ಸಿನೆಮಾ
Anushka Shetty-ಮಧೂರು ದೇವಸ್ಥಾನದಲ್ಲಿ ಯಾಗ ಮಾಡಿಸಿದ ನಟಿ ಅನುಷ್ಕಾ ಶೆಟ್ಟಿ
ಪ್ರಸಿದ್ಧ ಚಲನಚಿತ್ರ ನಟಿ ಅನುಷ್ಕಾ ಶೆಟ್ಟಿ ಅವರು ಮಧೂರು ಕ್ಷೇತ್ರದ ಕಾರ್ಯಕ್ರಮಗಳಲ್ಲಿ ಖುದ್ದಾಗಿ ಭಾಗವಹಿಸಲು ಸಾಧ್ಯವಾಗದಿದ್ದರೂ, ತಮ್ಮ ಹೆಸರಿನಲ್ಲಿ 128 ತೆಂಗಿನಕಾಯಿಗಳ ‘ಅಷ್ಟ ದ್ರವ್ಯ ಮಹಾಗಣಪತಿ ಯಾಗ’ ಹಾಗೂ ‘ಮೂಡಪ್ಪ ಸೇವೆ’ಯನ್ನು ಭಕ್ತಿಪೂರ್ವಕವಾಗಿ ನೆರವೇರಿಸಿದ್ದಾರೆ.
ಕಾಸರಗೋಡು: ಕೇರಳದ ಅತ್ಯಂತ ಪುರಾತನ ಮತ್ತು ಕಾರಣಿಕ ಕ್ಷೇತ್ರಗಳಲ್ಲಿ ಒಂದಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನವು ಇದೀಗ ವಿಶೇಷ ಸಂಭ್ರಮದಲ್ಲಿದೆ. 14 ವರ್ಷಗಳ ನಂತರ ಇಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಬರೋಬ್ಬರಿ 33 ವರ್ಷಗಳ ಬಳಿಕ ಶ್ರೀ ಸಿದ್ಧಿವಿನಾಯಕನಿಗೆ ‘ಮೂಡಪ್ಪ ಸೇವೆ’ಯು ಮಾರ್ಚ್ 27 ರಿಂದ ಏಪ್ರಿಲ್ 7 ರವರೆಗೆ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದೆ.
ಈ ಪುಣ್ಯ ಸಂದರ್ಭದಲ್ಲಿ, ಪ್ರಸಿದ್ಧ ಚಲನಚಿತ್ರ ನಟಿ ಅನುಷ್ಕಾ ಶೆಟ್ಟಿ ಅವರು ಶ್ರೀ ದೇವರಿಗೆ ವಿಶೇಷ ಸೇವೆ ಸಲ್ಲಿಸಿದ್ದಾರೆ. ಕ್ಷೇತ್ರದ ಕಾರ್ಯಕ್ರಮಗಳಲ್ಲಿ ಖುದ್ದಾಗಿ ಭಾಗವಹಿಸಲು ಸಾಧ್ಯವಾಗದಿದ್ದರೂ, ಅವರು ತಮ್ಮ ಹೆಸರಿನಲ್ಲಿ 128 ತೆಂಗಿನಕಾಯಿಗಳ ‘ಅಷ್ಟ ದ್ರವ್ಯ ಮಹಾಗಣಪತಿ ಯಾಗ’ ಹಾಗೂ ‘ಮೂಡಪ್ಪ ಸೇವೆ’ಯನ್ನು ಭಕ್ತಿಪೂರ್ವಕವಾಗಿ ನೆರವೇರಿಸಿದ್ದಾರೆ. ನವೀಕರಣಗೊಂಡಿರುವ ಶ್ರೀ ಕ್ಷೇತ್ರದಲ್ಲಿ ನಟಿ ಅನುಷ್ಕಾ ಸಲ್ಲಿಸಿದ ಈ ಸೇವೆಯು ಗಮನ ಸೆಳೆದಿದೆ. ಇದು ಅವರ ದೈವಭಕ್ತಿಗೆ ಸಾಕ್ಷಿಯಾಗಿದೆ.
ಕೇರಳದ ಅತ್ಯಂತ ಪುರಾತನ ಕ್ಷೇತ್ರ
ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿ ಭಾರೀ ಸಂಖ್ಯೆಯ ಭಕ್ತಾಧಿಗಳು ಕ್ಷೇತ್ರಕ್ಕೆ ಆಗಮಿಸಿ ಸೇವೆ ಸಲ್ಲಿಸಿದ್ದಾರೆ. ಮಧೂರು ಕ್ಷೇತ್ರ ಕೇರಳದ ಅತ್ಯಂತ ಪುರಾತನ ಕ್ಷೇತ್ರಗಳಲ್ಲಿ ಒಂದಾಗಿದ್ದು, ಹಲವಾರು ವರ್ಷಗಳ ಬಳಿಕ ಬ್ರಹ್ಮಕಲಶೋತ್ಸವ ಸಂಭ್ರಮ ಮನೆ ಮಾಡಿದೆ. ಈ ದೇವಸ್ಥಾನವನ್ನು ಪುರಾತನ ಶೈಲಿಗೆ ಯಾವುದೇ ಧಕ್ಕೆ ಬಾರದ ರೀತಿಯಲ್ಲಿ ನವೀಕರಿಸಲಾಗಿದೆ. ಈ ದೇವಸ್ಥಾನದದಲ್ಲಿ ಶಿವ ಮತ್ತು ಮಹಾಗಣಪತಿಯ ಆರಾಧನೆ ಮಾಡಲಾಗುತ್ತದೆ.
