ಲೇಖನ ಓದಿರಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ ನೀವು ಕ್ರಿಸ್ಟಲ್ ಆಮೆ ಮನೆಯಲ್ಲಿ ಇಡುವುದರಿಂದ ಏನೇನು ಲಾಭ ಆಗುತ್ತದೆ ಹಾಗೆ ಇದರಿಂದ ಯಾವ ಬೆನಿಫಿಟ್ ಸಾಗುತ್ತದೆ ಎನ್ನುವುದನ್ನು ಇವತ್ತಿನ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಹಾಗಾಗಿ ಈ ಲೇಖನವನ್ನು ಆದಷ್ಟು ಪೂರ್ತಿಯಾಗಿ ಓದಿ ಸ್ನೇಹಿತರೆ ನಿಮಗೆ ಗೊತ್ತಿರಬಹುದು ಸಕ್ಸಸ್ ಅನ್ನುವುದು ಕೆಲವರಿಗೆ ಆದಷ್ಟು ಬೇಗ ಸಿಗುತ್ತದೆ ಹಾಗೆ ಅವರು ಏನೇ ಒಂದು ಫೀಲ್ಡಿಗೆ ಹೋದರೂ ಕೂಡ ಅವರಿಗೆ ಸಕ್ಸಸ್ ಅನ್ನುವುದು ಸಿಕ್ಕೆ ಸಿಗುತ್ತದೆ ಯಾಕೆ ಅಂದರೆ ಅವರ ಹಣೆ ಬರದಲ್ಲಿ ಬರೆದಿರುತ್ತದೆ ಆಗ ಅವರಿಗೆ ಸಕ್ಸಸ್ ಸಿಕ್ಕೇ ಸಿಗುತ್ತದೆ

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ಸಿಂಗದೂರು ಚೌಡಮ್ಮನವರ ಉಪಾಸಕರು
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ
ನಂ:- 9686268564 ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ಇಲ್ಲಿ ಶತಸಿದ್ಧ
ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,
ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ
ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564
ಇನ್ನು ಕೆಲವರಿಗೆ ಏನಂದ್ರೆ ಆರ್ಡ್ವರ್ಕ್ ಅಂದರೆ ನಮ್ಮ ಪರಿಶ್ರಮದ ಮೂಲಕ ಅವರಿಗೆ ಸಕ್ಸಸ್ ಸಿಗುತ್ತದೆ ಅಂತ ಅವರ ಹಣೆಯಲ್ಲಿ ಬರೆದಿದ್ದರೆ ಅವರು ಚಿಕ್ಕಚಿಕ್ಕ ರೂಟ್ನಲ್ಲಿ ಹೋಗುವುದಕ್ಕೆ ಟ್ರೈ ಮಾಡಿದರೆ ಅಂತಹ ರೂಟ್ನಲ್ಲಿ ಅವರಿಗೆ ಸಕ್ಸಸ್ ಸಿಗುವುದಿಲ್ಲ ಸಾಕಷ್ಟು ಪರಿಶ್ರಮ ಪಡಬೇಕಾಗುತ್ತದೆ ಯಾವುದಾದರೂ ರೂಟ್ ಅನ್ನು ಆಯ್ಕೆ ಮಾಡಿಕೊಳ್ಳಿ ನಿಮ್ಮ ಪರಿಶ್ರಮ ಇಲ್ಲದೆ ನಿಮಗೆ ಸಕ್ಸಸ್ ಸಿಗುವುದಿಲ್ಲ ಹಾಗೆ ಆಮೆಯನ್ನು ಕೂಡ ಮನೆಯಲ್ಲಿ ಇಟ್ಟ ತಕ್ಷಣ ನಿಮಗೆ ಸಕ್ಸಸ್ ಸಿಗುವುದಿಲ್ಲ ಎಲ್ಲಾ ಒಳ್ಳೆಯದಾಗುತ್ತದೆ ಅಂತನು ನಾವು ಹೇಳುವುದಿಲ್ಲ ಆಮೆಯನ್ನು ಇಡುವುದರಿಂದ ಒಳ್ಳೆಯ ಅದೃಷ್ಟ ಬರುತ್ತದೆ ಅಂತ ಹೇಳಬಹುದು
ಅದೃಷ್ಟ ಬರುವಂತಹ ಸಾಧ್ಯತೆ ಜಾಸ್ತಿ ಇರುತ್ತದೆ ಹಾಗಾಗಿ ಕ್ರಿಸ್ಟಲ್ ಆಮೆ ಮೂರ್ತಿಯನ್ನು ನಿಮ್ಮ ಮನೆಯಲ್ಲಿ ಇಟ್ಟರೆ ಸಾಕಷ್ಟು ಒಳ್ಳೆಯದಾಗುತ್ತದೆ ಹಾಗೆ ಇದರಿಂದ ಒಳ್ಳೆಯ ಲಾಭವನ್ನು ಪಡೆದುಕೊಳ್ಳಬಹುದು ಅಂತ ಹೇಳಬಹುದು

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ಸಿಂಗದೂರು ಚೌಡಮ್ಮನವರ ಉಪಾಸಕರು
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ
ನಂ:- 9686268564 ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ಇಲ್ಲಿ ಶತಸಿದ್ಧ
ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,
ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ
ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564
Uncategorized
ಸಮುದ್ರಕ್ಕೆ ಇಳಿದಿದ್ದ ಉಜಿರೆ ಕಾಲೇಜಿನ ವಿದ್ಯಾರ್ಥಿ ಅಲೆಗಳ ಸೆಳೆತಕ್ಕೆ ಬಲಿ; ಮೃತದೇಹ ಪತ್ತೆ

ಉಳ್ಳಾಲ: ಸೋಮೇಶ್ವರದ ಪೆರಿಬೈಲ್ ಬೀಚ್‌ನಲ್ಲಿ ಸಮುದ್ರಪಾಲಾಗಿದ್ದ ಉಜಿರೆ ಎಸ್‌ಡಿಎಂ ಕಾಲೇಜಿನ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿ ಶೋಭಿತ್ ಎಂ. ಗೌಡ (18) ಅವರ ಮೃತದೇಹ ಭಾನುವಾರ ಮಧ್ಯಾಹ್ನ ಪತ್ತೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕಮ್ಮರಡಿ ನಿವಾಸಿಯಾಗಿದ್ದ ಶೋಭಿತ್, ಶನಿವಾರ ಸಂಜೆ ಸ್ನೇಹಿತರೊಂದಿಗೆ ಬೀಚ್‌ಗೆ ತೆರಳಿದ್ದ ವೇಳೆ ಸಮುದ್ರದ ಅಲೆಗಳ ರಭಸಕ್ಕೆ ಸಿಲುಕಿ ನೀರುಪಾಲಾಗಿದ್ದರು.
ಉಜಿರೆ ಎಸ್‌ಡಿಎಂ ಕಾಲೇಜಿನ ಒಂಬತ್ತು ಮಂದಿ ವಿದ್ಯಾರ್ಥಿಗಳು ಶನಿವಾರ ಕುತ್ತಾರಿನ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ಸೋಮೇಶ್ವರದ ಪೆರಿಬೈಲ್ ಬೀಚ್‌ಗೆ ತೆರಳಿದ್ದರು. ಈ ವೇಳೆ ಶೋಭಿತ್ ಮತ್ತು ಆಕಾಶ್ ಎಂಬವರು ಸಮುದ್ರಕ್ಕಿಳಿದಿದ್ದು, ಇಬ್ಬರೂ ಅಲೆಗಳ ಸೆಳೆತಕ್ಕೆ ಸಿಲುಕಿದ್ದರು. ಈಜು ತಿಳಿದಿದ್ದ ಆಕಾಶ್ ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ, ಶೋಭಿತ್ ನಾಪತ್ತೆಯಾಗಿದ್ದರು.
ವಿದ್ಯಾರ್ಥಿಗಾಗಿ ಶನಿವಾರ ತಡರಾತ್ರಿವರೆಗೂ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಎಸ್‌ಡಿಆರ್‌ಎಫ್, ಕರಾವಳಿ ಕಾವಲು ಪಡೆ, ಗೃಹರಕ್ಷಕ ದಳ ಹಾಗೂ ಉಳ್ಳಾಲ ಪೊಲೀಸರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಭಾನುವಾರ ಮಧ್ಯಾಹ್ನ ಉಳ್ಳಾಲ ವಲಯದ ನಾಡದೋಣಿ ಹಾಗೂ ಗಿಲ್ನೆಟ್ ಮೀನುಗಾರರ ಸಂಘದ ಪ್ರಮುಖರಾದ ಆಸಿಫ್ ಎಂ.ಬಿ., ನಿಝಾಮ್ ಕೋಟೆಪುರ, ನಝೀರ್ ಕೋಡಿ, ರಝಾಕ್ ಕೋಟೆಪುರ, ಮುಸ್ತಾಫ ಕೋಟೆಪುರ ಮತ್ತು ಇರ್ಫಾನ್ ಕೋಟೆಪುರ ಅವರು ನಾಡದೋಣಿಯಲ್ಲಿ ಶೋಧ ನಡೆಸಿದರು. ಈ ವೇಳೆ ಉಚ್ಚಿಲ ಪೆರಿಬೈಲ್ ಸಮೀಪ ಸಮುದ್ರದಲ್ಲಿ ತೇಲುತ್ತಿದ್ದ ಶೋಭಿತ್ ಅವರ ಮೃತದೇಹ ಪತ್ತೆಯಾಗಿದೆ.
ಮೃತದೇಹವನ್ನು ನಾಡದೋಣಿಯ ಮೂಲಕ ಕೋಟೆಪುರ ಸಮುದ್ರ ತೀರಕ್ಕೆ ತರಲಾಗಿದ್ದು, ಉಳ್ಳಾಲ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶೋಭಿತ್ ತನ್ನ ಪೋಷಕರ ಏಕೈಕ ಪುತ್ರನಾಗಿದ್ದ ಎಂದು ತಿಳಿದುಬಂದಿದೆ.
Uncategorized
ಮುಂಬೈನಲ್ಲಿ ‘ಬನ’ ತುಳು ಚಿತ್ರಕ್ಕೆ ಪ್ರೇಕ್ಷಕರ ಮೆಚ್ಚುಗೆ; ಎರಡೂ ಪ್ರೀಮಿಯರ್ ಶೋ ಹೌಸ್‌ಫುಲ್ |
ಅ. 23ರಂದು ಚಿತ್ರ ಬಿಡುಗಡೆ

ಬಹು ನಿರೀಕ್ಷಿತ ತುಳು ಚಿತ್ರ ‘ಬನ’ ಮುಂಬೈನಲ್ಲಿ ನಡೆದ ಮೊದಲ ಎರಡು ಪ್ರೀಮಿಯರ್ ಪ್ರದರ್ಶನಗಳಲ್ಲೇ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಮುಂಬೈನ ಮುಲುಂದ್ ಮತ್ತು ಕಲ್ಯಾಣ್‌ನಲ್ಲಿ ಶನಿವಾರ ನಡೆದ ಪ್ರದರ್ಶನಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎರಡೂ ಕಡೆ ಚಿತ್ರ ಹೌಸ್‌ಫುಲ್ ಪ್ರದರ್ಶನ ಕಂಡಿದೆ ಎಂದು ಚಿತ್ರತಂಡ ತಿಳಿಸಿದೆ.
ನಾಗನ ಹಿನ್ನೆಲೆಯನ್ನು ಆಧರಿಸಿದ ಮೊದಲ ತುಳು ಚಿತ್ರ ಎಂಬ ವಿಶೇಷತೆಯೊಂದಿಗೆ ಗಮನ ಸೆಳೆದಿರುವ ‘ಬನ’, ತನ್ನ ಕಥೆ ಮತ್ತು ಕಲಾವಿದರ ಅಭಿನಯದ ಮೂಲಕ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಚಿತ್ರದ ಕಥಾಹಂದರ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದು, ಯುವ ಕಲಾವಿದರ ಅಭಿನಯದ ಜತೆಗೆ ಹಿರಿಯ ಕಲಾವಿದರೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ ಎಂಬ ಮೆಚ್ಚುಗೆಯ ಮಾತುಗಳು ಪ್ರದರ್ಶನದ ಬಳಿಕ ಕೇಳಿಬಂದಿವೆ.
ಚಿತ್ರದಲ್ಲಿ ಯುವ ಕಲಾವಿದರು ಅದ್ಭುತವಾಗಿ ನಟಿಸಿದ್ದು, ಕಥೆಯ ನಿರೂಪಣೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ವಿಭಿನ್ನ ಕಥಾವಸ್ತು ಹಾಗೂ ಕಲಾವಿದರ ಸಹಜ ಅಭಿನಯ ಚಿತ್ರಕ್ಕೆ ಮೆರುಗು ನೀಡಿದೆ. ತುಳು ಚಿತ್ರರಂಗದಲ್ಲಿ ನಾಗನ ಹಿನ್ನೆಲೆಯನ್ನು ಆಧರಿಸಿದ ಕಥಾವಸ್ತುವಿನೊಂದಿಗೆ ಮೂಡಿಬಂದಿರುವ ‘ಬನ’, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದು, ಮುಂಬೈ ತುಳು ಪ್ರೇಕ್ಷಕರಿಂದ ದೊರೆತ ಪ್ರತಿಕ್ರಿಯೆ ಚಿತ್ರತಂಡದ ಉತ್ಸಾಹವನ್ನು ಹೆಚ್ಚಿಸಿದೆ.
ಮುಂಬೈನಲ್ಲಿ ಚಿತ್ರದ ಪ್ರೀಮಿಯರ್ ಪ್ರದರ್ಶನಗಳ ಆಯೋಜನೆಯನ್ನು ಬಾಬಪ್ರಸಾದ್ ಅರಸ ಮತ್ತು ನಾಗಕಿರಣ್ ಶೆಟ್ಟಿ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಶನಿವಾರ ನಡೆದ ಎರಡೂ ಪ್ರದರ್ಶನಗಳಿಗೆ ಪ್ರೇಕ್ಷಕರ ಉತ್ತಮ ಸ್ಪಂದನೆ ದೊರೆತಿದ್ದು, ಹೌಸ್‌ಫುಲ್ ಪ್ರದರ್ಶನ ಚಿತ್ರತಂಡಕ್ಕೆ ಸಂತಸ ತಂದಿದೆ.
ಮುಂಬೈ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನೆಲೆಸಿರುವ ತುಳುವರು ತುಳು ಭಾಷೆ ಮತ್ತು ಚಿತ್ರರಂಗದ ಬೆಳವಣಿಗೆಗೆ ನಿರಂತರ ಬೆಂಬಲ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ‘ಬನ’ ಚಿತ್ರಕ್ಕೆ ಮುಂಬೈನಲ್ಲಿ ದೊರೆತಿರುವ ಪ್ರತಿಕ್ರಿಯೆ ಚಿತ್ರ ಬಿಡುಗಡೆಗೂ ಮುನ್ನ ನಿರೀಕ್ಷೆಯನ್ನು ಹೆಚ್ಚಿಸಿದೆ.

ಅ. 23ರಂದು ಚಿತ್ರ ಬಿಡುಗಡೆ
‘ಬನ’ ಚಿತ್ರವು ಇದೇ ತಿಂಗಳ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಮುಂಬೈನ ಪ್ರೀಮಿಯರ್ ಪ್ರದರ್ಶನಗಳಲ್ಲಿ ದೊರೆತಿರುವ ಮೆಚ್ಚುಗೆ, ಚಿತ್ರದ ಅಧಿಕೃತ ಬಿಡುಗಡೆಗೆ ಮುನ್ನ ಸಕಾರಾತ್ಮಕ ವಾತಾವರಣ ನಿರ್ಮಿಸಿದೆ. ವಿಭಿನ್ನ ಕಥಾಹಂದರ ಮತ್ತು ಕಲಾವಿದರ ಅಭಿನಯದ ಮೂಲಕ ಪ್ರೇಕ್ಷಕರನ್ನು ತಲುಪಲು ಸಜ್ಜಾಗಿರುವ ‘ಬನ’ ಚಿತ್ರಕ್ಕೆ ಮುಂದಿನ ದಿನಗಳಲ್ಲಿ ಯಾವ ರೀತಿಯ ಪ್ರತಿಕ್ರಿಯೆ ದೊರೆಯಲಿದೆ ಎಂಬ ಕುತೂಹಲ ತುಳು ಚಿತ್ರಪ್ರೇಮಿಗಳಲ್ಲಿದೆ.
Uncategorized
ರಬ್ಬರ್ ಗೆ ಭರ್ಜರಿ ಬೆಲೆ; ರಬ್ಬರ್ ಶೀಟ್ ದರದಲ್ಲೂ ಏರಿಕೆ

ದೇಶೀಯ ಮಾರುಕಟ್ಟೆಯಲ್ಲಿ ರಬ್ಬರ್ ಹಾಲು (ಲ್ಯಾಟೆಕ್ಸ್) ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದು, ರಬ್ಬರ್ ಶೀಟ್ ದರದಲ್ಲೂ ಏರಿಕೆ ಕಂಡುಬಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಪೂರೈಕೆ ಕೊರತೆ, ಹವಾಮಾನ ವೈಪರೀತ್ಯ ಹಾಗೂ ಕೈಗಾರಿಕಾ ವಲಯದ ಹೆಚ್ಚಿದ ಬೇಡಿಕೆಯಿಂದ ರಬ್ಬರ್ ಬೆಲೆ ಚೇತರಿಕೆ ಕಂಡಿದ್ದು, ಬೆಳೆಗಾರರಲ್ಲಿ ಆಶಾಭಾವನೆ ಮೂಡಿಸಿದೆ.
ದೇಶೀಯ ಮಾರುಕಟ್ಟೆಯಲ್ಲಿ ಆರ್‌ಎಸ್‌ಎಸ್-4 ದರ್ಜೆಯ ರಬ್ಬರ್ ಶೀಟ್ ಬೆಲೆ ಪ್ರತಿ ಕೆ.ಜಿ.ಗೆ ಸುಮಾರು ₹281ಕ್ಕೆ ಏರಿಕೆಯಾಗಿದೆ. ಕಳೆದ ತಿಂಗಳ ಮೊದಲ ವಾರದಲ್ಲಿ ₹272ಕ್ಕೆ ಇಳಿದಿದ್ದ ದರ, ಬಳಿಕ ಹಂತಹಂತವಾಗಿ ಚೇತರಿಸಿಕೊಂಡಿದೆ. ಮುಕ್ತ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹295ರ ಅಧಿಕೃತ ದರ ದಾಖಲಾಗಿದ್ದು, ಕೆಲವು ವಹಿವಾಟುಗಳು ₹300ರ ಮಟ್ಟದಲ್ಲೂ ನಡೆದಿವೆ ಎಂದು ರಬ್ಬರ್ ಉತ್ಪಾದಕರ ಸಂಘಗಳು ತಿಳಿಸಿವೆ. ಇದಕ್ಕೂ ಮೊದಲು ಆಗಸ್ಟ್ 4ರಂದು ದಾಖಲಾಗಿದ್ದ ₹298ರ ಗರಿಷ್ಠ ದರವನ್ನು ಪ್ರಸ್ತುತ ಬೆಲೆ ಮೀರಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ರಬ್ಬರ್ ಬೆಲೆ ಏರಿಕೆಯ ಹಾದಿಯಲ್ಲಿದೆ. ಕಳೆದ ತಿಂಗಳ ಮೊದಲ ವಾರದಲ್ಲಿ ಕೆ.ಜಿ.ಗೆ ₹261ಕ್ಕೆ ಇಳಿದಿದ್ದ ಆರ್‌ಎಸ್‌ಎಸ್ ಶೀಟ್ ದರ, ಇದೀಗ ₹275ಕ್ಕೆ ಏರಿಕೆಯಾಗಿದೆ.
ಪೂರೈಕೆ ಕೊರತೆ, ರೋಗಬಾಧೆ ಪರಿಣಾಮ
ಭಾರತ ಸೇರಿದಂತೆ ಪ್ರಮುಖ ರಬ್ಬರ್ ಉತ್ಪಾದಕ ರಾಷ್ಟ್ರಗಳಲ್ಲಿ ಹವಾಮಾನ ವೈಪರೀತ್ಯ ಮತ್ತು ರಬ್ಬರ್ ಎಲೆ ಉದುರುವ ರೋಗದ ಬಾಧೆಯಿಂದ ಉತ್ಪಾದನೆ ಕುಸಿದಿದೆ. ಇದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಮುಂದುವರಿದಿದ್ದರೂ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ. ಉತ್ಪಾದನೆ ಮತ್ತು ಬೇಡಿಕೆಯ ನಡುವಿನ ಅಂತರವೂ ಬೆಲೆ ಏರಿಕೆಗೆ ಕಾರಣವಾಗಿದೆ.
ಕೃತಕ ರಬ್ಬರ್ ಉತ್ಪಾದನಾ ವೆಚ್ಚ ಹೆಚ್ಚಳ
ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಹಾಗೂ ಕಚ್ಚಾ ತೈಲದ ಬೆಲೆಯಲ್ಲಿನ ಏರಿಳಿತಗಳು ಕೃತಕ ರಬ್ಬರ್ ಉತ್ಪಾದನಾ ವೆಚ್ಚದ ಮೇಲೆ ಪರಿಣಾಮ ಬೀರಿವೆ. ಕೃತಕ ರಬ್ಬರ್ ದುಬಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೈಗಾರಿಕೆಗಳು ನೈಸರ್ಗಿಕ ರಬ್ಬರ್ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿವೆ. ವಾಹನ ಮತ್ತು ಟಯರ್ ತಯಾರಿಕಾ ವಲಯದಿಂದಲೂ ಬೇಡಿಕೆ ಹೆಚ್ಚಿರುವುದು ಬೆಲೆ ಏರಿಕೆಗೆ ಮತ್ತಷ್ಟು ಬಲ ನೀಡಿದೆ.
ಆದರೆ ಕಚ್ಚಾ ರಬ್ಬರ್ ಬೆಲೆ ಏರಿಕೆಯಿಂದ ರಬ್ಬರ್ ಆಧಾರಿತ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉತ್ಪಾದನಾ ವೆಚ್ಚವೂ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ ಟಯರ್, ವೈದ್ಯಕೀಯ ಕೈಗವಸು ಹಾಗೂ ಕ್ರೀಡಾ ಪರಿಕರಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಉದ್ಯಮ ವಲಯದ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ವಿವಿಧ ದರ್ಜೆಯ ರಬ್ಬರ್ ದರ (ಪ್ರತಿ ಕೆ.ಜಿ.ಗೆ)
| ರಬ್ಬರ್ ದರ್ಜೆ | ದೇಶೀಯ ಮಾರುಕಟ್ಟೆ | ಅಂತರರಾಷ್ಟ್ರೀಯ ಮಾರುಕಟ್ಟೆ |
| ಆರ್‌ಎಸ್‌ಎಸ್-4 | ₹282 | ₹275 |
| ಆರ್‌ಎಸ್‌ಎಸ್-5 | ₹277 | ₹271 |
| ಲ್ಯಾಟೆಕ್ಸ್ (ಶೇ. 60 ಒಣ ರಬ್ಬರ್) | ₹203 | ₹184 |
-
Uncategorized9 hours ago
ಬೋನಿಗೆ ಬಿದ್ದ ಅಪರೂಪದ ಕರಿ ಚಿರತೆ!
-
Uncategorized8 hours ago
ರಬ್ಬರ್ ಗೆ ಭರ್ಜರಿ ಬೆಲೆ; ರಬ್ಬರ್ ಶೀಟ್ ದರದಲ್ಲೂ ಏರಿಕೆ
-
Uncategorized6 hours ago
ಸಮುದ್ರಕ್ಕೆ ಇಳಿದಿದ್ದ ಉಜಿರೆ ಕಾಲೇಜಿನ ವಿದ್ಯಾರ್ಥಿ ಅಲೆಗಳ ಸೆಳೆತಕ್ಕೆ ಬಲಿ; ಮೃತದೇಹ ಪತ್ತೆ
-
Uncategorized10 hours ago
ಪುತ್ತೂರು–ಉಪ್ಪಿನಂಗಡಿ ರಸ್ತೆ ದುರಸ್ತಿಗೆ ಶಾಸಕ ಅಶೋಕ್ ರೈ ಸೂಚನೆ
-
Uncategorized8 hours ago
ಪುತ್ತೂರು : ನಸುಕಿನ ಜಾವ ಹಳೇ ಕಟ್ಟಡದಲ್ಲಿ ಕಾಣಿಸಿದ ಬೆಂಕಿ – ಅನಾಹುತ ತಪ್ಪಿಸಲು ನೆರವಾದ ರವಿಕುಮಾರ್ ರೈ
-
Uncategorized7 hours ago
ಮುಂಬೈನಲ್ಲಿ ‘ಬನ’ ತುಳು ಚಿತ್ರಕ್ಕೆ ಪ್ರೇಕ್ಷಕರ ಮೆಚ್ಚುಗೆ; ಎರಡೂ ಪ್ರೀಮಿಯರ್ ಶೋ ಹೌಸ್‌ಫುಲ್ |


















