ಅಂತರ ರಾಜ್ಯ
Satta Bazar-ಸಟ್ಟಾ ಬಜಾರ್ ಸಮೀಕ್ಷೆ : ದೆಹಲಿಯಲ್ಲಿ ಆಪ್ ಗೆ ಹಿನ್ನಡೆ – ಬಿಜೆಪಿಗೆ ಬಹುಮತ ನಿರೀಕ್ಷೆ
ಬೆಟ್ಟಿಂಗ್ ಜಾಲದ ಮೂಲಕ ಕುಖ್ಯಾತಿಯನ್ನು ಪಡೆದಿದ್ದರೂ, ಚುನಾವಣಾ ರಾಜಕೀಯದ ಬಹುತೇಕ ಕರಾರುವಾಕ್ ಭವಿಷ್ಯವನ್ನು ಬರೆಯುವ ರಾಜಸ್ಥಾನದ ಫೆಲೋಡಿಯ ಸಟ್ಟಾ ಬಜಾರ್, ದೆಹಲಿ ಚುನಾವಣೆಯ ಭವಿಷ್ಯವನ್ನು ನುಡಿದಿದೆ. ಅದರ ಪ್ರಕಾರ, ಬಿಜೆಪಿಯ ಶಕ್ತಿ ಅಸೆಂಬ್ಲಿ ಚುನಾವಣೆಯಲ್ಲಿ ಹೆಚ್ಚಲಿದೆ.
ಹೊಸದಿಲ್ಲಿ : ಬೆಟ್ಟಿಂಗ್ ಜಾಲದ ಮೂಲಕ ಕುಖ್ಯಾತಿಯನ್ನು ಪಡೆದಿದ್ದರೂ, ಚುನಾವಣಾ ರಾಜಕೀಯದ ಬಹುತೇಕ ಕರಾರುವಾಕ್ ಭವಿಷ್ಯವನ್ನು ಬರೆಯುವ ರಾಜಸ್ಥಾನದ ಫೆಲೋಡಿಯ ಸಟ್ಟಾ ಬಜಾರ್, ದೆಹಲಿ ಚುನಾವಣೆಯ ಭವಿಷ್ಯವನ್ನು ನುಡಿದಿದೆ. ಅದರ ಪ್ರಕಾರ, ಬಿಜೆಪಿಯ ಶಕ್ತಿ ಅಸೆಂಬ್ಲಿ ಚುನಾವಣೆಯಲ್ಲಿ ಹೆಚ್ಚಲಿದೆ.
70 ಸದಸ್ಯ ಬಲದ ದೆಹಲಿ ಅಸೆಂಬ್ಲಿ ಚುನಾವಣೆಗೆ ನಾಮಪತ್ರ ಹಿಂದಕ್ಕೆ ಪಡೆಯಲು ಇಂದು (ಜ.20) ಕೊನೆಯ ದಿನವಾಗಿದೆ. ಫೆ. 5ರಂದು ಚುನಾವಣೆ ನಡೆಯಲಿದ್ದು, ಫೆ.8ಕ್ಕೆ ಫಲಿತಾಂಶ ಹೊರಬೀಳಲಿದೆ. ಆಡಳಿತಾರೂಢ ಆಮ್ ಆದ್ಮಿ ಪಾರ್ಟಿಯ ಸರ್ಕಾರ, ಮೂರನೇ ಬಾರಿಗೆ ಅಧಿಕಾರಕ್ಕೇರಲು ಭಾರೀ ಪ್ರಚಾರವನ್ನು ನಡೆಸುತ್ತಿದೆ.
ಇಂಡಿಯಾ ಮೈತ್ರಿಕೂಟದ ಪಾಲುದಾರ ಪಕ್ಷವಾಗಿರುವ ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಆಮ್ ಆದ್ಮಿ – ಬಿಜೆಪಿ – ಕಾಂಗ್ರೆಸ್ ನಡುವೆ ತ್ರಿಕೋಣ ಸ್ಪರ್ಧೆ ಇದ್ದರೂ, ನಮ್ಮ ಎದುರಾಳಿ ಏನಿದ್ದರೂ ಬಿಜೆಪಿಯೇ ಹೊರತು, ಕಾಂಗ್ರೆಸ್ ನಮಗೆ ಲೆಕ್ಕಕ್ಕಿಲ್ಲ ಎಂದು ಹೇಳಿದ್ದಾರೆ. ಕಳೆದ ಎರಡು ಚುನಾವಣೆಯಲ್ಲಿ (2015, 2020) ಕಾಂಗ್ರೆಸ್, ಒಂದೇ ಒಂದು ಸೀಟ್ ಅನ್ನು ಗೆಲ್ಲಲು ಸಾಧ್ಯವಾಗಿಲ್ಲ.
27 ವರ್ಷದ ನಂತರ ಅಧಿಕಾರಕ್ಕೆ ಬರಬೇಕೆಂದು ಬಿಜೆಪಿ, 15 ವರ್ಷಗಳ ನಂತರ ಅಧಿಕಾರಕ್ಕೇರ ಬೇಕೆಂದು ಕಾಂಗ್ರೆಸ್ ಶತಪ್ರಯತ್ನ ಮುಂದುವರಿಸಿದೆ. ಈ ಮಧ್ಯೆ, ಫೆಲೋಡಿಯ ಸಟ್ಟಾ ಬಜಾರ್ ತನ್ನ ಭವಿಷ್ಯವನ್ನು (ಜ.10ರವರೆಗಿನ ಮಾಹಿತಿಯಂತೆ) ನುಡಿದಿದೆ. ಈ ಭವಿಷ್ಯದ ಪ್ರಕಾರ, ಬಿಜೆಪಿ ಮತ್ತು ಆಪ್ ನಡುವೆ ತುರುಸಿನ ಸ್ಪರ್ಧೆ ಏರ್ಪಡಲಿದೆ.
1952 ರಿಂದ 2013ರವರೆಗೆ ದೆಹಲಿ ರಾಜಕೀಯದಲ್ಲಿ ಪೂರ್ಣ ಪ್ರಾಭಲ್ಯವನ್ನು ಹೊಂದಿದ್ದ ಕಾಂಗ್ರೆಸ್ ಪರಿಸ್ಥಿತಿಯಲ್ಲಿ ಈ ಬಾರಿಯ ಚುನಾವಣೆಯಲ್ಲೂ ಅಂತಹ ಬದಲಾವಣೆ ಏನೂ ಆಗುವುದಿಲ್ಲ. ಆದರೆ, ಈ ಬಾರಿ ಅಕೌಂಟ್ ಓಪನ್ ಮಾಡಲು ಶಕ್ತವಾಗುತ್ತದೆ ಎನ್ನುವುದು ಸಟ್ಟಾ ಬಜಾರ್ ಸಮೀಕ್ಷೆಯಲ್ಲಿ ಕಂಡುಬಂದ ಅಂಶ.
ಸಮೀಕ್ಷೆಯಲ್ಲಿ ಗಮನಿಸಬೇಕಾದ ಅಂಶವೇನಂದರೆ, ಹತ್ತು ವರ್ಷಗಳಿಂದ ಅಧಿಕಾರದಲ್ಲಿರುವ ಆಮ್ ಆದ್ಮಿ ಪಾರ್ಟಿ ಈ ಬಾರಿಯ ಚುನಾವಣೆಯಲ್ಲಿ ತೀರಾ ಹಿನ್ನಡೆಯನ್ನು ಎದುರಿಸಲಿದೆ. 2015ರ ಚುನಾವಣೆಯಲ್ಲಿ 67, 2020ರ ಚುನಾವಣೆಯಲ್ಲಿ 62 ಸ್ಥಾನವನ್ನು ಗೆದ್ದು, ವಿಪಕ್ಷಗಳನ್ನು ಇನ್ನಿಲ್ಲದಂತೆ ಹೆಡೆಮುರಿ ಕಟ್ಟಿದ್ದ ಆಮ್ ಆದ್ಮಿಗೆ ಈ ಬಾರಿ, ಪ್ರಯಾಸದಿಂದ ಅಧಿಕಾರ ಒಲಿಯಬಹುದು.
ಆಮ್ ಆದ್ಮಿ ಸರ್ಕಾರ ಮತ್ತು ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್ ವಿರುದ್ದ ಭ್ರಷ್ಟಾಚಾರದ ಆರೋಪ ಕೇಳಿ ಬಂದಿರುವುದು, ಪಕ್ಷದ ನಾಯಕ ಹೆಸರು ಅಕ್ರಮ ಹಣ ವರ್ಗಾವಣೆಯಲ್ಲಿ ತುಳುಕು ಹಾಕಿಕೊಂಡಿರುವುದು, ಆಮ್ ಆದ್ಮಿ ಪಾರ್ಟಿ ಹಿನ್ನಡೆಗೆ ಪ್ರಮುಖ ಕಾರಣವಾಗಬಹುದು ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಈ ಬಾರಿಯ ಚುನಾವಣೆಯಲ್ಲಿ ಸಂಘ ಪರಿವಾರದ ಬೆಂಬಲದೊಂದಿಗೆ ಪ್ರಚಾರ ನಡೆಸುತ್ತಿರುವ ಬಿಜೆಪಿಗೆ ಈ ಬಾರಿ ಮತದಾರ, ಕಳೆದ ಬಾರಿಗಿಂತ ಭಾರೀ ಸಂಖ್ಯೆಯಲ್ಲಿ ಬೆಂಬಲಿಸಲಿದ್ದಾನೆ. ಆದರೂ, ಸರಳ ಬಹುಮತಕ್ಕೆ ಬೇಕಾಗಿರುವ 36 ಸ್ಥಾನ, ಬಿಜೆಪಿಗೆ ಸಿಗುವ ಸಾಧ್ಯತೆ ಕಮ್ಮಿ ಎಂದು ಸಟ್ಟಾ ಬಜಾರ್ ಸಮೀಕ್ಷೆ ಹೇಳಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ 8 ಸ್ಥಾನವನ್ನು ಗೆದ್ದಿತ್ತು.
ನಿಧನ ವಾರ್ತೆ
Nana Patekar-ನಟ ನಾನಾ ಪಾಟೇಕರ್ ಸಾವು: ಮರಣೋತ್ತರ ಪರೀಕ್ಷೆಯಲ್ಲಿ ಹೃದಯಾಘಾತ ದೃಢ
ನಟ ನಾನಾ ಪಾಟೇಕರ್ ಸಾವಿಗೆ ಹೃದಯಾಘಾತವೇ ಕಾರಣ ಎಂಬುದು ಮರಣೋತ್ತರ ಪರೀಕ್ಷಾ ವರದಿಯಿಂದ ದೃಢಪಟ್ಟಿದೆ. 75 ವರ್ಷದ ನಟನ ಹೃದಯದ ಅಪಧಮನಿಯಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ರಕ್ತ ಸಂಚಾರಕ್ಕೆ ಅಡ್ಡಿಯುಂಟಾಗಿ ಹೃದಯಾಘಾತ ಸಂಭವಿಸಿದೆ ಎಂದು ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ (ಜಿಎಂಸಿಎಚ್) ವೈದ್ಯರು ತಿಳಿಸಿದ್ದಾರೆ.
ಪಣಜಿ: ನಟ ನಾನಾ ಪಾಟೇಕರ್ ಸಾವಿಗೆ ಹೃದಯಾಘಾತವೇ ಕಾರಣ ಎಂಬುದು ಮರಣೋತ್ತರ ಪರೀಕ್ಷಾ ವರದಿಯಿಂದ ದೃಢಪಟ್ಟಿದೆ. 75 ವರ್ಷದ ನಟನ ಹೃದಯದ ಅಪಧಮನಿಯಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ರಕ್ತ ಸಂಚಾರಕ್ಕೆ ಅಡ್ಡಿಯುಂಟಾಗಿ ಹೃದಯಾಘಾತ ಸಂಭವಿಸಿದೆ ಎಂದು ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ (ಜಿಎಂಸಿಎಚ್) ವೈದ್ಯರು ತಿಳಿಸಿದ್ದಾರೆ.
ದೋನಾ ಪೌಲಾದಲ್ಲಿರುವ ತಮ್ಮ ನಿವಾಸದಲ್ಲಿ ಅಕ್ಟೋಬರ್ 8ರಂದು ನಾನಾ ಪಾಟೇಕರ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎಂದು ದೋನಾ ಪೌಲಾದ ಮಣಿಪಾಲ್ ಆಸ್ಪತ್ರೆಯ ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ. ಶೇಖರ್ ಸಲ್ಕರ್ ತಿಳಿಸಿದ್ದರು.
ನಂತರ ಅವರ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿತ್ತು. ಈ ಸಂಬಂಧ ಗೋವಾ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ನಾನಾ ಪಾಟೇಕರ್ ಅವರ ಅಂತ್ಯಕ್ರಿಯೆಯನ್ನು ಪುಣೆ ಜಿಲ್ಲೆಯ ದೋಂಜೆ ಗ್ರಾಮದಲ್ಲಿರುವ ಅವರ ಫಾರ್ಮ್‌ಹೌಸ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗಿದೆ.
ಅಂತರ ರಾಜ್ಯ
Elon Musk-ಅಂಬಾನಿ ಮತ್ತು ಅವರ ಬೆಂಬಲಿಗರ ವಾದ ಹಾಸ್ಯಾಸ್ಪದವಾಗಿದೆ : ಸ್ಟಾರ್ ಲಿಂಕ್ ಕುರಿತು ಇಲಾನ್ ಮಸ್ಕ್
ಭಾರತದಲ್ಲಿ ಸ್ಟಾರ್‌ಲಿಂಕ್ ಉಪಗ್ರಹ ಇಂಟರ್ನೆಟ್ ಸೇವೆಯ ಶುಲ್ಕ ಕೈಗೆಟುಕುವಂತಿರಬೇಕು. ಸೇವೆ ದುಬಾರಿಯಾದರೆ ಗ್ರಾಹಕರು ಅದನ್ನು ಬಳಸುವುದಿಲ್ಲ ಎಂದು ಅಮೆರಿಕದ ಉದ್ಯಮಿ ಇಲಾನ್ ಮಸ್ಕ್ ಹೇಳಿದ್ದಾರೆ.
ನವದೆಹಲಿ: ಭಾರತದಲ್ಲಿ ಸ್ಟಾರ್‌ಲಿಂಕ್ ಉಪಗ್ರಹ ಇಂಟರ್ನೆಟ್ ಸೇವೆಯ ಶುಲ್ಕ ಕೈಗೆಟುಕುವಂತಿರಬೇಕು. ಸೇವೆ ದುಬಾರಿಯಾದರೆ ಗ್ರಾಹಕರು ಅದನ್ನು ಬಳಸುವುದಿಲ್ಲ ಎಂದು ಅಮೆರಿಕದ ಉದ್ಯಮಿ ಇಲಾನ್ ಮಸ್ಕ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಮಸ್ಕ್, ಸ್ಪರ್ಧೆಯಿಂದಾಗಿ ಭಾರತದ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳು ಲಭ್ಯವಾಗಲಿದ್ದು, ಇದರಿಂದ ಅವರಿಗೆ ಪ್ರಯೋಜನವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಉದ್ಯಮಿ ಮುಕೇಶ್ ಅಂಬಾನಿ ಅವರ ಲಾಭ ಕಡಿಮೆಯಾಗಬಹುದಾದರೂ, ಅವರ ಗ್ರಾಹಕರು ಸಂಪೂರ್ಣವಾಗಿ ದೂರವಾಗುವುದಿಲ್ಲ ಎಂದು ಹೇಳಿದ್ದಾರೆ.
ಮುಕೇಶ್ ಅಂಬಾನಿ ಅವರ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಾದಿಸುತ್ತಿರುವವರ ವಿರುದ್ಧವೂ ಮಸ್ಕ್ ಟೀಕೆ ವ್ಯಕ್ತಪಡಿಸಿದ್ದಾರೆ. ‘ಅಂಬಾನಿ ಅವರು ನಿಗದಿಪಡಿಸಿರುವ ಕಡಿಮೆ ಶುಲ್ಕದ ಜೊತೆ ಸ್ಪರ್ಧಿಸಲು ಸ್ಟಾರ್‌ಲಿಂಕ್‌ಗೆ ಆಗಲಿಕ್ಕಿಲ್ಲ ಎಂದು ಅವರು (ಬೆಂಬಲಿಗರು) ಒಂದೆಡೆ ವಾದಿಸುತ್ತಾರೆ. ಮತ್ತೊಂದೆಡೆ, ಸ್ಟಾರ್‌ಲಿಂಕ್ ಬಹಳ ಬಲಿಷ್ಠವಾದ ಪ್ರತಿಸ್ಪರ್ಧಿ ಆಗಬಹುದು ಎಂದೂ ಹೇಳುತ್ತಾರೆ’ ಎಂದು ಮಸ್ಕ್ ವಿವರಿಸಿದ್ದಾರೆ. ಅಂಬಾನಿ ಅವರ ಆನ್‌ಲೈನ್ ಬೆಂಬಲಿಗರ ‘ಹಾಸ್ಯಾಸ್ಪದ ವಾದಗಳು’ ತಮಗೆ ಅರ್ಥಪೂರ್ಣವಾಗಿ ಕಾಣುತ್ತಿಲ್ಲ ಎಂದಿದ್ದಾರೆ.
ಭಾರತದಲ್ಲಿ ತನ್ನ ಸ್ಟಾರ್‌ಲಿಂಕ್ ಉಪಗ್ರಹ ಇಂಟರ್ನೆಟ್ ಸೇವೆ ಆರಂಭಿಸಲು ಅಗತ್ಯ ಅನುಮತಿಗಳನ್ನು ನೀಡುವಲ್ಲಿ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಮಸ್ಕ್ ಕಳೆದ ಕೆಲವು ದಿನಗಳಿಂದ ಮುಕೇಶ್ ಅಂಬಾನಿ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಆದರೆ, ಮಸ್ಕ್ ಅವರ ಆರೋಪಗಳಿಗೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಈವರೆಗೆ ಬಹಿರಂಗವಾಗಿ ಪ್ರತಿಕ್ರಿಯಿಸಿಲ್ಲ.
ಅಂತರ ರಾಜ್ಯ
Kasaragod-ಕಾಸರಗೋಡು: ಮದುವೆ ರದ್ದು, ₹7.57 ಲಕ್ಷದ ಉಡುಗೊರೆ ವಾಪಸ್ ನೀಡದೆ ವಂಚನೆ ಆರೋಪ; ಯುವತಿ ಸಹಿತ ಮೂವರ ವಿರುದ್ಧ ಪ್ರಕರಣ
ಮದುವೆಯಿಂದ ಹಿಂದೆ ಸರಿದ ಯುವತಿ ಹಾಗೂ ಆಕೆಯ ಕುಟುಂಬದವರ ವಿರುದ್ಧ ವರನ ಮನೆಯವರು ನೀಡಿದ ದೂರಿನ ಮೇರೆಗೆ ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನಿಶ್ಚಿತಾರ್ಥದ ಸಂದರ್ಭದಲ್ಲಿ ನೀಡಿದ್ದ ಚಿನ್ನಾಭರಣ, ಐಫೋನ್, ನಗದು ಸೇರಿದಂತೆ ಸುಮಾರು ₹7.57 ಲಕ್ಷ ಮೌಲ್ಯದ ಉಡುಗೊರೆಗಳನ್ನು ಹಿಂದಿರುಗಿಸದೆ ವಂಚಿಸಿದ್ದಾರೆ ಎಂಬುದು ಆರೋಪವಾಗಿದೆ.
ಕಾಸರಗೋಡು: ಮದುವೆಯಿಂದ ಹಿಂದೆ ಸರಿದ ಯುವತಿ ಹಾಗೂ ಆಕೆಯ ಕುಟುಂಬದವರ ವಿರುದ್ಧ ವರನ ಮನೆಯವರು ನೀಡಿದ ದೂರಿನ ಮೇರೆಗೆ ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನಿಶ್ಚಿತಾರ್ಥದ ಸಂದರ್ಭದಲ್ಲಿ ನೀಡಿದ್ದ ಚಿನ್ನಾಭರಣ, ಐಫೋನ್, ನಗದು ಸೇರಿದಂತೆ ಸುಮಾರು ₹7.57 ಲಕ್ಷ ಮೌಲ್ಯದ ಉಡುಗೊರೆಗಳನ್ನು ಹಿಂದಿರುಗಿಸದೆ ವಂಚಿಸಿದ್ದಾರೆ ಎಂಬುದು ಆರೋಪವಾಗಿದೆ.
ನ್ಯಾಯಾಲಯದ ಆದೇಶದ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಮದುವೆ ರದ್ದಾದ ಬಳಿಕ ಉಡುಗೊರೆಗಳನ್ನು ಹಿಂದಿರುಗಿಸದ ಕಾರಣ ತಮ್ಮ ಕುಟುಂಬಕ್ಕೆ ₹7,57,037 ನಷ್ಟವಾಗಿದೆ ಎಂದು ವರನ ಕಡೆಯವರು ದೂರಿನಲ್ಲಿ ತಿಳಿಸಿದ್ದಾರೆ.
ಪಡನ್ನಕ್ಕಾಡ್ ಸಮೀಪದ ಯುವಕನಿಗೆ ಉದುಮ ಸಮೀಪದ ಯುವತಿಯೊಂದಿಗೆ ವಿವಾಹ ನಡೆಸಲು 2026ರ ಏಪ್ರಿಲ್‌ನಲ್ಲಿ ನಿಶ್ಚಯಿಸಲಾಗಿತ್ತು. ಈ ಸಂದರ್ಭದಲ್ಲಿ ನಿಶ್ಚಿತಾರ್ಥದ ಭಾಗವಾಗಿ ವಧುವಿಗೆ ಐಫೋನ್, ಚಿನ್ನಾಭರಣ, ವಿವಿಧ ಉಡುಗೊರೆಗಳು ಹಾಗೂ ನಗದು ಸೇರಿದಂತೆ ಸುಮಾರು ₹7.5 ಲಕ್ಷ ಮೌಲ್ಯದ ವಸ್ತುಗಳನ್ನು ವರನ ಕುಟುಂಬದವರು ನೀಡಿದ್ದರು ಎನ್ನಲಾಗಿದೆ.
ಆದರೆ, ಬಳಿಕ ಯುವತಿ ಮದುವೆಯಿಂದ ಹಿಂದೆ ಸರಿದಿದ್ದು, ಆಕೆಯ ತಾಯಿ ಹಾಗೂ ಮಾವನೊಂದಿಗೆ ಸೇರಿ ಮದುವೆ ರದ್ದುಗೊಳಿಸಲು ಸಂಚು ರೂಪಿಸಿದ್ದಾರೆ ಎಂದು ವರನ ಕಡೆಯವರು ಆರೋಪಿಸಿದ್ದಾರೆ. ಅಲ್ಲದೆ, ನಿಶ್ಚಿತಾರ್ಥದ ವೇಳೆ ನೀಡಿದ್ದ ಐಫೋನ್ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಹಿಂದಿರುಗಿಸಲು ನಿರಾಕರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
-
Uncategorized17 hours ago
ಸಮುದ್ರಕ್ಕೆ ಇಳಿದಿದ್ದ ಉಜಿರೆ ಕಾಲೇಜಿನ ವಿದ್ಯಾರ್ಥಿ ಅಲೆಗಳ ಸೆಳೆತಕ್ಕೆ ಬಲಿ; ಮೃತದೇಹ ಪತ್ತೆ
-
Uncategorized20 hours ago
ಬೋನಿಗೆ ಬಿದ್ದ ಅಪರೂಪದ ಕರಿ ಚಿರತೆ!
-
Uncategorized19 hours ago
ರಬ್ಬರ್ ಗೆ ಭರ್ಜರಿ ಬೆಲೆ; ರಬ್ಬರ್ ಶೀಟ್ ದರದಲ್ಲೂ ಏರಿಕೆ
-
Uncategorized20 hours ago
ಪುತ್ತೂರು : ನಸುಕಿನ ಜಾವ ಹಳೇ ಕಟ್ಟಡದಲ್ಲಿ ಕಾಣಿಸಿದ ಬೆಂಕಿ – ಅನಾಹುತ ತಪ್ಪಿಸಲು ನೆರವಾದ ರವಿಕುಮಾರ್ ರೈ
-
Uncategorized21 hours ago
ಪುತ್ತೂರು–ಉಪ್ಪಿನಂಗಡಿ ರಸ್ತೆ ದುರಸ್ತಿಗೆ ಶಾಸಕ ಅಶೋಕ್ ರೈ ಸೂಚನೆ
-
ಅಂತರ ರಾಜ್ಯ3 hours agoKasaragod-ಕಾಸರಗೋಡು: ಮದುವೆ ರದ್ದು, ₹7.57 ಲಕ್ಷದ ಉಡುಗೊರೆ ವಾಪಸ್ ನೀಡದೆ ವಂಚನೆ ಆರೋಪ; ಯುವತಿ ಸಹಿತ ಮೂವರ ವಿರುದ್ಧ ಪ್ರಕರಣ
-
Uncategorized19 hours ago
ಮುಂಬೈನಲ್ಲಿ ‘ಬನ’ ತುಳು ಚಿತ್ರಕ್ಕೆ ಪ್ರೇಕ್ಷಕರ ಮೆಚ್ಚುಗೆ; ಎರಡೂ ಪ್ರೀಮಿಯರ್ ಶೋ ಹೌಸ್ಫುಲ್ |
-
ಬಿಗ್ ನ್ಯೂಸ್3 hours agoPuttur-ಪುತ್ತೂರು : ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಒಳಚರಂಡಿ ಕಾಮಗಾರಿ ಟೆಂಡರ್ ಸ್ಥಗಿತಗೊಳಿಸಿ : ನಗರಸಭೆಗೆ ಮನವಿ


















