ಅಪರಾಧ
FIR-ಬೆಂಗಳೂರಿನ ಪೊಲೀಸ್ ಅಧಿಕಾರಿ ಗೋವರ್ಧನ್ ಗೆ ಮಹಿಳಾ ಎಸಿಪಿ ಜೊತೆ ಸಂಬಂಧ ಆರೋಪ – ಪತಿ ಹಾಗೂ ಮಹಿಳೆ ವಿರುದ್ಧ ಹಲ್ಲೆ, ಜೀವಬೆದರಿಕೆ ದೂರು
ಆಗ್ನೇಯ ವಿಭಾಗದ ಸೆನ್ ಎಸಿಪಿ ಗೋವರ್ಧನ್ ಹಾಗೂ ಮಹಿಳಾ ಪ್ರೊಬೇಷನರಿ ಡಿವೈಎಸ್ಪಿ ಸಂಪರ್ಕದಲ್ಲಿದ್ದು ಇದನ್ನು ಪ್ರಶ್ನಿಸಿದ ಗೋವರ್ಧನ್ ಹೆಂಡತಿಗೆ ಹಲ್ಲೆ ನಡೆಸಿರುವ ಹಿನ್ನೆಲೆಯಲ್ಲಿ ಎಸಿಪಿ ಹಾಗೂ ಮಹಿಳಾ ಡಿವೈಎಸ್ಪಿ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬೆಂಗಳೂರು, (ಫೆ 13): ಆಗ್ನೇಯ ವಿಭಾಗದ ಸೆನ್ ಎಸಿಪಿ ಗೋವರ್ಧನ್ ಹಾಗೂ ಮಹಿಳಾ ಪ್ರೊಬೇಷನರಿ ಡಿವೈಎಸ್ಪಿ ಸಂಪರ್ಕದಲ್ಲಿದ್ದು ಇದನ್ನು ಪ್ರಶ್ನಿಸಿದ ಗೋವರ್ಧನ್ ಹೆಂಡತಿಗೆ ಹಲ್ಲೆ ನಡೆಸಿರುವ ಹಿನ್ನೆಲೆಯಲ್ಲಿ ಎಸಿಪಿ ಹಾಗೂ ಮಹಿಳಾ ಡಿವೈಎಸ್ಪಿ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಎಸಿಪಿ ಗೋವರ್ಧನ್ ಪತ್ನಿ ಅಮೃತ ಅವರು ತಮ್ಮ ಗಂಡ ಹಾಗೂ ಮತ್ತೊಬ್ಬ ಮಹಿಳಾ ಅಧಿಕಾರಿಯ ವಿರುದ್ಧ ದೂರು ನೀಡಿದ್ದಾರೆ.
ಮಹಿಳಾ ಅಧಿಕಾರಿ ಹಾಗೂ ಗೋವರ್ಧನ್ ನಡುವಿನ ಚಾಟ್ ಸಿಕ್ಕಿರುವ ಬಗ್ಗೆಯೂ ಅಮೃತ ಅವರ ದೂರಿನಲ್ಲಿ ಉಲ್ಲೇಖಿಸಿದ್ದು, ಈ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರೊಬೇಷನರಿ DySP ಗೋವರ್ಧನ್ ಅವರು ಮಹಿಳಾ ಪ್ರೊಬೇಷನರಿ DySP ಜೊತೆ ಸಂಪರ್ಕದಲ್ಲಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡಿದ್ದಾರೆಂದು ಪತಿ ಗೋವರ್ಧನ್ ಹಾಗೂ ಮಹಿಳಾ ಪೊಲೀಸ್ ಅಧಿಕಾರಿ ವಿರುದ್ಧ ಪತ್ನಿ ಅಮೃತ ದೂರು ನೀಡಿದ್ದಾರೆ.
ಪರಸ್ತ್ರೀಗೆ ಮಕ್ಕಳಿದ್ದರೂ ತನ್ನ ಪತಿ ಜೊತೆ ಸಲುಗೆ ಬೆಳೆಸಿದ್ದಾರೆ. ಪತಿ ಎಲ್ಲೇ ಕೆಲಸಕ್ಕೆ ಸೇರಿದರೂ ಅಲ್ಲಿಗೆ ಹೋಗುತ್ತಾರೆ. ಇದನ್ನು ಗೋವರ್ಧನ್ ಪತ್ನಿ ಅಮೃತ ಅವರು ಪ್ರಶ್ನಿಸಿದ್ದು, ಇದರಿಂದ ಆಕ್ರೋಶಗೊಂಡು ಹಲ್ಲೆ ಮಾಡಿದ್ದಾರೆ. ಹೊಟ್ಟೆಗೆ ಒದ್ದು, ಡಿವೋರ್ಸ್ ಕೊಡುವುದಾಗಿ ಬೆದರಿಕೆ ಹಾಕಿದ್ದಾರೆ. ಇನ್ನು ಪತಿ ಜೊತೆಗಿನ ಸಹವಾಸ ಬಿಡುವಂತೆ ಮಹಿಳಾ ಅಧಿಕಾರಿಗೂ ಅಮೃತ ಹೇಳಿದ್ದಾರೆ. ಇದಕ್ಕೆ ಮಹಿಳಾಧಿಕಾರಿ ಹೆಂಡ್ತಿಗೆ ಡಿವೋರ್ಸ್ ನೀಡುವಂತೆ ಗೋವರ್ಧನ್ಗೆ ಒತ್ತಾಯಿಸಿದ್ದಾರೆ. ಇಲ್ಲವಾದರೇ ಅಮೃತ ಮೇಲೆ ಸುಳ್ಳು ಕೇಸ್ ಹಾಕಿಸುವ ಬೆದರಿಕೆ ಹಾಕಿದ್ದಾರೆ ಎಂದು ಅಮೃತ ಅವರು ಆರೋಪಿಸಿದ್ದಾರೆ.
ಈ ಬಗ್ಗೆ ಅಮೃತ ಅತ್ತೆ, ಮಾವನ ಬಳಿ ಹೇಳಿಕೊಂಡಿದ್ದಾರೆ. ಆದರೆ ಅತ್ತೆಯೂ ನನ್ನ ಬೆಂಬಲಕ್ಕೆ ನಿಲ್ಲದೆ ಕೊಲೆಗೆ ಯತ್ನಿಸಿದ್ದಾರೆ. ಸೀಮೆಎಣ್ಣೆ ಸುರಿದು ಹತ್ಯೆಗೆ ಯತ್ನಿಸಿದ್ದಾಳೆಂದು ಅತ್ತೆ ವಿರುದ್ಧ ದೂರು ದಾಖಲಿಸಿದ್ದರು.
ಪತಿಯ ಸಂಬಂಧದಿಂದ ಬೇಸತ್ತು ಅಮೃತ ಡಿಜಿಗೆ ದೂರು ನೀಡಿದ್ದರು. ಬಳಿಕ ಇಲಾಖೆಯೂ ಇಬ್ಬರಿಗೂ ಸಮನ್ಸ್ ನೀಡಿ ವಿಚಾರಣೆ ನಡೆಸಿತ್ತು. ಇದೀಗ ಅಮೃತ ಅವರ ದೂರು ಆಧರಿಸಿ ಗೋವರ್ಧನ್, ಗೆಳತಿ(ಮಹಿಳಾಧಿಕಾರಿ) ಹಾಗೂ ಪೋಷಕರ ವಿರುದ್ಧ ಕೊಲೆಗೆ ಯತ್ನ ಸೇರಿದಂತೆ ವಿವಿಧ ಸೆಕ್ಷನ್ ಗಳ ಅಡಿ ಎಫ್‌ಐಆರ್ ದಾಖಲಾಗಿದೆ.
ಅಮೃತ ಪರ ವಕೀಲೆ ಹೇಳಿದ್ದೇನು?
ಈ ಬಗ್ಗೆ ದೂರುದಾರೆ ಅಮೃತ ಪರ ವಕೀಲೆ ಗ್ರೀಷ್ಮಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಅಮೃತರವರು ನನ್ನ ಕ್ಲೈಂಟ್. ಅವರ ಪತಿ ಗೋವರ್ಧನ್ ಮೇಲೆ ದೂರು ನೀಡಿದ್ದಾರೆ. ಎಸಿಪಿ ಗೋವರ್ಧನ್ ಹಾಗೂ ಅಶ್ವಿನಿ ಅವರು ಸ್ನೇಹಿತರು. ಗೋವರ್ಧನ್, ಅಶ್ವಿನಿ ಹಾಗೂ ಗೋವರ್ಧನ್ ತಾಯಿ ವಿರುದ್ದ ದೂರು ನೀಡಿದ್ದೇವೆ. ಅಲ್ಲದೇ ಅಶ್ವಿನಿ ತಂದೆ ಕೂಡ ನಾಲ್ಕನೇ ಆರೋಪಿ. 2014 ರಲ್ಲಿ ಮದುವೆಯಾಗಿ 8 ವರ್ಷದ ಮಗು ಇದೆ. ಮೊದಲು ಗೋವರ್ಧನ್ ಡಾಕ್ಟರ್ ಆಗಿದ್ರು. ನಂತರ ಪೊಲೀಸ್ ಇಲಾಖೆಗೆ ಸೇರಿದ್ರು. ಅಶ್ವಿನಿ ಕಾರವಾರ ಸೈಬರ್ ಕ್ತೈಂ ನಲ್ಲಿ ಎಸಿಪಿ. ಗೋವರ್ಧನ್ ಬೆಂಗಳೂರು ಸೈಬರ್ ಕ್ರೈಂ ನಲ್ಲಿ ಎಸಿಪಿಯಾಗಿದ್ದಾರೆ ಎಂದು ಹೇಳಿದರು.
ಗೋವರ್ಧನ್ ಅವರಿಗೆ ಅಶ್ವಿನಿ ಪದೇ ಪದೇ ಕಾಲ್,ಮೆಸೇಜ್ ಮಾಡುತ್ತಿದ್ದರು. ಈ ಬಗ್ಗೆ ಅಮೃತಾ ಪತಿಯನ್ನ ಕೇಳಲಿಕ್ಕೆ ಶುರು ಮಾಡಿದ್ರು. ಆಗ ಪತ್ನಿಗೆ ಹೊಡೆದು ಟಾರ್ಚರ್ ಮಾಡಿದ್ದಾರೆ. ಅಲ್ಲದೇ ಅಶ್ವಿನಿ ಅವರು ಅಮೃತಾ ಮೇಲೆ ಹಲ್ಲೆ ಮಾಡಿದ್ದಾರೆ. ಸದ್ಯ ಹೈಗ್ರೌಂಡ್ಸ್ ನಲ್ಲಿ ಕೇಸ್ ಆಗಿದ್ದು, ಪೊಲೀಸರು ಮಹಜರ್ ಕೂಡ ಮಾಡಿದ್ದಾರೆ. ಗೋವರ್ಧನ್ ಮತ್ತು ಅಶ್ವಿನಿ ನಡುವೆ ವಾಟ್ಸಾಪ್ ಚಾಟ್ನಲ್ಲಿ ಅಮೃತಾ ಬಗ್ಗೆ ಮಾತಾಡಿದ್ದಾರೆ. ಅಮೃತಾ ಅವರಿಗೆ ಜೀವ ಬೆದರಿಕೆ ಇದೆ ಎಂದರು.
ಅಂತರ ರಾಜ್ಯ
Blackmail-ದೋಸೆಯಲ್ಲಿ ಸತ್ತ ಇಲಿ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ದೂರು ನೀಡಿದ್ದ ಮಹಿಳೆಯಿಂದಲೇ ₹25 ಲಕ್ಷಕ್ಕೆ ಬ್ಲ್ಯಾಕ್‌ಮೇಲ್..!
ಮುಂಬೈನ ಬೊರಿವಲಿ ಪ್ರದೇಶದ ಹೋಟೆಲ್‌ವೊಂದರಲ್ಲಿ ಮೈಸೂರು ಮಸಾಲೆ ದೋಸೆಯಲ್ಲಿ ಸತ್ತ ಇಲಿ ಪತ್ತೆಯಾದ ಪ್ರಕರಣಕ್ಕೆ ಇದೀಗ ಅಚ್ಚರಿಯ ತಿರುವು ಸಿಕ್ಕಿದೆ. ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತಷ್ಟು ವೈರಲ್ ಮಾಡುವುದಾಗಿ ಬೆದರಿಸಿ ಹೋಟೆಲ್ ಮಾಲೀಕರಿಂದ ₹25 ಲಕ್ಷಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ, ದೂರು ನೀಡಿದ್ದ ಮಹಿಳೆಯನ್ನೇ ಪೊಲೀಸರು ಬಂಧಿಸಿದ್ದಾರೆ.
ಮುಂಬೈ: ಮುಂಬೈನ ಬೊರಿವಲಿ ಪ್ರದೇಶದ ಹೋಟೆಲ್‌ವೊಂದರಲ್ಲಿ ಮೈಸೂರು ಮಸಾಲೆ ದೋಸೆಯಲ್ಲಿ ಸತ್ತ ಇಲಿ ಪತ್ತೆಯಾದ ಪ್ರಕರಣಕ್ಕೆ ಇದೀಗ ಅಚ್ಚರಿಯ ತಿರುವು ಸಿಕ್ಕಿದೆ. ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತಷ್ಟು ವೈರಲ್ ಮಾಡುವುದಾಗಿ ಬೆದರಿಸಿ ಹೋಟೆಲ್ ಮಾಲೀಕರಿಂದ ₹25 ಲಕ್ಷಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ, ದೂರು ನೀಡಿದ್ದ ಮಹಿಳೆಯನ್ನೇ ಪೊಲೀಸರು ಬಂಧಿಸಿದ್ದಾರೆ.
ಸೆ.24ರಂದು ಮಾನ್ಸಿ ಎಂಬ ಮಹಿಳೆ ತನ್ನ ಮಗುವಿನೊಂದಿಗೆ ಇಬ್ಬರು ಪುರುಷರ ಜತೆ ಬೊರಿವಲಿಯ ಹೋಟೆಲ್‌ಗೆ ತೆರಳಿದ್ದರು. ಈ ವೇಳೆ ಮೈಸೂರು ಮಸಾಲೆ ದೋಸೆ ಆರ್ಡರ್ ಮಾಡಿದ್ದರು. ದೋಸೆ ತಿನ್ನುವ ಸಂದರ್ಭದಲ್ಲಿ ಅದರೊಳಗೆ ಸತ್ತ ಸಣ್ಣ ಇಲಿ ಪತ್ತೆಯಾಗಿದೆ ಎಂದು ಅವರು ಆರೋಪಿಸಿದ್ದರು.
ಮಾನ್ಸಿ ಅವರ ಹೇಳಿಕೆಯಂತೆ, ಅವರ ಸಹೋದರ ದೋಸೆಯ ಕೆಲವು ಭಾಗಗಳನ್ನು ಸೇವಿಸಿದ ಬಳಿಕ ಅದರೊಳಗೆ ಸತ್ತ ಇಲಿ ಇರುವುದನ್ನು ಗಮನಿಸಿದ್ದರು. ಇದರಿಂದ ಆಘಾತಗೊಂಡ ಅವರು ವಾಂತಿ ಮಾಡಿಕೊಂಡಿದ್ದರು. ಬಳಿಕ ಮಾನ್ಸಿ ಬೊರಿವಲಿ ಪೊಲೀಸ್ ಠಾಣೆಗೆ ಕರೆ ಮಾಡಿ ಘಟನೆ ಕುರಿತು ದೂರು ನೀಡಿದ್ದರು.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆ ಸೆ.28ರಂದು ಹೋಟೆಲ್‌ನ ಪರವಾನಗಿಯನ್ನು ಅಮಾನತುಗೊಳಿಸಿತ್ತು. ಇದರಿಂದ ಹೋಟೆಲ್ ಮುಚ್ಚುವ ಪರಿಸ್ಥಿತಿ ಎದುರಾಗಿತ್ತು.
₹25 ಲಕ್ಷಕ್ಕೆ ಬ್ಲ್ಯಾಕ್‌ಮೇಲ್
ವಿಡಿಯೋ ವೈರಲ್ ಆದ ಬಳಿಕ ಹೋಟೆಲ್ ಮಾಲೀಕರಿಗೆ ಬೆದರಿಕೆ ಕರೆಗಳು ಬರಲಾರಂಭಿಸಿದ್ದವು. ವಿಡಿಯೋವನ್ನು ಮತ್ತಷ್ಟು ವೈರಲ್ ಮಾಡುವುದಾಗಿ ಹಾಗೂ ಸಂಬಂಧಿಕರಿಗೆ ಕಳುಹಿಸುವುದಾಗಿ ಬೆದರಿಸಿ ₹25 ಲಕ್ಷ ನೀಡುವಂತೆ ಒತ್ತಾಯಿಸಲಾಗಿತ್ತು ಎನ್ನಲಾಗಿದೆ.
ನಿರಂತರ ಬೆದರಿಕೆ ಮತ್ತು ಮಾನಸಿಕ ಕಿರುಕುಳದಿಂದಾಗಿ ಹೋಟೆಲ್ ಮಾಲೀಕರು ₹6 ಲಕ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ₹1 ಲಕ್ಷವನ್ನು ಮುಂಗಡವಾಗಿ ನಗದು ರೂಪದಲ್ಲಿ ನೀಡಿದ್ದರು.
ಹಣ ಪಡೆಯುವ ವೇಳೆ ರೆಡ್‌ಹ್ಯಾಂಡ್ ಆಗಿ ಬಂಧನ
ಸೆ.29ರಂದು ಹೋಟೆಲ್ ಮಾಲೀಕರು ಬೊರಿವಲಿ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಪೊಲೀಸರು ಬಲೆ ಬೀಸಿ, ಮತ್ತಷ್ಟು ಹಣ ಪಡೆಯಲು ಮಹಿಳೆಯನ್ನು ಕರೆಸಿಕೊಂಡಿದ್ದರು. ಹಣ ಸ್ವೀಕರಿಸುತ್ತಿದ್ದ ವೇಳೆ ಪೊಲೀಸರು ಆಕೆಯನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ತನಿಖೆ ವೇಳೆ ಬಂಧಿತ ಮಹಿಳೆ ಬೇರೆ ಯಾರೂ ಅಲ್ಲ, ದೋಸೆಯಲ್ಲಿ ಸತ್ತ ಇಲಿ ಪತ್ತೆಯಾಗಿದೆ ಎಂದು ದೂರು ನೀಡಿದ್ದ ಮಾನ್ಸಿ ಅಮಿತ್ ಎಂಬುದು ಬೆಳಕಿಗೆ ಬಂದಿದೆ. ಅವರು ಬೊರಿವಲಿಯ ಗೋರೆಗಾಂವ್ ಪ್ರದೇಶದ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದು, ಬ್ಲ್ಯಾಕ್‌ಮೇಲ್‌ನಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿಸಿದ್ದಾರೆ.
ಅಂತರ ರಾಜ್ಯ
Premananda Ashram-ಪ್ರೇಮಾನಂದ ಆಶ್ರಮದ ಶಿಷ್ಯನ ಸಾವು ಪ್ರಕರಣಕ್ಕೆ ಟ್ವಿಸ್ಟ್: ರಕ್ತದ ಕಲೆ, ಸಿಸಿಟಿವಿ ದೃಶ್ಯಗಳ ಪರಿಶೀಲನೆ
ಪ್ರೇಮಾನಂದ ಮಹಾರಾಜರ ಆಶ್ರಮದಲ್ಲಿ ಶಿಷ್ಯ ರಸಿಕ್ ದುಲಾರಿ ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟ ಪ್ರಕರಣದ ತನಿಖೆಯನ್ನು ಮಥುರಾ ಪೊಲೀಸರು ಚುರುಕುಗೊಳಿಸಿದ್ದಾರೆ. ಸೆ.25ರಂದು ನಡೆದ ಈ ಘಟನೆ ಆರಂಭದಲ್ಲಿ ಆತ್ಮಹತ್ಯೆ ಎಂದು ಪೊಲೀಸರು ಪರಿಗಣಿಸಿದ್ದರು. ಆದರೆ, ಸಿಸಿಟಿವಿ ದೃಶ್ಯಗಳು ಹಾಗೂ ತನಿಖೆಯಲ್ಲಿ ಸಿಕ್ಕಿರುವ ಕೆಲವು ಮಾಹಿತಿಗಳಿಂದ ಪ್ರಕರಣವು ಅನೂಹ್ಯ ತಿರುವು ಪಡೆದಿದೆ.
ಮಥುರಾ: ಪ್ರೇಮಾನಂದ ಮಹಾರಾಜರ ಆಶ್ರಮದಲ್ಲಿ ಶಿಷ್ಯ ರಸಿಕ್ ದುಲಾರಿ ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟ ಪ್ರಕರಣದ ತನಿಖೆಯನ್ನು ಮಥುರಾ ಪೊಲೀಸರು ಚುರುಕುಗೊಳಿಸಿದ್ದಾರೆ. ಸೆ.25ರಂದು ನಡೆದ ಈ ಘಟನೆ ಆರಂಭದಲ್ಲಿ ಆತ್ಮಹತ್ಯೆ ಎಂದು ಪೊಲೀಸರು ಪರಿಗಣಿಸಿದ್ದರು. ಆದರೆ, ಸಿಸಿಟಿವಿ ದೃಶ್ಯಗಳು ಹಾಗೂ ತನಿಖೆಯಲ್ಲಿ ಸಿಕ್ಕಿರುವ ಕೆಲವು ಮಾಹಿತಿಗಳಿಂದ ಪ್ರಕರಣವು ಅನೂಹ್ಯ ತಿರುವು ಪಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 85 ಮಂದಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ರಸಿಕ್ ಅವರ ಕುಟುಂಬಸ್ಥರು, ಸ್ನೇಹಿತರು ಹಾಗೂ ಹಳೆಯ ಪರಿಚಯಸ್ಥರಿಂದಲೂ ಮಾಹಿತಿ ಪಡೆಯಲಾಗುತ್ತಿದೆ. ಆಶ್ರಮಕ್ಕೆ ಸೇರುವ ಮುನ್ನ ಅವರ ಜೀವನ ಹೇಗಿತ್ತು, ಬಳಿಕ ಅವರ ನಡೆ-ನುಡಿಯಲ್ಲಿ ಯಾವುದೇ ಬದಲಾವಣೆಯಾಗಿತ್ತೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಆಶ್ರಮಕ್ಕೆ ಸೇರುವವರ ವೈಯಕ್ತಿಕ ಮೊಬೈಲ್‌ಗಳನ್ನು ಪಡೆದುಕೊಂಡು, ಬದಲಿಗೆ ಆಶ್ರಮದ ವ್ಯವಸ್ಥೆಯಲ್ಲಿರುವ ಮೊಬೈಲ್ ಮತ್ತು ಸಿಮ್ ನೀಡಲಾಗುತ್ತಿತ್ತು ಎನ್ನಲಾಗಿದೆ. ಹೀಗೆ ಮೊಬೈಲ್ ಬದಲಾಯಿಸುವ ಅಗತ್ಯ ಏನಿತ್ತು, ಆ ಮೊಬೈಲ್‌ಗಳ ಬಳಕೆಯ ಮೇಲೆ ಯಾರಾದರೂ ನಿಗಾ ಇಡುತ್ತಿದ್ದರೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಆಶ್ರಮದಲ್ಲಿದ್ದವರು ಕುಟುಂಬದವರು ಹಾಗೂ ಸ್ನೇಹಿತರನ್ನು ಎಷ್ಟು ಬಾರಿ ಸಂಪರ್ಕಿಸುತ್ತಿದ್ದರು ಎಂಬುದನ್ನೂ ತನಿಖೆ ನಡೆಸಲಾಗುತ್ತಿದೆ. ರಸಿಕ್ ಅವರ ಹಳೆಯ ಮೊಬೈಲ್, ಹೊಸ ಸಿಮ್, ಕರೆಗಳ ವಿವರ ಹಾಗೂ ಸಂದೇಶಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಸಾವಿಗೂ ಮುನ್ನ ಏನಾಗಿತ್ತು?
ರಸಿಕ್ ಕೊಠಡಿಯಿಂದ ಹೊರಬಂದಾಗಲೇ ಅವರ ಬಟ್ಟೆಯಲ್ಲಿ ರಕ್ತದ ಕಲೆಗಳು ಕಾಣಿಸಿಕೊಂಡಿದ್ದವು ಎಂದು ಸಿಸಿಟಿವಿ ದೃಶ್ಯಗಳಿಂದ ತಿಳಿದುಬಂದಿದೆ ಎನ್ನಲಾಗಿದೆ. ನಂತರ ಅವರು ನಾಲ್ಕನೇ ಮಹಡಿಯ ಮೇಲ್ಛಾವಣಿಗೆ ತೆರಳಿದ್ದಾರೆ. ಅಲ್ಲಿ ಕೆಲಕಾಲ ಕುಳಿತುಕೊಂಡು, ಬಳಿಕ ಮಲಗಿದ್ದರು. ನಂತರ ಎದ್ದು ನಿಂತ ಕೆಲವೇ ಕ್ಷಣಗಳಲ್ಲಿ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ.
ರಸಿಕ್ ಅವರ ದೇಹದಲ್ಲಿ, ವಿಶೇಷವಾಗಿ ತೊಡೆಸಂಧಿ ಭಾಗದಲ್ಲಿ ಗಂಭೀರ ಗಾಯವಾಗಿರುವುದು ತನಿಖೆಯಲ್ಲಿ ಗಮನಕ್ಕೆ ಬಂದಿದೆ. ಈ ಗಾಯ ಹೇಗೆ ಉಂಟಾಯಿತು ಎಂಬುದನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಯಾವುದೇ ಮಾನಸಿಕ ಒತ್ತಡ ಅಥವಾ ಖಿನ್ನತೆಯಿಂದ ಬಳಲುತ್ತಿದ್ದರೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಈ ಕುರಿತು ಅವರು ಕುಟುಂಬದವರು ಅಥವಾ ಸ್ನೇಹಿತರ ಬಳಿ ಏನಾದರೂ ಹೇಳಿಕೊಂಡಿದ್ದರೇ ಎಂಬುದನ್ನು ಪೊಲೀಸರು ತಿಳಿದುಕೊಳ್ಳುತ್ತಿದ್ದಾರೆ.
ಇದಲ್ಲದೆ, ಸಾವಿಗೂ ಮುನ್ನ ಅವರು ಮದ್ಯ, ಮಾದಕ ವಸ್ತು ಅಥವಾ ಇತರ ಯಾವುದೇ ಮನಸ್ಸಿನ ಮೇಲೆ ಪರಿಣಾಮ ಬೀರುವ ವಸ್ತು ಸೇವಿಸಿದ್ದರೇ ಎಂಬುದನ್ನು ತಿಳಿಯಲು ಅವರ ರಕ್ತದ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಸಿಸಿಟಿವಿ ದೃಶ್ಯಗಳು, ಮೊಬೈಲ್ ದಾಖಲೆ, ವೈದ್ಯಕೀಯ ವರದಿ ಹಾಗೂ ವಿಚಾರಣೆ ವೇಳೆ ಸಿಕ್ಕ ಮಾಹಿತಿಗಳನ್ನು ಆಧರಿಸಿ ರಸಿಕ್ ಅವರ ಸಾವಿಗೆ ನಿಖರ ಕಾರಣವೇನು ಎಂಬುದನ್ನು ಪೊಲೀಸರು ಪತ್ತೆಹಚ್ಚಲು ಮುಂದಾಗಿದ್ದಾರೆ.
ಅಂತರ ರಾಜ್ಯ
Fire truck-ಬಿಜೆಪಿ ಶಾಸಕನ ಬಂಗಲೆ ತೊಳೆಯಲು ಅಗ್ನಿಶಾಮಕ ವಾಹನ ಬಳಕೆ; ವಿಡಿಯೋ ವೈರಲ್ ಬಳಿಕ ₹2,700 ದಂಡ
ಗುಜರಾತ್‌ನ ದಾಹೋದ್ ಜಿಲ್ಲೆಯಲ್ಲಿ ಬಿಜೆಪಿ ಶಾಸಕರೊಬ್ಬರ ಬಂಗಲೆಯನ್ನು ಸ್ವಚ್ಛಗೊಳಿಸಲು ಅಗ್ನಿಶಾಮಕ ದಳದ ವಾಹನ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕರಿಂದಲೂ ಆಕ್ಷೇಪ ವ್ಯಕ್ತವಾಗಿದೆ.
ದಾಹೋದ್: ಗುಜರಾತ್‌ನ ದಾಹೋದ್ ಜಿಲ್ಲೆಯಲ್ಲಿ ಬಿಜೆಪಿ ಶಾಸಕರೊಬ್ಬರ ಬಂಗಲೆಯನ್ನು ಸ್ವಚ್ಛಗೊಳಿಸಲು ಅಗ್ನಿಶಾಮಕ ದಳದ ವಾಹನ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕರಿಂದಲೂ ಆಕ್ಷೇಪ ವ್ಯಕ್ತವಾಗಿದೆ.
ದೇವಗಢ್ ಬಾರಿಯಾ ಪುರಸಭೆಯ ಅಗ್ನಿಶಾಮಕ ವಾಹನವು ಧನ್‌ಪುರ್ ತಾಲೂಕಿನಲ್ಲಿರುವ ಬಿಜೆಪಿ ಶಾಸಕ ಬಚುಭಾಯ್ ಖಬಾದ್ ಅವರ ನಿವಾಸದ ಬಳಿ ನಿಂತಿದ್ದು, ಸಿಬ್ಬಂದಿ ಬಂಗಲೆಯ ಆವರಣ ಹಾಗೂ ಗೋಡೆಗಳಿಗೆ ಪೈಪ್ ಮೂಲಕ ನೀರು ಸಿಂಪಡಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ವಿಡಿಯೋ ವೈರಲ್ ಆದ ಬಳಿಕ ತುರ್ತು ಸೇವೆಗೆ ಮೀಸಲಾಗಿರುವ ಅಗ್ನಿಶಾಮಕ ವಾಹನವನ್ನು ವೈಯಕ್ತಿಕ ಬಳಕೆಗೆ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಶಾಸಕ ಖಬಾದ್ ಅವರಿಂದ ₹2,700 ದಂಡ ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ದೇವಗಢ್ ಬಾರಿಯಾ ಪುರಸಭೆ ಅಧ್ಯಕ್ಷ ಘಮೇಶ್ ಕಲಾಲ್, ಅಗ್ನಿಶಾಮಕ ವಾಹನ ಕಳುಹಿಸುವಂತೆ ಶಾಸಕರು ಕರೆ ಮಾಡಿದ್ದರು. ಯಾವುದಾದರೂ ಗಂಭೀರ ಘಟನೆ ಸಂಭವಿಸಿರಬಹುದು ಎಂದು ಭಾವಿಸಿ ತಕ್ಷಣ ಅಗ್ನಿಶಾಮಕ ದಳವನ್ನು ಸಂಪರ್ಕಿಸಿ ವಾಹನ ಕಳುಹಿಸಿದ್ದಾಗಿ ತಿಳಿಸಿದ್ದಾರೆ.
ಆದರೆ, ಬಂಗಲೆ ಸ್ವಚ್ಛಗೊಳಿಸುವ ಉದ್ದೇಶಕ್ಕಾಗಿ ಅಗ್ನಿಶಾಮಕ ವಾಹನವನ್ನು ಬಳಸಲಾಗುತ್ತಿದೆ ಎಂಬುದು ತಮಗೆ ತಿಳಿದಿರಲಿಲ್ಲ ಎಂದು ಅಗ್ನಿಶಾಮಕ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಬಂಗಲೆ ತೊಳೆಯಲು ವಾಹನ ಬಳಸಲಾಗುತ್ತದೆ ಎಂಬ ಮಾಹಿತಿ ಮುಂಚಿತವಾಗಿ ನೀಡಲಾಗಿರಲಿಲ್ಲ. ಈ ಕಾರಣದಿಂದ ಅಚಾತುರ್ಯ ಸಂಭವಿಸಿದೆ. ಇದೀಗ ತಪ್ಪಿತಸ್ಥರಿಂದ ದಂಡ ವಸೂಲಿ ಮಾಡಲಾಗಿದೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ.
ವಿಡಿಯೋದಲ್ಲಿ ಏನಿದೆ?
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಬೃಹತ್ ಬಂಗಲೆಯೊಂದರ ಮುಂಭಾಗ ಅಗ್ನಿಶಾಮಕ ವಾಹನ ನಿಂತಿರುವುದು ಕಾಣಿಸುತ್ತದೆ. ಅಗ್ನಿಶಾಮಕ ಸಿಬ್ಬಂದಿ ಪೈಪ್‌ಗಳ ಮೂಲಕ ಬಂಗಲೆಯ ಕಂಪೌಂಡ್ ಹಾಗೂ ಗೋಡೆಗಳಿಗೆ ನೀರು ಸಿಂಪಡಿಸಿ ಸ್ವಚ್ಛಗೊಳಿಸುತ್ತಿರುವ ದೃಶ್ಯಗಳು ವಿಡಿಯೋದಲ್ಲಿವೆ.
-
ಮಂಗಳೂರು13 hours agoAuto passengers-ದಕ್ಷಿಣ ಕನ್ನಡದಲ್ಲಿ ಆಟೊ ಪ್ರಯಾಣಿಕರಿಗೆ ಮತ್ತೊಂದು ದರ ಏರಿಕೆ ಶಾಕ್: ಇಲ್ಲಿದೆ ಪರಿಷ್ಕೃತ ರೇಟ್ ಕಾರ್ಡ್
-
ಅಂತರ ರಾಜ್ಯ18 hours agoಕಾಸರಗೋಡು: ಆರ್ಎಸ್ಎಸ್ ವಕ್ತಾರರ ಭಾಗವಹಿಸುವಿಕೆ ವಿರೋಧಿಸಿ ಪ್ರತಿಭಟನೆ; ಘರ್ಷಣೆಯಲ್ಲಿ ಮೂವರು ವಿದ್ಯಾರ್ಥಿಗಳಿಗೆ ಗಾಯ
-
Uncategorized10 hours ago
Puttur Court retaining wall collapse : ಹತ್ತು ತಿಂಗಳ ಹಿಂದಷ್ಟೇ ಉದ್ಘಾಟನೆ; ಪುತ್ತೂರು ಹೊಸ ನ್ಯಾಯಾಲಯದ ತಡೆಗೋಡೆ ಕುಸಿತ- ಕಾಮಗಾರಿಯ ಗುಣಮಟ್ಟದ ಬಗ್ಗೆ ಚರ್ಚೆ
-
ಸ್ಥಳೀಯ17 hours agoBeltangadi-ಬೆಳ್ತಂಗಡಿ: ಚಾಲಕನ ಸಮಯಪ್ರಜ್ಞೆ; ಬಸ್ನಲ್ಲಿ ಅಸ್ವಸ್ಥಗೊಂಡ ಮಹಿಳೆ ಅಪಾಯದಿಂದ ಪಾರು
-
ಮಂಗಳೂರು20 hours agoChouta-ಫಾರಂ 7 ಕೊಟ್ಟ ಮಾತ್ರಕ್ಕೆ ಮತ ಡಿಲೀಟ್ ಆಗಲ್ಲ; ಅಕ್ರಮ ಡಿಲೀಷನ್ಗೆ ದಾಖಲೆ ತೋರಿಸಿ: ಕಾಂಗ್ರೆಸ್ಗೆ ಚೌಟ ಸವಾಲು
-
ಅಂತರ ರಾಜ್ಯ12 hours agoBlackmail-ದೋಸೆಯಲ್ಲಿ ಸತ್ತ ಇಲಿ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ದೂರು ನೀಡಿದ್ದ ಮಹಿಳೆಯಿಂದಲೇ ₹25 ಲಕ್ಷಕ್ಕೆ ಬ್ಲ್ಯಾಕ್‌ಮೇಲ್..!
-
ಉದ್ಯೋಗ14 hours agoPuttur-Salesನಿಂದ Technicianವರೆಗೆ; ಪುತ್ತೂರಿನ ಶ್ರೀ ತಿರುಮಲಾ TVSನಲ್ಲಿ ಭರ್ಜರಿ Job Opening
-
ರಾಜಕೀಯ19 hours agoAshok Rai-ಪಕ್ಷ ಸಂಘಟನೆಗೆ ಅಶೋಕ್ ರೈ ಹೊಸ ಹೆಜ್ಜೆ: ಪುತ್ತೂರು ಬ್ಲಾಕ್ ಕಾಂಗ್ರೆಸ್ಗೆ ಬೊಲೆರೋ


















