ಬಿಗ್ ನ್ಯೂಸ್
Trump’s tariff policy-ಟ್ರಂಪ್ ಸುಂಕ ನೀತಿ : ಷೇರು ಪೇಟೆಯಲ್ಲಿ ಮಹಾಕುಸಿತ – ಅಂಬಾನಿ ಮತ್ತು ಅದಾನಿ ಸೇರಿದಂತೆ 4 ಶ್ರೀಮಂತರ ರೂ.86000 ಕೋಟಿ ನಷ್ಟ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೊಸ ಸುಂಕ ನೀತಿಯಿಂದಾಗಿ ಸೋಮವಾರ ಜಗತ್ತಿನಾದ್ಯಂತ ಷೇರು ಮಾರುಕಟ್ಟೆಗಳು ದೊಡ್ಡ ಮಟ್ಟದಲ್ಲಿ ಕುಸಿದಿವೆ. ಭಾರತ, ಏಷ್ಯಾ, ಯೂರೋಪ್ ಸೇರಿದಂತೆ ಎಲ್ಲಾ ಪ್ರಮುಖ ಮಾರುಕಟ್ಟೆಗಳಲ್ಲಿ ಷೇರುಗಳ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಬೆಂಗಳೂರು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೊಸ ಸುಂಕ ನೀತಿಯಿಂದಾಗಿ ಸೋಮವಾರ ಜಗತ್ತಿನಾದ್ಯಂತ ಷೇರು ಮಾರುಕಟ್ಟೆಗಳು ದೊಡ್ಡ ಮಟ್ಟದಲ್ಲಿ ಕುಸಿದಿವೆ. ಭಾರತ, ಏಷ್ಯಾ, ಯೂರೋಪ್ ಸೇರಿದಂತೆ ಎಲ್ಲಾ ಪ್ರಮುಖ ಮಾರುಕಟ್ಟೆಗಳಲ್ಲಿ ಷೇರುಗಳ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಭಾರತದಲ್ಲಿ, ಷೇರು ಮಾರುಕಟ್ಟೆ ಆರಂಭವಾದ ಕೆಲವೇ ಕ್ಷಣಗಳಲ್ಲಿ ಹೂಡಿಕೆದಾರರು ಸುಮಾರು 20 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದರು. ಈ ದೊಡ್ಡ ಕುಸಿತದಿಂದಾಗಿ ಭಾರತದ ಅತಿ ಶ್ರೀಮಂತ ವ್ಯಕ್ತಿಗಳಾದ ಮುಕೇಶ್ ಅಂಬಾನಿ, ಗೌತಮ್ ಅದಾನಿ, ಸಾವಿತ್ರಿ ಜಿಂದಾಲ್ ಕುಟುಂಬ ಮತ್ತು ಶಿವ ನಾದರ್ ಅವರು ಒಟ್ಟಾಗಿ 10 ಬಿಲಿಯನ್ ಡಾಲರ್‌ಗೂ ಹೆಚ್ಚು ಸಂಪತ್ತನ್ನು ಕಳೆದುಕೊಂಡಿದ್ದಾರೆ. ಈ ದಿನವನ್ನು ‘ಕರಾಳ ಸೋಮವಾರ’ ಎಂದು ಪರಿಗಣಿಸಲಾಗಿದೆ.
12 ಲಕ್ಷ ಕೋಟಿ ರೂ. ನಷ್ಟ
ಟ್ರಂಪ್ ಸುಂಕ ಹಾಗೂ ಅದಕ್ಕೆ ಜಗತ್ತಿನ ರಿಯಾಕ್ಷನ್‌ನಿಂದ ಷೇರು ಪೇಟೆ ಕಂಡು ಕೇಳರಿಯಿದ ರೀತಿ ಮುಗ್ಗರಿಸಿದೆ. ಇದರ ಪರಿಣಾಮ ದೇಶದ ಅಗರ್ಭ ಶ್ರೀಮಂತರ ಮೇಲೆ ಜಾಸ್ತಿಯೇ ಆಗಿದ್ದು, ಬಿಲಿಯನ್ ಗಟ್ಟಲೇ ಆಸ್ತಿಯನ್ನು ಕಳೆದುಕೊಂಡಿದ್ದಾರೆ. ಪ್ರಮುಖವಾಗಿ ದೇಶದ ನಾಲ್ವರು ಸಿರಿವಂತರ 10 ಬಿಲಿಯನ್ ಡಾಲರ್ ಸಂಪತ್ತು ಸೋಮವಾರ ಕರಗಿದೆ. ಸೋಮವಾರ ಬೆಳಗ್ಗೆ 9 ಗಂಟೆಗೆ ವಹಿವಾಟು ಆರಂಭವಾದಾಗ ಸೆನ್ಸೆಕ್ಸ್ 3,939 ಪಾಯಿಂಟ್ಸ್ ಕುಸಿತ ಕಂಡಿತ್ತು. ನಿಫ್ಟಿ 50 ಕೂಡ 1,160 ಪಾಯಿಂಟ್ಸ್ ಕುಸಿತ ಕಂಡಿತ್ತು.
ಆದ್ರೆ ಕೊನೆಯಲ್ಲಿ ರಿಕವರಿ ಮೋಡ್‌ನಲ್ಲಿದ್ದ ಸೆನ್ಸೆಕ್ಸ ಹಾಗೂ ನಿಫ್ಟಿ ಅಲ್ಪ ಏರಿಕೆಯಾಯ್ತು. ಕೊನೆಗೆ ಸೆನ್ಸೆಕ್ಸ್ ಸೂಚ್ಯಂವು 2226.79 ಪಾಯಿಂಟ್ಸ್ ಅಥವಾ 2.95 ಪರ್ಸೆಂಟ್ ಇಳಿಕೆಗೊಂಡು 73,137.90 ಮಾರ್ಕ್‌ನಲ್ಲಿ ಮುಚ್ಚಿದೆ. ಇದೇ ವೇಳೆಯಲ್ಲಿ ನಿಫ್ಟಿ ಸೂಚ್ಯಂಕವು 742.85 ಪಾಯಿಂಟ್ಸ್ ಅಥವಾ 3.24 ಪರ್ಸೆಂಟ್ ತಗ್ಗಿದ್ದು 22,161.60 ಮಾರ್ಕ್ ತಲುಪಿದೆ.
ಅಂಬಾನಿ, ಅದಾನಿಗೆ ನಷ್ಟ!
ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ ಅವರು ಸ್ವಲ್ಪ ಜಾಸ್ತಿಯೇ ನಷ್ಟ ಅನುಭವಿಸಿದ್ದಾರೆ. ಸೋಮವಾರ ದಲಾಲ್ ಸ್ಟ್ರೀಟ್‌ನಲ್ಲಿ ಸಂಭವಿಸಿದ ಬ್ಲಡ್ ಬಾತ್‌ಗೆ ಮುಖೇಶ್ ಅಂಬಾನಿ ಅವರು ಬರೋಬ್ಬರಿ 3.6 ಬಿಲಿಯನ್ ಡಾಲರ್ ಅಂದ್ರೇ ಸುಮಾರು 31 ಸಾವಿರ ಕೋಟಿ ಸಂಪತ್ತನ್ನು ಕಳೆದುಕೊಂಡಿದ್ದು, ಸದ್ಯ ಅವರ ಒಟ್ಟು ನಿವ್ವಳ ಮೌಲ್ಯ 87.7 ಬಿಲಿಯನ್ ಡಾಲರ್‌ಗೆ ಇಳಿದಿದೆ. ಇನ್ನೂ, ಅದಾನಿ ಗ್ರೂಪನ್ ಒಡೆಯ ಗೌತಮ್ ಅದಾನಿ ಅವರ ಸಂಪತ್ತು 3 ಬಿಲಿಯನ್ ಡಾಲರ್ ಕುಸಿತ ಕಂಡಿದೆ. ಅಂದ್ರೇ ಸುಮಾರು 26 ಸಾವಿರ ಕೋಟಿ ರೂಪಾಯಿ ನಷ್ಟವನ್ನು ಅವರು ಅನುಭವಿಸಿದ್ದು, ಅವರ ಒಟ್ಟಾರೆ ಗ್ರಾಸ್ ವ್ಯಾಲ್ಯೂ 57.3 ಬಿಲಿಯನ್ ಡಾಲರ್‌ಗೆ ಇಳಿದಿದೆ.
ಜೊತೆಗೆ ಒಪಿ ಜಿಂದಾಲ್ ಗ್ರೂಪ್‌ನ ಮಾಲೀಕರಾದ ಸಾವಿತ್ರಿ ಜಿಂದಾಲ್ ಮತ್ತು ಕುಟುಂಬವು 2.2 ಬಿಲಿಯನ್ ಡಾಲರ್ ಕಳೆದುಕೊಂಡಿದ್ದು, ಅವರ ಸಂಪತ್ತು ಈಗ 33.9 ಬಿಲಿಯನ್ ಡಾಲರ್‌ಗೆ ಕುಸಿದಿದೆ. ಅವರು ಈಗ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 45ನೇ ಸ್ಥಾನದಲ್ಲಿದ್ದಾರೆ. ಇದರ ಜೊತೆ ಎಚ್‌ಸಿಎಲ್ ಟೆಕ್ನಾಲಜೀಸ್‌ನ ಸಂಸ್ಥಾಪಕ ಶಿವ ನಾದಾರ್ ಕೂಡ ತೀವ್ರ ನಷ್ಟ ಅನುಭವಿಸಿದ್ದು, ಅವರ ಸಂಪತ್ತು 1.5 ಬಿಲಿಯನ್ ಡಾಲರ್ ಕುಸಿದು 30.9 ಬಿಲಿಯನ್ ಡಾಲರ್‌ಗೆ ಬಂದು ನಿಂತಿದೆ. ಇನ್ನೂ ಷೇರುಪೇಟೆ ಕುಸಿತದಿಂದ ಬಿಎಸ್‌ಇಯಲ್ಲಿ ಪಟ್ಟಿ ಮಾಡಲಾದ ಎಲ್ಲಾ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯವು 19.4 ಲಕ್ಷ ಕೋಟಿ ರೂ.ಗಳಷ್ಟು ಇಳಿಕೆ ಕಂಡಿದ್ದು, ಹೂಡಿಕೆದಾರರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜೆಫ್ ಬೆಜೋಸ್, ಜುಕರ್‌ಬರ್ಗ್‌ಗೂ ಮೆಗಾ ಲಾಸ್!
ಟ್ರಂಪ್ ಎಫೆಕ್ಟ್‌ನಿಂದ ಕೇವಲ ಭಾರತೀಯ ಸಿರಿವಂತರು ಮಾತ್ರ ನಷ್ಟ ಅನುಭವಿಸುತ್ತಿಲ್ಲ. ಜಾಗತಿಕವಾಗಿ ಮಾರುಕಟ್ಟೆ ಕುಸಿಯುತ್ತಿರುವುದರಿಂದ ವಿಶ್ವದ ಅತ್ಯಂತ ಶ್ರೀಮಂತರು ಬಿಲಿಯನ್‌ಗಟ್ಟಲೇ ನಷ್ಟವನ್ನು ಅನುಭವಿಸುತ್ತಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ಅಮೆರಿಕದಲ್ಲಿ ಅಧ್ಯಕ್ಷರಾಗಿ ವಾಪಸ್ ಬಂದ ಬಳಿಕ ಸುಂಕಗಳನ್ನು ಹೆಚ್ಚಿಸಿದ್ದಾರೆ. ಇದರಿಂದ ವಾಲ್ ಸ್ಟ್ರೀಟ್ ಸುಮಾರು 8 ಟ್ರಿಲಿಯನ್ ಡಾಲರ್ ಮೌಲ್ಯದ ಸಂಪತ್ತನ್ನು ಕಳೆದುಕೊಂಡಿದೆ. ಅದರಲ್ಲೂ ಡೊನಾಲ್ಡ್ ಟ್ರಂಪ್ ಆಪ್ತ, ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನ ಸಿಇಒ ಎಲಾನ್ ಮಸ್ಕ್ ಅವರ ಸಂಪತ್ತು ಈ ವರ್ಷ 130 ಬಿಲಿಯನ್ ಡಾಲರ್‌ನಷ್ಟು ಕುಸಿತ ಕಂಡಿದೆ. ಅವರ ಪ್ರಸ್ತುತ ನಿವ್ವಳ ಮೌಲ್ಯ 302 ಬಿಲಿಯನ್ ಡಾಲರ್ ಆಗಿದೆ. ಅತ್ತ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ 45.2 ಬಿಲಿಯನ್ ಡಾಲರ್ ಕಳೆದುಕೊಂಡಿದ್ದು, ಅವರ ಸಂಪತ್ತು 193 ಬಿಲಿಯನ್ ಡಾಲರ್‌ಗೆ ಇಳಿದಿದೆ.
ಇದರ ಜೊತೆ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರ ಸಂಪತ್ತು 28.1 ಬಿಲಿಯನ್ ಡಾಲರ್ ಕುಸಿದಿದ್ದು, 179 ಬಿಲಿಯನ್ ಡಾಲರ್ ಸಂಪತ್ತಿಗೆ ಬಂದು ನಿಂತಿದ್ದಾರೆ. ಬಿಲ್ ಗೇಟ್ಸ್ ಕೂಡ 3.38 ಬಿಲಿಯನ್ ಡಾಲರ್ ಕಳೆದುಕೊಂಡು 155 ಬಿಲಿಯನ್ ಡಾಲರ್‌ಗೆ ತಮ್ಮ ಸಂಪತ್ತನ್ನು ಇಳಿಸಿಕೊಂಡಿದ್ದಾರೆ. 2025ರಲ್ಲಿ ವಿಶ್ವದ ಬಹಳಷ್ಟು ಬಿಲಿಯನೇರ್‌ಗಳು ತಮ್ಮ ಸಂಪತ್ತನ್ನು ಕಳೆದುಕೊಳ್ಳುತ್ತಿದ್ದಾರೆ. ಆದರೆ, ಇದಕ್ಕೆಲ್ಲಾ ವಿರುದ್ಧವಾಗಿ ಷೇರುಪೇಟೆ ಚಾಣಾಕ್ಯ ವಾರೆನ್ ಬಫೆಟ್ ಮಾತ್ರ ತಮ್ಮ ಸಂಪತ್ತಿಗೆ 12.7 ಬಿಲಿಯನ್ ಡಾಲರ್ ಅನ್ನು ಸೇರಿಸಿದ್ದು, ತಮ್ಮ ಸಂಪತ್ತನ್ನು 155 ಬಿಲಿಯನ್ ಡಾಲರ್‌ಗೆ ಏರಿಸಿಕೊಂಡಿದ್ದಾರೆ.
ಮಂಗಳೂರು
Ujire-ಭಾರೀ ಜನಸ್ತೋಮದೊಂದಿಗೆ ಸೌಜನ್ಯ ನ್ಯಾಯದ ನಡಿಗೆ
ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಸೌಜನ್ಯ ಪರ ಹೋರಾಟಗಾರರು ಉಜಿರೆಯಿಂದ ಬೆಳ್ತಂಗಡಿವರೆಗೆ ನ್ಯಾಯದ ನಡಿಗೆ ಹಮ್ಮಿಕೊಂಡಿದ್ದಾರೆ.

ಮಂಗಳೂರು: ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಸೌಜನ್ಯ ಪರ ಹೋರಾಟಗಾರರು ಉಜಿರೆಯಿಂದ ಬೆಳ್ತಂಗಡಿವರೆಗೆ ನ್ಯಾಯದ ನಡಿಗೆ ಹಮ್ಮಿಕೊಂಡಿದ್ದಾರೆ.
ಉಜಿರೆಯಿಂದ ಆರಂಭವಾದ ಬೃಹತ್ ಜಾಥಾದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದು, ಮೌನ ಮೆರವಣಿಗೆಯ ಮೂಲಕ ಸೌಜನ್ಯಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಲಾಯಿತು. ಸುಮಾರು ಐದು ಕಿಲೋಮೀಟರ್ ದೂರದವರೆಗೆ ಹೋರಾಟಗಾರರು ನಡಿಗೆಯಲ್ಲಿ ಸಾಗಲಿದ್ದಾರೆ.
