Connect with us

ಬಿಗ್ ನ್ಯೂಸ್

Tulunadu-ಗೋವಾ ಬಿಟ್ಟು ತುಳುನಾಡಿನ ಕಡೆ ವಾಲಿದ ವಿದೇಶಿ ಪ್ರವಾಸಿಗರು : ಒಂದೇ ವರ್ಷದಲ್ಲಿ ಪ್ರವಾಸಿಗರ ಸಂಖ್ಯೆ ಮೂರು ಪಟ್ಟು ಹೆಚ್ಚಳ

Published

on



Ad Widget

Ad Widget

Ad Widget

Ad Widget

ದಕ್ಷಿಣ ಕನ್ನಡದಲ್ಲಿ ಪ್ರವಾಸೋದ್ಯಮ ಹೆಸರುವಾಸಿಯಾಗಿದ್ದು ವಿದೇಶಿ ಪ್ರವಾಸಿಗರನ್ನು ತನ್ನತ್ತ ಆರ್ಕಷಿಸುತ್ತಿದೆ. 2023ಕ್ಕೆ ಹೋಲಿಕೆ ಮಾಡಿದರೆ 2024ರಲ್ಲಿ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ. ಕರಾವಳಿ ಕರ್ನಾಟಕದಲ್ಲಿನ ಪ್ರಾಚೀನ ದೇವಸ್ಥಾನಗಳು ಹಾಗೂ ಬೀಚ್‌ಗಳು ವಿದೇಶಿಗರನ್ನು ಆಕರ್ಷಿಸುತ್ತಿದ್ದು ಇದು ಅವರ ಮೆಚ್ಚಿನ ತಾಣಗಳಾಗಿವೆ.

Ad Widget

Ad Widget

Ad Widget

Ad Widget

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಪ್ರವಾಸೋದ್ಯಮ ಹೆಸರುವಾಸಿಯಾಗಿದ್ದು ವಿದೇಶಿ ಪ್ರವಾಸಿಗರನ್ನು ತನ್ನತ್ತ ಆರ್ಕಷಿಸುತ್ತಿದೆ. 2023ಕ್ಕೆ ಹೋಲಿಕೆ ಮಾಡಿದರೆ 2024ರಲ್ಲಿ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ. ಕರಾವಳಿ ಕರ್ನಾಟಕದಲ್ಲಿನ ಪ್ರಾಚೀನ ದೇವಸ್ಥಾನಗಳು ಹಾಗೂ ಬೀಚ್‌ಗಳು ವಿದೇಶಿಗರನ್ನು ಆಕರ್ಷಿಸುತ್ತಿದ್ದು ಇದು ಅವರ ಮೆಚ್ಚಿನ ತಾಣಗಳಾಗಿವೆ.

Ad Widget

Ad Widget

Ad Widget alt="Ad Widget"/>

Ad Widget

ವಿದೇಶಿಗರು ವಿಶೇಷವಾಗಿ ಸುರತ್ಕಲ್ ಭಾಗದ ಬೀಚ್‌ಗಳಿಗೆ ಹೆಚ್ಚು ಬರುತ್ತಾರೆ. ಆರಕ್ಕೂ ಅಧಿಕ ಬೀಚ್‌ಗಳು ಇದರ ಅಸುಪಾಸಿನಲ್ಲಿರುವುದು ಇದಕ್ಕೆ ಕಾರಣ. ಮೂಡುಬಿದಿರೆ, ಪಿಲಿಕುಳ ಮತ್ತು ಧರ್ಮಸ್ಥಳಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

Ad Widget

Ad Widget <> Ad Widget

2023ರಲ್ಲಿ‌ ದಕ್ಷಿಣ ಕನ್ನಡ ಪ್ರವಾಸೋದ್ಯಮ ಇಲಾಖೆಯಿಂದ ಲಭ್ಯವಿರುವ ಮಾಹಿತಿಯ ಪ್ರಕಾರ, ಒಟ್ಟು 3,818 ವಿದೇಶಿಯರು ಕರಾವಳಿ ಜಿಲ್ಲೆಗೆ ಭೇಟಿ ನೀಡಿದ್ದು, 2024ರಲ್ಲಿ10,778ರಷ್ಟು ಏರಿಕೆ ಕಂಡಿದೆ. ಇದು ಮೂರು ಪಟ್ಟು ಹೆಚ್ಚಳ ಎನ್ನಬಹುದು.



Ad Widget

ಇಲ್ಲಿನ ನಿರ್ಮಲ ಕಡಲತೀರಗಳು ಮತ್ತು ದೇವಾಲಯಗಳಿಗೆ ಎಲ್ಲಾ ದೇಶಗಳ ವಿದೇಶಿಯರು ಭೇಟಿ ನೀಡುತ್ತಾರೆ. ಪ್ರವಾಸೋದ್ಯಮ ಇಲಾಖೆಯು ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರು ಭೇಟಿ ನೀಡಲೇಬೇಕಾದ ಒಟ್ಟು 38 ಸ್ಥಳಗಳನ್ನು ಗುರುತಿಸಿದೆ. ಅವುಗಳಲ್ಲಿ 14 ಸ್ಥಳಗಳಿಗೆ ವಿದೇಶಿಯರೇ ಆಗಾಗ ಭೇಟಿ ನೀಡುತ್ತಾರೆ ಎನ್ನುತ್ತಾರೆ ಕರಾವಳಿಯ ಪ್ರವಾಸಿ ಗೈಡ್ ಮನೋಜ್ ಕುಮಾರ್.

Ad Widget

Ad Widget

ಕರಾವಳಿಯಲ್ಲಿ ವಿದೇಶಿಗರು ಬರಲು ಬಲು ಮುಖ್ಯವಾಗಿ ದೇವಾಲಯಗಳು ಮತ್ತು ಪರಿಸರ ಪ್ರವಾಸೋದ್ಯಮ ಇದಕ್ಕೆ ಪ್ರಮುಖ ಕಾರಣ. ಈ ಮೊದಲು ಗೋವಾಕ್ಕೆ ಆದ್ಯತೆ ನೀಡಿದ್ದ ಪ್ರವಾಸಿಗರು ಅದನ್ನು ಬಿಟ್ಟು ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಕೇರಳ ಸೇರಿದಂತೆ ದಕ್ಷಿಣ ಭಾರತದ ಸ್ಥಳಗಳನ್ನು ಅನ್ವೇಷಿಸುತ್ತಿದ್ದಾರೆ ಎನ್ನುತ್ತಾರೆ ದಕ್ಷಿಣ ಕನ್ನಡ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ದಿಲೀಪ್‌ ಕುಮಾರ್‌.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಎರಡು ಪ್ರವಾಸಿ ತಾಣಗಳಿಗೆ ಹತ್ತಿರವಾಗಿರುವುದರಿಂದ ಹೆಚ್ಚಿನ ವಿದೇಶಿಯರು ಕೊಡಗು ಅಥವಾ ಕೇರಳಕ್ಕೆ ತೆರಳುವಾಗ ದಕ್ಷಿಣ ಕನ್ನಡದಲ್ಲಿಒಂದು ದಿನದ ನಿಂತು ಮುಂದೆ ಪ್ರಯಾಣ ಬೆಳೆಸುತ್ತಾರೆ. ಈ ಪ್ರದೇಶದ ಆಧ್ಯಾತ್ಮಿಕ ಆಕರ್ಷಣೆಯು ಅವರನ್ನು ಉಡುಪಿ ಜಿಲ್ಲೆಯ ದೇವಾಲಯಗಳು ಸೇರಿದಂತೆ ಇಲ್ಲಿನ ನಾನಾ ಪ್ರಾಚೀನ ದೇವಾಲಯಗಳಿಗೆ ಕರೆದೊಯ್ಯುತ್ತದೆ. ಇದರ ನಂತರ ಬೀಚ್‌ ಮತ್ತು ಸ್ಥಳೀಯ ದೃಶ್ಯ ವೀಕ್ಷಣೆಯ ತಾಣಗಳು ಬರುತ್ತವೆ ಎನ್ನುತ್ತಾರೆ ಹೋಟೆಲ್‌ ಉದ್ಯಮಿ ರವಿಕಿರಣ್‌ ಮಂಗಳೂರು.

ವಿದೇಶಿಯರು ಭೇಟಿನೀಡುವ ಸ್ಥಳಗಳು
ವಿದೇಶಿಯರು ಆಗಾಗ್ಗೆ ಭೇಟಿ ನೀಡುವ ಸ್ಥಳಗಳಲ್ಲಿ ಸುರತ್ಕಲ್‌, ಪಣಂಬೂರು, ಉಳ್ಳಾಲ, ಸೋಮೇಶ್ವರ, ಕಟೀಲು, ಮೂಡುಬಿದಿರೆ, ತಣ್ಣೀರುಬಾವಿ, ಪಿಲಿಕುಳ, ಸಸಿಹಿತ್ಲು ಬೀಚ್‌ ಮತ್ತು ಪಾಂಡೇಶ್ವರದಲ್ಲಿರುವ ಅಂಚೆ ಕಾರ್ಡ್‌ ಸಂಗ್ರಹಣಾ ಕೇಂದ್ರ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಧರ್ಮಸ್ಥಳ ಮತ್ತು ವೇಣೂರು ಸೇರಿವೆ.

ವಿದೇಶಿ ಪ್ರಯಾಣಿಕರ ಹೊರತಾಗಿ, ಕರಾವಳಿ ಜಿಲ್ಲೆಯಲ್ಲಿ ದೇಶೀಯ ಪ್ರವಾಸಿಗರ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡು ಬಂದಿದೆ. 2023ರಲ್ಲಿ 32,852,907 ಮಂದಿ ಪ್ರವಾಸಿಗರು ದಕ್ಷಿಣ ಕನ್ನಡಕ್ಕೆ ಭೇಟಿ ನೀಡಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ದತ್ತಾಂಶ ವರದಿ ಮಾಡಿದೆ.

ಇದು 2024ರಲ್ಲಿ 50,621,478ಕ್ಕೆ ಏರಿದೆ. ದೇವಾಲಯಗಳು ಮತ್ತು ಕಡಲತೀರಗಳಿಗೆ ಪ್ರವಾಸಿಗರು ಭೇಟಿ ನೀಡಲು ಬಯಸುತ್ತಾರೆ. ಇದರ ಜತೆಗೆ ಇತರ ದೇಶೀಯ ಪ್ರವಾಸಿಗರ ತಾಣಗಳಲ್ಲಿಎರ್ಮಾಯಿ, ದಿಡುಪೆ ಮತ್ತು ಇತರ ಜಲಪಾತಗಳನ್ನು ನೋಡಲು ಬಯಸುತ್ತಾರೆ ಎನ್ನುವುದು ಇಲಾಖೆ ನೀಡುವ ಮಾಹಿತಿ.

Ad Widget
Click to comment

Leave a Reply

ಬಿಗ್ ನ್ಯೂಸ್

Puttur-ಪುತ್ತೂರು : ಕೋಟಿ- ಚೆನ್ನಯ KSRTC ಬಸ್ ನಿಲ್ದಾಣದ ನಿಲ್ದಾಣಾಧಿಕಾರಿಯಾಗಿ ಕೆ. ಭಾಸ್ಕರ ಶೆಟ್ಟಿ ಬಜನಿಗುತ್ತು ಪದೋನ್ನತಿ

Published

on



Ad Widget

Ad Widget

Ad Widget

Ad Widget

ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ಬಜನಿಗುತ್ತು ಕೆ.ಭಾಸ್ಕರ ಶೆಟ್ಟಿಯವರು ಸಹಾಯಕ ಸಂಚಾರ ನಿರೀಕ್ಷಕರಾಗಿ ಪದನ್ನೋತಿ ಹೊಂದಿ ಪುತ್ತೂರು ಕೋಟಿ- ಚೆನ್ನಯ KSRTC ಬಸ್ ನಿಲ್ದಾಣದ ನಿಲ್ದಾಣಾಧಿಕಾರಿಯಾಗಿ ನಿಯೋಜನೆಗೊಂಡಿದ್ದಾರೆ. 1992 ರಲ್ಲಿ ನಿರ್ವಾಹಕರಾಗಿ KSRTC ಮಂಗಳೂರು ವಿಭಾಗದಲ್ಲಿ ನೇಮಕಗೊಂಡರು.

Ad Widget

Ad Widget

Ad Widget

Ad Widget

ಪುತ್ತೂರು : ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ಬಜನಿಗುತ್ತು ಕೆ.ಭಾಸ್ಕರ ಶೆಟ್ಟಿಯವರು ಸಹಾಯಕ ಸಂಚಾರ ನಿರೀಕ್ಷಕರಾಗಿ ಪದನ್ನೋತಿ ಹೊಂದಿ ಪುತ್ತೂರು ಕೋಟಿ- ಚೆನ್ನಯ KSRTC ಬಸ್ ನಿಲ್ದಾಣದ ನಿಲ್ದಾಣಾಧಿಕಾರಿಯಾಗಿ ನಿಯೋಜನೆಗೊಂಡಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

1992 ರಲ್ಲಿ ನಿರ್ವಾಹಕರಾಗಿ KSRTC ಮಂಗಳೂರು ವಿಭಾಗದಲ್ಲಿ ನೇಮಕಗೊಂಡರು.

Ad Widget

Ad Widget <> Ad Widget

2022ರಲ್ಲಿ ಸಂಚಾರ ನಿಯಂತ್ರಕರಾಗಿ ಕುಕ್ಕೆ ಸುಬ್ರಹ್ಮಣ್ಯ ಬಸ್ ನಿಲ್ದಾಣದಲ್ಲಿ ಸೇವೆ ಸಲ್ಲಿಸಿದ ಭಾಸ್ಕರ ಶೆಟ್ಟಿಯವರು 2024ರಿಂದ ಪುತ್ತೂರು ಬಸ್ ನಿಲ್ದಾಣದಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸುವ ಕೌಂಟರ್ ನಲ್ಲಿ ಕಾರ್ಯನಿರ್ವಹಿಸಿ, 2026 ಜೂನ್ ನಲ್ಲಿ ಬಸ್ ನಿಲ್ದಾಣದ ಸಹಾಯಕ ಸಂಚಾರ ನಿರೀಕ್ಷಕರಾಗಿ ಪದೋನ್ನತಿ ಹೊಂದಿದ್ದಾರೆ.



Ad Widget

ಬಜನಿಯಲ್ಲಿ ಕೃಷಿಕರಾಗಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಭಾಸ್ಕರ ಶೆಟ್ಟಿಯವರ ಪತ್ನಿ ಸೀಮಾ ಬಿ. ಶೆಟ್ಟಿ, ಹಿರಿಯ ಪುತ್ರಿ ಕು. ಸನ್ಮಿತಾ ಶೆಟ್ಟಿ ಬಿ.ಇ ಪದವೀಧರೆಯಾಗಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಉದ್ಯೋಗದಲ್ಲಿದ್ದಾರೆ.

Ad Widget

Ad Widget

ಸುಳ್ಯ ಕೆವಿಜಿ ಡೆಂಟಲ್ ಕಾಲೇಜಿನಲ್ಲಿ ದಂತ ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿರುವ ಸಮೃದ್ಧಿ ಶೆಟ್ಟಿ.ಕೆ ಇವರ ದ್ವಿತೀಯ ಪುತ್ರಿ.

ಇವರು ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಕಾರ್ನೋಜಿ ಕೃಷ್ಣ ಶೆಟ್ಟಿ ಹಾಗೂ ಬಜನಿಗುತ್ತು ಶೀಲಾವತಿ ಕೆ ಶೆಟ್ಟಿಯವರ ಪುತ್ರ.

Ad Widget
Continue Reading

ಮಂಗಳೂರು

Auto passengers-ದಕ್ಷಿಣ ಕನ್ನಡದಲ್ಲಿ ಆಟೊ ಪ್ರಯಾಣಿಕರಿಗೆ ಮತ್ತೊಂದು ದರ ಏರಿಕೆ ಶಾಕ್‌: ಇಲ್ಲಿದೆ ಪರಿಷ್ಕೃತ ರೇಟ್ ಕಾರ್ಡ್

Published

on



Ad Widget

Ad Widget

Ad Widget

Ad Widget

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೊರಿಕ್ಷಾ ಪ್ರಯಾಣ ದರವನ್ನು ಮತ್ತೊಮ್ಮೆ ಪರಿಷ್ಕರಿಸಲಾಗಿದ್ದು, ನವೆಂಬರ್‌ 1ರಿಂದ ಮೊದಲ 1.5 ಕಿ.ಮೀಗೆ ಕನಿಷ್ಠ ₹40 ಹಾಗೂ ಬಳಿಕ ಪ್ರತಿ ಕಿ.ಮೀಗೆ ₹23 ದರ ನಿಗದಿಪಡಿಸಲಾಗಿದೆ.

Ad Widget

Ad Widget

Ad Widget

Ad Widget

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೊರಿಕ್ಷಾ ಪ್ರಯಾಣ ದರವನ್ನು ಮತ್ತೊಮ್ಮೆ ಪರಿಷ್ಕರಿಸಲಾಗಿದ್ದು, ನವೆಂಬರ್‌ 1ರಿಂದ ಮೊದಲ 1.5 ಕಿ.ಮೀಗೆ ಕನಿಷ್ಠ ₹40 ಹಾಗೂ ಬಳಿಕ ಪ್ರತಿ ಕಿ.ಮೀಗೆ ₹23 ದರ ನಿಗದಿಪಡಿಸಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಆಗಸ್ಟ್‌ 28ರಂದು ಹೊರಡಿಸಿದ್ದ ಅಧಿಸೂಚನೆಯಲ್ಲಿ ಮೊದಲ 1.5 ಕಿ.ಮೀಗೆ ಕನಿಷ್ಠ ದರವನ್ನು ₹35ರಿಂದ ₹40ಕ್ಕೆ ಹೆಚ್ಚಿಸಲಾಗಿತ್ತು. ಆದರೆ, ಪ್ರತಿ ಕಿ.ಮೀಗೆ ₹20ರಂತೆ ಇದ್ದ ದರವನ್ನು ಅದೇ ರೀತಿ ಮುಂದುವರಿಸಲಾಗಿತ್ತು. 2022ರ ನವೆಂಬರ್‌ 23ರಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (ಆರ್‌ಟಿಎ) ನಿಗದಿಪಡಿಸಿದ್ದ ಪ್ರತಿ ಕಿ.ಮೀಗೆ ₹20ರ ದರವನ್ನು ಆಗಸ್ಟ್‌ 28ರ ಅಧಿಸೂಚನೆಯಲ್ಲಿ ಪರಿಗಣಿಸಲಾಗಿರಲಿಲ್ಲ ಎಂದು ಅ.1ರಂದು ಹೊರಡಿಸಿರುವ ಪರಿಷ್ಕೃತ ಅಧಿಸೂಚನೆಯಲ್ಲಿ ಆರ್‌ಟಿಎ ಸದಸ್ಯ ಕಾರ್ಯದರ್ಶಿ ತಿಳಿಸಿದ್ದಾರೆ.

Ad Widget

Ad Widget <> Ad Widget

ಆಟೊ ಚಾಲಕರು ಹಾಗೂ ಮಾಲೀಕರ ಪ್ರತಿನಿಧಿಗಳು ಕನಿಷ್ಠ ದರವನ್ನು ₹35ರಿಂದ ₹50ಕ್ಕೆ ಹಾಗೂ ಪ್ರತಿ ಕಿ.ಮೀ. ದರವನ್ನು ₹30ಕ್ಕೆ ಹೆಚ್ಚಿಸುವಂತೆ ಮನವಿ ಮಾಡಿದ್ದರು. ಇಂಧನ, ಬಿಡಿಭಾಗ ಸೇರಿದಂತೆ ನಿರ್ವಹಣಾ ವೆಚ್ಚಗಳು ಗಣನೀಯವಾಗಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ದರ ಹೆಚ್ಚಳ ಅಗತ್ಯ ಎಂದು ಅವರು ಕೋರಿದ್ದರು.



Ad Widget

ಆದರೆ, ₹50 ಕನಿಷ್ಠ ದರ ಹಾಗೂ ಕಿ.ಮೀಗೆ ₹30ಕ್ಕೆ ದರ ಏರಿಸಿದರೆ ಸಾರ್ವಜನಿಕರು ಆಟೊರಿಕ್ಷಾ ಬಳಕೆಯಿಂದ ದೂರ ಸರಿದು ಪರ್ಯಾಯ ಸಾರಿಗೆ ವ್ಯವಸ್ಥೆಗಳತ್ತ ಮುಖ ಮಾಡುವ ಸಾಧ್ಯತೆಯಿದೆ. ಇದರಿಂದ ಆಟೊರಿಕ್ಷಾ ಚಾಲಕರು ಮತ್ತು ಮಾಲೀಕರಿಗೂ ತೊಂದರೆಯಾಗಬಹುದು ಎಂದು ಆರ್‌ಟಿಎ ಅಭಿಪ್ರಾಯಪಟ್ಟಿದೆ.

Ad Widget

Ad Widget

ಹೊಸ ದರ ಹೀಗಿದೆ

ಗರಿಷ್ಠ ಮೂರು ಪ್ರಯಾಣಿಕರನ್ನು ಕರೆದೊಯ್ಯುವ ಆಟೊರಿಕ್ಷಾಗಳಿಗೆ ಮೊದಲ 1.5 ಕಿ.ಮೀಗೆ ₹40 ಹಾಗೂ ನಂತರ ಪ್ರತಿ ಕಿ.ಮೀಗೆ ₹23 ದರ ನಿಗದಿಯಾಗಿದೆ.

  • ಮೊದಲ 10 ನಿಮಿಷ ಕಾಯುವಿಕೆಗೆ ಶುಲ್ಕವಿಲ್ಲ.
  • ನಂತರದ 15 ನಿಮಿಷ ಅಥವಾ ಅದರ ಭಾಗಕ್ಕೆ ₹5 ಶುಲ್ಕ.
  • 20 ಕೆ.ಜಿ.ವರೆಗೆ ಸಾಮಾನುಗಳಿಗೆ ಶುಲ್ಕವಿಲ್ಲ.
  • ಮುಂದಿನ 20 ಕೆ.ಜಿ. ಅಥವಾ ಅದರ ಭಾಗಕ್ಕೆ ₹25 ಶುಲ್ಕ.
  • ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ಸಾಮಾನ್ಯ ದರದ ಒಂದೂವರೆ ಪಟ್ಟು ಶುಲ್ಕ ವಿಧಿಸಬಹುದು.

ಪರಿಷ್ಕೃತ ದರದ ಪಟ್ಟಿಯನ್ನು ಪ್ರತಿಯೊಂದು ಆಟೊರಿಕ್ಷಾದಲ್ಲೂ ಕಡ್ಡಾಯವಾಗಿ ಪ್ರದರ್ಶಿಸುವಂತೆ ಆರ್‌ಟಿಎ ಸೂಚಿಸಿದೆ. ಅಲ್ಲದೆ, ಮೀಟರ್‌ಗಳನ್ನು ಪರಿಷ್ಕೃತ ದರಕ್ಕೆ ಮರುಹೊಂದಿಸಿ, ಶೀಘ್ರದಲ್ಲೇ ಸೀಲ್ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಮೀಟರ್‌ಗಳ ಮರುಹೊಂದಿಕೆ ಪೂರ್ಣಗೊಳ್ಳುವವರೆಗೆ ಚಾಲಕರಿಗೆ ಪ್ರದರ್ಶಿಸಲು ಅಗತ್ಯವಿರುವ ಹೋಲಿಕೆ ದರಪಟ್ಟಿಯನ್ನು ಚಾಲಕರ ಸಂಘಗಳಿಗೆ ನೀಡಲಾಗುವುದು. ಸಂಘಗಳು ಅದನ್ನು ಚಾಲಕರಿಗೆ ವಿತರಿಸಲಿವೆ ಎಂದು ಆರ್‌ಟಿಎ ತಿಳಿಸಿದೆ.

Ad Widget
Continue Reading

ಬಿಗ್ ನ್ಯೂಸ್

ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್‌ಶಿಪ್‌ – 9 ರಾಷ್ಟ್ರಗಳ 1500 ಈಜುಪಟುಗಳು ಭಾಗಿ : ಪುತ್ತೂರಿನ ಪಾರ್ಥ ವಾರಣಾಸಿಗೆ ಚಿನ್ನ

Published

on



Ad Widget

Ad Widget

Ad Widget

Ad Widget

ಬೆಂಗಳೂರಿನ ಪಡುಕೋಣೆ ದ್ರಾವಿಡ್ ಸೆಂಟರ್ ಫಾರ್ ಎಕ್ಸೆಲೆನ್ಸ್ (ಡಾಲ್ಫಿನ್ ಆಕ್ವಾಟಿಕ್ಸ್‌)ನಲ್ಲಿ ಅ.4ರಿಂದ 10ರ ತನಕ ನಡೆಯುತ್ತಿರುವ 2ನೇ ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್ ಶಿಪ್ 2026ರಲ್ಲಿ ಭಾಗವಹಿಸಿದ ಭಾರತದ ಪ್ರಮುಖ ಈಜು ಸ್ಪರ್ಧಿ ವಾರಣಾಸಿ ಸ್ವಿಮ್ಮಿಂಗ್ ಅಕಾಡೆಮಿ ಮತ್ತು ಪುತ್ತೂರು ಅಕ್ವಾಟಿಕ್ ಕ್ಲಬ್ ನ ಪ್ರಧಾನ ಕೋಚ್ ಪಾರ್ಥ ವಾರಣಾಸಿ 50 ಮೀ ಬಟರ್ ಫೈ ನಲ್ಲಿ ಪುಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ.

Ad Widget

Ad Widget

Ad Widget

Ad Widget

ಪುತ್ತೂರು:ಬೆಂಗಳೂರಿನ ಪಡುಕೋಣೆ ದ್ರಾವಿಡ್ ಸೆಂಟರ್ ಫಾರ್ ಎಕ್ಸೆಲೆನ್ಸ್ (ಡಾಲ್ಫಿನ್ ಆಕ್ವಾಟಿಕ್ಸ್‌)ನಲ್ಲಿ ಅ.4ರಿಂದ 10ರ ತನಕ ನಡೆಯುತ್ತಿರುವ 2ನೇ ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್ ಶಿಪ್ 2026ರಲ್ಲಿ ಭಾಗವಹಿಸಿದ ಭಾರತದ ಪ್ರಮುಖ ಈಜು ಸ್ಪರ್ಧಿ ವಾರಣಾಸಿ ಸ್ವಿಮ್ಮಿಂಗ್ ಅಕಾಡೆಮಿ ಸಂಸ್ಥಾಪಕ ಮತ್ತು ಪುತ್ತೂರು ಅಕ್ವಾಟಿಕ್ ಕ್ಲಬ್ ನ ಪ್ರಧಾನ ಕೋಚ್ ಪಾರ್ಥ ವಾರಣಾಸಿ 50 ಮೀ ಬಟರ್ ಫ್ಲೈ ನಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

9 ರಾಷ್ಟ್ರಗಳ 1,500ಕ್ಕೂ ಹೆಚ್ಚು ಈಜುಗಾರರು ಭಾಗಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ಪ್ರತಿಷ್ಠಿತ ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್‌ಶಿಪ್ ಆಯೋಜಿಸಲಾಗಿದೆ. ಏಷ್ಯಾ ಅಕ್ವಾಟಿಕ್ ಮಾರ್ಗದರ್ಶನದಲ್ಲಿ, ಭಾರತೀಯ ಈಜು ಒಕ್ಕೂಟದ ಅಧೀನದಲ್ಲಿ ಹಾಗೂ ಕರ್ನಾಟಕ ಈಜು ಸಂಸ್ಥೆಯ ಆಯೋಜನಾ ಪಾಲುದಾರಿಕೆಯಲ್ಲಿ ಚಾಂಪಿಯನ್‌ಶಿಪ್ ನಡೆಯುತ್ತಿದೆ.

Ad Widget

Ad Widget <> Ad Widget

ಭಾರತ ಸೇರಿದಂತೆ ಶ್ರೀಲಂಕಾ, ಇರಾನ್, ಥೈಲ್ಯಾಂಡ್, ಜಪಾನ್, ಚೀನಾ, ಓಮನ್, ಮಲೇಷ್ಯಾ ಸೇರಿದಂತೆ ಒಟ್ಟು 9 ರಾಷ್ಟ್ರಗಳ 1,500ಕ್ಕೂ ಅಧಿಕ ಈಜುಗಾರರು ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿದ್ದಾರೆ.



Ad Widget

ಈ ಪ್ರತಿಷ್ಠಿತ ಅಂತಾರಾಷ್ಟ್ರೀಯ ಮಟ್ಟದ ಕೂಟದಲ್ಲಿ ಪಾರ್ಥ ವಾರಣಾಸಿ ಚಿನ್ನದ ಪದಕ ಗೆದ್ದಿರುವುದು ಪುತ್ತೂರಿನ ಕ್ರೀಡಾಭಿಮಾನಿಗಳಿಗೆ ಸಂತಸದ ವಿಷಯವಾಗಿದೆ.

Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading