Connect with us

ಶಿಕ್ಷಣ

Dr. Megha Borkar-ಬಿಎಎಂಎಸ್ ಎಂ.ಡಿ ಪದವಿ ಪರೀಕ್ಷೆ; ಕಾವಿನ ಡಾ. ಮೇಘ ಬೋರ್ಕರ್‌ ರಾಜ್ಯದಲ್ಲಿ ಪ್ರಥಮ ರ‍್ಯಾಂಕ್‌

Published

on



Ad Widget

Ad Widget

Ad Widget

Ad Widget

ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಪಂಚಕರ್ಮ ಬಿಎಎಂಎಸ್ ಎಂ.ಡಿ ಪದವಿ ಪರೀಕ್ಷೆಯಲ್ಲಿ ಡಾ. ಮೇಘ ಬೋರ್ಕರ್ ಅವರು ಅತ್ಯುನ್ನತ ಶ್ರೇಣಿಯೊಂದಿಗೆ ರಾಜ್ಯದಲ್ಲಿ ಪ್ರಥಮ ರ‍್ಯಾಂಕ್‌ ಪಡೆದು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

Ad Widget

Ad Widget

Ad Widget

Ad Widget

ಕಾವು: ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಪಂಚಕರ್ಮ ಬಿಎಎಂಎಸ್ ಎಂ.ಡಿ ಪದವಿ ಪರೀಕ್ಷೆಯಲ್ಲಿ ಡಾ. ಮೇಘ ಬೋರ್ಕರ್ ಅವರು ಅತ್ಯುನ್ನತ ಶ್ರೇಣಿಯೊಂದಿಗೆ ರಾಜ್ಯದಲ್ಲಿ ಪ್ರಥಮ ರ‍್ಯಾಂಕ್‌ ಪಡೆದು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಪುತ್ತೂರಿನ ಮಾತ್ತೂರು ಗ್ರಾಮದ ಕಾವು ನಿವಾಸಿಗಳಾದ ಸುರೇಂದ್ರ ಬೋರ್ಕರ್ ಮತ್ತು ಸವಿತಾ ಬೋರ್ಕರ್ ದಂಪತಿಯ ಪುತ್ರಿಯಾಗಿರುವ ಡಾ. ಮೇಘ ಅವರು ತಮ್ಮ ಶೈಕ್ಷಣಿಕ ಜೀವನವನ್ನು ಕಾವು ಬುಶ್ರಾ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆಯುವ ಮೂಲಕ ಆರಂಭಿಸಿದರು. ಬಳಿಕ ಪುತ್ತೂರಿನ ಅಂಬಿಕಾ ವಿದ್ಯಾಲಯದಲ್ಲಿ ಪಿಯುಸಿ ಮತ್ತು ಉಡುಪಿಯ ಎಸ್‌ಡಿಎಂ ಸಂಸ್ಥೆಯಲ್ಲಿ ಬಿಎಎಂಎಸ್ ಪದವಿಯನ್ನು ಪೂರ್ಣಗೊಳಿಸಿದರು.

Ad Widget

Ad Widget <> Ad Widget

ಡಾ. ಮೇಘ ಅವರ ಪತಿ ಮುರಳೀಧರ್ ಅವರು ವಿರಾಜಪೇಟೆಯ ಬೇಟೋಳಿಯವರಾಗಿದ್ದು, ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.



Ad Widget

ಈ ಸಾಧನೆಯು ಡಾ. ಮೇಘ ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ. ಅವರ ಈ ಯಶಸ್ಸು ಕಾವು ಮತ್ತು ಸುತ್ತಮುತ್ತಲಿನ ಪ್ರದೇಶದ ಜನರಿಗೆ ಹೆಮ್ಮೆಯ ಕ್ಷಣವಾಗಿದೆ.

Click to comment

Leave a Reply

ಶಿಕ್ಷಣ

Ambika-ಅಂಬಿಕಾ ಪ.ಪೂ.ವಿದ್ಯಾಲಯಗಳ ಪ್ರತಿಭಾ ದಿನಾಚರಣೆ – ಮಾನಸೋಲ್ಲಾಸ; ಉದ್ದೇಶ ಸ್ಪಷ್ಟತೆ ಇರುವವರಿಗೆ ಯಾವುದೇ ಅಡೆತಡೆಗಳಿಲ್ಲ: ಪಿ. ಪ್ರದೀಪ್ ಕುಮಾರ್

Published

on



Ad Widget

Ad Widget

Ad Widget

Ad Widget

ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ಪ್ರತಿಭಾ ದಿನಾಚರಣೆ – ಮಾನಸೋಲ್ಲಾಸ ಕಾರ್ಯಕ್ರಮವನ್ನು ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ಉದ್ಘಾಟಿಸಿ ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಪಿ. ಪ್ರದೀಪ್ ಕುಮಾರ್ ಮಾತನಾಡಿದರು.

Ad Widget

Ad Widget

Ad Widget

Ad Widget

ಪುತ್ತೂರು: ಪ್ರತಿಭೆಯಿಲ್ಲದ ವ್ಯಕ್ತಿಯಿಲ್ಲ. ಆದರೆ ನಮ್ಮೊಳಗಿರುವ ಪ್ರತಿಭೆಗಳನ್ನು ಗುರುತಿಸುವುದು, ಬೆಳೆಸುವುದು ಹಾಗೂ ಆ ಪ್ರತಿಭೆಯನ್ನು ಸತ್ಕಾರ್ಯಗಳಿಗಾಗಿ ಬಳಸುವುದು ಅತ್ಯಂತ ಮುಖ್ಯ. ಸಮರ್ಪಿತ ಹಾಗೂ ಉದ್ದೇಶಸ್ಪಷ್ಟತೆ ಹೊಂದಿರುವ ವ್ಯಕ್ತಿಯ ಬೆಳವಣಿಗೆಗೆ ಯಾವುದೇ ಅಡೆತಡೆಗಳಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಪಿ. ಪ್ರದೀಪ್ ಕುಮಾರ್ ಹೇಳಿದರು.

Ad Widget

Ad Widget

Ad Widget alt="Ad Widget"/>

Ad Widget

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ಪ್ರತಿಭಾ ದಿನಾಚರಣೆ – ಮಾನಸೋಲ್ಲಾಸ ಕಾರ್ಯಕ್ರಮವನ್ನು ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ಉದ್ಘಾಟಿಸಿ ಶನಿವಾರ ಮಾತನಾಡಿದರು.

Ad Widget

Ad Widget <> Ad Widget

ಈ ದೇಶದ ದೊಡ್ಡ ದೊಡ್ಡ ವಿಜ್ಞಾನಿಗಳು, ವೈದ್ಯರು, ಇಂಜಿನಿಯರ್‌ಗಳು, ದೊಡ್ಡ ದೊಡ್ಡ ಸಾಧಕರಲ್ಲಿ ಹೆಚ್ಚಿನವರು ಗ್ರಾಮೀಣ ಪ್ರದೇಶಗಳಿಂದ ಬಂದವರೇ ಆಗಿದ್ದಾರೆ. ಹಾಗಾಗಿ ಗ್ರಾಮೀಣ ಭಾಗದಲ್ಲಿ ಅವಕಾಶಗಳು ಕಡಿಮೆ ಎಂಬ ಭಾವನೆಯನ್ನು ಇಟ್ಟುಕೊಳ್ಳಬೇಕಿಲ್ಲ. ನಾವು ಎಲ್ಲಿಂದ ಬಂದಿದ್ದೇವೆ, ಯಾವ ಹಿನ್ನೆಲೆಯಿಂದ ಬಂದಿದ್ದೇವೆ ಎಂಬುದು ಮುಖ್ಯವಲ್ಲ. ಸಾಧನೆಯೆಡೆಗೆ ಮುಖ ಮಾಡಿ ನಿರಂತರ ಕಾರ್ಯಪ್ರವೃತ್ತರಾದರೆ ಅಂದುಕೊಡ ಗಮ್ಯವನ್ನು ತಲಪುವುದಕ್ಕೆ ಸಾಧ್ಯವಿದೆ ಎಂದರು.



Ad Widget

ಕನಸು ಕಾಣುವುದಕ್ಕೆ ಎಲ್ಲರಿಗೂ ಸಾಧ್ಯವಿದೆ. ಆದರೆ ಕಂಡ ಕನಸುಗಳನ್ನು ನನಸು ಮಾಡುವುದಕ್ಕೆ ಶಿಸ್ತು, ಪ್ರಾಮಾಣಿಕತೆ, ನಿರಂತರ ಪ್ರಯತ್ನ ಹಾಗೂ ಎದುರಾಗುವ ಅಡೆತಡೆಗಳನ್ನು ಮೀರಿ ಮುನ್ನಡೆಯುವ ಸಾಮರ್ಥ್ಯಗಳಿರಬೇಕು. ಆಕಾಂಕ್ಷೆ ಹಾಗೂ ಸಾಧನೆಗಳ ಮಧ್ಯೆ ಬಹುದೊಡ್ಡ ಅಂತರವಿದೆ. ಆ ಅಂತರದ ನಡುವಣ ಸೇತುವೆಯಲ್ಲಿ ನಡೆಯಲು ಕಠಿಣ ಪರಿಶ್ರಮವೊಂದೇ ದಾರಿ. ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ. ನಮ್ಮ ವ್ಯಕ್ತಿತ್ವವನ್ನು ತಂತ್ರಜ್ಞಾನ ರೂಪಿಸಲಾರದು, ಸ್ವತಃ ನಾವೇ ರೂಪಿಸಿಕೊಳ್ಳಬೇಕು ಎಂದು ನುಡಿದರು.

Ad Widget

Ad Widget

ಮತ್ತೋರ್ವ ಅತಿಥಿ, ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಹಾಗೂ ಬೆಂಗಳೂರಿನ ಭಾರತ್ ಇಲೆಕ್ಟಾçನಿಕ್ಸ್ನ ಡೆಪ್ಯೂಟಿ ಇಂಜಿನಿಯರ್ ಅನುಜ್ಞಾ ಪಳ್ಳತ್ತಡ್ಕ ಮಾತನಾಡಿ ನಾವು ಉಸಿರಾಡುವ ಗಾಳಿ, ತಿನ್ನುವ ಆಹಾರ ಈ ದೇಶದ್ದು. ಹಾಗಾಗಿ ಈ ದೇಶದ ಸೇವೆಯನ್ನು ಮಾಡಿ ನಮ್ಮ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು. ನಮ್ಮ ಬದುಕಿನಲ್ಲಿ ಒಂದು ಸರಿಯಾದ ಉದ್ದೇಶವನ್ನಿಟ್ಟುಕೊಂಡು ಮುಂದುವರೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ನಮ್ಮ ಹಿರಿಯರ ಪರಿಶ್ರಮದ ಫಲವಾಗಿ ನಮ್ಮ ಭಾರತೀಯ ಕಲೆ, ಸಂಸ್ಕೃತಿಗಳು ಬೆಳೆದು ಬಂದಿವೆ. ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಅಂಬಿಕಾ ಸಂಸ್ಥೆಗಳು ಸದಾ ತೊಡಗಿಕೊಂಡಿವೆ. ದೇಶ ಮೊದಲು ಎಂಬ ಭಾವನೆಯಡಿ ವಿದ್ಯಾರ್ಥಿಗಳನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ ವಿಶ್ರಾಂತ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್, ಬಾಲಕೃಷ್ಣ ಬೋರ್ಕರ್, ಬಪ್ಪಳಿಗೆ ಹಾಗೂ ನೆಲ್ಲಿಕಟ್ಟೆ ಸಂಸ್ಥೆಗಳ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರುಗಳಾದ ಅವಿನಾಶ ಕೊಡೆಂಕಿರಿ ಹಾಗೂ ತಿಲಕ್ ಬಿ.ಸಿ, ಅಂಬಿಕಾ ನೀಟ್ ಅಕಾಡೆಮಿಯ ಪ್ರಾಚಾರ್ಯ ಕಿಶೋರ್ ಭಟ್, ವಿದ್ಯಾರ್ಥಿ ಸಂಘದ ನಾಯಕರಾದ ಅವನಿ ನಾಯಕ್, ಎಚ್.ವಿ.ಭವಿತ್ ಗೌಡ, ರಿಧಿ ಗೌಡ ಹಾಗೂ ಇಂದಿವರ್ ಪಿ.ಪಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶೈಕ್ಷಣಿಕ ಸಾಧಕರು, ಕ್ರೀಡಾ ಸಾಧಕರು, ವಿದ್ಯಾಭಾರತಿ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ದತ್ತಿನಿಧಿ ಬಹುಮಾನಗಳನ್ನು ವಿತರಿಸಲಾಯಿತು.

ವಿದ್ಯಾರ್ಥಿನಿ ಅಮೃತಾ ರಾವ್ ಶಂಖನಾದಗೈದರು. ವಿದ್ಯಾರ್ಥಿನಿ ಶ್ರೀವಿಭಾ ಹಾಗೂ ತಂಡದವರು ಪ್ರಾರ್ಥಿಸಿದರು. ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿ, ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಗಣೇಶ್ ಪ್ರಸಾದ್ ಡಿ.ಎಸ್. ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಅವರಿಂದ ವಿಡಿಯೋ ಪ್ರಾತ್ಯಕ್ಷಿಕೆ ಸಹಿತ ವರದಿ ವಾಚನ ನಡೆಯಿತು. ವಿದ್ಯಾರ್ಥಿನಿಯರಾದ ಸೋನಾ ನಾರ್ಕೋಡ್ ಹಾಗೂ ಉರ್ಷಿತಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಆನ್ಯಾ ಹಾಗೂ ಚಿನ್ಮಯೋ ಶೆಟ್ಟಿ ಅತಿಥಿ ಪರಿಚಯ ನಡೆಸಿಕೊಟ್ಟರು.

Ad Widget
Continue Reading

ಶಿಕ್ಷಣ

Sahyadri College-ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ ಹದಿನಾರನೇ ಎಂಜಿನಿಯರಿಂಗ್ ಪದವಿ ಪ್ರದಾನ ಸಮಾರಂಭ

Published

on



Ad Widget

Ad Widget

Ad Widget

Ad Widget

ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಮ್ಯಾನೇಜ್‌ಮೆಂಟ್, 2026ರ ಅಕ್ಟೋಬರ್ 10 ರಂದು ತನ್ನ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ (ಸ್ವಾಯತ್ತತೆಯ ಎರಡನೇ ಬ್ಯಾಚ್) 16ನೇ ಘಟಿಕೋತ್ಸವ ಸಮಾರಂಭವನ್ನು ಆಚರಿಸಿತು.

Ad Widget

Ad Widget

Ad Widget

Ad Widget

ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಮ್ಯಾನೇಜ್‌ಮೆಂಟ್, 2026ರ ಅಕ್ಟೋಬರ್ 10 ರಂದು ತನ್ನ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ (ಸ್ವಾಯತ್ತತೆಯ ಎರಡನೇ ಬ್ಯಾಚ್) 16ನೇ ಘಟಿಕೋತ್ಸವ ಸಮಾರಂಭವನ್ನು ಆಚರಿಸಿತು. ವಿದ್ಯಾರ್ಥಿಗಳ ಶೈಕ್ಷಣಿಕ ಪಯಣದ ಪ್ರಮುಖ ಮೈಲಿಗಲ್ಲನ್ನು ಗುರುತಿಸುವ ಈ ಸಮಾರಂಭದಲ್ಲಿ ಆಡಳಿತ ಮಂಡಳಿ, ಬೋಧಕವರ್ಗ, ಪದವೀಧರರು ಮತ್ತು ಅವರ ಹಿತೈಷಿಗಳು ಪಾಲ್ಗೊಂಡಿದ್ದರು.

Ad Widget

Ad Widget

Ad Widget alt="Ad Widget"/>

Ad Widget

ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು, ನಂತರ ಪ್ರಾಂಶುಪಾಲರಾದ ಡಾ. ಎಸ್. ಎಸ್. ಇಂಜಗನೇರಿ ಅವರು ಸ್ವಾಗತ ಭಾಷಣದ ಮೂಲಕ ಸಭಿಕರನ್ನು ಸ್ವಾಗತಿಸಿದರು. ಎಲ್‌ಟಿಎಂ (LTM)ನ ಚೀಫ್ ಡೆಲಿವರಿ ಆಫೀಸರ್ ಆಗಿರುವ ಶ್ರೀ ಗುರುರಾಜ್ ದೇಶಪಾಂಡೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಘಟಿಕೋತ್ಸವ ಸಮಾರಂಭವನ್ನು ಅಧಿಕೃತವಾಗಿ ಉದ್ಘಾಟಿಸಿದರು.

Ad Widget

Ad Widget <> Ad Widget

ಉಪ ಪ್ರಾಂಶುಪಾಲರಾದ ಡಾ. ಸುಧೀರ್ ಶೆಟ್ಟಿ, ಮುಖ್ಯ ಅತಿಥಿ ಮತ್ತು ಪ್ರಾಂಶುಪಾಲರಿಂದ ಸನ್ಮಾನಿಸಲ್ಪಟ್ಟ ಚಿನ್ನದ ಪದಕ ವಿಜೇತರು ಮತ್ತು ಶ್ರೇಯಾಂಕ ಪಡೆದವರನ್ನು ಘೋಷಿಸಿದರು. ವಿದ್ಯಾರ್ಥಿಗಳ ಸಮರ್ಪಣೆ, ಪರಿಶ್ರಮ ಮತ್ತು ಶೈಕ್ಷಣಿಕ ಶ್ರೇಷ್ಠತೆಗೆ ಬದ್ಧತೆಯನ್ನು ಸನ್ಮಾನವು ಗುರುತಿಸಿತು.



Ad Widget

ಮುಖ್ಯ ಅತಿಥಿಗಳಾದ ಶ್ರೀ ಗುರುರಾಜ್ ದೇಶಪಾಂಡೆ ಅವರು ಕೃತಕ ಬುದ್ಧಿಮತ್ತೆಯ (AI) ಪ್ರಭಾವವನ್ನು ಎತ್ತಿ ತೋರಿಸುವ ಸ್ಪೂರ್ತಿದಾಯಕ ಭಾಷಣ ಮಾಡಿದರು ಮತ್ತು ವಿಕಸನಗೊಳ್ಳುತ್ತಿರುವ ಜಗತ್ತಿನಲ್ಲಿ ಪ್ರಸ್ತುತವಾಗಿರಲು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮಹತ್ವವನ್ನು ಹೇಳಿದರು. ಅವರು ಪದವೀಧರರು ಪ್ರತಿದಿನ ಹೊಸದನ್ನು ಕಲಿಯಲು ಪ್ರೋತ್ಸಾಹಿಸಿದರು ಮತ್ತು ಬದಲಾಗುತ್ತಿರುವ ಸಂದರ್ಭಗಳಿಗೆ ಹೊಂದಿಕೊಳ್ಳಲು ಕಲಿಯುವುದನ್ನು ಬಿಟ್ಟು ಮತ್ತೆ ಕಲಿಯುವ ಅಗತ್ಯವನ್ನು ಹೇಳಿದರು.

Ad Widget

Ad Widget

ಪ್ರಸ್ತುತ ತಂತ್ರಜ್ಞಾನ-ಚಾಲಿತ ಜಗತ್ತಿನಲ್ಲಿ ಸಂವಹನ ಕೌಶಲ್ಯಗಳ ಮಹತ್ವವನ್ನು ಅವರು ಎತ್ತಿ ತೋರಿಸಿದರು ಮತ್ತು ಬ್ಯಾಂಕಿಂಗ್ ವಲಯದ ಬೆಳವಣಿಗೆಗೆ ಮಂಗಳೂರು ನೀಡಿದ ಕೊಡುಗೆಯನ್ನು ಗುರುತಿಸಿದರು.

ಅಲ್ಲದೆ, ಸಣ್ಣ ಹಾಗೂ ನಿರಂತರ ಅಭ್ಯಾಸಗಳು ಸಮಾಜದ ಮೇಲೆ ದೊಡ್ಡ ಪ್ರಭಾವವನ್ನು ಬೀರಬಲ್ಲವು ಎಂದು ಅವರು ಪ್ರತಿಪಾದಿಸಿದರು. ಸಾಧನೆಗೆ ಯಾವುದೇ ಅಡ್ಡದಾರಿಗಳಿಲ್ಲದಿರುವುದರಿಂದ, ಯಶಸ್ಸನ್ನು ಪಡೆಯಲು ಪರಿಶ್ರಮ, ಬದ್ಧತೆ ಮತ್ತು ತಾಳ್ಮೆ ಅತ್ಯಗತ್ಯ ಎಂಬುದನ್ನು ಅವರು ನೆನಪಿಸಿದರು. ಮಾನವೀಯ ಸಂಬಂಧಗಳನ್ನು ಬೆಳೆಸಿಕೊಳ್ಳುವುದು ಮತ್ತು ದೃಢವಾದ ಮೌಲ್ಯಗಳನ್ನು ಎತ್ತಿಹಿಡಿಯುವುದು ಎಷ್ಟು ಮುಖ್ಯ ಎಂಬುದನ್ನೂ ಅವರು ಒತ್ತಿ ಹೇಳಿದರು. ಅಂತಿಮವಾಗಿ, ಪ್ರತಿಯೊಬ್ಬರೂ ಜೀವನಪರ್ಯಂತ ಕಲಿಯುವ ಮನೋಭಾವವನ್ನು ಅಳವಡಿಸಿಕೊಳ್ಳುವಂತೆ ಮತ್ತು ತಮ್ಮ ಗುರಿಗಳನ್ನು ಸಾಧಿಸಲು ಪರಿಣಾಮಕಾರಿಯಾಗಿ ಶ್ರಮಿಸುವಂತೆ ಅವರು ಪ್ರೋತ್ಸಾಹಿಸಿದರು.

ಟ್ರಸ್ಟಿ ಮತ್ತು ಆಡಳಿತಾಧಿಕಾರಿ ಶ್ರೀ ಕೃಷ್ಣ ಹೆಗ್ಡೆ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ,  ಪದವೀಧರರು ತಮ್ಮ ಶಿಕ್ಷಣದ ಈ ಮಹತ್ವದ ಹಂತವನ್ನು ತಲುಪಿದ್ದಕ್ಕಾಗಿ ಅಭಿನಂದಿಸಿದರು. ಅವರು  ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನದ ಮಹತ್ವವನ್ನು ಹೇಳಿದರು ಮತ್ತು ವ್ಯಕ್ತಿಗಳನ್ನು ಜವಾಬ್ದಾರಿಯುತ ಮತ್ತು ನೈತಿಕ ನಾಗರಿಕರನ್ನಾಗಿ ರೂಪಿಸುವಲ್ಲಿ ಅದರ ಪಾತ್ರವನ್ನು ಎತ್ತಿ ತೋರಿಸಿದರು. ತಾಂತ್ರಿಕ ಪ್ರಗತಿಯ ಪ್ರಭಾವವನ್ನು ಅವರು ಚರ್ಚಿಸಿದರು ಮತ್ತು ನಿರಂತರ ಕಲಿಕೆ, ನಾವೀನ್ಯತೆ ಮತ್ತು ಸೃಜನಶೀಲತೆಯ ಮೂಲಕ ಬದಲಾಗುತ್ತಿರುವ ಕಾಲಕ್ಕೆ ಹೊಂದಿಕೊಳ್ಳುವ ಅಗತ್ಯವನ್ನು ಹೇಳಿದರು. ಉದಯೋನ್ಮುಖ ತಂತ್ರಜ್ಞಾನಗಳನ್ನು ಬಳಸುವಾಗ ಜವಾಬ್ದಾರಿಯನ್ನು ನಿರ್ವಹಿಸುವ ಮಹತ್ವವನ್ನು ಸಹ ಅವರು ಎತ್ತಿ ತೋರಿಸಿದರು.

ತಮ್ಮ ಮುಕ್ತಾಯದ ಮಾತುಗಳಲ್ಲಿ, ವಿದ್ಯಾರ್ಥಿಗಳಿಗೆ ಪೋಷಕರು ಮತ್ತು ಶಿಕ್ಷಕರ ನಿರಂತರ ಬೆಂಬಲ, ಮಾರ್ಗದರ್ಶನ ಮತ್ತು ಸಮರ್ಪಣೆಗಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು ಎಂದು ಶ್ರೀ ಕೃಷ್ಣ ಹೆಗ್ಡೆ ಹೇಳಿದರು.

ಗಣ್ಯರು ಮತ್ತು ಆಯಾ ವಿಭಾಗಗಳ ಮುಖ್ಯಸ್ಥರು ಈ ಕೆಳಗಿನ ವಿಭಾಗಗಳ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರಗಳನ್ನು ಪ್ರದಾನ ಮಾಡಿ, ಅವರ ಪದವಿಪೂರ್ವ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕಾಗಿ ಔಪಚಾರಿಕವಾಗಿ ಗುರುತಿಸಿದರು: ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ (ಸಿಎಸ್), ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ – ಸೈಬರ್ ಸೆಕ್ಯುರಿಟಿ/ಕಂಪ್ಯೂಟರ್ ಇಂಟಿಗ್ರೇಟೆಡ್ (ಸಿಐ), ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ – ಕಂಪ್ಯೂಟರ್ ಸೈನ್ಸ್ ಮತ್ತು ಡಿಸೈನ್ (ಸಿಡಿ), ಇನ್ಫರ್ಮೇಷನ್ ಸೈನ್ಸ್ ಮತ್ತು ಎಂಜಿನಿಯರಿಂಗ್ (ಐಎಸ್), ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ (ಇಸಿ), ಮೆಕ್ಯಾನಿಕಲ್ ಎಂಜಿನಿಯರಿಂಗ್ (ಎಂಇ), ಮತ್ತು ರೊಬೊಟಿಕ್ಸ್ ಮತ್ತು ಆಟೊಮೇಷನ್ ಎಂಜಿನಿಯರಿಂಗ್ (ಆಎಂ).

ಸಮಾರಂಭದ ನಂತರ ಉಪ ಪ್ರಾಂಶುಪಾಲರಾದ ಡಾ. ಸುಧೀರ್ ಶೆಟ್ಟಿ ನೇತೃತ್ವದಲ್ಲಿ ಪ್ರಮಾಣ ವಚನ ಸ್ವೀಕರಿಸಲಾಯಿತು, ಈ ಸಂದರ್ಭದಲ್ಲಿ ಪದವೀಧರರು ಪದವಿ ಪ್ರಕ್ರಿಯೆಯ ಭಾಗವಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಶ್ರೀ ಸ್ಕಂದ ಗಣೇಶ್ ಪಿ. ವಿ. ಮತ್ತು ಕುಮಾರಿ ಆಶಿಕಾ ನಾಯರ್ ಅವರು ಪದವೀಧರರಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡರು ಹಾಗೂ ಸಹ್ಯಾದ್ರಿಯಲ್ಲಿನ ತಮ್ಮ ಶೈಕ್ಷಣಿಕ ಪಯಣವನ್ನು ಮೆಲುಕು ಹಾಕಿದರು. ಅವರ ಈ ಅನಿಸಿಕೆಗಳು ಸಮಾರಂಭಕ್ಕೆ ವೈಯಕ್ತಿಕ ಆಯಾಮವನ್ನು ನೀಡಿದವು ಮತ್ತು ಸಂಸ್ಥೆಯಲ್ಲಿನ ಅವಧಿಯಲ್ಲಿ ಪಡೆದ ಕಲಿಕೆಯ ಅನುಭವಗಳ ಮಹತ್ವವನ್ನು ಎತ್ತಿ ತೋರಿಸಿದವು.

ಸಂಶೋಧನೆ ಮತ್ತು ಅಭಿವೃದ್ಧಿ (R&D) ಹಾಗೂ ಸಲಹಾ ವಿಭಾಗದ ನಿರ್ದೇಶಕರಾದ ಡಾ. ಮಂಜಪ್ಪ ಸಾರಥಿ ಅವರು ವಂದನಾರ್ಪಣೆ ನೆರವೇರಿಸಿದರು; ಅವರು ಗಣ್ಯರು, ಆಡಳಿತ ಮಂಡಳಿ, ಬೋಧಕವರ್ಗ, ಸಂಘಟಕರು ಹಾಗೂ ಕಾರ್ಯಕ್ರಮದ ಯಶಸ್ವಿ ನಿರ್ವಹಣೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಸಮಾಪ್ತಿಯಾಯಿತು. ಸಹ್ಯಾದ್ರಿ 16ನೇ ಘಟಿಕೋತ್ಸವ ಸಮಾರಂಭವು ಪದವೀಧರರಿಗೆ ಒಂದು ಸ್ಮರಣೀಯ ಸಂದರ್ಭವಾಗಿತ್ತು; ಅವರು ತಮ್ಮ ಸಾಧನೆಗಳನ್ನು ಸಂಭ್ರಮಿಸುತ್ತಾ, ತಮ್ಮ ಜೀವನದ ಮುಂದಿನ ಹಂತದತ್ತ ದೃಷ್ಟಿಹರಿಸಿದರು.

Ad Widget
Continue Reading

ಶಿಕ್ಷಣ

Vidyamata-ಕರಾವಳಿಯ ಯುವಜನತೆಯ ಉದ್ಯೋಗ ಸ್ವಪ್ನಕ್ಕೆ ‘ವಿದ್ಯಾಮಾತಾ’ ಆಸರೆ: ಬರಿ ಅಂಕಗಳಷ್ಟೇ ಅಲ್ಲ, ಬದುಕನ್ನು ಗೆಲ್ಲುವ ಕೌಶಲ್ಯವೇ ನಿಜವಾದ ಶಕ್ತಿ

Published

on



Ad Widget

Ad Widget

Ad Widget

Ad Widget

ಸ್ಪರ್ಧಾತ್ಮಕ ಜಾಗೃತಿಯಿಲ್ಲದ ಇಂತಹ ವಾತಾವರಣದಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದ ಎಪಿಎಂಸಿ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ‘ವಿದ್ಯಾಮಾತಾ ಅಕಾಡೆಮಿ’ ನೂತನ ಪ್ರಯೋಗಗಳ ಮೂಲಕ ಯಶಸ್ಸು ಕಂಡು ಕರಾವಳಿಯಲ್ಲೇ ಪ್ರಥಮವೆನಿಸಿದೆ. ಇತ್ತೀಚೆಗೆ ಪ್ರಖ್ಯಾತ ‘Times of India’ ಇಂಗ್ಲಿಷ್ ದಿನಪತ್ರಿಕೆಯೂ ಸಹ ವಿದ್ಯಾಮಾತಾ ಅಕಾಡೆಮಿಯ ಈ ಶೈಕ್ಷಣಿಕ ಬದಲಾವಣೆಯ ಹಾದಿಯನ್ನು ವಿಶೇಷವಾಗಿ ಶ್ಲಾಘಿಸಿ ವರದಿ ಮಾಡಿದೆ.

Ad Widget

Ad Widget

Ad Widget

Ad Widget

ಪುತ್ತೂರು: ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವ ಕರಾವಳಿ ಭಾಗದಲ್ಲಿ ಪದವೀಧರರ ಮಹಾಪೂರವಿದ್ದರೂ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಿವಿಲ್ ಸರ್ವೀಸಸ್ ಹಾಗೂ ರಕ್ಷಣಾ ಪಡೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ಭಾಗದ ಯುವಕರ ಭಾಗವಹಿಸುವಿಕೆ ಹಿಂದಿನಿಂದಲೂ ಕಡಿಮೆಯಿತ್ತು. ಹೆಚ್ಚಿನ ವಿದ್ಯಾರ್ಥಿಗಳು ಕೇವಲ ಸಾಂಪ್ರದಾಯಿಕ ಉದ್ಯೋಗಗಳು ಅಥವಾ ಗಲ್ಫ್ ದೇಶಗಳ ವಲಸೆಗೆ ಸೀಮಿತರಾಗಿದ್ದರು. ಸ್ಪರ್ಧಾತ್ಮಕ ಜಾಗೃತಿಯಿಲ್ಲದ ಇಂತಹ ವಾತಾವರಣದಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದ ಎಪಿಎಂಸಿ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ‘ವಿದ್ಯಾಮಾತಾ ಅಕಾಡೆಮಿ’ ನೂತನ ಪ್ರಯೋಗಗಳ ಮೂಲಕ ಯಶಸ್ಸು ಕಂಡು ಕರಾವಳಿಯಲ್ಲೇ ಪ್ರಥಮವೆನಿಸಿದೆ. ಇತ್ತೀಚೆಗೆ ಪ್ರಖ್ಯಾತ ‘Times of India’ ಇಂಗ್ಲಿಷ್ ದಿನಪತ್ರಿಕೆಯೂ ಸಹ ವಿದ್ಯಾಮಾತಾ ಅಕಾಡೆಮಿಯ ಈ ಶೈಕ್ಷಣಿಕ ಬದಲಾವಣೆಯ ಹಾದಿಯನ್ನು ವಿಶೇಷವಾಗಿ ಶ್ಲಾಘಿಸಿ ವರದಿ ಮಾಡಿದೆ.

Ad Widget

Ad Widget

Ad Widget alt="Ad Widget"/>

Ad Widget

ಸಾಮಾನ್ಯವಾಗಿ ದೊಡ್ಡ ಮಟ್ಟದ ಕೋಚಿಂಗ್ ಸಂಸ್ಥೆಗಳು ನೂರರಲ್ಲಿ ಒಬ್ಬರು IAS ಅಥವಾ KAS ಅಧಿಕಾರಿಯಾದರೆ ಆ ಯಶಸ್ಸನ್ನು ಮಾತ್ರ ದೊಡ್ಡದಾಗಿ ಬಿಂಬಿಸುತ್ತವೆ. ಆದರೆ, ಆ ಪ್ರಕ್ರಿಯೆಯಲ್ಲಿ ಸ್ಪರ್ಧೆಗಿಳಿದು ಸೋತ ಉಳಿದ 99 ವಿದ್ಯಾರ್ಥಿಗಳ ಭವಿಷ್ಯದ ಕಥೆಯೇನು ಎಂಬ ಆಳವಾದ ಸಾಮಾಜಿಕ ಪ್ರಶ್ನೆಯನ್ನು ವಿದ್ಯಾಮಾತಾ ಅಕಾಡೆಮಿಯ ಮ್ಯಾನೇಜಿಂಗ್ ಡೈರೆಕ್ಟರ್ ಭಾಗ್ಯೇಶ್ ರೈ ಮುಂದಿಟ್ಟಿದ್ದಾರೆ. ಒಬ್ಬ ವಿಜೇತನನ್ನು ರೂಪಿಸುವಷ್ಟೇ ಗಂಭೀರವಾಗಿ, ಅಲ್ಲಿ ಹಿನ್ನಡೆ ಅನುಭವಿಸುವ ಉಳಿದ 99 ವಿದ್ಯಾರ್ಥಿಗಳ ಬದುಕಿಗೂ ಭದ್ರತೆ ಮತ್ತು ಆತ್ಮವಿಶ್ವಾಸ ನೀಡುವುದು ನಮ್ಮ ಜವಾಬ್ದಾರಿ ಎಂಬುದು ಸಂಸ್ಥೆಯ ಮೂಲ ಮಂತ್ರವಾಗಿದೆ.

Ad Widget

Ad Widget <> Ad Widget

ಇಂದಿನ ಶಿಕ್ಷಣ ಪದ್ಧತಿಯಲ್ಲಿ ಕೇವಲ ಅಂಕಗಳ ಬೆನ್ನೇರುವ ಯುವಜನತೆಗೆ ಪ್ರಾಯೋಗಿಕ ಕೌಶಲ್ಯ, ಸಂವಹನ ಕಲೆ ಹಾಗೂ ವಾಸ್ತವ ಜಗತ್ತಿನ ಸವಾಲುಗಳನ್ನು ಎದುರಿಸುವ ತಾಕತ್ತು ಕೊರತೆಯಿದೆ. ಸ್ನಾತಕೋತ್ತರ ಪದವಿ ಪಡೆದರೂ ಕನಿಷ್ಠ ಸ್ವ-ಪರಿಚಯ ಮಾಡಿಕೊಳ್ಳಲು ಅಥವಾ ಕಂಪ್ಯೂಟರ್ ನಿರ್ವಹಿಸಲು ಬಾರದ ಇಂದಿನ ಸ್ಥಿತಿಯನ್ನು ಬದಲಾಯಿಸಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಸ್ವಾವಲಂಬನೆಯನ್ನು ತುಂಬುವ ಕೆಲಸ ಇಲ್ಲಿ ನಡೆಯುತ್ತಿದೆ.



Ad Widget

ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ನಿರ್ಣಾಯಕ ಹಂತದಲ್ಲಿ ಸಮಯವನ್ನು ವ್ಯರ್ಥ ಮಾಡದಂತೆ ಸಂಸ್ಥೆಯು ‘ಕಲಿಕೆಯೊಂದಿಗೆ ಗಳಿಕೆ’ ಎನ್ನುವ ವಿನೂತನ ಯೋಜನೆಯನ್ನು ಜಾರಿಗೆ ತಂದಿದೆ. ಪಿಯುಸಿ (PUC) ಮುಗಿದ ಕೂಡಲೇ ದೂರಶಿಕ್ಷಣದ ಮೂಲಕ ಡಿಗ್ರಿ (ಬಿ.ಎ, ಬಿ.ಕಾಮ್, ಬಿ.ಬಿ.ಎ) ವ್ಯಾಸಂಗಕ್ಕೆ ದಾಖಲಾಗಿ, ಅದೇ ಮೂರು ವರ್ಷಗಳ ಅವಧಿಯಲ್ಲಿ ಐಎಎಸ್, ಕೆಎಎಸ್, ಬ್ಯಾಂಕಿಂಗ್, ಪೊಲೀಸ್ ಹಾಗೂ ರರಣಾ ಪಡೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಮಾನಾಂತರ ತರಬೇತಿ ಪಡೆಯಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರಿಂದ ವಿದ್ಯಾರ್ಥಿಯು ಪದವಿ ಮುಗಿಸುವ ವೇಳೆಗೆ ಸರ್ಕಾರದ ಉದ್ಯೋಗ ಅಥವಾ ಉನ್ನತ ಖಾಸಗಿ ವಲಯದಲ್ಲಿ ನೆಲೆಗೊಳ್ಳಲು ಸಂಪೂರ್ಣ ಸಿದ್ಧನಾಗಿರುತ್ತಾನೆ.

Ad Widget

Ad Widget

ವಿಶೇಷವಾಗಿ ಭಾರತೀಯ ಭೂಸೇನೆ (Agniveer), ವಾಯುಸೇನೆ, ನೌಕಾಸೇನೆ, ಅರೆಮಿಲಿಟರಿ ಪಡೆಗಳು, ಕರ್ನಾಟಕ ಪೊಲೀಸ್ ಹಾಗೂ ಅರಣ್ಯ ಇಲಾಖೆಗಳ ನೇಮಕಾತಿಗಾಗಿ ಯುವಕರಿಗೆ 17ನೇ ವಯಸ್ಸಿನಿಂದಲೇ ಸುವರ್ಣ ಅವಕಾಶಗಳಿವೆ. ಈ ಹಂತದಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಲಿಖಿತ ಪರೀಕ್ಷೆಯಷ್ಟೇ ಅಲ್ಲದೆ, ನುರಿತ ತರಬೇತುದಾರರಿಂದ ಮೈದಾನದಲ್ಲಿ ದೈಹಿಕ ಕ್ಷಮತೆ ಮತ್ತು ಕಠಿಣ ತರಬೇತಿಯನ್ನು ನೀಡಲಾಗುತ್ತಿದೆ. ಇದರೊಂದಿಗೆ ನವೋದಯ, ಮೊರಾರ್ಜಿ ದೇಸಾಯಿ ಪ್ರವೇಶ ಪರೀಕ್ಷೆಗಳು, KAR-TET, KSET, NET, HSTR, PSTR, GPSTR ನಂತಹ ಶೈಕ್ಷಣಿಕ ಹಾಗೂ ಬೋಧನಾ ಅರ್ಹತಾ ಪರೀಕ್ಷೆಗಳಿಗೂ ಇಲ್ಲಿ ಅತ್ಯುತ್ತಮ ತರಬೇತಿ ಲಭ್ಯವಿದೆ.

ನಿರ್ದೇಶಕಿ ರಮ್ಯಾ ಭಾಗ್ಯೇಶ್ ರೈ ಅವರ ನೇತೃತ್ವದಲ್ಲಿ ಸಂಸ್ಥೆಯು ಅತ್ಯಾಧುನಿಕ ಮೂಲಸೌಕರ್ಯಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳು ದಿನದ 24 ಗಂಟೆಯೂ ನಿರಾಳವಾಗಿ ಓದಲು ‘ದೇವಿದ್ಯಾ’ 24×7 ಸದಾಶಿವ ಅಧ್ಯಯನ ಗ್ರಂಥಾಲಯ ಹಾಗೂ AI ಚಾಲಿತ ಡಿಜಿಟಲ್ ಇಂಟರಾಕ್ಟಿವ್ ಪ್ಯಾನಲ್‌ಗಳನ್ನು ಹೊಂದಿರುವ ‘ಸ್ತುತ್ಯ’ ಸ್ಮಾರ್ಟ್ ಕ್ಲಾಸ್‌ರೂಮ್‌ಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ.

ಇದರೊಂದಿಗೆ ಟ್ಯಾಲಿ ಪ್ರೈಮ್, ಪ್ರಾಯೋಗಿಕ ಅಕೌಂಟಿಂಗ್, ಗಲ್ಫ್ ವ್ಯಾಟ್ (Gulf VAT), ಡೇಟಾ ಅನಾಲಿಟಿಕ್ಸ್, ಕೋಡ್-ಆರ್ಕಿಟೆಕ್ಟ್ ಪ್ರೋಗ್ರಾಮಿಂಗ್ ಮತ್ತು ಸ್ಪೋಕನ್ ಇಂಗ್ಲಿಷ್ ತರಬೇತಿಗಳನ್ನು ನೀಡುವುದರ ಮೂಲಕ ಕರಾವಳಿಯ ಯುವಜನತೆಯನ್ನು ಜಾಗತಿಕ ಮಟ್ಟದ ಉದ್ಯೋಗಗಳಿಗೆ ಸಜ್ಜುಗೊಳಿಸಲಾಗುತ್ತಿದೆ. ಬರಿ ಅಂಕಗಳ ಕಾರ್ಖಾನೆಯಾಗದೆ, ಬದುಕಿನ ಪ್ರತಿ ಹಂತದಲ್ಲೂ ವಿದ್ಯಾರ್ಥಿಗೆ ಭರವಸೆಯ ದಾರಿದೀಪವಾಗುವ ಮೂಲಕ ವಿದ್ಯಾಮಾತಾ ಅಕಾಡೆಮಿಯು ಕರಾವಳಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading