ಶಿಕ್ಷಣ
Akshaya College-ಅಕ್ಷಯ ಕಾಲೇಜಿನಲ್ಲಿ `ಅಕ್ಷಯ ವೈಭವ’ ಫ್ಯಾಶನ್ ಶೋ; ವಿದ್ಯಾರ್ಥಿಗಳಲ್ಲಿ ಉದ್ಯೋಗದ ಹೊಸತನ ಮೂಡಿಸುತ್ತಿದೆ ಅಕ್ಷಯ ಕಾಲೇಜು-ಬಲರಾಂ ಆಚಾರ್ಯ
ಪ್ರಸಕ್ತ ಸನ್ನಿವೇಶದಲ್ಲಿ ನಿರುದ್ಯೋಗ'ದ ಸಮಸ್ಯೆಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮನಸ್ಸಿನಲ್ಲಿಉದ್ಯೋಗ’ ಎಂಬ ಭರವಸೆಯ ಕಲ್ಪನೆಯನ್ನು ಮೂಡಿಸುತ್ತಿರುವ ಅಕ್ಷಯ ಕಾಲೇಜು ನಿಜಕ್ಕೂ ವಿದ್ಯಾರ್ಥಿಗಳ ಬದುಕಿನಲ್ಲಿ ಹೊಸತನವನ್ನು ಧಾರೆ ಎರೆಯುತ್ತಿರುವುದು ಶ್ಲಾಘನೀಯ ಎಂದು ಪುತ್ತೂರು ಜಿ.ಎಲ್ ಆಚಾರ್ಯ ಸಮೂಹ ಸಂಸ್ಥೆಗಳ ಮಾಲಕರಾದ ಬಲರಾಮ ಆಚಾರ್ಯರವರು ಹೇಳಿದರು.
ಪುತ್ತೂರು: ಪ್ರಸಕ್ತ ಸನ್ನಿವೇಶದಲ್ಲಿ ನಿರುದ್ಯೋಗ'ದ ಸಮಸ್ಯೆಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮನಸ್ಸಿನಲ್ಲಿಉದ್ಯೋಗ’ ಎಂಬ ಭರವಸೆಯ ಕಲ್ಪನೆಯನ್ನು ಮೂಡಿಸುತ್ತಿರುವ ಅಕ್ಷಯ ಕಾಲೇಜು ನಿಜಕ್ಕೂ ವಿದ್ಯಾರ್ಥಿಗಳ ಬದುಕಿನಲ್ಲಿ ಹೊಸತನವನ್ನು ಧಾರೆ ಎರೆಯುತ್ತಿರುವುದು ಶ್ಲಾಘನೀಯ ಎಂದು ಪುತ್ತೂರು ಜಿ.ಎಲ್ ಆಚಾರ್ಯ ಸಮೂಹ ಸಂಸ್ಥೆಗಳ ಮಾಲಕರಾದ ಬಲರಾಮ ಆಚಾರ್ಯರವರು ಹೇಳಿದರು.

ಸಂಪ್ಯದಲ್ಲಿ ಅಕ್ಷಯ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಎರಡು ದಿನಗಳ ಅಕ್ಷಯ ವೈಭವ' ಕಾರ್ಯಕ್ರಮ ಜರಗಲಿದ್ದು, ಎ.9 ರಂದು ಡಿ-ವಾಕ್’ ಹೆಸರಿನಲ್ಲಿ ಜರಗಿದ ಫ್ಯಾಶನ್ ಶೋ ಕಾರ್ಯಕ್ರಮದಲ್ಲಿ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಉದ್ಯಮಿ ಜಯಂತ್ ನಡುಬೈಲುರವರು ಸದ್ದಿಲ್ಲದೆ ಕಾಲೇಜು ಆರಂಭಿಸುವ ಮೂಲಕ ಶಿಕ್ಷಣದ ಕ್ರಾಂತಿಯನ್ನು ಜಿಲ್ಲೆಯಾದ್ಯಂತ ಅಕ್ಷಯ ಕಾಲೇಜನ್ನು ಗುರುತಿಸುವ ಕೆಲಸ ಮಾಡಿದ್ದಾರೆ. ಫ್ಯಾಶನ್ ಎಂಬುದು ಪಾಶ್ಚಿಮಾತ್ಯ ಸಂಸ್ಕೃತಿಯಾದರೂ ಅಕ್ಷಯ ಕಾಲೇಜು ಇದನ್ನು ಭಿನ್ನ ರೀತಿಯಲ್ಲಿ ಪ್ರಸ್ತುತಪಡಿಸುತ್ತಿದೆ. ಸಂಸ್ಥೆಯ ಬೆಳವಣಿಗೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಗುಣಮಟ್ಟದ ಶಿಕ್ಷಣವನ್ನು ಪೂರೈಸುವುದು ಇಂದಿನ ಅಗತ್ಯತೆಯಾಗಿದೆ. ಪ್ರಸಕ್ತ ಸಂಸ್ಥೆಯಲ್ಲಿ ೫೦೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಇದು ಮುಂದಿನ ದಿನಗಳಲ್ಲಿ 5 ಸಾವಿರ ವಿದ್ಯಾರ್ಥಿಗಳವರೆಗೆ ಮುಂದುವರೆಯಲಿ ಎಂದರು.

ವಿದ್ಯಾರ್ಥಿಗಳಿಗೆ ಓದಿನ ಜೊತೆಗೆ ಸಾಂಸ್ಕೃತಿಕದ ಗೀಳನ್ನು ಹೊರಗಿನ ಪ್ರಪಂಚಕ್ಕೆ ಪರಿಚಯಿಸುತ್ತಿದೆ-ಜಯಂತ್ ನಡುಬೈಲು:
ಅಕ್ಷಯ ಕಾಲೇಜು ಚೇರ್‌ಮ್ಯಾನ್ ಜಯಂತ್ ನಡುಬೈಲು ಮಾತನಾಡಿ, ಪುತ್ತೂರಿನ ಮುತ್ತು ಎನಿಸಿದ ಉದ್ಯಮಿ ಬಲರಾಂ ಆಚಾರ್ಯರವರು ಅಕ್ಷಯ ಕಾಲೇಜು ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ನಮಗೆ ಮತ್ತಷ್ಟು ಬಲ ತಂದಿದೆ. ಅಕ್ಷಯ ಕಾಲೇಜು ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ನಿರ್ಮಿಸಿ ಕೊಡುತ್ತಿದೆ. ಕೇವಲ ಓದು ಮಾತ್ರವಲ್ಲ, ವಿದ್ಯಾರ್ಥಿಗಳಿಗೆ ಓದಿನ ಜೊತೆಗೆ ಸಾಂಸ್ಕೃತಿಕದ ಗೀಳನ್ನು ಹೊರಗಿನ ಪ್ರಪಂಚಕ್ಕೆ ಪರಿಚಯಿಸುತ್ತಿದೆ. ದೇವಸ್ಥಾನದ ಜಾತ್ರೆಯಲ್ಲಿ, ಬ್ರಹ್ಮಕಲಶ ಸಂದರ್ಭದಲ್ಲಿ ನಮ್ಮ ವಿದ್ಯಾರ್ಥಿಗಳು ಕರಸೇವೆಯ ಮೂಲಕ ಸೇವೆಯನ್ನು ನೀಡುತ್ತಿದ್ದಾರೆ. ಅಕ್ಷಯ ಕಾಲೇಜು ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದು ಈ ಸಂಸ್ಥೆಯಲ್ಲಿ ಶೇ.45 ಪಡೆದ ವಿದ್ಯಾರ್ಥಿಗಳನ್ನು ಶೇ.೯೦ಕ್ಕೆ ಏರಿಸುವ ಜವಾಬ್ದಾರಿಯನ್ನು ಹೊಂದಿದೆ ಎಂದರು.
ಉಸಿರಿರುವರೆಗೆ ಹೆಸರು ಇರಬೇಕಾದರೆ ಬದುಕಿನಲ್ಲಿ ಸಾಧನೆ ಮುಖ್ಯ-ಕು|ಭವ್ಯ ಪೂಜಾರಿ:
ವಿಶೇಷ ಆಹ್ವಾನಿತರಾಗಿ ಆಗಮಿಸಿದ `ದಸ್ಕತ್’ ತುಳು ಚಿತ್ರದ ನಟಿ ಕು|ಭವ್ಯ ಪೂಜಾರಿ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ವಿಶ್ವದರ್ಜೆಯ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಿರುವ ಈ ಅಕ್ಷಯ ಕಾಲೇಜಿನ ಕಾಳಜಿಯನ್ನು ಮೆಚ್ಚಬೇಕಾದ್ದೇ. ಅಕ್ಷಯ ಕಾಲೇಜಿನಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಇಂದು ಉದ್ಯೋಗದಲ್ಲಿರುವುದು ಪ್ರಶಂಸನೀಯ. ತಾನೋರ್ವ ಕಲಾವಿದೆಯಾಗಿದ್ದು ಕಲಾವಿದರ ಹಿಂದೆ ಫ್ಯಾಶನ್ ಡಿಸೈನರ್‌ರವರ ಪಾತ್ರ ಬಹಳಷ್ಟು ಇದೆ. ನಮ್ಮ ಜೀವನದಲ್ಲಿ ಉಸಿರಿರುವರೆಗೆ ಹೆಸರು ಇರಬೇಕಾದರೆ ಬದುಕಿನ ಹಾದಿಯಲ್ಲಿ ಸಾಧನೆ ಎಂಬುದು ಬಹಳ ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳ ಪಾಲಿಗೆ ಅಕ್ಷಯ ಪಾತ್ರೆಯಾಗಿರುವ ಈ ಅಕ್ಷಯ ಕಾಲೇಜಿನ ಹೆಸರು ಎಲ್ಲೆಡೆ ಪಸರಿಸಲಿ ಎಂದು ಹೇಳಿ ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ಅಕ್ಷಯ ಕಾಲೇಜು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಕಲಾವತಿ ಜಯಂತ್‌ರವರು ವಹಿಸಿದ್ದರು. ಮಿಸ್ಟರ್ ಕರ್ನಾಟಕ 2024 ವಿನ್ನರ್ ಪ್ರಣೀತ್ ಸುವರ್ಣ, .ಕಾಲೇಜು ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ಉಪ ಪ್ರಾಂಶುಪಾಲ ರಕ್ಷಣ ಟಿ.ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪ್ರಾಂಶುಪಾಲ ಸಂಪತ್ ಕೆ.ಪಕ್ಕಳ ಸ್ವಾಗತಿಸಿ, ಫ್ಯಾಶನ್ ಡಿಸೈನ್ ವಿಭಾಗದ ಉಪನ್ಯಾಸಕ ಕಿಶನ್ ಎನ್.ರಾವ್ ವಂದಿಸಿದರು. ಫ್ಯಾಶನ್ ಡಿಸೈನ್ ವಿಭಾಗದ ಉಪನ್ಯಾಶಕಿ ಅನನ್ಯ ಭಟ್, ಜನಿತ, ಧನ್ಯಶ್ರೀರವರು ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಆಂಗ್ಲ ವಿಭಾಗದ ಮುಖ್ಯಸ್ಥೆ ಶ್ರೀಮತಿ ರಶ್ಮಿ ಕೆ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿಗಳಿಂದ ರ‍್ಯಾಂಪ್ ವಾಕ್..
ಕಾರ್ಯಕ್ರಮದಲ್ಲಿ ಕಾಲೇಜಿನ ಫ್ಯಾಶನ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳೊಂದಿಗೆ ಇತರ ವಿಭಾಗದ ಕೋರ್ಸ್ಗಳಲ್ಲಿನ 177 ಮಂದಿ ವಿದ್ಯಾರ್ಥಿ ಮೋಡೆಲ್ಸ್ ಅಲ್ಲದೆ ಕಾಲೇಜು ಇತ್ತೀಚೆಗೆ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸು 18ರ ವರೆಗೆ ಮೂರು ವಿಭಾಗದಲ್ಲಿ ಏರ್ಪಡಿಸಿದ ಪ್ರಿನ್ಸ್ ಆ್ಯಂಡ್ ಪ್ರಿನ್ಸೆಸ್ ಸ್ಪರ್ಧೆಯಲ್ಲಿ ವಿಜೇತರಾದ ವಿನ್ರ‍್ಸ್ ಹಾಗೂ ರನ್ನರ್ಸ್ 18 ಮಂದಿ ಸ್ಪರ್ಧಿಗಳು ಆಕರ್ಷಕ ವಸ್ತ್ರ ವಿನ್ಯಾಸದೊಂದಿಗೆ ರ‍್ಯಾಂಪ್ ವಾಕ್ ನೆರವೇರಲ್ಪಟ್ಟಿತು. ಕಾಲೇಜಿನ ಅಂತಿಮ ಫ್ಯಾಶನ್ ಡಿಸೈನ್ ವಿಭಾಗದ 26 ಮಂದಿ ವಿದ್ಯಾರ್ಥಿಗಳು ಡಿಸೈನರ್‌ಗಳಾಗಿ ಕರ್ತವ್ಯ ನಿರ್ವಹಿಸಿದ್ದರು.
ಶಿಕ್ಷಣ
Philomena-ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಫುಡೀಪ್ರಿನಿಯರ್’: ಆಹಾರದಿಂದ ಉದ್ಯಮದತ್ತ ವಿದ್ಯಾರ್ಥಿಗಳ ಹೆಜ್ಜೆ; ‘ಟೇಸ್ಟ್ ದಿ ಫ್ಯೂಚರ್’ ಮೂಲಕ ಸೃಜನಶೀಲತೆ, ರುಚಿ ಮತ್ತು ಉದ್ಯಮಶೀಲತೆಯ ಸಂಗಮ
ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರಿನ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಮತ್ತು ಪ್ರೊಫೆಷನಲ್ ಸ್ಟಡೀಸ್ ವಿಭಾಗ ಹಾಗೂ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ ವತಿಯಿಂದ ‘ಫುಡೀಪ್ರಿನಿಯರ್–ಟೇಸ್ಟ್ ದಿ ಫ್ಯೂಚರ್’ ಎಂಬ ವಿಶಿಷ್ಟ ಉದ್ಯಮಶೀಲತಾ ಕಾರ್ಯಕ್ರಮವನ್ನು ಅ. 6 ರಂದು ಎಸ್‌ಜೆಎಂ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಪುತ್ತೂರು: ಆಹಾರವನ್ನು ಕೇವಲ ರುಚಿಯ ಅನುಭವಕ್ಕೆ ಸೀಮಿತಗೊಳಿಸದೆ, ಸೃಜನಶೀಲತೆ, ನವೀನತೆ ಹಾಗೂ ಉದ್ಯಮಶೀಲತೆಯ ಅವಕಾಶವಾಗಿ ಪರಿವರ್ತಿಸುವ ಉದ್ದೇಶದಿಂದ ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರಿನ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಮತ್ತು ಪ್ರೊಫೆಷನಲ್ ಸ್ಟಡೀಸ್ ವಿಭಾಗ ಹಾಗೂ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ ವತಿಯಿಂದ ‘ಫುಡೀಪ್ರಿನಿಯರ್–ಟೇಸ್ಟ್ ದಿ ಫ್ಯೂಚರ್’ ಎಂಬ ವಿಶಿಷ್ಟ ಉದ್ಯಮಶೀಲತಾ ಕಾರ್ಯಕ್ರಮವನ್ನು ಅ. 6 ರಂದು ಎಸ್‌ಜೆಎಂ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಆಹಾರ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಉದ್ಯಮಾವಕಾಶಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದರೊಂದಿಗೆ, ಸಣ್ಣ ಆಲೋಚನೆಯನ್ನು ಉತ್ಪನ್ನವಾಗಿ, ಉತ್ಪನ್ನವನ್ನು ಬ್ರ್ಯಾಂಡ್ ಆಗಿ ಹಾಗೂ ಬ್ರ್ಯಾಂಡ್ ಅನ್ನು ಯಶಸ್ವಿ ಉದ್ಯಮವಾಗಿ ರೂಪಿಸುವ ಚಿಂತನೆ ಬೆಳೆಸುವ ಉದ್ದೇಶದಿಂದ. ಆಹಾರ ತಯಾರಿಕೆ, ಪ್ರಸ್ತುತಿ, ಗ್ರಾಹಕರ ಆಕರ್ಷಣೆ, ಮಾರುಕಟ್ಟೆ ಹಾಗೂ ಉದ್ಯಮದ ಸಾಧ್ಯತೆಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವವನ್ನು ಒದಗಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ರೆ. ಡಾ. ಆಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಉದ್ಯೋಗಕ್ಕಾಗಿ ಕಾಯದೆ, ತಮ್ಮ ಜ್ಞಾನ ಮತ್ತು ಸೃಜನಶೀಲತೆಯನ್ನು ಬಳಸಿಕೊಂಡು ಉದ್ಯೋಗ ಸೃಷ್ಟಿಸುವ ಉದ್ಯಮಿಗಳಾಗಬೇಕು ಎಂದು ಕರೆ ನೀಡಿ, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣ ಹಾಗೂ ಉದ್ಯಮಶೀಲ ಮನೋಭಾವ ಬೆಳೆಸಲು ಸಹಕಾರಿಯಾಗುತ್ತವೆ ಎಂದರು.
ಮುಖ್ಯ ಅತಿಥಿಯಾಗಿದ್ದ ದಕ್ಷಿಣ ಕನ್ನಡ ಮ್ಯೂಚುವಲ್ ಬೆನಿಫಿಟ್ ನಿಧಿ ಲಿಮಿಟೆಡ್‌ನ ಅಧ್ಯಕ್ಷ ಹಾಗೂ ಪುತ್ತೂರಿನ ಹೋಟೆಲ್ ವಿಶ್ವ ರಂಜಿನಿಯ ವ್ಯವಸ್ಥಾಪಕ ಪಾಲುದಾರ ವಿ.ಜೆ. ಪುನೀತ್ ಮಾತನಾಡಿ, ಆಹಾರ ಮತ್ತು ಆತಿಥ್ಯ ಕ್ಷೇತ್ರದಲ್ಲಿ ಯುವಜನರಿಗೆ ಲಭ್ಯವಿರುವ ವಿವಿಧ ಉದ್ಯಮಾವಕಾಶಗಳ ಕುರಿತು ಮಾಹಿತಿ ನೀಡಿದರು. ಸ್ಥಳೀಯ ಸಂಪನ್ಮೂಲಗಳು, ಹೊಸ ಆಲೋಚನೆಗಳು ಹಾಗೂ ಗುಣಮಟ್ಟದ ಉತ್ಪನ್ನಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಸಣ್ಣ ಪ್ರಯತ್ನವನ್ನೂ ಯಶಸ್ವಿ ಉದ್ಯಮವನ್ನಾಗಿ ಬೆಳೆಸಬಹುದು ಎಂದು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.

‘ಫುಡೀಪ್ರಿನಿಯರ್’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆ, ತಂಡಕಾರ್ಯ, ವ್ಯವಹಾರಿಕ ಚಿಂತನೆ, ಸಂವಹನ ಕೌಶಲ ಹಾಗೂ ಮಾರುಕಟ್ಟೆ ಅರಿವನ್ನು ಪ್ರದರ್ಶಿಸಲು ಅವಕಾಶ ಪಡೆದು ,ಆಹಾರವನ್ನು ಕೇಂದ್ರವಾಗಿಟ್ಟುಕೊಂಡು ಹೊಸ ಆಲೋಚನೆಗಳನ್ನು ರೂಪಿಸುವ ಮೂಲಕ ಭವಿಷ್ಯದಲ್ಲಿ ಸ್ವಂತ ಉದ್ಯಮ ಆರಂಭಿಸುವ ಸಾಧ್ಯತೆಗಳ ಬಗ್ಗೆಯೂ ಅರಿವು ಪಡೆದರು.
ಕಾರ್ಯಕ್ರಮದ ಪ್ರಸ್ತಾವಿಕ ಮಾತುಗಳನ್ನು ಪ್ರಶಾಂತ್ ರೈ ಪಿ. ನೆರವೇರಿಸಿ, ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ತೃತೀಯ ಬಿಬಿಎ ವಿದ್ಯಾರ್ಥಿ ಪ್ರಕೃತ್ ಜಿ.ಕೆ. ಅತಿಥಿಗಳನ್ನು ಸ್ವಾಗತಿಸಿ, ತೃತೀಯ ಬಿಬಿಎ ವಿದ್ಯಾರ್ಥಿ ಭವತ್ ಬಿ.ಎಲ್. ವಂದನಾರ್ಪಣೆ ಸಲ್ಲಿಸಿ, ದ್ವಿತೀಯ ಬಿಬಿಎ (ಬಿಸಿನೆಸ್ ಅನಾಲಿಟಿಕ್ಸ್) ವಿದ್ಯಾರ್ಥಿನಿ ಸಮೃದ್ಧಿ ಚೌಟಾ ಕಾರ್ಯಕ್ರಮ ನಿರೂಪಿಸಿದರು.ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಮತ್ತು ಪ್ರೊಫೆಷನಲ್ ಸ್ಟಡೀಸ್ ವಿಭಾಗದ ಡೀನ್ ಹಾಗೂ ಮುಖ್ಯಸ್ಥ ಡಾ. ರಾಧಾಕೃಷ್ಣ ಗೌಡ ವಿ. ಉಪಸ್ಥಿತರಿದ್ದರು.
‘ಟೇಸ್ಟ್ ದಿ ಫ್ಯೂಚರ್’ ಆಶಯದೊಂದಿಗೆ ನಡೆದ ‘ಫುಡೀಪ್ರಿನಿಯರ್’ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಆಹಾರದ ರುಚಿಯೊಂದಿಗೆ ಉದ್ಯಮದ ರುಚಿಯನ್ನೂ ಪರಿಚಯಿಸಿ, “ಒಂದು ಆಲೋಚನೆ, ಒಂದು ಪ್ರಯತ್ನ, ಒಂದು ಉದ್ಯಮ” ಎಂಬ ಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವಲ್ಲಿ ಯಶಸ್ವಿಯಾಯಿತು.
ಶಿಕ್ಷಣ
Vivekananda-ಜಿಲ್ಲಾ ಮಟ್ಟದ ಕರಾಟೆ ಪಂದ್ಯಾಟ -ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ
ಶಾಲಾ ಶಿಕ್ಷಣ ಇಲಾಖೆ, ಪದವಿಪೂರ್ವ ವಿಭಾಗ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯು ಪದವಿಪೂರ್ವ ಕಾಲೇಜು, ತುಂಬೆ ಇಲ್ಲಿ ನಡೆಯಿತು. ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಪದಕಗಳನ್ನು ಪಡೆದುಕೊಂಡಿರುತ್ತಾರೆ.
ಶಾಲಾ ಶಿಕ್ಷಣ ಇಲಾಖೆ, ಪದವಿಪೂರ್ವ ವಿಭಾಗ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯು ಪದವಿಪೂರ್ವ ಕಾಲೇಜು, ತುಂಬೆ ಇಲ್ಲಿ ನಡೆಯಿತು. ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಪದಕಗಳನ್ನು ಪಡೆದುಕೊಂಡಿರುತ್ತಾರೆ.
ಬಾಲಕಿಯರ ತಂಡದಲ್ಲಿ ಪ್ರಥಮ ವಿಜ್ಞಾನ ವಿಭಾಗದ ಖುಷಿ ೪೪ ಕೆ.ಜಿ, ದ್ರಿಶ್ಯ 68 ಕೆ .ಜಿ ವಿಭಾಗ ಬೆಳ್ಳಿ ಪದಕ, ಪ್ರಥಮ ವಾಣಿಜ್ಯ ವಿಭಾಗದ ಸಾನ್ವಿ 64 ಕೆ. ಜಿ ವಿಭಾಗ ಕಂಚಿನ ಪದಕ. ಬಾಲಕರ ವಿಭಾಗದಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಘನಶ್ಯಾಮ್ ೫೦ ಕೆ.ಜಿ ವಿಭಾಗ ಬೆಳ್ಳಿ ಪದಕ ಪಡೆದಿರುತ್ತಾರೆ.
ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್ ,ಡಾ .ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ .ಇವರನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕ ,ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.
ಶಿಕ್ಷಣ
Vivekananda-ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಇಬ್ಬರು ಉಪನ್ಯಾಸಕರಿಗೆ ಡಾಕ್ಟರೇಟ್ ಪದವಿ
ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಇಬ್ಬರು ಸಹಾಯಕ ಪ್ರಾಧ್ಯಾಪಕರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ.
ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಇಬ್ಬರು ಸಹಾಯಕ ಪ್ರಾಧ್ಯಾಪಕರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ.
ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ 14 ವರ್ಷಗಳ ಬೋಧನಾನುಭವ ಹೊಂದಿರುವ ಸಹಾಯಕ ಪ್ರಾಧ್ಯಾಪಕ ಪ್ರಮೋದ್ ಕುಮಾರ್.ಪಿ.ಎಮ್ ಅರೇಕಾ ಪ್ಲಾಂಟ್ ಡಿಸೀಸ್ ಐಡೆಂಟಿಫಿಕೇಶನ್ ಎಂಡ್ ಕ್ಲಾಸಿಫಿಕೇಶನ್ ಯೂಸಿಂಗ್ ಡೀಪ್ ಲರ್ನಿಂಗ್ ಟೆಕ್ನಿಕ್ಸ್(Areca Plant Disease identification and classification using deep learning techniques) ಎನ್ನುವ ವಿಷಯದ ಬಗ್ಗೆ ತಿಪಟೂರಿನ ಕಲ್ಪತರು ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿಯ ಡಾ.ರವಿಪ್ರಕಾಶ್.ಎಮ್.ಎಲ್ ಅವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ.
ಶ್ರೀಮತಿ ಅಕ್ಷಯ.ಡಿ.ಶೆಟ್ಟಿ ಇವರು ಡಿಸೈನ್ ಎಂಡ್ ವ್ಯಾಲಿಡೇಶನ್ ಆಫ್ ಗ್ಯಾಲ್ವೇನಿಕ್ ಸ್ಕಿನ್ ರೆಸ್ಪೊನ್ಸ್ ಡಿವೈಸ್ ಫಾರ್ ಟ್ರೀಟ್‌ಮೆಂಟ್ ಆಫ್ ನ್ಯೂರೋಲಾಜಿಕಲ್ ಎಂಡ್ ಸೈಕಿಯಾಟ್ರಿಕ್ ಡಿಸಾರ್ಡರ್ಸ್ (Design and Validation of galvanic skin response (GSR) device for treatment of neurological and psychiatric disorders) ಎನ್ನುವ ವಿಷಯದ ಬಗ್ಗೆ ಎಸ್.ಇ.ಎ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಪ್ರೊಫೆಸರ್ ಹಾಗೂ ಡೀನ್(ಆರ್&ಡಿ) ಆಗಿರುವ ಡಾ.ಉಷಾ ದೇಸಾಯಿ ಮತ್ತು ಸೆಂಟ್ರಲ್ ಯುನಿವರ್ಸಿಟಿ ಹರ್ಯಾಣದ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಹಾಗೂ ಪ್ರೊಫೆಸರ್ ಡಾ. ಆಕಾಶ್ ಸಕ್ಸೇನ ಅವರ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಪದವಿಯನ್ನು ಪಡೆದುಕೊಂಡಿದ್ದಾರೆ.
ಇವರು ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಎಂಡ್ ಮೆಶಿನ್ ಲರ್ನಿಂಗ್ ವಿಭಾಗದಲ್ಲಿ 9 ವರ್ಷಗಳಿಂದ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಸಾಧನೆಗೆ ಆಡಳಿತ ಮಂಡಳಿ, ಉಪನ್ಯಾಸಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ ಎಂದು ಪ್ರಭಾರ ಪ್ರಾಂಶುಪಾಲ ಡಾ.ಶ್ರೀಕಾಂತ್ ರಾವ್.ಎಸ್.ಕೆ ತಿಳಿಸಿದ್ದಾರೆ.
-
ನಿಧನ ವಾರ್ತೆ7 hours agoSullia-Big Breaking: ಸುಳ್ಯ: ವಿದ್ಯುತ್ ಶಾಕ್ಗೆ ಇಬ್ಬರು ಯುವಕರು ಬಲಿ; ಬಾಲಕನಿಗೆ ಗಾಯ
-
Uncategorized20 hours ago
Digitel Arrest ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಪುತ್ತೂರಿನ ವ್ಯಕ್ತಿಗೆ ₹1.31 ಕೋಟಿ ವಂಚನೆ
-
ಸ್ಥಳೀಯ6 hours agoArrested-1,000 ಅಡಿ ಆಳದ ಪ್ರಪಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಶವ ಪತ್ತೆ; ಆತ್ಮಹತ್ಯೆ ಕತೆ ಕಟ್ಟಿದ ಪ್ರಿಯಕರ ಅರೆಸ್ಟ್..!
-
ಸ್ಥಳೀಯ7 hours agoSatish Patri-ಚಿಕ್ಕಮಗಳೂರು: ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾರ ಆರೋಪ; ತಲೆಮರೆಸಿಕೊಂಡಿದ್ದ ಅರ್ಚಕ ಸತೀಶ್ ಪಾತ್ರಿ ಅರೆಸ್ಟ್..!
-
ಮಂಗಳೂರು4 hours agoSoujanya Case-BIG BREAKING NEWS: ಸೌಜನ್ಯ ಪ್ರಕರಣ: ಮಂಗಳೂರಿನಲ್ಲಿ ಎಸ್ಐಟಿ ಮಹತ್ವದ ಸಭೆ; ಸೌಜನ್ಯ ದೇಹ ಸಿಕ್ಕ ಸ್ಥಳಕ್ಕೆ ಭೇಟಿ ಸಾಧ್ಯತೆ
-
ರಾಜಕೀಯ6 hours agoSudha Yadav-ಆರು ರಾಜ್ಯಗಳಿಗೆ ರಾಜ್ಯಪಾಲರ ಬದಲಾವಣೆ: ಕರ್ನಾಟಕಕ್ಕೆ ನೂತನ ರಾಜ್ಯಪಾಲರಾಗಿ ಸುಧಾ ಯಾದವ್
-
Uncategorized23 hours agoVivekananda-ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಐಇಇಇ ಅಂತಾರಾಷ್ಟ್ರೀಯ ಸಮ್ಮೇಳನದ ಸಮಾರೋಪ
-
ಶಿಕ್ಷಣ24 hours agoSahyadri College-ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ ಹದಿನಾರನೇ ಎಂಜಿನಿಯರಿಂಗ್ ಪದವಿ ಪ್ರದಾನ ಸಮಾರಂಭ


