ನ್ಯಾಯದ ನಡಿಗೆಯ ಬಳಿಕ ಬೆಳ್ತಂಗಡಿಯ ಮೈದಾನದಲ್ಲಿ ಬೃಹತ್ ಅಭಿನಂದನಾ ಸಮಾವೇಶ ನಡೆಯಲಿದೆ. ಸೌಜನ್ಯ ಪರವಾಗಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ ವಕೀಲರ ತಂಡಕ್ಕೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ವಕೀಲರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಅಂತರ ರಾಜ್ಯ
Jantar Mantar-ಸಿಜೆಪಿ ಪ್ರತಿಭಟನೆಗೆ ದೆಹಲಿಯಲ್ಲಿ ಬಿಗಿ ಭದ್ರತೆ – ಪಂಚರ್ ಆಗಲು ರಸ್ತೆಗಳಿಗೆ ತಡೆಬೇಲಿ..! ವಿಮಾನದಲ್ಲೇ ಅಭಿಜಿತ್ ದಿಪ್ಕೆ ಪೊಲೀಸ್ ವಶಕ್ಕೆ..! ಸಾವಿರಕ್ಕೂ ಮಿಕ್ಕಿ ಪ್ರತಿಭಟನಾಕಾರರೂ ವಶಕ್ಕೆ-ಸುಪ್ರೀಂ ಕೋರ್ಟ್ ವಕೀಲರಿಗೆ ತಡೆ..! ತೀವ್ರ ಅಡೆತಡೆಗಳ ನಡುವೆ ಜಂತರ್ ಮಂತರ್ ಗೆ ಹರಿದು ಬರುತ್ತಿರುವ ಜನಸಾಗರ
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕಾಕ್‌ರೋಚ್ ಜನತಾ ಪಾರ್ಟಿ (ಸಿಜೆಪಿ) ಕರೆ ನೀಡಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ನಗರದ ವಿವಿಧೆಡೆ ಹಾಗೂ ಗಡಿ ಪ್ರದೇಶಗಳಲ್ಲಿ ಈಗಾಗಲೇ ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕಾಕ್‌ರೋಚ್ ಜನತಾ ಪಾರ್ಟಿ (ಸಿಜೆಪಿ) ಕರೆ ನೀಡಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ನಗರದ ವಿವಿಧೆಡೆ ಹಾಗೂ ಗಡಿ ಪ್ರದೇಶಗಳಲ್ಲಿ ಈಗಾಗಲೇ ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನದೊಳಗೆ ಪ್ರವೇಶಿಸಿದ ಪೊಲೀಸರು ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಂತರ್ ಮಂತರ್ ನಲ್ಲಿ ಕ್ಷಣ ಕ್ಷಣ ಪ್ರತಿಭಟಕಾರರ ಸಂಖ್ಯೆ ಭಾರಿ ಏರುತ್ತಿದೆ.
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಜಂತರ್ ಮಂತರ್ ಗೆ ಆಗಮಿಸಿದ ನೂರಾರು ಸುಪ್ರೀಂ ಕೋರ್ಟಿನ ವಕೀಲರನ್ನು ಪೊಲೀಸರು ತಡೆಹಿಡಿದಿದ್ದಾರೆ ಎಂದು ವರದಿಯಾಗಿದೆ.
ನೋಯ್ಡಾ–ದೆಹಲಿ ಗಡಿ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಪ್ರತಿಭಟನಾಕಾರರನ್ನು ಬಸ್‌ಗಳಲ್ಲಿ ಕರೆದೊಯ್ದು ವಶಕ್ಕೆ ಪಡೆಯಲಾಗಿದೆ. ಇನ್ನೂ ಟಯರ್ ಪಂಚರ್ ಆಗುವ ಕಬ್ಬಿಣದ ಬೇಲಿಯನ್ನು ಪೊಲೀಸರು ರಸ್ತೆಗಳಲ್ಲಿ ಇಟ್ಟಿರುವ ಪ್ರತಿಭಟನಕಾರರು ಆರೋಪಿಸಿದ್ದಾರೆ. ಮತ್ತೂ ನಿರ್ದಿಷ್ಟ ಸ್ಥಳಗಳಲ್ಲಿ ಮೊಬೈಲ್ ನೆಟ್‌ವರ್ಕ್ ಗಳನ್ನು ಪೊಲೀಸರ ನಿರ್ದೇಶನದ ಮೇರೆಗೆ ಟೆಲಿಕಾಂ ಕಂಪೆನಿಗಳು ನಿಷ್ಕ್ರಿಯಗೊಳಿಸಿರುವ ಬಗ್ಗೆಯೂ ಆರೋಪಗಳು ವ್ಯಕ್ತವಾಗಿದೆ.
ಭದ್ರತಾ ವ್ಯವಸ್ಥೆಯ ಭಾಗವಾಗಿ 20 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ 200ಕ್ಕೂ ಹೆಚ್ಚು ಕಂಪನಿಗಳನ್ನು ನಿಯೋಜಿಸಲಾಗಿದೆ. ವಿಶೇಷವಾಗಿ ಕೇಂದ್ರ ದೆಹಲಿ, ಕನ್ನಾಟ್ ಪ್ಲೇಸ್ ಹಾಗೂ ನಗರದ ಪ್ರವೇಶ ಗಡಿ ಭಾಗಗಳಲ್ಲಿ ಹೆಚ್ಚಿನ ನಿಗಾ ಇರಿಸಲಾಗಿದೆ.
ಕನ್ನಾಟ್ ಪ್ಲೇಸ್ ಪ್ರದೇಶವನ್ನು 20 ವಲಯಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ವಲಯದ ಭದ್ರತಾ ಜವಾಬ್ದಾರಿಯನ್ನು ಡಿಸಿಪಿ ಅಥವಾ ಐಪಿಎಸ್ ಅಧಿಕಾರಿಗಳಿಗೆ ವಹಿಸಲಾಗಿದೆ. ಅಧಿಕಾರಿಗಳ ನೇತೃತ್ವದಲ್ಲಿ ವಿವಿಧೆಡೆ ಪಥಸಂಚಲನ ನಡೆಸಿ ಭದ್ರತಾ ಸಿದ್ಧತೆಗಳನ್ನು ಪರಿಶೀಲಿಸಲಾಗಿದೆ.
ಸಂದೇಹಾಸ್ಪದ ವಾಹನಗಳನ್ನು ತಡೆದು ಪರಿಶೀಲಿಸಲು ತುರ್ತು ಬಳಕೆಯ ಸ್ಪೈಕ್ ಸ್ಟ್ರಿಪ್‌ಗಳನ್ನು ಸಿದ್ಧವಾಗಿಡಲಾಗಿದೆ. ಭದ್ರತಾ ಕಾರ್ಯಾಚರಣೆಗಳಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಕಾನ್‌ಸ್ಟೆಬಲ್‌ಗಳು ಹಾಗೂ ಇನ್‌ಸ್ಪೆಕ್ಟರ್‌ಗಳಂತಹ ಕೆಳಹಂತದ ಪೊಲೀಸ್ ಸಿಬ್ಬಂದಿಗೂ ಬಾಡಿ ಕ್ಯಾಮೆರಾಗಳನ್ನು ಒದಗಿಸಲಾಗಿದೆ.
ಸಾರ್ವಜನಿಕರ ಸಾಮಾನ್ಯ ಸಂಚಾರಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ, ಅನುಮತಿಯಿಲ್ಲದ ಪ್ರತಿಭಟನೆಯಲ್ಲಿ ಭಾಗವಹಿಸಲು ಮುಂದಾಗುವವರನ್ನು ತಕ್ಷಣ ವಶಕ್ಕೆ ಪಡೆಯಲಾಗುವುದು ಹಾಗೂ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸ್ಥಳೀಯ
Shweta Motors-ಸಿದ್ದಕಟ್ಟೆಯಲ್ಲಿ ಅ.11ರಂದು ಶ್ವೇತಾ ಮೋಟಾರ್ಸ್‌ನ ಎರಡನೇ ಶಾಖೆ ಶುಭಾರಂಭ; TVS, Bajaj, Suzuki ಸೇರಿದಂತೆ ಪ್ರಮುಖ ಬ್ರ್ಯಾಂಡ್‌ಗಳ ದ್ವಿಚಕ್ರ ವಾಹನಗಳ ಮಾರಾಟ, ಸೇವಾ ಸೌಲಭ್ಯ ಲಭ್ಯ
ದ್ವಿಚಕ್ರ ವಾಹನಗಳ ಖರೀದಿ ಮತ್ತು ಸೇವೆಗಾಗಿ ಗ್ರಾಹಕರಿಗೆ ಮತ್ತಷ್ಟು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶ್ವೇತಾ ಮೋಟಾರ್ಸ್ ತನ್ನ ಎರಡನೇ ಶಾಖೆಯನ್ನು ಸಿದ್ದಕಟ್ಟೆಯಲ್ಲಿ ಆರಂಭಿಸುತ್ತಿದೆ. ನೂತನ ಶಾಖೆಯ ಉದ್ಘಾಟನಾ ಸಮಾರಂಭ ಅಕ್ಟೋಬರ್ 11ರ ಭಾನುವಾರ ಬೆಳಿಗ್ಗೆ 9.45ಕ್ಕೆ ಸಿದ್ದಕಟ್ಟೆಯ ಮುಖ್ಯ ರಸ್ತೆಯ ಮಡಾಯಿ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ.

ಸಿದ್ದಕಟ್ಟೆ: ದ್ವಿಚಕ್ರ ವಾಹನಗಳ ಖರೀದಿ ಮತ್ತು ಸೇವೆಗಾಗಿ ಗ್ರಾಹಕರಿಗೆ ಮತ್ತಷ್ಟು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶ್ವೇತಾ ಮೋಟಾರ್ಸ್ ತನ್ನ ಎರಡನೇ ಶಾಖೆಯನ್ನು ಸಿದ್ದಕಟ್ಟೆಯಲ್ಲಿ ಆರಂಭಿಸುತ್ತಿದೆ. ನೂತನ ಶಾಖೆಯ ಉದ್ಘಾಟನಾ ಸಮಾರಂಭ ಅಕ್ಟೋಬರ್ 11ರ ಭಾನುವಾರ ಬೆಳಿಗ್ಗೆ 9.45ಕ್ಕೆ ಸಿದ್ದಕಟ್ಟೆಯ ಮುಖ್ಯ ರಸ್ತೆಯ ಮಡಾಯಿ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ.
ಶ್ವೇತಾ ಮೋಟಾರ್ಸ್‌ನಲ್ಲಿ TVS, Bajaj, Suzuki ಸೇರಿದಂತೆ ಪ್ರಮುಖ ಕಂಪನಿಗಳ ವಿವಿಧ ಮಾದರಿಯ ದ್ವಿಚಕ್ರ ವಾಹನಗಳ ಮಾರಾಟ ಹಾಗೂ ಸೇವಾ ಸೌಲಭ್ಯ ಲಭ್ಯವಿರಲಿದೆ. ಒಂದೇ ಸೂರಿನಡಿ ವಿವಿಧ ಬ್ರ್ಯಾಂಡ್‌ಗಳ ವಾಹನಗಳ ಖರೀದಿ ಮತ್ತು ಸೇವೆ ಪಡೆಯಲು ಗ್ರಾಹಕರಿಗೆ ಇದರಿಂದ ಅನುಕೂಲವಾಗಲಿದೆ.
ಸಂಸ್ಥೆಯ ಎರಡನೇ ಶಾಖೆಯ ಆರಂಭದೊಂದಿಗೆ ಸಿದ್ದಕಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಗ್ರಾಹಕರಿಗೆ ದ್ವಿಚಕ್ರ ವಾಹನಗಳ ಖರೀದಿ ಮತ್ತು ನಿರ್ವಹಣಾ ಸೇವೆಗಳನ್ನು ಸುಲಭವಾಗಿ ಪಡೆಯಲು ಅವಕಾಶ ದೊರೆಯಲಿದೆ.

ಶ್ವೇತಾ ಮೋಟಾರ್ಸ್‌ನ ಪ್ರೊಪ್ರೈಟರ್ ಹರೀಶ್ ಬಂಗೇರ ಅವರು ನೂತನ ಶಾಖೆಯ ಉದ್ಘಾಟನಾ ಸಮಾರಂಭಕ್ಕೆ ಸಾರ್ವಜನಿಕರು ಹಾಗೂ ಗ್ರಾಹಕರನ್ನು ಆತ್ಮೀಯವಾಗಿ ಆಹ್ವಾನಿಸಿದ್ದಾರೆ.
-
ಬಿಗ್ ನ್ಯೂಸ್20 hours agoKaavu-BIG BREAKING: ಕಾವು ಬಳಿ ಹೆದ್ದಾರಿಗೆ ಉರುಳಿದ ಮರಗಳು, ಹೈಟೆನ್ಷನ್ ವಿದ್ಯುತ್ ಕಂಬ : ಮಾಣಿ – ಮೈಸೂರು ಹೈವೆಯಲ್ಲಿ ವಾಹನ ಸಂಚಾರ ಸ್ಥಗಿತ
-
ಮಂಗಳೂರು22 hours agoMangalore-ಮಂಗಳೂರು : 2 ತಿಂಗಳ ಬಳಿಕ ಸಮಾಧಿಯಿಂದ ಹೊರಬರಲಿದೆ ಆಲ್ಬರ್ಟ್ ರೇಗೋ ಶವ..!; ಮಗಳಿಂದಲೇ ತಂದೆಯ ಕೊಲೆ : ಸ್ನೇಹಿತನ ಆರೋಪ – ತನಿಖೆಗೆ ಸಿಗಲಿದೆ ಮಹತ್ವದ ತಿರುವು
-
ಅಪರಾಧ21 hours agoPuttur-ಪುತ್ತೂರು: ಅಕ್ರಮ ಗೋ ಸಾಗಾಟ ಪ್ರಕರಣ; ಪರಾರಿಯಾಗಿದ್ದ ಇಬ್ಬರು ವಶಕ್ಕೆ, ಆರೋಪಿ ಶಿವಪ್ರಸಾದ್ ಮನೆ ಮಹಜರು?
-
ಮಂಗಳೂರು21 hours agoMRPL accident-MRPL ಅವಘಡದಲ್ಲಿ ಮೃತಪಟ್ಟ ಕರ್ಕಡ ಕುಟುಂಬಕ್ಕೆ EPFO ಕ್ಲೈಮ್ ಸಂದಾಯ
-
ಅಪರಾಧ23 hours agoMangalore-ವಾಟರ್ ಪ್ಯೂರಿಫೈಯರ್ ಒಳಗೆ ಕೋಟ್ಯಾಂತರ ರೂ ಮೌಲ್ಯದ ಡ್ರಗ್ಸ್- ಕೋರಿಯರ್ ಮೂಲಕ ಸಾಗಾಟ | ಪೊಲೀಸರ ಕಣ್ಣಿಗೆ ಮಣ್ಣೆರೆಚುವ ಯತ್ನ ಮಂಗಳೂರಿನಲ್ಲಿ ವಿಫಲ – ಮೂವರ ಬಂಧನ..!
-
ಸ್ಥಳೀಯ23 hours agoNavoor clinic-ನಾವೂರು ಕ್ಲಿನಿಕ್ಗೆ ಬೆಂಕಿ ಹಚ್ಚಿದ ಪ್ರಕರಣ: ಘಟನಾ ಸ್ಥಳಕ್ಕೆ ಎಎಸ್ಪಿ ಭೇಟಿ, ಪರಿಶೀಲನೆ
-
ಶಿಕ್ಷಣ22 hours agoVivekananda-ರಾಷ್ಟ್ರಮಟ್ಟದ ಭೌತಶಾಸ್ತ್ರ ಸ್ಪರ್ಧೆಯಲ್ಲಿ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಯ ಸಾಧನೆ..!
-
ನಿಧನ ವಾರ್ತೆ3 hours agoMumbai-ಪ್ರೀತಿಸಿ ಮದುವೆಯಾಗಿದ್ದ ಜೋಡಿಯ ದುರಂತ ಅಂತ್ಯ? ಸರಪಳಿಯಿಂದ ಕಾಲು ಕಟ್ಟಿದ ಸ್ಥಿತಿಯಲ್ಲಿ ಶವ ಪತ್ತೆ


