ಅನುಷ್ಕಾ ಶೆಟ್ಟಿ ಸಿನಿಮಾಗೆ ಕಂಬ್ಯಾಕ್
ನಟಿ ಅನುಷ್ಕಾ ಶೆಟ್ಟಿ ʻಬಾಹುಬಲಿʼ ಸಿನಿಮಾ ಬಳಿಕ ಅದ್ಯಾಕೋ ಬಣ್ಣದ ಲೋಕದಿಂದ ದೂರ ಸರಿದಿದ್ದರು. ಬಳಿಕ ಆಗಾಗ ಒಂದೆರಡು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಸಿನಿಮಾ ಶೂಟಿಂಗ್ ಒಂದರಲ್ಲಿ ಭಾಗಿಯಾಗಿದ್ದು ಮತ್ತೆ ಕಂಬ್ಯಾಕ್ ಮಾಡಲು ಸಿದ್ಧವಾಗಿದ್ದಾರೆ. ಇದೇ ಹೊತ್ತಿನಲ್ಲಿ, ಕಾಸರಗೋಡಿನ ವಿಶೇಷ ಮಹಾಗಣಪತಿ ಯಾಗವನ್ನು ಅನುಷ್ಕಾ ಶೆಟ್ಟಿ ಮಾಡಿಸಿದ್ದಾರೆ.
ʻಬಾಹುಬಲಿʼ ಸಿನಿಮಾ ನಂತರ ಅನುಷ್ಕಾ ಶೆಟ್ಟಿ ʻಭಾಗಮತಿʼ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ತೆಲುಗು ಮತ್ತು ತಮಿಳು ಭಾಷೆಯಲ್ಲಿ ರಿಲೀಸ್ ಆಗಿತ್ತು. ಆ ಬಳಿಕ ʻಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿʼ 2023ರಲ್ಲಿ ತೆರೆಕಂಡ ಈ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಕೊನೆಯದಾಗಿ ನಟಿಸಿದ್ದರು. ಇದು ತೆಲುಗು ಸಿನಿಮಾವಾಗಿದ್ದು, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಡಬ್ ಮಾಡಿ ರಿಲೀಸ್ ಮಾಡಲಾಗಿತ್ತು. ಸದ್ಯ ಎರೆಡೆರಡು ಸಿನಿಮಾಗಳಲ್ಲಿ ಅನುಷ್ಕಾ ನಟಿಸುತ್ತಿದ್ದಾರೆ. ಆ ಪೈಕಿ ʻಘಾಟಿʼ ಸಿನಿಮಾ ಕೂಡ ಒಂದು.
ಸಿನೆಮಾ
Nana Patekar-ನಾನಾ ಪಾಟೇಕರ್ ಸಾವಿಗೆ ನಿಖರ ಕಾರಣವೇನು? ಗೋವಾ ಪೊಲೀಸರಿಂದ ಅಸಹಜ ಸಾವು ಪ್ರಕರಣ ದಾಖಲು
ಹಿರಿಯ ಬಾಲಿವುಡ್ ನಟ ನಾನಾ ಪಾಟೇಕರ್ ಅವರ ನಿಧನದ ಹಿನ್ನೆಲೆಯಲ್ಲಿ ಗೋವಾ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 194ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ಉಪನಿರೀಕ್ಷಕ ನಿತಿನ್ ನಾಯಕ್ ತನಿಖೆ ನಡೆಸುತ್ತಿದ್ದಾರೆ.
ಪಣಜಿ: ಹಿರಿಯ ಬಾಲಿವುಡ್ ನಟ ನಾನಾ ಪಾಟೇಕರ್ ಅವರ ನಿಧನದ ಹಿನ್ನೆಲೆಯಲ್ಲಿ ಗೋವಾ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 194ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ಉಪನಿರೀಕ್ಷಕ ನಿತಿನ್ ನಾಯಕ್ ತನಿಖೆ ನಡೆಸುತ್ತಿದ್ದಾರೆ.
ಡೋನಾ ಪೌಲಾದ ಓಷನ್ ಪಾರ್ಕ್‌ನಲ್ಲಿರುವ ತಮ್ಮ ನಿವಾಸದಿಂದ ಬಾಂಬೋಲಿಮ್‌ನ ಮಣಿಪಾಲ್ ಆಸ್ಪತ್ರೆಗೆ ಕರೆತರುವಷ್ಟರಲ್ಲಿ 75 ವರ್ಷದ ನಾನಾ ಪಾಟೇಕರ್ ಮೃತಪಟ್ಟಿದ್ದರು ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.
ತನಿಖೆಯ ಭಾಗವಾಗಿ ನಟನ ನಿವಾಸಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಗೋವಾ ಮೆಡಿಕಲ್ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆಯನ್ನೂ ನಡೆಸಲಾಗಿದ್ದು, ಸಾವಿಗೆ ಕಾರಣವಾದ ಸಂದರ್ಭಗಳ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಕುಟುಂಬಸ್ಥರು ಹಾಗೂ ಸಂಬಂಧಿಕರ ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ಪ್ರಕ್ರಿಯೆಯೂ ನಡೆದಿದೆ.
ನಾನಾ ಪಾಟೇಕರ್ ಅವರ ಸಾವಿಗೆ ಹೃದಯಾಘಾತ ಕಾರಣವಾಗಿರಬಹುದು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಆದರೆ, ಸಾವಿನ ನಿಖರ ಕಾರಣ ಮತ್ತು ಸಂದರ್ಭಗಳ ಕುರಿತು ತನಿಖೆ ಮುಂದುವರಿದಿದೆ. ಅಸಹಜ ಸಾವು ಪ್ರಕರಣ ದಾಖಲಿಸಿರುವುದು ಮಾತ್ರವೇ ಸಾವಿನಲ್ಲಿ ಅಪರಾಧ ಅಥವಾ ಸಂಶಯಾಸ್ಪದ ಕೃತ್ಯ ನಡೆದಿದೆ ಎಂಬುದನ್ನು ಸೂಚಿಸುವುದಿಲ್ಲ. ತನಿಖೆಯ ಫಲಿತಾಂಶದ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
ಸಿನೆಮಾ
Drishyam 3-ಮಲಯಾಳಂ ನ ದಾಖಲೆ ಮುರಿದು ಬಾಕ್ಸ್ ಆಫೀಸ್‌ನಲ್ಲಿ ‘ದೃಶ್ಯಂ 3’ ಧಮಾಕಾ; 4 ದಿನದಲ್ಲೇ ₹300 ಕೋಟಿ ಕ್ಲಬ್‌ಗೆ ಎಂಟ್ರಿ..!
ಅಜಯ್ ದೇವಗನ್ ಅಭಿನಯದ ‘ದೃಶ್ಯಂ 3: ದಿ ಕನ್‌ಕ್ಲೂಷನ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿದ್ದು, ಬಿಡುಗಡೆಯಾದ ಕೇವಲ ನಾಲ್ಕು ದಿನಗಳಲ್ಲಿ ವಿಶ್ವಾದ್ಯಂತ ₹300 ಕೋಟಿ ಗಡಿ ದಾಟಿದೆ. ಚಿತ್ರದ ಒಟ್ಟು ವಿಶ್ವಾದ್ಯಂತ ಗಳಿಕೆ ಇದೀಗ ₹303 ಕೋಟಿ ತಲುಪಿದೆ.
ಮುಂಬೈ: ಅಜಯ್ ದೇವಗನ್ ಅಭಿನಯದ ‘ದೃಶ್ಯಂ 3: ದಿ ಕನ್‌ಕ್ಲೂಷನ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿದ್ದು, ಬಿಡುಗಡೆಯಾದ ಕೇವಲ ನಾಲ್ಕು ದಿನಗಳಲ್ಲಿ ವಿಶ್ವಾದ್ಯಂತ ₹300 ಕೋಟಿ ಗಡಿ ದಾಟಿದೆ. ಚಿತ್ರದ ಒಟ್ಟು ವಿಶ್ವಾದ್ಯಂತ ಗಳಿಕೆ ಇದೀಗ ₹303 ಕೋಟಿ ತಲುಪಿದೆ.
ಬಿಡುಗಡೆಯ ನಾಲ್ಕನೇ ದಿನ ಚಿತ್ರವು ಭಾರತದಲ್ಲಿ 16,274 ಪ್ರದರ್ಶನಗಳಿಂದ ಸುಮಾರು ₹21 ಕೋಟಿ ನಿವ್ವಳ ಗಳಿಸಿದೆ. ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ನಿವ್ವಳ ಗಳಿಕೆ ₹197.50 ಕೋಟಿಗೆ ತಲುಪಿದ್ದು, ಒಟ್ಟು ಕಲೆಕ್ಷನ್ ಸುಮಾರು ₹237 ಕೋಟಿ ಆಗಿದೆ.
ಚಿತ್ರಕ್ಕೆ ಭಾರತ ಮಾತ್ರವಲ್ಲದೆ ಸಾಗರೋತ್ತರ ಮಾರುಕಟ್ಟೆಯಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಾಲ್ಕನೇ ದಿನ ವಿದೇಶಿ ಮಾರುಕಟ್ಟೆಯಲ್ಲಿ ಸುಮಾರು ₹5 ಕೋಟಿ ಗಳಿಸಿದ್ದು, ಇದರೊಂದಿಗೆ ವಿದೇಶದಲ್ಲಿನ ಒಟ್ಟು ಗಳಿಕೆ ₹66 ಕೋಟಿ ತಲುಪಿದೆ.
ಮಲಯಾಳಂ ‘ದೃಶ್ಯಂ 3’ ಗಳಿಕೆಯನ್ನೂ ಮೀರಿಸಿದ ಹಿಂದಿ ಸಿನಿಮಾ
ಅಜಯ್ ದೇವಗನ್ ಅಭಿನಯದ ಹಿಂದಿ ‘ದೃಶ್ಯಂ 3’ಗೂ ಮುನ್ನ ಮೋಹನ್‌ಲಾಲ್ ನಟನೆಯ ಮಲಯಾಳಂ ‘Drishyam 3: The Past Never Stays Silent’ ಬಿಡುಗಡೆಯಾಗಿತ್ತು. ಆ ಚಿತ್ರವು ವಿಶ್ವಾದ್ಯಂತ ₹237.70 ಕೋಟಿ ಗಳಿಕೆ ದಾಖಲಿಸಿತ್ತು ಎಂದು ವರದಿಯಾಗಿದೆ.
ಸಿನೆಮಾ
Prema Da Ooralli-ಅಮ್ಮನ ಮಂಗಳಸೂತ್ರವನ್ನೇ ಗಿರವಿಡಲು ಮುಂದಾಗಿದ್ದ ನಿರ್ದೇಶಕ; ಇಂದು ₹17 ಕೋಟಿಯತ್ತ ಸಿನಿಮಾ! ‘ಪ್ರೇಮದ ಊರಲ್ಲಿ’ ಸೃಷ್ಟಿಸಿದ ಬಾಕ್ಸ್ ಆಫೀಸ್ ಅಚ್ಚರಿ
ದೊಡ್ಡ ತಾರೆಯಿಲ್ಲ… ಅದ್ದೂರಿ ಪ್ರಚಾರವಿಲ್ಲ… ಕೋಟ್ಯಂತರ ರೂಪಾಯಿ ಬಜೆಟ್ ಕೂಡ ಇಲ್ಲ. ಆದರೂ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಸದ್ದು ಮಾಡುತ್ತಿರುವ ಸಿನಿಮಾ ಇದು. ಆರಂಭದಲ್ಲಿ ಬೆರಳೆಣಿಕೆಯಷ್ಟು ಪ್ರದರ್ಶನಗಳೊಂದಿಗೆ ತೆರೆಕಂಡಿದ್ದ ‘ಪ್ರೇಮದ ಊರಲ್ಲಿ’ ಇದೀಗ ಕನ್ನಡ ಚಿತ್ರರಂಗದ ಅಚ್ಚರಿಯ ಯಶೋಗಾಥೆಯಾಗಿ ಹೊರಹೊಮ್ಮಿದೆ.
ಬೆಂಗಳೂರು: ದೊಡ್ಡ ತಾರೆಯಿಲ್ಲ… ಅದ್ದೂರಿ ಪ್ರಚಾರವಿಲ್ಲ… ಕೋಟ್ಯಂತರ ರೂಪಾಯಿ ಬಜೆಟ್ ಕೂಡ ಇಲ್ಲ. ಆದರೂ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಸದ್ದು ಮಾಡುತ್ತಿರುವ ಸಿನಿಮಾ ಇದು. ಆರಂಭದಲ್ಲಿ ಬೆರಳೆಣಿಕೆಯಷ್ಟು ಪ್ರದರ್ಶನಗಳೊಂದಿಗೆ ತೆರೆಕಂಡಿದ್ದ ‘ಪ್ರೇಮದ ಊರಲ್ಲಿ’ ಇದೀಗ ಕನ್ನಡ ಚಿತ್ರರಂಗದ ಅಚ್ಚರಿಯ ಯಶೋಗಾಥೆಯಾಗಿ ಹೊರಹೊಮ್ಮಿದೆ.
ಕೇವಲ ₹2.5 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಕನ್ನಡ ಪ್ರೇಮಕಥನ, ಹತ್ತನೇ ದಿನದ ವೇಳೆಗೆ ಭಾರತದಲ್ಲಿ ಸುಮಾರು ₹16.96 ಕೋಟಿ ನಿವ್ವಳ ಗಳಿಕೆ ದಾಖಲಿಸಿದೆ. ಹತ್ತನೇ ದಿನವೊಂದರಲ್ಲೇ ಸುಮಾರು ₹3.5 ಕೋಟಿ ಗಳಿಸಿರುವುದು ಚಿತ್ರದ ವೇಗವನ್ನು ತೋರಿಸುತ್ತದೆ. ಹೀಗಾಗಿ ‘ಪ್ರೇಮದ ಊರಲ್ಲಿ’ ಈಗ ಕನ್ನಡದ ಅತ್ಯಂತ ಲಾಭದಾಯಕ ಸಿನಿಮಾಗಳ ಸಾಲಿನಲ್ಲಿ ಸ್ಥಾನ ಪಡೆಯುವತ್ತ ಮುನ್ನಡೆದಿದೆ.
₹9 ಲಕ್ಷದಿಂದ ಆರಂಭ… ಕೋಟಿ ಕೋಟಿ ಗಳಿಕೆಯತ್ತ
ಚಿತ್ರದ ಆರಂಭವೇನೂ ಅದ್ಧೂರಿಯಾಗಿರಲಿಲ್ಲ. ಪ್ರಮುಖ ತಾರೆಯರಿಲ್ಲದ ಕಾರಣ ಮೊದಲ ದಿನ ಕೇವಲ 60 ಪ್ರದರ್ಶನಗಳಲ್ಲಿ ₹9 ಲಕ್ಷ ಗಳಿಸಿತ್ತು. ಆದರೆ ಎರಡನೇ ದಿನದಿಂದಲೇ ಚಿತ್ರಕ್ಕೆ ಪ್ರೇಕ್ಷಕರ ಮಾತು ಪ್ರಚಾರದ ಕೆಲಸ ಮಾಡತೊಡಗಿತು.
ಮೂರನೇ ದಿನದ ವೇಳೆಗೆ 155 ಪ್ರದರ್ಶನಗಳಲ್ಲಿ ಶೇ 55ರಷ್ಟು ಆಕ್ಯುಪೆನ್ಸಿಯೊಂದಿಗೆ ₹55 ಲಕ್ಷ ಗಳಿಸಿತು. ಮೊದಲ ಸೋಮವಾರ ₹65 ಲಕ್ಷ, ಮಂಗಳವಾರ ₹95 ಲಕ್ಷ ಗಳಿಸಿದ ಸಿನಿಮಾ, ಎರಡನೇ ಭಾನುವಾರ ಬರೋಬ್ಬರಿ ₹3.85 ಕೋಟಿ ಗಳಿಸಿತು.
ಇದು ಕೇವಲ ಬಾಕ್ಸ್ ಆಫೀಸ್ ಅಂಕಿ-ಅಂಶಗಳ ಏರಿಕೆಯಲ್ಲ; ಪ್ರೇಕ್ಷಕರಿಂದ ಪ್ರೇಕ್ಷಕರಿಗೆ ಹರಡಿದ ಮೆಚ್ಚುಗೆಯ ಅಲೆ.
ಬಿಡುಗಡೆಯಾದ ಹತ್ತನೇ ದಿನದೊಳಗೆ ಚಿತ್ರವು ಚಿತ್ರಮಂದಿರಗಳಲ್ಲಿ 10 ಲಕ್ಷಕ್ಕೂ ಅಧಿಕ ಪ್ರೇಕ್ಷಕರನ್ನು ಸೆಳೆದಿದೆ ಎನ್ನಲಾಗಿದೆ. ಬೆಂಗಳೂರಿನಲ್ಲೂ ಸೋಮವಾರದಂತಹ ವಾರದ ದಿನಗಳಲ್ಲಿ ಹಲವು ಪ್ರದರ್ಶನಗಳು ಭರ್ತಿಯಾಗುತ್ತಿರುವುದು ಚಿತ್ರದ ಬೇಡಿಕೆಯನ್ನು ಮತ್ತಷ್ಟು ಕುತೂಹಲಕರವಾಗಿಸಿದೆ.
‘ಲವ್ ಮಾಕ್ಟೇಲ್ 3’ ದಾಖಲೆಗೆ ಸವಾಲು?
ಕನ್ನಡದ ಕಡಿಮೆ ಬಜೆಟ್‌ನ ಸಿನಿಮಾಗಳು ದೊಡ್ಡ ಮಟ್ಟದ ಲಾಭ ಗಳಿಸಬಹುದು ಎಂಬುದಕ್ಕೆ ಇತ್ತೀಚಿನ ವರ್ಷಗಳಲ್ಲಿ ‘ಲವ್ ಮಾಕ್ಟೇಲ್ 3’ ಪ್ರಮುಖ ಉದಾಹರಣೆಯಾಗಿತ್ತು. ಸುಮಾರು ₹2 ಕೋಟಿ ಬಜೆಟ್‌ನಲ್ಲಿ ನಿರ್ಮಾಣಗೊಂಡಿದ್ದ ಆ ಸಿನಿಮಾ ₹18.55 ಕೋಟಿ ಗಳಿಸಿತ್ತು.
ಈಗ ಕೇವಲ ಹತ್ತು ದಿನಗಳಲ್ಲೇ ₹16.96 ಕೋಟಿಯ ಗಡಿ ತಲುಪಿರುವ ‘ಪ್ರೇಮದ ಊರಲ್ಲಿ’, ಆ ಚಿತ್ರದ ಜೀವಿತಾವಧಿ ಗಳಿಕೆಯನ್ನು ಮೀರುವ ಸಾಧ್ಯತೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
ಇದೇ ವೇಳೆ, ನೂರಾರು ಕೋಟಿ ರೂಪಾಯಿ ಬಜೆಟ್‌ನ ದೊಡ್ಡ ಸಿನಿಮಾಗಳಿಗೆ ಎದುರಾಗುವ ಬಾಕ್ಸ್ ಆಫೀಸ್ ಸವಾಲುಗಳ ನಡುವೆ, ₹2.5 ಕೋಟಿಯಂತಹ ಸಣ್ಣ ಬಜೆಟ್‌ನ ಚಿತ್ರವೊಂದು ತೋರಿಸುತ್ತಿರುವ ಈ ಬೆಳವಣಿಗೆ ಗಮನ ಸೆಳೆಯುತ್ತಿದೆ.
ತಾರೆಯರಿಗಿಂತ ಕಥೆಯೇ ‘ಹೀರೋ’?
ಚಿತ್ರದಲ್ಲಿ ರಂಗಾಯಣ ರಘು, ಶ್ರೀರಾಮ್, ತಪಸ್ವಿನಿ ಪೂಣಚ್ಚ ಹಾಗೂ ರಮಿಕಾ ಶಿವು ಸೇರಿದಂತೆ ಕಲಾವಿದರು ನಟಿಸಿದ್ದಾರೆ. ಬಹುತೇಕ ಹೊಸ ಮುಖಗಳನ್ನೊಳಗೊಂಡ ಈ ಸಿನಿಮಾವನ್ನು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮನೋಜ್ ಕುಮಾರ್ ನಿರ್ದೇಶಿಸಿದ್ದಾರೆ.
ಅವರ ಚೊಚ್ಚಲ ಚಿತ್ರ ‘ಅಕ್ಷಿ’ಗೆ ಕನ್ನಡದ ಅತ್ಯುತ್ತಮ ಫೀಚರ್ ಫಿಲ್ಮ್‌ಗಾಗಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿತ್ತು. ಕೇವಲ ₹23 ಲಕ್ಷ ಬಜೆಟ್‌ನಲ್ಲಿ ನಿರ್ಮಾಣಗೊಂಡಿದ್ದ ಆ ಚಿತ್ರವನ್ನು 55 ದಿನಗಳಲ್ಲಿ ಚಿತ್ರೀಕರಿಸಲಾಗಿತ್ತು.
ಹೀಗಾಗಿ ‘ಪ್ರೇಮದ ಊರಲ್ಲಿ’ಯ ಯಶಸ್ಸು ನಿರ್ದೇಶಕರಿಗೆ ಮತ್ತೊಂದು ಮಹತ್ವದ ಮೈಲಿಗಲ್ಲು.
ಪ್ರಚಾರಕ್ಕೆ ಹಣವಿಲ್ಲ… ಕೈಯಲ್ಲಿ ಉಳಿದದ್ದು ‘ಭರವಸೆ’!
‘ಪ್ರೇಮದ ಊರಲ್ಲಿ’ಯ ಯಶೋಗಾಥೆಯ ಅತ್ಯಂತ ಕುತೂಹಲಕಾರಿ ಅಧ್ಯಾಯವೆಂದರೆ ಅದರ ಪ್ರಚಾರ.
ಚಿತ್ರದ ಚಿತ್ರೀಕರಣ ಮುಗಿಯುವಷ್ಟರಲ್ಲಿ ಪ್ರಚಾರಕ್ಕೆ ಹಣವೇ ಉಳಿದಿರಲಿಲ್ಲ. ಹಾಗಾಗಿ ನಿರ್ಮಾಪಕರು ಸಾಂಪ್ರದಾಯಿಕ ಪ್ರಚಾರದ ಬದಲು ಮದುವೆ ಆಮಂತ್ರಣ ಪತ್ರಿಕೆಯ ಮಾದರಿಯಲ್ಲಿ ಕಾರ್ಡ್‌ಗಳನ್ನು ಮುದ್ರಿಸಿ, ಬಸ್ ಮತ್ತು ರೈಲುಗಳಲ್ಲಿ ಪ್ರಯಾಣಿಸುತ್ತಿದ್ದವರಿಗೆ ಹಂಚಿ, “ಒಮ್ಮೆ ಸಿನಿಮಾ ನೋಡಿ, ಅವಕಾಶ ನೀಡಿ” ಎಂದು ಮನವಿ ಮಾಡಿದರು.
ಆಟೊರಿಕ್ಷಾಗಳ ಮೇಲೂ ಪೋಸ್ಟರ್‌ಗಳನ್ನು ಅಂಟಿಸಲಾಯಿತು. ಹೀಗೆ ಹಣಕ್ಕಿಂತ ಜನರ ಮೇಲಿನ ನಂಬಿಕೆಯನ್ನು ಬಂಡವಾಳವನ್ನಾಗಿಸಿಕೊಂಡ ಪ್ರಚಾರ ನಿಧಾನವಾಗಿ ಫಲ ನೀಡಿತು.
ನಿರ್ದೇಶಕ ಮನೋಜ್ ಕುಮಾರ್ ಹೇಳಿರುವಂತೆ, ಶುಕ್ರವಾರ ಬೆಳಿಗ್ಗೆ 10.30ರವರೆಗೆ ಚಿತ್ರದ ಬಗ್ಗೆ ಯಾವುದೇ ಸದ್ದು ಇರಲಿಲ್ಲ. ಮಧ್ಯಾಹ್ನವೂ ಪರಿಸ್ಥಿತಿ ಬದಲಾಗಲಿಲ್ಲ. ಆದರೆ ಸಂಜೆ 6.30ರ ಪ್ರದರ್ಶನದ ಬಳಿಕ ಮಾತಿನ ಮೂಲಕ ಸಿನಿಮಾ ಹರಡತೊಡಗಿತು. ಸುಮಾರು 60 ಕೇಂದ್ರಗಳಿಂದ ಆರಂಭವಾದ ಪ್ರದರ್ಶನಗಳು ಭಾನುವಾರದ ವೇಳೆಗೆ 450ಕ್ಕೆ ಏರಿದವು.
ಒಂದು ‘ಥಾಳಿ’ಯ ಹಿಂದೆ ಅಡಗಿರುವ ಸಿನಿಮಾ
ಈ ಸಿನಿಮಾದ ನಿರ್ಮಾಣದ ಕಷ್ಟಗಳು ಇಲ್ಲಿಗೇ ಮುಗಿಯುವುದಿಲ್ಲ. ಚಿತ್ರೀಕರಣದ ವೇಳೆ ಬಜೆಟ್ ಮುಗಿದುಹೋಗಿದ್ದ ಸಂದರ್ಭದಲ್ಲಿ, ಚಿತ್ರ ಪೂರ್ಣಗೊಳಿಸಲು ನಿರ್ದೇಶಕ ಮನೋಜ್ ಕುಮಾರ್ ತಮ್ಮ ತಾಯಿಯ ಮಂಗಳಸೂತ್ರವನ್ನು ಗಿರವಿಡುವಂತೆ ಕೇಳಿಕೊಂಡಿದ್ದ ಘಟನೆಯನ್ನೂ ಚಿತ್ರತಂಡ ಹಂಚಿಕೊಂಡಿದೆ.
ನಟಿ ತಪಸ್ವಿನಿ ಪೂಣಚ್ಚ ನೆನಪಿಸಿಕೊಂಡಿರುವ ಆ ಘಟನೆ ಸಿನಿಮಾದ ಹೋರಾಟದ ಮತ್ತೊಂದು ಮುಖವನ್ನು ತೆರೆದಿಡುತ್ತದೆ.
ಕೃತಕ ಮಳೆಯ ದೃಶ್ಯ ಚಿತ್ರೀಕರಣದ ವೇಳೆ ನೀರು ಮುಗಿದುಹೋಗಿತ್ತು. ಸ್ಥಳೀಯರು ಬೋರ್‌ವೆಲ್‌ನಿಂದ ನೀರು ಒದಗಿಸಿದರು. ಅದೇ ಸಂದರ್ಭದಲ್ಲಿ ಬಜೆಟ್ ಮುಗಿದಿರುವ ಬಗ್ಗೆ ನಿರ್ದೇಶಕರು ತಾಯಿಯೊಂದಿಗೆ ಮಾತನಾಡಿದ್ದರು ಎನ್ನಲಾಗಿದೆ.
ಆದರೆ ಒಂದು ಟೆಕ್‌ನಲ್ಲೇ ದೃಶ್ಯ ಯಶಸ್ವಿಯಾದ ಬಳಿಕ, “ಥಾಳಿ ಗಿರವಿಡಬೇಡಿ, ದೃಶ್ಯ ಮುಗಿಸಿದ್ದೇವೆ” ಎಂದು ತಾಯಿಗೆ ತಿಳಿಸಿದ ಕ್ಷಣ ಚಿತ್ರತಂಡಕ್ಕೆ ಭಾವುಕ ಕ್ಷಣವಾಗಿತ್ತು.
ಹಾಡುಗಳಿಗೂ ಪ್ರೇಕ್ಷಕರ ಸ್ಪಂದನೆ
ಚಿತ್ರದ ಟ್ರೇಲರ್ ಈಗಾಗಲೇ 23 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ. ಹಾಡುಗಳೂ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿವೆ. ಅದರಲ್ಲೂ ‘ಏರು ಪೇರು ಹೃದಯ’ ಹಾಡು ಯೂಟ್ಯೂಬ್‌ನಲ್ಲಿ 45 ಲಕ್ಷಕ್ಕೂ ಅಧಿಕ ವೀಕ್ಷಣೆ ಗಳಿಸಿರುವುದು ಚಿತ್ರದ ಬಗ್ಗೆ ಆನ್‌ಲೈನ್‌ನಲ್ಲೂ ಆಸಕ್ತಿ ಮೂಡಿರುವುದಕ್ಕೆ ಸಾಕ್ಷಿ.
ಇದು ಕೇವಲ ಸಿನಿಮಾ ಯಶಸ್ಸೇ?
‘ಪ್ರೇಮದ ಊರಲ್ಲಿ’ಯ ಬಾಕ್ಸ್ ಆಫೀಸ್ ಓಟವನ್ನು ಕೇವಲ ಗಳಿಕೆಯ ಅಂಕಿ-ಅಂಶಗಳಲ್ಲಿ ಅಳೆಯಲು ಸಾಧ್ಯವಿಲ್ಲ. ದೊಡ್ಡ ತಾರೆಯಿಲ್ಲದಿದ್ದರೂ, ಭಾರಿ ಪ್ರಚಾರ ಬಜೆಟ್ ಇಲ್ಲದಿದ್ದರೂ, ಒಳ್ಳೆಯ ಮಾತು ಪ್ರೇಕ್ಷಕರ ನಡುವೆ ಹರಡಿದರೆ ಒಂದು ಸಣ್ಣ ಸಿನಿಮಾ ಎಷ್ಟು ದೂರ ಸಾಗಬಹುದು ಎಂಬುದಕ್ಕೆ ಇದು ಹೊಸ ಉದಾಹರಣೆ.
ಮೊದಲ ದಿನ ₹9 ಲಕ್ಷದಿಂದ ಆರಂಭವಾದ ಪಯಣ ಹತ್ತನೇ ದಿನ ₹3.5 ಕೋಟಿಯವರೆಗೆ ಬಂದಿದೆ. ಈಗ ಪ್ರಶ್ನೆ ಒಂದೇ—
₹2.5 ಕೋಟಿಯಲ್ಲಿ ನಿರ್ಮಾಣವಾದ ‘ಪ್ರೇಮದ ಊರಲ್ಲಿ’, ಕನ್ನಡದ ಅತ್ಯಂತ ಲಾಭದಾಯಕ ಸಿನಿಮಾಗಳ ಪಟ್ಟಿಯಲ್ಲಿ ಹೊಸ ದಾಖಲೆ ಬರೆಯುತ್ತದೆಯೇ?
ಮುಂದಿನ ದಿನಗಳ ಗಲ್ಲಾಪೆಟ್ಟಿಗೆ ಉತ್ತರಿಸಬೇಕಿದೆ.
-
ಬಿಗ್ ನ್ಯೂಸ್22 hours agoSting Operation | ಸ್ಟಿಂಗ್ ಆಪರೇಷನ್ ಚರ್ಚೆ: ಪುತ್ತೂರಿಗೂ ವ್ಯಾಪಿಸಿದೆಯೇ ರಾಜಕೀಯದ ‘ಸ್ಟಿಂಗ್’ ಸದ್ದು..?
-
ಬಿಗ್ ನ್ಯೂಸ್21 hours agoSDPI-ಮಕ್ಕಳ ಆಟದ ಉಪಕರಣಗಳೇ ಹಾಳು: ಕಾರಂತರ ಬಾಲವನದ ದುಸ್ಥಿತಿಗೆ ಎಸ್ಡಿಪಿಐ ಅಸಮಾಧಾನ
-
ಬಿಗ್ ನ್ಯೂಸ್20 hours agoReservation-ದ.ಕ. ಜಿ.ಪಂ., ತಾ.ಪಂ. ಮೀಸಲಾತಿ ಪ್ರಕಟ: ಮಹಿಳೆಯರಿಗೆ ತಾ.ಪಂ. 65, ಜಿ.ಪಂ. 18 ಸ್ಥಾನ ಮೀಸಲು
-
ಅಪರಾಧ20 hours agoDigital Arrest-‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ 75 ವರ್ಷದ ಮಹಿಳೆಗೆ ₹2 ಕೋಟಿ ವಂಚನೆ
-
ಅಂತರ ರಾಜ್ಯ20 hours agoNana Patekar-ಕಾರ್ಗಿಲ್ ಯುದ್ಧದ ವೇಳೆ ಸೈನಿಕನಾಗಿಯೂ ದೇಶ ಸೇವೆ ಮಾಡಿದ್ದ ನಾನಾ ಪಾಟೇಕರ್
-
ಅಂತರ ರಾಜ್ಯ19 hours agoDK Shivakumar-‘ಸ್ಟಿಂಗ್ ಆಪರೇಷನ್’ ಬಗ್ಗೆ ಎಲ್ಲಾ ಮಾಹಿತಿ ಇದೆ..! ಚರ್ಚೆಗೆಂದು ಬಂದು ಏನೇನು ಮಾಡಿದ್ದಾರೆ ಎಂದು ಗೊತ್ತಿದೆ : ಇದರ ಪಿತಾಮಹ ಯಾರೆಂದೂ ತಿಳಿದಿದೆ : ಡಿಕೆಶಿ ಸ್ಫೋಟಕ ಹೇಳಿಕೆ
-
ಅಂತರ ರಾಜ್ಯ21 hours agoCEC Jnanesh Kumar-ವಿಪಕ್ಷಗಳ ಪ್ರತಿಭಟನೆ ತೀವ್ರ: ಸಿಇಸಿ ಜ್ಞಾನೇಶ್ ಕುಮಾರ್ ನಿವಾಸಕ್ಕೆ ತೀವ್ರ ಭದ್ರತೆ
-
ಮಂಗಳೂರು18 hours agoMangaluru-ಬೆಳೆ ವಿಮೆ ಅನ್ಯಾಯ ಆರೋಪ: ಅ.9ರಂದು ಮಂಗಳೂರಿನಲ್ಲಿ ರೈತರ ಬೃಹತ್ ಹಕ್ಕೊತ್ತಾಯ | ಸಹಕಾರ ಭಾರತಿ – ಬಿಜೆಪಿ ಬೆಂಬಲ


















