Connect with us

ಅಂತರ ರಾಜ್ಯ

Hyderabad-ಪ್ರೀತಿಯ ನಾಟಕವಾಡಿ ಯುವತಿಯ ಹತ್ಯೆ : ಹೈದರಾಬಾದನ್ನೇ ಬೆಚ್ಚಿಬೀಳಿಸಿದ ಪ್ರಕರಣದ ಆರೋಪಿ ಅರ್ಚಕನಿಗೆ ಜೀವಾವಧಿ ಶಿಕ್ಷೆ

Published

on



Ad Widget

Ad Widget

Ad Widget

Ad Widget

2023 ರಲ್ಲಿ ಹೈದರಾಬಾದನ್ನೇ ಬೆಚ್ಚಿಬೀಳಿಸಿದ ಅಪ್ಸರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಅರ್ಚಕ ವೆಂಕಟಸಾಯಿ ಕೃಷ್ಣ ಗೆ ರಂಗಾರೆಡ್ಡಿ ಜಿಲ್ಲಾ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

Ad Widget

Ad Widget

Ad Widget

Ad Widget

ಹೈದರಾಬಾದ್: 2023 ರಲ್ಲಿ ಹೈದರಾಬಾದನ್ನೇ ಬೆಚ್ಚಿಬೀಳಿಸಿದ ಅಪ್ಸರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಅರ್ಚಕ ವೆಂಕಟಸಾಯಿ ಕೃಷ್ಣ ಗೆ ರಂಗಾರೆಡ್ಡಿ ಜಿಲ್ಲಾ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ಪ್ರಕರಣ ತೀರ್ಪು ನೀಡಿದ ನ್ಯಾಯಾಲಯ ಆರೋಪಿ ಸಾಯಿ ಕೃಷ್ಣನಿಗೆ 10,000 ರೂಪಾಯಿಗಳ ದಂಡವನ್ನು ವಿಧಿಸಿತು ಮತ್ತು ಸಾಕ್ಷ್ಯವನ್ನು ಹಾಳುಮಾಡಿದ್ದಕ್ಕಾಗಿ ಹೆಚ್ಚುವರಿ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದ್ದು ಅಲ್ಲದೆ ಮೃತರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ.

Ad Widget

Ad Widget <> Ad Widget

ಮದುವೆಯಾಗಿದ್ದ ಸಾಯಿಕೃಷ್ಣ:
ಆರೋಪಿ ಸಾಯಿಕೃಷ್ಣ ನಿಗೆ ಮೊದಲೇ ಮದುವೆಯಾಗಿತ್ತು ಆದರೂ ಸರೂರ್‌ನಗರ ನಿವಾಸಿಯಾಗಿರುವ ಅಪ್ಪರಾ ಎಂಬಾಕೆಯ ಜೊತೆ ಪ್ರೀತಿ ಪ್ರೇಮದ ನಾಟಕವಾಡಿ ಆಕೆಯನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದ್ದ, ಅಲ್ಲದೆ ಮದುವೆಯಾಗುವುದಾಗಿಯೂ ಆಕೆಗೆ ಮಾತು ಕೊಟ್ಟಿದ್ದ ಈ ನಂಬಿಕೆಯಲ್ಲಿ ಆತನ ಪ್ರೀತಿಗೆ ಬಿದ್ದಿದ್ದಳು ಇತ್ತ ದಿನ ಕಳೆದಂತೆ ಆಕೆ ಮದುವೆಯ ಪ್ರಸ್ತಾಪ ಮಾಡಲು ಶುರು ಮಾಡಿದ್ದಾಳೆ ಇದರಿಂದ ಕೋಪಗೊಂಡ ಆತ ಹೇಗಾದರೂ ಮಾಡಿ ಆಕೆಯನ್ನು ಕೊಲೆ ಮಾಡಬೇಕು ಎಂದು ಪ್ಲಾನ್ ಮಾಡಿದ್ದ, ಅದಕ್ಕೆ ಸರಿಯಾಗಿ ಆಕೆಗೆ ಕೊಯಮತ್ತೂರಿನಲ್ಲಿ ಕೆಲಸವಿದ್ದ ಕಾರಣ ಅಲ್ಲಿಗೆ ತೆರಳಬೇಕಿತ್ತು.



Ad Widget

ಇದನ್ನೇ ಬಂಡವಾಳ ಮಾಡಿಕೊಂಡ ಸಾಯಿಕೃಷ್ಣ ಆಕೆಯನ್ನು ವಿಮಾನ ನಿಲ್ದಾಣಕ್ಕೆ ಬಿಟ್ಟು ಬರುವ ಪ್ಲಾನ್ ಮಾಡಿದ್ದಾನೆ. ಜೂನ್ 3, 2023 ರಂದು ಅಪ್ಪರ ಮನೆಯವರಿಗೆ ವಿಚಾರ ತಿಳಿಸಿ ಇಬ್ಬರೂ ರಾತ್ರಿ 8:15 ರ ಸುಮಾರಿಗೆ ಸರೂರ್‌ನಗರದಿಂದ ಕಾರಿನಲ್ಲಿ ಹೊರಟಿದ್ದಾರೆ ಇದಾದ ಬಳಿಕ ರಾತ್ರಿ 10 ಗಂಟೆಗೆ ಶಂಶಾಬಾದ್‌ ನಲ್ಲಿರುವ ರಾಲ್ಲಗುಡಾದ ಹೋಟೆಲ್‌ನಲ್ಲಿ ಊಟ ಮಾಡಿದ್ದಾರೆ ಈ ವೇಳೆ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಲು ನಿಲ್ಲಿಸಿದ್ದಾರೆ ಈ ಸಮಯದಲ್ಲಿ ಸಾಯಿ ಕೃಷ್ಣ ಕಾರಿನಿಂದ ಇಳಿದು ರಸ್ತೆ ಪಕ್ಕದಲ್ಲಿದ್ದ ಕಲ್ಲೊಂದನ್ನು ತಂದು ಕಾರಿನಲ್ಲಿ ಇರಿಸಿದ್ದಾನೆ.

Ad Widget

Ad Widget

ಮತ್ತೆ ರಾತ್ರಿ ಪ್ರಯಾಣ ಮುಂದುವರೆಸಿ ಜೂನ್ 4 ರಂದು ಮುಂಜಾನೆ 3:50 ರ ಸುಮಾರಿಗೆ ನರ್ಕುಡ ಎಂಬ ನಿರ್ಜನ ಪ್ರದೇಶವನ್ನು ತಲುಪಿದ್ದಾರೆ ಈ ವೇಳೆ ಅಪ್ಸರಾ ಗಾಢ ನಿದ್ರೆಗೆ ಜಾರಿದ್ದು ಇದನ್ನು ಬಂಡವಾಳವಾಗಿ ಬಳಸಿ ಕಾರಿನ ಸೀಟ್ ಬೆಲ್ಟ್ ನಿಂದ ಅಪ್ಪರಾ ಕುತ್ತಿಗೆಗೆ ಬಿಗಿದು ಕಾರಿನೊಳಗಿಟ್ಟಿದ್ದ ಕಲ್ಲಿನಿಂದ ಅಪ್ಸರಾ ತಲೆಗೆ ಹೊಡೆದಿದ್ದಾನೆ ಈ ವೇಳೆ ಅಪ್ಸರಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಇದಾದ ಬಳಿಕ ಆಕೆಯ ಶವವನ್ನು ಬಟ್ಟೆಯಿಂದ ಸುತ್ತಿ ಸರೂರ್‌ನಗರದಲ್ಲಿರುವ ತನ್ನ ಮನೆಗೆ ಬಂದಿದ್ದಾನೆ. ಎರಡು ದಿನಗಳ ಕಾಲ ಅಪ್ಸರಾ ಶವವನ್ನು ಕಾರಿನಲ್ಲೇ ಇಟ್ಟು ತನ್ನ ಕೆಲಸವನ್ನು ಮಾಡಿಕೊಂಡಿದ್ದ ಬಳಿಕ ಎರಡು ದಿನ ಬಿಟ್ಟು ಅಪ್ಪರಾ ಶವವನ್ನು ಕವರ್‌ನಲ್ಲಿ ಸುತ್ತಿ ಸರೂರ್‌ನಗರದ ಬಂಗಾರು ಮೈಸಮ್ಮ ದೇವಸ್ಥಾನದ ಬಳಿಯ ಮ್ಯಾನ್‌ಹೋಲ್‌ಗೆ ಎಸೆದಿದ್ದಾನೆ ಇದಾದ ಬಳಿಕ ಎಲ್ಲಿ ಶವ ಕೊಳೆತು ದುರ್ನಾತ ಬೀರುತ್ತದೆ ಎಂದು ಭಾವಿಸಿ ಲಾರಿಯಲ್ಲಿ ಮಣ್ಣು ತಂದು ಮ್ಯಾನ್ ಹೋಲ್ ಗೆ ತುಂಬಿಸಿ ಸಿಮೆಂಟ್ ಹಾಕಿ ಮುಚ್ಚಿಸಿದ್ದ.

ಪೋಷಕರಿಂದ ದೂರು:
ಇತ್ತ ಕೊಯಮುತ್ತೂರಿಗೆ ಹೊರಟ ಮಗಳು ಪೋಷಕರಿಗೆ ಕರೆ ಮಾಡಿಲ್ಲ ಅಲ್ಲದೆ ತಾವು ಕರೆ ಮಾಡಿದಾಗಲೂ ಕರೆ ಸ್ವೀಕರಿಸಲಿಲ್ಲ, ಇದರಿಂದ ಗಾಬರಿಗೊಂಡ ಪೋಷಕರು ಸಾಯಿ ಕೃಷ್ಣ ಬಳಿ ವಿಚಾರಿಸಿದ್ದಾರೆ ಅದಕ್ಕೆ ಆತ ತಾನು ಆಕೆಯನ್ನು ಏರ್ ಪೋರ್ಟ್ ಗೆ ಬಿಟ್ಟು ಬಂದಿರುವುದಾಗಿ ಹೇಳಿದ್ದಾನೆ, ಬೇರೇನೂ ಉಪಾಯ ಕಾಣದೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರಿಂದ ತನಿಖೆ:
ಮಗಳು ನಾಪತ್ತೆಯಾಗಿರುವ ಕುರಿತು ನೀಡಿದ ದೂರಿನ ಆಧಾರದಲ್ಲಿ ತನಿಖೆ ಕೈಗೆತ್ತಿಕೊಂಡ ಪೊಲೀಸರು ಮೊದಲು ಆಕೆಯನ್ನು ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ಬಿಟ್ಟ ಸಾಯಿ ಕೃಷ್ಣನನ್ನು ವಿಚಾರಣೆ ನಡೆಸಿದ್ದಾರೆ ಮೊದಲು ತನಗೆ ಏನೂ ಗೊತ್ತಿಲ್ಲ ತಾನು ಆಕೆಯನ್ನು ವಿಮಾನ ನಿಲ್ದಾಣಕ್ಕೆ ಬಿಟ್ಟು ಬಂದದ್ದು ಮಾತ್ರ ಮತ್ತೇನು ಗೊತ್ತಿಲ್ಲ ಎಂದಿದ್ದ ಆದರೆ ಪೊಲೀಸರಿಗೆ ಅನುಮಾನಗೊಂಡು ಅವರ ಶೈಲಿಯಲ್ಲೇ ವಿಚಾರಣೆ ನಡೆಸಿದ ವೇಳೆ ತಾನು ಮಾಡಿದ ಕೃತ್ಯವನ್ನು ವಿವರಿಸಿದ್ದಾನೆ.

ಬಳಿಕ ಮ್ಯಾನ್ ಹೋಲ್ ನಲ್ಲಿ ಹೂತಿದ್ದ ಅಪ್ಸರಾ ಮೃತದೇಹವನ್ನು ಪೊಲೀಸರು ವಿಲೇವಾರಿ ಮಾಡಿ ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದು ವರದಿಯಲ್ಲಿ ಆಕೆಯ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿರುವುದು ಜೊತೆಗೆ ಕುತ್ತಿಗೆಗೆ ಸೀಟ್ ಬೆಲ್ಟ್ ನಿಂದ ಬಿಗಿದಿರುವುದು ಬೆಳಕಿಗೆ ಬಂದಿದೆ.

ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಂಗಾರೆಡ್ಡಿ ಜಿಲ್ಲಾ ನ್ಯಾಯಾಲಯ ಐಯ್ಯಂಗಾರಿ ಸಾಯಿ ಕೃಷ್ಣನನ್ನು ಅಪರಾಧಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆಯನ್ನು ನೀಡಿದೆ.

Ad Widget
Click to comment

Leave a Reply

ಅಂತರ ರಾಜ್ಯ

Restaurant-ನೀರಿನ ಬಾಟ್ಲಿಗೆ ₹2 ಹೆಚ್ಚುವರಿ ವಸೂಲಿ; ರೆಸ್ಟೋರೆಂಟ್‌ಗೆ ₹1 ಲಕ್ಷ ದಂಡ..!

Published

on



Ad Widget

Ad Widget

Ad Widget

Ad Widget

ಮುದ್ರಿತ ಗರಿಷ್ಠ ಚಿಲ್ಲರೆ ಬೆಲೆಗಿಂತ (MRP) ಹೆಚ್ಚುವರಿಯಾಗಿ ನೀರಿನ ಬಾಟ್ಲಿಗೆ ₹2 ವಸೂಲಿ ಮಾಡಿದ ಪ್ರಕರಣದಲ್ಲಿ ಹಥರಸ್‌ನ ರೆಸ್ಟೋರೆಂಟ್‌ವೊಂದಕ್ಕೆ ಅಲಿಗಡ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು ₹1 ಲಕ್ಷ ದಂಡ ವಿಧಿಸಿದೆ.

Ad Widget

Ad Widget

Ad Widget

Ad Widget

ಅಲಿಗಡ (ಉತ್ತರ ಪ್ರದೇಶ): ಮುದ್ರಿತ ಗರಿಷ್ಠ ಚಿಲ್ಲರೆ ಬೆಲೆಗಿಂತ (MRP) ಹೆಚ್ಚುವರಿಯಾಗಿ ನೀರಿನ ಬಾಟ್ಲಿಗೆ ₹2 ವಸೂಲಿ ಮಾಡಿದ ಪ್ರಕರಣದಲ್ಲಿ ಹಥರಸ್‌ನ ರೆಸ್ಟೋರೆಂಟ್‌ವೊಂದಕ್ಕೆ ಅಲಿಗಡ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು ₹1 ಲಕ್ಷ ದಂಡ ವಿಧಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ಇದಲ್ಲದೆ, ದೂರುದಾರರಿಗೆ ಮಾನಸಿಕ ಕಿರುಕುಳಕ್ಕೆ ಪರಿಹಾರವಾಗಿ ₹1,000 ಹಾಗೂ ಮೊಕದ್ದಮೆ ವೆಚ್ಚವಾಗಿ ₹5,000 ಪಾವತಿಸುವಂತೆಯೂ ಆಯೋಗ ಆದೇಶಿಸಿದೆ. ಆದೇಶವನ್ನು 45 ದಿನಗಳೊಳಗೆ ಪಾಲಿಸಬೇಕು. ತಪ್ಪಿದಲ್ಲಿ ಕಾನೂನು ಕ್ರಮ ಜರುಗಿಸುವುದಾಗಿ ರೆಸ್ಟೋರೆಂಟ್ ಮಾಲೀಕರಿಗೆ ಎಚ್ಚರಿಕೆ ನೀಡಿದೆ.

Ad Widget

Ad Widget <> Ad Widget

₹18ರ ಬಾಟ್ಲಿಗೆ ₹20 ವಸೂಲಿ
ಅಲಿಗಡ ನಿವಾಸಿಯೊಬ್ಬರು 2026ರ ಮಾರ್ಚ್ 11ರಂದು ಹಥರಸ್‌ನ ಈ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದರು. ಊಟದ ವೇಳೆ ಕುಡಿಯಲು ನೀರು ಕೇಳಿದಾಗ, ₹18 ಎಂಆರ್‌ಪಿ ನಮೂದಿಸಿದ್ದ ನೀರಿನ ಬಾಟ್ಲಿಯನ್ನು ನೀಡಲಾಗಿತ್ತು. ಆದರೆ, ಬಿಲ್‌ನಲ್ಲಿ ₹20 ವಿಧಿಸಲಾಗಿತ್ತು. ಮುದ್ರಿತ ಬೆಲೆಗಿಂತ ₹2 ಹೆಚ್ಚುವರಿಯಾಗಿ ವಸೂಲಿ ಮಾಡಿರುವುದನ್ನು ಪ್ರಶ್ನಿಸಿ ಗ್ರಾಹಕರು ದೂರು ದಾಖಲಿಸಿದ್ದರು.



Ad Widget

ಈ ಘಟನೆಯಿಂದ ತಮಗೆ ಮಾನಸಿಕ ವೇದನೆ ಹಾಗೂ ಆರ್ಥಿಕ ನಷ್ಟ ಉಂಟಾಗಿದೆ ಎಂದು ಆರೋಪಿಸಿದ್ದ ಗ್ರಾಹಕರು, ₹10 ಲಕ್ಷ ಪರಿಹಾರ ಮತ್ತು ₹15,000 ಕಾನೂನು ವೆಚ್ಚ ನೀಡುವಂತೆ ಕೋರಿ ಆಯೋಗದ ಮೊರೆ ಹೋಗಿದ್ದರು. ರೆಸ್ಟೋರೆಂಟ್‌ನ ಸೇವಾ ನ್ಯೂನತೆ ಹಾಗೂ ಅನ್ಯಾಯದ ವ್ಯಾಪಾರ ಪದ್ಧತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಮನವಿ ಮಾಡಿದ್ದರು.

Ad Widget

Ad Widget

ನೋಟಿಸ್‌ಗೆ ಉತ್ತರಿಸದ ರೆಸ್ಟೋರೆಂಟ್
ಆಯೋಗದ ಅಧ್ಯಕ್ಷ ಹಸ್ಟೈನ್ ಖುರೇಷಿ ಮತ್ತು ಸದಸ್ಯೆ ಪೂರ್ಣಿಮಾ ಸಿಂಗ್ ರಜಪೂತ್ ಅವರ ಪೀಠವು ಪ್ರಕರಣದ ವಿಚಾರಣೆ ನಡೆಸಿತು. ರೆಸ್ಟೋರೆಂಟ್‌ಗೆ ನೋಟಿಸ್ ಜಾರಿಗೊಳಿಸಿದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ, ಮೇ 21ರಂದು ಆಯೋಗವು ಏಕಪಕ್ಷೀಯ ವಿಚಾರಣೆ ಮುಂದುವರಿಸಿತು.

ದೂರುದಾರರು ಸಲ್ಲಿಸಿದ್ದ ಮಾರ್ಚ್ 11ರ ಬಿಲ್ ಹಾಗೂ ₹18 ಎಂಆರ್‌ಪಿ ನಮೂದಿಸಿದ್ದ ನೀರಿನ ಬಾಟ್ಲಿಯ ಛಾಯಾಚಿತ್ರವನ್ನು ಪರಿಶೀಲಿಸಿದ ಆಯೋಗ, ₹20 ವಸೂಲಿ ಮಾಡಿರುವುದನ್ನು ದೃಢಪಡಿಸಿತು. ಇದು ಅನ್ಯಾಯದ ವ್ಯಾಪಾರ ಪದ್ಧತಿಯಾಗಿದೆ ಎಂದು ತೀರ್ಮಾನಿಸಿ ರೆಸ್ಟೋರೆಂಟ್‌ಗೆ ₹1 ಲಕ್ಷ ದಂಡ ಹಾಗೂ ದೂರುದಾರರಿಗೆ ಪರಿಹಾರ ಪಾವತಿಸುವಂತೆ ಆದೇಶಿಸಿತು.

Ad Widget
Continue Reading

ನಿಧನ ವಾರ್ತೆ

Boat Sink-ಹಾಜಿಪುರ: ಗಂಗಾ ನದಿಯಲ್ಲಿ ದೋಣಿ ಮುಳುಗಿ 11 ಮಂದಿ ಸಾವು

Published

on



Ad Widget

Ad Widget

Ad Widget

Ad Widget

ಬಿಹಾರದ ವೈಶಾಲಿ ಜಿಲ್ಲೆಯ ಹಾಜಿಪುರ ಸಮೀಪ ಗಂಗಾ ನದಿಯಲ್ಲಿ ದೋಣಿಯೊಂದು ಮಗುಚಿ ಬಿದ್ದ ಪರಿಣಾಮ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 11 ಮಂದಿ ಮೃತಪಟ್ಟಿದ್ದಾರೆ. ಐವರನ್ನು ರಕ್ಷಿಸಲಾಗಿದೆ ಎಂದು ವೈಶಾಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.

Ad Widget

Ad Widget

Ad Widget

Ad Widget

ಹಾಜಿಪುರ: ಬಿಹಾರದ ವೈಶಾಲಿ ಜಿಲ್ಲೆಯ ಹಾಜಿಪುರ ಸಮೀಪ ಗಂಗಾ ನದಿಯಲ್ಲಿ ದೋಣಿಯೊಂದು ಮಗುಚಿ ಬಿದ್ದ ಪರಿಣಾಮ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 11 ಮಂದಿ ಮೃತಪಟ್ಟಿದ್ದಾರೆ. ಐವರನ್ನು ರಕ್ಷಿಸಲಾಗಿದೆ ಎಂದು ವೈಶಾಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ರಘೋಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಮ್‌ಪುರ್ ಶ್ಯಾಮ್‌ಚಂದ್ ಗ್ರಾಮದ ಸಮೀಪ ಈ ದುರಂತ ಸಂಭವಿಸಿದೆ. ಸುಮಾರು 15ರಿಂದ 20 ಮಂದಿಯನ್ನು ಹೊತ್ತೊಯ್ಯುತ್ತಿದ್ದ ದೋಣಿಯಲ್ಲಿದ್ದವರು ಔತಣಕೂಟವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದರು. ಈ ಸಂದರ್ಭದಲ್ಲಿ ದೋಣಿ ನದಿಯಲ್ಲಿ ಮಗುಚಿ ಬಿದ್ದಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

Ad Widget

Ad Widget <> Ad Widget

ಆರಂಭದಲ್ಲಿ ಐದರಿಂದ ಎಂಟು ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿತ್ತು. ಬಳಿಕ ಸಾವಿನ ಸಂಖ್ಯೆ 11ಕ್ಕೆ ಏರಿರುವುದು ದೃಢಪಟ್ಟಿದೆ. ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ವರದಿಯಾಗಿದೆ.



Ad Widget

ದೋಣಿ ಮಗುಚಿ ಬೀಳಲು ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಮೃತಪಟ್ಟವರ ಗುರುತು ಹಾಗೂ ದೋಣಿಯಲ್ಲಿದ್ದವರ ನಿಖರ ಸಂಖ್ಯೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Ad Widget

Ad Widget

ದೋಣಿ ದುರಂತಕ್ಕೆ ತೇಜಸ್ವಿ ಯಾದವ್ ಸಂತಾಪ
ಈ ದುರಂತದ ಬಗ್ಗೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ರಘೋಪುರ್ ದಿಯಾರಾ ಪ್ರದೇಶದಲ್ಲಿ ದೋಣಿ ಮಗುಚಿ ಬಿದ್ದಿರುವ ಆತಂಕಕಾರಿ ಸುದ್ದಿ ಬಂದಿದೆ. ಮೃತಪಟ್ಟವರಲ್ಲಿ ಹೆಚ್ಚಿನವರು ಮಕ್ಕಳು ಎಂದು ಅವರು ತಮ್ಮ ‘ಎಕ್ಸ್‌’ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಸ್ಥಳೀಯ ನಿವಾಸಿಗಳು, ಆಡಳಿತ ಮಂಡಳಿ ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ ಬಳಿಕ ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ಚುರುಕುಗೊಳಿಸುವುದರ ಜೊತೆಗೆ ಗಾಯಾಳುಗಳಿಗೆ ತ್ವರಿತ ವೈದ್ಯಕೀಯ ಚಿಕಿತ್ಸೆ ಒದಗಿಸುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Ad Widget
Continue Reading

ಅಂತರ ರಾಜ್ಯ

March to Supreme Court-ಮತಗಳವು ಆರೋಪ: ಇಂಡಿಯಾ ಕೂಟದಿಂದ ‘ಸುಪ್ರೀಂಕೋರ್ಟ್ ಚಲೋ’ ಪ್ರತಿಭಟನಾ ಮೆರವಣಿಗೆ

Published

on



Ad Widget

Ad Widget

Ad Widget

Ad Widget

ಚುನಾವಣಾ ಆಯೋಗದ ವಿರುದ್ಧ ಮತಗಳವು ಆರೋಪ ಮಾಡಿರುವ ಇಂಡಿಯಾ ಕೂಟ, ಸೋಮವಾರ ‘ಸುಪ್ರೀಂಕೋರ್ಟ್ ಚಲೋ’ ಪ್ರತಿಭಟನಾ ಮೆರವಣಿಗೆ ನಡೆಸಲಿದೆ. ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಮನವಿ ಮಾಡಲು ತಾವು ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಸಂಜೆ 4ರಿಂದ 5 ಗಂಟೆಯ ನಡುವೆ ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿ ಮಾಡಲು ಸಮಯ ಕೋರಿರುವುದಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ತಿಳಿಸಿದ್ದಾರೆ.

Ad Widget

Ad Widget

Ad Widget

Ad Widget

ನವದೆಹಲಿ: ಚುನಾವಣಾ ಆಯೋಗದ ವಿರುದ್ಧ ಮತಗಳವು ಆರೋಪ ಮಾಡಿರುವ ಇಂಡಿಯಾ ಕೂಟ, ಸೋಮವಾರ ‘ಸುಪ್ರೀಂಕೋರ್ಟ್ ಚಲೋ’ ಪ್ರತಿಭಟನಾ ಮೆರವಣಿಗೆ ನಡೆಸಲಿದೆ. ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಮನವಿ ಮಾಡಲು ತಾವು ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಸಂಜೆ 4ರಿಂದ 5 ಗಂಟೆಯ ನಡುವೆ ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿ ಮಾಡಲು ಸಮಯ ಕೋರಿರುವುದಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ತಿಳಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿದ್ದಾರೆ ಎಂದು ಖರ್ಗೆ ಆರೋಪಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ನಿಯೋಜಿಸಿರುವ ಪೊಲೀಸರ ಸಂಖ್ಯೆಯನ್ನು ನೋಡಿದರೆ ಕೇಂದ್ರ ಸರ್ಕಾರದ ಆತಂಕ ಅರ್ಥವಾಗುತ್ತದೆ ಎಂದೂ ಅವರು ಹೇಳಿದ್ದಾರೆ.

Ad Widget

Ad Widget <> Ad Widget

ಇಂಡಿಯಾ ಕೂಟದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ವಿರೋಧ ಪಕ್ಷಗಳು, ನಾಗರಿಕ ಸಮಾಜದ ಗುಂಪುಗಳು ಮತ್ತು ಇತರ ಸಂಘಟನೆಗಳಿಗೆ ರಾಹುಲ್ ಗಾಂಧಿ ಕರೆ ನೀಡಿದ್ದಾರೆ.



Ad Widget

ಶನಿವಾರ ದೆಹಲಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ದೇಶದ ವಿವಿಧ ಭಾಗಗಳಿಂದ ಯುವಕರು ಆಗಮಿಸಿದ್ದರು. ಆದರೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. “ನಮಗೆ ಬೇಕಿರುವುದು ಇಂತಹ ಭಾರತವಲ್ಲ” ಎಂದು ಅವರು ಹೇಳಿದ್ದಾರೆ.

Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading